ಅಡಿಗರ
‘ಸಾಮಾನ್ಯನಂತೆ ಈ ನಾನು!’ ಮತ್ತು ‘ಶ್ರೀ ರಾಮನವಮಿಯ ದಿವಸ’... ಬೇಂದ್ರೆಯವರ
‘ಚಿಗರಿಗಂಗಳ ಚೆಲುವಿ’ ಹಾಗೂ ‘ಸಂಜೀಯ ಜಾವಿಗೆ’.... ಕೆ.ಎಸ್.ಎನ್ ಅವರ ‘ಅಕ್ಕಿ
ಆರಿಸುವಾಗ’ - ಈ ಕವನಗಳನ್ನು ಅರ್ಥೈಸಿಕೊಂಡಿರುವುದಕ್ಕಿಂತ ಅತಿ ಭಿನ್ನವಾದ ಅರ್ಥಗಳು,
ಹಿನ್ನಲೆಗಳು, ಪ್ರಸ್ತುತತೆಗಳು ಎಲ್ಲವನ್ನೂ ನಿನ್ನೆಯ ಕಾವ್ಯ ಸಂಜೆ ದೊರಕಿಸಿಕೊಟ್ಟಿತು!
ಅದರಲ್ಲೂ ‘ಸಾಮಾನ್ಯನಂತೆ ಈ ನಾನು!’ ಹಾಗೂ ‘ಶ್ರೀ ರಾಮನವಮಿಯ ದಿವಸ’ ಕವಿತೆಗಳೊಳಗಿನ
ಹೊಳಹುಗಳು, ರಚನೆಯ ಹಿಂದಿನ ಕಥೆ, ಪ್ರತಿ ಸಾಲು, ಸಾಲಿನ ಪ್ರತಿ ಶಬ್ದದೊಳಗಿನ ‘ಧ್ವನಿ’,
‘ನಾದ’ ಎಲ್ಲವನ್ನೂ ದಿವಾಕರ್ ಸರ್ ಅವರು ಆಸ್ಥೆಯಿಂದ ಬಹು ಚೆನ್ನಾಗಿ ಮನದಟ್ಟುಮಾಡಿಕೊಡುವಾಗ,
ಕವದೊಳಗೆ ನಾನೇ ಮಾಯವಾಗಿ ಹೋಗಿದ್ದೆ! ನನ್ನನ್ನು ಬಹುವಾಗಿ ಕಾಡಿದ್ದು ‘ಸಾಮಾನ್ಯನಂತೆ ಈ
ನಾನು!’ ಕವಿತೆಯ ಈ ಚರಣ ಹಾಗೂ ‘ಶ್ರೀ ರಾಮನವಮಿಯ ದಿವಸ’ ಕವನದ ಈ ಸಾಲುಗಳು!! Somathanahalli Diwakar
ಸರ್ ನಿಮಗೆ ಅನಂತ ಧನ್ಯವಾದಗಳು ಈ ಸಾಲುಗಳನ್ನು ಅರ್ಥೈಸಿಕೊಳ್ಳಲು, ಅದರೊಳಗೇ
ಕಳೆದುಹೋಗಲು ಮಾರ್ಗದರ್ಶನ ಮಾಡಿದ್ದಕ್ಕೆ! ಈ ಕೆಳಗಿನ ಸಾಲುಗಳು ಬಿಟ್ಟೂ ಬಿಡದೇ
ಕಾಡುತ್ತಲೇ ಇವೆ..... ತುಸು ದಿನಗಳವರೆಗೆ ಕಳೆದುಹೋಗಬೇಕೆಂದೆನಿಸಿದೆ...
ಸಾಮಾನ್ಯನೆಂದೆಯ? ತಪ್ಪು. ತಿಳಿದಿರು ಜೋಕೆ:
ಬೇಡಿಗೆ ಕೈಯೊಡ್ಡುವ, ಕತ್ತಿಗೆ ಇಕ್ಕಿದುರುಳನ್ನೆ
ಕಚ್ಚುತ್ತ ಕಡಿಯುತ್ತ ಸಿಗಿಯುತ್ತ ಅಗೆಯುತ್ತ
ಬಗೆಯುತ್ತಲೇ ಕಣ್ಣ ಮುಚ್ಚುವವ, ‘ತಾಳಕ್ಕೆ ಸರಿ ಹೆಜ್ಜೆ’
ಹೂಂಕರಿಸುತ್ತಲಿದ್ದರೂ ನಿನ್ನ ಪಿಸ್ತೂಲು
ಮನಸ್ಸಿನಲ್ಲೇ ಬೇರೆ ತಾಳ ಲಯ ನಿಭಾಯಿಸುವ
ಹುಟ್ಟಾ ಸ್ವತಂತ್ರ ಪರಮಾಣುದೇಹಿ. (ಸಾಮಾನ್ಯನಂತೆ ಈ ನಾನು!)
~~
ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ? (ಶ್ರೀ ರಾಮನವಮಿಯ ದಿವಸ)
ಬೇಡಿಗೆ ಕೈಯೊಡ್ಡುವ, ಕತ್ತಿಗೆ ಇಕ್ಕಿದುರುಳನ್ನೆ
ಕಚ್ಚುತ್ತ ಕಡಿಯುತ್ತ ಸಿಗಿಯುತ್ತ ಅಗೆಯುತ್ತ

ಬಗೆಯುತ್ತಲೇ ಕಣ್ಣ ಮುಚ್ಚುವವ, ‘ತಾಳಕ್ಕೆ ಸರಿ ಹೆಜ್ಜೆ’
ಹೂಂಕರಿಸುತ್ತಲಿದ್ದರೂ ನಿನ್ನ ಪಿಸ್ತೂಲು
ಮನಸ್ಸಿನಲ್ಲೇ ಬೇರೆ ತಾಳ ಲಯ ನಿಭಾಯಿಸುವ
ಹುಟ್ಟಾ ಸ್ವತಂತ್ರ ಪರಮಾಣುದೇಹಿ. (ಸಾಮಾನ್ಯನಂತೆ ಈ ನಾನು!)
~~
ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ? (ಶ್ರೀ ರಾಮನವಮಿಯ ದಿವಸ)
[ ತೇಜಸ್ವಿನಿ ಹೆಗಡೆ ಅವರ Face book ನಿಂದ ಆಯ್ಕೆ ಮಾಡಿದ ಲೇಖನ }
No comments:
Post a Comment