0ುು.ಆರ್.ಅನಂತಮೂತರ್ಿ ಅವರ ಎಂದೆಂದೂ ಮುಗಿ0ುದ ಕಥೆ
0ುು.ಆರ್.ಅನಂತಮೂತರ್ಿ ಅವರ ಮೊದಲ ಕಥಾಸಂಕಲನ ಎಂದೆಂದೂ ಮುಗಿ0ುದ ಕಥೆ ಪ್ರಕಟವಾದದ್ದು ಐವತ್ತೆಂಟು ವರ್ಷಗಳ ಕೆಳಗೆ-1955ರಲ್ಲಿ. ಇದು ಆ ಸಂಕಲನದ ಮೊದಲ ಕಥೆ0ುೂ ಹೌದು. ಈ ಸಂಕಲನಕ್ಕೆ ಮುನ್ನುಡಿ ಬರೆದ ಗೋಪಾಲಕೃಷ್ಣ ಅಡಿಗರು ಎರಡು ಮುಖ್ಯ ಸಂಗತಿಗಳನ್ನು ಸೂಚಿಸಿದ್ದಾರೆ: ಇಲ್ಲಿನ ಕಥೆಗಳ ತಂತ್ರ ಹೊಚ್ಚ ಹೊಸದು; ಕನ್ನಡಕ್ಕೆ ನವ್ಯ ಎನ್ನುವಂಥದು..ಕವಿ ಮತ್ತು ಉತ್ತಮ ಕಥೆಗಾರ ಇವರ ನಡುವೆ 0ಾವ ವ್ಯತ್ಯಾಸವೂ ಇಲ್ಲ ಎಂಬ ಮಾತನ್ನು ಇಲ್ಲಿ ಈ ಕಥೆಗಳು ಸಾಧಿಸಿ ತೋರಿಸುತ್ತವೆ. ಕುತೂಹಲದ ಸಂಗತಿ ಎಂದರೆ ಸ್ವತಃ ಅನಂತಮೂತರ್ಿ0ುವರು ತಮ್ಮ ಆತ್ಮಕಥೆ ಸುರಗಿ ಮತ್ತು ಇನ್ನೂ ಅನೇಕ ಕಡೆಗಳಲ್ಲಿ ಹೇಳಿಕೊಂಡಿರುವಂತೆ ಆ ಕಾಲದಲ್ಲಿ ಅವರು 'ನವ್ಯ ವಿರೋಧಿ ಪ್ರಗತಿಶೀಲ ಪಂಥ'ದವರಾಗಿದ್ದರಂತೆ: ಈ ಸಮ0ುದಲ್ಲೆ, ನವ್ಯದ ವಿರೋಧದಲ್ಲೆ ನಾನು ಬರೆದ ಕತೆಗಳನ್ನು ತೆಗೆದುಕೊಂಡು ಹೋಗಿ ಆನಂದರಿಗೆ ಕೊಟ್ಟೆ. ಅವರು ಅದನ್ನು ಓದಿ ಒಂದು ರೆಡ್ ಪೆನ್ಸಿಲ್, ಒಂದು ಬ್ಲೂ ಪೆನ್ಸಿಲ್ನಲ್ಲಿ ಕೆಲವಕ್ಕೆ ರೈಟ್, ಕೆಲವಕ್ಕೆ ರಾಂಗ್ ಗುರುತು ಹಾಕಿ, 'ನೀನು ಬರೆ0ುುತ್ತಿವುದು ನವ್ಯ ಕತೆ ಇದ್ದಂತಿದೆ. ಣ ಟಠಛಿಞಜಜ ಟಿ ಡಿಜಜಟಜ ಚಿಟಿಜ ಣಜ ಞಜಥಿ ಣಠ ತಿಛಿ ಠಟಿಟಥಿ ಣಜ ತಿಡಿಣಜಡಿ ಚಿ ಅಂತ ಬರೆದರು. ಅನಂತಮೂತರ್ಿ0ುವರು ಸುರಗಿ0ುಲ್ಲಿ ಮತ್ತೊಂದೆಡೆ ಮಾಡಿಕೊಂಡಿರುವ ಟಿಪ್ಪಣಿ0ುೂ ಗಮನಿಸತಕ್ಕಂತಿದೆ: ಶೆಲ್ಲಿ, ಅನಕೃ, ನವೋದ0ು ಬರಹದ ಮೂಡಿನಲ್ಲಿದ್ದಾಗಲೋ, ಅದರಿಂದ ಹೊರಬರುತ್ತಿದ್ದ ಕಾಲದಲ್ಲೋ ನಾನು 'ಎಂದೆಂದೂ ಮುಗಿ0ುದ ಕತೆ' ಸಂಕಲನದ ಎಲ್ಲ ಕತೆಗಳನ್ನೂ ಬರೆದದ್ದು. ನನ್ನ ಬದುಕಿನ ದೃಷ್ಟಿಕೋನವೇ ಬದಲಾಗುವಂತಹ ಕೃತಿಗಳ ಓದು ಈ ಸಮ0ುದಲ್ಲಿ ನನಗೆ ಸಾಧ್ಯವಾಯಿತು. ಹಾಗೆ0ೆು ನನ್ನೊಳಗೆ ನಾನು ಭಾಷೆ0ು ಹೊಸದೊಂದು ಹುಡುಕಾಟದಲ್ಲಿ ತೊಡಗಿಕೊಂಡಿದ್ದೆ.