ಯು.ಆರ್. ಅನಂತಮೂರ್ತಿ- ಹಿಂದುತ್ವ ಅಥವಾ ಹಿಂದ್ ಸ್ವರಾಜ್

ಲಡಾಯಿ ಪ್ರಕಾಶನ: ಹಿಂದುತ್ವ ಅಥವಾ ಹಿಂದ್ ಸ್ವರಾಜ್: ( ಡಾ. ಯು.ಆರ್. ಅನಂತಮೂರ್ತಿ ಅವರ ಅಪ್ರಕಟಿತ ಕೊನೆಯ ಮತ್ತು ಅನನ್ಯ ಲೇಖನದ ಸಾರ --ರಂಜಾನ್ ದರ್ಗಾ)  ಅನಂತ ಮೂರ್ತಿ ಅವರು ನಿಧನರಾಗುವುದಕ್ಕೆ ಒಂದು ವಾರ ಮುಂಚೆ ಹಿ...

ಓದುಗನಲ್ಲಿ ಮುಂದುವರೆಯುವ ರಾಮಾನುಜನ್

ಎ.ಕೆ. ರಾಮಾನುಜನ್ ಸಮಗ್ರ
ಪುಟಗಳು: 660, ಬೆಲೆ: ್ಙ 500
ಸಂಪಾದಕರು:
ಎಸ್. ದಿವಾಕರ್, ರಮಾಕಾಂತ ಜೋಷಿ
ಪ್ರಕಾಶಕರು:
ಮನೋಹರ ಗ್ರಂಥಮಾಲಾ
ಲಕ್ಷ್ಮೀ ಭವನ, ಸುಭಾಸ ರೋಡ್, ಧಾರವಾಡ
ದೂ.: ಓದುಗನಲ್ಲಿ ಮುಂದುವರೆಯುವ ರಾಮಾನುಜನ್ | ಪ್ರಜಾವಾಣಿ

ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ... -ವಿಮರ್ಶಕರ ಕೊರತೆ

ಇಜ್ಞಾನ ಡಾಟ್ ಕಾಮ್: ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ...: ತಂತ್ರಜ್ಞಾನ ಕ್ಷೇತ್ರದ ಹೊಸ ಮಾಹಿತಿಯನ್ನು ಕನ್ನಡದ ಲೋಕಕ್ಕೆ ಪರಿಚಯಿಸುತ್ತಿರುವವರಲ್ಲಿ ಶ್ರೀ ಉದಯಶಂಕರ ಪುರಾಣಿಕ ರದು ಪ್ರಮುಖ ಹೆಸರು. ವಿಜಯ ಕರ್ನಾಟಕ, ಸಂಯುಕ್ತ ಕರ್ನ...

ರಥಬೀದಿ ಗೆಳೆಯರು { ರಿ } ಉಡುಪಿ - ಜಿ. ರಾಜಶೇಖರ್ ಉಪನ್ಯಾಸ...

ರಥಬೀದಿ ಗೆಳೆಯರು (ರಿ) ಉಡುಪಿ
ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ವಿಶೇಷ ಉಪನ್ಯಾಸ : ಶ್ರೀ ಜಿ.ರಾಜಶೇಖರ್-’ಎ.ಕೆ.ರಾಮಾನುಜನ್ರ ಕಾವ್ಯ’
30-08-2014 ಶನಿವಾರ
ಸಂಜೆ 4 – 45 ರಿಂದ
ಸ್ಥಳ : ಧ್ವನ್ಯಾಲೋಕ
ಗೋವಿಂದ ಪೈ ಸಂಶೋಧನ ಕೇಂದ್ರ,ಉಡುಪಿ
ನಿಮಗೆ ಸ್ವಾಗತ
        ಪ್ರೊ. ಮುರಳೀಧರ ಉಪಾಧ್ಯ                                                                                                                                       
             ಪ್ರೊ. ಹೇರಂಜೆ ಕೃಷ್ಣ ಭಟ್,                                                                                                                                        rathabeedhi geleyaru udupi: ರಥಬೀದಿ ಗೆಳೆಯರು { ರಿ } ಉಡುಪಿ - ಜಿ. ರಾಜಶೇಖರ್ ಉಪನ್ಯಾಸ...: ರಥಬೀದಿ ಗೆಳೆಯರು (ರಿ) ಉಡುಪಿ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ ವಿಶೇಷ ಉಪನ್ಯಾಸ : ಶ್ರೀ ಜಿ.ರಾಜಶೇಖರ್-’ಎ.ಕೆ.ರಾಮಾನುಜನ್ರ ಕಾವ್ಯ’ 30...

