ಯಾರ ಬಳಿ ದೂರಲಿ ಕೃಷ್ಣ ನಿನ್ನ ನಾಮ ಜಪಿಸುವ ನಾಲಿಗೆಯ ಕುರಿತು ನಿನ್ನ ಕಾಣ ಬಯಸುತಿರೋ ಕಂಗಳ ಕುರಿತು ಉತ್ತರಿಸದ ನಿನ್ನ ಮುಂದೆ ಪ್ರಶ್ನೆಗಳನೆ ಚೆಲ್ಲುವವಳು ನಾನು ‘ಹುಚ್ಚಿ’ ಎಂದೆಂಬ ಜನಗಳ ಕುರಿತು ಯಾರ ಬಳಿ ದೂರಲಿ ಕೃಷ್ಣ ನೀ ವರಿಸಿದ ಹೆಂಗಳ ಕುರಿತು ಸಣ್ಣ ಮುನಿಸಿದೆ ಕೃಷ್ಣ ನನ್ನೊಳಗಿನ ಅಸೂಯೆಯ ಯಾರ ಬಳಿ ದೂರಲಿ ಹೇಳು? ನಿನಗಾಗಿ ಕಾಯುತಿರುವ ಪುಟ್ಟ ರಾಧೆ ನಾನು ನನ್ನ ಕನಸುಗಳ ಕುರಿತು ಯಾರ ಬಳಿ ದೂರೆನು ನಾನು ನೀ ಬರದ ದಾರಿಯಲೆ ವಯಸ ಕಳೆಯಬೇಕೆಂದಿರುವೆ ನೀ ಬರುವ ಭರವಸೆಯ ಕುರಿತು ಯಾರ ಬಳಿ ದೂರಬೇಕು ಹೇಳು?

No comments:
Post a Comment