Wednesday, March 6, 2013

ಇಂಗ್ಲಿಷ್ ಸಾಹಿತ್ಯವೆಂಬ ನೇಣು ಹಗ್ಗ

ಎಚ್. ಎಸ್ ರಾಘವೇಂದ್ರ ರಾವ್ ಅನುವಾದಿಸಿರುವ  ’ಕಪ್ಪು ಕವಿತೆ - ಆಫ್ರಿಕನ್ ಕವಿತೆಗಳು ' { ಅಭಿನವ ಪ್ರಕಾಶನ-2013 } ಪುಸ್ತಕದಲ್ಲಿರುವ ಮಲಾವಿ ದೇಶದ ಫೆಲಿಕ್ಸ್ ಎಂಥಲಿ {Felix Mnthali }  ಕವಿಯ ’ ಇಂಗ್ಲಿಷ್ ಸಾಹಿತ್ಯವೆಂಬ ನೇಣು ಹಗ್ಗ ’ ಕವದ ಸಾಲುಗಳಿವು -
        " ನನ್ನ ಸೋದರಿ,
           ಇಂಗ್ಲಿಷ್ ಸಾಹಿತ್ಯ ಒಂದು ಕೆಟ್ಟ ಜೋಕ್ ಮಾತ್ರವಲ್ಲ
            ಅದು ಪರದೇಶೀ ಆಕ್ರಮಣದ, ವಿಜಯದ
             ಹೃದಯ ಕೇಂದ್ರ.
              ಹೌದು.
               ಜೇನ್ ಆಸ್ಟಿನ್ ಳ ಕಾದಂಬರಿಗಳನ್ನು ಕೇಂದ್ರದಲ್ಲಿಟ್ಟುಕೊಂಡು
               ಮಕರೇರಿಯಲ್ಲಿ, ಇಬಾದನ್ ನಲ್ಲಿ
                ದಕಾರ್ ನಲ್ಲಿ , ಪೋರ್ಟ್ ಹೇರ್ ನಲ್ಲಿ
                ಪ್ರಶ್ನೆಗಳನ್ನು ಕೇಳುವುದು ಹೇಗೆ ?
                  ಈ ಪ್ರಶ್ನೆಗಳಿಗೆ ಉತ್ತರ ಬರೆಯುವುದಾದರೂ ಹೇಗೆ ?
 ’ ಕಪ್ಪು ಕವಿತೆ’ ಆಫ್ರಿಕನ್ ಕಾವ್ದದ ಒಡಲಾಳದ  ನೋವುಗಳನ್ನು , ಕನಸುಗಳನ್ನು ಕನ್ನಡಿಗರಿಗೆ ಪರಿಚಯಿಸುವ, ಹೊಸ ತಲೆಮಾರಿನ ಕವಿಗಳಿಗೆ ಪ್ರೇರಣೆ ನೀಡಬಲ್ಲ ಸಂಕಲನ,
 - ಮುರಳೀಧರ ಉಪಾಧ್ಯ
KAPPU KAVITHE
Poems from Africa
Translated into KANNADA
by H. S . RAGHAVENDRA RAO
Published by
ABHINAVA, Bengaluru
Email-abhinavaravi@gmail.com






No comments:

Post a Comment