‘ಮನೆಯಂಗಳದಲ್ಲಿ....’ಸಿ.ಎಸ್. ದ್ವಾರಕಾನಾಥ್

‘ಮನೆಯಂಗಳದಲ್ಲಿ....’ಸಿ.ಎಸ್. ದ್ವಾರಕಾನಾಥ್ | Prajavani: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ‘ಮನೆಯಂಗಳದಲ್ಲಿ ಮಾತುಕತೆ’ 205ನೇ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ತಿಂಗಳ ಅತಿಥಿಯಾಗಿ ಪಾಲ್ಗೊಳ್ಳುವರು.

Saturday, December 15, 2018

ಕೋಟಿ ಒಡುಗರ ಆಂದೋಲನ - { ರಾಜಶೇಖರ ಕೋಟಿ ನೆನಪು }

ಆಂದೋಲನ ರೂವಾರಿ | Prajavani: ಕಳೆದ ವರ್ಷ ನಿಧನರಾದ ಪತ್ರಕರ್ತ ರಾಜಶೇಖರ ಕೋಟಿ ಅವರ ಕುರಿತ ‘ಕೋಟಿ ಓದುಗರ ಆಂದೋಲನ’ ಸಂಪಾದಿತ ಲೇಖನಗಳ ಸಂಗ್ರಹ ಕೃತಿಯ ಪ್ರಕಾಶಕರ ನುಡಿಯಲ್ಲಿ ಬರುವ ಈ ಮಾತುಗಳು ರಾಜಶೇಖರ ಕೋಟಿ ಅವರು ಪತ್ರಿಕೋದ್ಯಮ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಯನ್ನು ಕಟ್ಟಿಕೊಡುತ್ತವೆ.

Deccan Herald

Friday, December 14, 2018

ಅರ್ಥ ಕಳೆದುಕೊಳ್ಳುತ್ತಿರುವ ಸಂಶೋಧನೆಗಳು: ಡಾ.ರಾಜೇಂದ್ರ ಚೆನ್ನಿ ವಿಷಾದ

ಅರ್ಥ ಕಳೆದುಕೊಳ್ಳುತ್ತಿರುವ ಸಂಶೋಧನೆಗಳು: ಡಾ.ರಾಜೇಂದ್ರ ಚೆನ್ನಿ ವಿಷಾದ | Prajavani: ಪಿಎಚ್‌.ಡಿ ಕೇಂದ್ರಿತ ಮನೋಸ್ಥಿತಿಯ ಪರಿಣಾಮ ವಿಶ್ವವಿದ್ಯಾಲಯಗಳಮಟ್ಟದಲ್ಲಿ ಕೈಗೊಳ್ಳುವ ಸಂಶೋಧನೆಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಮಾನಸ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ ವಿಷಾದಿಸಿದರು.

ಮಧ್ಯಪ್ರದೇಶ: ಡಿ.17ರಂದು ಮುಖ್ಯಮಂತ್ರಿಯಾಗಿ ಕಮಲನಾಥ್‌ ಪ್ರಮಾಣವಚನ 

ಮಧ್ಯಪ್ರದೇಶ: ಡಿ.17ರಂದು ಮುಖ್ಯಮಂತ್ರಿಯಾಗಿ ಕಮಲನಾಥ್‌ ಪ್ರಮಾಣವಚನ  | Prajavani: ಅತ್ಯಂತ ಹಿರಿಯ ಸಂಸದ, ಮುಖಂಡ ಕಮಲನಾಥ್‌ (72) ಅವರು ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಡಿ.17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಉಡುಪಿಯ ಪತ್ರಕರ್ತ ಮಾಧವ ಆಚಾರ್



