Monday, October 15, 2018

ಪಾರ್ವತೀಶ ಬಿಳಿದಾಳೆ - ಶೂದ್ರ ಶ್ರೀನಿವಾಸರ ‘ಯಾತ್ರೆ’ ಕಾದಂಬರಿ ಆಶಯಗಳದ್ದೇ ಮೇಲುಗೈ

ಶೂದ್ರ ಶ್ರೀನಿವಾಸರ ‘ಯಾತ್ರೆ’ ಕಾದಂಬರಿ ಆಶಯಗಳದ್ದೇ ಮೇಲುಗೈ | Vartha Bharati- ವಾರ್ತಾ ಭಾರತಿ: ಕನ್ನಡದ ಸಾಂಸ್ಕೃತಿಕ ಸಮುದ್ರಕ್ಕೆ ಹರಿದು ಬಂದು ಸೇರುತ್ತಿರುವ ಅಸಂಖ್ಯ ಜಲಧಾರೆಗಳಲ್ಲಿ ಶೂದ್ರ ಶ್ರೀನಿವಾಸರೆಂಬ ತಣ್ಣನೆಯ ಸಿಹಿನೀರಿನ ಹರಿವೂ ಒಂದು. ‘ಯಾತ್ರೆ’ ಶೂದ್ರ ಶ್ರೀನಿವಾಸರ ಹೊಸ ಕಾದಂಬರಿಯಾಗಿದೆ. ಲೇಖಕರೇ ಹೇಳಿಕೊಂಡಿರುವಂತೆ ಕಳೆದ ನಲವತ್ತು ವರ್ಷಗಳಿಂದ ಅವರ ಮನಸ್ಸಿನಲ್ಲಿದ್ದ ವಸ್ತುವೊಂದು ಈಗ ಕಾದಂಬರಿಯಾಗಿ ಅಭಿವ್ಯಕ್ತಗೊಂಡಿದೆ. ಕಳೆದ ವರ್ಷ ‘ಆ ದಿನ’ ಹೆಸರಿನ ಶೂದ್ರರ ಇನ್ನೊಂದು ಕಾದಂಬರಿಯೂ ಪ್ರಕಟಗೊಂಡಿರುವುದು ಆಸಕ್ತಿದಾಯಕ ಸಂಗತಿಯಾಗಿದೆ.

No comments:

Post a Comment