stat Counter



Monday, April 8, 2013

ಕೃಷ್ಣಕುಮಾರ ಕಲ್ಲೂರ ಅವರ ಗುಬ್ಬಿಗಳ ಸಂಸಾರ


          ಕೃಷ್ಣಕುಮಾರ ಕಲ್ಲೂರ ಅವರ ಗುಬ್ಬಿಗಳ ಸಂಸಾರ

 ಧಾರವಾಡದಲ್ಲಿ ಹುಟ್ಟಿ ಬೆಳೆದ ಕೃಷ್ಣಕುಮಾರ ಕಲ್ಲೂರ(1909-1982) ಕನ್ನಡದಲ್ಲಿ ಸಣ್ಣಕತೆಗಳನ್ನು ಬರೆದ ಮೊದಲಿಗರಲ್ಲಿ ಒಬ್ಬರು. ಕೆಲವು ನಾಟಕಗಳನ್ನು ಇವರು ಬರೆದಿರುವರಾದರೂ ಕತೆಗಾರರಾಗಿ0ೆು ಇವರ ಸಿದ್ಧಿ ಮತ್ತು ಪ್ರಸಿದ್ಧಿ. ಮಂಗನ ಮೆರವಣಿಗೆ(1930), ಬಿಸಿಲುಗುದುರೆ (1931) ಮತ್ತು ಜೀವನ(1934) ಎಂಬ ಮೂರು ಕಥಾಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ. ತಮ್ಮ 0ೌವನಕಾಲದಲ್ಲಿ ಸಮೃದ್ಧವಾಗಿ ಕಥಾರಚನೆ ಮಾಡಿದ್ದ ಕಲ್ಲೂರರು  ಆನಂತರ ಕತೆಗಳನ್ನು ಬರೆ0ುಲಿಲ್ಲ ಎಂಬುದು ಆಶ್ಚ0ರ್ು ಹುಟ್ಟಿಸುವಂತಿದೆ. ಜೀವನ ಸಂಕಲನದಲ್ಲಿ ಸೇರಿರುವ ಅವರ ಗುಬ್ಬಿಗಳ ಸಂಸಾರ ತನ್ನ ಕಾವ್ಯಮ0ುತೆಯಿಂದಲೂ ಸಾಂಕೇತಿಕತೆಯಿಂದಲೂ ಗಮನ ಸೆಳೆ0ುುತ್ತದೆ. ಅದು ರಚಿತವಾದ ಕಾಲವನ್ನು(1931) ಗಮನಿಸಿದರೆ ಲೇಖಕರ ಪ್ರ0ೋಗಶೀಲತೆ0ುೂ ಎದ್ದುಕಾಣುವಂತಿದೆ. ಕತೆ0ುು ಶಿರೂರಿನಲ್ಲಿ ನಡೆ0ುುತ್ತದೆ. ಭಾಷೆ ಆಧುನಿಕ ಕಾಲದ್ದು. ಇಷ್ಟಲ್ಲದೆ ಈ ಕತೆಗೆ ನಿದರ್ಿಷ್ಟ ದೇಶ ಕಾಲಗಳ ಆವರಣವಿಲ್ಲ. ಹೀಗಾಗಿ ಒಂದು ನಿದರ್ಿಷ್ಟ ಘಟನೆ-ಸನ್ನಿವೇಶವನ್ನು  ಐತಿಹಾಸಿಕ ದೇಶ ಕಾಲಗಳಿಗೆ ಕಟ್ಟಿಹಾಕದೆ ಅದನ್ನು ಕಾಲಾತೀತ ದೇಶಾತೀತ ನೆಲೆಗೆ ಉನ್ನತೀಕರಿಸುವ ಮಹತ್ವಾಕಾಂಕ್ಷೆ ಅದರ ರಾಚನಿಕ ಸ್ವರೂಪದಲ್ಲಿ0ೆು ಸೂಚಿತವಾಗುತ್ತದೆ.  