ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Saturday, December 7, 2019
Thursday, December 5, 2019
Wednesday, December 4, 2019
ಸೌಂದರ್ಯಸೋಪಾನ { ಪಾದೆಕಲ್ಲು ನರಸಿಂಹ ಭಟ್ಟರ ಲೇಖನ ಸಂಪುಟ }}2019
Padekalu Narasimha Bhatಸೌಂದರ್ಯ ಸೋಪಾನ{ಪಾದೆಕಲ್ಲು ನರಸಿಂಹ ಭಟ್ಟರ ಲೇಖನ ಸಂಪುಟ}ಸಂ- ಪಾದೆಕಲ್ಲು ವಿಷ್ಣು ಭಟ್ಪ್ರಕಾಶಕರುಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಟಾನಅನೂಚಾನ ನಿಲಯ , ಅಂಚೆ -ಇಡ್ಕಿದುಬಂಟ್ವಾಳ ತಾಲೂಕು - 574220ಬೆಲೆ- 330 rs 2010 Pages- 474 |
Tuesday, December 3, 2019
Monday, December 2, 2019
Sunday, December 1, 2019
Friday, November 29, 2019
Thursday, November 28, 2019
Wednesday, November 27, 2019
Tuesday, November 26, 2019
Monday, November 25, 2019
Sunday, November 24, 2019
Saturday, November 23, 2019
ಮುರಳೀಧರ ಉಪಾಧ್ಯ ಹಿರಿಯಡಕ - ಸುನಂದಾ ಬೆಳಗಾಂಕರ್ ಅವರ -" ಝವಾದಿ"
ವಿಘಟನೆಯಿಂದ ಸಂಲಗ್ನದೆಡೆಗೆ
ಝುವಾದಿ (ಕಾದಂಬರಿ)
sunanda Belgaukar ಝವಾದಿ , |
ಪ್ರ : ಮನೋಹರ ಗ್ರಂಥಮಾಲಾ,
ಲಕ್ಷ್ಮೀ ಭವನ,
ಸುಭಾಸ
ರಸ್ತೆ,
ಧಾರವಾಡ - 580 001
ಮೊದಲ ಮುದ್ರಣ
: 1994
ಬೆಲೆ: ರೂ.
120
ಪುಸ್ತಕ ಸಮೀಕ್ಷೆ
ಕನ್ನಡಿಗ ಶಂಕರ
ಗಿಳಿಯೂರ
ಟಾಂಝಾಜಿಯಾದ `ಗೊರೊಂಗೊರೊ ಕ್ರೇಟರ್'ನಲ್ಲಿ
ಮೃಗರಾಜ
ಸಿಂಬಾಕಿಂಗ್ನ
ಲೈಂಗಿಕ
ಸಂಬಂಧಗಳ
ಕತೆ
ಕೇಳುವುದರೊಂದಿಗೆ
ಸುನಂದಾ
ಬೆಳಗಾಂವಕರ
ಅವರ
`ಝವಾದಿ'
ಕಾದಂಬರಿ
ಆರಂಭವಾಗುತ್ತದೆ.
ಮೃಗರಾಜ
ಸಿಂಬಾಕಿಂಗ್
ತನ್ನ
ಗೆಳತಿ
ಕ್ಲಿಯೋಳಿಂದ
ದೂರ
ಸರಿದು
ತನ್ನ
ಮಕ್ಕಳ
ತಾಯಿ
ಸಿಂಬಾಕ್ವೀನ್ಗೆ
ಹತ್ತಿರವಾಗಿ
ಟಾಂಝಾನಿಯಾದಲ್ಲಿ ಸಂಭ್ರಮದ ಸುದ್ದಿಯಾಗಿದೆ. ಅಗಲಿಕೆಯಿಂದ
ಮಿಲನದತ್ತ
ಸಿಂಹ-ಸಿಂಹಿಣಿಯರ
ಕತೆ
ಶಂಕರ
ಗಿಳಿಯೂರನಿಗೆ
ಕೌಟುಂಬಿಕ
ಪಾಠವೊಂದನ್ನು
ಕಲಿಸುತ್ತದೆ.
