ಎನ್. ಎಸ್ .ಎಲ್ - ಹೊಸವರ್ಷ ಬಂದಂತೆ ಯಾರು ಬಂದಾರು ?

ಕನ್ನಡ ಕಾವ್ಯ ಕಣಜ....: ಹೊಸವರ್ಷ ಬಂದಂತೆ ಯಾರು ಬಂದಾರು? ಹೊಸವರ್ಷ ಬಂದಂತೆ ಯಾರು ಬಂ...: ಹೊಸವರ್ಷ ಬಂದಂತೆ ಯಾರು ಬಂದಾರು? ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್...
N. S. laxminarayana Bhat

ಲಕ್ಕೂರು ಆನಂದ --ಕವಿ ಸಮಯ { Audio }

Lakkur Ananda - Kavi samaya - YourListen
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ -2013
Alva's Vishvanudisiri  Virasat 2013

Sunday, December 29, 2013

ಕದ್ರಿ ಲಯನ್ಸ್ ಕನ್ನಡ ರತ್ನ ಪ್ರಶಸ್ತಿ - 2013 -14

ಲಯನ್ಸ್ ಕ್ಲಬ್, ಕದ್ರಿ ಹಿಲ್ಸ್, ಪ್ರತಿ ವರ್ಷ ಕನ್ನಡದ ಯುವ ಸಾಹಿತಿಗಳನ್ನು ಗುರುತಿಸಿ ಪ್ರದಾನಿಸುವ "ಕದ್ರಿ ಲಯನ್ಸ್ ಕನ್ನಡ ರತ್ನ" (ಕಲಕ) ಪ್ರಶಸ್ತಿ, ೨೦೧೩ ಮತ್ತು ೨೦೧೪ಕ್ಕೆ ಪ್ರಕಟಗೊಂಡಿದೆ.
೨೦೧೩ನೆಯ ಸಾಲಿನ ಪ್ರಶಸ್ತಿ-ಖ್ಯಾತ ಕವಿ, ಶ್ರೀ ರವಿಶಂಕರ ಒಡ್ಡಂಬೆಟ್ಟು ಅವರಿಗೆ...
೨೦೧೪ನೆಯ ಸಾಲಿನ ಪ್ರಶಸ್ತಿ-ಭರವಸೆಯ ಲೇಖಕಿ, ಶ್ರೀಮತಿ ಅನಿತಾ ನರೇಶ್ ಮಂಚಿ.....

ಪ್ರಶಸ್ತಿಯು, ಫಲಕ, ಪ್ರಶಸ್ತಿ ಪತ್ರ ಹಾಗೂ ರೂ.೫೦೦೦/-(ಐದು ಸಾವಿರ) ನಗದನ್ನು ಒಳಗೊಂಡಿರುತ್ತದೆ....
ಇಬ್ಬರೂ ಸಾಹಿತಿಗಳಿಗೆ ಅಭಿನಂದನೆಗಳು. ಪ್ರಶಸ್ತಿ ಪ್ರದಾನ ಸಮಾರಂಭ-೧೪.೦೧.೨೦೧೪ರಂದು
ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ....ಸಂಜೆ ೪.೦೦ಕ್ಕೆ.....
ಎಲ್ಲರೂ ಬನ್ನಿ..

.ಕಾರ್ತಿಕ್ [ audio -kannada } ಸಂಸ್ಕೃತ ನಿಘಂಟುಗಳು

SANSKRIT NET LOKA: Kartik - [ Kannada audio ] Sanskrit...: Kartik - Sanskrit dictionaries - YourListen  ಕಾರ್ತಿಕ್ - ಭಾರತೀಯ ನಿಘಂಟು ಪರಂಪರೆ - ಸಂಸೄತ ನಿಘಂಟುಗಳು contact Kartik cell- 9448324122 email-sai...