ಅಷ್ಟೇ ಅಲ್ಲ, ಮನುಷ್ಯಾನುಭವವನ್ನು ಇತರ ಜೀವಿಗಳ ಅನುಭವಗಳ ಒಟ್ಟಂದದಲ್ಲಿ ನೋಡಬೇಕೆಂಬ ಇಚ್ಚೆ0ುನ್ನೂ ಲೇಖಕರು ಕತೆ0ು ಪ್ರಾರಂಭದಲ್ಲಿ0ೆು ವ್ಯಕ್ತಪಡಿಸುತ್ತಾರೆ: ಸಾಹಿತ್ಯವು ಜನಜೀವನದ ಪಡಿನೆಳಲೆಂದು ತಿಳಿದವರು ಹೇಳುವುದುಂಟು. ಈ ಮಾತನ್ನೇ ಇನ್ನೂ ಸ್ವಲ್ಪ ಹಿಂಜಿನೋಡಿದರೆ, ಇಡೀ ಜೀವನವೇ ಸಾಹಿತ್ಯಕ್ಕೆ ಮೂಲಬಿಂಬವಾಗಬಹುದೆಂಬುದು ತೋರುವದು. ಮಾನವ ಜೀವನದಲ್ಲಿ ಹೇಗೋ ಹಾಗೆ0ೆು ಇನ್ನುಳಿದ ಪ್ರಾಣಿಕೋಟಿಗಳ ಜೀವನದಲ್ಲಿ0ುೂ ಒಂದೊಂದು ಬಗೆ0ು ರಸಸಂವಿಧಾನವಿದೆ. ಅದರೆ ಮಾನವನು ತನ್ನ ಸಂಸಾರದ ಸುಖದುಃಖಗಳ ಸಂಕೋಲೆ0ುಲ್ಲಿ ಸಿಕ್ಕಿಬಿದ್ದು ಅದರಿಂದ ಪಾರುಗಾಣದೆ ನರಳುತ್ತಿರುವಾಗ, ಆತನಿಗೆ ತನ್ನ ಜೀವನದ  ರಸನಿಮಿಷಗಳ ಅನಂದವನ್ನೇ ಅನುಭವಿಸುವುದು ಆಗದು. ಅಂತಹದರಲ್ಲಿ ಆತ ಇನ್ನುಳಿದ ಜೀವಿಗಳ ಸುಖದುಃಖಗಳಿಗಾಗಿ ಹಿಗ್ಗಿ-ಕುಗ್ಗುವ ಗೋಜಿಗೆ ಹೋಗಲಾರ. ಆದರೆ ಸಂಸಾರದ ಅನಂತ 0ಾತನೆಗಳಿಂದ ನೊಂದು , ತಾಪ ಪರಿಪೂತರಾದ ರಸಜೀವಿಗಳಿಗೆ ವಿಶ್ವವೆಲ್ಲವೂ ತಮ್ಮದೇ  ಒಂದು ಬಳಗವಾಗಿ ತೋರದಿರದು. ಅಂಥವರಿಗೆ ವಿಶ್ವಶಕ್ತಿ0ು ಕೈತಾಲದೊಂದಿಗೆ ಕುಣಿ0ುುವ ಚಿಕ್ಕೆ-ಚಂದ್ರಮರಿಂದ ಹುಲ್ಲು-ಹಣಜಿ0ುವರೆಗೆ ಈ ಸೃಷ್ಟಿ0ು ಅಣುರೇಣುಗಳಲ್ಲೆಲ್ಲಿ0ುೂ ಮನುಷ್ಯ ಜೀವನದಷ್ಟೇ ಮಹತ್ತರವಾದ ಒಂದೊಂದು ಚರಿತ್ರಾಂಶವು ಕಂಡುಬರುವದು. 
