stat Counter



Friday, March 29, 2019

ಅರವಿಂದ ಚೊಕ್ಕಾಡಿ - ನೆಹರೂ ಮತ್ತು ಇಸ್ರೋ

ಪಂಡಿತ್ ಜವಾಹರಲಾಲ್ ನೆಹರೂ ಇವತ್ತು ವರ್ತಮಾನ ಅಲ್ಲ."ಅತೀತ".ಮಹಾಭಾರತದ ಪ್ರಕಾರ ಅತೀತರ ಬಗ್ಗೆ ಅಸತ್ಯವನ್ನು ಹೇಳುವುದು ಅಧಾರ್ಮಿಕ.ಫೇಸ್ ಬುಕ್ಕಿನ ತುಂಬೆಲ್ಲ ISRO ಸ್ಥಾಪನೆಯಾದದ್ದು 1969ರಲ್ಲಿ,ನೆಹರೂ ಮೃತರಾದದ್ದು 1964ರಲ್ಲಿ;ನೆಹರೂ ಹೇಗೆ ಇಸ್ರೋ ಸ್ಥಾಪಿಸಿದ್ದು?ಎಂಬ ಬರೆಹಗಳು ಓಡಾಡುತ್ತಿರುವುದರಿಂದ ಇದನ್ನು ಹೇಳಲೇಬೇಕಾಗಿದೆ.
ISRO ದ ಮೂಲ ಹೆಸರು Indian National Committee For Space Resaearch ಎಂದು.ಇದು ಸ್ಥಾಪನೆಯಾದದ್ದು 1962ರಲ್ಲಿ.ಅದಕ್ಕೆ ಇಸ್ರೊ ಎಂದು ಮರು ನಾಮಕರಣ ಮಾಡಿದ್ದು 1969ರಲ್ಲಿ.ನಿಸ್ಸಂದೇಹವಾಗಿಯೂ ಇಸ್ರೋದ ಸ್ಥಾಪನೆ ಪಂಡಿತ್ ನೆಹರೂ ಅವರಿಂದಲೇ ಆಯಿತು.
ಇದರರ್ಥ ನೆಹರೂ ಅವರೇ ಮಾಡಿದರೆಂದಲ್ಲ.ಅದರ ಹಿಂದೆ ಅಪಾರ ಶ್ರಮ ವಹಿಸಿದವರು ಡಾ.ವಿಕ್ರಮ್ ಸಾರಾಭಾಯಿ ಮತ್ತು ಸಾರಾಭಾಯಿಯವರೊಂದಿಗೆ ಜೊತೆಯಾದವರು ಡಾ.ಹೋಮಿ ಜಹಾಂಗೀರ್ ಭಾಭಾ.1948ರಲ್ಲಿ ಭಾರತ ಸರಕಾರ atomic energy commission ಪ್ರಾರಂಭಿಸಿದಾಗ ನೆಹರೂ ಪರ್ಸನಲ್ ಆಗಿ ಹೋಮಿ ಭಾಭಾ ಅವರೊಂದಿಗೆ ಮಾತನಾಡಿ ಭಾಭಾ ಅವರೊಂದಿಗೆ ನೆಹರೂ ಅವರಿಗಿದ್ದ ವೈಯಕ್ತಿಕ ಸ್ನೇಹವನ್ನೂ ಬಳಸಿಕೊಂಡು ಇದರ ಸಂಪೂರ್ಣ ಜವಾಬ್ದಾರಿ ನೀವು ತೆಗೆದುಕೊಳ್ಳಬೇಕೆಂದು ಕೇಳಿಕೊಂಡು ಭಾಭಾ ಅವರನ್ನು ಸೆಕ್ರೆಟರಿ ಮಾಡುತ್ತಾರೆ.ಭಾರತದ ಭೌತವಿಜ್ಞಾನದ ಭವಿಷ್ಯವನ್ನು ನಿಮ್ಮ ಕೈಯ್ಯಲ್ಲಿಟ್ಟಿದ್ದೇನೆ ಎಂದೂ ಹೇಳಿದ್ದರಂತೆ.1920ರಲ್ಲಿ ಎಸ್.ಕೆ.ಮಿತ್ರ ಅವರು ಅಯಾನೋಸ್ಪಿಯರ್ ಗೆ ನಡೆಸಿದ ಸಂಶೋಧನೆಯ ಜಾಡಿನಲ್ಲಿ ಬೆಳೆದ ವಿಕ್ರಮ್ ಸಾರಾಭಾಯಿ 1947ರಲ್ಲಿ ಅಹಮದಾಬಾದ್ ನಲ್ಲಿ physical research lab ಮಾಡುತ್ತಾರೆ.ತನ್ನ ಆಲೋಚನೆಗಳಿಗೆ ಇನ್ನೂ ದೊಡ್ಡ ವ್ಯಾಪ್ತಿ ಬೇಕೆನಿಸಿದಾಗ ಭಾರತ ಸರಕಾರದ ಗಮನ ಸೆಳೆಯುತ್ತಾರೆ.ನೆಹರೂ ಅವರೊಂದಿಗೆ ಬಹಳ ಮಾತುಕತೆಗಳಾಗುತ್ತವೆ.ಹಲವರು "ಇದೆಲ್ಲ ಆಗುವಂತಾದ್ದಲ್ಲ" ಎಂದು ನಿರುತ್ತೇಜನಗೊಳಿಸಿದರೂ ನೆಹರೂ ಅವರು ಡಾ.ಸಾರಾಭಾಯಿ ಅವರೊಂದಿಗೆ ದೃಢವಾಗಿ ನಿಲ್ಲುತ್ತಾರೆ.ಅದರ ಫಲವೇ ISRO.ಸಾರಾಭಾಯಿಯವರ ಪ್ರಯತ್ನದಷ್ಟೆ ನೆಹರೂ ಅವರಿಗೂ ಅದರಲ್ಲಿ ಪಾಲಿದೆ.ನಾನೊಂದು ಒಳ್ಳೆ ಶಿಕ್ಷಣ ನೀತಿಯನ್ನು ಹೇಳಬಹುದು;ಅದನ್ನು ಮಾಡಲು ಆಡಳಿತ ಒಪ್ಪಿದಾಗ ಮಾತ್ರ ಅಲ್ವ ಅದಕ್ಕೆ ಮಹತ್ವ ಇರುವುದು.