Monday, February 28, 2011

Prajavani

Prajavani- ಜಿ ರಾಜಶೇಖರ- ಮಡೆಸ್ನಾನ

Saturday, February 26, 2011

Kanthabare-Boodabare-by muddu moodubelle[2011][kannada- english]


ಮುದ್ದು ಮೂಡುಬೆಳ್ಳೆ ಅವರ - ಕಾಂತಬಾರೆ ಬೂದಬಾರೆ


ಪು. ಶ್ರೀನಿವಾಸ ಭಟ್ಟ
ನನ್ನ ನಿಡುಗಾಲದ ಗೆಳೆಯರಾದ, ಶ್ರೀ ಮುದ್ದು ಮೂಡುಬೆಳ್ಳೆಯವರು,ಸಂಗ್ರಹಿಸಿ, ಸಂಶೋಧಿಸಿ ಪ್ರಕಟಿಸುತ್ತಿರುವ ಕಾಂತಬಾರೆ - ಬೂದಬಾರೆಯರ ಜೀವನ ಚರಿತ್ರೆಯ ಅಪೂರ್ವ ಕೃತಿಗೆ, ನಾಲ್ಕು ವಾಕ್ಯಗಳ ಹರಕೆ ನುಡಿಗಳನ್ನು ಬರೆಯಲು ನನಗೆ ಬಹಳ ಸಂತೋಷವಾಗುತ್ತಿದೆ. ಅವರು ಹಲವಾರು ವರ್ಷಗಳ ಮೊದಲೊಮ್ಮೆ ಈ ಬಗ್ಗೆ ಕೃತಿಯನ್ನು ಬರೆದಿದ್ದರು. ಅದನ್ನು ಸಂಪೂರ್ಣ ಓದಿ ನೋಡಿದ್ದೇನೆ. ಇದೀಗ ಪ್ರಕಟವಾಗುತ್ತಿರುವ ಕೃತಿಯನ್ನು ಕೂಡ ಆಮೂಲಾಗ್ರ ಓದಿದ್ದೇನೆ. ಮೊದಲ ಮುದ್ರಣದಲ್ಲಿ ಇದ್ದ ಅಪೂರ್ಣತೆಯನ್ನು ಇದರಲ್ಲಿ ಪೂರ್ಣವಾಗಿಸಿದ್ದಾರೆ. ಅದಕ್ಕಾಗಿ ಈಗ ಮತ್ತೆ ಪುನಃ ಒಂದು ವರ್ಷ ಕ್ಷೇತ್ರ ಕಾರ್ಯ ನಡೆಸಿದ್ದಾರೆ. ಬಿಟ್ಟು ಹೋದ ವಿಷಯಗಳನ್ನು ಸೇರಿಸಿಕೊಂಡಿದ್ದಾರೆ. ಸಂಪನ್ಮೂಲ ಮಹನೀಯರ ಸಂದರ್ಶನ ಮಾಡಿದ್ದಾರೆ. ಯಾರುಯಾರೋ ಬರೆದ ಪುಸ್ತಕಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದಿ, ಮಾಡಿದ ಅಧ್ಯಯನವಿದಲ್ಲ. ವಿಷಯ ಸಂಗ್ರಹಕ್ಕಾಗಿ ಮೂಲ್ಕಿ ಸೀಮೆಯ ಮೂಲೆ, ಮೂಲೆಗಳಿಗೆ, ಅವರ ಜೈತ್ರ ಯಾತ್ರೆ ನಡೆದಿದೆ. ಸಂಗ್ರಹ ಕಾರ್ಯ ಸಣ್ಣ ಕೆಲಸವಲ್ಲ. ಸಮಸ್ಯೆಗಳು ಒಂದೆರಡಲ್ಲ, ಹತ್ತು ಹಲವು. ಹಳ್ಳಿಯ ಜನರು, ಒಮ್ಮೆ ಕೊಟ್ಟ ಅಭಿಪ್ರಾಯವನ್ನು ಮಗದೊಮ್ಮೆ ಕೇಳುವಾಗ ಬೇರೆಯೇ ಹೇಳುವುದಿದೆ, ಒಬ್ಬ ಹೇಳಿದ್ದನ್ನು ಬೇರೊಬ್ಬ ಅದು ತಪ್ಪೆಂದು ವಾದಿಸುವುದೂ ಇಲ್ಲವೆಂದಿಲ್ಲ. ಇಂತಹ ಸಂದರ್ಭಗಳಲ್ಲಿ ಸಂದರ್ಶಕನಿಗೆ ಅದ್ಭುತ ಸಹನೆ ಇರಬೇಕಾಗುತ್ತದೆ. ಎಲ್ಲವನ್ನೂ ಕೇಳಿ ಕೊನೆಗೆ ನಮ್ಮ ವೈಚಾರಿಕತೆಯ ಬೆಳಕಿನಲ್ಲಿ ಖಚಿತ ಸ್ವರೂಪವನ್ನು ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಮೂಡುಬೆಳ್ಳೆಯವರು ಎತ್ತಿದೆ ಕೈಯೆಂದು ಪ್ರತ್ಯೇಕ ಹೇಳಬೇಕೆಂದಿಲ್ಲ. ಕೃತಿ ಓದುವಾಗಲೇ ತಿಳಿದುಬರುತ್ತದೆ.