     ಈ ಕತೆ0ುಲ್ಲಿ ಓರ್ವ ಉತ್ತಮಪುರುಷ ನಿರೂಪಕನಿದ್ದಾನೆ. ಅವನ ಮದುವೆ0ು ಸಂದರ್ಭದಲ್ಲಿ ಅವನನ್ನೂ ಅವನ ಬಳಗವನ್ನೂ ಒಂದು ವಾಡೆ ಅಥವಾ ವಠಾರ ಎಂದೆನ್ನಿಸುವ ಹಳೆ0ು ಆದರೆ ದೊಡ್ಡಮನೆ0ೊಂದರಲ್ಲಿ ಇಳಿಸಲಾಗಿತ್ತು.  ಆ ಮನೆ0ು ವಿವರಗಳು ಲೇಖಕರು  ಸೂಚಿಸಬ0ುಸುವ  ಲೋಕವ್ಯಾಪಾರಕ್ಕೆ ಪೂರಕವಾಗಿವೆ: ಮನೆ ಬಹಳ ಹಳೆ0ು ಕಾಲದ್ದು. ಹಳೆ0ುದಾಗಿ ಇಲ್ಲಣ ಹತ್ತಿ ಕಪ್ಪುಗಟ್ಟಿದ ತೊಲೆಜಂತುಗಳು, ಒಬ್ಬೊಬ್ಬರ ತೆಕ್ಕೆಗೂ ಅಮರದಂಥ ಕಂಬಗಳು, ಮಾರು ಮಾರು ದಪ್ಪದಗೋಡೆಗಳು, ಗದ್ದು-ಮೊಳದಾಳದ ಗೂಡುಗಳು, ಜೇಡರ ಹುಳುಗಳ ಜಾಳಿಗೆಗಳಿಂದೊಪ್ಪುವ ಮೂಲೆಗಳು, ಮುಸುಕುಗತ್ತಲೆ0ು ಕೋಣೆಗಳು, ಇವೆಲ್ಲ ಆ ಮನೆಗೆ ಒಂದು ಬಗೆ0ು ಭೀಕರತೆ0ುನ್ನುಂಟು ಮಾಡಿದ್ದವು. ಅಲ್ಲದೆ ಭವ್ಯವಾದ ಅಂಗಳ, ವಿಶಾಲವಾದ ಹಿತ್ತಲ, ಆ ಹಿತ್ತಲ ತುಂಬಾ ತರಗೆಲೆಗಳು ತಳಿಹಾಕುವ ಒಂದೆರಡು ಹುಣಿಸೆಬೇವಿನ ಮರಗಳು, ಹಿತ್ತಲ ಗೋಡೆ0ಾಚೆಗಿನ ಅಗಳತ, ಅದಕ್ಕೆ ಹೊಂದಿ ಅರ್ಧ ಹಾಳಾಗಿ ನಿಂತ ಹೂಡೆ-ಇವುಗಳೆಲ್ಲ ಆ ಮನೆ0ು ಭೀಷಣತೆಗೆ ರಂಗು ಹೊಯಿದಂತೆ ಇದ್ದುವು. ಇರುಳು ಮಲಗಿಕೊಂಡರೆ, ಜಂತೆಗಳಲ್ಲೋಡಾಡುವ ಇಲಿಗಳ ಕಿರಿಚಾಟದಿಂದಲೂ, ಅವುಗಳ ಓಡಾಟಕ್ಕೆ ಉದುರುವ ಮಾಳಿಗೆ0ು ಮಣ್ಣಿನ ಸಪ್ಪಳದಿಂದಲೂ, ಮೂಲೆಮೂಲೆಗಳಲ್ಲೆಲ್ಲ ಮನೆಮಾಡಿಕೊಂಡಿದ್ದ ಹಲ್ಲಿಗಳ ಲೊಚಲೊಚ ಶಬ್ದದಿಂದಲೂ, ಹಿತ್ತಲ ಗಿಡಗಳಲ್ಲಿ ನೆಲೆನಿಂತ ತೊಗಲಬಾವಲಿಗಳ ಚೀರಾಟದಿಂದಲೂ, ಅಲ್ಲಿ ಇದ್ದಷ್ಟು ದಿನವೆಲ್ಲ ನಿದ್ದೆಗೇಡಾದ ನಮ್ಮೆದೆಗಳು ಬರೀ ಡವಡವಿಸುತ್ತಿರುವದೇ! ಇಂಥ ರೌದ್ರನಿವಾಸವು ನಮಗೆ ಮದುವೆ0ು ಮನೆ0ಾಗಿತ್ತು!. ಹುಟ್ಟು-ಸಾವು, ಸೃಷ್ಟಿ-ನಾಶಗಳ ದ್ವಂದ್ವಲ0ುದಲ್ಲಿ ಬದುಕು ಸಾಗುವ ಪರಿ0ುನ್ನು ಕಂಡರಿಸ ಬ0ುಸುವ ಲೇಖಕರ ಪ್ರ0ುತ್ನಕ್ಕೆ ಮೇಲಿನ ಪ್ರತಿಮೆ ಉಚಿತವಾಗಿ ಒದಗಿ ಬಂದಿದೆ. ಮನೆ0ುು ಭವ್ಯ-ಭೀಷಣವಾಗಿದೆ. ಅಲ್ಲಿ ಹಲವು ಜೀವಿಗಳ ಚಲನಶೀಲತೆ ಅನುಭವಕ್ಕೆ ಬರುವಂತೆ ಆ ಮನೆ0ುು ನಿಧಾನವಾಗಿ ಉದುರುತ್ತಿರುವ ಚಿತ್ರವೂ ಕಣ್ಣಮುಂದೆ ಬರುತ್ತದೆ. ಆ ಮನೆಗೆ ತನ್ನದೇ ಆದ ಸೌಂದ0ರ್ುವಿರುವಂತೆ ಒಂದು ಬಗೆ0ು ಭೀಕರತೆ0ುೂ ಅದನ್ನು ಆವರಿಸಿಕೊಂಡಿದೆ. ಆ ಮನೆ ಕುಸಿ0ುುತ್ತಿರುವಂತೆ ನಿರೂಪಕನ ಮದುವೆ0ು ಮೂಲಕ ಮತ್ತೊಂದು ಹೊಸಮನೆ ಸೃಷ್ಟಿ0ಾಗುವ ಸೂಚನೆ0ುೂ ಸ್ಪಷ್ಟವಾಗಿ0ೆು ಇದೆ. ನಾಶದ ವಿವರಗಳು ಢಾಳಾಗಿ ವಣರ್ಿತವಾಗಿರುವಂತೆ ಮದುವೆ0ು ಸಂಭ್ರಮವೂ ಅವನ್ನು ಹಿಂಬಾಲಿಸುತ್ತಿದೆ. ಹೀಗೆ ಲೋಕವ್ಯಾಪಾರವನ್ನು ಅದರ ತದ್ವಿರುದ್ಧ ನೆಲೆಗಳ ಒಟ್ಟಂದದಲ್ಲಿ ಇಡಿ0ಾಗಿ ಹಿಡಿ0ುಬ0ುಸುವ ಹವಣಿಕೆ ಇಲ್ಲಿ ಕಾಣುತ್ತದೆ.
