ಪಾದೂರು ರಘುರಾಮ ಐತಾಳ್ ನಿಧನ -28--1-2018

Image may contain: 1 person

ಕೋಟ ವಿವೇಕ ಪ್ರೌಢಶಾಲೆಯಲ್ಲಿ ಮೂವತ್ತನಾಲ್ಕು ವರ್ಷಗಳ ಕಾಲ ಕಾಲ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕೋಟ ಪರಿಸರದ ಅತ್ಯಂತ ಜನಪ್ರಿಯ ವಿದ್ವಾಂಸರಾಗಿದ್ದ ಪಾದೂರು ರಘುರಾಮ ಐತಾಳರು ಕೋಟದ ತಮ್ಮ ಸ್ವಗೃಹದಲ್ಲಿ ಇಂದು ಅಪರಾಹ್ನ ವಿಧಿವಶರಾದರು. ವೈದಿಕ ಮನೆತನದ ಹಿನ್ನೆಲೆಯ ರಘುರಾಮ ಐತಾಳರು ಪೇಜಾವರ, ಫಲಿಮಾರು ಮತ್ತು ಕಾಣಿಯೂರು ಮಠಗಳಲ್ಲಿ ಸೇವೆ ಸಲ್ಲಿಸಿದ್ದು, ಕನ್ನಡ, ಹಿಂದಿ, ಸಂಸ್ಕೃತ ಭಾಷಾ ಸಾಹಿತ್ಯದಲ್ಲಿ ಅಪಾರ ಜ್ಞಾನಿಗಳಾಗಿದ್ದರು. ಸ್ವತಃ ಕವಿಗಳೂ ಗಮಕಿಗಳೂ ಆಗಿದ್ದ ಶ್ರೀಯುತರು ಕುಂದಾಪುರದಲ್ಲಿ ಜರುಗಿದ್ದ ದ.ಕ.ಜಿಲ್ಲಾ ಗಮಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಓರ್ವ ಪುತ್ರ ಹಾಗೂ ಈರ್ವರು ಪುತ್ರಿ ಯರು ಮತ್ತು ಅಪಾರ ಸಂಖ್ಯೆಯ ಶಿಷ್ಯರನ್ನೂ ಅಭಿಮಾನಿಗಳನ್ನೂ ಅಗಲಿದ್ದಾರೆ.

ಕಾಜೂರು ಸತೀಶ್ - : ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರು...

ಅಜ್ಞಾನಿಯ ದಿನಚರಿ : ಸ್ತ್ರೀಕೇಂದ್ರಿತ ದಲಿತಪ್ರಜ್ಞೆ: ಕಳಂಕದ ಪೊರೆಹರಿದು ಹೊರಬರು...: ನಮ್ಮ ಸಾಹಿತ್ಯದ ಎಲ್ಲ ಪರಂಪರೆಗಳಲ್ಲೂ ಸೃಜನಶೀಲವಾದ ಹಾಗೂ ತಾತ್ತ್ವಿಕವಾದ ಬಂಡಾಯದ ಚಹರೆಗಳಿವೆ. ಸುತ್ತಲಿನ ಆತಂಕಗಳಿಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಪ್ರಕ್ರಿಯೆಯು ಇಂದೂ...

ಆಂಟನಿ ಚೆಕೋವ್ - ಲಾಟರಿ ಟಿಕೆಟ್ { ಕನ್ನಡ ಅನುವಾದ-ಟಿ.ಎಸ್. ರಘುನಾಥ್ , }


antony chekov  kannada traslation by t. s. raghunath ,


Lottery Ticket and other stories by Antony Chekov

Translated to Kannada by T. S. Raghunath

Published by Sannidhi Prakashana ,5/1 ,Nagappa Street ,Seshadripuram ,Bengaluru-560020

