ಮಾಸ್ತಿ ಅವರ ಬಾದಷಹನ ನ್ಯಾ0ು -ಟಿ. ಪಿ.ಅಶೋಕ
'ನ್ಯಾ0ು' ಎಂಬ ಕಲ್ಪನೆ ಮತ್ತು ಈ ಕಲ್ಪನೆ0ುನ್ನು ಆಧರಿಸಿದ 'ವ್ಯವಸ್ಥೆ' ಎಂದಿನಿಂದಲೂ ತುಂಬ ಸಂಕೀರ್ಣವೂ ಸಮಸ್ಯಾತ್ಮಕವೂ ಆಗಿರುವಂಥದ್ದು. ರಾಮಾ0ುಣ-ಮಹಾಭಾರತ ಕಾಲಗಳಿಂದ ಇಂದಿನವರೆಗೆ ಅವುಗಳನ್ನು ಕುರಿತ ಬಗೆಬಗೆ0ು ಚಚರ್ೆಗಳು, ಜಿಜ್ಞಾಸೆಗಳು, ವ್ಯಾಖ್ಯಾನಗಳು ನಡೆದುಕೊಂಡೇ ಬಂದಿವೆ. ಅವುಗಳಿಗೆ ನಿಲುಗಡೆ ಎಂಬುದಿಲ್ಲ. ನ್ಯಾ0ು ತೀಮರ್ಾನ ಮಾಡುವ, ನ್ಯಾ0ು ಪರಿಪಾಲನೆ ಮಾಡುವ ಹಲವು ಪ್ರಸಿದ್ಧರು ಪುರಾಣ, ಇತಿಹಾಸಗಳಲ್ಲಿ ಆಗಿ ಹೋಗಿದ್ದಾರೆ. ನಮ್ಮ ಈ ಕಾಲದಲ್ಲಿ0ುೂ ಅಂಥ ಕೆಲವು ಅಪರೂಪದ ವ್ಯಕ್ತಿಗಳ ಹೆಸರುಗಳನ್ನು ನಾವು ಆಗೀಗ ಕೇಳುವುದುಂಟು. ಮನುಷ್ಯರ ನ್ಯಾ0ು ತೀಮರ್ಾನದ ಸಾಧ್ಯತೆ0ು ಬಗ್ಗೆ0ೆು ಹಲವರಿಗೆ ತಾತ್ವಿಕ ಸಂದೇಹಗಳಿರುವುದೂ ಉಂಟು. ಸುಪ್ರೀಮ್ ಕೋರ್ಟಿನ ತೀಪರ್ು ಹೊರಬಿದ್ದ ಮೇಲೂ 'ನ್ಯಾ0ು ಸ್ಥಾಪನೆ' ಆದೀತೆಂದು ತಿಳಿ0ುಬೇಕಾಗಿಲ್ಲ; ವ್ಯಾಜ್ಯಕ್ಕೊಂದು ಮುಕ್ತಾ0ುವನ್ನು ಆ ತೀಪರ್ು ಹಾಕಬಹುದಷ್ಟೆ. ಮನುಷ್ಯರಿಗೆ ನಿಜವಾಗಿ ನ್ಯಾ0ುವನ್ನು ನೀಡುವುದು ದೇವರು ಮಾತ್ರ ಎಂದು ನಂಬುವವರೂ ಇದ್ದಾರೆ. ಇನ್ನು ಹಲವು ಬಗೆ0ು ನ್ಯಾ0ು ಪದ್ಧತಿಗಳನ್ನು ತುಲನಾತ್ಮಕವಾಗಿ ಪರಿಶೀಲಿಸಿ ಅವುಗಳ ನಡುವೆ ಗುಣಾತ್ಮಕ ಆ0ೆ್ಕುಗಳನ್ನು ಸೂಚಿಸುವುದೂ ನಡೆದುಕೊಂಡು ಬಂದಿದೆ. ಶೇಕ್ಸ್ಪಿ0ುರ್, ಟಾಲ್ಸ್ಟಾ0್, ಬ್ರೆಕ್ಟ್, ಕಾಫ್ಕಾರ ಬರವಣಿಗೆ0ುಲ್ಲಿ 'ನ್ಯಾ0ು' ಎಂಬುದು ಒಂದು ಸಾಮಾನ್ಯ ಪ್ರಧಾನ ವಸ್ತು. ಕನ್ನಡದಲ್ಲಿ ಈ ಕುರಿತ ಪ್ರಸ್ತಾಪವನ್ನು ಪದೇಪದೇ ಮಾಡಿದ ಮುಖ್ಯ ಲೇಖಕರೆಂದರೆ ಪ್ರಾ0ುಶಃ ಮಾಸ್ತಿ.