ತನ್ನ
ಅಬಚಿ(ಚಿಕ್ಕಮ್ಮ)ಯ
ಚಾಡಿ
ಮಾತು
ಕೇಳಿ,
ಹೆಂಡತಿ
ಸೌದಾಮಿನಿಗೆ
ಜಗದೀಶನೊಂದಿಗೆ
ಅಕ್ರಮ
ಸಂಬಂಧವಿದೆಯೆಂದು
ಶಂಕಿಸಿ,
ಅವಳನ್ನು
ತ್ಯಜಿಸಿ
ಝಾಂಬಿಯಾಕ್ಕೆ
ಬಂದಿರುವ
ಗಿಳಿಯೂರ
ಈಗ
ಪಶ್ಚಾತ್ತಾಪ
ಪಡುತ್ತಾನೆ.
ಮುಂಬಯಿಗೆ
ಬಂದು
ತನ್ನ
ತಂಗಿ-ಭಾವ(ಜ್ಯೋತ್ಸ್ನಾ
- ಶಶಿಧರ) ಮತ್ತು ಜಗದೀಶರನ್ನು ಭೇಟಿ
ಮಾಡಿದ
ಶಂಕರ
ಗಿಳಿಯೂರನಿಗೆ
ತನ್ನ
ಪತ್ನಿ
ನಿರಪರಾಧಿ
ಎಂದು
ಅರಿವಾಗುತ್ತದೆ.
``ನನ್ನ
ಮಗಾ
ಹಾಲು
ಕುಡಿಯೋ
ಮುಂದ
ನನ್ನ
ಎದ್ರಿಗೆ
ಒದ್ದು
ಹೊರಟು
ಹೋದ್ರು.
ಆವತ್ತಿನ
ದಿವಸ
ನಾ
ಅವರ
ಅರ್ಧಾಂಗಿ
ಸತ್ತು
ಹೋಗಿನಿ,
ನಾನು
ಕೇವಲ
ತಾಯಿ,
ನನ್ನ
ಮಕ್ಕಳ
ತಾಯಿ''
ಎನ್ನುತ್ತಿದ್ದ
ಸೌದಾಮಿನಿ
ತನ್ನ
ಗಂಡನನ್ನು
ಕ್ಷಮಿಸುತ್ತಾಳೆ.
ಅಬಚಿಯಿಂದಾಗಿ
ಅಗಲಿದ
ಈ
ದಂಪತಿಗಳನ್ನು
ಅತ್ಯಾ(ಶಶಿಧರನ
ತಾಯಿ)
ಒಂದುಗೂಡಿಸುತ್ತಾಳೆ.
ಶಂಕರ
ಗಿಳಿಯೂರ-ಸೌದಾಮಿನಿ
ದಂಪತಿಗಳ
ಪುನರ್ಮಿಲನದ
ಸಂದರ್ಭದಲ್ಲೆ
ಅವರ
ಮಕ್ಕಳು
ಅಭಿಷೇಕ-ಅಂಜಲಿಯರ
ಮದುವೆಗಳೂ
ನಡೆಯುತ್ತವೆ.
ಇದಿಷ್ಟು
546 ಪುಟಗಳಷ್ಟು
ಸುದೀರ್ಘವಾಗಿರುವ
`ಝವಾದಿ'
ಕಾದಂಬರಿಯ
ಸಾರಾಂಶ.
ಶಂಕರ ಗಿಳಿಯೂರನ
ಹೃದಯ
ಪರಿವರ್ತನೆಯಷ್ಟೆ
ಸೌದಾಮಿನಿಯ
ತ್ಯಾಗ,
ಸಂಯಮ,
ಕ್ಷಮೆಗಳೂ
ಮುಖ್ಯ.
