Thursday, September 22, 2016

ಕನ್ನಡ ಉಪನ್ಯಾಸಕ ತೆಕ್ಕಟ್ಟೆ ಸುರೇಂದ್ರನಾಥ ಶೆಟ್ಟಿ ನಿಧನ -22- 9- 2016

tekkatte Surendranath Shetty


ಬ್ರಹ್ಮಾವರದ  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ತೆಕ್ಕಟ್ಟೆ ಸುರೇಂದ್ರನಾಥ ಶೆಟ್ಟಿ {52 }  22-9-2016 ರಂದು ಅನಾರೋಗ್ಯದಿಂದ ನಿಧನರಾದರು . ಅವರಿಗೆ ಅಂತಿಮ ನಮನಗಳು.
Tekkatte Surendranath Sheetty { 52 } lecturer in Kannada , Go Pre University College , Brahmavara , expired on 22-9-2016
ಕೃತಿಗಳು-- ಮಾನಿನಿ , ಗಣಪನ ಪದ , ರಂಗಸ್ಠಳ

ಮಹಿಳಾ ವಿ ವಿ ಗೆ ಅಕ್ಕಮಹಾದೇವಿ ನಾಮಕರಣ

ಮವಿವಿಗೆ ಅಕ್ಕಮಹಾದೇವಿ ನಾಮಕರಣ -Indiatimes Vijaykarnatka
AKKA MAHADEVI Women's University , Karnataka
ಆಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ,

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, 
ಕರಣಂಗಳ ಚೇಷ್ಟೆಗೆ ಮನವೇ ಬೀಜ. 
ಎನಗುಳ್ಳುದೊಂದು ಮನ. 
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ?