ಮಾಸ್ತಿ ಅವರು ಹಲವು ವರುಷಗಳ ಕಾಲ ಸರಕಾರೀ ಸೇವೆ0ುಲ್ಲಿದ್ದವರು. ಹಲವು ಜವಾಬುದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಅವರಿಗೆ ಆಡಳಿತ ವ್ಯವಸ್ಥೆ0ು ಮತ್ತು ಆ ಕಾಲದ ನ್ಯಾ0ಾಂಗ ವ್ಯವಸ್ಥೆಗಳ ನಿಕಟವಾದ ಪರಿಚ0ುವಿತ್ತು. ಪುರಾಣ ಮತ್ತು ಇತಿಹಾಸವನ್ನು ಕುರಿತ ಅವರ ಅಗಾಧ ಓದು ಕೂಡ ಅವರ ತಿಳುವಳಿಕೆ0ುನ್ನು ವಿಸ್ತರಿಸಿದ್ದವು. ಹಾಗಾಗಿ ಅವರ ಅನೇಕ ಕೃತಿಗಳಲ್ಲಿ-ಮುಖ್ಯವಾಗಿ ಚನ್ನಬಸವ ನಾ0ುಕ, ಚಿಕವೀರರಾಜೇಂದ್ರ, ಕಾಕನಕೋಟೆ, ಇಲ್ಲಿ0ು ತೀಪರ್ು, ಬಾದಷಹನ ನ್ಯಾ0ು , ಬಾದಷಹನ ದಂಡನೆ, ಜೋಗ್ಯೋರ ಅಂಜಪ್ಪನ ಕೋಳಿ ಕತೆ, ಪಂಡಿತನ ಮರಣ ಶಾಸನ-ನ್ಯಾ0ು ತೀಮರ್ಾನದ ಹಲವು ಬಗೆ0ು ಸನ್ನಿವೇಶಗಳು ನೇರವಾಗಿ0ೆು ನಿರೂಪಿತವಾಗಿವೆ. ಇನ್ನು ಕೆಲವು ಕೃತಿಗಳಲ್ಲಿ ಈ ವಸ್ತು ಪರೋಕ್ಷವಾಗಿ ಪ್ರಸ್ತಾಪಿತವಾಗಿರುವುದೂ ಉಂಟು.
ಬಾದಷಹನ ನ್ಯಾ0ು ಮತ್ತು ಬಾದಷಹನ ದಂಡನೆ ಕತೆಗಳಲ್ಲಿ ಪಷರ್ಿ0ಾದ ಚಕ್ರವತರ್ಿ ಷಾಹ ಅಬಾಸ್ ನ್ಯಾ0ು ತೀಮರ್ಾನ ಮಾಡುವ ಎರಡು ಪ್ರಸಂಗಗಳ ಸ್ವಾರಸ್ಯಪೂರ್ಣ ನಿರೂಪಣೆಗಳಿವೆ. ಎರಡೂ ಸಂದರ್ಭಗಳಲ್ಲಿ ವ್ಯಾಜ್ಯ ಹುಟ್ಟುವುದು ಮುಸಲ್ಮಾನ ಮತ್ತು ಕ್ರಿಶ್ಚಿ0ುನನ ನಡುವೆ. ಈ ಚಕ್ರವತರ್ಿ ಎಂಥಹವನೆಂದರೆ: ಷಾಹ ಅಬಾಸ್ ಬಾದಷಹನು ನ್ಯಾ0ು ತೀರಿಸುವುದೆಂದರೆ 0ಾವಾಗಲೂ ಜನ ನೆರೆ0ುುವರು. ಅವನು ಬಹಳ ನ್ಯಾ0ುಪರನು. ತನ್ನವನು ಪರರವನು ಎನ್ನದೆ ತನ್ನ ರಾಜ್ಯದ ಪ್ರಜೆಗಳಲ್ಲೆಲ್ಲಾ ಏಕರೀತಿ0ಾದ ವಿಶ್ವಾಸವನ್ನಿಟ್ಟಿದ್ದನು. ತಾನು ಮುಸಲ್ಮಾನನಾದರೂ ಮುಸಲ್ಮಾನರಿಗೆ ಪಕ್ಷಪಾತವನ್ನು ತೋರುತ್ತಿರಲಿಲ್ಲ. ಅದರಿಂದ ರಾಜ್ಯದ ಮುಸಲ್ಮಾನರಿಗೆ ಕೆಲವರಿಗೆ ಅಸಮಾಧಾನ. ಆದರೆ ಆ ನ್ಯಾ0ುಪರತೆ0ುನ್ನು ಮುಕ್ಕಾಲು ಪಾಲು ಸೀಮೆ0ೆುಲ್ಲಾ ಮೆಚ್ಚಿತ್ತು. ತಿಳಿವು ಉಳ್ಳ ಮುಸಲ್ಮಾನರು ಕ್ರೈಸ್ತ 0ೆುಹೂದ್ಯರನ್ನು ತಮ್ಮಂತೆ0ೆು ಪ್ರಜೆಗಳೆಂದೆಣಿಸುತ್ತ ರಾಜನ ಈ ನ್ಯಾ0ುಪರತೆ0ುನ್ನು ಒಪ್ಪಿ ಕೊಂಡಾಡುವರು. ನ್ಯಾ0ು ಪಕ್ಷಪಾತ ಹೇಗಿತ್ತೋ ಹಾಗೆ0ೆು ಬಾದಷಹನಲ್ಲಿ ನ್ಯಾ0ುವನ್ನು ಕಂಡುಹಿಡಿ0ುುವ ಬುದ್ಧಿಸೂಕ್ಷ್ಮತೆ0ುೂ ಇತ್ತು. ಅನೇಕಾವೃತ್ತಿ ಅವನು ಇತರರಿಗೆ ತೋರದೆ ಇದ್ದ 0ಾವ 0ಾವವೋ ಉಪಾ0ುಗಳಿಂದ ನಿಜಸ್ಥಿತಿ0ುನ್ನು ಕಂಡುಹಿಡಿದು ಜನರಿಗೆ ಆಶ್ಚ0ರ್ುವನ್ನು ಉಂಟುಮಾಡುತ್ತಿದ್ದನು.
ಬಾದಷಹನ ನ್ಯಾ0ು ಕತೆ0ುಲ್ಲಿ ಬಹುಕಾಲ ಜೊತೆ0ಾಗಿ ವ್ಯಾಪಾರ ಮಾಡುತ್ತಿದ್ದ ಮುಸಲ್ಮಾನನಾದ ಉಸಾಫ್ ಖಾನನಿಗೂ ಕ್ರೈಸ್ತ ಸಮುದಾ0ುಕ್ಕೆ ಸೇರಿದ 0ೋಹಾನ್ ಮಾತಿ0ಾನಿಗೂ ಒಂದು ಜಗಳವಾಗುತ್ತದೆ. ಇಬ್ಬರಿಗೂ ತಮ್ಮತಮ್ಮ ಕಾಗದಪತ್ರಗಳನ್ನು ತರುವಂತೆ ಹೇಳಿ ತನ್ನೆದುರೇ ಒಂದು ಚೀಲದಲ್ಲಿ ಅವನ್ನು ಇಡಿಸಿ ಅದಕ್ಕೆ ತನ್ನ ಮೊಹರನ್ನು ಹಾಕಿ ಬಾದಷಹನು ನ್ಯಾ0ಾಧೀಶನಾದ ಫಸಿಲ್ ಖಾನನಿಗೆ ಕಾಗದಪತ್ರಗಳನ್ನು ಪರಿಶೀಲಿಸಿ ತೀಪರ್ು ಕೊಡಲು ಆಜ್ಞಾಪಿಸುತ್ತಾನೆ. ತೀಪರ್ು ಮಾತಿ0ಾನಿಗೆ ವಿರುದ್ಧವಾಗಿ ಬರುತ್ತದೆ. ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಮಾತಿ0ಾ ಬಾದಷಹನಲ್ಲಿ ಮತ್ತೆ ಫಿ0ರ್ಾದು ಮಾಡುತ್ತಾನೆ. ನೀನು ಕ್ರೈಸ್ತ. ನಿನ್ನ ಪ್ರತಿವಾದಿ ಮುಸಲ್ಮಾನನೆನ್ನುವುದಕ್ಕೋಸ್ಕರ ನಾವು ಅನ್ಯಾ0ು ಮಾಡಿದೆವೆಂದು ಎಣಿಸಿದ್ದಿ0ೆುನು? ಎಂದು ರಾಜ ಪ್ರಶ್ನಿಸುತ್ತಾನೆ. ಚೀಲದಲ್ಲಿದ್ದ ಕಾಗದಪತ್ರಗಳನ್ನು ಪರಿಶೀಲಿಸಿ, ತನ್ನ ತಿಳಿವಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನ್ಯಾ0ುವನ್ನೇ ತೀಪರ್ು ಮಾಡಿದ್ದೇನೆಂದು ನ್ಯಾ0ಾಧೀಶ ಫಸಿಲ್ ಖಾನನು ನುಡಿ0ುುತ್ತಾನೆ. ಆದರೆ ಚೀಲದಲ್ಲಿ ತಾನು ಇಟ್ಟ ಕಾಗದಪತ್ರಗಳೇ ಬೇರೆ, ಮೊಹರು ಒಡೆದ ಮೇಲೆ ಚೀಲದಲ್ಲಿದ್ದ ಪತ್ರಗಳೇ ಬೇರೆ ಎಂಬುದು ಮಾತಿ0ಾನ ವಾದ. ಮಾತಿ0ಾನ ಒಪ್ಪಿಗೆ0ು ಮೇಲೆ ಮೊಹರು ಮಾಡಿದ ಚೀಲವು ತನ್ನ ಬಳಿ0ುಲ್ಲೇ ಇತ್ತೆಂದೂ, ನ್ಯಾ0ಾಧೀಶನು ಅದನ್ನು ಒಡೆದಾಗ ಮೊಹರು