ನಾಗರಾಜ ರಾವ್ ಜವಳಿ ಪರವಶ!

ಅತ್ರಿ ಬುಕ್ ಸೆಂಟರ್: ಜವಳಿ ಪರವಶ!: [ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತ...

'ನಂಮನೆ'ಯಿಂದ ಹೊರಟ ಗೆಳೆಯ ನಾಗರಾಜ ರಾವ್ ಜವಳಿಗೆ ನನ್ನ ಅಂತಿಮ ನಮನ

ನಂಮನೆ:ಜವಳಿ ಬ್ಲಾಗ್ನಲ್ಲಿ ಕಾಫ್ಕನ ನೆನಪು.Pro.Nagaraja Rao Javali my friend, classmate expired at Theerthahalli today

'via Blog this'-27-11-2011

ವಿಮರ್ಶಕರು ಮತ್ತು ಲೇಖಕರು

Devasahitya: ವಿಮರ್ಶಕರು ಮತ್ತು ಲೇಖಕರು: ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ...

ಕನ್ನಡದ ಗೊರೂರು

MY ARTICLES: ಕನ್ನಡದ ಗೊರೂರು: ಕನ್ನಡ ತಾಯಿ ಭುವನೇಶ್ವರಿಯ ಕೊರಳಲ್ಲಿ ನಿಲಿದಾಡುತ್ತಿರುವ ರತ್ನಖಚಿತ ಕಂಠೀಹಾರದಲ್ಲಿ ಅನೇಕ ಸಾಹಿತ್ಯರತ್ನಗಳು ತುಂಬಿವೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು...

Sunday, November 20, 2011

ಹಳೆಯಮ್ಮನ ಆತ್ಮಕತೆ[ಕಾದಂಬರಿ }-{ U.Varamahalaxmi Holla }

ಹಳೆಯಮ್ಮನ ಆತ್ಮಕಥೆ
                                                                  - ಮುರಳೀಧರ ಉಪಾಧ್ಯ ಹಿರಿಯಡಕ
      