ಶ್ರೀ ಹರ್ಷ ಹೆಗಡೆ --ಎಸ್. ಕೆ. ಪೊಟ್ಟಕ್ಕಾಟರ -’ ಒರು ದೇಶತ್ತಿಂಡೆ ಕಥಾ "

ಪುಸ್ತಕದೊಳಗೆ - ೨
"ಒರು ದೇಶತ್ತಿಂಡೆ ಕಥಾ'
ಲೇಖಕ; ಎಸ್ ಕೆ ಪೊಟ್ಟಕ್ಕಾಟ್,
ಪ್ರಕಾಶಕರು; ಡಿ ಸಿ ಬುಕ್ಸ್,
ಪ್ರಕಟಣೆ; ೧೯೮೦,
ಕ್ರಯ; ರೂಪಾಯಿ ೩೮೦.

" ಶ್ರೀಧರನ ಅತಿರಾಣಿಪಾಡದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು, ಆದರೆ ಮೂಲೆಯ ಕೊನೆ ತಿರುವಿನಲ್ಲಿದ್ದ ಕುರುಡ ಮೋಪನ ಹುಲ್ಲು ಹೊದೆಸಿದ ಗುಡಿಸಲ ಸ್ವರೂಪ ಮಾತ್ರ ಹೆಚ್ಚು ಕಡಿಮೆ ಹಾಗೆ ಇತ್ತು. ಶ್ರೀಧರ ದರೆಯ ಕೋಲುಗಳನ್ನ ಸರಿಸಿ ಅಂಗಳಕ್ಕೆ ಅಡಿ ಇಟ್ಟಾಗ ಎಲೆ ಅಡಿಕೆಯನ್ನ ಕುಟ್ಟಾಣಿಯಲ್ಲಿ ಕುಟ್ಟುತ್ತಿದ್ದ ಮೋಪನ ಕುರುಡನಾಗಿದ್ದರೂ ಕೇವಲ ಚುರುಕಾಗಿದ್ದ ಕಿವಿಯಲ್ಲಿ ಹೆಜ್ಜೆಯ ಸದ್ದನ್ನೆ ಆಲಿಸಿ "ಮೋಳೆ ಪುಂಡು ದನ ಮತ್ತೆ ಬೇಲಿ ಹಾರಿತು ಅಂತ ಕಾಣುತ್ತೆ, ಈ ಹಡಬೆ ಪಶುವನ್ನ ಸಾಕಿದವರಿಗೆ ಕಟ್ಟಿ ಹಾಕಲಿಕ್ಕೆ ಏನು ರೋಗ?" ಎನ್ನುತ್ತಾ ನಡೆಯಲಾಗದಿದ್ದರೂ ಕೂತಲ್ಲಿಯೆ ಕೋಲು ಬೀಸಿದ. ಮಾತುಮಾತಿಗೆ ತನ್ನ ಕರೆಯುವ ಅಜ್ಜನ ಉಪದ್ರ ತಾಳಲಾರದೆ ಅವನ ಕರೆಯನ್ನ ಕೇಳಲು ಮೊಮ್ಮಗಳು ಅಲ್ಲಿದ್ದಿರಲೆ ಇಲ್ಲ!"
- ಎಸ್ ಕೆ ಪೊಟ್ಟಕ್ಕಾಟ್
ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳ ಓದುಗರಿಗೆ ಸುಕುಮಾರನ್ ಕುಟ್ಟಿ ನಾಯರ್ ತಮ್ಮ ಪ್ರವಾಸ ಕಥನಗಳಿಗೋಸ್ಕರ ಹೆಚ್ಚು ಖ್ಯಾತರು,೧೯೬೬ರಲ್ಲಿ ಅವರ "ಒರು ತೀರತ್ತಿಂಟೆ ಕಥಾ" ಪ್ರಕಟವಾಗಿತ್ತು. ಅನಂತರದ ಅನೇಕ ಅವರ ಕೃತಿಗಳು ಭಾರತದಾಚೆಯೂ ಯುರೋಪಿಯನ್ ಭಾಷೆಗಳಿಗೆ ಭಾಷಾಂತರಿತಗೊಂಡಿವೆ. "ಒರು ದೇಶತ್ತಿಂಟೆ ಕಥಾ" ಅವರ ಒಟ್ಟು ಸಾಹಿತ್ಯಿಕ ಕೃಷಿಯಲ್ಲಿಯೆ ಉತ್ಕೃಷ್ಠವಾದ ಕೃತಿ. ಈ ಮೇರು ಕಾದಂಬರಿ ೧೯೮೦ರಲ್ಲಿ ಜ್ಞಾನಪೀಠ ಪ್ರಶಸ್ತಿಯ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೂ ಭಾಜನವಾಗಿತ್ತು.