ಆದರೆ
ಸರ್ವಸಾಕ್ಷಿ
ಪ್ರಜ್ಞೆಯ
ಕಥನತಂತ್ರವಿರುವ
ಈ
ಕಾದಂಬರಿಯಲ್ಲಿ
ಶಂಕರ
ಗಿಳಿಯೂರನ
ಪಾತ್ರ
ಚಿತ್ರಣಕ್ಕೆ
ಹೆಚ್ಚು
ಒತ್ತು
ನೀಡಲಾಗಿದೆ.
ಬಹುಮುಖ್ಯ
ದೃಷ್ಟಿಕೋನದ
ತಂತ್ರದಿಂದ
ಸೌದಾಮಿನಿಯ
ಅಂತರಂಗವನ್ನು
ಇನ್ನಷ್ಟು
ಚೆನ್ನಾಗಿ
ಚಿತ್ರಿಸಲು
ಸಾಧ್ಯವಿತ್ತು.
ಶಂಕರ
ಗಿಳಿಯೂರನ
ಪರಾಂಗನ
ವಿರತಿಯನ್ನು
ಲೇಖಕಿ
ಎಚ್ಚರದಿಂದ,
ಕಷ್ಟಪಟ್ಟು
ಚಿತ್ರಿಸಿದ್ದಾರೆ
ಅನ್ನಿಸುತ್ತದೆ.
ದಂಪತಿಗಳ
ಅಗಲಿಕೆಯಲ್ಲಿ
ಖುಷಿಪಡುವ
ಅಬಚಿ
ಲೈಂಗಿಕ
ಅತೃಪ್ತಿಯ
ರಾಕ್ಷಸಿಯಾಗಿದ್ದಾಳೆ.
ಶಂಕರ
ಗಿಳಿಯೂರನ
ಮಾನಸಿಕ
ಬದಲಾವಣೆಗೆ
ಕಾರಣ
ನೀಡಿರುವ
ಲೇಖಕಿ
ಅಬಚಿಯ
ದುಷ್ಟತನಕ್ಕೆ
ಕಾರಣವೇನೆಂದು
ವಿವರಿಸಿಲ್ಲ.
ಅದೃಶ್ಯ
ರೂಪಿಯಾಗಿರುವ
ಅಬಚಿಯ
ಪಾತ್ರ
ಅಪೂರ್ಣವಾಗಿದೆ.
ಶಂಕರ-ಸೌದಾಮಿನಿ
ದಂಪತಿಗಳ
ವಿರಸ
ದಾಂಪತ್ಯಕ್ಕೆ
ಅಭಿಮುಖವಾಗಿ
ಶಶಿ-ಜ್ಯೋತ್ಸ್ನಾರ
ಸರಸ
ದಾಂಪತ್ಯದ
ಚಿತ್ರಣವಿದೆ.
ಹಾಸ್ಯ
ಪ್ರವೃತ್ತಿಯ
ಶಶಿಧರ,
``ಈ
ಹೆಣ್ಣು
ದೇವರ
ಝವಾದಿ
ಸರ್''
ಎನ್ನುವ
ಆಫ್ರಿಕಾದ
ಟೂರಿಸ್ಟ್
ಗೈಡ್
ಟೆಂಬೋ,
ತನ್ನ
ಹದಿಹರೆಯದ
ಏಕಮುಖ
ಪ್ರಣಯದ
ಸವಿನೆನಪುಗಳಲ್ಲಿ
ಬದುಕುವ
ಜಗದೀಶ,
ತಾಯಿಯ
ಪಾಪಕ್ಕೆ
ತಾನು
ಪ್ರಾಯಶ್ಚಿತ್ತ
ಮಾಡಿಕೊಳ್ಳುವ
ಅಬಚಿಯ
ಮಗ
ಭರತ,
ಇಂದಿರಾಗಾಂಧಿಯ
ಕುರಿತು
ಮಾತನಾಡುವ
ಹೊಟೇಲ್
ಮಾಣಿ
ಅನಂತಕೃಷ್ಣ
ಇಂಥ
ಹಲವು
ಪಾತ್ರಗಳು
ತಮ್ಮ
ಜೀವಂತಿಕೆಯಿಂದ
ನೆನಪಿನಲ್ಲಿ
ಉಳಿಯುತ್ತದೆ.
