Thursday, August 27, 2015

ಪಾತ್ರಧಾರಿಗಳು- ಸೂತ್ರಧಾರಿಗಳು -- ಶ್ರೀನಿವಾಸ ಕಾರ್ಕಳ



ಪಾತ್ರಧಾರಿಗಳು ಬಳ್ಳಾರಿ ಜೈಲಿನ ಹೊಸ ಅತಿಥಿಗಳಾಗಿದ್ದಾರೆ
ಸೂತ್ರಧಾರಿಗಳು?
_____________________________________
ರಾಜ್ಯದ ಕರಾವಳಿ ಭಾಗದಲ್ಲಿ ಮತೀಯ ನೆಲೆಯಲ್ಲಿ ಗೂಂಡಾಗಿರಿ ಮಾಡಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಬಹುತೇಕ ಮಂದಿ ಆರ್ಥಿಕವಾಗಿ ದುರ್ಬಲವರ್ಗಗಳಿಗೆ ಸೇರಿದವರು, ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರದವರು. ಅವರು ಹೆಚ್ಚು ಓದಿದವರಲ್ಲ. ಉತ್ತಮ ಉದ್ಯೋಗಗಳಲ್ಲಿರುವವರಲ್ಲ. 20 - 30 ರ ಆಚೀಚಿನ ಹರೆಯದವರು.
ಸಮಾಜೋತ್ಸವ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿ ಅಲ್ಲಿ ಕೋಮುಪ್ರಚೋದನಾತ್ಮಕ ಭಾಷಣ ಮಾಡಿ ಈ ಅಮಾಯಕ ಯುವಜನತೆಯ ತಲೆಗೆ ಕೋಮುವಿಷ ತುಂಬಲಾಗುತ್ತದೆ; ಅನ್ಯಮತದ್ವೇಷದ ಉಪದೇಶ ನೀಡಿ, ಧರ್ಮರಕ್ಷಣೆಯ ಧೀಕ್ಷೆ ಕೊಡಲಾಗುತ್ತದೆ. ದೇಶ, ಸಂಸ್ಕೃತಿ, ಧರ್ಮ ಎಂದರೆ ಏನೆಂದೇ ಅರಿಯದ ಈ ಮಂದಿ ರಸ್ತೆಯಲ್ಲಿ ಪುಂಡಾಟಿಕೆ, ಗೂಂಡಾಗಿರಿ ನಡೆಸುತ್ತಾ ತಾವು ಮಾಡುತ್ತಿರುವುದು ಧರ್ಮ, ಸಂಸ್ಕೃತಿ ರಕ್ಷಣೆಯ ಮಹಾ ಘನಕಾರ್ಯ ಎಂದುಕೊಂಡಿರುತ್ತಾರೆ.
ಈಗ ನೋಡಿ, ಅಂಥದ್ದೇ ಹಿನ್ನೆಲೆಯುಳ್ಳ 13 ಮಂದಿ ಪಾತ್ರಧಾರಿಗಳು ಪೊಲೀಸರ ವಶವಾಗಿ ಬಳ್ಳಾರಿ ಜೈಲಿನ ಹೊಸ ಅತಿಥಿಗಳಾಗಿ ಹೋಗಿದ್ದಾರೆ. ಧರ್ಮ ರಕ್ಷಣೆ, ಸಂಸ್ಕೃತಿ ರಕ್ಷಣೆ, ದೇಶ ರಕ್ಷಣೆ ಎಂದೆಲ್ಲ ಅವರ ತಲೆಕೆಡಿಸಿದ ಸೂತ್ರಧಾರಿಗಳು ಆರಾಮವಾಗಿ ಊರಿನಲ್ಲಿದ್ದಾರೆ (ಅವರು ಮುಂದಿನ ಕಾರ್ಯಕ್ರಮಕ್ಕೆ ಯೋಜನೆ ರೂಪಿಸುತ್ತಿರಬಹುದು). ಸೂತ್ರಧಾರಿಗಳನ್ನು ‘ಸರಿಮಾಡದೆ’, ಕೇವಲ ಪಾತ್ರಧಾರಿಗಳನ್ನು ದಂಡಿಸುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗದು ಎನ್ನುವುದನ್ನು ಅರಿತುಕೊಳ್ಳಲು ವಿಶೇಷ ಬುದ್ಧಿಮತ್ತೆಯೇನೂ ಬೇಕಾಗಲಾರದು.

No comments:

Post a Comment