Saturday, April 30, 2016

ಮಾರ್ಪಳ್ಳೀ's ಲಹರಿ: ಖ್ಯಾಲು -೧೨ -ರಾಗವಂತೆ ರಾಗ

ಮಾರ್ಪಳ್ಳೀ's ಲಹರಿ: ಖ್ಯಾಲು -೧೨: ಈ ಮಹಾನಗರದ ಬಿಸಿಲ ರಣದಲ್ಲಿ ಒಂದು ದಿನ ನನ್ನ ರಾಗ  ಕಳೆದು ಹೋಯಿತು ರಾಗವಂತೆ ರಾಗ ನಕ್ಕರು ಮಂದಿ ಸರಾಗ ಅವೆಲ್ಲ ಯಾರಿಗೆ ಬೇಕಾಗಿದೆ - ಹೆಚ್ಚಿನವರಿಗೆ ಈಗ ಕೊತ್ತ...

ಜನಪ್ರತಿನಿಧಿಗಳಿಗೆ ಷ. ಶೆಟ್ಟರ್‌ ಚಾಟಿ

ಜನಪ್ರತಿನಿಧಿಗಳಿಗೆ ಷ. ಶೆಟ್ಟರ್‌ ಚಾಟಿ: ‘ಸಾಹಿತ್ಯ ಕ್ಷೇತ್ರದ ಪ್ರಾಜ್ಞ ವಲಯವನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುರಸೊತ್ತಿಲ್ಲದ ಸಂಸ್ಕೃತಿ ಸಚಿವರು ಮತ್ತು ಜನಪ್ರತಿನಿಧಿಗಳು, ಜ್ಞಾನ ಪಡೆಯುವ ಹಾಗೂ ತಾವು ಸುಂಸ್ಕೃತರು ಎಂದು ತೋರಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು’ ಎಂದು ಹಿರಿಯ ಇತಿಹಾಸಕಾರ ಪ್ರೊ.ಷ.ಶೆಟ್ಟರ್ ಚಾಟಿ ಬೀಸಿದರು.

‘ಧಾರಾವಾಹಿಯಿಂದ ಬೇಸತ್ತ ಜನ ರಂಗಭೂಮಿಯತ್ತ’

‘ಧಾರಾವಾಹಿಯಿಂದ ಬೇಸತ್ತ ಜನ ರಂಗಭೂಮಿಯತ್ತ’: ‘ಬದುಕಿನಲ್ಲಿ ಪ್ರತಿಕ್ಷಣವೂ ಒಬ್ಬರ ಮೇಲೆ ಮತ್ತೊಬ್ಬರು ಹುನ್ನಾರ ಮಾಡುತ್ತಲೇ ಇರಬೇಕು ಎಂಬ ಕೆಟ್ಟ ನೀತಿ ಪಾಠವನ್ನು ಇಂದಿನ ಟಿ.ವಿ ಧಾರಾವಾಹಿಗಳು ಸಮಾಜಕ್ಕೆ ನೀಡುತ್ತಿವೆ. ಅಂಥ ಧಾರಾವಾಹಿಗಳಿಂದ ಬೇಸತ್ತ ಜನ ರಂಗಭೂಮಿಯತ್ತ ವಾಲುತ್ತಿದ್ದಾರೆ’ ಎಂದು ವಿಮರ್ಶಕ ಕೆ.ಮರುಳಸಿದ್ದಪ್ಪ ಹೇಳಿದರು.

ಹಿಮಾಲಯದ ಬಾನಾಡಿಗೆ ನಗರದಲ್ಲಿ ಆರೈಕೆ

ಹಿಮಾಲಯದ ಬಾನಾಡಿಗೆ ನಗರದಲ್ಲಿ ಆರೈಕೆ: ಬೆಂಗಳೂರು ನಗರದ ಚಂದಾಪುರದ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಆ ವಿದ್ಯಮಾನವನ್ನು ನೋಡಲು ಹಲವರು ಸೇರಿದ್ದರು. ಪುಟ್ಟ ಪಕ್ಷಿಯೊಂದು ಹಾರಿಬಂದು ಆ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿತ್ತು!

ಗಾರ್ಮೆಂಟ್ ಕಾರ್ಮಿಕರು ನುಡಿದ ಐ.ಟಿ. ಭವಿಷ್ಯ -ಎನ್. ಎ. ಎಮ್. ಇಸ್ಮಾಯಿಲ್

ಗಾರ್ಮೆಂಟ್ ಕಾರ್ಮಿಕರು ನುಡಿದ ಐ.ಟಿ. ಭವಿಷ್ಯ: ಅದು ಹೊಸ ಸಹಸ್ರಮಾನದ ಮೊದಲ ವರ್ಷ. ಆಗಷ್ಟೇ ಒಡೆದು ಹೋಗಿದ್ದ ಡಾಟ್ ಕಾಮ್ ಗುಳ್ಳೆ ಭಾರತದ ಸಿಲಿಕಾನ್ ನಗರಿಯಲ್ಲಿ ನಿರಾಶೆಯ ಕಾರ್ಮೋಡಕ್ಕೆ ಕಾರಣವಾಗಿತ್ತು.

3 ತಿಂಗಳಲ್ಲಿ 116 ರೈತರು ಆತ್ಮಹತ್ಯೆ

3 ತಿಂಗಳಲ್ಲಿ 116 ರೈತರು ಆತ್ಮಹತ್ಯೆ: ಮಳೆ ಕೊರತೆ, ಬರ ಪರಿಸ್ಥಿತಿಯಿಂದ ಬೆಳೆ ಕೈಕೊಟ್ಟ ಕಾರಣಕ್ಕೆ ಪ್ರಸಕ್ತ ವರ್ಷ ಆರಂಭದ ಮೂರು ತಿಂಗಳಲ್ಲಿ 116 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಾಗಿದ್ದು, ಪಂಜಾಬ್ ಹಾಗೂ ತೆಲಂಗಾಣ ನಂತರದ ಸ್ಥಾನದಲ್ಲಿವೆ. ಬರದಿಂದ 22.33 ಲಕ್ಷ ಹೆಕ್ಟೇರ್ ಹಿಂಗಾರು ಬೆಳೆಗೆ ಹಾನಿಯಾಗಿದೆ ಎಂದು ವರದಿ ಮಾಡಿದ್ದ ಕರ್ನಾಟಕ ಸರ್ಕಾರ, ₹ 1,417 ಕೋಟಿ ನೆರವು ಕೇಳಿದೆ ಎಂದು ಸಂಸತ್‌ನಲ್ಲಿ ತಿಳಿಸಲಾಯಿತು.