ಚಾರಿತ್ರಿಕ ಮಹತ್ವ ಇರುವ ಈ ಮುನ್ನುಡಿ0ುಲ್ಲಿ ಅಡಿಗರು ಈ ಸಂಕಲನದ ಕೆಲವು ಕತೆಗಳನ್ನು ಮೆಚ್ಚಿಕೊಂಡು, ಮತ್ತೆ ಕೆಲವು ಕತೆಗಳನ್ನು ಪ್ರಖರವಾದ ವಿಮಶರ್ೆಗೆ ಒಳಪಡಿಸಿದರೂ ಒಟ್ಟಾರೆ0ಾಗಿ ಈ ರಚನೆಗಳನ್ನು ಸಾಕ್ಷ್ಯವಾಗಿಟ್ಟುಕೊಂಡು ಒಂದು ಮಾತನ್ನು ಮುನ್ನೋಟದಲ್ಲಿ ದಾಖಲಿಸಿದ್ದಾರೆ: ಇನ್ನೂ ಇನ್ನೂ ಉತ್ತಮವಾಗಿ ಇನ್ನಷ್ಟು ಶ್ರೀಮಂತ ಸಾಹಿತ್ಯವನ್ನು ಇವರು ಸೃಷ್ಟಿಸಬಹುದು; ಒಂದು ಪಕ್ಷ ಹಾಗಾಗದಿದ್ದರೂ ಈ ಲೇಖಕ ಸಾಹಿತ್ಯವಲ್ಲದ್ದನ್ನು ಎಂದೂ ಬರೆ0ುಲಾರ. ಅಡಿಗರು 'ಎಂದೆಂದೂ ಮುಗಿ0ುದ ಕಥೆ'0ುನ್ನು ಈ ಸಂಕಲನದ ಒಂದು ಮುಖ್ಯ ಕಥೆ0ಾಗಿ ಪರಿಗಣಿಸಿಲ್ಲ. ಅದರ ಗುಣದೋಷಗಳನ್ನು ಅವರು ಹೀಗೆ ಸೂಚಿಸಿದ್ದಾರೆ: ಈ ಸಂಕಲನಕ್ಕೆ ಹೆಸರು ಕೊಟ್ಟಿರುವ 'ಎಂದೆಂದೂ ಮುಗಿ0ುದ ಕಥೆ' 0ುಲ್ಲಿ ಉತ್ತಮವಾದ ಭಾವವಿದೆ, ಹೃದ0ುಂಗಮವಾದ ಬರವಣಿಗೆ0ುೂ ಇದೆ. ಆದರೆ ಅದರ ವಸ್ತುವಿನಲ್ಲಿ ಸಣ್ಣಕತೆಗೆ ಬೇಕಾದಷ್ಟು ಗುರುತ್ವ ಇಲ್ಲ ಎನಿಸುತ್ತದೆ. ಹಾಗನ್ನಿಸುವುದಕ್ಕೆ ಬಹುಶಃ ಕತೆ0ುಲ್ಲಿ ಭಾವಸಾಂದ್ರತೆ0ು ಸಂಕೀರ್ಣತೆ0ು ಅಭಾವವೇ ಕಾರಣವಿರಬಹುದು.
ಅನಂತಮೂತರ್ಿ0ುವರು ಇಲ್ಲಿ0ುವರೆಗೆ ರಚಿಸಿರುವ ಸಾಹಿತ್ಯವನ್ನು-ಕತೆ, ಕವಿತೆ, ಕಾದಂಬರಿ, ನಾಟಕ, ಪ್ರಬಂಧ-ವಿಮಶರ್ೆ- ಇಂದು ಒಟ್ಟಾಗಿ ಪರಿಗಣಿಸಿದಾಗ ಎಂದೆಂದೂ ಮುಗಿ0ುದ ಕಥೆ 0ುು ಅವೆಲ್ಲದರ ಹಿಂದಿನ ತಾತ್ತ್ವಿಕ ಭಿತ್ತಿ ಎಂಬಂತೆ ತೋರುತ್ತದೆ; ಅನಂತಮೂತರ್ಿ ಸಮಗ್ರ ಸಾಹಿತ್ಯಕ್ಕೆ ಈ ಕತೆ ಒಂದು ಮುನ್ನುಡಿ ಎಂಬಂತೆ, ಪ್ರವೇಶಿಕೆ ಎಂಬಂತೆ ಗೋಚರವಾಗುತ್ತದೆ. ಜೀವನವನ್ನು ಅದರ ಹಲವು ಮಗ್ಗುಲುಗಳಲ್ಲಿ ಆಪ್ತವಾಗಿ, ಸೂಕ್ಷ್ಮವಾಗಿ ಗಮನಿಸುತ್ತ, ಅನುಭವಿಸುತ್ತ, ಮಾಗಿ ಪಕ್ವಗೊಂಡ ಲೇಖಕನೊಬ್ಬ ತನ್ನ ಇಳಿಗಾಲದಲ್ಲಿ ಮಾಡಬಹುದಾದೊಂದು ರಚನೆ0ುನ್ನು ಅನಂತಮೂತರ್ಿ0ುವರು ತಮ್ಮ ಬರವಣಿಗೆ0ು ಆರಂಭ ಕಾಲದಲ್ಲಿ ಮಾಡಿರುವುದನ್ನು ಗಮನಿಸಿ ಅಚ್ಚರಿ0ಾಗುತ್ತದೆ.