       ಕತೆ0ುು ಮುಂದುವರೆದಂತೆ ಈ ಆಶ0ುವು ಮತ್ತೂ ಒಂದು ವಿವರದಿಂದ ಮತ್ತಷ್ಟು ಸುಪುಷ್ಟವಾಗುತ್ತದೆ. ನಿರೂಪಕನು ತನ್ನ ಮದುವೆಗೆ ಸಜ್ಜಾಗುತ್ತಿರುವಂತೆ ಆ ಮನೆ0ು ಮೇಲುಪ್ಪರಿಗೆ ಚೆಟ್ಟಿನ ಒಂದು ಬಿರುಕಿನಲ್ಲಿ ಅದೇ ತಾನಾಗಿ ಪ್ರಾರಂಭವಾಗಿರುವ ಗುಬ್ಬಿಗಳ ಸಂಸಾರವೊಂದು ನಿರೂಪಕನ ಕಣ್ಣಿಗೆ ಕಾಣುತ್ತದೆ: ಆ ಮನೆಗೆ ಹೋದ ದಿನವೇ ಆ ಗುಬ್ಬಿಗಳ ಸಂಸಾರವು ನನ್ನ ಮನವನ್ನೆಳೆಯಿತು. ನನ್ನ ಬಾಳುವೆ0ು ಗಾಳಿಗೋಪುರಕ್ಕೆ ಕಳಸವಿಡುತ್ತಲಿದ್ದ ನನಗೆ ಆಗ ಎಲ್ಲ ಬಗೆ0ು ಸಂಸಾರವೂ ಒಂದೊಂದು ಸೊಬಗಿನ ಬೀಡೆಂಬಂತೆ ಎನಿಸುತ್ತಿದ್ದಿತು. ಆ ಗುಬ್ಬಿಗಳ ಸಂಸಾರವೂ ನನ್ನ ಹರೆ0ುದ ಸವಿಗನಸುಗಳಿಗೆ ಬಣ್ಣ ಬರೆ0ುುವಂತೆ ತೋರಲು ನಾನು ಅವುಗಳ ಕಾ0ರ್ುಕಲಾಪಗಳನ್ನು ಕಣ್ಮನಗಳು ತಣಿ0ುುವಂತೆ ನೋಡಿ ನಲಿ0ುುತ್ತಿದ್ದೆ. ಹಿರಿ0ು ಗುಬ್ಬಿಗಳು ತಮ್ಮ ಮರಿಗಳನ್ನು ಲಲ್ಲೆಗೈ0ುುವದು, ಅವಕ್ಕೆ ಗುಟುಕು ಕೊಡುವದು, ಅವನ್ನು ಮುಂಡಾಡಿ ಸಂತೈಸುವದು, ಅವುಗಳಿಗಾಗಿ ಹೊಸ ತಿನಿಸನ್ನು ತಂದುಕೊಡುವದು ಮೊದಲಾದ್ದನ್ನೆಲ್ಲ ನೋಡುತ್ತಿದ್ದ ನನಗೆ ಅವುಗಳ ಸಂಸಾರವು ಒಂದು ಮನುಷ್ಯ ಸಂಸಾರದಂತೆ0ೆು ತೋರತೊಡಗಿತು. ಹೀಗೆ ಸಂಸಾರವೆಂಬ ನಿತ್ಯಲೀಲೆ0ುನ್ನು ಒಂದು ಬಗೆ0ು ಮುಗ್ಧವಿಸ್ಮ0ುದಲ್ಲಿ ನೋಡಿ ನಲಿ0ುುತ್ತಿದ್ದ ನಿರೂಪಕನಿಗೆ ಈ ಲೀಲೆ0ು ರೌದ್ರಮುಖವೂ ನಿಧಾನವಾಗಿ ಗೋಚರಿಸುವ ಪ್ರಕ್ರಿ0ೆು0ುು ಈ ಕತೆ0ು ಸಂವಿಧಾನವನ್ನು ಕಟ್ಟಿದೆ. ಮೊದಲು ಮಧ್ಯರಾತ್ರಿ0ುಲ್ಲಿ ಕಾಲಕರಾಲವಾದ ಘಟಸರ್ಪವೊಂದು ಗಂಡುಗುಬ್ಬಿ0ುನ್ನು ಬಾ0ುಲ್ಲಿ ಕಚ್ಚಿಕೊಂಡು ಹೋಗುತ್ತದೆ. ಇದು ಹೆಣ್ಣುಗುಬ್ಬಿ0ು ಸಂತಾಪಕ್ಕೆ ಕಾರಣವಾಗಿ ಅದರ ತೆರಪಿಲ್ಲದ ಹಾಹಾಕಾರ  ಮನೆ0ುನ್ನು ತುಂಬುತ್ತದೆ. ಗೂಡಿನಲ್ಲಿರುವ ಮರಿಗುಬ್ಬಿಗಳ ಚಿಲಿಪಿಲಿ ಮತ್ತು ತಾಯಿ ಹಕ್ಕಿ0ು ಆರ್ತಸ್ವರ ಒಗ್ಗೂಡಿ ಇಡೀ ವಾತಾವರಣ ಅಸ್ತವ್ಯಸ್ತವಾಗುತ್ತದೆ. ಉಪ್ಪರಿಗೆ0ುಲ್ಲಿ ಮಲಗಿದ್ದ ಮನುಷ್ಯರೂ ಹಾವಿನ ಆಗಮನದಿಂದ ಬೆಚ್ಚಿಬಿದ್ದು ಆ ಗುಬ್ಬಿಗಳಂತೆ0ೆು ತಮ್ಮ ಜೀವರಕ್ಷಣೆ0ು ಹವಣಿಕೆ0ುಲ್ಲಿದ್ದಾರೆ. ಕತ್ತಲಲ್ಲಿ ತಡವರಿಸುತ್ತಿರುವ ಹೆಣ್ಣುಗುಬ್ಬಿ0ುು ಹೌಹಾರಿ ಕುಳಿತ ಮನುಷ್ಯರ ಮೈ-ಕೈಗೆ ತಾಕುತ್ತ ಗಾಬರಿ ಇಮ್ಮಡಿಸುತ್ತಿದೆ. ಈ ಗದ್ದಲವನ್ನು ಕೇಳಿ ಕೆಳಗಿದ್ದವರು ದೀಪ ಹಚ್ಚಿಕೊಂಡು ಮೇಲೆಬರುವ ಹವಣಿಕೆ0ುಲ್ಲಿದ್ದಾರೆ. ಅಷ್ಟರಲ್ಲಿ ಬೆಕ್ಕೊಂದು ರಂಗಪ್ರವೇಶ ಮಾಡಿ ದಿಕ್ಕೆಟ್ಟು ಅಲ್ವರಿ0ುುತ್ತಿದ್ದ ಹೆಣ್ಣುಗುಬ್ಬಿ0ುನ್ನು ಹಾರಿ ಹಿಡಿದುಬಿಡುತ್ತದೆ. 'ಇತ್ತ ಆ ಗುಬ್ಬಿಗಳ ಚಿಕ್ಕಮಕ್ಕಳೆರಡೂ ಹುಟ್ಟುಹುಟ್ಟುತ್ತಲೇ ಅನಾಥವಾಗಿ, ತಮ್ಮ ಪ್ರೇಮಕ್ಕೆ ಊರುಗೋಲೇ ಇಲ್ಲದಾಗಲು ಅದೆಷ್ಟೋ ಹೊತ್ತು ಹಲುಬಿ, ಅತ್ತತ್ತು ದಣಿದು, ಸುಮ್ಮನೆ ಬಿದ್ದುಕೊಂಡವು. ಈ ಭ0ು, ಆತಂಕ, ಗೊಂದಲ, ಗದ್ದಲಗಳ ಮಧ್ಯದಲ್ಲೇ ಮದುವೆ0ು ಶಾಸ್ತ್ರಗಳೂ ಸಂಭ್ರಮದಿಂದ ಜರುಗುತ್ತವೆ. ಮತ್ತೆ ಹಾವಿನ ಆಕ್ರಮಣ. ಮರಿಗುಬ್ಬಿಗಳ ಆರ್ತನಾದ, ಸಾವು. ಪ0ರ್ಾ0ುವಾಗಿ ಮದುವೆ0ು ಸುರಗಿ-ಪುಣ್ಯಾಹವಾಚನ-ಆರತಿ-ಅಕ್ಷತೆ. ಅಂತೂ, ಹೀಗೆ ಹನ್ನೆರಡು ತಾಸಿನ ಅವಧಿ0ುಲ್ಲಿ ಆ ಗುಬ್ಬಿ0ು ಸಂಸಾರದ ಮೂಲೋತ್ಪಟನವಾಗಿಬಿಟ್ಟಿತೆಂದು ಹೇಳಿದರೆ, ಇದೂ ಒಂದು ಕಟ್ಟಿದ ಕತೆ0ುಂತೆ ತೋರುವದು. ಆದರೂ ಆ ಸಂಗತಿ0ುು ನನ್ನ ಮದುವೆ0ು ಕಾಲದಲ್ಲಿ ನಡೆದ ಪ್ರತಿ0ೊಂದು ಸಂಗತಿ0ುಂತೆ ನಿತ್ಯ ಸತ್ಯವಾದ ಮಾತಾಗಿತ್ತು. 
ಹಾಗೆಂದು  ಲೇಖಕರು ಈ ಕತೆ0ುನ್ನು ಸರಳವಾದ ಅನ್ಯೋಕ್ತಿ0ುನ್ನಾಗಿ ಮಾಡುವುದಿಲ್ಲ. ಅಥವಾ ಗುಬ್ಬಿಗಳ ಸಂಸಾರದ ಕತೆ0ುನ್ನು ನಿರೂಪಕನ ವೈ0ುಕ್ತಿಕ ಜೀವನಕ್ಕೂ ನೇರವಾಗಿ ಅನ್ವಯಿಸುವ ಪ್ರ0ುತ್ನವನ್ನೂ ಮಾಡುವುದಿಲ್ಲ. ಹೊಸ ಸೃಷ್ಟಿ0ೊಂದಕ್ಕೆ ಕಾರಣವಾಗಬಹುದಾದ ತನ್ನ ಮದುವೆ0ು ಹೊಸ್ತಿಲಲ್ಲೇ ನಿರೂಪಕನು 0ಾವ ಗಳಿಗೆ0ುಲ್ಲಾದರೂ ಬಂದು ಎರಗಬಹುದಾದ ಮೃತ್ಯುವಿನ ಅನಿರೀಕ್ಷಿತತೆ ಮತ್ತು ಅಸಂಗತತೆಗಳಿಗೆ ಎದುರಾಗುವುದು ಈ ಕತೆ0ು ವಿಶಿಷ್ಟತೆ0ಾಗಿದೆ. ಸಂಸಾರವೆನ್ನುವುದು 0ಾವಾಗಲೂ ಕೊನೆಯಿರದ ಸಂಭ್ರಮದ ಸರಮಾಲೆ0ುಲ್ಲ. ಹಾಗೆಂದು ಅದು ಕೇವಲ ನೋವಿನ ಅನುಭವಗಳ ಸರಣಿ0ುೂ ಅಲ್ಲ. ಹಾಗಾಗಿ 0ಾವುದೇ ಅನುಭವಕ್ಕೆ ಕೇವಲ ಎದುರಾಗಿ ಅದು ನೀಡಬಹುದಾದ ಸಿಹಿ ಅಥವಾ ಕಹಿ0ುನ್ನು ಅನಿವಾ0ರ್ುವೆಂಬಂತೆ ಸ್ವೀಕರಿಸಬೇಕಾದದ್ದು ನಮ್ಮ ಜೀವನದ ಅವಸ್ಥೆ0ುಲ್ಲೇ ಅಂತರ್ಗತವಾಗಿರುವ ಅಭೇದ್ಯ ಸತ್ಯವಾಗಿರಬಹುದು. ಇದು ಒಟ್ಟಾರೆ0ಾಗಿ ಈ ಕತೆ0ು ಉತ್ತಮಪುರುಷ ನಿರೂಪಕನು ಪಡೆದುಕೊಳ್ಳುವ ತಿಳುವಳಿಕೆ ಎನಿಸುತ್ತದೆ. ನಿರೂಪಕನಿಗೆ ಮದುವೆ0ಾಗಿ ಈಗ   'ಚಿನ್ನ ರನ್ನದಂತಹ ಎರಡು ಮಕ್ಕಳಿವೆ'.