 ಮುಖ್ಯವಾಗಿ ಈ ಉಭಯ ವೀರರ ಕುರಿತು, ಮಾತಾಡುವುದು, ಬರೆಯುವುದು, ಓದುವುದು, ಕೇಳುವುದೆಂದರೆ ನನಗೆ ಬಹಳ ಖುಶಿ. ಯಾಕೆಂದರೆ ಅವರು ಓಡಾಡಿದ ಸೀಮಂತೂರು, ಅಲ್ಲಿರುವ ಕೆಳದಿರಾಜರ ಕೋಟೆ, ಕಂದಕ, ಕಂಬಳ, ಬಾಕಿಮಾರು, ಬ್ರಹ್ಮಸ್ಥಾನ, ಜನಾರ್ದನ ದೇವಸ್ಥಾನ, ಕುಬೇರು, ಪುನರೂರು ಇವೆಲ್ಲ ನಾನು ಬಾಲ್ಯದಲ್ಲಿ ನಡೆದಾಡಿದ ನೆಲ, ನನ್ನ ಜಾನಪದ ಆಸಕ್ತಿ ದಾಂಗುಡಿಯಿಟ್ಟದ್ದು, ಹಿರಿಯರಿಂದ ಈ ವೀರ ಸೋದರರ ಕತೆ ಕೇಳುವಲ್ಲಿಂದ ಎನ್ನುವುದು ಸತ್ಯವಚನ. ಸೀಮಂತೂರಿನ ಕೋಟೆ ಕಟ್ಟಿಸಿದ್ದು ಕೆಳದಿ ವೆಂಕಟಪ್ಪ ನಾಯಕನೆಂದು ಹೇಳುತ್ತಾರೆ. ಆ ಕಾಲದಲ್ಲಿ ಕೋಟೆಗಾವಲಿಗೆ ಬಂದಿದ್ದ ರಾಮರಾಜ ಕ್ಷತ್ರಿಯರ ಒಂದು ಮನೆ, ಕಳೆದ ಶತಮಾನದ ಆದಿಭಾಗದವರೆಗೆ ಸೀಮಂತೂರಿನಲ್ಲಿತ್ತು. ಅವರ ಕೊನೆಯ ಕುಡಿ ರಾಯಪ್ಪ ಎಂಬವರಿದ್ದರು. ಸೀಮಂತೂರು ದೇವಳದ ಬಡಗು ಬದಿಯ ಸಣ್ಣ ಹೊಳೆ ದಾಟುವ ಸ್ಥಳಕ್ಕೆ ’ಕನಡೆರ್ ಕಡ" ಎಂದು ಹೆಸರು. ವೆಂಕಟಪ್ಪ ನಾಯಕನು ಸೀಮಂತೂರಿಗೆ ಒಮ್ಮೆ ಭೇಟಿ ಕೊಟ್ಟಿದ್ದನೆಂಬ ಮಾತೊಂದಿದೆ. ತುಳುನಾಡಿನಲ್ಲಿ ಬೇಸಾಯಕ್ಕೆ ಪ್ರೋತ್ಸಾಹ ಕೊಟ್ಟವರು ಕೆಳದಿ ಸಂಸ್ಥಾನದ ಅರಸರು (1526-1763). ನೀರಿನ ಹರಿವುಗಳಿಗೆ ಕಟ್ಟ ಕಟ್ಟುವುದು, ಕೆರೆಗಳನ್ನು ತೋಡಿಸುವುದು, ಮದಕಗಳನ್ನು ನಿರ್ಮಿಸುವುದು ಇಂತಹ ಅಭಿವೃದ್ಧಿ ಕಾರ್ಯಗಳು ಆ ಕಾಲದಲ್ಲಿ ನಡೆದಿವೆ. ಈ ಅವಳಿ ವೀರರು ಇದೇ ಅವಧಿಯಲ್ಲಿ ಬದುಕಿದ್ದರೆಂದು ಭಾವಿಸಬಹುದು. ಅವರ ಬೀರ ಪಾಡ್ದನದಲ್ಲಿ ಉರಿ ನರ್ಸ’ (ಉಗ್ರ ನರಸಿಂಹ) ದೇವರ ಸ್ಮರಣೆಯಿದೆ. ಉಗ್ರ ನರಸಿಂಹ ದೇವರು ಕ್ರಿ.. 1500ರ ಬಳಿಕ ಮೂಲ್ಕಿಯಲ್ಲಿ ಪ್ರತಿಷ್ಠೆಯಾದದ್ದು. ಆದಕಾರಣ ಬಾರೆಯರು ಆ ಬಳಿಕ ಹುಟ್ಟಿ ಬೆಳೆದಿರಬಹುದಲ್ಲವೆ?
 ಮೂಲ್ಕಿ ಸೀಮೆಯಲ್ಲಿ ನೂರಾರು ಎಕ್ರೆ ಜಮೀನುಗಳಿಗೆ ನೀರುಣಿಸುವ ಅನೇಕ ಕಟ್ಟಗಳಿವೆ. ಮದಕ, ಕೆರೆ, ಬಾವಿಗಳಿವೆ. ಇವೆಲ್ಲ ಕಾಂತಬಾರೆ, ಬೂದಬಾರೆಯರ ಪ್ರಯತ್ನಗಳಿಂದ ಆರಂಭಗೊಂಡಿರಬಹುದು. ಕಾರ್ನಾಡು ಬೀದಿಸಾನ, ನಡಿಸಾಲು ಬಾಕ್ಯಾರ ಕೋಡಿ, ಸೀಮಂತೂರ ಭಾವಗಳಲ್ಲಿ ಅವರು ತೋಡಿದ ಬಾವಿಗಳಿವೆ. ಅವರ ಚರಿತ್ರೆಯಲ್ಲಿ ಪುಟ್ಟಾಡಿ ಕಟ್ಟ, ಪುನಾರ ಕಟ್ಟ, ಒಂಬರ್ತಲ (ಪಲಿಮಾರು) ಕಟ್ಟಗಳ ಉಲ್ಲೇಖಗಳಿವೆ. ಇಲ್ಲಿರುವ ಕಟ್ಟಗಳಿಗೆಲ್ಲ ದೈವೀಕ ಹಿನ್ನೆಲೆಗಳ ನಾಗ, ಬ್ರಹ್ಮ, ರಕ್ತೇಶ್ವರಿ, ಪಂಜುರ್ಲಿ ದೈವಗಳ ಸಂಪರ್ಕವಿದೆ, ಅವರು ಬದುಕಿದ್ದ ಅವಧಿಯ ಸಾಮಾಜಿಕ, ರಾಜಕೀಯ ಸ್ಥಿತಿಗಳನ್ನು ಅವಲೋಕಿಸಿದಾಗ, ಅದೊಂದು ಗೊಂದಲದ ಗೂಡಾಗಿತ್ತು. ಪರಂಪರೆಯಿಂದ ಆಡಳಿತೆ ಮಾಡಿಕೊಂಡಿದ್ದ ಸ್ಥಳೀಯ ಅರಸರು, ಕೆಳದಿಯರಸರ, ಹಾಗೂ ಹೈದರಾಲಿ, ಟಿಪ್ಪು ಸುಲ್ತಾನರ ಪ್ರಭಾವದಿಂದ, ಉಪಟಳದಿಂದ ಅವನತಿಯ ಪಥ ಹಿಡಿದಿದ್ದರು. ಹಳೆಯ ನೆನಪಿನಲ್ಲಿ, ಪ್ರಜೆಗಳಲ್ಲಿ ಕೆಲವರು ಅವರಿಗೆ ಒಂದಿಷ್ಟು ಗೌರವ ಕೊಡುತ್ತಿದ್ದರು. ಸಾಮಾಜಿಕ ರಂಗದಲ್ಲಿ ಸಭಾ ಮರ್ಯಾದೆ ಪಡೆಯಲು ಮತ್ತೆ ಕೆಲವು ಸಮಯ ಸಾಧಕರು ಪ್ರಯತ್ನ ನಡೆಸುತ್ತಿದ್ದರು. ಈವೊಂದು ತುಮುಲದಲ್ಲಿ ಈ ಸೋದರರು ಅರಸರ ಪಕ್ಷ ಹಿಡಿದುದರಿಂದ ಇನ್ನೊಂದು ವರ್ಗದ ವಿರೋಧ ಕಟ್ಟಿಕೊಂಡಂತಾಯಿತು. ಅವರ ಅವಸಾನದ ಬಳಿಕ ಅವರನ್ನು ದೈವೀಕ ಪುರುಷರೆಂದು ಆರಾಧಿಸಲು ಒಂದು ವರ್ಗ ವ್ಯವಸ್ಥಿತವಾಗಿ ಉತ್ಸಾಹ ತೋರಿಸಲಿಲ್ಲ. ಆದಕಾರಣ ಅವರು ಮೂಲ್ಕಿ ಸೀಮೆಯಲ್ಲಿ ನಿಶ್ಚಿತ ಸ್ಥಳಗಳಲ್ಲಿ ಮಾತ್ರ ಪೂಜಿಸಲ್ಪಡುವಂತಾಯಿತೆನ್ನಬಹುದು. ಇದೊಂದು ನನ್ನ ಊಹೆ ಮಾತ್ರ.
 ಇದೀಗ ಕಾಂತಬಾರೆ-ಬೂದಬಾರೆಯರ ಕುರಿತು ಅಧ್ಯಯನ ಕೃತಿಯೊಂದು ಸಂಪನ್ನಗೊಂಡಿರುವುದು ಒಂದು ಸಾರ್ಥಕ ಪ್ರಯತ್ನ. ಮೂಡುಬೆಳ್ಳೆಯವರು ಜಾನಪದ ವಿದ್ವಾಂಸರ ಪಂಕ್ತಿಯಲ್ಲಿ ಅಗ್ರಮಾನ್ಯರು. ಅವರಿಗಿಂತ ಮೊದಲು ಬಿಡಿ ಲೇಖನಗಳಲ್ಲದೆ ಇಡಿಯಾಗಿ ಈ ಅವಳಿ ವೀರರ ಕೃತಿ ಬಂದಿಲ್ಲ. ಇವರು ಮಾಹಿತಿ ಸಂಗ್ರಹಕ್ಕಾಗಿ ಮೂಲ್ಕಿ ಸೀಮೆಯ ಹಳ್ಳಿಗಳಲ್ಲಿ, ಈ ಪರಿಸರದಲ್ಲೆಲ್ಲ ಸುತ್ತಾಡುತ್ತಲೇ ಬಂದಿದ್ದಾರೆ. ಕೇಳಿಕೊಂಡು ಹೋದರೆ ಇನ್ನೂ ಕೂಡ ಕೆಲವು ವಿಚಾರಗಳು ಕೇಳಿ ಬರಬಹುದು. ಅದೇನಿದ್ದರೂ ಈಗ ಇದನ್ನು ಪರಿಪೂರ್ಣ ಕೃತಿಯೆಂದು ಒಪ್ಪಬೇಕಾಗುತ್ತದೆ. ಈ ಕೃತಿಗೆ ಎಲ್ಲರಿಂದಲೂ ಪ್ರೋತ್ಸಾಹ ಒದಗಿಬರಲೆಂದು ತುಳುನಾಡಿನ ಮಣ್ಣಿನ ದೇವರಾದ ನಾಗಬ್ರಹ್ಮರಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ.
 