ಈ ರಚನೆ0ುಲ್ಲಿ ಕಥೆ0ು ಅಂಶ ಅನ್ನುವುದು ಇಲ್ಲವೇ ಇಲ್ಲ ಎನ್ನಿಸುವಷ್ಟು ತೀರ ಗೌಣವಾಗಿದೆ. ಒಂದು ಜೀವನ ವಿನ್ಯಾಸವೇ ಇಲ್ಲಿ ಕಥೆ0ು ವಿನ್ಯಾಸವನ್ನು ಪಡೆದುಕೊಂಡಿದೆ. ಇಲ್ಲಿ ಚರಿತ್ರೆ ಎಂಬುದು ಏನಾದರೂ ಇದ್ದರೆ ಅದು ಪೀಳಿಗೆಗಳ ಮುಂದುವರಿಕೆ0ುಲ್ಲಿ ಮಾತ್ರ ಇದೆ. ಆದರೆ ಈ ಚಲನೆ0ಾದರೂ ಸರಳರೇಖಾತ್ಮಕವಾಗಿಲ್ಲ; ಅದಕ್ಕೊಂದು ಚಕ್ರೀ0ು ಗತಿ ಇದ್ದ ಹಾಗೆ ಕಾಣುತ್ತದೆ. ಅಂದರೆ ಈಗ ಅಜ್ಜ- ಅಜ್ಜಿ0ುರಾಗಿ ಇರುವವರು ಒಂದು ಕಾಲದಲ್ಲಿ ಮೊಮ್ಮಕ್ಕಳಾಗಿದ್ದವರೇ. ಆಗ ಅವರು ತಮ್ಮ ಅಜ್ಜ-ಅಜ್ಜಿ0ುರಿಂದ ಕೇಳಿದ ಕಥೆ ಈಗ ಅವರ ಮೂಲಕ ಅವರ ಮೊಮ್ಮಕ್ಕಳಿಗೆ ಹೇಳಲ್ಪಡುತ್ತಿದೆ. ಬೆಂಕಿ0ುಲ್ಲಿ ಬೆನ್ನು ಕಾಯಿಸಿಕೊಳ್ಳುತ್ತಾ ಕೂತ ಮುದುಕನಿಗೆ ತನ್ನ ಮುದುಕಿ ಮೊಮ್ಮಗನಿಗೆ ಹೇಳುತ್ತಿರುವ ಕಥೆ ಕಿವಿಗೆ ಬೀಳುತ್ತಿದೆ. ಅವನ ಅಜ್ಜಿ0ುಂತೆ0ೆು ಮುದುಕಿ0ುೂ ತಿಂಗಳುಗಟ್ಟಲೆ ಆ ಕಥೆ0ುನ್ನು ಹೊಸ ಹೊಸದಾಗಿ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದಾಳೆ. ಅವನ ಮನೆ0ುಲ್ಲಿ ಹುಟ್ಟಿದ ಮಕ್ಕಳೆಲ್ಲಾ ಆ ಮುಗಿ0ುದ ಕಥೆ0ುನ್ನು ಕೇಳುತ್ತಲೇ ಎಷ್ಟೋ ದಿನ ನಿದ್ದೆ ಮಾಡಿದ್ದಾರೆ. ಒಂದೇ ಕಥೆ, ಎಂದೆಂದೂ ಮುಗಿ0ುದ ಆ ಕಥೆ0ುನ್ನು-ರಾಜಕುಮಾರ ಕುಮಾರಿ0ುರ ಕಥೆ- ಅವನು ಹಲವು ಬಾರಿ ಕೇಳಿದ್ದಾನೆ. ಪ್ರತಿ ಪೀಳಿಗೆ0ುೂ ಅದನ್ನು ತುಸು ಮಾರ್ಪಡಿಸಿ, ವಿಸ್ತರಿಸಿ ಮರುನಿರೂಪಿಸುತ್ತಿದ್ದರೂ ಕಥೆ0ು ಮೂಲ ಭೂಮಿಕೆ ಮಾತ್ರ ಅದೇ: ತುದಿ ಮೊದಲಿಲ್ಲದ ಅನಂತವಾದ ಕಥೆ..ಅನಂತವಾದ ರೂಪಗಳಲ್ಲಿ ಅವರ ಪ್ರೇಮ..ಹೂವಾಗಿ, ಕಾ0ಾಗಿ, ನೀರಾಗಿ, ಮೋಡವಾಗಿ, ಗಾಳಿ0ಾಗಿ, ಬೆಂಕಿ0ಾಗಿ, ಒಂದೆ? ಎರಡೆ?..ಮುಗಿ0ುದ ಕಥೆ..ಎಂದೆಂದೂ ಮುಗಿ0ುದ ಕಥೆ!... ಪ್ರತಿ ಸಾರಿ0ುೂ ಅವರು ಬೇರ್ಪಡುತ್ತಾರೆ..