ಕುಂದಾಪುರ ಕನ್ನಡ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬೈಂದೂರಿನವರೆಗೆ ಬಳಕೆಯಲ್ಲಿರುವ ಪ್ರಾದೇಶಿಕ ಸೊಗಡಿನ ಪ್ರಭೇದ. ಶಿವರಾಮ ಕಾರಂತರ ಆಕ್ಷೇಪವನ್ನು ಲೆಕ್ಕಿಸದೆ ಮೊದಲ ಬಾರಿ ತನ್ನ ಕತೆಗಳಲ್ಲಿ ಕುಂದಾಪುರ ಕನ್ನಡವನ್ನು ಬಳಸಿದವರು ವೈದೇಹಿ. ಮುಂಬೈಯಲ್ಲಿರುವ ಕನ್ನಡ ಲೇಖಕಿ ಮಿತ್ರಾ ವೆಂಕಟರಾಜರ ಕತೆಗಳಲ್ಲೂ ಕುಂದಾಪುರ ಕನ್ನಡ ರಯಿಸುತ್ತದೆ. 'ಅಕ್ಕ, ಕುಂಕುಮದಕ್ಕ' ಎಂಬ ಕುಂದಾಪುರ ಕನ್ನಡದ ಜನಪದ ಹಾಡುಗಳ ಸಂಕಲನವನ್ನು ಸಂಪಾದಿಸಿರುವ ಯು.ವರಮಹಾಲಕ್ಷ್ಮೀ ಹೊಳ್ಳರ 'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ಕಾದಂಬರಿ.
ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಅವಿಭಕ್ತ ಕುಟುಂಬವೊಂದರಲ್ಲಿ ಬದುಕಿದ ಶತಾಯುಷಿ ಹಳೆಯಮ್ಮನ (ವಾಗ್ದೇವಿ) ಆತ್ಮಕತೆ ಹಾಗೂ ಕೆಲವು ಉಪಕತೆಗಳು ಈ ಕಾದಂಬರಿಯಲ್ಲಿವೆ. ಹಳೆಯಮ್ಮ ಪುರುಷ ಪ್ರಧಾನ ಸಮಾಜದ ಮಹಿಳೆಯರ ಅವಸ್ಥೆಯನ್ನು ಕಂಡವಳು; ಅನುಭವಿಸಿದವಳು; ಜೀವನದ ಸಿಹಿ-ಕಹಿ ಅನುಭವದಿಂದ ಮಾಗಿದವಳು. ಮೊಗೇರರ ಯುವಕ ಡಾಕ್ಟರ್ನನ್ನು ಪ್ರೀತಿಸಿದ ತನ್ನ ಮಗಳು ಯಶೋದೆಗೆ ಅವನೊಡನೆ ಊರು ಬಿಟ್ಟು ಹೋಗಲು ಸಲಹೆ ನೀಡುವುದರಲ್ಲಿ ಅವಳ ಮಾನವೀಯ ಮನೋಧರ್ಮ ಕಾಣಿಸುತ್ತದೆ.
ಹಳೆಯಮ್ಮನ ಮಾವನ ತಮ್ಮ (ಶೇಷ ಮಾವ) ಇಟ್ಟುಕೊಂಡ ಹೆಣ್ಣಿನ ಮಗಳು ಕಮಲ. ಕಮಲೆಯನ್ನು ಪ್ರೀತಿಸಿ ಮದುವೆಯಾದ ಮೂರ್ತಿ ಮಾಸ್ಟ್ರು ಸಂಶಯಪಿಶಾಚಿಯಾಗಿ ಅವಳನ್ನು ಬಿಟ್ಟು ಹೋಗುತ್ತಾನೆ. ಬೈಂದೂರಿನಲ್ಲಿ ಶಿಕ್ಷಕಿಯಾದ ಕಮಲ ಪಾತ್ರೆ ಅಂಗಡಿ ಮಾಬ್ಲೇಶ್ವರನನ್ನು ಮದುವೆಯಾಗುತ್ತಾಳೆ. ಕಮಲೆಯನ್ನು ಕುರಿತ ಸಹಾನುಭೂತಿಯಲ್ಲೂ ಅನಕ್ಷರಸ್ಥೆ ಹಳೆಯಮ್ಮನ ದೊಡ್ಡತನ ಕಾಣಿಸುತ್ತದೆ.