ಹಾಗೆಯೇ ಯಾರೇ ಸಾಧನೆ ಮಾಡಿದರೂ ಅದಕ್ಕೆ ಸಪೋರ್ಟ್ ಮಾಡಿದ ಆಡಳಿಕ್ಕೂ ಆ ಗೌರವ ಸಲ್ಲಬೇಕಾಗುತ್ತದೆ.ನೆಹರೂ ಮೃತರಾದ ನಂತರವೂ ಡಾ.ಸಾರಾಭಾಯಿ SITE ಪ್ರಾಜೆಕ್ಟ್ ಗಾಗಿ NASA ದೊಂದಿಗೆ ಬಹಳ ವ್ಯವಹರಿಸುತ್ತಾರೆ.ಆ ಪ್ರಾಜೆಕ್ಟ್ 1975ರಲ್ಲಿ;ಸಾರಾಭಾಯಿಯವರು ಮೃತರಾದ ನಂತರ ಜಾರಿಗೆ ಬಂದಿತು.ನಮ್ಮ ಪೊಳ್ಳು ಪ್ರತಿಷ್ಠೆಗಾಗಿ ಒಂದು ತಲೆಮಾರಿನ ಹಿರಿಯರ ಕಾಳಜಿಗಳನ್ನೆ ಕ್ಷುಲ್ಲಕವೆಂದು ವ್ಯಾಖ್ಯಾನಿಸುವುದು ನಮ್ಮ ಮುಂದಿನ ತಲೆಮಾರು ನಮ್ಮನ್ನು most irresponsible generation ಎಂದುಕೊಳ್ಳಲು ಮತ್ತು ಮುಂದಿನ ತಲೆಮಾರು ಇನ್ನಷ್ಟು ಅಧಃಪತನಕ್ಕೆ ಹೋಗಲು ಕಾರಣವಾಗುತ್ತದೆ.
ಬಹಳ ಮಂದಿ ನೆಹರೂ ಅವರನ್ನು ಬೇಜವಾಬ್ದಾರಿಯ ಸುಖಪುರುಷನೆಂಬಂತೆ ಚಿತ್ರಿಸುತ್ತಾರೆ.but he was not like that.ಚಿಂದಿಯಾದ ದೇಶದ ಮೊದಲ ಪ್ರಧಾನಿಯಾಗಿ ಅನೇಕ ಸವಾಲುಗಳನ್ನು ಎದುರಿಸಿದವರು ಅವರು.ಅದರ ನಿರ್ವಹಣೆಯಲ್ಲಿ ತಪ್ಪುಗಳಾಗಿವೆ.ಅದರರ್ಥ ಅವರು ಕಾಳಜಿಯೆ ಇರದವರೆಂದಲ್ಲ.ತಪ್ಪಾಗಿದ್ದರೆ ಅದನ್ನು ಹೇಳಬೇಕು.ಆ ತಪ್ಪನ್ನು ನಾವು ಹೇಗೆ ಸರಿ ಮಾಡಬೇಕು ಎಂದು ಯೋಚಿಸಬೇಕು.ತನ್ನ ಮೊದಲ ಪ್ರಧಾನ ಮಂತ್ರಿಯನ್ನೆ ಕ್ಷುಲ್ಲಕವಾಗಿಸಿ ಅವಹೇಳನ‌ ಮಾಡುವುದು ಯಾವ ದೇಶದಲ್ಲಿ‌ ನಡೆದರೂ ಅದು ದೇಶಭಕ್ತಿಯಾಗಲಾರದು.ನೆಹರೂ ಅವರದೇ ವಾಕ್ಯದಲ್ಲಿರುವ ಬರಹಗಳನ್ನು ನೋಡಿ.ಅವರ vision ಅರ್ಥವಾಗುತ್ತದೆ.ನಿಜವಾಗಿಯೂ ಅವರು ಪಂಡಿತರೇ ಆಗಿದ್ದರು.ನೆಹರೂ ಅವರದು high level English;ಕಷ್ಟವಾಗುತ್ತದೆ ಎನಿಸಿದರೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕಗಳಲ್ಲಿ ಬೆನ್ನುಡಿಯಾಗಿ ನೆಹರೂ ಅವರ ಬರಹವಿದೆ.ಕನ್ನಡ ಅನುವಾದದಲ್ಲೆ ಇದೆ.ಭಾರತದ ಭಾಷಾ ಸನ್ನಿವೇಶ ಮತ್ತು ಸಾಂಸ್ಕೃತಿಕ ಸನ್ನಿವೇಶದ ಅವರ ಜ್ಞಾನ ಅರ್ಥವಾಗುತ್ತದೆ.ನೆಹರೂ ಕೂಡ ಸಾಕಷ್ಟು ಅಪಾಯಗಳನ್ನು ಎದುರಿಸಿದವರು.ನಾಲ್ಕು ಬಾರಿ ನೆಹರೂ ಹತ್ಯೆಯ ಪ್ರಯತ್ನಗಳಾಗಿವೆ.1947ರಲ್ಲೆ ಅವರು ವಾಯವ್ಯ ಗಡಿ ರೇಖೆಯ ವೀಕ್ಷಣೆಗೆ ಹೋದಾಗ ಹತ್ಯೆಯ ಮೊದಲ ಪ್ರಯತ್ನವಾಗುತ್ತದೆ.ಉಳಿದ ಮೂರು ಪ್ರಯತ್ನಗಳೂ ಮಹಾರಾಷ್ಟ್ರದಲ್ಲಿ ನಡೆಯುತ್ತದೆ.
ಅತೀತರ ತಪ್ಪುಗಳನ್ನು ಟೀಕಿಸಬೇಕು.ಆದರೆ ಅದನ್ನೊಂದು ದ್ವೇಷವಾಗಿ ಬೆಳೆಸಿಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ ಮಾರಕ.ಅದು ಸಾವರ್ಕರ್ ಮೇಲಿನ ದ್ವೇಷವೇ ಆದರೂ ಅಷ್ಟೆ.ನೆಹರೂ ಮೇಲಿನ ದ್ವೇಷವಾದರೂ ಅಷ್ಟೆ.
Comment
  • 1
  • 5
  • 1