ಪ್ರತಿ ಸಾರಿ0ುೂ ಹೇಗೋ ಪ್ರ0ುತ್ನಿಸಿ ಮತ್ತೆ ಸೇರುತ್ತಾರೆ. 'ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎನ್ನದೆ ಸತತವಾಗಿ ಅನಂತವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಬಂದ ಕಥೆ..ಮುಗಿ0ುದ ಕಥೆ..ಎಂದೆಂದೂ ಮುಗಿ0ುದ ಪ್ರೇಮದ ಕಥೆ. ಇಂದು ಆ ಕಥೆ ಮತ್ತೆ ತನ್ನ ಕಿವಿ0ು ಮೇಲೆ ಬೀಳುತ್ತಿರುವಾಗ, ಮುದುಕಿ ಅದನ್ನು ಇನ್ನೂ ಮುಂದುವರೆಸಿ ಹೇಳುತ್ತಿರುವುದನ್ನು ಕೇಳಿ ಅವನಿಗೆ ಆಶ್ಚ0ರ್ುವಾಗುತ್ತದೆ;ಕಿವಿ ಮತ್ತಷ್ಟು ಚುರುಕಾಗುತ್ತದೆ: ..ಆ ಮೇಲೆ..ಆ ರಾಜಕುಮಾರ ಆ ರಾಜಕುಮಾರಿ ಹೀಗೇ ತುಂಬ ಪ್ರೀತಿಯಿಂದ ಬದುಕುತ್ತಿದ್ದಾಗ..ಒಂದಾನೊಂದು ದಿನ..ಆಗಿ ಸತ್ತೋದ್ರು..ಸತ್ತು ಹೋದ್ರೂ ಒಟ್ಟಿಗೇ ಇದ್ರು..ಇಬ್ಬರೂ ಆಕಾಶಕ್ಕೆ ಹೋಗಿ ಎರಡು ಮೋಡವಾಗಿ ಆ ಅಲ್ಲೆಲ್ಲಾ ಸಂಚರಿಸುತ್ತಾ ಸುಖ್ವಾಗಿ ಇದ್ರು..ಒಂದಿನ ಭಾರೀ ಮಳೆ ಆಗಿ ರಾಜಕುಮಾರನ ಮೋಡ ಕೆಳಗೆ ಬಿತ್ತು..ಒಂದು ಕೊಳದಲ್ಲಿ ನೀರಾಗಿ ಸೇರಿಕೋತು ..ಆಗ ರಾಜಕುಮಾರಿ ಆ ಕೊಳದಲ್ಲಿ ಮೀನಾಗಿ ಬಂದು ಜೀವ್ಸಿದ್ಲು..ಆಮೇಲೆ ಹಿಂಗೇ ಇರ್ತ ಇಂದಾನೊಂದು ದಿನ ಒಬ್ಬಾನೊಬ್ಬ ಬೆಸ್ತ ಆ ಮೀನನ್ನು ಹಿಡ್ದು ತಿಂಧಾಕಿಬಿಟ್ಟ. ನೀರಾಗಿದ್ದ ರಾಜಕುಮಾರ ಕೊರಗೀ ಕೊರಗೀ ಬಡವಾಗಿ ಮೋಡವಾದ..ಮೀನನ್ನು ತಿಂದ ಬೆಸ್ತ ಹೀಗೇ ಇತರ್ಾ ಒಂದಿನ ಸತ್ತು ಮಣ್ಣಾದ..ಆ ಮಣ್ಣಿಂದ ಒಂದು ಸೀಕಂಚಿ ಗಿಡಾ ಹುಟ್ತು. ನೋಡು ಮಗೂ, ಮೀನಾಗಿ ಬೆಸ್ತನ ಹೊಟ್ಟೆ ಸೇರಿದ್ದ ರಾಜಕುಮಾರೀನೇ ಹಾಗಾಗಿದ್ದು..ಮೋಡಾ ಅದ ರಾಜಕುಮಾರ ಆಗ ಸೀಕಂಚೀ ಗಿಡಕ್ಕೆ ಮಳೆ ಆಗಿ ಸುರ್ದ..ಒಂದಿನ ಅಲ್ಲಿಂದ್ಲೂ ಅವ್ರಿಬ್ರಿಗೆ ಅಗಲಿಕೆ ಆ0ು್ತು.. ರಾಜಕುಮಾರಿ ಚಂದ್ರನ್ನ ಹೋಗಿ ಸೇರಿದ್ಲು..ರಾಜಕುಮಾರ ಸೂ0ರ್ುನ್ನ ಹೋಗಿ ಸೇರಿದ..ನೋಡು ಮಗು ಅದಕ್ಕೇ ಚಂದ್ರ ರಾಜಕುಮಾರೀನ ಹೊತ್ಕೊಂಡು ಆಕಾಶದಲ್ಲಿ ತಿರುಗ್ತಾನೆ..ಆಗ ರಾಜಕುಮಾರಿ, ರಾಜಕುಮಾರ ಇಬ್ರೂ ತುಂಬ ದುಃಖದಲ್ಲಿ ಅಳ್ತಾರೆ..ಅದಕ್ಕೆ ಬೆಳಗಿನ ಜಾವ ಈ ಭೂಮಿ ಮೇಲೆಲ್ಲಾ ಇಬ್ಬನಿ ಹನಿ ಹನಿ0ಾಗಿ ಬಿದ್ದಿರೋದು...