ಮಾಸ್ತಿ ಅವರ ಆಂಗ್ಲ ನೌಕಾ ಕ್ಯಾಪ್ಟನ್ -ಟಿ. ಪಿ. ಅಶೋಕ

ಮಾಸ್ತಿ ಅವರಆಂಗ್ಲ ನೌಕಾ ಕ್ಯಾಪ್ಟನ್

ಗಂಡು-ಹೆಣ್ಣಿನ, ಗಂಡ-ಹೆಂಡತಿಯ ಸಂಬಂಧಗಳಲ್ಲಿನ ಇಕ್ಕಟ್ಟು-ಬಿಕ್ಕಟ್ಟುಗಳ ಶೋಧ ಮಾಸ್ತಿ ಅವರಕಥಾಸಾಹಿತ್ಯದ ಪ್ರಧಾನ ಆಶಯಗಳಲ್ಲಿ ಒಂದು. ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ ಹಿನ್ನೆಲೆಗಳಿಗೆ ಸೇರಿದ ಹಲವಾರು ದಂಪತಿಗಳ ದಾಂಪತ್ಯದ ಸ್ವರೂಪವನ್ನು ಮಾಸ್ತಿ ತಮ್ಮ  ಅನೇಕ ಕತೆಗಳಲ್ಲಿ ನಿರೂಪಿಸಿದ್ದಾರೆ. ವಿವಾಹಪೂರ್ವ, ವಿವಾಹೇತರ ಸಂಬಂಧಗಳ ಹಿಂದಿನ ಪ್ರೇರಣೆಗಳನ್ನೂ ಅವುಗಳ ಪರಿಣಾಮವನ್ನೂಅವರುತುಂಬ ಸಮಾಧಾನ-ಸಹಾನುಭೂತಿಗಳಿಂದ ಗಮನಿಸಿದ್ದಾರೆ.ಯಾವುದೇ ಸರಳ ನೈತಿಕ ತೀಮರ್ಾನಗಳಿಗೆ ಧಾವಿಸದೆ ಮನುಷ್ಯನ ಲೈಂಗಿಕ ನಡಾವಳಿಯಲ್ಲಿರುವ ಸಮಸ್ಯಾತ್ಮಕ ಅಂಶಗಳನ್ನು ಅವರುತುಂಬ ಉದಾರವಾಗಿ ಪರಿಶೀಲಿಸುವ ವ್ಯವಧಾನವನ್ನುತೋರಿದ್ದಾರೆ. ಮನುಷ್ಯನ ಲೈಂಗಿಕ ವರ್ತನೆಗಳ ಹಿಂದಿನ ಒತ್ತಡಗಳನ್ನು ತೆರೆದ ಮನಸ್ಸಿನಿಂದ ಅರ್ಥಮಾಡಿಕೊಳ್ಳುವ ಮಾಸ್ತಿಯವರು ಸಂಬಂಧಗಳನ್ನು ಉಳಿಸಿಕೊಳ್ಳುವವರ ಬಗ್ಗೆ ಹೆಚ್ಚಿನ ಮೆಚ್ಚುಗೆಯನ್ನುತೋರುವುದಾದರೂ ಅನಿವಾರ್ಯವಾಗಿ ಬಿಡುವ ವಿಚ್ಛೇದನಗಳನ್ನು ತಿರಸ್ಕಾರದಿಂದ ನೋಡುವುದಿಲ್ಲ. ದಾಂಪತ್ಯದ ನಿಯಮಗಳನ್ನು ಮೀರಬಾರದುಎಂಬುದು ಮಾಸ್ತಿಯವರ ಒಟ್ಟಾರೆ ನಿಲುವಾಗಿದ್ದರೂ, ಕೆಲವು ಜೀವನ ಸಂದರ್ಭಗಳಲ್ಲಿ ಹಾಗೆ ಮೀರುವುದುಯಾಕೆ ಅನಿವಾರ್ಯವಾಯಿತು, ಅದರ ಹಿಂದಿನ ಪರಿಸ್ಥಿತಿ-ಮನಸ್ಥಿತಿ ಏನು ಎಂದುಅವರು ನೈತಿಕಧಾಷ್ಟ್ರ್ಯವಿಲ್ಲದ ಮನುಷ್ಯಾನುಕಂಪದ ನೆಲೆಯಲ್ಲಿ ವಿಚಾರಿಸುತ್ತಾರೆ. 'ಕೆಡುವುದೆಂದರೇನು'ಎಂಬುದುತಮಗೆಇನ್ನೂ ತಿಳಿಯದೆಂದು ಮಾಸ್ತಿ ಉದ್ಗರಿಸುವಲ್ಲಿ ಮನುಷ್ಯನ ಲೈಂಗಿಕ ಬದುಕನ್ನುಕುರಿತಒಂದು ಬಗೆಯ ವಿಸ್ಮಯವೇಧ್ವನಿತವಾಗಿಬಿಡುತ್ತದೆ.

ಯುವ ಕವಿಗಳ ಕವನ ಸಂಕಲನಗಳು.

ಕನ್ನಡ ಕನ್ನಡಿಗ ಕರ್ನಾಟಕ: ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅ...: ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ  ಕವಿಗಳ  ಕವನ ಸಂಕಲನ ಅರ್ಪಣೆ ಶರತ್ ಚಕ್ರವರ್ತಿ , ರಾಜೇಂದ್ರ ಪ್ರಸಾದ್ , ಪ್ರವರ ಕೊಟ್ಟೂರು

ಮಣಿಪಾಲದಲ್ಲಿ ಪಿ. ಸಾಯಿನಾಥ್ ಉಪನ್ಯಾಸ --Development -realities & rhetoric -27-12-2013


 P.  Sainath
 Key note address -Development- Realities and Rhetoric
 Alal Bihari Vajpeyi Hall , D. C. Office , Manipal
 27-12-2012
 6pm
 WELCOME

ಡಾ / ಸುಶೀಲಾ ಉಪಾಧ್ಯಾಯರು ಬೇಗನೆ ಗುಣಮುಖಿಯಾಗಲಿ


ಇಂದು -26-12-2013 -  ಉಡುಪಿಯ ಗೋವಿಂದ ಪೈ ಕೇಂದ್ರದಲ್ಲಿ  ತುಳು ನಿಘಂಟಿನ ಡಾ / ಉ. ಪಿ. ಉಪಾಧ್ಯಾಯ ದಂಪತಿಗಳಿಗೆ ಸನ್ಮಾನ , ’ ಕೊಪ್ಪರಿಗೆ ’ ಅಭಿನಂದನಾ ಗ್ರಂಥ ಅರ್ಪಣೆ ಸಮಾರಂಭ ಏರ್ಪಡಿಸಲಾಗಿತ್ತು . ಆದರೆ ಬೆಳಿಗ್ಗೆ ಡಾ / ಸುಶೀಲಾ ಉಪಾಧ್ಯರು ಅನಾರೋಗ್ಯದಿಂದ ಆಸ್ಪತ್ರೆ  ಸೇರಬೇಕಾಯಿತು.
 ಡಾ / ಸುಶೀಲಾ ಉಪಾಧ್ಯಾಯರು ಬೇಗ ಗುಣಮುಖಿಯಾಗಲಿ ಎಂದು  ಹಾರೈಸುತ್ತೇನೆ .
         - ಮುರಳೀಧರ ಉಪಾಧ್ಯ ಹಿರಿಯಡಕ