Monday, April 25, 2016

ತನ್ನನ್ನು ತಾನೇ ಕೆತ್ತಿಕೊಂಡ ಶಿಲ್ಪ - ಎಚ್.ಎಸ್. ರಾಘವೇಂದ್ರ ರಾವ್


       ಕನ್ನಡ ಸಾಹಿತ್ಯಲೋಕದಲ್ಲಿ ನಿಷಿದ್ಧವಾಗಿಯೇ ಉಳಿದಿದ್ದ ದನಿಗಳ, ಅನುಭವಲೋಕಗಳ ಅನಾವರಣವಾಗುತ್ತಿರುವುದು ಅದರ ಆರೋಗ್ಯವನ್ನು ಹೆಚ್ಚಿಸುತ್ತಿದೆ. ಅವು ಇನ್ನೂ ಖಚಿತವಾದ ರೂಪರೇಷೆಗಳನ್ನು ಪಡೆಯದ ಮೊದಮೊದಲ ಮಿಸುಕಾಟಗಳಿಬಹುದು. ಸ್ವಾನುಭವದಿಂದ ಅಂತೆಯೇ ತಮ್ಮ ಸಂಗಾತಿಗಳ ಅನುಭವದಿಂದ ಅವರಿಗೆ ಪ್ರೇರಣೆ ದೊರೆತಿರಬಹುದು. ಆದರೆ ನಿರಾಕರಣೆ ಮತ್ತು ತಿರಸ್ಕಾರಗಳಿಂದ ಮುರುಟಿಹೋಗಿದ್ದ ವ್ಯಕ್ತಿತ್ವಗಳಿಗೆ ಅಭಿವ್ಯಕ್ತಿಯ ಬಾಗಿಲುಗಳು ತೆಗೆಯುವುದಕ್ಕಿಂತ ದೊಡ್ಡದು ಬೇರೇನೂ ಇಲ್ಲ. ವರ್ಣ, ಜಾತಿ, ವರ್ಗ, ಲಿಂಗ ಮುಂತಾದ ಕಾರಣಗಳಿಂದ ಮೂಕವಾಗಿ ಉಳಿದಿದ್ದ ಗುಂಪುಗಳಿಗೆ ಮಾತನಾಡುವ ಅವಕಾಶಗಳು ಅಷ್ಟಿಷ್ಟು ದೊರಕಿ ದಶಕಗಳೇ ಕಳೆದವು. ಆದರೆ ಉಭಯಲಿಂಗಿಗಳ, ಪರಿವರ್ತಿತ ಲಿಂಗಿಗಳ ಮತ್ತು ಸಲಿಂಗಕಾಮಿಗಳ ಲೋಕವು ನಿಗೂಢವಾಗಿಯೇ ಉಳಿದಿತ್ತು. ಅವರು ಮತ್ತು ಅವರ ಅಭಿವ್ಯಕ್ತಿಯು ಸಂಪೂರ್ಣವಾಗಿ ನಿರ್ಲಕ್ಷಿತರಾಗುತ್ತಾರೆ ಅಥವಾ ಗೇಲಿ ಮತ್ತು ನಿಂದೆಗೆ ಗುರಿಯಾಗುತ್ತಾರೆ. ಆದರೆ, ಅನ್ಯಭಾಷೆಗಳಲ್ಲಿ ಅಂಥದೊಂದು ಬರವಣಿಗೆ ಮೊದಲಿನಿಂದಲೂ ಇದೆ. ಗ್ರೀಕ್ ಭಾಷೆಯ ಕವಯತ್ರಿಯಾದ ಸಾಫೋ ಕವಿತೆಗಳು ಪ್ರಸಿದ್ಧವಾಗಿವೆ. ಹಾಗೆಯೇ ಫ್ರೆಂಚ್ ಭಾಷೆಯ ಜೀನ್ ಜೆನೆ ಬರೆದಥೀಫ್ಸ್ ಜರ್ನಲ್ಈ ಜಗತ್ತನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದೆ. ಕನ್ನಡದಲ್ಲಿ ತಮಿಳಿನಿಂದ ಕನ್ನಡಕ್ಕೆ ಬಂದಿರುವ ರೇವತಿಯವರ ‘ಬದುಕು-ಬಯಲು’, ಸ್ಮೈಲಿಂಗ್ ವಿದ್ಯಾ ಅವರಅವಳು ನಾನು ಅವನಲ್ಲ ಅವಳಲ್ಲ’ ಕೃತಿಗಳು ಹೆಸರುವಾಸಿಯಾಗಿವೆ. ಕುಂವೀ ಅವರಭಗವತಿ ಕಾಡುಕಥೆ, ವಸುಧೇಂದ್ರ ಅವರಮೋಹನಸ್ವಾಮಿಮತ್ತು ಇತರ ಕಥೆಗಳುಹಾಗೆಯೇ ಗಿರಿ ಅವರ ‘ಕಂಡದ್ದು ಕಾಣದ್ದು’ ಕಾದಂಬರಿಗಳು ಇಂತಹ ಅನುಭವಗಳ ಹಿನ್ನೆಲೆಯಲ್ಲಿ ರೂಪಿತವಾಗಿವೆ. ಆದರೆ, ಕನ್ನಡದಲ್ಲಿ ಇಂಥ ಕವಿತೆಗಳು ನನ್ನ ಗಮನಕ್ಕೆ ಬಂದಿರಲಿಲ್ಲ. ಆದ್ದರಿಂದ ಶ್ರೀಮತಿ ಚಾಂದಿನಿ ಅವರ ಈ ಕವಿತೆಗಳು ಈ ನಿಟ್ಟಿನಲ್ಲಿ ಮೊದಲ ಪ್ರಯತ್ನಗಳು. ಒಂದು ಇಡೀ ಸಂಕಲನವಂತೂ ಖಂಡಿತವಾಗಿಯೂ ಬಂದಿಲ್ಲ. ಇವುಗಳ ಬಗ್ಗೆ ಕೆಲವು ಮಾತುಗಳನ್ನು ಬರೆಯುವುದು ನನಗೆ ಸಂತೋಷದ ಸಂಗತಿ. ಏಕೆಂದರೆ, ಇವು ತಿರಸ್ಕಾರವನ್ನು ಹೇಗೋ ಹಾಗೆಯೇ ಅನುಕಂಪ, ‘ಪಿಟಿಗಳನ್ನು ಕೂಡ ಬಯಸುವುದಿಲ್ಲ. ಏಕೆಂದರೆ ತಮಗೆ ಸರಿಯೆನಿಸಿದಂತೆ ಬದುಕುವುದು, ಬಗೆಯುವುದು ಮತ್ತು ಬರೆಯುವುದು ಅವರ ಹಕ್ಕು. ಆ ಹಕ್ಕುಗಳನ್ನು ಅವರಿಗೆ ನೀಡದ ಸಮಾಜವೇ ಅಪರಾಧಿಯೇ ಹೊರತು ಅವರಲ್ಲ. ಇಡೀ ಜಗತ್ತಿನ ಸಲಿಂಗಕಾಮಿಗಳ ರಾಜಧಾನಿಯೆನಿಸಿರುವ ಮತ್ತು ಆ ಬಗೆಯ ಹಲವು ವರ್ತನೆಗಳಲ್ಲಿ ತೊಡಗಿಕೊಂಡಿರುವವರನ್ನು ಒಂದಿಷ್ಟೂ ಭೇದಭಾವವಿಲ್ಲದೆ ನೋಡುವ, ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಕುಳಿತು ನಾನು ಈ ಮುನ್ನುಡಿಯನ್ನು ಬರೆಯುತ್ತಿರುವುದು ಕಾಕತಾಳೀಯವೆಂದೇ ಹೇಳಬೇಕು.
        ಮೊದಲಿಗೆ ಹೇಳಬೇಕಾದ ಮಾತೆಂದರೆ, ಈ ಕವಿತೆಗಳು ‘ತನ್ನನ್ನು ತಾನೇ ಕಟ್ಟಿಕೊಳ್ಳುವ ಕೆಲಸದ’ ಭಾಷಿಕ ನಿರೂಪಣೆಗಳು ಎನ್ನುವುದು. ಪ್ರತಿಯೊಬ್ಬ ಕವಿಯೂ, ಅಷ್ಟೇಕೆ ಪ್ರತಿಯೊಬ್ಬ ಮನುಷ್ಯನೂ ಒಂದೇ ಸಮನೆ ಈ ಕೆಲಸದಲ್ಲಿ ತೊಡಗಿರುತ್ತಾನೆ. ಆದರೆ ಈ ಕವಿ ತನ್ನ ಮನಸ್ಸನ್ನು ಮಾತ್ರವಲ್ಲ ದೇಹವನ್ನೇ ಮರುಕಟ್ಟಿಕೊಳ್ಳುವ ಸವಾಲನ್ನು ಎದುರಿಸಿದವರು,

“:ನನ್ನ ದೇಹದ ರಚನೆಗೆ                                                                                                     ಒಂದು ಅರ್ಥ ತಂದುಕೊಂಡಿದ್ದೆ                                                                                                    ನನ್ನ ಮಾಡಿದ ದೇವರಿಗೆ                                     Transgender Chandini’s ‘Manada Kannu’ will be released on Sunday at Jain University.— Photo: V. Sreenivasa Murthy                                                               ನನ್ನ ಗುರುತು ಸಿಗಲಿಲ್ಲ                                                                                             ಮಲ್ಲಿಕಾರ್ಜುನಸ್ವಾಮಿ ಆದ
ನಾನು ಸ್ವಾಮಿಯಲ್ಲ                                                                                                               ನನ್ನನ್ನು ನಾನೇ ಕೆತ್ತಿದ ಶಿಲೆಯಾಗಿಬಿಟ್ಟೆ”

      ಹೀಗೆ ಕೆತ್ತಿಕೊಳ್ಳುವ ಹಾದಿಯಲ್ಲಿ ತಿಂದ ಉಳಿಯ-ಚಾಣದ ಏಟುಗಳ ಫಲವಾಗಿ ಮೂಡಿರುವುದು, ಆತ್ಮವಿಶ್ವಾಸವನ್ನು ಪಡೆದುಕೊಂಡ ಚಾಂದಿನಿಯವರು ಮಾತ್ರವಲ್ಲ, ಅವರು ಕೆತ್ತಿಕೊಟ್ಟಿರುವ ಕವಿತೆಗಳು ಕೂಡ. ಯಾರಿಗೆ ಗೊತ್ತು? ಕಲ್ಲನ್ನು ಅಹಲ್ಯೆಯಾಗಿ ಬದಲಾಯಿಸುವ ರಾಮನೂ ಕವಿತೆಯೇ ಇರಬಹುದು? ಸಂಗೀತದ ನೆರವು ಇರದಿದ್ದರೆ ಎಂ.ಎಸ್. ಸುಬ್ಬಲಕ್ಷ್ಮಿಯವರು ಕೂಡ ಲಕ್ಷಾಂತರ ದೇವದಾಸಿಯರ ಸಾಲಿನಲ್ಲಿಯೇ ಉಳಿಯುತ್ತಿದ್ದರೇನೋ! ಅಲ್ಲವೇ?