ಜನಪದ ಅವಳಿ ವೀರರು ಕಾಂತಬಾರೆ ಬೂದಬಾರೆ
(ಪರಿಷ್ಕೃತ ಅಧ್ಯಯನ)
(Along with abridged English version)
ಮುದ್ದು ಮೂಡುಬಳ್ಳೆ

ಪ್ರ -
 GELEYARA BALAGA PRAKASHANA
C-2, Akashavani Quarters,
Urva Stores, MANGALORE - 575 006
First Impression - 2011
Pages - XN+4+246
Price 150
Mobile 9972170192
 

KANTHABARE-BOODABARE

Friday, February 25, 2011

kappe arabhattana shasana[edited by-sha- shetter[2011]


abhnava [chaturmaasika - kannada-jan-2011]
editor- n. ravikumar
abhinava
17/18-2 first main road
maarenahalli, vijayanagara,
 bengaluru- 40p
 email- abhinavaravi@gmail.com
 subsription- rs 200 [yearly]
special issue- kappe arabhattana shasana
 rdited by- sha. shetter

Kaalapallata[column writings- kannada] by- shridhara balagar[2011]


ಶ್ರೀಧರ ಬಳೆಗಾರರ 'ಕಾಲಪಲ್ಲಟ'

ಪ್ರೊ| ರಾಜೇಂದ್ರ ಚೆನ್ನಿ

ಶ್ರೀಧರ ಬಳೆಗಾರ ಅವರ ಅಂಕಣ ಬರಹಗಳನ್ನೊಳಗೊಂಡ ಈ ಕೃತಿಯನ್ನು ಓದುತ್ತಾ ಹೋದ ಹಾಗೆ ನನಗೆ ಅನಿಸಿದ ವಿಷಾದ, ಕಳವಳ, ಅಸಹಾಯಕತೆ ಇವು ವಿಮರ್ಶಕ ಪ್ರತಿಕ್ರಿಯೆಗೆ ಸೂಕ್ತವಲ್ಲದಿದ್ದರೂ ನನಗೆ ಅನಿಸಿದ ಪ್ರಾಮಾಣಿಕ ಭಾವನೆಗಳು. ಹೀಗೆ ಅನ್ನಿಸಿದ್ದಕ್ಕೆ ಕಾರಣವೆಂದರೆ ಶ್ರೀಧರ ಅವರ ಬರಹದ ಮುಖ್ಯ ಕಾಳಜಿಯೆಂದರೆ ಕೃಷಿ ಆಧಾರಿತ ಜೀವನಕ್ರಮವೊಂದು ಆಧುನಿಕತೆಯ ಹಿಂದಿರುವ ಬಂಡವಾಳದ ರಾಕ್ಷಸಶಕ್ತಿಯಿಂದ ಪಲ್ಲಟಗೊಂಡು ಇನ್ನೆಂದೂ ಮರಳಿಬಾರದಂತೆ ಕಣ್ಮರೆಯಾದುದರ ದುರಂತ. ಮೂವತ್ತು ವರ್ಷಗಳ ಹಿಂದೆ ಧಾರವಾಡದಿಂದ ಶಿವಮೊಗ್ಗೆಗೆ ಬಂದು ನೆಲೆಸಿ ಇಲ್ಲಿಯ ಮಲೆನಾಡ ಸಂಸ್ಕೃತಿಗೆ ಮಾರುಹೋಗಿಬಿಟ್ಟ ನನ್ನ ತಲ್ಲಣವೂ ಈ ದುರಂತಕ್ಕೆ ಸಾಕ್ಷಿಯಾಗಿರುವುದರಿಂದಯೇ ಹುಟ್ಟಿಕೊಂಡಿದ್ದು. ಚರಿತ್ರೆಯ ಎಲ್ಲಾ ಘಟ್ಟಗಳಲ್ಲೂ ಪಲ್ಲಟದ ಇಂಥದ್ದೇ ಒಂದು ಪ್ರತಿಕ್ರಿಯೆ ನಡೆಯುತ್ತಿರುತ್ತದೆಯೇನೋ. ಆದರೆ, ನನಗೆ ಮಾತ್ರ ಚರಿತ್ರೆ ಒಂದು ಕ್ರೂರ ಆಯ್ಕೆ ಮೂಲಕ ಇಂಥದ್ದೊಂದು ಭೀಕರವಾದ ಪಲ್ಲಟ ಮಲೆನಾಡು, ಕರಾವಳಿ, ಕರ್ನಾಟಕ ಭಾರತವನ್ನು ನಲುಗಿಸಿಬಿಟ್ಟಿದ್ದರ ಸಾಕ್ಷಿಯಾಗುವಂತೆ ಮಾಡಿದೆ ಎಂದೆನ್ನಿಸುತ್ತದೆ. ಹೀಗೆ ಅನ್ನಿಸಿದಾಗ ನೆನಪಾಗುವುದು ವಡ್ಡಾರಾಧನೆಯಲ್ಲಿ ಬರುವ ಸನ್ನಿವೇಶ, ತೊಟ್ಟಿಲಲ್ಲಿ ಮಲಗಿದ ಶಿಶುವೊಂದು ಬರಲಿರುವ ಕೇಡುಗಾಲದ ಬಗ್ಗೆ ಎಚ್ಚರಿಕೆ ಕೊಡುತ್ತದೆ. ’ಬೊಳಂ ಬೋಳ ಭಟ್ಟಾರಾಎಂದು ಶುರುವಾಗುವ ಅದರ ಭವಿಷ್ಯವಾಣಿ ಮನುಷ್ಯರು ಸದಾ ಹೆದರಿಕೆಯಲ್ಲಿರುವ ಕರಾಳ ಭವಿಷ್ಯವೊಂದರ ಪ್ರತಿಮೆಯಾಗಿದೆ. ಶ್ರೀಧರರಂಥ ಶ್ರೇಷ್ಠ ಕತೆಗಾರನೊಬ್ಬನಾಗಲಿ, ನಾನಾಗಲಿ ನಮ್ಮ ಬರಹದಲ್ಲಿ ಈ ಪಲ್ಲಟದ ವಿರಾಟ ದುರಂತದ ಬಗ್ಗೆ ಗಾಢ ವಿಷಾದದಿಂದ ಬರೆಯುವುದನ್ನು ಬಿಟ್ಟು ಏನನ್ನೂ ಮಾಡಲಾರೆವೆ ಎಂದು ಕಳವಳವಾಗುತ್ತದೆ.


 ಬಂದಿರುವ, ಬರುತ್ತಿರುವ ಕೇಡುಗಾಲದ ತೀವ್ರವಾದ ಅರಿವು ಸಾಧ್ಯವಾಗುವುದು ಕಳೆದುಹೋದದ್ದರ ಬಗೆಗಿನ ಅಷ್ಟೇ ತೀವ್ರವಾದ ಹಂಬಲ ಮತ್ತು ನೆನಪುಗಳಿಂದ. ಶ್ರೀಧರ ದಾಖಲೆ ಮಾಡುತ್ತಿರುವುದು ಅವರು ಕಂಡು ಅನುಭವಿಸಿದ ಮತ್ತು ಈಗ ತೀವ್ರ ಹಂಬಲದಿಂದ ನೆನಪಿಸಿಕೊಳ್ಳುವ ಕೃಷಿ ಆಧಾರಿತ ಜೀವನಕ್ರಮವನ್ನು. ಕೃಷಿ ಎಂದಿಗೂ ವ್ಯವಸಾಯವಾಗದೇ ಇಡಿಯಾದ, ಸಾವಯವವಾದ ಸಮಗ್ರವಾದ ಜೀವನಶೈಲಿಯಾಗಿದ್ದ ಕಾಲವನ್ನು. ಒಂದು ದೃಷ್ಟಿಯಲ್ಲಿ ಬದಲಾಗದ ಗ್ರಾಮೀಣ ಭಾರತವೇ ಆಗಿತ್ತು. ತನ್ನ ಮನೆ, ಕುಟುಂಬ, ಜಾನುವಾರುಗಳು, ಗದ್ದೆ, ತನ್ನ ಸಮುದಾಯ ಇವುಗಳನ್ನೇ ನೆಚ್ಚಿಕೊಂಡು ಅದಕ್ಕೆ ಸಾಕಾಗುವಷ್ಟು ಮಾತ್ರ ಉತ್ಪಾದನೆ ಮಾಡಿಕೊಂಡು ಹೆಚ್ಚುವರಿಯ ಕನಸು ಕಾಣದ ರೈತನ ಜೀವನಕ್ರಮವಾಗಿತ್ತು. ಮಾತ್ರವಲ್ಲ, ಈ ಕಾರಣದಿಂದಾಗಿಯೇ ತನ್ನ ಪರಿಸರ, ಸಮುದಾಯ ಹಾಗೂ ಮನುಷ್ಯನ ಸಂಬಂಧಗಳ ಸಾವಯವ ಜಗತ್ತಿನಲ್ಲಿ ಬದುಕುತ್ತಿದ್ದ ಸಮಾಜವೂ ಆಗಿತ್ತು. ಬಹುಶಃ ಅನೇಕರಿಗೆ ಇದು ಏರಿಳಿತವಿಲ್ಲದ ಸ್ಠಗಿತಗೊಂಡ ಜೀವನವಾಗಿ ಕಂಡು ನಿರಾಸೆ ಹುಟ್ಟಿಸುವಂತಿತ್ತು. ಆದರೆ ಆಧುನಿಕತೆ, ಕೃಷಿಯಲ್ಲಿ ಕ್ರಾಂತಿ ತರುವ ಭರಾಟೆಯಲ್ಲಿ ರಾಸಾಯನಿಕ ಗೊಬ್ಬರಗಳು, ಸಾಲ, ಹೈಬ್ರಿಡ್ ಬೀಜಗಳು, ಹಣ ಮತ್ತು ಆಮಿಷಗಳನ್ನು ಒಡ್ಡಿದ ಸರಕಾರಗಳು ಮತ್ತು ಇಡೀ ಈ ಚಾರಿತ್ರಿಕ ಪ್ರಕ್ರಿಯೆಯ ಹಿಂದಿರುವ ಬಂಡವಾಳಗಳಿಂದಾಗಿ ಹುಟ್ಟಿಕೊಂಡ ಹೊಸ ಜೀವನಕ್ರಮದ ವಿಕಾರಗಳಿಂದ ಆಘಾತಗೊಂಡಿರುವ ಮನಸ್ಸುಗಳಿಗೆ ಆ ಹಿಂದಿನ ಜಗತ್ತೇ ಆಪ್ಯಾಯಮಾನವಾಗಿ ಕಾಣುತ್ತದೆ.
 ಈ ಕೃತಿಯಲ್ಲಿ ನನಗೆ ಪ್ರಧಾನವೆಂದು ಕಾಣುವ ಕೃಷಿಕಥನಗಳ ಬಾಗಿಲಲ್ಲಿಇಂಥ ನೋಟಕ್ರಮಗಳಿರುವ ಈ ವರೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ ಬರಹವಾಗಿದೆ. ಈ ಲೇಖನದ ಮೊದಲ ಭಾಗದಲ್ಲಿ ನಂದಿಬಯಲು ಗ್ರಾಮದ ಸಾಂಪ್ರದಾಯಿಕ ಬದುಕನ್ನು ಶ್ರೀಧರ ಅಪ್ಪಟ ಕಥೆಗಾರನಂತೆ ನಿಖರವಾದ ಸೂಕ್ಷ್ಮವಾದ ವಿವರಗಳೊಂದಿಗೆ ವರ್ಣಿಸುತ್ತಾರೆ. ಈ ವರ್ಣನೆಯಲ್ಲಿ ಶ್ರೀಧರ ಬಳಸುವ ಪ್ರತಿಮೆಗಳು ಉತ್ತಮ ಕಾವ್ಯವೊಂದನ್ನು ಓದಿದಂತೆ ಮಾಡುತ್ತವೆ. ಎರಡನೇ ಭಾಗದಲ್ಲಿ ತಿಮ್ಮಣ್ಣನು ಎನ್‍ಟಿ (NT) ಯಾಗಿ ರೂಪಾಂತರಗೊಂಡಿದ್ದರ ಪುರಾಣವಿದೆ. ಶ್ರೀಧರರ ಬರಹಗಳ ಎರಡು ವಿರುದ್ಧ ಧೃವಗಳ ಪ್ರತಿಮೆಗಳಿವು. ಇವುಗಳಲ್ಲಿ ಮೊದಲನೆಯದನ್ನು ಶ್ರೀಧರ ತೀವ್ರ ಆತ್ಮೀಯತೆ ಹಾಗೂ ಪ್ರೀತಿಯಿಂದ ಕಟ್ಟಿಕೊಡುತ್ತಾರೆ. ಇದು ಶ್ರ‍ೇಷ್ಠ ಕತೆಗಾರನೊಬ್ಬನ ನೆನಪಿನ ಉಗ್ರಾಣದ ದ್ಯೋತಕ ಮಾತ್ರವಾಗಿಲ್ಲ. ಎನ್ಟಿ ಪುರಾಣಗಳಲ್ಲಿ ಕಾಣುವ ಆಧುನಿಕ ಬಂಡವಾಳದ ವಿಕಾರಗಳಿಗೆ ವೈದೃಶ್ಯವಾಗಿ ಶ್ರೀಧರರ ಸಂವೇದನೆ ಪೂರ್ಣವಾಗಿ ಒಪ್ಪಿಕೊಳ್ಳುವುದೇ ಈ ಕಳೆದುಹೋದ ಜಗತ್ತನ್ನು. ಕೃತಿಯ ಇನ್ನೊಂದು ಲೇಖನದಲ್ಲಿ ಅವರು ಹೇಳುವಂತೆ, ಇದು ನೆನಪೋ, ಕನಸೋ, ಭ್ರಮೆಯೋ ಅದು ಗತಕಾಲದ ಮರುಹಂಬಲವೋ ಎನ್ನುವುದು ಮುಖ್ಯವಲ್ಲ. ಅದು ಭಾವನಾತ್ಮಕವಾಗಿ ನಿಜವಾದದ್ದು. ಈ ಲೇಖನವನ್ನು ಓದುತ್ತಿದ್ದ ಹಾಗೆ ಗೆಳೆಯ ರಾಮುಗೆ ಫೋನ್ ಮಾಡಿ ಹೇಳಿದೆ, "ಶ್ರೀಧರ್ ತೀವ್ರ nostalgia ದಿಂದ ಆ ಬದುಕಿನ ಬಗ್ಗೆ ಬರೆಯುತ್ತಾರೆ. ನಮಗೆಲ್ಲಾ ಈಗ ಇದು ಸರಿಯೆನ್ನಿಸುತ್ತದೆಯಲ್ಲವೆ? ಅಂದರೆ ಇಂದಿನ ಕೇಡುಗಾಲದ ಭೀಕರವಾದ ಪತನವನ್ನು ನೋಡುತ್ತಿರುವವರಿಗೆ ಹೀಗಿಲ್ಲದಿದ್ದ, ಭಿನ್ನವಾಗಿದ್ದ ನಮ್ಮ ಬಾಲ್ಯದ ಅಥವಾ ಎರಡು ದಶಕಗಳ ಹಿಂದಿನ ಜಗತ್ತು ಕೂಡ ಒಳ್ಳೆಯದಾಗಿ ಕಾಣುತ್ತದೆಯಲ್ಲವೆ?" ರಾಮು ಹೇಳಿದರು, "ಬಹುಶಃ nostalgia ಬಿಟ್ಟು ನಮಗೆ ಈಗ ಉಳಿದಿರುವುದೇನು? ಅಥವಾ nostalgia ಆಗಿರುವ ಬದಲು ಅದೊಂದು ವಾಸ್ತವಿಕ ಮೌಲ್ಯವೇ ಆಗಿತ್ತಲ್ಲವೇ?" ರಾಮು ಹೇಳಿದ್ದು ಸರಿಯೆನ್ನಿಸುತು. ಬಹುಶಃ ಈ ತರಹದ್ದೇ ಆದ ಪಲ್ಲಟವನ್ನು ನೋಡಿ ತಳಮಳಗೊಂಡಿದ್ದ ಹತ್ತೊಂಬತ್ತನೆಯ ಶತಮಾನದ ಇಂಗ್ಲೆಂಡ್‍ನ ರೋಮ್ಯಾಂಟಿಕ್ ಕವಿಗಳು nostalgiaಅನ್ನು ಅತ್ಯಂತ ಸೃಜನಶೀಲವಾಗಿ ಬಳಸಿಕೊಂಡರು. ಕವಿ ಬ್ಲೇಕ್‍ನ darh satanic millsಗಳು ಅವನು ತಿರಸ್ಕರಿಸಿದ ಚರ್ಚುಗಳು ಆಗಿರಬಹುದು; ಅಥವಾ ಕವಿ ವರ್ಡ್ಸ್‌ವರ್ಥ್ ತೀವ್ರ ಭಾವುಕತೆಯಿಂದ ಮೋಹಿಸಿದ್ದ ಗ್ರಾಮೀಣ ಹಸಿರು ಇಂಗ್ಲೆಂಡ್‍ನ ನಾಶವನ್ನು ಬಿತ್ತಲು ಹುಟ್ಟಿಕೊಂಡಿದ್ದ ಕಾರ್ಖಾನೆಗಳು ಆಗಿರಬಹುದು. ರೋಮ್ಯಾಂಟಿಕ್‍ರಿಗೆ nostalgia ಒಂದು ಬಂಡಾಯದ, ನಿರಾಕರಣೆಯ ಮಾದರಿಯಾಗಿತ್ತು. ಬಂಡವಾಳ, ಯಾಂತ್ರೀಕರಣಗಳ ಮೂಲಕ ಪ್ರತಿಷ್ಠಾನಗೊಳ್ಳುತ್ತಿದ್ದ ಹೊಸ ಜಗತ್ತಿನ ತೀವ್ರ ವಿಮರ್ಶೆಯೂ ಆಗಿತ್ತು. ಬಹುಶಃ ಕುವೆಂಪು ಅವರ ಮಲೆನಾಡು, ಕಾರಂತರ ಕರಾವಳಿ, ಬೇಂದ್ರೆಯವರ ಧಾರವಾಡಗಳೂ ಇದೇ ಮಾದರಿಯವು.
 ಶ್ರೀಧರರ ಬರಹ ಉದ್ದಕ್ಕೂ ಧ್ಯಾನಿಸುವುದು ಒಂದು ಕಾಲದಲ್ಲಿ ವಾಸ್ತವಾಗಿದ್ದ ಕೃಷಿ ಆಧಾರಿತ ಜೀವನಕ್ರಮವನ್ನು, ಇದು ಆರಾಧನೆಯಿಂದಲ್ಲ. ಒಂದು ಗಟ್ಟಿಯಾದ ಮೌಲ್ಯ ವ್ಯವಸ್ಥೆಯು ಪಲ್ಲಟವಾದದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ ಪ್ರಯತ್ನವಾಗಿದೆ.
(ಮುನ್ನುಡಿ)
ಶ್ರೀಧರ ಬಳೆಗಾರ - `ಕಾಲಪಲ್ಲಟ` (ಅಂಕಣ ಬರಹಗಳು)
ಪ್ರಥಮ ಮುದ್ರಣ - 2011
ಬೆಲೆ -95
ಪುಟಗಳು -114
ಪ್ರಕಾಶಕರು