First Edition-2017 ,Pages-200 , Price-Rs-200



Monday, January 22, 2018

ಶುಭಶ್ರೀಪ್ರಸಾದ್ ಮಂಡ್ಯ -- ಬಿಳಿ ಹಣ ಮತ್ತು ಕೆಂಪು ಬಣ್ಣ

*ಬಿಳಿ ಹಣ ಮತ್ತು ಕೆಂಪು ಬಣ್ಣ..*

ಚಂದ್ರ ಮುಕುಟ ಧರಿಸಿ
ಉಯ್ಯಾಲೆ ತೂಗುತ್ತಿದ್ದ,
ವಿಷಮದ ವಿಷಯ
ಭಿನ್ನರಾಶಿಯ ಹಾಸಿನ ಮೇಲೆ ಕಾಲಾಡುತ್ತ
ಪಗಡೆಯಾಡುವ
ಹೊತ್ತು
ಬೆಳಗೊಳದ ದೇವ
ತಣ್ಣಗೆ ಒಳಗೊಳಗೆ ನಗುತಿದ್ದ.

ಸಿಡಿ ಹಬ್ಬಕ್ಜೆ
ಬಾಯಿಬೀಗ, ಪೂಜಾಕುಣಿತ,
ವೀರಗಾಸೆ ನರ್ತನ,
ಹುಲಿ ವೇಷ ಒಳಗೊಳಗೇ ಹುಟ್ಟಿಸುವ ಅರುಯದ ಹೊಸ ಭಯ,,
ಕಣ್ಮುಚ್ಚಿ ಅಡಗಿದರೂ
ಹೂಬಾಣ ಚುಚ್ಚಿ
ಎದೆಗೂಡು ನಡುನಡುಗಿ
ಮಂಜುಗಡ್ಡೆ ಹೊದಿಕೆಯ
ಸರಿಸಿ ಬಿಸಿ ಹಬೆಯ‌ ಉಸಿರ
ಬಿಡುಗಡೆಗೆ ಕಾತರಿಸಿ ನೋಯುತಿದೆ.
ಚಕ್ರವಾಕ ರಾಗ ಸೂಸುವ‌ ಮೊದಲೇ ಶ್ರೀರಾಗ ತಾಳಹಾಕಿ  ಹೊಸ್ತಿಲು ಮೆಟ್ಟಿ.

ರೈಲು ಹಳಿಗಳ ಮೇಲೆಯೇ
ಓಡುತ್ತದೆ ಎನ್ನುವ ನಂಬಿಕೆ
ಮುರಿದು ಕಣ್ಣು‌ ತೇವ ಆಗಿತ್ತು
ಮಾರಿಕೊಂಡ ನನ್ನ
ಮನಸ್ಸು ಹಿಗ್ಗುವಿಕೆಯ
ಗುಣವನ್ನೇ ಕಳೆದುಕೊಂಡು.

ಹಾರುವ ಬಿಳಿ ಪಾರಿವಾಳಗಳ
ರೆಕ್ಕೆಗೆ ಹಸಿದಾರ ಕಟ್ಟಿ
ಗಾಳಿಪಟ ಹಾರಿಸುವ
ಹಣದ  ತಣ್ಣಗಿನ‌ ಕ್ರೌರ್ಯ
ಹಸಿದ ಹೊಟ್ಟೆಗಳ ತಣಿಸುವುದಿಲ್ಲ.

ಮಂಚಗಳ ಸದ್ದ ಲಾಲಿಸುವ
ಬಿಳಿ ಹಣದ ಕೆಂಡದಂಥ ಕೆಂಪು ಮೂಗಿಗೆ
ನತ್ತು ಹಾಕುವರಿಲ್ಲ,

ಬಿಳಿ ಹಣವೂ 
ಬಣ್ಣ ಬಣ್ಣ ಬಳಿದುಕೊಂಡು
ಮುಖವಾಡ ತೊಟ್ಟಿವೆ.
ರೆಕ್ಕೆ ಬಿಚ್ಚಿ ಚಂದದೆ ಹಾರುವ ಗಿಳಿಮರಿಗಳ ಹಾರಿಸಿಕೊಂಡು ಕಚ್ಚಿ‌ ಚುಚ್ಚಿ ಕೊಲ್ಲುವ ರಣಗಿಡುಗಗಳಿಗೆ ಉಣಿಸುವ ಬೆಳ್ಳಿ‌ ನಾಣ್ಯಗಳ  ನಗು,
ಕಣ್ಣೀರಿಗೆ ಕಟ್ಟೆ ಕಟ್ಟಿ ನೆಲದೊಡಲ ಸೇರಿಸಿದೆ.