`ಝವಾದಿ'
ಸ್ವಚ್ಛಂದತೆಯಿಂದ
ಕೌಟುಂಬಿಕತೆಯತ್ತ,
ವಿಘಟನೆಯಿಂದ
ಸಂಲಗ್ನದತ್ತ,
ಅಪನಂಬಿಕೆಯಿಂದ
ವಿಶ್ವಾಸದತ್ತ,
ವಿಪ್ರಲಂಭದಿಂದ
ಮಿಲನದತ್ತ,
ತುಡಿಯುವ
ಕಾದಂಬರಿ.
ವಾಸ್ತವ
ಮತ್ತು
ಆದರ್ಶಗಳನ್ನು
ಹಿತಮಿತವಾಗಿ
ಬೆಸೆಯುವ
ಈ
ಕಾದಂಬರಿ
ಅನೋನ್ಯ
ದಾಂಪತ್ಯ,
ಕ್ಷಮೆ,
ಪಶ್ಚಾತ್ತಾಪದಂಥ
ಮೌಲ್ಯಗಳನ್ನು
ಪ್ರತಿಪಾದಿಸುತ್ತದೆ.
ಮಹಾನಗರಗಳ
ಬದುಕಿನ
ಅನಿವಾರ್ಯ
ಅಂಗವಾದ
ಫೋನ್
ಈ
ಕಾದಂಬರಿಯ
ಪಾತ್ರಗಳ
ಬದುಕಿನ
ಮುಖ್ಯ
ಘಟನೆಗಳ
ಸಾಕ್ಷಿಯಾಗುತ್ತದೆ.
ಜಗದೀಶ
ಮತ್ತು
ಸೌದಾಮಿನಿಯ
ಸಂಭಾಷಣೆಯನ್ನು
ಶಂಕರ
ಗಿಳಿಯೂರ
ಸೌದಾಮಿನಿಗೆ
ಗೊತ್ತಾಗದಂತೆ
ಕೇಳಿಸಿಕೊಳ್ಳುವ
ಘಟನೆಯಲ್ಲಿ
ಫೋನ್
ಒಂದು
ಆಧುನಿಕ
ದಿವ್ಯವಾಗುವುದನ್ನು
ಗಮನಿಸಬೇಕು.
ಅಬಚಿ,
ಕ್ರೌರ್ಯರತಿಸುಖ
ಪಡೆಯಲು
ಫೋನನ್ನು
ಬಳಸುತ್ತಾಳೆ.
ಸೌದಾಮಿನಿಗೆ
ಫೋನ್
ಮಾಡಿ
ವಿಕೃತ
ಕಾಮಿಯಂತೆ
ಮಾತನಾಡುತ್ತಾಳೆ.
ಆಫ್ರಿಕದ
ಒಂದು
ಅಭಯಾರಣ್ಯ
ಮತ್ತು
ಮುಂಬಯಿ
ಮಹಾನಗರದ
ಕೆಲವು
ಮನೆಗಳು
ಈ
ಕಾದಂಬರಿಯ
ಕ್ರಿಯಾ
ಕೇಂದ್ರಗಳಾಗಿವೆ.
ಕೀರ್ತಿನಾಥ
ಕುರ್ತಕೋಟಿಯವರು
ಈ
ಕಾದಂಬರಿಯ
ಗ್ರಂಥ
ಪ್ರಶಂಸೆಯಲ್ಲಿ
ತಿಳಿಸಿರುವಂತೆ
ಇಲ್ಲಿ
`ವಿವರಗಳ
ಶ್ರೀಮಂತಿಕೆ'
ಇದೆ,
ನಿಜ.