        ಇಲ್ಲಿನ ಕವಿತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ತನಗಿರುವ ‘ವಿಶಿಷ್ಟ’ ಐಡೆಂಟಿಟಿ ಮತ್ತು ಅದರ ಫಲವಾದ ಹಾಡುಪಾಡುಗಳನ್ನು ಹೇಳಿಕೊಳ್ಳುವ ಕವಿತೆಗಳು. ಎರಡನೆಯದು ಅದರಾಚೆಗಿನ ಬದುಕನ್ನು ಕಾಣುವ ಕಟ್ಟುವ ಪ್ರಯತ್ನಗಳು. ಹಲವು ಕಡೆ ಇವೆರಡು ಪರಸ್ಪರ ಹೆಣೆದುಕೊಳ್ಳುತ್ತವೆ. ಭಾಷೆಯೆಂಬ ಮಾಧ್ಯಮವಂತೂ ಎಲ್ಲರ ಎಲ್ಲ ಬಗೆಯ ಅನುಭವಗಳನ್ನು ಹಿಡಿಯಲು ಇರುವ ಮಾಧ್ಯಮಗಳಲ್ಲಿ ಒಂದು. ಅದರಲ್ಲಿ ‘ಸರ್ವ ಸಾಮಾನ್ಯತೆ’ ಮತ್ತು ‘ವಿಶಿಷ್ಟತೆ’ಗಳು ಸಹಜವಾಗಿಯೇ ಇರುತ್ತವೆ. ಚಾಂದಿನಿಯವರ ಕವಿತೆಗಳಲ್ಲಿ ಮೊದಲನೆಯ ಗುಂಪಿನವು ಹೆಚ್ಚಾಹಿ ಇರುವುದರಲ್ಲಿ ಅಚ್ಚರಿಯೇನೂ ಇಲ್ಲ. ಅವರೇ ಹೇಳಿಕೊಂಡಿರುವಂತೆ,
“ಕ್ಷಮಿಸಿ ನನ್ನ ಬಗೆಗೆ ಯಾರೂ ಬರೆಯದ ನನ್ನ ಬಗ್ಗೆ ನಾನೇ ಬರೆದುಕೊಂಡೆ”

ಇಂಥ ಕಡೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಕವಿಗಳ ಮನವಿಯೂ ವಾಸ್ತವದಲ್ಲಿ ಇದೇ ಆಗಿರುತ್ತದೆ. ದಲಿತ ಸಾಹಿತ್ಯದಿಂದ ಮೊದಲಾಗಿ ಹೆಣ್ಣುಮಕ್ಕಳ ಬರವಣಿಗೆಯವರೆಗೆ ಇಂಥದೊಂದು ಸ್ವಕೇಂದ್ರಿತ ನೆಲೆಯು ಏರ್ಪಡುತ್ತದೆ. ಏಕೆಂದರೆ, ಈವರೆಗೆ ಪಡೆದಿರುವ ಅನುಭವಗಳು ಹೊಸ ಅನುಭವಗಳನ್ನು ಕಾಣುವ ಬಗೆಯನ್ನೂ ನಿರ್ಧರಿಸುತ್ತವೆ.

        ಚಾಂದಿನಿಯವರು ಕವಿಯಷ್ಟೇ ಅಲ್ಲ, ಕತೆಗಾರ್ತಿಯೂ ಹೌದು. ಅವರ ಕವಿತೆಗಳಲ್ಲಿಯೇ ಈ ಕಥನದ ಗುಣವೂ ಎದ್ದು ಕಾಣುತ್ತದೆ. ವಿವರಗಳು ಕೇವಲ ವಿವರಗಳಾಗಿ ಉಳಿಯದೆ ಸಂಕೇತಗಳಾಗುವುದು ಅನೇಕ ಕಡೆ ಸಾಧ್ಯವಾಗುತ್ತದೆ. ‘ಗಾಳಿಪಟ’ ಇಡೀ ಸಮುದಾಯದ ಹೋರಾಟಕ್ಕೆ ಮತ್ತು ಹಿಂಸೆ/ಕೀಳರಿಮೆಗಳನ್ನು ಮೀರಿ ನಿಲ್ಲುವ ಚೇತನಕ್ಕೆ ಸಂಕೇತವಾಗುವುದು ಹೀಗೆಯೇ. “ಸುಳುವಿನಲ್ಲಿ ನುಸುಳಿಕೊಂಡು ದೂರದಿಕ್ಕ ಅರಸಿಕೊಂಡು ಸಿಕ್ಕಿದೆಡೆಯ ಸವೆಸಿ ಎಲ್ಲರನ್ನು ಅಪ್ಪಿ ಬಳಸಿ ತಿಳಿಯನ್ನು ತೇಲಿಸುತ್ತಾ, ಅಹಂಕಾರ ಅದುಮಿಟ್ಟು ತುಳಿಯುತ್ತಾ ನಿಜದತ್ತೆಡೆ” ಸಾಗುತ್ತಿರುವ ನದಿಯು ಇಂಥ ಪರಿತ್ಯಕ್ತರಾಗಿ ಬಾಯಾರಿದವರಿಗೆ ಸಂಕೇತವಾಗುತ್ತದೆ.

“ಮಣ್ಣು ಮುಚ್ಚಿದ ತೆರೆ ಸರಿಸಲು ಮಳೆಯೆ ಬರಬೇಕು’
ಎನ್ನುವ ಸುಂದರ ಪ್ರತಿಮೆಯೂ ಹೀಗೆಯೇ ಪರಿಣಾಮಕಾರಿಯಾಗಿದೆ.

      ಅಂತರಂಗದಲ್ಲಿ ಹೆಣ್ಣಾಗಿ, ದೇಹರಂಗದಲ್ಲಿ ಗಂಡಾಗಿ ಇವೆರಡು ಅಸ್ತಿತ್ವಗಳ ಸಂಘರ್ಷದಲ್ಲಿ ನಲುಗಿಹೋಗುವ ಬದುಕು ‘ಅಪರಾಧ ಮಾಡದೆಯೂ’ ಅಪರಾಧಿಗಳಿಗಿಂತ ಹೆಚ್ಚು ಅವಮಾನವನ್ನೂ ಅನುಭವಿಸುತ್ತದೆ. ಕೊನೆಗೂ ಮನುಷ್ಯನಿಗೆ ಭಿನ್ನವಾದುದರ ಬಗ್ಗೆ ಅಸಹನೆ, ಕ್ರೌರ್ಯ ಮತ್ತು ಗೇಲಿಗಳು ಒಳಗೆ ಹೊರಗೆ ತುಂಬಿರುತ್ತವೆ. ಆದರೆ, ‘ಕಳ್ಳತನ’ಕ್ಕಿಂತ ‘ಬೇರೆತನ’ವೇ ದೊಡ್ಡ ಅಪರಾಧವಾಗುವುದು ಬಹು ದೊಡ್ಡ ವ್ಯಂಗ್ಯ. ಈ ಕವಿತೆಗಳು ಕೋಪವನ್ನು ಕಳೆದುಕೊಂಡು ದುಃಖ ಮತ್ತು ಪ್ರೀತಿಗಳನ್ನು ಮಾತ್ರ ಅಭಿವ್ಯಕ್ತಿಸಿರುವುದು ಬಹಳ ಅಪರೂಪದ ಗುಣ. ‘ಇಕ್ರಲಾ ಒದೀರ್ಲಾ’ ಎನ್ನುವ ಕ್ರೋಧಕ್ಕಿಂತ ಬಹಳ ಭಿನ್ನವಾದ ಭಾವಲೋಕ ಇಲ್ಲಿನದು. ಹೇಳಿಕೆಗಳಂತೆ ಕಂಡರೂ ಈ ಸಾಲುಗಳು ಒಂದು ಸಮುದಾಯದ ಮ್ಯಾನಿಫೆಸ್ಟೋ ಕೂಡ ಹೌದು:

“ರೌಡಿಯಿಂದ ಬೆದರಿಕೆ ಪೋಲೀಸರಿಂದ ಲಾಠಿ ಏಟುಕಾನೂನಿಂದ ಸುಳ್ಳು ಕೇಸು ಜನರಿಂದ ಅಪಹಾಸ್ಯ                     ಭಿಕ್ಷೆ ಬೇಡ್ತೀವಿ ಸೆಕ್ಸ್ ವರ್ಕ್ ಮಾಡ್ತೀವಿ                                                                                          ಪ್ರತಿದಿನ ಹಿಂಸೆಯನ್ನು ಅನುಭವಿಸ್ತೀವಿ                                                                                           ಆಸೆ ಇಡ್ತೀವಿ ನಾವು ಪ್ರೀತಿ ಮಾಡ್ತೀವಿ                                                                                         ಮನುಜರಂತೆ ಬಾಳಬೇಕು ಅಂತ ಕನಸು ಕಾಣ್ತೀವಿ                                                                              ಅಮ್ಮ”

ಇಂತಹ ಮಾತುಗಳು ನಿರಾಭರಣವಾಗಿಯೂ ಕವಿತೆಯ ಕಡೆಗೆ ನಡೆಯವುದು ಅವುಗಳ ಪ್ರಾಮಾಣಿಕತೆಯಂದ. ಈ ಸಂಕಲನದಲ್ಲಿ ಸಾಕಷ್ಟು ಕವಿತೆಗಳು ಈ ಬಗೆಯವು. ಇಲ್ಲಿ ಹೇಳಿಕೆಗಳಿಗೆ ಬೇರಾವುದೋ ಉಡುಗೆಯನ್ನು ಕೊಡುವ ಪ್ರಯತ್ನ ನಡೆದಿಲ್ಲ. ಆದರೆ, ಈ ಹಾದಿಯಲ್ಲಿ ಬಹಳ ದೂರ ನಡೆಯುವುದು ಕಷ್ಟ. ಹೇಳಬೇಕಾದ್ದು ಮುಗಿಯುತ್ತದೆ. ಹೇಳುವವರ ಸಂಖ್ಯೆ ಹೆಚ್ಚುತ್ತದೆ. ‘ಹೊಸತನ’ದ ಜಾಗದಲ್ಲಿ ‘ಸಾದಾತನ’ವು ಬಂದುಬಿಡುತ್ತದೆ.

ಆದರೆ, ಚಾಂದಿನಿಯವರ ಕವಿತೆಗಳ ಇನ್ನೆರಡು ಲಕ್ಷಣಗಳು ಅವುಗಳಿಗೆ ಶಕ್ತಿ ಮತ್ತು ಸೌಂದರ್ಯಗಳನ್ನು ಕೊಟ್ಟಿವೆ. ಮೊದಲನೆಯದು ಅವರ ಬಾಲ್ಯಾನುಭವಗಳ ಐಂದ್ರಿಯಿಕವಾದ ವಿಶಿಷ್ಟ ಲೋಕ ಮತ್ತು ಎರಡನೆಯದು ಅವರಿಗಿರುವ ಗ್ರಾಮೀಣ ಹಿನ್ನೆಲೆ. ಎಲ್ಲ ಕವಿಗಳ ಖಜಾನೆಯೂ ಕಾವ್ಯವೇ. ಆದರೆ, ಇಲ್ಲಿನ ಅನ್ಯತನ ಮತ್ತು ಒಂಟಿತನಗಳು ಬೇರೆ ಬಗೆಯವು.

“ಗೊಬ್ಬಳಿಯ ಬೀಜವನ್ನು                                                                                                      ಕಾಲಿಗೆ ಚೈನು ಮಾಡಿ ನಡೆಯುವಾಗ ಬರುವ ಶಬ್ದವನ್ನು ಕೇಳಿ ಆನಂದಿಸುತ್ತಿದ್ದೆ                                                  ಯಾರೂ ಇಲ್ಲದ ಕಾಡು ಬಯಲಿನಲ್ಲಿಭಯದಲ್ಲಿ                                                                                   ತುಳಸಿರಸ ಕುಡಿದು ಹಾಡುತ್ತಿದ್ದೆ ಹೆಣ್ಣಾಗಿ                                                                                      ಜನರಿಲ್ಲದ ಸಮಯದಲ್ಲಿ                                                                                                              ಪಾಪಸ್ ಕಳ್ಳಿ ಹಣ್ಣು ನನ್ನ ತುಟಿಯ ಬಣ್ಣವಾಗಿತ್ತು                                                                                 ಗೊಂಡೆ ಹೂಗಳು ನನ್ನ ಕತ್ತಿನ ಪದಕವಾಗಿತ್ತು                                                                                     ಹಸಿ ಮಣ್ಣು ನನ್ನ ಅಡುಗೆಯ ಪಾತ್ರೆಗಳಾಗಿದ್ದವು.                                                                    ......... ............                                                                                                       ಕ್ಯಾಸೆಟ್ ಟೇಪು ನನ್ನ ಕೂದಲಾಗಿತ್ತು                                                                                             ನನ್ನ ಮುಖದಲ್ಲಿನ ಕೂದಲನ್ನು ಉಜ್ಜಿ ಉಜ್ಜಿ ತೆಗೆಯುತ್ತಿದ್ದ ಕಲ್ಲು ನನ್ನ ಹಿತೈಷಿಯಾಗಿತ್ತು                                       ನನ್ನ ಸುತ್ತಲು ಇದ್ದ ಮರ ಗಿಡ ಗದ್ದೆ ಹಸು ಕರು ಮೇಕೆ ನನ್ನ ಬಂಧುಗಳಾಗಿದ್ದವು” (‘ನನ್ನ ಆಸ್ತಿ’)       
                                  
ಈ ಕವಿತೆಯಲ್ಲಿ ನಿರೂಪಿತವಾಗುವ ಸಂಗತಿಯು ಬೇರೆ ಯಾರದೋ ಅನುಭವವಾಗಿ ಓದುಗರಿಗೆ ತಲುಪುವುದಿಲ್ಲ. ಓದುತ್ತಿರುವ ನಮ್ಮದೇ ಭಾವಸ್ಥಿತಿಯೇನೋ ಎನ್ನುವಷ್ಟು ತೀವ್ರವಾಗಿ ನಮ್ಮೊಳಗೆ ಸೇರಿಕೊಂಡುಬಿಡುತ್ತದೆ. ಆ ಭಾವಸ್ಥಿತಿಯನ್ನು ಮರುಕಳಿಸುವ ಶಕ್ತಿಯು ಇಲ್ಲಿನ ಚಿತ್ರಗಳಿಗೆ ಮತ್ತು ಭಾಷಿಕ ರಚನೆಗಳಿಗೆ ಇದೆ ಎನ್ನುವುದು ಬಹಳ ಮುಖ್ಯ. ಅಷ್ಟೇ ಅಲ್ಲ, ಯಾವುದೇ ಸಂವೇದನಶೀಲ ಮನುಷ್ಯನು ಅನುಭವಿಸಬಹುದಾದ ಒಂಟಿತನ ಮತ್ತು ಅನ್ಯತನಗಳಿಗೆ ಸಂಕೇತವಾಗಿಯೂ ನಿಲ್ಲುತ್ತದೆ. ಕಾಫ್ಕಾ ಕತೆಗಳ ಅ-ವಾಸ್ತವ ಅನುಭವಗಳು ನಮ್ಮದಲ್ಲದೆಯೂ ನಮ್ಮದೇ ಆಗುವ ಹಾಗೆ. ಆತ್ಮಕಥನಾತ್ಮಕವಾದ ಅನುಭವ ನಿರೂಪಣೆಯಲ್ಲಿ ಈ ಗುಣ ಅಷ್ಟಾಗಿ ಇರುವುದಿಲ್ಲ. ಆದ್ದರಿಂದಲೇ ಇಲ್ಲಿನ ಪ್ರೀತಿ-ಗೀತೆಗಳನ್ನು ಯಾವುದೇ ಗಂಡು-ಹೆಣ್ಣುಗಳ ನಡುವಿನ ಭಾವಸಂಬಂಧದ ಹಾಗೆಯೇ ಗುರುತಿಸಲು ಸಾಧ್ಯವಾಗಬೇಕು. ತನ್ನ ಗಂಡ ಆಗಿ ಸಿಕ್ಕಿರುವವನು ತನಗೆ ಈಡುಜೋಡಲ್ಲ, ಕುಳ್ಳ, ಮುದುಕ ಎಂದೆಲ್ಲ ಗೊತ್ತಿದ್ದರೂ ಅವನನ್ನು ಅರ್ಥ ಮಾಡಿಕೊಳ್ಳುವ ಔದಾರ್ಯವೂ ಇಲ್ಲಿದೆ. ಈ ಭಾವನೆಗಳನ್ನು ‘ಅಬ್ನಾರ್ಮಲ್’ ಎಂದು ತಿಳಿಯಬಾರದು ಎಂಬ ತಿಳಿವಳಿಕೆಯನ್ನು ಮೂಡಿಸುವುದರಲ್ಲಿ ಈ ಕವಿತೆಗಳು ಯಶಸ್ವಿಯಾಗಿವೆ. ಕೊನೆಗೂ ಯಾವುದು, ಯಾರು ಹೇಗೆ ನಾರ್ಮಲ್ ಎಂಬ ಪ್ರಶ್ನೆ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡಬೇಕು
.
        ಈ ಕವಿತೆಗಳನ್ನು ಸಾಹಿತ್ಯವಿಮರ್ಶೆಯ ಮಾನದಂಡಗಳಿಂದ ಅಳೆಯಬಾರದು. ಚಾಂದಿನಿಯವರಿಗೆ ಕನ್ನಡ ಕಾವ್ಯವನ್ನು ಓದುವ ಅವಕಾಶ ಎಷ್ಟರ ಮಟ್ಟಿಗೆ ಹೇಗೆ ಸಿಕ್ಕಿದೆಯೋ ನನಗೆ ತಿಳಿಯದು. ಓದು-ಬರಹವನ್ನು ಪಡೆಯುವುದೇ ದುಸ್ತರವಾದ ಸನ್ನಿವೇಶದಲ್ಲಿ ಬೇಂದ್ರೆ-ಅಡಿಗರ ಮಾತು ತೆಗೆಯುವುದು ಅಪರಾಧ. ಆದರೆ, ಅವರ ಇಂದಿನ ಸನ್ನಿವೇಶದಲ್ಲಿ ಈ ಬಗೆಯ ಓದು ಅವರಿಗೆ ಸಾಧ್ಯ. ಅದು ಅವರನ್ನು ಇನ್ನಷ್ಟು ಬೆಳೆಸುತ್ತದೆ ಎಂಬ ಭರವಸೆ ನನಗೆ ಇದೆ. ‘ನುಡಿದಂತೆ ನಡೆದರೆ ನುಡಿ ನಡೆಗೆ ಕಡೆಯಲ್ಲ’, ‘ಕತ್ತಲ ಆಕಾಶಕ್ಕೆ ಮಿನುಗು ಚಿಟ್ಟೆಯಾಗು’, “ಸೌಂದರ್ಯವೆಂಬುದು ಸವಿಯಲಾಗದ ರುಚಿ”, “ಸೌಂದರ್ಯವೆಂಬುದು ಮರಳಿ ಬಾರದ ಕ್ಷಣ” ಮುಂತಾದ ಸಾಲುಗಳನ್ನು ಬರೆದಿರುವ ಚಾಂದಿನಿಯವರಿಗೆ ಕವಿಹೃದಯ ಮತ್ತು ಕವಿಲೇಖನಿ ಎರಡೂ ಇವೆ. ಅವರಿಂದ ಇಂತಹ ಹಲವು ಕವಿತೆಗಳು ಬರುತ್ತವೆ ಎಂಬ ನಂಬಿಕೆ ನನಗಿದೆ.