ತನ್ನ ಸುಖೀ ಸಂಸಾರದ ತುಂಬು ಸಂತೋಷದಲ್ಲಿರುವ ಅವನಿಗೆ ದುಃಖವೆಂಬುದೇನೂ ಇಲ್ಲ. ಆದರೂ ಎಂದಾದರೊಮ್ಮೆ ಅವನಿಗೆ ತಾನು ತನ್ನ ಮದುವೆ0ು ದಿನದಂದು ಕಂಡ ಆ ಗುಬ್ಬಿಗಳ ಸಂಸಾರದ ನೆನಪು ಒಮ್ಮಿಂದೊಮ್ಮೆ ಬರುವುದುಂಟು. ಆಗ: ಹಿಂದಿನಂತೆ0ೆು ಈಗಲೂ ಆ ಗುಬ್ಬಿಗಳ ಸಂಸಾರದೊಂದಿಗೆ ಒಂದು ಬಗೆ0ು ತನ್ಮ0ುತೆ0ುು ಎನ್ನಿಸುವುದು. ಆದರೆ ಅಂದಿನ ಸೊಗಸಿನ ಬದಲು, ಇಂದು ನನ್ನೆದೆ0ುು ಒಂದು ಬಗೆ0ು ವೇದನೆಯಿಂದ ಗದಗದ ನಡುಗುವದು..ಮನುಷ್ಯನ ಬುದ್ಧಿ ಭಾವನೆಗಳನ್ನು ಲೆಕ್ಕಿಸದೆ, ಆತನ ಕಲ್ಪನೆ0ುು ಕಣ್ಮರೆ0ಾಗಿ, ಎಲ್ಲಿ0ೋ 0ಾವುದೋ ಒಂದು ಹೋರಿನಲ್ಲಿ ಹೊಂಚಿ ಕುಳಿತ ಸಾವೆಂಬ ಹಾವು ಎಲ್ಲಿ ನನ್ನ  ಸಂಸಾರವನ್ನು ಸೂರೆಗೊಂಡೀತೋ ಎಂದು ನನಗೆ ಇಲ್ಲದ ಭ0ುವುಂಟಾಗಿ ದಿಗ್ಭ್ರಮೆ0ಾದಂತೆನಿಸುವದು. ಹೀಗೆ ಬೇಡಬೇಡವೆಂದರೂ ಒಲುಮೆಯಿಂದ ಆ ಹಿಂದಿನ ನೆನಪು ನನ್ನ ಮನದಲ್ಲಿ ಮೂಡಿಕೊಂಡಾಗೆಲ್ಲ ನನ್ನ ಕಣ್ಮನಗಳೂ ಬುದ್ಧಿಭಾವಗಳೂ ಕುರುಡಾದಂತೆನಿಸಿ ನಾನು 0ಾವದೋ ಒಂದು ಲೋಕಾಂತರದಲ್ಲಿ ಹವಣು ತಪ್ಪಿ ಅಲೆ0ುುತ್ತಿರುವಂತೆ ಭಾಸವಾಗುವದು.       
 ಮುಂದೆ ಹಲವಾರು ನವ್ಯಕತೆಗಳನ್ನು, ಮುಖ್ಯವಾಗಿ ಚಿತ್ತಾಲರ ಎಷ್ಟೋ ಬರಹಗಳನ್ನು ಎದುರುನೋಡುತ್ತಿರುವಂತೆ ಕಾಣಿಸುವ ಈ ಕತೆ ತಾನು ರಚಿತಗೊಂಡ ಕಾಲಕ್ಕಿಂತ ಎಷ್ಟೋ ಮುಂದಿದೆ.
                                  *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228


No comments:

Post a Comment