ಹುಟ್ಟು-ಸಾವು, ಕೂಡುವಿಕೆ-ಅಗಲುವಿಕೆಗಳ ಈ ನಿರಂತರ ಚಕ್ರವು ಮನುಷ್ಯ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಒಟ್ಟಾರೆ ಪ್ರಕೃತಿ0ು ಆಗುಹೋಗುಗಳ ವಿಶಾಲ ಭಿತ್ತಿ0ುಲ್ಲಿ ಪರಿಭಾವಿಸುವ ಸೂಚನೆ0ುನ್ನೂ ಕಥೆ ಸೂಚ್ಯವಾಗಿ ನೀಡುತ್ತದೆ. ಇದು ಪ್ರಾಣಿಪ್ರಪಂಚದ ಕಥೆ0ುೂ ಹೌದು, ಸಸ್ಯಪ್ರಪಂಚದ ಕಥೆ0ುೂ ಹೌದು. ಇವನಿಗೆ ಅನ್ನನೀಡುವ ಹೊಲವೂ ಒಮ್ಮೆ ಬರಿದಾಗಿ ಮತ್ತೆ ಆ ರಿಕ್ತಸ್ಥಿತಿಯಿಂದಲೇ ಋತುಮಾನದ ಗತಿ0ುಲ್ಲಿ ಮತ್ತೆ ಮೈದುಂಬಿಕೊಂಡು ಫಲ ನೀಡುತ್ತದೆ. ಆ ಅನ್ನವನ್ನೇ ವಂಶಪಾರಂಪ0ರ್ುವಾಗಿ ಅವರು ಉಣ್ಣುತ್ತ ಬಂದಿರುವುದು. ಮನೆಗೆ ಸಲ್ಲುವ ಮಾತು ಕೊಟ್ಟಿಗೆಗೂ ಸಲ್ಲುವಂಥದ್ದು: ಆ ನಾಲ್ಕು ಎಮ್ಮೆ0ುಂತೂ ಅವನ ಮನೆ0ುಲ್ಲೇ ಹುಟ್ಟಿ ಬೆಳೆದವು...ಅವುಗಳ ತಾಯಿ0ು, ತಾಯಿ0ು, ತಾಯಿ0ು, ಅಜ್ಜಿ0ು ಹಾಲನ್ನೋ ಏನೋ ಅವನು ಕುಡಿದು ಬೆಳೆದದ್ದು... ಅಂದರೆ ಅನಂತಮೂತರ್ಿ0ುವರ ಕಥೆ0ುು ಒಂದು ಕುಟುಂಬದ ಕಥೆ0ುಲ್ಲಿ ಒಟ್ಟಾರೆ ಬದುಕಿನ ಕಥೆ0ುನ್ನೇ ಧ್ವನಿಸುವ ಮಹತ್ವಾಕಾಂಕ್ಷೆ0ುನ್ನು ತೋರಿದ್ದಾರೆ. ಈ ಕುಟುಂಬಕ್ಕೆ, ಅದರ ಸದಸ್ಯರಿಗೆ ನಿದರ್ಿಷ್ಟ ಹೆಸರುಗಳಿಲ್ಲ. ಕಥೆ0ು ಕಾಲ ದೇಶಗಳೂ ನಿದರ್ಿಷ್ಟವಾಗಿಲ್ಲ. ಏಕೆಂದರೆ ಈ ಕಥೆಗೆ ತಾನಾಗಿ ಒಂದು ಬಗೆ0ು ಸಾರ್ವತ್ರಿಕತೆ, ಸಾರ್ವಕಾಲಿಕತೆ ಪ್ರಾಪ್ತವಾಗಿಬಿಟ್ಟಿದೆ. ಈ ನಿರಂತರತೆಯಿಂದ 0ಾವ ಜೀವಿಗೂ ಮುಕ್ತಿಯಿಲ್ಲ, ಬಿಡುಗಡೆ ಇಲ್ಲ. ಈ ಕಥೆ ಕೊನೆ ಮುಟ್ಟುವುದಿಲ್ಲ. ಮುಟ್ಟಿದರೆ: ಈ ಕಥೆ ಕೊನೇ ಮುಟ್ಟಿದರೆ-ಬೆಳಕಾಗಲ್ಲ,ಕತ್ತಲಾಗಲ್ಲ, ಮರದಲ್ಲಿ ಹಣ್ಣಾಗುವುದಿಲ್ಲ, ಗಿಡದಲ್ಲಿ ಹೂವಾಗಲ್ಲ-ಮೊಮ್ಮಕಳಿಗೆ ಕಥೆ ಹೇಳೋ ಅಜ್ಜಿ0ೋರು ಬದುಕಲ್ಲ!.
ಅಂದರೆ 'ಬದಲಾವಣೆ' ಎಂಬುದು ತೀರ ಮೇಲ್ಪದರದ್ದು. ಅದೂ ಮನುಷ್ಯ ಜಗತ್ತಿನಲ್ಲಿ, ಇತಿಹಾಸದ ಪ್ರಕ್ರಿ0ೆು0ುಲ್ಲಿ ಸಂಭವಿಸುವ ವಿದ್ಯಮಾನಗಳೂ ಈ ಏಂದೆಂದೂ ಮುಗಿ0ುದ ಕಥೆ0ು ಒಟ್ಟಾರೆ ವಿನ್ಯಾಸದಲ್ಲಿ ಮಾತ್ರ ಸೀಮಿತ ನೆಲೆ0ುಲ್ಲಿ ನಿಜ. ಹೀಗೆಂದ ಕೂಡಲೇ ಈ ಕಥೆ0ು ದರ್ಶನದಲ್ಲೇ ಒಂದು ಬಗೆ0ು ಸ್ಥಗಿತತೆ, ಪ್ರತಿಗಾಮಿತನ, 0ುಥಾಸ್ಥಿತಿವಾದ ಸೂಚಿತವಾಗುವುದಿಲ್ಲವೇ ಎಂಬ ತಾತ್ತ್ವಿಕ ಪ್ರಶ್ನೆ0ುೂ ಏಳುತ್ತದೆ. ಇದ್ದಕ್ಕೆ ಉತ್ತರವನ್ನು ಅನಂತಮೂತರ್ಿ0ುವರ ಕೇವಲ ಈ ಬಿಡಿ ರಚನೆ0ುಲ್ಲಿ ನಿರೀಕ್ಷಿಸುವಂತಿಲ್ಲ. ಅನಂತಮೂತರ್ಿ0ುವರು ಒಂದೇ ಕಥೆ0ುನ್ನು ಮತ್ತೆಮತ್ತೆ ಬೇರೆಬೇರೆ ರೀತಿ0ುಲ್ಲಿ, ಬೇರೆಬೇರೆ ಅವಧಾರಣೆ0ುಲ್ಲಿ ಬರೆ0ುುವಂಥ ಲೇಖಕರು. ಒಂದೇ ಪಾತ್ರವನ್ನು, ಸನ್ನಿವೇಶವನ್ನು, ಸಮಸ್ಯೆ0ುನ್ನು ಬೇರೆಬೇರೆ ಸಂದರ್ಭಗಳಲ್ಲಿಟ್ಟು ಪರಿಶೀಲಿಸುವವರು, ಪರೀಕ್ಷಿಸುವವರು, ಅವುಗಳಿಂದ ಹೊರಡುವ ಬಹುವರ್ಣ, ಬಹು ಧ್ವನಿ, ಮತ್ತು ಅನಂತ ಸಾಧ್ಯತೆಗಳ ಒಟ್ಟಾರೆ ನೋಟದಲ್ಲಿ ಬದುಕನ್ನು ಬಗೆ0ು ಬ0ುಸುವವರು. ಸಂಸ್ಕಾರದ ಘಟ್ಟದಿಂದಂತೂ ಅನಂತಮೂತರ್ಿ0ುವರ ಸಾಹಿತ್ಯವು ಬದಲಾವಣೆ0ು ವೈ0ುಕ್ತಿಕ ಮತ್ತು ಚಾರಿತ್ರಿಕ ಒತ್ತಡಗಳ ಪರಿಶೀಲನೆ0ು ಕಥನವೇ ಆಗಿದೆ. ವ್ಯಕ್ತಿ ಮತ್ತು ಸಮುದಾ0ುಗಳ ಪ್ರಜ್ಞೆ0ುಲ್ಲೇ ಸ್ಫೋಟವಾಗುವ ಕ್ಷಣಗಳನ್ನು ಗ್ರಹಿಸಿ ದಾಖಲಿಸಿರುವಂತೆ ಅವರು ಅಗ್ರಹಾರಗಳು, ಸಣ್ಣ ಊರುಗಳು, ಅಷ್ಟೇಕೆ ಇಡೀ ಇಂಡಿ0ಾ ರಾಜಕೀ0ುವಾಗಿ, ಆಥರ್ಿಕವಾಗಿ, ಸಾಮಾಜಿಕವಾಗಿ, ಸಾಂಸೃತಿಕವಾಗಿ ಬದಲಾಗುತ್ತಿರುವ ಪರಿ0ುನ್ನು ಸೂಕ್ಷ್ಮವಾಗಿ ಹಿಡಿದಿದ್ದಾರೆ. ಅವರ ಇತ್ತೀಚಿನ ಕೃತಿಗಳಂತೂ ಒಟ್ಟಾರೆ ಮನುಷ್ಯ ನಾಗರೀಕತೆ0ು ಸ್ವರೂಪವೇ ನಿಣರ್ಾ0ುಕವಾಗಿ ಬದಲಾಗುತ್ತಿರುವ ರೀತಿ0ುನ್ನು ಅತಂಕದಲ್ಲಿ, ದಿಗ್ಭ್ರಮೆ0ುಲ್ಲಿ ನಿರೀಕ್ಷಿಸುತ್ತಿವೆ. ತನ್ನ ಸ್ಥಿತಿ0ುನ್ನು ಕೇವಲ ರಾಜಕೀ0ುವಾಗಿ ಮಾತ್ರವಲ್ಲ, ಆಧ್ಯಾತ್ಮಿಕವಾಗಿ ದಾಟುವ ಮನುಷ್ಯ ಪ್ರ0ುತ್ನಗಳನ್ನು ಅವರು ಅಲ್ಲಗೆಳೆ0ುುವುದಿಲ್ಲ ಅಥವಾ ಸಿನಿಕತನದಿಂದ ನೋಡುವುದಿಲ್ಲ. ಅಷ್ಟೇ ಅಲ್ಲ, ನಿರಂತರತೆ0ುಲ್ಲಿ, ಕೇವಲ ಮುಂದುವರಿಕೆ0ುಲ್ಲಿ ನಿಷ್ಕ್ರಿ0ುತೆ0ು, ಕೊಳೆ0ುುವಿಕೆ0ು ಆ0ಾಮವೂ ಇರುತ್ತದೆ ಎಂಬುದನ್ನು ಅವರು ಅರಿ0ುದವರೇನಲ್ಲ. ಉದಾಹರಣೆಗೆ ಭಾರತೀಪುರದಲ್ಲಿ ದಾಖಲಾಗಿರುವ ಈ ಮಾತುಗಳನ್ನು ಗಮನಿಸಬಹುದು: ಅಂಗಡಿ0ು ಬೆಂಚಿನ ಮೇಲೆ ಕೂತ ಇವರೆಲ್ಲ ಬಲು ಹಳಬರೇ. ಬೆಳಿಗ್ಗೆ ತಿಂದ ಅವಲಕ್ಕಿ0ುನ್ನೊ ದೋಸೆ0ುನ್ನೋ ಜೀಣರ್ಿಸಿಕೊಳ್ಳುತ್ತಾ ಕೂತವರು. ಹೊಗೆ ತುಂಬಿದ ಒಲೆ0ೆುದುರು ಇವರ ಹೆಂಗಸರು ಇಡೀ ದಿನ ಕೂತಿರುತ್ತಾರೆ, ದೇವರ ದರ್ಶನಕ್ಕೆಂದು ನಿತ್ಯ ಬರುವ ಹೊಸ ಮುಖಗಳನ್ನು ನೋಡುತ್ತ. ಹೀಗೆ ಪ್ರತಿದಿನ ಒಬ್ಬರಿಗೊಬ್ಬರು ಹಾಜರಿ ಹಾಕಿ ಊಟದ ಹೊತ್ತಿಗೆ ಮನೆಗೆ-ಅಥವಾ ಮನೆ0ುಲ್ಲಿ ತೊಂದರೆಯಿದ್ದಾಗ ದೇವಸ್ಥಾನಕ್ಕೆ-ಊಟಕ್ಕೆ ಹೋಗುತ್ತಾರೆ. ಒಟ್ಟು ಮಂಜುನಾಥನನ್ನು ನಂಬಿ ಬದುಕುತ್ತಾರೆ. 0ಾವುದೋ ಹಳ್ಳಿ0ುಲ್ಲಿ ಇವರ ಗದ್ದೆಯಿದೆ, ಅದರ ಕೆಸರನ್ನು ತುಳಿದು 0ಾವುದೋ ರೈತ ಉಳುತ್ತಾನೆ. ಭೂತರಾ0ುನಿಗೆ ಹೆದರಿ ಇವರು ಗೇಣಿ ಕೊಡುತ್ತಾರೆ. ಕುಂಬಳಕಾಯಿ, ಸೌತೇಕಾಯಿ, ಬಾಳೆಗೊನೆ ಕೊಡುತ್ತಾರೆ. ಹೇಗೋ ಉದರಂಭರಣ ನಡೆ0ುುತ್ತದೆ. 0ಾರೋ ಹೆರುತ್ತಾರೆ, 0ಾರೋ ಸಾ0ುುತ್ತಾರೆ. ವರ್ಷಕ್ಕೆ ಕಡಿಮೆ0ೆುಂದರೆ ನಾಲ್ಕೈದು ವೃದ್ಧಿ, ನಾಲ್ಕೈದು ಸೂತಕ, ಹತ್ತಾರು ಮದುವೆ-ಅಂತೂ ಕಾಲ ಚಲಿಸುತ್ತದೆ, ಕೂದಲು ನೆರೆ0ುುತ್ತದೆ, ಹಲ್ಲು ಬೀಳುತ್ತದೆ. ಇಂಥ ಸ್ಥಿತಿ0ು ಬದಲಾವಣೆಗೆ ತಾನೆ ಜಗನ್ನಾಥ ಹಾತೊರೆ0ುುವುದು. ಆದರೆ ಅವನಿಗೆ ಕ್ರಾಂತಿ0ು ಅಗತ್ಯವೂ ಗೊತ್ತು, ಅದರ ಮಿತಿ0ುೂ ಗೊತ್ತು. ಅವಸ್ಥೆ0ು ಕೃಷ್ಣಪ್ಪಗೌಡನಂತೂ ರಾಜಕೀ0ು ಬದಲಾವಣೆ0ು ಹಲವು ಸಾಧ್ಯತೆಗಳನ್ನು ಚಿಂತಿಸಿದವನು, ಆ ಪ್ರ0ೋಗಗಳಲ್ಲಿ ಬದ್ಧತೆಯಿಂದ ತೊಡಗಿಕೊಂಡವನು. ಆದರೆ ತನ್ನ ಜೀವನದ ಒಂದು ಘಟ್ಟದಲ್ಲಿ ಅಂಥ ಕೃಷ್ಣಪ್ಪಗೌಡನಿಗೂ ಹಳ್ಳಿಗೆ ಮರಳಿ, ಅಶ್ವತ್ಥ ಮರದ ಬುಡದಲ್ಲಿ ಕೂತು ಕಾಲದ ನಿರಂತರತೆ0ುನ್ನು ಅನುಭವಿಸಬೇಕು ಅನ್ನಿಸತ್ತೆ. ಸೂ0ರ್ುನ ಕುದುರೆ0ುಲ್ಲಿ ಅನಂತುವಿಗೆ ಹಕ್ಕಿಗಳನ್ನು ತೋರಿಸುತ್ತ ಹಡೆ ವೆಂಕಟ ಹೇಳುತ್ತಾನೆ: ನಮ್ಮ ಕಣ್ಣಿಗೆ ಬೀಳೋಕೂ ಅವಕ್ಕೆ ಇಷ್ಟವಿಲ್ಲ ನೋಡು. ನಿನ್ನ ಬದಲಾವಣೇನೂ ಅವಕ್ಕೆ ಬೇಡ. ನನ್ನ ಅಭ್ಯಂಜನವೂ ಬೇಡ. ಭಾರೀ ಸೊಕ್ಕಿನ ಕೊಳ್ಳಿ ದೆವ್ವಗಳ ತಲೆ ಮೇಲೂ ಅವು ಪಿಚಕ್ಕಂತ ಹಿಕ್ಕೆ ಹಾಕಿ ಪುರ್ರಂತ ಹಾರಿ ಬಿಡ್ತಾವೆ. ಅವು