ಯೋಗೀಶ . ಪಿ-: ಇವನ್ನೆಲ್ಲ ಓದಿ ಮುಗಿಸುವುದು ಯಾವಾಗ?

ಕನ್ನಡ ಜಾನಪದ karnataka folklore: ಇವನ್ನೆಲ್ಲ ಓದಿ ಮುಗಿಸುವುದು ಯಾವಾಗ?: ಯೋಗೀಶ ಪಿ. ಸರ್ಕಾರ ಪದವಿ ಕಾಲೇಜು ಅಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿ ಸೂಚನೆ ಹೊರಡಿಸಿ, ಪ್ರವೇಶ ಪರೀಕ್ಷೆಯ ಮೂಲಕ ನೇಮಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ...
Karnataka -College lecturers' Selection Exam

Sunday, March 29, 2015

ಡಾ / ಪಾದೂರು ಗುರುರಾಜ ಭಟ್-Studies in Tuluva History and Culture


Few copies of Dr. Gururaja Bhat's -Studies in Tuluva History and Culture  [reprint -2014 ] are available at Paduru Gururaja Bhat Trust , udupi. for copies pls contact-9448130948

ಪು. ತಿ.ನ - ರಾಮ ನನಗೆ ಸಮಕಾಲಿನ ವ್ಯಕ್ತಿ

ರಾಮ ನನಗೆ ಸಮಕಾಲೀನ ವ್ಯಕ್ತಿ.....ಪು.ತಿ.ನ.
ಒಬ್ಬ ಕವಿಯಾಗಿ ನಾನು ಒಂದು ‘ದೂರ’ದ ಪ್ರಜ್ಞೆಯನ್ನು , ‘ಸಂಪೂರ್ಣವಾಗಿ ಸೇರಿಹೋಗದ ಸೌಂದರ್ಯಾತ್ಮಕ ದೂರ’ವನ್ನು ಬೆಳೆಸಿಕೊಂಡಿದ್ದೇನೆ. ಸಾಂಪ್ರದಾಯಿಕ ದೃಷ್ಟಿಕೋನವು ರಾಮಾಯಣವನ್ನು ದೈವತ್ವಕ್ಕೇರಿಸಿದೆ. ಎಲ್ಲಕ್ಕಿಂತ ದುಃಖದ ಸಂಗತಿ ಅಂದರೆ ರಾಮಾಯಣವನ್ನು ನೈತಿಕ ತತ್ವಗಳನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತದೆ. ನೈತಿಕತೆಯ ಬಗೆಗಿನ ಅನೇಕ ಸಿದ್ಧಾಂತಗಳನ್ನು ರಾಮಾಯಣದ ಮೂಲಕ ಹೇಳಲಾಗುತ್ತದೆ. ಇದು ಒಂದು ಅದ್ಭುತ ಕಲಾಕೃತಿಯಾಗಿ ಅದಕ್ಕಿರುವ ಸೌಂದರ್ಯವನ್ನು ನಾಶಮಾಡಿತು. ಅದನ್ನು ಒಂದು ಧರ್ಮಗ್ರಂಥವೆಂಬಂತೆ ಓದುತ್ತಾ ಬರಲಾಯಿತು; ಅದು ಒಂದು ಸಿದ್ಧಾಂತವನ್ನು ಮುಂದಿಡುತ್ತದೇನೋ ಎಂಬಂತೆ.
ಸ್ವಯಂ ವಾಲ್ಮೀಕಿಯೂ ಕೂಡ ರಾಮಾಯಣವನ್ನು ಈ ಮೇಲೆ ಹೇಳಿದ ರೀತಿಯಲ್ಲಿ ಪರಿಕಲ್ಪಿಸಿರಲಿಲ್ಲ. ವಾಲ್ಮೀಕಿ ಒಬ್ಬ ಮಹಾನ್ ವ್ಯಕಿಯ ಲೌಕಿಕವನ್ನು ದಾಟಲಿಚ್ಛಿಸುವ ಹುಡುಕಾಟದಲ್ಲಿದ್ದ. ಅದಕ್ಕೇ ತನ್ನ ಕೃತಿಯಲ್ಲಿ ಲೌಕಿಕ ಜಂಜಡಗಳನ್ನು ದಾಟಲಿಚ್ಚಿಸುವ ವ್ಯಕ್ತಿಯೊಬ್ಬನ ಹೋರಾಟಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅರ್ಥದಲ್ಲಿ ರಾಮ ನನಗೆ ಒಬ್ಬ ಸಮಕಾಲೀನ ವ್ಯಕ್ತಿಯಾಗಿ ಕಾಣುತ್ತಾನೆ. ರಾಮನನ್ನು ಒಬ್ಬ ದೇವನೆಂಬಂತೆ ನೋಡಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಅವನೊಬ್ಬ ಸಮಕಾಲೀನ ವ್ಯಕ್ತಿ- ಪು.ತಿ.ನ.
೩೦.೦೩.೧೫
M.S. Rudreshvarasvamy [ face book }

ಪದ್ಮನಾಭ ಭಟ್- ಓದಿನ ಬಂಡಿ

ANGRI: ಓದಿನ ಬಂಡಿ: ಓದುವ ಅಭ್ಯಾಸವೇ ಹಾಗೆ .ಹಾಡಿನ ಬಂಡಿಯಂತೆ ಒಂದು ಇನ್ನೊಂದಕ್ಕೆ   ಇನ್ನೊಂದು ಮತ್ತೊಂದಕ್ಕೆ .ನನ್ನ ಈ ಉದಾಹರಣೆ ನೋಡಿ . ಖ್ಯಾತ ಕನ್ನಡ  ಲೇಖಕ  ಕೆ ಟಿ ಗಟ್ಟಿ ಯವರ ಅರ...

Sunday, March 22, 2015

ಸಂತೋಷ್ ಗುಡ್ದಿಯಂಗಡಿ ಅವರ -ಕೊರಬಾಡು { ಕತೆಗಳು }. -ರೂಪಾ ಕೋಟೇಶ್ವರ

ತಪಶ್ಚರಣ: ನಿವೇದನೆಯ ಭಿನ್ನತೆಯೂ, ನಿರೂಪಣೆಯ ಆಪ್ತತೆಯೂ….:   ಮನೋ ಸಾಗರದಲ್ಲಿ ಸದಾ ಭರತ - ಇಳಿತ . ಹುಟ್ಟಿದಾರಭ್ಯದಿಂದಲೂ ಅಂಟಿಕೊಂಡ ಶ್ರೇಷ್ಠತೆಯ ವ್ಯಸನ ಮನುಷ್ಯನಿಗಷ್ಟೇ ಲಭ್ಯ ಇದಕ್ಕೆ ಜಾತಿ , ಬಣ್ಣ , ಧರ್ಮ , ಲ...