ಸದ್ದಡಗಿದ ಬಂದೂಕಿನ‌ ನಳಿಕೆಯಲಿ ಗುಬ್ಬಿ ಗೂಡುಕಟ್ಟಿ‌ ಮೊಟ್ಟೆಯಿಕ್ಕಿದೆ.
ಮರಿಗಳು ಚಿಲಿಪಿಲಿ ಎನುವ ವೇಳೆ  ಹಣದ ಗೆಜ್ಜೆಲಾಲಿತ್ಯಕೆ ಮಣಿದು‌ ಆರ್ಭಟಿಸುವ ನಳಿಕೆಯ ಬಿಸಿಗೆ ಮರಿಗಳೆಲ್ಲ ಕರ್ರಗಾಗಿ ರಕ್ತದ ಕಮಟು ವಾಸನೆ ಸುತ್ತಮುತ್ತ..

ಕಪ್ಪು‌ ಹಣದ ಬಿಳಿ‌ ಮುಖವ ಅರಸುತ್ತ ಅಂಡಲೆಯುತಿಹೆ
ಕಂಡರೊಂದು ದಿನ‌ ಕಾಣಿಸುವೆ.
ಬುದ್ಧ ಎಂದೂ ನಗೆಮುಖವನೇ‌ ಹೊರುತ್ತಾನೆ

ಹಳೇ ಪೇಪರ್ ಖಾಲಿ ಸೀಸೆ ಕೂಗು ರಸ್ತೆಯಾಚೆಗೂ ಹಬ್ಬಿದೆ
ಪ್ಲಾಸ್ಟಿಕ್ ಕವರ್ ಆಯುವ ಹೊಟ್ಟೆ ಬೆನ್ನುಹುರಿ ಒಂದಾದ ಪುಟ್ಟ ಹುಡುಗ 
ಜೇಬಿನಿಂದ ಜಾರಿ‌ ಉರುಳಿ ಕವರಿನ ಸೆರಗಿನಡಿ ಅವಿತಿರಬಹುದಾದ ಐದು ಪೈಸೆ ನಾಣ್ಯವ ಹುಡುಕುತ್ತಲೇ ಇದ್ದಾನೆ 
ಇನ್ನೂ....


-✍ಶುಭಶ್ರೀಪ್ರಸಾದ್, ಮಂಡ್ಯ

ಲಾತವ್ಯ ಆಚಾರ್ಯ - ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ

ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ | Udayavani -



ವಿಶೇಷವೆಂದರೆ ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು,
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ. 

ಎಚ್. ಎಸ್. ಅನುಪಮಾ - : ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ

Bhoomibalaga: ಸಾವಿತ್ರಿ ಬಾಯಿ ಫುಲೆ - ಹೃದಯದಿಂದ ಕಲಿಸಿದ ಶಿಕ್ಷಕಿ: ಭೂ ತಾಪಮಾನ ಏರುತ್ತಿದೆ. ಕೆರೆಕಟ್ಟೆ ಬಾವಿ ಹಳ್ಳತೊರೆಗಳಷ್ಟೇ ಅಲ್ಲ, ಮನುಷ್ಯನ ಅಂತರಾಳದ ಜೀವಸೆಲೆಯೂ ಒಣಗತೊಡಗಿದೆ. ವಿಷಪೂರಿತ ತ್ಯಾಜ್ಯಗಳಿಂದ ಮಲಿನವಾಗಿ...