ಅಂಕಿತ ಪುಸ್ತಕ
53, ಶ್ಯಾಮಸಿಂಗ್ ಕಾಂಪ್ಲೆಕ್ಸ್
ಗಾಂಧಿ ಬಜಾರ್ ಮುಖ್ಯ ರಸ್ತೆ
ಬಸವನಗುಡಿ, ಬೆಂಗಳೂರು 56004080

080- 26617100


Tuesday, February 22, 2011

barahadalli bendreyavara baduku-dr. g. krishnappa[2008]

ಬರಹದಲ್ಲಿ  ಬೇಂದ್ರೆಯವರ ಬದುಕು- 

bendreyavara maraathi saahitya krushi-vittala rao gaikwad[2010]

ಬೇಂದ್ರೆಯವರ ಮರಾಠಿ ಸಾಹಿತ್ಯ ಕ್ರಷಿ

Saturday, February 19, 2011

Prajavani-ಗೌರಮ್ಮ

ಕೊಡಗಿನ ಗೌರಮ್ಮ- ವೈದೇಹಿ

್Prajavani-ಡಾ/ ಜಾನಕಿ

ಜಾನಕಿ ಎ- ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ-Prajavani

The charm of epics | | | Indian Express

ಮಹಾಕಾವ್ಯಗಳ ಚೆಲುವು- ಎಚ್. ಎಸ್. ಶಿವಪ್ರಕಾಶ್-The charm of epics | | | Indian Express

Friday, February 18, 2011

ಕನ್ನಡ ಜಾನಪದ: ಜಾನಪದ ವಿವಿ ಸ್ವರೂಪ ಹೇಗಿರಬೇಕು?

ಕನ್ನಡ ಜಾನಪದ: ಜಾನಪದ ವಿವಿ ಸ್ವರೂಪ ಹೇಗಿರಬೇಕು?: "-ಡಾ. ಬಸವರಾಜ ಮಲಶೆಟ್ಟಿ (ಪ್ರೊ. ಬಸವರಾಜ ಮಲಶೆಟ್ಟರು ಹಿರಿಯ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಹೊಸಪೇಟೆಯ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಿವೃತ್ತಿಯ..."

delli dange mattu itara kathegalu[kannada short stories]-by agumbe nataraj[2010

DILLI DANGE mattu itara kathegalu[kannada short stories]
written by- agumbe s nataraj
published by-
HAMSA PRAKASHANA
947, third main,
vijayanagara,
bangalore-560040
phone-080-[-23383004
pages-6+142
first published-2010
price-rs-100
graphics- s a sundarraj
cover page- v raj

Thursday, February 17, 2011

vijaykarnataka e-Paper

ಕೆ.ವಿ. ತಿರುಮಲೇಶ್- ಸಾಹಿತ್ಯ ಸಂಭ್ರಮ-vijaykarnataka e-Paper

Wednesday, February 16, 2011

Devasahitya: ಎರಡು ಪದ್ಯಗಳು

Devasahitya: ಎರಡು ಪದ್ಯಗಳು: "1. ಐವತ್ತು ಅವನಿಗೆ ಈಗ ಐವತ್ತು. ಇಪ್ಪತ್ತೈದು ವರ್ಷದ ಹಿಂದೆ ಅವ ಪ್ರೀತಿಸಿದ ಆ ಅವಳು ಪತ್ರವೂ ಬರೆದಿಲ್ಲ ಎಂತಿರುವಳೋ ಎಂದು ಹಿಮಾಲಯದ ವಿಮಾನ ಹತ್ತಿದ್ದೆ ಅಲಕೆಯ ಕಡೆಗೆ..."

shukavani[kannada novel based on nagavarmas" kadambari'-written by ramadas[2010]






ಶುಕವಾಣಿ- ರಾಮದಾಸ[ನಾಗವರ್ಮನ ಕಾದಂಬರಿ ಆಧಾರಿತ]

Tuesday, February 15, 2011

Prajavani

ಎಮ್ ಪಿ ಪ್ರಕಾಶ್- ಯು ಆರ್ ಅನಂತಮೂರ್ತಿPrajavani

ಕೆಂಪುಕೋಟೆ: ಪ್ರೇಮಿಗಳ ಹಬ್ಬಕ್ಕೊಂದು ಹಿಂದಿ ಜಾನಪದ ಪ್ರೇಮ ಕತೆ

ಕೆಂಪುಕೋಟೆ: ಪ್ರೇಮಿಗಳ ಹಬ್ಬಕ್ಕೊಂದು ಹಿಂದಿ ಜಾನಪದ ಪ್ರೇಮ ಕತೆ: "ಹಿಂದಿಯ ಮೊದಲ ಕವಿ ಎಂದು ಗುರುತಿಸಿಕೊಂಡ ಚಂದ ಬರ್ದಾಯಿಯ ಕೃತಿ ಪೃಥ್ವಿರಾಜ್ ರಾಸೊ ಸುಮಾರು ಹತ್ತು ಸಾವಿರ ಛಂದಗಳ ಲಾವಣಿ ಕಾವ್ಯ. ಹನ್ನೆರಡನೇ ಶತಮಾನದಲ್ಲಿ ಚಂದ ಬರ್ದಾಯಿಯ..."

Wednesday, February 9, 2011

Chiravirahi[kannada novel]- belle ramachandra rao

"ಚಿರವಿರಹಿ" - ಮಹತ್ವದ ಕಾದಂಬರಿ
- ಕೀರ್ತಿನಾಥ ಕುರ್ತಕೋಟಿ

"ಬೆಳ್ಳೆ ರಾಮಚಂದ್ರರಾಯರ ಚಿರಂಚೀವಿಕಾದಂಬರಿ ಮೊದಲನೆಯ ನೋಟಕ್ಕೆ ಪರಿಪೂರ್ಣವಾಗಿದೆಯೆಂದೇ ತೋರುತ್ತದೆ. ವಕೀಲ ರಾಘವೇಂದ್ರರಾಯರ ಹೆಂಡತಿಯಾದ ಮಾಲತಿ, ಗಂಡನ ಸ್ನೇಹಿತನಾದ ಗೋಪಿನಾಥನನ್ನು ಕ್ರಮೇಣ ಪ್ರೀತಿಸತೊಡಗುತ್ತಾಳೆ. ಚಿಕ್ಕ ವಯಸ್ಸಿನಲ್ಲಿಯೇ ಹೆಂಡತಿಯನ್ನು ಕಳೆದುಕೊಂಡು ಮಗಳ ಆಟಪಾಠಗಳಲ್ಲಿ ಎದೆಯ ದುಃಖವನ್ನು ಮರೆತಿರುವ ಗೋಪಿನಾಥ ಒಂದು ದುರ್ಬಲ ಕ್ಷಣದಲ್ಲಿ ಮಾಲತಿಗೆ ಮರುಳಾಗುತ್ತಾನೆ. ಪರಿಚಯ ಸ್ನೇಹವಾಗಿ, ಕೊನೆಗೆ ಪ್ರೀತಿಯಲ್ಲಿ ಪರ್ಯಾವಸನವಾಗುತ್ತದೆ. ಆದರೆ ಇಬ್ಬರಿಗೂ ಸಮಸ್ಯೆಯ ದುರಂತದ ಅರಿವಾಗಿ ತಂತಮ್ಮ ವಿವೇಕವನ್ನು ಜಾಗೃತಗೊಳಿಸಿ ದೂರವಾಗುತ್ತಾರೆ. ಸಂಸ್ಕಾರ ಅಂತಃಪ್ರವೃತ್ತಿಯನ್ನು ಗೆಲ್ಲುತ್ತದೆ. ಪ್ರೀತಿ ಅಂತಃಕರಣದ ಉಸಿರಾಗಿ ಮಾತ್ರ ಉಳಿಯುತ್ತದೆ. ಪಾತ್ರರಚನೆ, ವಾತಾವರಣ, ಮಿತವಾದ ಭಾವನಿರ್ಮಿತಿ ಇವುಗಳಿಂದ ಕಾದಂಬರಿ ಸುಂದರವಾಗಿಯೇ ಬಂದಿದೆ. ಆದರೆ ರಾಮಚಂದ್ರರಾಯರು ಪ್ರೀತಿಯ ಸಮಸ್ಯೆಯನ್ನು ತೀರ ಶಾಸ್ತ್ರೀಯವಾಗಿ, ತರ್ಕಬದ್ಧವಾಗಿ ಬಿಡಿಸಿದಂತೆ ಕಾಣುತ್ತದೆ. ಅಂಥಹ ಪರಿಹಾರಕ್ಕೆ ಅನುಕೂಲವಾಗಲೆಂದೇ ಮಾಲತಿ-ಗೋಪಿನಾಥರ ಪಾತ್ರಗಳನ್ನು ಸುಸಂಸ್ಕೃತರಾಗಿ ಮಾಡಿದರೆಂಬ ಸಂಶಯ ಸುಳಿಯುತ್ತದೆ. ಆದರೆ ಮನೋಹರವಾದ ಕಥನಶೈಲಿ, ಸರಸವಿನೋದ ಹಾಗೂ ನಿರ್ದುಷ್ಟವಾದ ಪಾತ್ರಸೃಷ್ಟಿಯ ಮೂಲಕ ಕಾದಂಬರಿ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ."