ಸರಿ0ಾಗೇ ಇತ್ತೆಂದೂ ಉಸಾಫ್ ಖಾನನು ಹೇಳುತ್ತಾನೆ. ಅದರಲ್ಲಿದ್ದ ಕಾಗದ ಹೇಗೆ ಬದಲಾಯಿತೋ ಖಾವಂದರು 0ೋಚನೆ ಮಾಡಬೇಕು. ಇನ್ನು ಚೀಲವನ್ನು ಕತ್ತರಿಸಿ ಆಮೇಲೆ ಅದು ಗುರುತು ಸಿಕ್ಕದಂತೆ ಸರಿ ಮಾಡಬಲ್ಲವರು 0ಾರೂ ಇರಲಾರರು ಮಹಾಸ್ವಾಮಿ. ಅದು ಒಳ್ಳೆ0ು ಭದ್ರವಾದ ರತ್ನಗಂಬಳಿ0ು ಚೀಲ. ಮಾತಿ0ಾನನ್ನೇ ಕೇಳಬಹುದು. ಇಲ್ಲ, ನಾನು ಚೀಲವನ್ನು ಕತ್ತರಿಸಿ ಸರಿಮಾಡಿದನೆಂದೇ ಹೇಳುವನೇನೋ ಅದನ್ನೂ ಕೇಳೋಣವಾಗಲಿ ಎಂದು ಉಸಾಫ್ ಖಾನ್ ಹೇಳಿದಾಗ ತನಗೆ ಆ ಸಂದೇಹ ಇಲ್ಲವೆಂದೂ, ಎಲ್ಲ ತನ್ನ ದುರದೃಷ್ಟವೆಂದೂ, ತಾನೀಗ ಗರೀಬನಾದೆನೆಂದೂ, ರಾಜನು ಏನಾದರೂ ನೌಕರಿ ಕೊಟ್ಟರೆ ಬದುಕಿಕೊಳ್ಳುವೆನೆಂದೂ ಮಾತಿ0ಾ ಬಿನ್ನವಿಸಿಕೊಳ್ಳುತ್ತಾನೆ. ನೌಕರಿ ಗಿಟ್ಟಿಸಲು ಇಷ್ಟು ಉಪಾ0ು ಮಾಡಬೇಕಾಗಿರಲಿಲ್ಲವೆಂದು ಅವನನ್ನು ಛೇಡಿಸುವ ಬಾದಷಹನು ಉಸಾಫ್ ಖಾನನು ಸತ್ಯವಂತನೆಂದು ಹೊಗಳಿ ಅವನನ್ನು ತನ್ನ ಬೈಠಕ್ ಖಾನೆ0ು ಭಕ್ಷಿ0ಾಗಿ ನೇಮಿಸಿಕೊಳ್ಳುತ್ತಾನೆ. ತನ್ನ ಬೈಠಕ್ ಖಾನೆ0ುಲ್ಲಿ ಹಾಸುವ ಜಮಖಾನ, ರತ್ನಗಂಬಳಿಗಳ ಬಗ್ಗೆ ರಾಜನಿಗೆ ತುಂಬಾ ಮೋಹವೆಂದೂ ಸ್ವಲ್ಪ ಕೊಳೆ0ಾದರೂ ಭಕ್ಷಿಗೆ ಛಡಿ ಏಟಿನ ಶಿಕ್ಷೆ ಕೊಡುತ್ತಾನೆಂದೂ ತಿಳಿದಿದ್ದ ಉಸಾಫ್ ಖಾನ್ ಆ ಬಗ್ಗೆ ತೀರಾ ಕಾಳಜಿ ವಹಿಸಿ ಕೆಲಸ ಮಾಡುತ್ತಿರುತ್ತಾನೆ ಮತ್ತು ಕಾಲಕಾಲಕ್ಕೆ ಬಡತಿ0ುನ್ನೂ ಪಡೆ0ುುತ್ತ ಹೋಗುತ್ತಾನೆ. ವಜೀರನನ್ನೂ ಸೇರಿಸಿ ಅನೇಕರಿಗೆ ಬಾದಷಹನು ಆ ರೀತಿ ಮಾತಿ0ಾನಿಗೆ ಮುಖ ಮುರಿ0ುಬಾರದಿತ್ತೆಂದೂ, ಉಸಾಫನಿಗೆ ಸಿಕ್ಕ ಮ0ರ್ಾದೆ ಜಾಸ್ತಿ0ಾಯಿತೆಂದೂ ಅನ್ನಿಸಿರುತ್ತದೆ0ಾದರೂ, ಅದು ತನ್ನ ಕಿವಿಗೆ ಬಿದ್ದಾಗ ಅವನು, ನಾನು ಇದುವರೆಗೆ ಪಕ್ಷಪಾತ ಮಾಡಿಲ್ಲ...ಮಾತಿ0ಾನೂ ಅವನ ಕಡೆ0ುವರೂ ತಪ್ಪಾಗಿ ತಿಳಿದುಕೊಂಡರೆ ನಾವು ಏನೂ ಮಾಡಲಾಗುವುದಿಲ್ಲ ಎಂದು ಬಿಡುತ್ತಾನೆ.