ಶೇಷ ಮಾವನ ಮಗ ನಾರಾಯಣ ಗಾಂಧೀವಾದಿ. ಅವನ ಹೆಂಡತಿ ಗೌರಿ ಆಧುನಿಕ ಶಿಕ್ಷಣ ಪಡೆದವಳು; ಗಾಂಧೀಜಿಯ ವಿಚಾರಧಾರೆ ತಿಳಿದವಳು. ನಾರಾಯಣ ಸತ್ತಾಗ ತಲೆ ಬೋಳಿಸಲು ನಿರಾಕರಿಸುವ ಗೌರಿ, ಶಾಲೆ ಮಕ್ಕಳಿಗೆ ಊಟ ನೀಡುತ್ತ ಬದುಕುತ್ತಾಳೆ, ಸಮಾಜದ ಟೀಕೆ-ಟಿಪ್ಪಣಿಗಳನ್ನು ಲೆಕ್ಕಿಸದೆ ಅನ್ಯಜಾತಿಯ ವೃದ್ಧರೊಬ್ಬರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುತ್ತಾಳೆ.
ಮಗಳ ಜೊತೆಯಲ್ಲಿ ತಾವೂ ಹೆರುವ, ಹೆರಿಗೆಯಂತ್ರವಾದ ಮಹಿಳೆಯರು 'ಹಳೆಯಮ್ಮನ ಆತ್ಮಕತೆ'ಯಲ್ಲಿದ್ದಾರೆ. ರುಕ್ಮತ್ತೆ ತನ್ನ ಗಂಡ ಇಟ್ಟುಕೊಂಡ ಹೆಣ್ಣನ್ನು, ಅವಳ ಮಕ್ಕಳನ್ನು ಸಹಿಸುವುದು ಅನಿವಾರ್ಯವಾಗುತ್ತದೆ. ಮೀನಾಕ್ಷಿ ತನ್ನ ಕುರಿತು ಪದ್ಯ ಕಟ್ಟಿದಳೆಂದು ಸಿಟ್ಟುಗೊಂಡ ಅವಳ ಗಂಡ, ಅವಳ ಬಾಯಿಗೆ ಉರಿವಕೊಳ್ಳಿ ತುರುಕುತ್ತಾನೆ. ಅವಳು ತೌರಿಗೆ ಓಡಿ ಬರುತ್ತಾಳೆ. ಗಂಡನ ಮನೆಯಲ್ಲಿ ಹೊಡೆತ ತಾಳಲಾರದೆ ಓಡಿ ಬಂದ ಪುಟ್ಟತ್ಗಿ ಲೈಂಗಿಕ ಅತೃಪ್ತಿಯಿಂದ ಮನೋರೋಗಿಯಾಗುತ್ತಾಳೆ. ಮಂಟಪದ ಶೀನಪ್ಪಯ್ಯನ ಮೂರನೆಯ ಹೆಂಡತಿ ಹದಿನೈದರ ಪ್ರಾಯದಲ್ಲಿ ಹೆರಲು ಆರಂಭಿಸಿ, ಒಂಬತ್ತು ಮಕ್ಕಳ ತಾಯಿಯಾಗಿ ಮೂವತ್ತಕ್ಕೆ ವಿಧವೆಯಾಗುತ್ತಾಳೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅಮೇರಿಕ ಕ್ರಿಯಾಕೇಂದ್ರವಾಗಿರುವ ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. (ಉದಾಹರಣೆ: ಗುರುಪ್ರಸಾದ ಕಾಗಿನೆಲೆ ಅವರ 'ಬಿಳಿಯ ಚಾದರ') ಅಲಕ್ಷಿತವಾಗಿರುವ ಕುಂದಾಪುರ ಕನ್ನಡ ದೃಷ್ಟಿಕೇಂದ್ರವಾಗಿರುವ 'ಹಳೆಯಮ್ಮನ ಆತ್ಮಕತೆ' ದೇಸಿಯತ್ತ ಹೊರಟಿರುವುದು ಗಮನಾರ್ಹ - ಆಗ್ಳಿನ ಹೆಂಗಸ್ರ ಹಣೆ ಬರವೇ ಹಾಂಗೇ. ಹೆಚ್ಚಿಗೆ ಮಾತಾಡೀರೆ, 'ನಿಂಗೇನ ಉಂಬ್ಕೆ ತಿಂಬ್ಕೆ ಕಡ್ಮಿ ಮಾಡಿದ್ನಾ' ಅಂಬ್ರ. ಹೆಂಗಸ್ರಿಗೆ ಇಪ್ದು ಬರೀ ಹೊಟ್ಟಿ ಮಾತ್ರ ಅಂತ ತಿಳ್ಕೊಂಡಿದ್ರಾ ಕಾಣತ್. ಇಷ್ಟ್ ಮಾತ್ರ ಅಲ್ಲ, ತಮಗೆ ಮನೆಯಲ್ಲಿ ಅಗ್ನಿ ಸಾಕ್ಷಿಯಾಯಿ ಮದಿಯಾಯಿ ಬಂದ ಹೆಣ್ತಿ ಬೇಸಿ ಹಾಕೂಕೆ, ಮಕ್ಳನ್ ಹೆತ್ತ್ಕೊಟ್ಟ್ ಮನಿ ಕಂಡ್ಕಂಬ್ಕೆ ಆದ್ರೆ ಶೋಕಿಗೆ ಇನ್ನೊಂದ ಹೆಣ್ಣನ್ನ ಇಟ್ಕಂಬ್ದೂ ಒಂದ ದೊಡ್ಡಸ್ತಿಕೆ ಆಗಿನ ಗಂಡಸ್ರಿಗೆ. ಹೊಟ್ಟೀಗೆ ಬೆಂಕಿ ಬಿದ್ರೂ ಆ ಹೆಂಡ್ತಿ ತೋರ್ಸಕಂಬ್ಕಿಲ್ಲ. ಗಂಡ್ನ ಹತ್ರ ಹಾಂಗೆ ಮಾಡಬೇಡಿ ಅನ್ನೂಕೂ ಇಲ್ಲೆ. ಬ್ಯಾರೆ ಹೆಂಗ್ಸ್ರಾಯ್ಲಿ ಗಂಡಸ್ರಾಯ್ಲಿ ಈ ಹೆಂಗ್ಸಿನ ಪಾಡರ್ಿಗೆ ಬಪ್ಪುವವರೂ ಅಲ್ಲ. ಏನಾಯ್ತು, ಅಂವ ಗಂಡ್ಸ ಅಲ್ದಾ ಅಂಬವ್ರೇ ಎಲ್ಲ.'
ಸ್ತ್ರೀವಾದಿ ಓದಿನಲ್ಲಿ ಗಮನ ಸೆಳೆವ ಅಂಶಗಳು 'ಹಳೆಯಮ್ಮನ ಆತ್ಮಕತೆ'ಯಲ್ಲಿವೆ. ಗೌರಿಯ ವೈಯಕ್ತಿಕ ಬಂಡಾಯದ ಹಿನ್ನೆಲೆಯಲ್ಲಿ ಗಾಂಧೀಜಿಯ ಸುಧಾರಣಾವಾದಿ ಚಳುವಳಿ ಇದೆ. ನಾಗವೇಣಿ ಅವರ 'ಗಾಂಧಿಬಂದ', ವ್ಯಾಸರಾಯ ಬಲ್ಲಾಳರ 'ಹೆಜ್ಜೆ'ಗಳಲ್ಲಿರುವಂತೆ, 'ಹಳೆಯಮ್ಮನ ಆತ್ಮಕತೆ'ಯಲ್ಲೂ ಗಾಂಧೀವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಂದ ಪರಿವರ್ತನೆಯ ಒಳನೋಟಗಳಿವೆ. ಮೊದಲ ಪ್ರೇಮ ವಿವಾಹದಲ್ಲಿ ಕಹಿ ಅನುಭವ ಪಡೆದ ಕಮಲೆಯ ಮಗಳು ಮರುಮದುವೆ ಬೇಡ ಎಂದು ನಿರ್ಧರಿಸುತ್ತಾಳೆ. ಅನಂತನ ಪತ್ನಿ ಹಾಗೂ ಅವಳ ಮೈದುನ ಪದ್ಮನಾಭನ ಚಿತ್ರಣದಲ್ಲಿ ಲೇಖಕಿಯ ಪ್ರಬುದ್ಧ ಸಂಯಮ ಕಾಣಿಸುತ್ತದೆ. ಹಳೆಯಮ್ಮನ ಗಂಡನ ಮನೋರೋಗದ ಕಾರಣ ನಿಗೂಢವಾಗಿ ಉಳಿದಿದೆ.
ಛಿದ್ರವಾದ ಅವಿಭಕ್ತ ಕುಟುಂಬಗಳು, ಗಾಂಧೀವಾದ ತಂದ ಹೊಸತನ, ದೇವದಾಸಿ ಪದ್ಧತಿಯ ಅವಸಾನ, ಅಂತರ್ಜಾತೀಯ ವಿವಾಹಗಳ ಆರಂಭ, ಬ್ರಾಹ್ಮಣರು ಆರಂಭಿಸಿದ ಹೋಟೇಲು ಉದ್ಯಮ - ಹೀಗೆ ಸಾಮಾಜಿಕ ಪರಿವರ್ತನೆಯ ವಿವಿಧ ಮುಖಗಳು ಈ ಕಾದಂಬರಿಯಲ್ಲಿ ದಾಖಲಾಗಿವೆ. ಜನಾರ್ದನ, ನಂಬಿಕೆಗಳನ್ನು ಕಳಕೊಂಡ ಹೊಸ ತಲೆಮಾರಿನ ಪ್ರತಿನಿಧಿಯಾಗಿದ್ದಾನೆ. ಅಪ್ಪ ಸತ್ತ ಸುದ್ದಿ ಬಂದರೂ ಅವನು ತನ್ನ ಮಗನ ಮದುವೆ ಮುಂದೂಡುವುದಿಲ್ಲ.
'ಹಳೆಯಮ್ಮನ ಆತ್ಮಕತೆ' ಕುಂದಾಪುರ ಕನ್ನಡದಲ್ಲಿ ಬರೆದಿರುವ ಪ್ರಥಮ ಪ್ರಾಯೋಗಿಕ ಕಾದಂಬರಿ. ಈ ಚೊಚ್ಚಲ ಕೃತಿಯಲ್ಲಿ ಯಶಸ್ವಿಯಾಗಿರುವ ಕಾದಂಬರಿಕಾರ್ತಿ ಯು.ವರಮಹಾಲಕ್ಷ್ಮೀ ಹೊಳ್ಳರಿಗೆ ಅಭಿನಂದನೆಗಳು.
      
ಹಳೆಯಮ್ಮನ ಆತ್ಮಕತೆ
-ಯು. ವರಮಹಾಲಕ್ಷ್ಮೀ ಹೊಳ್ಳ.
ಪ್ರ.-ಸ್ವಾಗತ ಸಮಿತಿ,
ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನ,
ಉಡುಪಿ.
ಫೋನ್: 08254-256003.
ಮೊದಲ ಮುದ್ರಣ 2007.
ಬೆಲೆ ರೂ. 30.00
Haleyammana Atmakathe {A novel in Kannada }
Author-U.Varamahalxmi Holla
             08254-256003
Published by
Reception Committee
All India 74th Kannada Literary Conference,
Udupi
First Edition-2007
For copies contact-
Udupi Jilla Kannada Sahitya Parishat
Phone-9342438727

ಬೆಳಗೆರೆ ಜಾನಕಮ್ಮ---- ನೇಮಿಚಂದ್ರ

Udayavani: Kannada-Belagere Janakamma by Nemichandra --ಬೆಳಗೆರೆ ಜಾನಕಮ್ಮ-ಸಮಗ್ರ ಕವನಗಳು

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

ಅರಿವು ಅಧ್ಯಯನ ಕೂಟ, ಮಣ್ಣೆ: ‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’: - ಶ್ಯಾಮಲ ಜನಾರ್ದನನ್ ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು...

ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ

ಜ್ಞಾನ ಮುಖಿ: ಕೆ.ಎ.ಎಸ್. ಪರೀಕ್ಷೆ ಸಿದ್ಧತೆಗೆ ಪುಸ್ತಕಗಳ ಪಟ್ಟಿ: ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ. (ಚಾಣಕ್ಯ ಕರಿಯರ್ ಅಕಾಡೆಮಿಯ ಎನ್.ಎಂ.ಬಿರಾದಾರ ಸರ್ ಬರೆಸಿದ ಪುಸ್ತಕಗಳ ಪಟ್ಟಿ - collected by G...

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

ಲಡಾಯಿ ಪ್ರಕಾಶನ: ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ: - ಡಾ. ಎನ್ ಜಗದೀಶ್ ಕೊಪ್ಪ. ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸ...

: ರಿಲ್ಕ್ ಮಾತು

ಲಡಾಯಿ ಪ್ರಕಾಶನ: ರಿಲ್ಕ್ ಮಾತು: `ನೀನು ಬರೆಯಲೇಬೇಕೆ? ಏಕೆ ಎಂಬ ಕಾರಣವನ್ನು ಹುಡುಕಿಕೋ. ಬರೆಯುವ ಆಸೆ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದೆಯೋ, ಬರೆಯದಿದ್ದರೆ ಸಾಯುತ್ತೀಯೋ ನೋಡಿಕೋ. ಇರುಳಲ್ಲಿ ನಿನ್ನ ...

ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು

ಹೊನ್ನೆವಾಣಿ: ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು: ಅದು ೧೯೪೨, ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿದ ಬಾಲಕ, ಹೈದರಾಬಾದ್‌ನ ಪ್ರತಿಷ್ಠಿತ ನಿಜಾಮ್ ಕಾಲೇಜು ಸೇರಲು ತವಕಿಸುತ್ತಿದ್ದ. ಪ್ರವೇಶಕ್ಕಾಗಿ ಅರ್ಜಿ ಸಲ್ಲ...