(ಯುಗಧರ್ಮ ಹಾಗೂ ಸಾಹಿತ್ಯ ದರ್ಶನ - 1962)


Sanskrita Sinchana- k krishnappa shetty - kudumallige[[2010]


ಸಂಸ್ಕೃತ ಸಿಂಚನ

(ಸಂ) - ಕೆ. ಕೃಷ್ಣಪ್ಪ ಶೆಟ್ಟಿ ’ಕುಡುಮಲ್ಲಿಗೆ’

 ತೀರ್ಥಹಳ್ಳಿಯ ಸಮೀಪದ ಕುಡುಮಲ್ಲಿಗೆಯ ಕೆ. ಕೃಷ್ಣಶೆಟ್ಟರ ಕಾವ್ಯನಾಮ - ’ಕುಡುಮಲ್ಲಿಗೆ’.

ಸಂಸ್ಕೃತ ಸಿಂಚನಸಂಸ್ಕೃತದ ಎಂಬ ಏಕ ಸ್ವರಾಕ್ಷರದಿಂದ ಆರಂಭವಾಗುವ ಶ್ಲೋಕ-ಶ್ಲೋಕಾರ್ಥಗಳ ಸಂಗ್ರಹ. "ಈ ಕೃತಿಯಲ್ಲಿ ಕೇವಲ ಕಾರತ್ಮಕವಾದ ಕೆಲವೇ ಸಹಸ್ರ ಸಂಸ್ಕೃತ ಶ್ಲೋಕಗಳನ್ನು ಮಾತ್ರ ನೀಡಲಾಗಿದೆ...... ಈ ಕೃತಿಯು ಸಂಸ್ಕೃತದ ಸುವಿಸ್ತಾರವಾದ ದಿಕ್ಸೂಚಿಯಾಗಿದೆ. ಹೇಗೆಂದರೆ ಕೇವಲ ಕಾರಾತ್ಮಕ ಏಕಸ್ವರಾಕ್ಷರದಿಂದ ಆರಂಭಗೊಳ್ಳುವ ಶ್ಲೋಕಗಳ ಸಂಗ್ರಹವಿದು." ಎಂದಿದ್ದಾರೆ ಸಂಪಾದಕರು.
ನೂರಾರು ಸಂಸ್ಕೃತ ಗ್ರಂಥಗಳಿಂದ, ಅಕಾರದಿಂದ ಆರಂಭಗೊಳ್ಳುವ ಶ್ಲೋಕಗಳನ್ನು ಆಯ್ಕೆಮಾಡಿ, ಕನ್ನಡ ಭಾಷಾಂತರದೊಂದಿಗೆ ನೀಡಿರುವ ಕೃಷ್ಣ ಶೆಟ್ಟರು ಸಹೃದಯರಿಗೆ ಅಮೃತಸಿಂಚನ ಮಾಡಿದ್ದಾರೆ. ಇದೊಂದು ಸಂಗ್ರಹ ಹಾಗೂ ಅಧ್ಯಯನಯೋಗ್ಯ ಗ್ರಂಥ.

 ಪ್ರ- ಕುಡುಮಲ್ಲಿಗೆ ಪ್ರಕಾಶನ.
ಮನೆ ನಂ. 1-100/1,  ಶ್ರೀ ದುರ್ಗಾನಂದ ನಿವಾಸ.
ಕೆ.ಕೆ. ಶೆಟ್ಟಿ ಕಂಪೌಂಡು, ಶಾಂತಿನಗರ

ಕಾವೂರು ಅಂಚೆ
 ಮಂಗಳೂರು - 575105
ಮೊದಲ ಮುದ್ರಣ 2010
ಬೆಲೆ ರೂ .250
ಪುಟಗಳು 272

ಬಿ.ಪಿ. ಜನಾರ್ದನ ಉಪಾಧ್ಯ - ಗೆಳೆಯ ಕೆ. ಗೋಪಾಲಕೃಷ್ಣ ಉಪಾಧ್ಯರ ಸವಿನೆನಪು



ಕೆ ಗೋಪಾಲಕೃಷ್ಣ ಉಪಾಧ್ಯರ ಸವಿನೆನಪು

ಕಲ್ಮಂಜೆ ಗೋಪಾಲಕೃಷ್ಣ ಉಪಾಧ್ಯಾಯ (K.G.K. Upadhyaya) ನನ್ನ ಮರೆಯಲಾಗದ ಮಿತ್ರ ಹಾಗೂ ಸಹಪಾಠಿ. ನಾವು ಬಾಲ್ಯ ಸಹಪಾಠಿಗಳೇನಲ್ಲ. ಅವರು ಬೆಳೆದು ಓದಿದ್ದು, ಪೆರ್ಡೂರು ಮತ್ತು ಇನ್ನಂಜೆಯಲ್ಲಿ. ನಾನು ಬಾಲ್ಯದಲ್ಲಿ ಓದಿದ್ದು ಕೊಳ್ಳೇಗಾಲದಲ್ಲಿ.
ಕಾಲೇಜು ಶಿಕ್ಷಣಕ್ಕಾಗಿ ನಾವಿಬ್ಬರೂ ಮೈಸೂರಿಗೆ ಹೋಗಿದ್ದಾಗ ಭೇಟಿ, ಪರಿಚಯ. ಅವರು ಮೈಸೂರಿನ ಮಹಾರಾಜಾ ಕಾಲೇಜಿನ ವಿದ್ಯಾರ್ಥಿ- 1951ರಿಂದ 1955ರ ವರೆಗೆ. ನಾನು 1950ರಿಂದ 1954ರ ವರೆಗೆ ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ - ಅಂದಿನ ನಮ್ಮ ಸಂಪರ್ಕಕ್ಕೆ ಮುಖ್ಯವಾಗಿ ದಿ. ಪ್ರೊಫೆಸರ್ ನಾರಾಯಣರಾಯರ ಅಧ್ಯಕ್ಷತೆಯ ದ.. ವಿದ್ಯಾರ್ಥಿಗಳ ಸಂಘ ಹಾಗೂ ಚಟುವಟಿಕೆ. ಅದರಿಂದಾಗಿ, ಸಹಪಾಠಿ ವಿಶ್ವನಾಥ ಬಿಳಿರಾಯ, ಕೆ. ರಾಮಚಂದ್ರ, ಹಾಗೂ ಗೋಪಾಲಕೃಷ್ಣ ಉಪಾಧ್ಯಾಯ ನನ್ನ ಅಚ್ಚುಮೆಚ್ಚಿನ ಗೆಳೆಯರಾದರು. ನಾನು ಕಾಲೇಜಿನ ಹಾಸ್ಟೆಲ್‍ನಲ್ಲಿದ್ದರೆ ಅವರು ಕೊತ್ವಾಲ್ ರಾಮಯ್ಯ ಬೀದಿಯಲ್ಲಿ ಒಂದು ರೂಂ ಮಾಡಿಕೊಂಡು, ಬಿಳಿರಾಯನ ಸಂಗಾತಿಯಾಗಿದ್ದರು. ಆಗಾಗ್ಗೆ ಭೇಟಿಯಾಗುತ್ತಿದ್ದೆವು, ಪುಸ್ತಕ ವಿನಿಮಯ, ಚರ್ಚೆ ಮುಂದುವರಿಯಿತು. ಮಹಾರಾಜಾ ಕಾಲೇಜಿನ ಹಲವಾರು ಕಾರ್ಯಗಳಿಗೆ ಉಪಾಧ್ಯಾಯರು ನನ್ನನ್ನು ಕರೆದೊಯ್ಯುತ್ತಿದ್ದರು. ಅಲ್ಲಿ ಕುವೆಂಪು, ಬೇಂದ್ರೆಯವರನ್ನು ನೋಡಿ ಕೇಳಿದ್ದು ಮನದಾಳದಲ್ಲಿದೆ. ಗೋಪಾಲಕೃಷ್ಣ ಅಡಿಗರ ಪರಿಚಯವಾದದ್ದು ಇವರಿಂದಾಗಿಯೇ. ಎಲ್ಲರಲ್ಲೂ ನೇರವಾದ ಮಾತುಕತೆ, ಅಳುಕಿಲ್ಲ. ಅವರ ನಡೆ, ನುಡಿ ನನ್ನ ಮೇಲೆ ಪ್ರಭಾವ ಬೀರುತ್ತಿತ್ತು.ರಲ್ಲಿ ನಾನು ಮೈಸೂರಿನ ವ್ಯಾಸಂಗ ಮುಗಿಸಿ, ಹಿರಿಯಡ್ಕಕ್ಕೆ ಬಂದು ವಾಸಿಸತೊಡಗಿದೆ. 1954ರ ಅಕ್ಟೋಬರ್‍ನಲ್ಲಿ ಡಿಗ್ರಿ ಪಡೆಯಲು ನಾನು ಮೈಸೂರಿಗೆ ಹೋದಾಗ, ಉಪಾಧ್ಯಾಯರ ಆಶ್ರಯ. ಅವರು ಡಿಗ್ರಿ ಪಡೆದದ್ದು 1955ರಲ್ಲಿ. ಡಿಗ್ರಿ ಮುಗಿಸಿ ಅವರು ಪೆರ್ಡೂರಿಗೆ ಬಂದಾಗ ನಾನು ನಿರುದ್ಯೋಗಿಯಾಗಿ ಮನೆಯಲ್ಲೇ ಇದ್ದೆ. ಅವರು B.T. ವಿದ್ಯಾರ್ಥಿಯಾಗಲು ನಿರ್ಧರಿಸಿ, ನನ್ನನ್ನು ಬಡಿದೆಬ್ಬಿಸಿದರು. ಅಂತೂ ಅವರಿಂದಾಗಿ, ನಾನು ಅವರ ಸಹಪಾಠಿಯಾಗಿ ಮಂಗಳೂರಿನ ಬಿ.ಟಿ. ಕಾಲೇಜು ಸೇರಿದೆನು. ಅವರು ಆಗಾಗ್ಗೆ ಹೇಳುತ್ತಿದ್ದಂತೆ, ಅಂದಿನ ತರಬೇತಿ ಶಾಲೆ ಬಿದಿರು ತಟ್ಟಿ (B.T) ಕಾಲೇಜು ಅಕ್ಷರಶಃ ಸತ್ಯ. ಮೈದಾನು ರಸ್ತೆಯಲ್ಲಿದ್ದ ಸರಳಾಯರ ಊಟದ ಹೋಟೆಲ್‍ನ ಹಿಂದಿನ ಕೋಣೆಯಲ್ಲಿ ವಾಸ್ತವ್ಯ. ಅವರ ಬೀಡಿ ಚಟ ನನ್ನನ್ನು ಕಂಗೆಡಿಸಿತ್ತು. ಆದರೂ ಅವರ ಸಹವಾಸ ನನ್ನನ್ನು ಶಿಕ್ಷಕನನ್ನಾಗಿ ರೂಪಿಸುತ್ತಿತ್ತು. ಮಂಗಳೂರಿನ ವಾಸ್ತವ್ಯ 1955-56ರಲ್ಲಿ. ನಾವು ಪರಸ್ಪರ ಬಿಟ್ಟಿರಲೇ ಇಲ್ಲ. ದಿನಾ ತಿರುಗಾಟವೂ ಒಟ್ಟಿಗೇ.ಒಮ್ಮೆ ದಿನಾ ಸಿಕ್ಕಿ ಮಾತನಾಡುತ್ತಿದ್ದ ಇದ್ದಿನಬ್ಬ ಇವರು ನನ್ನನ್ನು ನೋಡಿ, ಹಿಂದೆಮುಂದೆ ನೋಡತೊಡಗಿದರು. ಏಕೆಂದು ಕೇಳಲು, ನಿನ್ನ ಸಂಗಾತಿ ಕಾಣಲಿಲ್ಲ ಎಂದು ಹುಡುಕಾಡಿದರು. ಉಪಾಧ್ಯಾಯರು ಜನರ ಮಧ್ಯೆ ಅವರಿಗೆ ಕಾಣಲಿಲ್ಲ, ಅಷ್ಟೆ. ಕಾಲೇಜಿನ ಅಂಗಳದಲ್ಲಿ ಉಪಾಧ್ಯಾಯರದ್ದೇ ಗಟ್ಟಿ ಧ್ವನಿ. ಎಲ್ಲರಿಗೂ ಬೇಕಾದವರು. ಗೋವಾ ಚಳುವಳಿಯ ಸಭೆಗೆ ನನ್ನನ್ನು ಕರೆದೊಯ್ಯುತ್ತಿದ್ದರು. ಒಂದು ಸವಿ, ಕಹಿ ನೆನಪು. ನಮ್ಮೊಟ್ಟಿಗೆ ಪುತ್ತೂರಿನ ರಾಮಚಂದ್ರ ಭಟ್ಟ ಎಂಬ ಸೆಕಂಡರಿ ಟ್ರೈನಿಂಗ್‍ನ ವಿದ್ಯಾರ್ಥಿ ಒಬ್ಬರು ವಾಸ್ತವ್ಯ ಇದ್ದರು. ಅವರಿಗೆ ಜುಟ್ಟು ಇತ್ತು. ಬೆಳಿಗ್ಗೆ ಏಳುವಾಗ ಅದು ಮಾಯ. ಅದು ಉಪಾಧ್ಯಾಯರು ಪ್ರಯೋಗಿಸಿದ ಕತ್ತರಿ ಆಟ, ತಮಾಷೆ. ಇನ್ನೊಮ್ಮೆ ನಾವು ನಿದ್ರೆಯಲ್ಲಿದ್ದಾಗ ಬೀಡಿ ಸೇದಿ ಮೂಲೆಗೆ ಬಿಸಾಡಿದುದರ ಪರಿಣಾಮ ಕೊಡೆ ಬೆಂಕಿಗೆ ಆಹುತಿ. ಇದು ತಿಳಿದದ್ದು ಬೆಳಗಾದ ಮೇಲೆ ಹೋಗಿ ನೋಡಿದಾಗಲೇ. ಇದಕ್ಕೆ ಉಪಾಧ್ಯಾಯರ ನಗು. ಆರ್ಥಿಕವಾಗಿ ನಾವು ಅನುಕೂಲವಾಗಿರಲಿಲ್ಲ. ಆದರೂ ಇಬ್ಬರ ಕಿಸೆಯಲ್ಲಿದ್ದುದರ ಸಮಪಾಲು. ಕೊನೆಯ ತಿಂಗಳುಗಳ ಹೋಟೆಲ್ ಬಾಕಿ ಕೆಲಸ ಸಿಕ್ಕಿದ ಮೇಲೆ ಕೊಡುವ ಆಶ್ವಾಸನೆಯೊಂದಿಗೆ ಮಂಗಳೂರು ವಿದ್ಯಾಭ್ಯಾಸ ಮುಗಿಸಿ ಹಿಂದಿರುಗಿದೆವು. ನಿರುದ್ಯೋಗ ಸಮಸ್ಯೆ; ಕೆಲಸದ ಹುಡುಕಾಟ ಇಬ್ಬರಿಗೂ ಸಾಕುಬೇಕೆನಿಸಿತು. ಡಿಸ್ಟ್ರಿಕ್ಟ್ ಬೋರ್ಡಿನ ಕರೆಯಂತೆ ಮಂಗಳೂರಿಗೆ ಹೋದಾಗ ಇಬ್ಬರಿಗೂ ದಕ್ಕಲಿಲ್ಲ ಉದ್ಯೋಗ. ಕಾರಣ, ನಾವು ಬ್ರಾಹ್ಮಣರು ಮತ್ತು ಮೈಸೂರು ವಿಶ್ವವಿದ್ಯಾನಿಲಯದವರು. ಅದೇ ವರ್ಷ ಅವರು ಮದುವೆಗೆ ಮುಂದಾದರು. ಪ್ರಾಯಶಃ ಅವರ ತಾಯಿಯ ಒತ್ತಡ. ಶಿರೂರು ಮಠದಲ್ಲಿ ಮದುವೆಗೆ ಹೋಗಿದ್ದೆ. ಈ ಮಧ್ಯೆ ನಾನು ಹಲವಾರು ಅರ್ಜಿ ಹಾಕಿ, ಧಾರವಾಡದ ಹಾನಗಲ್ಲಿನಲ್ಲಿ ಉದ್ಯೋಗ ದೊರಕಿತ್ತು. ಕೇಳಿ, ಉಪಾಧ್ಯಾಯರು ಮದುವೆಯ ಮಂಟಪದಲ್ಲಿಯೇ ಸುದ್ದಿಯನ್ನು ಬಿತ್ತರಿಸಿಬಿಟ್ಟರು. ನಾನು ಹಾನಗಲ್ಲಿಗೆ ಹೋದರೆ, ಅವರೂ ದ.. ಬಿಟ್ಟು ಉತ್ತರ ಕನ್ನಡದ ಹಳದೀಪುರ ಸೇರಿದರು. ಆ ವರ್ಷವೂ ನಾವು ಸಂಪರ್ಕದಲ್ಲಿದ್ದೆವು. ೧೯೫೭ರಲ್ಲಿ ಪೆರ್ಡೂರಿನಲ್ಲಿ ಪ್ರಾರಂಭವಾದ ಶಾಲೆ ಅವರನ್ನು ಕೈಬೀಸಿ ಕರೆದು, ಸ್ಥಾಪಕ ಮುಖ್ಯೋಪಾಧ್ಯಾಯರನ್ನಾಗಿಸಿತು. ಅಲ್ಲಿಂದ ನಿರಂತರವಾಗಿ ಅವರು ಆ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರು. ನಿವೃತ್ತಿಯ ವರೆಗೆ ಸೇವೆಯಿಂದ ಶಾಲೆಯನ್ನು ಜಿಲ್ಲೆಯಲ್ಲಿ ಹೆಸರುಗಳಿಸುವಂತೆ ಮಾಡಿದರು. ಪೆರ್ಡೂರಿನ ಕಲಾಮಂಡಳಿಯ ನಾಟಕಗಳು, ಯಕ್ಷಗಾನದ ಆಟಗಳು, ಸಿನೇಮಾ ನಟನೆ - ಇವೆಲ್ಲದರಲ್ಲೂ ಕೈಯಾಡಿಸಿದರು.ನಾನು ಅವರ ಹಿಂದೆ, ಅವರು ಕಲಿತಿದ್ದ ಇನ್ನಂಜೆ ಶಾಲೆಗೆ ಶಿಕ್ಷಕನಾಗಿ ೧೯೫೭ರಲ್ಲಿ ಸೇರಿದೆ. ಶಿಕ್ಷಕನಾಗಿ ಅವರಿಂದ ಸಲಹೆ ಸೂಚನೆ ಯಾವಾಗಲೂ ದೊರಕುತ್ತಿತ್ತು. ಶಿಕ್ಷಕನಾಗಿ ನಿವೃತ್ತನಾದ ಮೇಲೂ, ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾಪ್ರಸಾರಕ್ಕಾಗಿ, ಜಿಲ್ಲೆಯ ಹಳ್ಳಿಗಳಿಗೆಲ್ಲಾ ಸ್ವಂತ ಸ್ಕೂಟರ್‌ನಲ್ಲಿ ಪ್ರವಾಸಮಾಡಿ ವಿದ್ಯಾಪ್ರಸಾರ ಆಂದೋಳನದಲ್ಲಿ ಬಹಳಷ್ಟು ದುಡಿದರು. ಆಗೊಮ್ಮೆ, ಈಗೊಮ್ಮೆ ಅವರೊಡನೆ ಸ್ಕೂಟರ‍್ನಲ್ಲಿ ಪ್ರಯಾಣಮಾಡುವ ಅವಕಾಶ ಒದಗಿಸುತ್ತಿದ್ದರು. ಅವರ ಮೀಸೆಯಿಂದಾಗಿ ನಮ್ಮ ಮನೆಯ ಮಕ್ಕಳು ಅದ್ವಾನಿಜಿ ಎಂದು ಗುರುತಿಸಿದ್ದು ಉಂಟು. ನಿವೃತ್ತಿಯ ನಂತರ ಸ್ಕೂಟರ‍್ನಲ್ಲಿ ಅವರು ಹೋಗದಿದ್ದ ಜಿಲ್ಲೆಯ ದೇವಸ್ಥಾನವೇ ಇಲ್ಲ. ಸ್ಕೂಟರ‍್ನಿಂದ ಬಿದ್ದು ಅದರ ಸಹವಾಸ ಬಿಟ್ಟರು. ಬಸ್‍ನಲ್ಲಿ ಪ್ರಯಾಣಮಾಡದ ದಿನವಿಲ್ಲ. ಎಂ.ಜಿ.ಎಂ. ಕಾಲೇಜಿನ ಕಾರ್ಯಕ್ರಮಗಳಿಗೂ ಉಪಾಧ್ಯಾಯರು ಹಾಜರ್.ಸರಳ ಸ್ವಭಾವ, ಹಿಡಿದಿದ್ದನ್ನು ಮಾಡುವ ಛಲ, ಆಡಂಬರ ಇಲ್ಲದ ಜೀವನ ನನಗೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿ. ಇನ್ನಂಜೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ 1947ರಲ್ಲಿ ಹಾಸ್ಟೆಲ್‍ನಲ್ಲಿ ವಿರೋಧದ ನಡುವೆಯೂ ಪ್ರತ್ಯೇಕ ಧ್ವಜಾರೋಹಣದ ನೇತೃತ್ವ ವಹಿಸಿ, ವಿದ್ಯಾರ್ಥಿಗಳ ಮುಖಂಡರಾಗಿದ್ದರು ಎಂದು ಹೇಳಬಲ್ಲೆ.ಮೇ ತಿಂಗಳಲ್ಲಿ ಅವರ 80ನೇ ಶಾಂತಿಯಂದು ನನ್ನ ಅವರ ಕಡೆಯ ಭೇಟಿ. ಬೆಂಗಳೂರಿಗೆ ಹೋಗಿ ಬಾ ಎಂದು ನಗುಮುಖದಿಂದ ನನ್ನನ್ನು ಬೀಳ್ಕೊಟ್ಟಿದ್ದರು. ಅಕ್ಟೋಬರ್ ತಿಂಗಳಲ್ಲಿ ಅವರ ಮರಣ ವಾರ್ತೆ ತಿಳಿದು, ನನಗೆ ತಡೆಯಲಾರದ ದುಃಖದಿಂದ ಸುರಿದ ಹನಿ ಕಣ್ಣೀರು, ನನ್ನ ನೆನಪಿನ ಅವರ ಚಿತ್ರವನ್ನು ಮರೆಯದಂತೆ ಮಾಡಿದೆ.ಗೆಳೆಯ ಬಿ.ಪಿ. ಜನಾರ್ದನ)ಟಿಪ್ಪಣಿ:
ನನ್ನ ಅಣ್ಣ ಬಿ
.ಪಿ. ಜನಾರ್ದನ ಉಪಾಧ್ಯರ ಸಹಪಾಠಿ-ಗೆಳೆಯ ಶ್ರೀ ಗೋಪಾಲಕೃಷ್ಣ ಉಪಾಧ್ಯಾಯರು ಶ್ರೇಷ್ಟ ಅಧ್ಯಾಪಕ ಹಾಗೂ ಪುಸ್ತಕಪ್ರೀತಿಯ ಸಹೃದಯರಾಗಿದ್ದರು. ಕೆಲವು ದಶಕಗಳ ಉಡುಪಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದ ಅವರು ಈಗ ನಮ್ಮನಗಲಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ನನ್ನ ಅಣ್ಣನ ಈ ಲೇಖನ ಪ್ರಕಟಿಸುತ್ತಿದ್ದೇನೆ.
ಮುರಳೀಧರ ಉಪಾಧ್ಯ ಹಿರಿಯಡಕ
1954
2010