ಪೊಟ್ಟೆಕಾಟ್ಟರ ಕಾದಂಬರಿಗಳು ಸಾಮಾನ್ಯವಾಗಿ ಅವರ ಜೀವನ ಕಥನದ ನಿರೂಪಣೆಗಳೆ ಆಗಿರುತ್ತಿದ್ದವು. ಒಂದು ಅವಧಿಗೆ ತಲಚ್ಚೆರಿ ಕ್ಷೇತ್ರದಿಂದ ಎಡಪಕ್ಷಗಳ ಪ್ರತಿನಿಧಿಯಾಗಿ ಲೋಕಸಭೆಯ ಸದಸ್ಯರಾಗಿದ್ದ ಅವರು ಈ ಕಾದಂಬರಿಯಲ್ಲಿ ಅದರ ಅನುಭಗಳನ್ನ ಹಾಗೂ ಸಂಸತ್ತಿನ ಸದಸ್ಯನೊಬ್ಬ ತನ್ನ ಹುಟ್ಟೂರನ್ನ ಒಬ್ಬ ಸಾಮಾನ್ಯನಾಗಿ ಮರಳಿ ಬಂದು ಅವಲೋಕಿಸುವ ಧಾಟಿಯಲ್ಲಿ ನಿರೂಪಿಸಿದ್ದಾರೆ. ಶಾಲಾ ಮಾಸ್ತರರೊಬ್ಬರ ಎರಡನೆ ಸಂಸಾರದ ಕೊನೆಯ ಕೂಸು ಶ್ರೀಧರ ತನ್ನ ಕಣ್ಣಲ್ಲಿ ಕಾಣುವ ಹುಟ್ಟೂರು ಅತಿರಾಣಿಪಾಡದ ಕಳೆದ ಶತಮಾನದ ಅನೇಕ ಭೀಕರ ಸತ್ಯಗಳನ್ನ ಕಾದಂಬರಿ ಎಳೆ ಎಳೆಯಾಗಿ ಬಿಡಿಸಿಡುತ್ತದೆ.
ಸಮರಸ್ಯದ ಊರಿನಲ್ಲಿ ಒಮ್ಮಿಂದೊಮ್ಮೆಗೆ ಖಿಲಾಫತ್ ಹೆಂಡದ ಅಮಲೇರಿಸಿಕೊಂಡ ಮಾಪಿಳ್ಳೆಗಳ ಪುಂಡಾಟಿಕೆ. ಹಾಡಹಗಲೆ ಬಲವಂತದ ಮತಾಂತರದ ಪೈಶಾಚಿಕತೆ. ಆ ಕಾಲದಲ್ಲಿಯೆ ಮಲಬಾರಿನಾದ್ಯಂತ ೧೯೨೦ರ ಸುಮಾರಿಗೆ ಮುಸ್ಲಿಂ ಮೂಲಭೂತವಾದಿ ಮನಸ್ಸುಗಳು "ಬ್ರಿಟಿಷರು ಸೋತರು ಮೊದಲನೆ ಮಹಾಯುದ್ಧದಲ್ಲಿ ತುರ್ಕಿ ಗೆದ್ದಿತು ಇನ್ನು ಎಲ್ಲೆಡೆ ಅಲ್ಲಾನ ರಾಜ್ಯ" ಎನ್ನುವ ಗಾಳಿಸುದ್ದಿಗೆ ಕಿವಿಗೊಟ್ಟು ಸ್ಥಳಿಯ ನಾಯರ್ ಹಾಗೂ ನಂಬೂದರಿಗಳನ್ನೆ ಗುರಿಯಾಗಿಸಿ ನಡೆಸಿದ ಸಾಮೂಹಿಕ ಬಲವಂತದ ಮತಾಂತರ, ಅದರ ಭೀಭತ್ಸತೆಗೆ ಹೆದರಿದ ಬ್ರಿಟಿಷರು ಅದರ ನಿಯಂತ್ರಣಕ್ಕೆ ಅಂತಲೆ ಹುಟ್ಟು ಹಾಕಿದ ಅಷ್ಟೆ ಪೈಶಾಚಿಕ ನಡೆಯ "ಮಲಾಬಾರ್ ಪೊಲೀಸ್" ( ಈಗಲೂ ಇದೆ.) ಎಂಬ ವಿಶೇಷ ಅರಕ್ಷಕ ಪಡೆ. ಇಂದು ಆ ಮತೀಯ ದುರುಳತೆಯ ದೆಸೆಯಿಂದಲೆ ಮಲಬಾರ್ ಮುಸ್ಲಿಂ ಬಾಹುಳ್ಯ ಹೊಂದುವಂತಾಗಿದ್ದು. ಈಗಿನ ಮುಸ್ಲಿಂಮರ ಎರಡು ಪೀಳಿಗೆ ಹಿಂದಿನ ಧರ್ಮ ಹಿಂದೂವಾಗಿದ್ದದ್ದು ಎಲ್ಲವೂ ನಿರ್ಲಿಪ್ತವಾಗಿ ನಿರೂಪಣೆ ಹೊಂದಿದೆ. ಇನ್ನು ಗುಪ್ತನಿಧಿಯ ಆಸೆಗೆ ತರವಾಡು ಮನೆಯ ತಳಪಾಯವನ್ನೆ ಅಗೆದು ನಿಧಿಯ ರಕ್ಷಕ ನಾಗನ ಹೊಡೆತಕ್ಕೆ ಸಿಕ್ಕು ಸಾಯುವ ಕುಂಟ ನಾಯರನ ಕಥೆ ಮುಂದೆ "ಮಣಿಚಿತ್ರ ತಾಳ್" ಎನ್ನುವ ಚಿತ್ರಕ್ಕೂ ಸ್ಪೂರ್ತಿ ಆಗಿತ್ತು ಅನ್ನೋದು ನನ್ನ ಗುಮಾನಿ. ಅದೆ ಚಿತ್ರ "ಆಪ್ತಮಿತ್ರ"ನಾಗಿ ಕನ್ನಡಕ್ಕೂ, "ಚಂದ್ರಮುಖಿ"ಯಾಗಿ ತಮಿಳಿಗೂ, "ನಾಗವಲ್ಲಿ"ಯಾಗಿ ತೆಲುಗಿಗೂ ಹಾಗೂ "ಭೂಲ್ ಬುಲಯ್ಯ"ವಾಗಿ ಹಿಂದಿಗೂ ಸಾಗಿ ಗಲ್ಲಾಪೆಟ್ಟಿಗೆಯನ್ನ ದೋಚಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.
ಒಬ್ಬ ಓದುಗನಾಗಿ ಮೊದಲು ಅನುವಾದವನ್ನೂ ಅನಂತರ ಅದರ ಮೂಲ ಕೃತಿಯನ್ನೂ ಓದುವ ಭಾಗ್ಯ ನನ್ನದಾಗಿತ್ತು. ಇದೆ ಕಾದಂಬರಿಯ ಕನ್ನಡ ಅನುವಾದವನ್ನ ಅಶೋಕಕುಮಾರ್ ಹಾಗೂ ಕೆ ಕೆ ನಾಯರ್ ಕನ್ನಡಕ್ಕೆ ಅನುವಾದಿಸಿದ್ದರೆ. ನ್ಯಾಷನಲ್ ಬುಕ್ ಟ್ರಸ್ಟ್ ಅದನ್ನು ಪ್ರಕಟಿಸಿದೆ. ಮೂಲ ಮಲಯಾಳಂನಷ್ಟು ನವಿರಾಗಿರದಿದ್ದರೂ ಅನುವಾದವೂ ಆಸಕ್ತಿಕರ ಓದಿಗೆ ಅಡ್ಡಿಯಿಲ್ಲ

ಜಗದೀಶ್ ಕೊಪ್ಪ - ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ

ಭೂಮಿಗೀತ: ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ: ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಯು . ಆರ್ . ಅನಂತಮೂರ್ತಿಯವರ ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ ಶೂನ್ಯತೆ ಮತ್ತು ಸೂತಕ ಛಾಯೆಯನ್ನು ...
ಯು. ಆರ್. ಅನಂತಮೂರ್ತಿ -U. R. Ananthamurthy -