ಸುಕನ್ಯಾ ಕಳಸ - ಹೋಗಿಬಿಡು ರಕ್ತಸಿಕ್ತ ವರ್ಷವೇ

ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ"
ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ
ಗೊತ್ತು ನನಗೆ ನಿನ್ನೊಡಲ ಬಾಯಿಲ್ಲದ ಶೋಕ
ಧ್ವನಿಯಿಲ್ಲದೆ ದಿಕ್ಕುಗೆಟ್ಟ ಮಡುಗಟ್ಟಿದ ದುಃಖ
ಮುದ್ದುಮಕ್ಕಳ ನೂರು ಹೆಣ್ಗಳ ಕೊನೆಯಿಲ್ಲದ
ಸೀಳುಗಾಯಗಳ,ಸೊಕ್ಕಿದ ಗಿಡುಗಕೊಕ್ಕುಗಳ
ಹೊಲಸು ಕೊಬ್ಬು ಹಂದಿಗಳ ವಿಕಟಅಟ್ಟಹಾಸ
ಉನ್ಮತ್ತ ಕೇಕೆಕೇಳಿಗಳ ರಣಗುಡುವಕೆಂಡವರ್ಷ
ಚೆಲ್ಲಿಬಿಟ್ಟಿದ್ದಾರೆ ನಿನ್ನ ಬಿಳಿಲಂಗದ ಅಂಗಳದ
ಪಾರಿಜಾತ ನಕ್ಷತ್ರ ಫಳಗುಡುವ ಸ್ಥಳದಲೆಲ್ಲಾ
ಹೊಸಕಿತುಳಿದ ರಂಗುರಂಗಿನ ಕಾಮನಬಿಲ್ಲ
ಕನಸುಗಳೆಳೆಯ ಕುಡಿಗಳ ನವಿಲು ನಗೆಗಳ!
ಭವ್ಯಭವಿತವ್ಯಕ್ಕೆ ಬೊಗಸೆಯೊಡ್ಡಿದ ಜೀವಗಳ
ಹೂತುಬಿಟ್ಟಿದ್ದಾರೆ ಕುದಿ ಡಾಮರಿನಗೋರಿಯಲ್ಲಿ
ಬಂದಿದ್ದೆ ವರುಷದ ಹಿಂದೆ ನಗೆಮೊಗದಚೆಲುವೆ
ಜಿಂಕೆಕುಣಿತದ ಲಾಸ್ಯ ಅಂದು-ಗೆಜ್ಜೆಯ ನಡಿಗೆ
ಅಯ್ಯೋ..ಹೇಗೆಲ್ಲ ಕೊಂದರು ನಿನ್ನನ್ನುಪ್ರತಿಕ್ಷಣ!
ಸೀಳುಬಾಂಬುಗಳು----ಛಿದ್ರಛಿದ್ರ ಬದುಕುಗಳು
ಇಲ್ಲ ಇನ್ನೂನೋಡಲಾರೆ ನಿನ್ನ ಬಿಗಿದಕೊರಳು
ಹರಸಿಬಿಡು ಕಾದಿರುವ ಹೊಸವರುಷದಮಗುವ
ಅವಳಾದರೂ ತರಲಿ ನೀ ಕಳಕೊಂಡ ನಗುವ!
ಹೋಗಿಬಿಡು ಹೋಗಿಬಿಡು ಜರ್ಜರಿತ ವರ್ಷವೇ
ಬರಬೇಡ ಇನ್ನೆಂದೂ..ನೋಡಲಾರೆ ನೋವೇ!
Like ·  · 

ಗೋಪಾಲಕೃಷ್ಣ ಅಡಿಗ: ಸಮಗ್ರ ಕಾವ್ಯ

ಪುಸ್ತಕ ಜಗತ್ತು: ಗೋಪಾಲಕೃಷ್ಣ ಅಡಿಗ: ಸಮಗ್ರ ಕಾವ್ಯ: ಕಬೀರ್ ಸಮ್ಮಾನ್ ತೀರ್ಪುಗಾರರ ಮಂಡಲಿ ಶ್ರೀ ಅಡಿಗರನ್ನು ಈ ಗೌರವಕ್ಕಾಗಿ ಆಯ್ಕೆ ಮಾಡುವಲ್ಲಿ ಅವರ ಕಾವ್ಯದ ಈ ಪ್ರಮುಖ ಅಂಶಗಳನ್ನು ಗಮನಿಸಿದೆ. ಅವರ ಕಾವ್ಯದಲ್ಲಿ ಸ್ಥಳೀಯ ಚೈತ...

ಅನುಪಮಾ ಪ್ರಸಾದ್ - “ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ « ವರ್ತಮಾನ

“ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ « ವರ್ತಮಾನ – Vartamaana:

'via Blo

ಅನುಪಮಾ ಪ್ರಸಾದ್ ಅವರ ’ ಇಸುಮುಳ್ಳು ’ ಒಂದು ಕುಟುಂಬದೊಳಗಿನ ಗಂಡು -ಹೆಣ್ಣುಗಳ  ಸಂಕೀರ್ಣ ಸಂಬಂಧವನ್ನು ಹವ್ಯಕ ಕನ್ನಡದ  ಪ್ರಾದೇಶಿಕ ಸೊಗಡಿನಲ್ಲಿ ನಿರೂಪಿಸುವ  , ಕಾಡುವ ಕತೆ -ಮುರಳೀಧರ ಉಪಾಧ್ಯ ಹಿರಿಯಡಕ

Tuesday, December 23, 2014

ವರ್ತಮಾನ -ಗಾಂಧೀ ಜಯಂತಿ ಕಥಾ ಸ್ಪರ್ಧೆ -2014 ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ …

ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ … « ವರ್ತಮಾನ – Vartamaana: "ಪ್ರಥಮ: "ಕಾಲವ್ಯಾಧಿ” – ಟಿ.ಎಸ್. ವಿವೇಕಾನಂದ ದ್ವಿತೀಯ :  "ಬೋನಿಗೆ ಬಿದ್ದವರು" – ಟಿ.ಕೆ. ದಯಾನಂದ್ ತೃತೀಯ: "ಚಿವುಟಿದಷ್ಟೂ ಚಿಗುರು" – ಎಚ್.ಎಸ್. ಅನುಪಮ ಪ್ರೋತ್ಸಾಹಕ ಬಹುಮಾನ ಪಡೆದ ಕತೆಗಳು: "ಹೇ ರಾಮ್" – ಪಾರ್ವತಿ ಪಿಟಗಿ "ಇಸುಮುಳ್ಳು" – ಅನುಪಮಾ ಪ್ರಸಾದ್ ಭೂಮಿ ಹುಟ್ಟಿದ್ದು ಹೇಗೆ?"

'via Blog this'