(

ಮನು ಚಕ್ರವರ್ತಿ- ಮಾಧ್ಯಮ ಮಾರ್ಗ- ಇನಾಂದಾರ್ ಪುರಸ್ಕಾರ ಅಭಿನಂದನೆಗಳೂ

MAADHYAMA- MAARGA[kannada]
[ a collection of essays on  culture, society and the arts]
by - manu chakravarthy, 
published by- akshara prakashana, heggodu, sagara
karnataka 577417
first impression-2010 pages- 528
price  rs 350

Saturday, February 5, 2011

ಲವಲವಿಕೆ: ಇದುವರೆಗಿನ ಸಮ್ಮೇಳನಾಧ್ಯಕ್ಷರು

ಲವಲವಿಕೆ: ಇದುವರೆಗಿನ ಸಮ್ಮೇಳನಾಧ್ಯಕ್ಷರು: "1 ಬೆಂಗಳೂರು (1915) ಎಚ್.ವಿ.ನಂಜುಂಡಯ್ಯ 2 ಬೆಂಗಳೂರು (1916) ಎಚ್.ವಿ.ನಂಜುಂಡಯ್ಯ &n..."

Wednesday, February 2, 2011

BANNANJE RAMACHARYA[edited by-muraleedhara upadhya hiriadka- 2011]

BANNANJE RAMACHARYA
[vyakthi- kruthi- smrati]
[person- literary works-recollection]
edited by-MURALEEDHARA UPADHYA HIRADKA
published by- Padamunnuru Prakashana
'tulasivana'
vegas township, kinnimulky. udupi-576101
mobile-9448437900
first edition-2011
pages-22+258
price-125
price-rs-12cover design- vinaya bannanje-photos- astro mohan
released by- dr v s acharya on 1-2-2011 at udupi

Tuesday, February 1, 2011

PARAMANEECHANA HEJJE GURUTU- AMBRAIYA MATHA[[kannada-2010]

paramannechana hejje gurutu[ a collection of thoughts on OSHO  in kannada]
by - ambraiyya matha
published by - n r am prakashana,
 koteshvara-576222
first edition- 2010
pages 120
price- rs-60
isbn-978-81-88325-09-2