        ನನಗೆ ಒಂದಿಷ್ಟೂ ಪರಿಚಯವಿಲ್ಲದ ಶ್ರೀಮತಿ ಚಾಂದಿನಿಯವರು, ಈ ಕವಿತೆಗಳನ್ನು ಕೊಟ್ಟು ಸಲಹೆ ಸೂಚನೆಗಳನ್ನು, ಮುನ್ನಡಿಯನ್ನು ಕೇಳಿದಾಗ, ನನಗೆ ಅಚ್ಚರಿ ಮತ್ತು ಸಂತೋ಼ಷ ಎರಡೂ ಆಯಿತು. ಅವರಿಗೆ ನನ್ನ ಹೆಸರು ಸೂಚಿಸಿದ ಪ್ರೀತಿಯ ಗೆಳೆಯ ಬಿ. ಸುರೇಶ ಅವರಿಗೆ ನಾನು ಋಣಿ. ನನ್ನ ದಿನ ಗೋಜಲುಗಳ ಕಾರಣದಿಂದ  ಕೆಲಸ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. (ಎಂದಿನಂತೆ) ತಾಳ್ಮೆಯಿಂದ ಕಾದಿದ್ದಕ್ಕೆ ಮತ್ತು ತಮ್ಮ ಕವಿತೆಗಳೊಂದಿಗೆ ನನ್ನ ಮಾತುಗಳನ್ನು ಸೇರಿಸಿಕೊಂಡಿದ್ದಕ್ಕೆ ಚಾಂದಿನಿಯವರಿಗೆ ನನ್ನ ವಂದನೆಗಳು.

ಎಚ್.ಎಸ್. ರಾಘವೇಂದ್ರ ರಾವ್
10-06-2014  


                              

ಕನ್ನಡ ಶಾಸ್ತ್ರೀಯ ಕೇಂದ್ರ ಸ್ಥಳಾಂತರಕ್ಕೆ ಸಿದ್ಧ

ಶಾಸ್ತ್ರೀಯ ಕೇಂದ್ರ ಸ್ಥಳಾಂತರಕ್ಕೆ ಸಿದ್ಧ: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ತಾತ್ಕಾಲಿಕ ಕಟ್ಟಡ ಒದಗಿಸಿದ ತಕ್ಷಣ ಮೈಸೂರಿನ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್‌)ಯಲ್ಲಿರುವ ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರವನ್ನು ಸ್ಥಳಾಂತರ ಮಾಡಲಾಗು­ವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸೋಮವಾರ ಭರವಸೆ ನೀಡಿದರು.

ತೀವ್ರವಾಗಲಿದೆ ಬಿಸಿಲು

ತೀವ್ರವಾಗಲಿದೆ ಬಿಸಿಲು: ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳು ಈ ಬಾರಿಯ ಬೇಸಿಗೆಯಲ್ಲಿ ಇದೇ ಮೊದಲು ಬಾರಿಗೆ ಉತ್ತರ ಒಳನಾಡಿನ ಜಿಲ್ಲೆಗಳಂತೆ ಹೆಚ್ಚಿನ ಉಷ್ಣಾಂಶ ದಾಖಲಿಸಿವೆ. ಕಳೆದ ಎರಡು ದಿನಗಳಿಂದ ಈ ರೀತಿ ಆಗಿದೆ.

: ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್

ವಿಕಾಸವಾದ: ಕನ್ನಡ ಅನುವಾದಗಳ ಕ್ರೌಡ್ ಸೋರ್ಸಿಂಗ್: ನನಗೆ ತಿಳಿದ ಮಟ್ಟಿಗೆ ಬಹುಶಃ ೨೦೦೫ರಲ್ಲಿ ಗೂಗಲ್ ತನ್ನ ಬೇರೆ ಬೇರೆ ಸೇವೆಗಳನ್ನು ಜಗತ್ತಿನ ಹಲವು ಭಾಷೆಗಳಲ್ಲಿ ಒದಗಿಸುವುದಕ್ಕೋಸ್ಕರ ಅನುವಾದದ ಕೆಲಸಗಳನ್ನು ಕ್ರೌಡ್ ಸೋರ್...

ಸಾಹಿತಿ ಕೆ. ಸತ್ಯನಾರಾಯಣ ಅವರಿಗೆ ಬಿ.ಎಚ್‌. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ

‘ ಆಧುನಿಕೋತ್ತರ ಬರಹದ ವಿಕೇಂದ್ರೀಕರಣ’: ನವ್ಯ, ನವೋದಯ, ಬಂಡಾಯ ಸಾಹಿತ್ಯ ಪ್ರಕಾರಗಳು ಸ್ಪಷ್ಟ ಸ್ವರೂಪ ಹೊಂದಿವೆ. ಆದರೆ ಆಧುನಿ­ಕೋತ್ತರ ಬರವಣಿಗೆ ವಿಕೇಂದ್ರೀಕರ­ಣಗೊಂಡು ಭಿನ್ನತೆಯೆಡೆಗೆ ಸಾಗಿದೆ. ಇದನ್ನು ನಿವಾರಿ­ಸಲು ಬರಹಗಾರ ಬರವಣಿಗೆಯ ಪ್ರತಿ ಹಂತದಲ್ಲಿ ಅಂತಃಚರ್ಚೆಗೆ ಒಳಗಾಗ­ಬೇಕು ಎಂದು ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜ ಹೇಳಿದರು.

ಕಣ್ಣೀರಿಟ್ಟ ಮುಖ್ಯ ನ್ಯಾಯಮೂರ್ತಿ

ಕಣ್ಣೀರಿಟ್ಟ ಮುಖ್ಯ ನ್ಯಾಯಮೂರ್ತಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಘಟನೆ ಭಾನುವಾರ ನಡೆದಿದೆ.

ಅಗ್ರಪಂಕ್ತಿಯ ಕನ್ನಡ ಪರಿಚಾರಕ ಹಾಲಂಬಿ

ಅಗ್ರಪಂಕ್ತಿಯ ಕನ್ನಡ ಪರಿಚಾರಕ ಹಾಲಂಬಿ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಕನ್ನಡದ ಅಗ್ರಪಂಕ್ತಿಯ ಪರಿಚಾರಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ  ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡಕ್ಕೆ  ಯಾವುದೇ ರೀತಿಯ ಧಕ್ಕೆಯಾದಾಗ, ಆತಂಕ ಉಂಟಾದಾಗ ಎಚ್ಚೆತ್ತು ಎಲ್ಲರನ್ನೂ ಜಾಗೃತಗೊಳಿಸುತ್ತಿದ್ದರು.

ಕಾವ್ಯಕ್ಕೆ ‘ಕಟ್‌ ಅಂಡ್ ಪೇಸ್ಟ್’ ಸೋಂಕು ತಗುಲದಿರಲಿ - ಸುಬ್ರಾಯ ಚೊಕ್ಕಾಡಿ

ಕಾವ್ಯಕ್ಕೆ ‘ಕಟ್‌ ಅಂಡ್ ಪೇಸ್ಟ್’ ಸೋಂಕು ತಗುಲದಿರಲಿ: ‘ಮರದ ಮೇಲಿನ ಕೊಂಬೆಯ ಮೇಲೆ ಕೆಂಪಾದ ಎಲೆ, ಹಾರಿ – ಜಾರಿ ಬಿದ್ದುದು ಅದೇ ಮರದ ಬುಡದಲಿ...’  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಸುಬ್ರಾಯ ಚೊಕ್ಕಾಡಿ ಅವರು ಹಾಡಿದ ಕವಿತೆಯಿದು.

ವಿ.ವಿ.ಗಳಲ್ಲಿ ಜಪಾನಿ ಭಾಷೆ ಕಲಿಕೆಗೆ ವ್ಯವಸ್ಥೆ

ವಿ.ವಿ.ಗಳಲ್ಲಿ ಜಪಾನಿ ಭಾಷೆ ಕಲಿಕೆಗೆ ವ್ಯವಸ್ಥೆ: ‘ಜಪಾನ್‌ನಲ್ಲಿ ಭಾರತೀಯರಿಗೆ ಹೇರಳ ಉದ್ಯೋಗಾವಕಾಶಗಳಿವೆ. ಅಲ್ಲಿ ಉದ್ಯೋಗ ಪಡೆಯುವುದಕ್ಕೆ ನೆರವಾಗುವ ಸಲುವಾಗಿ ನಮ್ಮ ವಿಶ್ವವಿದ್ಯಾಲಯ­ಗಳಲ್ಲಿ ವಿದ್ಯಾರ್ಥಿಗಳಿಗೆ ಜಪಾನಿ ಭಾಷೆಯನ್ನು ಕಲಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಪುಸ್ತಕಗಳು ಚಾಕೊಲೇಟ್‌ನಂತೆ ಪ್ರಿಯವಾಗಲಿ: ವೆಂಕಟೇಶಮೂರ್ತಿ

ಪುಸ್ತಕಗಳು ಚಾಕೊಲೇಟ್‌ನಂತೆ ಪ್ರಿಯವಾಗಲಿ: ವೆಂಕಟೇಶಮೂರ್ತಿ: ‘ಮಕ್ಕಳಿಗೆ ಪುಸ್ತಕಗಳ ಬಗೆಗಿನ ಭೀತಿಯನ್ನು ಹೋಗಲಾಡಿಸಿ, ಅವುಗಳು ಚಾಕೊಲೇಟ್‌ನಷ್ಟು ಪ್ರಿಯವಾಗುವಂತೆ ಮಾಡಬೇಕು’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