ಆದರೆ
ಕೆಲವೊಮ್ಮೆ
ವಿವರಗಳ
ದುಂದುಗಾರಿಕೆಯೂ
ಕಾಣಿಸುತ್ತದೆ.
ಶಶಿ-ಜೋತ್ಸ್ನಾರ
ದಾಂಪತ್ಯ,
ಅಂಜಲಿ-ವರುಣ,
ಅಭಿಷೇಕ-ಭಕ್ತಿ
ಇವರ
ಮದುವೆಯ
ವಿವರಗಳು
ಅಗತ್ಯಕ್ಕಿಂತ
ಹೆಚ್ಚು
ಸುದೀರ್ಘವಾಗಿವೆ.
ಕೆಲವು
ಭಾಗಗಳಂತೂ
ಜನಪ್ರಿಯ
ಟಿ.ವಿ.
ಧಾರಾವಾಹಿಗಾಗಿ
ಬರೆದ
ಬರಹದಂತೆ
ಕಾಣಿಸುತ್ತವೆ.
ಸುನಂದಾ
ಬೆಳಗಾಂವಕರ
ಅವರ
ಮೊದಲ
ಕಾದಂಬರಿ
`ನಾಸು'ವಿಗೆ
ಹೋಲಿಸಿದರೆ
`ಝವಾದಿ'ಯ
ಬಂದ
ಶಿಥಿಲವಾಗಿದೆ
ಅನ್ನಿಸುತ್ತದೆ.
ಕಾವ್ಯದ
ಚೆಲುವಿನ
ಬೆಳಗಾಂ
ಕನ್ನಡದಲ್ಲಿರುವ
ಈ
ಕಾದಂಬರಿಯಲ್ಲಿ
ಬೇಂದ್ರೆಯವರ
ಭಾವಗೀತೆಗಳು
ಮತ್ತು
ದಾಸರಪದಗಳ
ತುಣುಕುಗಳು
ಬೆಸೆದುಕೊಂಡಿದೆ.
ಈ ಕಾದಂಬರಿಯ ಶೀರ್ಷಿಕೆಯಾಗಿರುವ
ಝವಾದಿ
`ಆಫ್ರಿಕದ
ಕೀನ್ಯಾ,
ಟಾಂಝಾನಿಯಾ
ದೇಶಗಳ
ಸ್ವಹೇಲಿ
ಭಾಷೆಯ
ಶಬ್ದ.
`ಝವಾದಿ'
ಎಂದರೆ
ಕಾಣಿಕೆ.
``ಹೆಣ್ಣು
ಕಾಮಧೇನು.
ಸೃಷ್ಟಿ
ಗಂಡಸಿಗಿತ್ತ
ಝವಾದಿ''
ಎಂದು
ಶಂಕರ
ಗಿಳಿಯೂರ
ಹೇಳುತ್ತಾನೆ.
ಕಾದಂಬರಿಯ
ಕೊನೆಯ
ಸಾಲುಗಳಿವು-
``ಮಾನವ
ಜನ್ಮ
ದೊಡ್ಡದು
ಹಾನಿ
ಮಾಡಬೇಡಿ
ಹುಚ್ಚಪ್ಪಗಳಿರಾ''
ಸೌದಾಮಿನಿಯ
ಹಾಡು
ಶ್ಯಾಮರಾಯರ
ರೂಮಿನಿಂದ
ಕೇಳಿ
ಬರುತ್ತಿತ್ತು.