Wednesday, November 9, 2011

ವೀಣಾ ಶಾಂತೇಶ್ವರ-ಕನ್ನಡ ಕಾದಂಬರಿ ಕಳೆದ ಕಾಲು ಶತಮಾನದಲ್ಲಿ

ಕನ್ನಡ ಕಾದಂಬರಿ ಕಳೆದ ಕಾಲು ಶತಮಾನದಲ್ಲಿ-ವೀಣಾ ಶಾಂತೇಶ್ವರ
ಯು. ಎಸ್. ಎ ಯ ಕನ್ನಡ ಸಾಹಿತ್ಯ ರಂಗದ ಪ್ರಕಟಣೆ { ೨೦೦೯ ]
Kannada Kadambari Kaleda Kalu Shatamanadalli-An essay
by Dr.Veena Shanteshvar
Published by Kannada Sahitya Ranga,
inc, no-26, Fredric Palace,Old Bridge,
NJ-08957, usa
pages-28, price- free distribution,,
For copies pls contact Abhinava Bangalore-{9448804905 ]



ವೀಣಾ ಶಾಂತೇಶ್ವರ ಅವರೊಂದಿಗೆ ಸಂದರ್ಶನ

In conversation with Veena Shanteshvar by Dr. K. R. Siddagangamma.-- Read this interview in Aniketana { Quarterly - Karnataka Sahitya Academy-volume-19- issue-4[april-june-2008] published in nov-2011.Veena shanteshvar is a major writer of contemorary kannada literature.

ಕೆ.ಫಣಿರಾಜ್--ಪ್ರಚಾರ ಪದ್ಯಕ್ಕೊಂದು ಪ್ರಚಾರ ವಿಮರ್ಶೆ

ಎಮ್.ಡಿ. ವಕ್ಕುಂದ- ಅಡಿಗರ- ಕೋಮುವಾದಿ ಕವನ-Read K. Phaniraj's response to M.D. Vakkuda"s article on Gopala Krishna Adiga"s ' Matte Molagali Panchajanya' in Gouri Lankesh PatrikeNov-16,2011 {.Gourilankeshblogspot.com is not updated since Jan-2011 }I request Mrs Gourilankesh to publish important aricles of patrike in blogspot-muraleedhara upadhya

ಗಂಗಾವತಿ ಸಮ್ಮೇಳನಾಧ್ಯಕ್ಷರಾಗಿ ಸಿಪಿಕೆ ಆಯ್ಕೆ

kannadanet.com: ಗಂಗಾವತಿ ಸಮ್ಮೇಳನಾಧ್ಯಕ್ಷರಾಗಿ ಸಿಪಿಕೆ ಆಯ್ಕೆ: "ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾಸಾಗರ ಡಾ. ಸಿ.ಪಿ. ಕೃಷ್ಣಕುಮಾರ್ ಸಿಪಿಕೆ - ಒಂದು ಪರಿಚಯ "ಸಿಪಿಕೆ ಒಬ್ಬ ಬಹುಶ್...

“ನುಡಿ ಎಂಬುದು ಮುಖ್ಯವಾಗಿ ಮಾತಲ್ಲದೆ ಬರಹವಲ್ಲ” :ಡಿ.ಎನ್. ...

ಲಡಾಯಿ ಪ್ರಕಾಶನ: “ನುಡಿ ಎಂಬುದು ಮುಖ್ಯವಾಗಿ ಮಾತಲ್ಲದೆ ಬರಹವಲ್ಲ” :ಡಿ.ಎನ್. ...: ಸಂದರ್ಶನ :ಮೇಟಿ ಮಲ್ಲಿಕಾರ್ಜುನ ಕನ್ನಡ ನುಡಿ ರಚನೆಯ ಕುರಿತು ಅತ್ಯಂತ ಸೆಮಿನಲ್ ಚಿಂತನೆಗಳನ್ನು ಹುಟ್ಟು ಹಾಕಿದವರು ...

