ಕಾಜೂರ್ ಸತೀಶ್ - ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ

ಅಜ್ಞಾನಿಯ ದಿನಚರಿ : ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ: ಹೆಸರಾಂತ ನಾಟಕಕಾರ, ನಟ, ನಿರ್ದೇಶಕ ಶ್ರೀ ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನವು ನಾನು ಓದಿದ ಮಹತ್ವದ ಕೃತಿಗಳಲ್ಲೊಂದು. ಸಂಕಲನದಲ್ಲಿರುವ ಆರು ಕಥೆಗಳೂ ಓದುಗರ...

ಎಚ್. ಎಸ್. ಶಿವಪ್ರಕಾಶ್ --- ಅಸಿಫಾಗೆ

ಆಸಿಫಾಗೆ
ದಂಡಿಗ್ಹೋದ ಸವಾರರೆಲ್ಲ ಮನೆಗೆ ತಿರುಗಿಬರುವರು
ತಮ್ಮ ತಮ್ಮ ಕುದುರೆ ಜೋಡಿ
ಒಂದಲ್ಲ ಒಂದು ದಿವಸ
ಕಡಲಿಗ್ಹೋದ ಬೆಸ್ತರೂ ತಿರುಗಿಬರುವರು
ತಮ್ಮತಮ್ಮ ಮನೆಗೆ
ತಮ್ಮ ತಮ್ಮ ದೋಣಿಯಲ್ಲಿ
ಒಂದಲ್ಲ ಒಂದು ದಿವಸ
ಕುದುರೆ, ದನ, ಕುರಿಯ ಹಿಂಡು ಮೇವಿಗಾಗಿ
ಹೊಲ_ ಕಾಡಿಗೆ ಹೋದವೆಲ್ಲ
ತಿರುಗಿ ಮನೆಗೆ ಬರುವವು
ಒಂದಲ್ಲ ಒಂದು ದಿವಸ
ತನ್ನ ಕುದುರೆ ಮೇಸಲೆಂದು
ಕಾಡಿಗ್ಹೋದ ಪುಟ್ಟಿ ತಿರುಗಿ ಬಾರಳೆ
ಒಂದಲ್ಲ ಒಂದು ದಿವಸ
ಕುದುರೆಗಳು ಮನೆಗೆ ತಿರುಗಿ ಬಂದಮೇಲೂ?
ಶಾಲೆಗೆಂದು ಹೋದ ಹುಡುಗಿ,
ಸಾಕುನಾಯ ಕೂಡಿಕೊಂಡು ವಾಕಿಂಗಿಗೆ ಹೋದ ಹುಡುಗಿ
ತಿರುಗಿ ಬಾರರೆ
ನಾಯಿ ಮನೆಗೆ ಬಂದ ಮೇಲೂ?
ಎಚ್ಚರಾಗು
ಎಚ್ಚರಾಗು ನಿದ್ದೆ ಹೋದ ನೆಲದ ತಾಯಿ
ನಿನ್ನ ಕಾಡು ನಾಡಿನಲ್ಲಿ
ಎಳೆಯದಾದ ಎಲ್ಲವನ್ನು ಚಲುವಾದ ಎಲ್ಲವನ್ನು
ಕಾಲಿನಿಂದ ಹೊಸಕಿಹಾಕಿ,
ಕೈಗಳಿಂದ ತರಿದು ತರಿದು
ಉಗುರಿನಿಂದ ಸಿಗಿಗದು ಬಗೆದು
ಹಲ್ಲಿನಿಂದ ಅಗಿದುಜಗಿದು ತಿನ್ನುವಂಥ
ಹೊಸರಾಕ್ಷಸನೊಬ್ಬ ನುಸುಳಿ
ಹೊಂಚು ಹಾಕುತಿರುವನು
ನಮ್ಮೆದೆಗಳ ಮಷಾಣದಲ್ಲಿ ಹೂತು ಹೋದ ನೆಲದ ತಾಯೆ
ಮರುಜನ್ಮದ ಗಳಿಗೆ ನಿನಗೆ

LikeShow more reactions
Com

ಸಿದ್ದಕಟ್ಟೆ ಚಂದ್ರರಾಜ ಶೆಟ್ಟಿ - ಇರುವೆ { ತಟ್ಟು ಚಪ್ಪಾಳೆ ಪುಟ್ಟ ಮಗು }

ಎಲ್ಲಾ ಕಡೆಯಲಿ ಕಾಣುವ ಇರುವೆ
ಮೂಸುತ ತಿಂಡಿಯ ಹುಡುಕುವ ಇರುವೆ
ಬೆಲ್ಲವನೆಲ್ಲವ ಮೆಲ್ಲುವ ಇರುವೆ
ಎಲ್ಲಾ ಕಡೆಯಲಿ ನೀನಿರುವೆ.
ಕಣ್ಣುಗಳಿಲ್ಲದೆ ಕಾಣುವ ಇರುವೆ
ಸಾಹಸದಿಂದಲಿ ಜೀವಿಪ ಇರುವೆ
ಒಗ್ಗಟ್ಟಿನ ಗುಟ್ಟನು ನೀನರಿತಿರುವೆ
ಎಲ್ಲಾ ಕಡೆಯಲಿ ನೀನಿರುವೆ.
ಕಾಲಕಾಲದಿ ಗೇಯುವ ಇರುವೆ
ಗುಟ್ಟಿನ ತಿಂಡಿಯ ಕದಿಯುವ ಇರುವೆ
ಗೂಡಿಗೆ ತಿಂಡಿಯ ಸಾಗಿಪ ಇರುವೆ
ಎಲ್ಲಾ ಕಡೆಯಲಿ ನೀನಿರುವೆ.
ಕೆಂಪು ಬಣ್ಣದಾ ಮರದಾ ಇರುವೆ
ಕಪ್ಪು ಬಣ್ಣದಾ ಕಚ್ಚುವ ಇರುವೆ
ಕಂದು ಬಣ್ಣದಾ ಬೆಲ್ಲದ ಇರುವೆ
ಎಲ್ಲ ಕಡೆಯಲಿ ನೀನಿರುವೆ.
ತತ್ತಿಯ ಹೊತ್ತಿಹ ಗುಂಪಿರುವೆ
ಕಣ್ಣಿಗೆ ಕಾಣದ ಸಣ್ಣಿರುವೆ
ದೊಡ್ಡತಲೆಯ ಯಜಮಾನಿರುವೆ
ಎಲ್ಲ ಕಡೆಯಲಿ ನೀನಿರುವೆ.
*** ***
ಆಕರ ಕೃತಿ- ಚಂದಿರ ಮಾಮ/ಪ್ರಕಟಣೆಯ ವರ್ಷ- ೧೯೫೯/ಚಿತ್ರ- ರಾಘವೇಂದ್ರ