‘ಮಳೆನಾಡಿನಲ್ಲೂ’ ಕುಡಿವ ನೀರಿಗೆ ಬಲು ಕಷ್ಟ

‘ಮಳೆನಾಡಿನಲ್ಲೂ’ ಕುಡಿವ ನೀರಿಗೆ ಬಲು ಕಷ್ಟ: ಮಲೆನಾಡಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಹಳ ಹಳೆಯದು. ಅಕಾಲಿಕ ಮಳೆ ಸುರಿಯಲಾರಂಭಿಸಿದ ಮೇಲೆ 15 ವರ್ಷಗಳಿಂದ ಈಚೆಗೆ ಸಮಸ್ಯೆ ಗಂಭೀರವಾಗಿದೆ. ಮೊದಲು ಮೂರು ತಿಂಗಳು ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಇತ್ತು. ಈಗ ಆರು ತಿಂಗಳಿಗೆ ವಿಸ್ತರಿಸಿದೆ. ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಮಲೆನಾಡ ಒಡಲಿಗೆ ನೀರಿನ ಬರದ ಬರೆ

ಮಲೆನಾಡ ಒಡಲಿಗೆ ನೀರಿನ ಬರದ ಬರೆ: ಕಾಡಿನ ಮಡಿಲಲ್ಲಿ ಹರವಿಕೊಂಡಿರುವ ಉತ್ತರ ಕನ್ನಡ ಜಿಲ್ಲೆ ಬಿರು ಬಿಸಿಲಿನ ತಾಪಕ್ಕೆ ಅಕ್ಷರಶಃ ನಲುಗಿದೆ. ಸ್ತಬ್ಧವಾದ ನದಿಗಳ ಹರಿವು, ತಳ ಕಂಡಿರುವ ಹೊಳೆ, ಕೆರೆ, ಬಾವಿಗಳು ಜಿಲ್ಲೆಯಲ್ಲಿ ಜಲಕ್ಷಾಮ ಉಲ್ಬಣಿಸುವ ಮುನ್ಸೂಚನೆ ನೀಡುತ್ತಿವೆ.

ಗಾರ್ಮೆಂಟ್ ಮಹಿಳೆಯರ ಮೇಲೆ ಲಾಠಿ ಪ್ರಯೋಗ - ಸರ್ಕಾರಕ್ಕೆ ಮಂಗಳಾರತಿ

ಸರ್ಕಾರಕ್ಕೆ ಮಂಗಳಾರತಿ: ‘ಇಲಾಖೆಯ ಕೊರತೆ ಮತ್ತು ಹುಳುಕುಗಳನ್ನು ಸರ್ಕಾರದ ಗಮನಕ್ಕೆ ತರುವಷ್ಟು ತಾಕತ್ತು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಇಲ್ಲ. ಹೀಗಾಗಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮಂಗಳಾರತಿ ಎತ್ತಿದೆ.

ಎನ್. ಉದಯಕುಮಾರ್ - ಹಂಗಾಮಿ ಹಂಗಿನಲಿ ‘ಕಾಲೇಜು ಶಿಕ್ಷಣ’

ಹಂಗಾಮಿ ಹಂಗಿನಲಿ ‘ಕಾಲೇಜು ಶಿಕ್ಷಣ’: ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಕೆಲವು ಶಾಲೆಗಳು ಸನಿಹದ ಶಾಲೆಯಲ್ಲಿ ವಿಲೀನಗೊಂಡಿದ್ದೂ ಆಗಿದೆ. ಶಿಕ್ಷಕರ ಕೊರತೆ ಎಂದೆಂದೂ ನೀಗದ ಸಮಸ್ಯೆ. ಕಲಿಕೆಯ ಮಟ್ಟ ಪಾತಾಳಕ್ಕೆ ಇಳಿದಿದೆ ಎಂದು ‘ಪ್ರಥಮ್‌’ನಂಥ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಪದೇ ಪದೇ ಸಾರಿವೆ.

ಅತಿಥಿ ಉಪನ್ಯಾಸಕರು ಮನೆಗೆ?

ಅತಿಥಿ ಉಪನ್ಯಾಸಕರು ಮನೆಗೆ?: ಸರ್ಕಾರಿ ಪದವಿ ಕಾಲೇಜುಗಳ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅವಧಿ ಶನಿವಾರಕ್ಕೆ ಪೂರ್ಣಗೊಂಡಿದೆ. ಆದರೆ, ಅವರನ್ನು ಮುಂದುವರಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.

ಡಾ.ಸಿ.ಎನ್.ಆರ್‌, ಅಣತಿ ಅವರಿಗೆ ಪ್ರಶಸ್ತಿ ಪ್ರದಾನ

ಡಾ.ಸಿ.ಎನ್.ಆರ್‌, ಅಣತಿ ಅವರಿಗೆ ಪ್ರಶಸ್ತಿ ಪ್ರದಾನ: ಡಾ.ಸಿ.ಎನ್. ರಾಮಚಂದ್ರನ್‌ ಅವರ ವಿಮರ್ಶೆಯಲ್ಲಿ ಸಾಹಿತ್ಯ ಮೀಮಾಂಸೆಯ ಆಳವಾದ ಅಧ್ಯಯನವನ್ನು ಕಾಣಬಹುದು ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಯು.ಎಚ್.ಗಣೇಶ್ ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ 24-4-2016

ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.

‘ಚಂದ್ರವಳ್ಳಿ ಕಣಿವೆ ಕನ್ನಡಿಗರ ಗಂಗೋತ್ರಿ’

‘ಚಂದ್ರವಳ್ಳಿ ಕಣಿವೆ ಕನ್ನಡಿಗರ ಗಂಗೋತ್ರಿ’: ‘ಆಡು ಭಾಷೆ ಕನ್ನಡವನ್ನು ರಾಜರ ಆಸ್ಥಾನ ಹಾಗೂ ಪತ್ರ ವ್ಯವಹಾರ ಭಾಷೆಯನ್ನಾಗಿ ಮಾಡಿದ ಮಯೂರಶರ್ಮ ಅವರು ಸಾಮ್ರಾಜ್ಯ ಕಟ್ಟುವ ನಿರ್ಧಾರ ಕೈಗೊಂಡ ಸ್ಥಳವೇ ಚಂದ್ರವಳ್ಳಿ ಕಣಿವೆ. ಅದು ಕನ್ನಡದ ಅಸ್ಮಿತೆಯ ಕೇಂದ್ರವಾಗಿದ್ದು, ಕನ್ನಡಿಗರ ಗಂಗೋತ್ರಿ ಹಾಗೂ ತಲಕಾವೇರಿಯಾಗಿದೆ’ ಎಂದು ಹಿರಿಯ ಸಂಶೋಧಕ ಎಂ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ಡಾ / ಎನ್. ಎಸ್. ಗುಂಡೂರ - ಸಾಹಿತ್ಯ ಲೋಕದ ಅಜರಾಮರ ಶೇಕ್ಸ್ ಪಿಯರ್

ಸಾಹಿತ್ಯ ಲೋಕದ ಅಜರಾಮರ: ಬ್ರಿಟನ್‌ ಸಾಮ್ರಾಜ್ಯಶಾಹಿಯ ವಿಸ್ತರಣೆಯೊಂದಿಗೆ ಜಗತ್ತಿನಾದ್ಯಂತ ಮರುಹುಟ್ಟು  ಪಡೆದ ಶೇಕ್ಸ್‌ಪಿಯರ್‌ ಜಗತ್ತು ಈಗಲೂ ಹಿಗ್ಗುತ್ತಲೇ ಇದೆ

ತಮಿಳಿನಲ್ಲಿ ಶೇಕ್ಸ್ ಪಿಯರ್ - Theodore Baskaran on Shakespeare-inspired Tamil films

Theodore Baskaran on Shakespeare-inspired Tamil films: Shakespeare entered the Tamil world through Pammal Sambandha Mudaliar, an illustrious playwright. It was Mudaliar’s translations of plays such as was staged by the SVThe Bard’s first peep into Tamil screen was through Ambikapathy (1937) directed by the legendary Ellis R. Dungan.S. In this, Congress leader T. Sat

ಇಂದು ಕಿರಿದಾದ ಚಂದಿರ!

ಇಂದು ಕಿರಿದಾದ ಚಂದಿರ!: ಶುಕ್ರವಾರ  ಹುಣ್ಣಿಮೆ ಚಂದ್ರ ಎಂದಿಗಿಂತ ಚಿಕ್ಕದಾಗಿ ಗೋಚರಿಸಲಿದ್ದಾನೆ. ಈ ವಿದ್ಯಮಾನವನ್ನು ‘ಮಿನಿ ಮೂನ್’ ಎನ್ನಲಾಗುತ್ತದೆ. ಬೆಳಗ್ಗೆ 10.55ಕ್ಕೆ ಜರುಗಲಿರುವ ಈ ವಿದ್ಯಮಾನವನ್ನು ಸೂರ್ಯನ ಪ್ರಖರ ಬೆಳಕು ಇರುವುದರಿಂದ ನೋಡುವುದು ಕಷ್ಟ. ರಾತ್ರಿ ವೇಳೆಗೆ ಮಸುಕಾದಂತೆ ಚಂದ್ರ ಕಾಣಲಿದ್ದಾನೆ.

ಪೃಥ್ವಿದತ್ತ ಚಂದ್ರಶೋಭಿ - - ಬಾಬಾಸಾಹೇಬರ ತೀವ್ರವಾದಿ ವಾದ

ಬಾಬಾಸಾಹೇಬರ ತೀವ್ರವಾದಿ ವಾದ: ಡಾ. ಅಂಬೇಡ್ಕರ್ ಬರಹಗಳು ಶೈಕ್ಷಣಿಕ (ಅಕಾಡೆಮಿಕ್) ಮತ್ತು ಬೌದ್ಧಿಕ ಶಿಸ್ತನ್ನು ಹೊಂದಿವೆ. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್‌ ಎಕನಾಮಿಕ್ಸ್ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವಾಗ ಗಳಿಸಿಕೊಂಡ ಶಿಸ್ತು ಇದು.

ಛಾಯಾಗ್ರಾಹಕ ಎಚ್‌. ಸತೀಶ್‌ಗೆ ‘ಮಾಸ್ಟರ್‌ ಐಸಿಎಸ್‌’ ಗೌರವ

ಛಾಯಾಗ್ರಾಹಕ ಎಚ್‌. ಸತೀಶ್‌ಗೆ ‘ಮಾಸ್ಟರ್‌ ಐಸಿಎಸ್‌’ ಗೌರವ: ಪ್ರತಿಷ್ಠಿತ  ಛಾಯಾಗ್ರಹಣ ಸಂಸ್ಥೆ ‘ಇಮೇಜ್‌ ಕೊಲೀಗ್‌ ಸೊಸೈಟಿ ಆಫ್‌ ಕ್ಯಾಲಿಪೋರ್ನಿಯಾ’ದ ಅತ್ಯುನ್ನತ ‘ಮಾಸ್ಟರ್‌ ಐಸಿಎಸ್‌’ ಗೌರವಕ್ಕೆ  ಯೂತ್‌ ಫೋಟೋಗ್ರಫಿಕ್‌ ಸೊಸೈಟಿಯ ಅಧ್ಯಕ್ಷ ಎಚ್‌. ಸತೀಶ್‌ ಪಾತ್ರರಾಗಿದ್ದಾರೆ.

ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೇ ನೀರಿಲ್ಲ

ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೇ ನೀರಿಲ್ಲ: ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಗಳಿಸಿರುವ ಆಗುಂಬೆಯಲ್ಲಿಯೂ ಈಗ ನೀರಿಗೆ ಹಾಹಾಕಾರ. ಬತ್ತಿದ ಬಾವಿಗಳು, ನೀರಿನ ಬದಲು ಬರೀ ಗಾಳಿ ಸೂಸುವ ಕೊಳವೆ ಬಾವಿಗಳು, ಬಿಸಿಲ ಬೇಗೆ, ನೀರಿಗಾಗಿ ಪರಿತಪಿಸುವ ಜನರು.

ಪ್ರವೀಣ ಕುಲಕರ್ಣಿ - ಗಾರ್ಮೆಂಟ್‌ ಕಾರ್ಖಾನೆಗೆ ವಲಸಿಗರ ಲಗ್ಗೆ

ಗಾರ್ಮೆಂಟ್‌ ಕಾರ್ಖಾನೆಗೆ ವಲಸಿಗರ ಲಗ್ಗೆ: ಕೇವಲ ನೂರರ ಸಂಖ್ಯೆಯಲ್ಲಿ ದರ್ಜಿಗಳನ್ನು ಇಟ್ಟುಕೊಂಡು ಶರ್ಟ್‌–ಪ್ಯಾಂಟ್‌ ತಯಾರಿಸುತ್ತಿದ್ದ ಮೇಸರ್ಸ್‌ ಬೆಂಗಳೂರು ಡ್ರೆಸ್‌ ಮೇಕಿಂಗ್‌ ಕಂಪೆನಿಯಿಂದ ಹಿಡಿದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಸಾವಿರಾರು ಕಾರ್ಖಾನೆಗಳವರೆಗೆ ದೊಡ್ಡ ಗಾತ್ರದಲ್ಲಿ ಬೆಳೆದು ನಿಂತಿದೆ ನಗರದ ಗಾರ್ಮೆಂಟ್‌ ಉದ್ಯಮ.

ಕನ್ನಡ ನಿಘಂಟು ಪರಿಷ್ಕರಣೆಗೆ ಸಲಹೆ

ಕನ್ನಡ ನಿಘಂಟು ಪರಿಷ್ಕರಣೆಗೆ ಸಲಹೆ: ‘ಶಾಸ್ತ್ರ ಗ್ರಂಥಗಳನ್ನು ಗದ್ಯಾನುವಾದ ಮಾಡುವುದು, ಕನ್ನಡ ಪುಸ್ತಕಗಳನ್ನು ಆನ್‌ಲೈನ್‌ಗೆ ಅಳವಡಿಸುವುದು, ಕನ್ನಡ ನಿಘಂಟಿನ ಪರಿಷ್ಕರಣೆ ಸೇರಿದಂತೆ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

ಡಾ / ಚಂದ್ರಶೇಖರ ದಾಮ್ಲೆ- ಯಾಕೆ ಬೇಕು ಭಾಷಾ ಕಲಿಕೆ?

ಯಾಕೆ ಬೇಕು ಭಾಷಾ ಕಲಿಕೆ?: ಮನೆಯಲ್ಲಿ ಹೌಸ್ ವೈಫ್ ಎಂದು ನೆಲೆಯಾದ ಅಮ್ಮಂದಿರಿಗೆ ಕನ್ನಡ ಭಾಷಾ ಅಧ್ಯಯನ ಬೇಡ. ಏಕೆಂದರೆ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುವವರಾಗಿರುತ್ತಾರೆ. ಮಕ್ಕಳೊಡನೆ ಕನ್ನಡ ಮಾತನಾಡುವುದನ್ನು ಆದಷ್ಟೂ ತಪ್ಪಿಸುವುದು ಅಗತ್ಯ ಎಂದು ತಿಳಿದಿರುತ್ತಾರೆ.

ಪ್ರೊ. ಎನ್‌. ಮನು ಚಕ್ರವರ್ತಿ ಪುಸ್ತಕ ಬಿಡುಗಡೆ { Mooving Images , Multiple Realities }

ವಿದ್ಯಾರ್ಥಿಗಳಿಂದ ಸಮಾಜದ ಬದಲಾವಣೆ: ವಿದ್ಯೆಯ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದರ ಜೊತೆಗೆ ಮನಸ್ಸಿನ ನೆಲೆಗೆ ಬೇಕಾದ ಆಹಾರ ಒದಗಿಸುವುದು ಸಹ ಮುಖ್ಯ ಎಂದು ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.

ನಾಗೇಶ್ ಹೆಗಡೆ - ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ

ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ: ‘ಪ್ರಕೃತಿಯ ನಿಯಮಗಳನ್ನು ಆದಷ್ಟೂ ಪಾಲಿಸುವಂಥ ಕಟ್ಟಡಗಳು ರೂಪುಗೊಳ್ಳಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಟ್ಟಡ ನಿರ್ಮಾಣ ಸಂಶೋಧಕರಾಗಿದ್ದ ಬಸು ಹೇಳುತ್ತಿದ್ದರು. ಅವರು ತಮ್ಮ ಐಡಿಯಾಗಳನ್ನು ಹೇಗಾದರೂ ಮಾಡಿ ಯುವ ಆರ್ಕಿಟೆಕ್ಟ್‌ಗಳ ತಲೆಯಲ್ಲಿ ತುಂಬಿಸಲು ಯತ್ನಿಸುತ್ತಿದ್ದರು. ಆದರೆ ಅದು ಸುಲಭವಲ್ಲ.

ಕಾವೇರಿ ಹುಟ್ಟಿದ ಜಿಲ್ಲೆಯಲ್ಲೇ ಜಲಕ್ಷಾಮ!

ಕಾವೇರಿ ಹುಟ್ಟಿದ ಜಿಲ್ಲೆಯಲ್ಲೇ ಜಲಕ್ಷಾಮ!: ರಾಜ್ಯದ  ಮಲೆನಾಡು ಮತ್ತು ಕರಾವಳಿಯಲ್ಲಿಯೂ ಈ ಬಾರಿ ಕುಡಿಯುವ ನೀರಿಗೆ ತತ್ವಾರ. ಬಿಂದಿಗೆ ನೀರಿಗಾಗಿ ಮೈಲುಗಟ್ಟಲೆ ಹೋಗಬೇಕಾದ‌ ಸ್ಥಿತಿ ಇದೆ. ಈ ಕುರಿತ ವಿಶೇಷ ವರದಿಗಳ ಸರಣಿ ಇಂದಿನಿಂದ...

ಬಿಸಿಲು- ಬಳ್ಳಾರಿಯಲ್ಲಿ ಅಘೋಷಿತ ಬಂದ್‌!

ಬಳ್ಳಾರಿಯಲ್ಲಿ ಅಘೋಷಿತ ಬಂದ್‌!: ಇಲ್ಲಿ ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆಯೇ ಜನಸಂಚಾರ ನಿಂತು ಬಿಡುತ್ತದೆ. ಬಹುತೇಕ ರಸ್ತೆಗಳೆಲ್ಲ ಬಿಕೋ ಎನ್ನುತ್ತವೆ. ಮಳಿಗೆಗಳಿಗೆ ಬೀಗ ಬೀಳುತ್ತದೆ. ಒಂದು ರೀತಿಯಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗುತ್ತದೆ.