ಮಾನವ
ಜನ್ಮವೇ
ಸೃಷ್ಟಿಕರ್ತನ
``ಝವಾದಿ''. ತನ್ನ ಚೊಚ್ಚಲ ಕಾದಂಬರಿ
`ನಾಸು'ವಿನಿಂದ
ಖ್ಯಾತರಾದ
ಅನಿವಾಸಿ
ಭಾರತೀಯ
ಕಾದಂಬರಿಕಾರ್ತಿ
ಸುನಂದಾ
ಬೆಳಗಾಂವಕರ
ಅವರ
ಹೊಸ
ಕಾದಂಬರಿ,
ಕನ್ನಡ
ಕಾದಂಬರಿ
ಪ್ರಕಾರಕ್ಕೆ
ಒಂದು
ಒಳ್ಳೆಯ
`ಝವಾದಿ'(ಕಾಣಿಕೆ)
ಎನ್ನಲಡ್ಡಿಯಿಲ್ಲ.
ಮುರಳೀಧರ
ಉಪಾಧ್ಯ
ಹಿರಿಯಡಕ
Friday, November 22, 2019
Wednesday, November 20, 2019
Tuesday, November 19, 2019
Monday, November 18, 2019
Saturday, November 16, 2019
Thursday, November 14, 2019
Tuesday, November 12, 2019
Saturday, November 9, 2019
Friday, November 8, 2019
Thursday, November 7, 2019
Wednesday, November 6, 2019
Monday, November 4, 2019
Sunday, November 3, 2019
Friday, November 1, 2019
Thursday, October 31, 2019
Tuesday, October 29, 2019
Sunday, October 27, 2019
Saturday, October 26, 2019
Thursday, October 24, 2019
Monday, October 21, 2019
Sunday, October 20, 2019
Saturday, October 19, 2019
Friday, October 18, 2019
ಚಂದ್ರಿಕಾ ನಾಗರಾಜ್ ಹಿರಿಯಡಕ - ಧ್ಯಾನ
chandrika nagaraj |
Fri, 18 Oct, 10:13 (1 day ago)
|
#ಧ್ಯಾನ#
ಭವದ ಬಂಧನದೊಳ್ ಎನ್ನಾತ್ಮ ಬಂಧಿಯಾಗಿಹುದು..ಬಿಡಿಸೊಮ್ಮೆ ಧುಮಕಿಸು ನಿನ್ನಂತರಂಗದೊಳ್ಮು
ರಾರಿಯೇ..
ರಾಧೆಯಂತೆ ಕಾಯುತ್ತಿರುವೆ..
ಅಭಿಸಾರ ಬೇಯುತಿದೆ
ಕಡಲುಕ್ಕಿ ಹರಿಯಲಿ ನನ್ನೊಳ್
ನೀ ಬಂದ ಸಮಯದೊಳ್
ಅಲೆ ಅಪ್ಪುಗೆ ಸಿಡಿದು ಒಲವು ಮಾಗಲಿ...
ರಾಧೆಯಂತಾಗ ಬಯಸುತಿಹೆ...
ಕಾಲ್ಗೆಜ್ಜೆ ಅಲೆಯುತಿದೆ
ಚಪ್ಪರದ ಹೂವೊಳ್
ಮಂದಸ್ಮಿತ ಘಮದೊಳ್
ಲಜ್ಜೆಯೊಳ ಕನಸೊಳ್
ನೀ ಬಂದ ಸದ್ದಾಯಿತೆನಗೆ
ರಾಧೆಯಂತೆ ಸ್ವಪ್ನ ಕಂಡೆ...
ಸಜ್ಜೆಯದೋ ಸಿಡುಕುತಿದೆ
ನಿತ್ಯ ನಿನ್ನ ಧ್ಯಾನದೊಳ್...ಸಾಗರದೊಳ ಸುಳಿಯಂತಾಗಿಹುದು ಮನ
ಬಿಡಿಸೊಮ್ಮೆ , ನಿನ್ನ ನಾದದೊಳ್
ರಾಗಂಗಳ ನುಡಿಸೇ
ಲೀನಳಾಗುವೆ
✍🏻 * ಚಂದ್ರಿಕಾ ನಾಗರಾಜ್ ಹಿರಿಯಡಕ*
ReplyForward
|
Subscribe to:
Posts (Atom)