Friday, September 13, 2013

ಒಳದಾರಿಯಲ್ಲಿದ್ದ ಕವಿ ಗ. ಸು. ಭಟ್ಟ ಬೆತ್ತಗೇರಿ -ಮಹಾದೇವ ಹಡಪದ



ಗ.ಸು.ಭಟ್ಟರು ಹೆಸರಾಂತರ ಹಾಗೆ ಫೋಸು ಕೊಡುವ ಥರದವರಲ್ಲ. ಆದರೆ ಒಬ್ಬ ಳ್ಳೆಯ ಮಾನವೀಯ ಮನಸ್ಸಿನ ಸೂಕ್ಷ್ಮ ಹೃದಯದ ಮಾಸ್ತರರಾಗಿದ್ದರು. ನಾನೊಮ್ಮೆ ಹೆಗ್ಗೋಡಿನಲ್ಲಿ ಕುಶಲೋಪರಿಗಾಗಿ ಮಾತಾಡಿಸಿದಾಗ ಅವರ ವ್ಯಕ್ತಿತ್ವದ ಕನ್ನಡಿಯಲ್ಲಿ ಜೀವಪ್ರೀತಿಯ ಹೊರತು ಮತ್ಯಾವ ಗರ್ವವೂ ಕಾಣಿಸಿರಲಿಲ್ಲ. ಮುಖ್ಯ ಹೆದ್ದಾರಿಯ ಹೊರತು ಪಡಿಸಿ ಒಳದಾರಿಗಳಲ್ಲಿ ಮಾನವತೆಯ ಸಾಧಿಸುವ ಪ್ರಯತ್ನ ಅವರದಾಗಿತ್ತು. ಈ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳೇ ವಾರಗಟ್ಟಲೇ ಬರುತ್ತಿರುತ್ತವೆ ಆದರೆ ಇಂಥ ಪ್ರತಿಭಾವಂತರ ಸಾವಿನ ಸುದ್ದಿ ಪ್ರಕಟವಾಗಲಿಲ್ಲ. ಈ ಮಲೆನಾಡು ಭಾಗದ ಅನೇಕ ಪ್ರತಿಭಾವಂತರ ಸಾವು ಈ ಕರ್ನಾಟಕಕ್ಕೆ ತಿಳಿಯುವುದು ಲೇಟಾಗಿಯೇ ಇರಬಹುದು. ಹಿಂದೆ ಸ್ನೇಹಕುಂಜದ ಕುಸುಮ ಸೊರಬ ಅವರ ಸಾವು ಸುದ್ದಿಯಾಗಲಿಲ್ಲ ಎಂಬ ಕೊರಗಿನ ಹಾಗೆ ಇದು… ಒಬ್ಬ ಒಳ್ಳೆಯ ಸಹೃದಯ ಕವಿಯನ್ನು ಕಳೆದುಕೊಂಡೆವು.
    -  ಮಹಾದೇವ ಹಡಪದ ಅವರ Face book  ನಿಂದ

No comments:

Post a Comment