ಡಾ / ಬಿ. ಎನ್. ಸುಮಿತ್ರಾ ಬಾಯಿ- ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ

ಡಾ/ ಬಿ. ಎನ್. ಸುಮಿತ್ರಾ ಬಾಯಿ -
ಸ್ತ್ರೀ ದರ್ಪಣದಲ್ಲಿ ನಾಟ್ಯಶಾಸ್ತ್ರ
ಪ್ರಕಾಶಕರು-
ಅಹನ್ನಿಶಿ ಪ್ರಕಾಶನ,
ಕಂತ್ರಿ ಕ್ಲಬ್ ಎದುರು ,
ವಿದ್ಯಾನಗರ ,ಶಿವಮೊಗ್ಗ -577203

ಪಾತ್ರಧಾರಿಗಳು- ಸೂತ್ರಧಾರಿಗಳು -- ಶ್ರೀನಿವಾಸ ಕಾರ್ಕಳ



ಪಾತ್ರಧಾರಿಗಳು ಬಳ್ಳಾರಿ ಜೈಲಿನ ಹೊಸ ಅತಿಥಿಗಳಾಗಿದ್ದಾರೆ
ಸೂತ್ರಧಾರಿಗಳು?
_____________________________________
ರಾಜ್ಯದ ಕರಾವಳಿ ಭಾಗದಲ್ಲಿ ಮತೀಯ ನೆಲೆಯಲ್ಲಿ ಗೂಂಡಾಗಿರಿ ಮಾಡಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಬಹುತೇಕ ಮಂದಿ ಆರ್ಥಿಕವಾಗಿ ದುರ್ಬಲವರ್ಗಗಳಿಗೆ ಸೇರಿದವರು, ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರದವರು. ಅವರು ಹೆಚ್ಚು ಓದಿದವರಲ್ಲ. ಉತ್ತಮ ಉದ್ಯೋಗಗಳಲ್ಲಿರುವವರಲ್ಲ. 20 - 30 ರ ಆಚೀಚಿನ ಹರೆಯದವರು.
ಸಮಾಜೋತ್ಸವ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿ ಅಲ್ಲಿ ಕೋಮುಪ್ರಚೋದನಾತ್ಮಕ ಭಾಷಣ ಮಾಡಿ ಈ ಅಮಾಯಕ ಯುವಜನತೆಯ ತಲೆಗೆ ಕೋಮುವಿಷ ತುಂಬಲಾಗುತ್ತದೆ; ಅನ್ಯಮತದ್ವೇಷದ ಉಪದೇಶ ನೀಡಿ, ಧರ್ಮರಕ್ಷಣೆಯ ಧೀಕ್ಷೆ ಕೊಡಲಾಗುತ್ತದೆ. ದೇಶ, ಸಂಸ್ಕೃತಿ, ಧರ್ಮ ಎಂದರೆ ಏನೆಂದೇ ಅರಿಯದ ಈ ಮಂದಿ ರಸ್ತೆಯಲ್ಲಿ ಪುಂಡಾಟಿಕೆ, ಗೂಂಡಾಗಿರಿ ನಡೆಸುತ್ತಾ ತಾವು ಮಾಡುತ್ತಿರುವುದು ಧರ್ಮ, ಸಂಸ್ಕೃತಿ ರಕ್ಷಣೆಯ ಮಹಾ ಘನಕಾರ್ಯ ಎಂದುಕೊಂಡಿರುತ್ತಾರೆ.
ಈಗ ನೋಡಿ, ಅಂಥದ್ದೇ ಹಿನ್ನೆಲೆಯುಳ್ಳ 13 ಮಂದಿ ಪಾತ್ರಧಾರಿಗಳು ಪೊಲೀಸರ ವಶವಾಗಿ ಬಳ್ಳಾರಿ ಜೈಲಿನ ಹೊಸ ಅತಿಥಿಗಳಾಗಿ ಹೋಗಿದ್ದಾರೆ. ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆ, ದೇಶ ರಕ್ಷಣೆ ಎಂದೆಲ್ಲ ಅವರ ತಲೆಕೆಡಿಸಿದ ಸೂತ್ರಧಾರಿಗಳು ಆರಾಮವಾಗಿ ಊರಿನಲ್ಲಿದ್ದಾರೆ (ಅವರು ಮುಂದಿನ ಕಾರ್ಯಕ್ರಮಕ್ಕೆ ಯೋಜನೆ ರೂಪಿಸುತ್ತಿರಬಹುದು). ಸೂತ್ರಧಾರಿಗಳನ್ನು ‘ಸರಿಮಾಡದೆ’, ಕೇವಲ ಪಾತ್ರಧಾರಿಗಳನ್ನು ದಂಡಿಸುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗದು ಎನ್ನುವುದನ್ನು ಅರಿತುಕೊಳ್ಳಲು ವಿಶೇಷ ಬುದ್ಧಿಮತ್ತೆಯೇನೂ ಬೇಕಾಗಲಾರದು.

ಕನ್ನಡ ಕಟ್ಟುವ ಬಗೆ -ಜಿ.ಪಿ.ಬಸವರಾಜು

ಲಡಾಯಿ ಪ್ರಕಾಶನ: ಕನ್ನಡ ಕಟ್ಟುವ ಬಗೆ: ಜಿ.ಪಿ.ಬಸವರಾಜು  ತೀ.ನಂ.ಶ್ರೀ ಅವರ ’ಭಾರತೀಯ ಕಾವ್ಯ ಮೀಮಾಂಸೆ’ಗೆ (೧೯೫೩ರಲ್ಲಿ) ಮುನ್ನುಡಿಯನ್ನು ಬರೆದ ಕುವೆಂಪು ಅವರು ಒಂದು ಮಾತನ್ನು ಹೇಳಿದರು: ಕನ್ನಡ ಸಾ...

Tuesday, August 18, 2015

ಎಂದೂ ‘ತೀರಿ’ ಹೋಗದ ಚೇತನಗಳು - ನಟರಾಜ ಹುಳಿಯಾರ್

ಎಂದೂ ‘ತೀರಿ’ ಹೋಗದ ಚೇತನಗಳು | ಪ್ರಜಾವಾಣಿ: "ತೀರಿಕೊಂಡವರ ಅಂತಸ್ಸತ್ವ ಬದುಕಿರುವವರ ಬೆನ್ನಹುರಿಯಲ್ಲಿ ಬೆಳೆಯುತ್ತದೆ’ "

'via Blog this'
ಕಿ.ರಂ. ನಾಗರಾಜ್ - ಡಿ. ಆರ್. ನಾಗರಾಜ್