ಉಡುಪಿಯ ಹಿರಿಯ ಪತ್ರಕರ್ತ, ಯುಎನ್‌ಐ ವರದಿಗಾರರಾಗಿದ್ದ ಮಾಧವ ಆಚಾರ್ ನಿಧನರಾಗಿದ್ದಾರೆ.
ನಾನು ಉಡುಪಿಯಲ್ಲಿ ಪತ್ರಕರ್ತನಾಗಿ ಕರ್ತವ್ಯ ಆರಂಭಿಸಿದಾಗ, ಸಹೋದ್ಯೋಗಿಯಾಗಿದ್ದರು. ವರದಿಗಾರಿಕೆ ಬಗ್ಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದವರು. ಮಣಿಪಾಲದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸೆಮಿನಾರ್‌ಗಳು, ಇಂಗ್ಲಿಷ್ ಭಾಷಣಗಳ ಬಗ್ಗೆ ವರದಿ ಮಾಡುವಾಗ ಅವರ ಸಲಹೆ ಪಡೆದುಕೊಳ್ಳುತ್ತಿದ್ದೆ. ಒಮ್ಮೆ ನಾವೆಲ್ಲಾ ಆಂಧ್ರಪ್ರದೇಶದ ಕಾಕಿನಾಡಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳಿದ್ದೆವು.
ಅವರ ಮನೆ ಮಣಿಪಾಲದಲ್ಲಿತ್ತು. ಉಡುಪಿಗೆ ಬಂದಾಗಲೆಲ್ಲಾ ನಾನಿದ್ದ ಕಚೇರಿಗೆ ಬರುತ್ತಿದ್ದರು. ಬಹಳಷ್ಟು ಹರಟುತ್ತಿದ್ದರು. ಮಣಿಪಾಲದ ಉದಯವಾಣಿ ಪ್ರಿಂಟಿಂಗ್ ಪ್ರೆಸ್‌ನ ಒಳಗೆ ಅವರ ಟೇಬಲ್. ಅವರು ವರದಿಗಾರಿಕೆ ಮಾಡುವ ಹಳೆಯ ಟೈಪ್ ರೈಟಿಂಗ್‌ನಂಥ ಕಟ ಕಟ ಶಬ್ದ ಮಾಡುವ ಮೆಶಿನ್ ಇತ್ತು. ಅದನ್ನು ತೋರಿಸಿದ್ದರು.
ಉಡುಪಿಯ ಆಗಿದ್ದ ಪತ್ರಕರ್ತರಾದ ಗಣಪತಿ ಭಟ್, ದಾಮೋದರ್ ಐತಾಳ್, ರಾಮಕೃಷ್ಣ ಮೂರ್ತಿ, ಬಾನಾ ಶಾಂತಪ್ರಿಯ, ಶಿಕಾರಿಪುರ ಈಶ್ವರ ಭಟ್, ಕುಂದರ್, ರಘುರಾಮ್ ಅವರ ಮುಂದೆ ನಾನು ಅತ್ಯಂತ ಕಿರಿಯವ. ಹಾಗಾಗಿ ಎಲ್ಲರೂ ನನ್ನ ಜತೆ ಹೆಚ್ಚು ಸಲುಗೆಯಿಂದ ಇದ್ದರು.
ನಾನು ಮಂಗಳೂರಿಗೆ ಬಂದ ನಂತರವೂ ಮಾಧವ ಆಚಾರ್ ಆಗಾಗ ಕರೆ ಮಾಡುತ್ತಿದ್ದರು. ನಂತರ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರಿಕೆಯ ಜವಾಬ್ದಾರಿಯೂ ಇದ್ದ ಕಾರಣ, ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಾರಕ್ಕೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದರು. ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದರು. ನಿವೃತ್ತಿ ಬಳಿಕ ಸುಮಾರು ಐದು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ.
ಇವತ್ತು ಅವರು ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರ ನಿಧನದ ನೋವನ್ನು ಸಹಿಸುವ ಶಕ್ತಿಯನ್ನು ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ದೇವರು ಕರುಣಿಸಲಿ.
- ಮುಹಮ್ಮದ್ ಆರಿಫ್ ಪಡುಬಿದ್ರಿ


Image may contain: 1 person, closeup

ಪಂಚ ರಾಜ್ಯ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ !

ಪಂಚ ರಾಜ್ಯ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ ! | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ಡಿ.11: ಐದು ರಾಜ್ಯ ಗಳಲ್ಲಿ ನಡೆದಿರುವ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ ಆರಂಭಗೊಂಡಿದ್ದು, ಕೇಂದ್ರದ ಆಡಳಿತಾರೂಢ ಬಿಜೆಪಿ ಮೂರು ರಾಜ್ಯ ಗಳಲ್ಲಿ ಹಿನ್ನಡೆ ಅನುಭವಿಸಿದೆ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 66 ಮತ್ತು ಬಿಜೆಪಿ 60, ರಾಜಸ್ಥಾನ ಕಾಂಗ್ರೆಸ್ 77 ಮತ್ತು ಬಿಜೆಪಿ 55, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 33 ಮತ್ತು ಬಿಜೆಪಿ 28, ಮಿಜೋರಾಂ

ಊರ್ಜಿತ್ ಪಟೇಲ್ ರಾಜೀನಾಮೆ: ಮನಮೋಹನ್ ಸಿಂಗ್ ಹೇಳಿದ್ದೇನು ?

ಊರ್ಜಿತ್ ಪಟೇಲ್ ರಾಜೀನಾಮೆ: ಮನಮೋಹನ್ ಸಿಂಗ್ ಹೇಳಿದ್ದೇನು ? | Vartha Bharati- ವಾರ್ತಾ ಭಾರತಿ: ಹೊಸದಿಲ್ಲಿ, ಡಿ. 11: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ದಿಢೀರ್ ರಾಜೀನಾಮೆ ದುರದೃಷ್ಟಕರ ಹಾಗೂ ದೇಶದ ಆರ್ಥಿಕತೆಗೆ ಬಲುದೊಡ್ಡ ಹೊಡೆತ ಎಂದು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಹೇಳಿದ್ದಾರೆ. ಆರ್‌ಬಿಐ ಸ್ವಾಯತ್ತತೆ ಬಗ್ಗೆ ಸರ್ಕಾರದ ಜತೆ ತಿಕ್ಕಾಟದಲ್ಲಿದ್ದ ಪಟೇಲ್ ಸೋಮವಾರ ಮುಂಜಾನೆ ವೈಯಕ್ತಿಕ ಕಾರಣ ನೀಡಿ ದಿಢೀರ್ ರಾಜೀನಾಮೆ ನೀಡಿದ್ದರು. ಸರ್ಕಾರದ ಜತೆಗಿನ ಭಿನ್ನಾಭಿಪ್ರಾಯಗಳ ಜತೆ ಚರ್ಚಿಸಲು ಆಯೋಜಿಸಿದ್ದ ಸಭೆ

Saturday, December 8, 2018

ಮೇಘನಾ ಸುಧೀಂದ್ರ - - ಬದುಕು ಬೆಳಗುವ ಪುಸ್ತಕಗಳು

good kannada books: the books which enlighten us - ಬದುಕು ಬೆಳಗುವ ಪುಸ್ತಕಗಳು | Vijaya Karnataka: ಪುಸ್ತಕದ ಓದು ಹಲವರ ಮಧ್ಯೆ ಸ್ನೇಹಸೇತುವಾಗುತ್ತದೆ. ಅವುಗಳು ಬದುಕಿಗೆ ಸ್ಫೂರ್ತಿಯನ್ನೂ ಕೊಡುತ್ತವೆ. ಬದುಕನ್ನು ಬೆಳಗುವ ಇಂತಹ ಕೃತಿಗಳತ್ತ ಈ ನೋಟ.

Friday, December 7, 2018

ಹಿರಿಯ ಪತ್ರಕರ್ತ, ಸಾಹಿತಿ ಮೋಹನ ನಾಗಮ್ಮನವರ ನಿಧನ 8-12-2018

ಹಿರಿಯ ಪತ್ರಕರ್ತ, ಸಾಹಿತಿ ಮೋಹನ ನಾಗಮ್ಮನವರ ನಿಧನ | Prajavani: ಉತ್ತರ ಕರ್ನಾಟಕ ಭಾಗದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮೋಹನ ನಾಗಮ್ಮನವರ ಶನಿವಾರ ಬೆಳಗ್ಗೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ನಿಧನರಾದರು.