: ಯಲ್ಲಾಪುರದಲ್ಲಿ ಸಾಹಿತ್ಯ ಜಾತ್ರೆ ಸಂಭ್ರಮ...

ರೂಪ ರೂಪಗಳನು ದಾಟಿ...: ಯಲ್ಲಾಪುರದಲ್ಲಿ ಸಾಹಿತ್ಯ ಜಾತ್ರೆ ಸಂಭ್ರಮ...: ಮತ್ತೊಂದು ಸಾಹಿತ್ಯ ಜಾತ್ರೆಗೆ ಯಲ್ಲಾಪುರ ಸಜ್ಜಾಗಿದೆ. ಈಗೈದು ವರ್ಷದ ಹಿಂದೆ ನಾ.ಸು.ಭರತನಹಳ್ಳಿಯವರ ಹೊತ್ತ ಭುವನೇಶ್ವರಿಯ ಸಾರೋಟಿನಲ್ಲಿ ಈಗ ವನರಾಗ ಶರ್ಮಾ ಕುಳಿತಿದ್ದಾರ...

ಖ್ಯಾತ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ’ಸಾಹಿತ್ಯ ಸವ್ಯಸಾಚಿ...

kannadanet.com: ಖ್ಯಾತ ಸಾಹಿತಿ ಕೆ.ಟಿ. ಗಟ್ಟಿ ಅವರಿಗೆ ’ಸಾಹಿತ್ಯ ಸವ್ಯಸಾಚಿ...: ಬೆಳ್ತಂಗಡಿ: ವಿಶ್ವಗೋಳೀಕರಣದಿಂದಾಗಿ ಸಾಹಿತ್ಯಕ - ಸಾಂಸ್ಕೃತಿಕ ಬದುಕು ಹಿನ್ನೆಲೆಗೆ ಸರಿದು ಅರ್ಥ ಸಂಸ್ಕೃತಿ ಮುನ್ನೆಲೆಗೆ ಬರುತ್ತಿದೆ ಎಂದು ಮಂಗಳೂರು ಆಕಾಶವಾಣಿ ಮುಖ್...

Thursday, November 3, 2011

ಡಾ.ಧನಂಜಯ ಕುಂಬ್ಳೆಗೆ ‘ಮುದ್ದಣ ಕಾವ್ಯ’ ಪ್ರಶಸ್ತಿ

kannadanet.com: ಡಾ.ಧನಂಜಯ ಕುಂಬ್ಳೆಗೆ ‘ಮುದ್ದಣ ಕಾವ್ಯ’ ಪ್ರಶಸ್ತಿ: ಮೂಡಬಿದ್ರೆ,ಅ.29:ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ 2011ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಕವ...

Tuesday, November 1, 2011

ಜಿ. ರಾಜಶೇಖರ--- ಅಜಿಟ್ ಪ್ರಾಪ್ ವಿಮರ್ಶೆಯ ಕಟಕಟೆಯಲ್ಲಿ ಅಡಿಗರ ಕವಿತೆ

ಡಾ/ಎಮ್.ಡಿ.ವಕ್ಕುಂದರ ’-ಅಡಿಗರ ಕೋಮುವಾದಿ ಕವನ-ಮತ್ತೆ ಮೊಳಗಲಿ ಪಾಂಚಜನ್ಯ ’{ ನೋಡಿ- www.vartamaana.com                                  }ಲೇಖನಕ್ಕೆ ಜಿ. ರಾಜಶೇಖರ ಅವರು ಬರೆದಿರುವ ಪ್ರತಿಕ್ರಿಯೆ ಗೌರಿ ಲಂಕೇಶ್ ಪತ್ರಿಕೆಯಲ್ಲಿ { 9-11-2011                                      }ಪ್ರಕಟವಾಗಿದೆ.  G. Rajashekara's response to Dr. M. D. Vakkunda's article on Gopalakrishna Adiga's poem-' Matte MoLagali Panchajasnya " published ik Gowri Lankesh Patrike- 9-11-2011 .