ಕಣ್ಣ ಹನಿಯೊಂದಿಗೆ... - ಚಂದ್ರಿಕಾ ನಾಗರಾಜ್

ಕಣ್ಣ ಹನಿಯೊಂದಿಗೆ...
                                          -ಚಂದ್ರಿಕಾ ನಾಗರಾಜ್
"ಇಂದಿನ ಫಲಿತಾಂಶ ನನ್ನ ಬದುಕನ್ನು ನಿರ್ಧರಿಸುತ್ತದೆ" ಭಯದಲ್ಲಿ ಕಂಪಿಸಿ ಕಲ್ಲೆಡವಿ ಮುಗ್ಗರಿಸಿ ಬೀಳುತ್ತಿದ್ದವಳನ್ನು ಪಕ್ಕದಲ್ಲಿ ಹೆಜ್ಜೆ ಹಾಕುತ್ತಿದ್ದ ಗೆಳತಿ ಅಪೂರ್ವ ಹಿಡಿದುಕೊಂಡಳು. ಎಡಗಾಲ ಹೆಬ್ಬೆರಳು ಒಡೆದು ರಕ್ತ ಚಿಮ್ಮಿತು.
" ಅನಾಮಿಕ ನೀನು ಫಸ್ಟ್ ಕ್ಲಾಸಲ್ಲಿ ಪಾಸಾಗ್ತಿ ಬಿಡೆ. ಎಡಗಾಲು ಎಡವಿದ್ರೆ ಒಳ್ಳೇದಂತೆ ಕಣೇ" ಎಂದು ಅಪೂರ್ವ ನುಡಿದಾಗ ನಾನು ನೋವಿನಿಂದ ತುಟಿ ಕಚ್ಚಿಕೊಂಡಿದ್ದೆ. "ನಿಮ್ಗೆಲ್ಲ ಏನಮ್ಮ ಪಾಸಾಗ್ತಿರಾ...ಕಮ್ಮಿ ಮಾಕ್ರ್ಸ್ ಬಂದ್ರೆ ರಿವ್ಯಾಲುವೇಷನ್ಗೆ ಹಾಕ್ತಿರ..ಆದ್ರೆ ನಮ್ಗೆ ಹಾಗಾ? ಪಾಲಿಗೆ ಬಂದಿದ್ದು ಪಂಚಾಮೃತ. ಕಮ್ಮಿ ಮಾಕ್ರ್ಸ್ ಬಂದ್ರೆ ರಿವ್ಯಾಲುವೇಷನ್ಗೆ ಹಾಕೋಕೆ ದುಡ್ಡು ಖರ್ಚು ಮಾಡೋಷ್ಟು ತಾಕತ್ತಿದ್ಯಾ? ಒಟ್ನಲ್ಲಿ ದೇವ್ರತ್ರ ಬೇಡೋದು ಹಾಲಲ್ಲಾದ್ರೂ ಹಾಕು ನೀರಲ್ಲಾದರು ಹಾಕು ಅಂತ ..." ಆಕೆಯ ವೇದ ವಾಕ್ಯ ಕೇಳಿ ಬಂದರೂ ಆಕೆಯ ಮಾತಿನಲ್ಲಿದ್ದ ಸತ್ಯಾಂಶದ ಅರಿವಾಗಿತ್ತು ನನಗೆ. ಮತ್ತೆ ಮಾತು ಮುಂದುವರಿಸುತ್ತಾ, "ನಿನ್ನಪ್ಪ ಅಮ್ಮ ಡಾಕ್ಟ್ರು ಇಂಜಿನಿಯರ್ ಆಗಿರೋದೆ ವೇಸ್ಟ್ ಕಣೇಮನೇಲಿ ಕಂಪ್ಯೂಟರ್ ಇದ್ರೂ ಅದ್ಕೆ ಇಂಟರ್ನೆಟ್ ಹಾಕ್ಸ್ಬಾರ್ದ? ಹೋಗ್ಲಿ ನಿಂಗೊಂದು ಮೊಬೈಲ್ನ್ನಾದ್ರೂ ತೆಕ್ಕೊಡ್ಬಾರ್ದಾ? ನಮ್ಗಾದ್ರೆ ಅದೆಲ್ಲ ತಗೋಳೋ ಭಾಗ್ಯ ಇಲ್ಲ. ನಿಮ್ಗೆ ಹಾಗಾ? ಇವಾಗ ನೋಡು ರಿಸಲ್ಟ್ ನೋಡೋಕೆ ಕಾಲೇಜ್ಗೆ ಹೋಗ್ಬೇಕು. ಬೇರೆಯವ್ರತ್ರ ರಿಜಿಸ್ಟರ್ ನಂಬರ್ ಕೊಡೋಣಾಂದ್ರೆ ಕಮ್ಮಿ ಮಾಕ್ರ್ಸ್ ಬಂದ್ರೆ ಆಡ್ಕೋತ್ತಾರೆನೊಂಥ ಭಯ. ಏನ್ ಹಣೆ ಬರಹಾನೋ ನಮ್ದು. ಒಬ್ಬೊಬ್ರದ್ದು ಒಂದೊಂದು ತರ ಲೈಫ್ ಆದ್ರೂ ಬದುಕ್ಬೇಕು." ಅಪೂರ್ವ ಗೊಣಗುತ್ತಲೇ ಇದ್ದಳು. ಕಾಲೇಜಿನ ನೋಟೀಸ್ ಬೋರ್ಡಿನ ಮುಂದೆ ಇಬ್ಬರೂ ನಿಂತಿದ್ದೆವು.
"ಅನಾಮಿಕಾ ನಂಗೆ ಕಂಗ್ರಾಟ್ಸ್ ಹೇಳೆ, 89% ಕಣೇ ನಂಗೆ. ಆದ್ರೂ ಕಮ್ಮಿ ಆಯ್ತು ಪರವಾಗಿಲ್ಲ. ಇವತ್ತು ಪಪ್ಪ ಅಮ್ಮ ಎಷ್ಟು ಖುಷಿಯಾಗ್ತಾರೆ ಗೊತ್ತಾ ? ಆದ್ರೂ ಆಟ್ರ್ಸ್ ಅಲ್ವಾ ಎಲ್ರು ಮೂಗು ಮುರಿತಾರೆ ನೋಡು" ಖುಷಿಯಲ್ಲಿ ಹಾರಾಡುತ್ತಿದ್ದ ಅಪೂರ್ವ, "ಹೇಯ್ ಏನಾಯ್ತೆ ನಿಂಗೆ?" ಗರಬಡಿದವಳಂತೆ ನಿಂತಿದ್ದ ನನ್ನನ್ನು ಅಲುಗಾಡಿಸಿದಳು. ನಾನು ಕುಸಿದು ಕುಳಿತ್ತಿದ್ದೆ. ಕಣ್ಣು ತೆರೆದಾಗ, "ಅನಾಮಿಕ ಡೊಂಟ್ ವರಿ, ರಿವ್ಯಾಲ್ಯುವೇಷನ್ಗೆ ಹಾಕಿದ್ರಾಯ್ತು ಇಲ್ಲಾಂದ್ರೆ ರಿಎಕ್ಸಾಂ ಬರಿ. ನಿಂಗೊತ್ತಾ ನಾನಾಗಿದ್ರೆ ರಿಎಕ್ಸಾಂ ಬರಿತಾನೇ ಇರ್ಲಿಲ್ಲ ಯಾರ್ ಪುನಃ ಓದ್ತಾರೆ. " ಅಂತಹ ಸನ್ನಿವೇಶದಲ್ಲಿ ನನ್ನನ್ನು ನಗಿಸ ಹೊರಟವಳು ನನ್ನ ಮೌನ ಕಂಡು ಸೊಲೊಪ್ಪಿಕೊಂಡು, "ಎದ್ದೇಳು ನಡಿ, ಹೋಗಿರೋದು 2 ಸಬ್ಬೆಕ್ಟ್ಸ್ನಲ್ಲಿ ತಾನೇ, ಕೆಮೆಸ್ಟ್ರೀ, ಮ್ಯಾಥ್ಸ್ ಅಷ್ಟೇ ತಾನೆಅಲ್ಲಾ ನಾಲ್ಕೈದು ಸಬ್ಜೆಕ್ಟ್ನಲ್ಲಿ ಡುಮ್ಕಿ ಹೊಡ್ದವ್ರೂ ಇದ್ದಾರೆ. ನಿನೊಳ್ಳೆ ಆಕಾಶಾನೇ ತಲೆ ಮೇಲೆ ಬಿದ್ದವ್ರಂಗೆ ಕೂತಿದ್ದೀಯಲ್ಲಾ" ಎನ್ನುತ್ತಿದ್ದಂತೆ ಅಲ್ಲೆ ರಿಸಲ್ಟ್ ನೋಡುತ್ತಿದ್ದ ಹುಡುಗ ತಲೆ ತಿರುಗಿ ಬಿದ್ದಿದ್ದ. ಆತನನ್ನು ಉಪಚರಿಸುವ ಕಾರ್ಯಕ್ಕೆ ಹೋದಾಕೆ ತಲೆ ಚಚ್ಚಿಕೊಂಡು, "ದೇವ್ರು ಎಂತೆಂಥ ಜೀವಿಗಳನ್ನ ಸೃಷ್ಟಿಸಿರ್ತಾನೋ...ಅಲ್ಲಾ ಫೇಲಾದೆ ಅಂಥ ಟೆನ್ಷನ್ನಲ್ಲಿ ನೀನು ತಲೆ ತಿರುಗಿ ಬಿದ್ರೆ, ಅವ್ನು ಫೇಲಾಗ್ತೀನೀಂತ ಬಂದ್ನಂತೆ ನೋಡಿದ್ರೆ ಫಸ್ಟ್ ಕ್ಲಾಸಲ್ಲಿ ಪಾಸಾದೇಂತ ಖುಷೀಲಿ ತಲೆ ತಿರ್ಗಿ ಬಿದ್ದ. ಉಫ್..!" ನನಗೆ ನಗು ಬಂತಾ...?! ಇಲ್ಲ ಕಣ್ಣು ಹನಿಯುತಿದೆ. "ಇಂದು ನನ್ನ ಬದುಕಿನ ಅಂತ್ಯ"