ಸರ್, ಇದನ್ನು ನೋಡಿದಾಗ ನನಗೂ ಒಂದು ಘಟನೆ ನೆನಪಾಯಿತು. ನಾನು ಡಿಗ್ರೀ ಮೂರನೇ ವರ್ಷದಲ್ಲಿದ್ದೆ. ಕರ್ನಾಟಕದ ಸರ್ಕಾರೀ ಇಲಾಖೆಯೊಂದು ಪ್ರಕಟಿಸುವ ಮಾಸಪತ್ರಿಕೆಯ ಸಂಪಾದಕೀಯ ಓದುತ್ತಿದ್ದೆ. ಇದನ್ನು ಮೊದಲೇ ಎಲ್ಲೋ ಓದಿದಂತಿದೆಯಲ್ಲ ಅನಿಸಿತು. ಸರಿಯಾಗಿ ನೆನಪಿಸಿಕೊಂಡಾಗ, "ಹೌದಲ್ಲ! ಇದು ನಾನೇ ಬರೆದ ಲೇಖನ!" ಎಂದು ಗೊತ್ತಾಯಿತು. ನಾನು ಅದರ ಹಿಂದಿನ ವರ್ಷ ಆಗ ಪ್ರಕಟವಾಗುತ್ತಿದ್ದ 'ಜನವಾಹಿನಿ'ಯಲ್ಲಿ 'ಯುವದಿನ'ದ ಪ್ರಯುಕ್ತ ಬರೆದ ಲೇಖನದ ಡಿಟ್ಟೋ ನಕಲು ಆಗಿತ್ತದು. ಇಲ್ಲಿ ನೋಡಿದರೆ ಅಂದು ಒಂದೂ ವಾಕ್ಯ ಬಿಡದೆ ಸಂಪಾದಕೀಯವಾಗಿಬಿಟ್ಟಿದೆ! ಕೆಳಗೆ ಐಎಎಸ್ ಅಧಿಕಾರಿಯೊಬ್ಬರ ಹೆಸರು, ಸಂಪಾದಕರು, ಎಂದಿತ್ತು! ನಾನು ಅದರದ್ದೊಂದು ಫೋಟೋಕಾಪಿ ತೆಗೆದುಕೊಂಡು ಹೋಗಿ ನನ್ನ ಅಧ್ಯಾಪಕರಿಗೆ ತೋರಿಸಿದೆ. ಸರ್, ಇದಕ್ಕೇನಾದರೂ ಮಾಡಬಹುದಾ ಎಂದು ಅಮಾಯಕನಾಗಿ ಕೇಳಿದೆ. ಅವರು ಅದನ್ನು ತಮ್ಮ ಬಳಿ ಇಟ್ಟುಕೊಂಡರು. ಆಮೇಲೆ ಬಹುಶಃ ಏನೂ ಆಗಲಿಲ್ಲ. ಸರ್ಕಾರೀ ಇಲಾಖೆಯ ಪತ್ರಿಕೆ...ಇದೆಲ್ಲ ಯಾಕೆ ಎಂದು ಸುಮ್ಮನಾದರೋ ಏನೋ? ನಾನಿನ್ನೂ ಡಿಗ್ರೀ ವಿದ್ಯಾರ್ಥಿ. ಅದನ್ನು ಪ್ರಶ್ನಿಸಿ ಇಲಾಖೆಗಾದರೂ ಒಂದು ಪತ್ರಬರೆಯುವ ಧೈರ್ಯವನ್ನೂ ನಾನೇಕೋ ಆಗ ಮಾಡಲಿಲ್ಲ. ಆಮೇಲೆ ಅದು ಮರೆತೂಹೋಯಿತು. ಆ ಪತ್ರಿಕೆಯಲ್ಲಿ ಬಂದ ಸಂಪಾದಕೀಯದ ಪ್ರತಿಯೂ ಈಗ ನನ್ನಲ್ಲಿಲ್ಲ. ಬಹುಶಃ ಮೇಸ್ಟ್ರ ಡ್ರಾಯರ್ ನಲ್ಲಿರಬೇಕು. ಹೀಗಾಗಿ ನಾನಿಲ್ಲಿ ಹೇಳಿರುವುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆ ಇಲ್ಲ! ಜನವಾಹಿನಿಯಲ್ಲಿ ಬಂದಿರುವ ಲೇಖನವಂತೂ ಇದೆ... "ಯುವಜನತೆ, ಧ್ವಂಧ್ವಗಳು ಮತ್ತು ವಾಸ್ತವ" ಅಂತ ಬರೆಹದ ಶೀರ್ಷಿಕೆ. ಸುಮ್ಮನೇ ನಿಮ್ಮ ಪೋಸ್ಟ್ ನೋಡಿದಾಗ ಈ ಘಟನೆ ನೆನಪಾಯಿತು :-)

ReplyDelete