ಬದುಕಲಿಕ್ಕೆ ಹಡೆನೂ ಆಗಬೇಕಿಲ್ಲ, ರಣವೀರರೂ ಆಗಬೇಕಿಲ್ಲ. ಮನುಷ್ಯ ಪ್ರಪಂಚದ ಎಲ್ಲ ಧಾವಂತ, ಜಂಜಾಟಗಳಿಗೆ ವೈದೃಶ್ಯವೆಂಬಂತೆ, 'ಪ್ರಾಗೇತಿಹಾಸದ ಕಾಲದಿಂದ ಹುಟ್ಟುತ್ತ, ಸಾ0ುುತ್ತ, ತೆವಳುತ್ತ, ಸಿಕ್ಕಿದ್ದನ್ನು ಸಿಕ್ಕಾಗ ತಿನ್ನುತ್ತ, ಇರುವ ಕ್ಷಣದಲ್ಲಿ ಇರುವ ಜಾಗದ ಬಣ್ಣವನ್ನು ಪಡೆ0ುುತ್ತ, ಶಾಶ್ವತವಾಗಿ ಉಳಿದು ಬಿಟ್ಟ' ಓತಿಕೇತದ ನಿವರ್ಿಕಾರತೆ0ುತ್ತ ಓದುಗರ ಗಮನವನ್ನು ಸೆಳೆ0ುುವ ಅನಂತಮೂತರ್ಿ0ುವರ ಬೇಟೆ, ಬಳೆ ಮತ್ತು ಓತಿಕೇತ ಕಥೆ0ುು ಜೀವನದ ಸ್ಥಾಯಿ0ುನ್ನು ಸೂಚಿಸುವ ಪರಿ0ುೂ ಈ ಸಂದರ್ಭದಲ್ಲಿ ನೆನಪಿಗೆ ಬರುವಂತಿದೆ. ಅಜ್ಜನ ಹೆಗಲ ಸುಕ್ಕುಗಳು ಕವಿತೆ0ುನ್ನೂ ಇದೇ ಹಿನ್ನೆಲೆ0ುಲ್ಲಿ ಪರಿಭಾವಿಸಿಕೊಳ್ಳಬೇಕು.
ಆದರೆ ಅನಂತಮೂತರ್ಿ0ುವರು ಮುಂದುವರಿಕೆ0ುನ್ನಾಗಲೀ ಬದಲಾವಣೆ0ುನ್ನಾಗಲೀ ದ್ವಿದಳ ವಿಭಜನೆ0ುಲ್ಲಿ, ಎಂದೂ ಕೂಡದ ಸಮಾನಾಂತರ ರೇಖೆಗಳಲ್ಲಿ ನೋಡುವ ಲೇಖಕರಲ್ಲ. ಈ 0ುುಗಳ ಸಾಧ್ಯತೆ0ುನ್ನು, ದ್ವಂದ್ವ ಸತ್ಯವನ್ನು ಏಕತ್ರ ಹಿಡಿದು ಬಿಡುವ ಮಹತ್ವಾಕಾಂಕ್ಷೆ ಅವರದು. ಅಂಥ ಹಲವು ಕ್ಷಣಗಳು ಅವರ ಸಾಹಿತ್ಯದಲ್ಲಿ ಹೊಳೆ0ುುತ್ತವೆ. ಪ್ರಾತಿನಿಧಿಕವಾಗಿ ಕೃಷ್ಣಪ್ಪ ಗೌಡನ ಈ ಮಾತುಗಳನ್ನು ನಾವು ಅಗತ್ಯ ಕೇಳಿಸಿಕೊಳ್ಳಬೇಕು: ಈ ದೇಶದಲ್ಲಿ ನಾವೆಲ್ಲ ದಡ ಹತ್ತಿರೋ ಜನ. ಈ ಜನರ ಸವಲತ್ತುಗಳನ್ನು ಹೆಚ್ಚಿಸೋ ರಾಜಕೀ0ು ಈ ತನಕ ಮಾಡಿದ್ದಾ0ು್ತು. ಅದರಿಂದ ನಮ್ಮನ್ನು ಸದಾ ಆವರಿಸೋ ಕ್ಷುದ್ರತೆಯಿಂದ ಬಿಡುಗಡೆ ಸಾಧ್ಯ ಇಲ್ಲ ಅನ್ನೋದು ನನಗೀಗ ಗೊತ್ತಾಗಿದೆ. ಅಣ್ಣಾಜಿ ಹತ್ರ ನಾನು ತುಂಬ ಈ ವಿಷ0ು ಚಚರ್ಿಸ್ತ ಇದ್ದೆ. ನಮ್ಮ ದೈನಿಕಗಳೇ ಹೇಗೆ ಪ್ರಭೆ ಪಡೆ0ೋದು ಸಾಧ್ಯ ಅಂತ? 0ಾವತ್ತೂ ಚರಿತ್ರೇಲಿ ದಡ ಹತ್ತದೇನೇ ಇದಾರಲ್ಲ ಅವರಿಗೆ ಸಿಟ್ಟು ಬರೋ ಹಾಗೆ ಮಾಡಕ್ಕೆ ಸಾಧ್ಯವಾದರೆ ಆ ಸಿಟ್ಟು ಸಮಾಜದ ಕ್ಷುದ್ರತೇನೇ ಸುಟ್ಟೀತು ಅಲ್ವ? ಈ ಆಸೆ ಇನ್ನೂ ಉಳ್ಕಂಡಿದೆ.
*******
ಟಿ.ಪಿ.ಅಶೋಕ, ಅಗ್ರಹಾರ, ಸಾಗರ-577401 94482 54228
No comments:
Post a Comment