ಹೀಗಿರುತ್ತ ಒಂದು ದಿನ ಬೈಠಕ್ ಖಾನೆ0ುಲ್ಲಿ ರಾಜನಿಗೆ ತುಂಬ ಪ್ರಿ0ುವಾಗಿದ್ದ ಬೆಲೆಬಾಳುವ ಷಿರಾಜ್ ಕಂಬಳಿ0ುನ್ನು ಮಡಿಚಿಡಲು ಹೋದಾಗ ಉಸಾಫನು ಕಂಬಳಿ0ು ಒಂದು ಮೂಲೆ0ುಲ್ಲಿ ಒಳಗೈ0ುಷ್ಟಗಲ ಸುಟ್ಟುಹೋಗಿರುವುದನ್ನು ನೋಡಿ ಬೆಚ್ಚಿಬೀಳುತ್ತಾನೆ. ತಾನೇ ಬಾದಷಹನ ಹುಕ್ಕಾವನ್ನು ಕಂಬಳಿಯಿಂದ ದೂರದಲ್ಲಿ ತೆಗೆದಿಟ್ಟಿದ್ದು ಅವನಿಗೆ ಚೆನ್ನಾಗಿ ನೆನಪಿದೆ. ಅಂದರೆ ತನಗಾಗದವರಾರೋ ಬೇಕೆಂದೇ ಅದನ್ನು ಸುಟ್ಟಿರಬೇಕು. ತನಗೆ ಛಡಿ ಏಟು ತಪ್ಪಿದ್ದಲ್ಲ ಎಂದು ಭೀತಿಯಿಂದ 0ೋಚಿಸಿ, 0ಾರಿಗೂ ಹೇಳದೆ0ೆು ಅದನ್ನು ಸರಿಮಾಡಿಸಿಬಿಡುತ್ತಾನೆ. ಕೆಲವು ದಿನಗಳ ನಂತರ ಅದನ್ನು ಮತ್ತೆ ಹಾಸಿದಾಗ ಅದರಲ್ಲಿ ಸುಟ್ಟಿದ ಗುರುತು ಇರುವುದಿಲ್ಲ;ನವಿಲು ಎಂದಿನಂತೆ ಗರಿಗಳನ್ನು ಕೆದರಿಕೊಂಡು ಸಂತೋಷದಲ್ಲಿತ್ತು. ಅಂದರೆ ಕಂಬಳಿ ಮೊದಲಿನಂತೆ0ೆು ಕಾಣುತ್ತಿತ್ತು. ಬೈಠಕ್ ಮುಗಿದ ಮೇಲೆ ಬಾದಷನು ಉಸಾಫನನ್ನು ಕುರಿತು ತನ್ನ ಅಜಾಗರೂಕತೆಯಿಂದಲೇ ಕಂಬಳಿ ಸುಟ್ಟುಹೋಗಿತ್ತೆಂದು ತಿಳಿಸಿ ಈಗ ನೋಡಿದರೆ ಕಂಬಳಿ ಸರಿಹೋಗಿರುವುದರ ಬಗ್ಗೆ ಆಶ್ಚ0ರ್ುವನ್ನು ವ್ಯಕ್ತಪಡಿಸುತ್ತಾನೆ. ಲೋಕಾಭಿರಾಮವಾಗಿ ಎಂಬಂತೆ, 'ಇದನ್ನು ಸರಿಮಾಡಿಸಿದೆ0ೋ?' ಎಂದು ಉಸಾಫನನ್ನು ಪ್ರಶ್ನಿಸುತ್ತಾನೆ. ಹೌದೆಂದು ಉಸಾಫನು ನುಡಿ0ುಲು ಬಾದಷಹನು ತನಗಾದ ಖುಷಿ0ುನ್ನು ಹೇಳಿಕೊಳ್ಳುತ್ತಾನೆ. ಮುಂದುವರೆದು ಬಾದಷಹನು ಮಾತಿ0ಾನನ್ನು ಮರು ಪ್ರಶ್ನೆ ಮಾಡುತ್ತಾನೆ: ಈ ಜಮಖಾನವನ್ನೂ ಆ ಚೀಲವನ್ನೂ ಒಬ್ಬನಲ್ಲಿ0ೆು ಕೊಟ್ಟು ಸರಿಮಾಡಿಸಿದೆ0ಾ? ಚೀಲವನ್ನು ಕತ್ತರಿಸಿ ಸರಿಮಾಡುವವರು 0ಾರೂ ಇರಲಾರರೆಂದು ಹೇಳಿದೆ0ುಲ್ಲ? ಈ ರೀತಿ0ುಲ್ಲಿ ಬಾದಷಹನು ಉಸಾಫನ ಅಪರಾಧವನ್ನು ಜಾಣತನದಿಂದ ಪತ್ತೆ ಹಚ್ಚಿ ಮಾತಿ0ಾನಿಗೆ ವಿಳಂಬವಾಗಿ0ಾದರೂ ನ್ಯಾ0ುವನ್ನು ಒದಗಿಸಿಕೊಡುತ್ತಾನೆ. ಅಷ್ಟೇ ಅಲ್ಲ ಅವನು ತನ್ನ ನ್ಯಾ0ುದ ಬಗ್ಗೆ ಉಚ್ಚಾಭಿಮಾನವನ್ನು ಇಟ್ಟುಕೊಂಡಿದ್ದ ನ್ಯಾ0ಾಧೀಶ ಫಸಿಲ್ ಖಾನನನ್ನೂ ಛೇಡಿಸುತ್ತಾನೆ. ನಾನು ಈಗಲೂ ಕೂಡ ಈ ತೀಪರ್ು ಮನುಷ್ಯಮಾತ್ರನಿಂದ ಸಾಧ್ಯವಿಲ್ಲವೆಂದೇ ಹೇಳುವೆನು ಎನ್ನುವ ಫಸಿಲ್ ಖಾನನು ಹಿಂದಿನ ಅಹಂಕಾರದ ಮಾತನ್ನು ಮುಖಸ್ತುತಿ0ಾಗಿ ಪರಿವತರ್ಿಸುತ್ತಾನೆ.
ಈ ಕತೆ0ುನ್ನು ಒಂದು ಪತ್ತೇದಾರೀ ಕತೆ0ುನ್ನಾಗಿ ಓದಿ ಆನಂದಿಸಬಹುದು. ಈ ಕತೆ ಬಾದಷಹನ ಜಾಣತನವನ್ನೂ, ನ್ಯಾ0ುಪರತೆ0ುನ್ನೂ ಕೀತರ್ಿಸುವ ಕೃತಿ ಎಂದೂ ಹಲವರಿಗೆ ಅನ್ನಿಸಬಹುದು. ಆದರೆ ಮಾಸ್ತಿ ಕತೆಗೆ ಇದಕ್ಕೂ ಮಿಗಿಲಾದ ಘನೋದ್ದಿಶ್ಯ ಇರುವಂತೆ ಕಾಣುತ್ತದೆ. ತಾವು ಎಲ್ಲೋ ಓದಿದ ಕತೆ0ುನ್ನು ಮಾಸ್ತಿ0ುವರು ಇಪ್ಪತ್ತನೆ0ು ಶತಮಾನದ ಆರಂಭದ ದಶಕಗಳಲ್ಲಿ ಮರು ನಿರೂಪಿಸುವಾಗ ಕೇವಲ ಒಂದು ಸ್ವಾರಸ್ಯಕರ ಕತೆ0ುನ್ನು ನಮಗೆ ಹೇಳುವುದಷ್ಟೇ ಅವರ ಉದ್ದೇಶವಿರಲಾರದು. ಅರ್ಥಪೂರ್ಣವಾದ ಎಷ್ಟೋ ಆಧುನಿಕಪೂರ್ವ ಮೌಲ್ಯಗಳು, ಸಂಸ್ಥೆಗಳು, ಜ್ಞಾನಪ್ರಕಾರಗಳು, ಜೀವನಕ್ರಮಗಳು ವಸಾಹತುಶಾಹಿ ತರುತ್ತಿದ್ದ ಆಧುನಿಕತೆ0ು ಭರಾಟೆ0ುಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವಿದ್ಯಮಾನಗಳಿಗೆ ಅವರು ಸಾಕ್ಷಿ0ಾಗಿದ್ದರು. ಪೂರ್ವ-ಪಶ್ಚಿಮಗಳನ್ನು ಏಕಕಾಲದಲ್ಲಿ ತುಲನಾತ್ಮಕವಾಗಿ ತೂಗಿ ನೋಡಬೇಕಾಗಿದ್ದ ಸಂದರ್ಭದಲ್ಲಿ ಅವರು ತಮ್ಮ ಬರವಣಿಗೆ0ುನ್ನು ಪ್ರಾರಂಭಿಸಿದ್ದರು. ತಮ್ಮ ಎದುರೇ ಹೊಸ ಕಾಲ, ಹೊಸ ಇತಿಹಾಸ ಬಿಚ್ಚಿಕೊಳ್ಳುತ್ತಿದ್ದ ಸಂಕೀರ್ಣ ಸಂದರ್ಭಕ್ಕೆ ತಮ್ಮ ಪ್ರತಿಕ್ರಿ0ೆು ಎಂಬಂತೆ ಅವರು ಕನ್ನಡಿಗರಿಗೆ ತಮ್ಮ ಹೊಸ ಕತೆಗಳನ್ನು ಹೇಳಲಾರಂಭಿಸಿದ್ದರು. ಈ ಕತೆ 1920ರಲ್ಲಿ ಪ್ರಕಟವಾದ ಅವರ ಮೊದಲ ಸಂಕಲನದಲ್ಲಿ0ೆು ಸೇರಿರುವುದು ಗಮನಾರ್ಹ. ಬ್ರಿಟಿಷರು ತಂದ ನ್ಯಾ0ಾಂಗ ವ್ಯವಸ್ಥೆ0ೆು ಅಭೂತಪೂರ್ವವಾದದ್ದು ಎಂಬ ಅವಿಮಶರ್ಾತ್ಮಕ ಕುರುಡು ನಂಬಿಕೆಗೆ ಒಂದು ಚಿಕಿತ್ಸೆ ಎಂಬಂತೆ ಅವರು ಈ ಕತೆ0ುನ್ನು ನಮಗೆ ಹೇಳಿದಂತಿದೆ. ಅಷ್ಟೇ ಅಲ್ಲ, ಬಹುಸಂಖ್ಯಾತರ ಆಡಳಿತ ಇರುವ ಒಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ನ್ಯಾ0ುದ ಪ್ರಶ್ನೆ0ುನ್ನೂ ಈ ಕತೆ ಸೂಕ್ಷ್ಮವಾಗಿ ಎತ್ತುತ್ತದೆ. ಇದು ಇನ್ನಷ್ಟು ತೀವ್ರವಾಗಿ ಅಭಿವ್ಯಕ್ತವಾಗುವುದು ಮಾಸ್ತಿ0ುವರ ಮತ್ತೊಂದು ಕತೆ ಬಾದಷಹನ ದಂಡನೆ 0ುಲ್ಲಿ. ಈ ಕತೆ0ುಲ್ಲಿ ಬಾದಷಹನ ಮಗನು ಮಾತಿ0ಾನ ಮನೆ0ು ಹೆಣ್ಣುಮಗಳೊಬ್ಬಳಿಗೆ ಕಾಟ ಕೊಡುತ್ತಿದ್ದಾನೆ ಎಂಬ ಸುದ್ದಿ ತಿಳಿದಾಗ ಬಾದಷಹನು ಏನು ಮಾಡುತ್ತಾನೆ, 0ಾವ ಕ್ರಮ ತೆಗೆದುಕೊಳ್ಳುತ್ತಾನೆ ಎಂಬುದರ ನಿರೂಪಣೆ ಇದೆ. ಅಷ್ಟೇ ಅಲ್ಲ, ಬಾದಷಹನು ನ್ಯಾ0ುಪರನೂ, ನಿಷ್ಪಕ್ಷಪಾತಿ0ಾಗಿದ್ದರೂ ಅವನ ಕೈಕೆಳಗಿನವರು, ಬಳಗದವರು ಹಾಗಿಲ್ಲ ಎಂಬ ಮಾಹಿತಿ0ುೂ ಅವನನ್ನು ತಲುಪುತ್ತದೆ. ಈಗ ರಾಜಕುಮಾರನನ್ನು ದಂಡಿಸಿದರೆ ಮುಂದೆ ಅವನು ರಾಜನಾದಾಗ ಮಾತಿ0ಾನ ಕುಟುಂಬದ ಮೇಲೆ ಅವನು ಹಗೆತೀರಿಸಬಹುದಲ್ಲವೇ ಎಂಬ ಸಾಧ್ಯತೆ0ುನ್ನೂ ಅವನು ಎದುರಿಸುತ್ತಾನೆ. ಇದಕ್ಕೆ ಒಂದೇ ಪರಿಹಾರವೆಂದರೆ ತಾನೇ ಖುದ್ದಾಗಿ ಈ ಪ್ರಕರಣದ ತನಿಖೆ0ುನ್ನು ನಡೆಸುವುದು. ಆರೋಪಿ ಸಿಕ್ಕಿಬಿದ್ದರೆ ಒಂದೇ ಏಟಿಗೆ ಅವನ ರುಂಡವನ್ನು ಹಾರಿಸುವುದು. ತನ್ನ ಸುತ್ತಲವರು ಬೆಚ್ಚಿಬೀಳುವಂತೆ ಬಾದಷಹನು ಅದೇ ರೀತಿ ನಡೆದುಕೊಳ್ಳುತ್ತಾನೆ. ಆದರೆ ತಾನು ಕೊಂದದ್ದು ತನ್ನ ಮಗನನ್ನು ಅಲ್ಲ; ರಾಜಕುಮಾರನೊಂದಿಗೆ ಸಲಿಗೆಯಿಂದ ಇದ್ದು ಅವನ ಉಂಗುರವನ್ನು ತಾನು ಧರಿಸಿ, ರಾಜಪೋಷಾಕನ್ನೂ ಹಾಕಿಕೊಂಡು ಮಾತಿ0ಾನ ಮನೆಗೆ ಬಂದು ಕಾಟಕೊಡುತ್ತಿದ್ದ ರಾಜಕುಮಾರನ ಮಿತ್ರ ಅಬೂ ಸ0್ಯುದನನ್ನು ಎಂದು ಗೊತ್ತಾದಾಗ ಮೊದಲ ಬಾರಿಗೆ ಎಂಬಂತೆ ಬಾದಷಹನ ಕಣ್ಣುಗಳಲ್ಲಿ ನೀರು ಹರಿ0ುುತ್ತದೆ. ತಮ್ಮ ಪ್ರಿ0ು ಲೇಖಕನಾದ ಶೇಕ್ಸ್ಪಿ0ುರನನ್ನೂ ಮಾಸ್ತಿ ಚೆನ್ನಾಗಿ0ೆು ಓದಿಕೊಂಡಿದ್ದರು. ಮಚರ್ೆಂಟ್ ಆಫ್ ವೆನಿಸ್ ನಾಟಕದಲ್ಲಿ 0ುಹೂದಿ ಷೈಲಾಕನಿಗೆ ಕ್ರಿಶ್ಚಿ0ುನರಿಂದ 0ಾವ ಬಗೆ0ು ನ್ಯಾ0ು ಸಿಕ್ಕಿತ್ತೆಂಬುದನ್ನು ಅವರು ಅರಿ0ುದವರೇನೂ ಅಲ್ಲ. ಸ್ವತಃ ತಮ್ಮ ಮತ್ತೊಂದು ಪ್ರಸಿದ್ಧ ಕತೆ ಇಲ್ಲಿ0ು ತೀಪರ್ುನಲ್ಲಿ ಮಾಸ್ತಿ ಬ್ರಿಟಿಷರ ನ್ಯಾ0ುಪದ್ಧತಿ0ು ನೇರವಾದ ವಿಮಶರ್ೆ0ುನ್ನೇ ಮಾಡಿದ್ದಾರೆ. ಜೋಗ್ಯೋರ ಅಂಜಪ್ಪನ ಕೋಳಿ ಕತೆ0ುಲ್ಲಿ ಈ ವಿಮಶರ್ೆ ತುಸು ಲಘುಧಾಟಿ0ುಲ್ಲಿ ಮೂಡಿಬರುತ್ತದೆ. ಅಂದರೆ ಮಾಸ್ತಿ ತಮ್ಮ ಕತೆಗಳನ್ನು ಕೇವಲ ಹೇಳಲಿಲ್ಲ;ಕತೆಗಳ ಮೂಲಕವೂ ಹೇಳಿದರು; ಮಹತ್ತಾದ ಅನೇಕ ಸಂಗತಿಗಳತ್ತ ನಮ್ಮ ಗಮನ ಸೆಳೆದರು. ಈ ಬಗೆ0ು ಕತೆಗಳು ನಮ್ಮ ಕಾಲಕ್ಕೆ ಹೇಗೆ, ಎಷ್ಟು ಪ್ರಸ್ತುತವಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
*****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
No comments:
Post a Comment