ಡಾ.ಸಿ.ಎನ್.ರಾಮಚಂದ್ರನ್, ಸತ್ಯನಾರಾಯಣ ರಾವ್‌ಗೆ ತೀ. ನಂ.ಶ್ರೀ ಪ್ರಶಸ್ತಿ -2016

ಡಾ.ಸಿ.ಎನ್.ರಾಮಚಂದ್ರನ್, ಸತ್ಯನಾರಾಯಣ ರಾವ್‌ಗೆ ಪ್ರಶಸ್ತಿ: ಶಿವಮೊಗ್ಗ ನಗರದ ಕರ್ನಾಟಕ ಸಂಘದ ವತಿಯಿಂದ ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರೊ.ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ಹೆಸರಾಂತ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್‌ ಅವರಿಗೆ, ಡಾ.ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಕವಿ, ನಾಟಕಕಾರ ಪ್ರೊ. ಸತ್ಯನಾರಾಯಣ ರಾವ್ ಅಣತಿ ಅವರಿಗೆ ಪ್ರಕಟಿಸಲಾಗಿದೆ.

ದಕ್ಷಿಣ ಭಾರತ ರಂಗೋತ್ಸವ

ದಕ್ಷಿಣ ಭಾರತ ರಂಗೋತ್ಸವ: ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ದಕ್ಷಿಣ ಭಾರತ ಕೇಂದ್ರವು ಆಯೋಜಿಸಿರುವ 10 ದಿನಗಳ ‘ದಕ್ಷಿಣ ಭಾರತ ರಂಗೋತ್ಸವ’ (ಏಪ್ರಿಲ್ 20ರಿಂದ 29) ಇಂದಿನಿಂದ ನಗರದ ಗುರುನಾನಕ್ ಭವನದಲ್ಲಿ ಆರಂಭಗೊಳ್ಳಲಿದೆ.

‘ಕನ್ನಡದ 12 ಲಕ್ಷ ಇ–ಬುಕ್‌ಗಳ ಡೌನ್‌ಲೋಡ್‌’

‘ಕನ್ನಡದ 12 ಲಕ್ಷ ಇ–ಬುಕ್‌ಗಳ ಡೌನ್‌ಲೋಡ್‌’: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ 450 ಕೃತಿಗಳ ಇ–ಬುಕ್‌ಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿದ್ದು, ಆರು ತಿಂಗಳಲ್ಲಿ 12 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ’ ಎಂದು ಇಲಾಖೆ ನಿರ್ದೇಶಕ ಕೆ.ಎ.ದಯಾನಂದ  ಹೇಳಿದರು.

Tuesday, April 19, 2016

‘ಭವಿಷ್ಯಕ್ಕೆ ನಿಧಿ ಇಟ್ಕೊಂಡು ಈಗೇನು ಮಾಡೋಣ?’

‘ಭವಿಷ್ಯಕ್ಕೆ ನಿಧಿ ಇಟ್ಕೊಂಡು ಈಗೇನು ಮಾಡೋಣ?’: ‘ಹೊಟ್ಟೆಗೆ ಹಿಟ್ಟು ಸಿಕ್ಕರೆ ತಾನೆ, ನಾವು 58 ವರ್ಷ ಬದುಕೋದು? ನಮ್ಮನ್ನು ಈಗಲೇ ಉಪವಾಸ ಕೆಡವಿದರೆ ಇನ್ನೂ ಹಲವು ವರ್ಷಗಳ ಬಳಿಕ ಬರುವ ಕಾಸಿಗಾಗಿ ನಾವೆಲ್ಲ ಹೇಗೆ ಜೀವ ಹಿಡಿಯೋಣ?’

ಅಸ್ಪೃಶ್ಯತೆ ದಲಿತರ ಸಮಸ್ಯೆ ಅಲ್ಲ -ದೇವನೂರು

ಅಸ್ಪೃಶ್ಯತೆ ದಲಿತರ ಸಮಸ್ಯೆ ಅಲ್ಲ: ‘ಅಸ್ಪೃಶ್ಯತೆ ಎನ್ನುವುದು ದಲಿತರ ಸಮಸ್ಯೆಯಲ್ಲ. ಅದನ್ನು ಯಾರು ಆಚರಿಸುತ್ತಾರೋ ಅವರ ಸಮಸ್ಯೆ’ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು. ಹೊಳೆನರಸೀಪುರದ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ಪ್ರವೇಶ ನಿರಾಕರಿಸಿರುವ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಅವರು ಮಾತನಾಡಿದರು.

ಜಹಗೀರದಾರ, ಪ್ರಸಾದ್‌ಗೆೆ ವೆಂಕಟಾಚಲ ಶಾಸ್ತ್ರಿ ಪ್ರಶಸ್ತಿ 2016

ಜಹಗೀರದಾರ, ಪ್ರಸಾದ್‌ಗೆ ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ದತ್ತಿ ಪ್ರಶಸ್ತಿ’ಗೆ 2015ನೇ ಸಾಲಿನಲ್ಲಿ ವಿದ್ವಾಂಸ ಸೀತಾರಾಮ ಜಹಗೀರದಾರ ಹಾಗೂ 2016ನೇ ಸಾಲಿಗೆ ವಿದ್ವಾಂಸ ಡಾ. ಕೆ.ಜಿ. ನಾರಾಯಣ ಪ್ರಸಾದ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಜನಾಕ್ರೋಶಕ್ಕೆ ಮಣಿದ ಕೇಂದ್ರ: ಪಿಎಫ್‌ ಅಧಿಸೂಚನೆ ರದ್ದು

ಜನಾಕ್ರೋಶಕ್ಕೆ ಮಣಿದ ಕೇಂದ್ರ: ಪಿಎಫ್‌ ಅಧಿಸೂಚನೆ ರದ್ದು: ದೇಶದಾದ್ಯಂತ ಕಾರ್ಮಿಕ ವಲಯದಿಂದ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ 1ರಿಂದ ಜಾರಿಗೆ ತರಲು ಉದ್ದೇಶಿಸಿದ್ದ  ಪಿಎಫ್‌ ಹಿಂಪಡೆಯುವುದರ ಮೇಲಿನ ಕಠಿಣ ನಿಯಮಗಳನ್ನು ಕೈಬಿಟ್ಟಿದೆ.

ಪಿಎಫ್‌ ಪ್ರತಿಭಟನೆ: ರಣರಂಗವಾದ ಬೆಂಗಳೂರು

ಪಿಎಫ್‌ ಪ್ರತಿಭಟನೆ: ರಣರಂಗವಾದ ಬೆಂಗಳೂರು: ಪಿಎಫ್ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮಂಗಳವಾರ ಧ್ವಂಸಾರೂಪ ಪಡೆದಿದೆ. ಜಾಲಹಳ್ಳಿ ಕ್ರಾಸ್ ಬಳಿ ಎರಡು ಬಸ್‌ ಬೆಂಕಿಗೆ ಆಹುತಿಯಾಗಿವೆ. ಹೆಬ್ಬಗೋಡಿ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಜಪ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಭಸ್ಮವಾಗಿವೆ. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ತಡೆಯಲು ಅಶ್ರುವಾಯು ಪ್ರಯೋಗಿದ್ದಾರೆ. 10 ಮಂದಿಯನ್ನು ಬಂಧಿಸಲಾಗಿದೆ.

ಕಾವ್ಯಾ ಕಡಮೆ- ಬಾರ್ಸಿಲೋನಾ ಉಡಿಯಲ್ಲಿ ಉಳಿಸಿದ ಕಂಪನಗಳು

ಬಾರ್ಸಿಲೋನಾ ಉಡಿಯಲ್ಲಿ ಉಳಿಸಿದ ಕಂಪನಗಳು: ಸಾವಿರಾರು ವರ್ಷಗಳ ಹಿಂದೆ ಕಣ್ತೆರೆದ ಈ ಪುರಾತನ ಪಟ್ಟಣದ ಒಳಜೀವವನ್ನು ಒಂದು ವಾರದ ಮಟ್ಟಿಗೆ ಪ್ರವಾಸಿಗಳಾಗಿ ಹೋದ ನಾನು ಹೇಗೆ ತಾನೇ ಸ್ಪರ್ಶಿಸಲು ಸಾಧ್ಯ? ಕೊನೆಗೆ ಆ ಊರು ತಡವಿಲ್ಲದೇ ದಯಪಾಲಿಸಿದ ಕಂಪನವನ್ನಷ್ಟೇ ಉಡಿಯಲ್ಲಿ ಹಾಕಿಕೊಂಡು ಬರಲು ನನಗೆ ಸಾಧ್ಯವಾಯಿತು.

ಮರಾಠಿ ಲೇಖಕಿ ಶಾಂತಾ ಗೋಖಲೆ-{ ಸಂದರ್ಶನ }

ಭಾಷಾಂತರದ ಗೆಲುವು: ಸಾಂಸ್ಕೃತಿಕ ಭಿನ್ನತೆಯ ಸವಾಲು: ದಿಟ್ಟ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳಿಗೆ ಹೆಸರಾದ ಮರಾಠಿ ಸಾಹಿತಿಗಳ ಪೈಕಿ ಹಿರಿಯ ಲೇಖಕಿ ಶಾಂತಾ ಗೋಖಲೆ ಅವರದು ಎದ್ದು ಕಾಣುವ ಹೆಸರು. ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಅವರು ಸೃಜನಶೀಲ ಬರವಣಿಗೆ ಮತ್ತು ಭಾಷಾಂತರ ಎರಡರಲ್ಲೂ ಸಿದ್ಧಹಸ್ತರು.