ಎಮ್’ ಆರ್. ಕಮಲಾ Kannada Writer M R Kamala in Shubhodaya Karnataka | 20-03-2019 | DD Chan...

ಬಹುತ್ವ ಸಂಕಥನ { ಸಂ/ ಡಾ/ ಶುಭಾ ಮರವಂತೆ }

No photo description available.

ಮೋದಿ ಬಾಹ್ಯಾಕಾಶಕ್ಕೆ ಹಾರಿಸಿದ ಟುಸ್ ಪಟಾಕಿ!

Wednesday, March 27, 2019

ಎ . ಎನ್. ಪ್ರಸನ್ನ - ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಬ್ರೆಕ್ಟನ ನಾಟಕಗಳ ಕುರಿತು

ವಿವೇಕ ಶ್ಯಾನುಭಾಗರ "ಘಾಚರ್ ಘೋಚರ್ " Ghachar Ghochar by Vivek Shanbhag, book review: This novella packs a punch

Ghachar Ghochar by Vivek Shanbhag, book review: This novella packs a punch | The Independent: Think of great Indian novels since Salman Rushdie set a certain tone with Midnight’s Children back in 1981 – Vikram Seth’s A Suitable Boy, Rohinton Mistry’s A Fine Balance, Arundhati Roy’s The God of Small Things or, most recently, Jhumpa Lahiri’s The Lowland – they tend towards large tomes, written in English.

ಮಲಯಾಳಮ್ ಲೇಖಕಿ ಅಶಿತಾ ನಿಧನ Noted Malayalam writer Ashitha passed away

ಮಲಯಾಳಂ ಲೇಖಕಿ ಅಶಿತಾ ನಿಧನ

Friday, March 22, 2019

ಎಸ್. ದಿವಾಕರ್ - ರಾಜಾ ರಾಯರ " ನಾರೀಗೀತ " - ಕನ್ನಡಕ್ಕೆ ಬಂದ ಕನ್ನಡ ಕಾದಂಬರಿ

ಬದುಕು ಮಹಾ ಕಾವ್ಯ -{ ಎನ್. ಆರ್.. ನಾಯಕರ ಸಮಗ್ರ ಕಾವ್ಯ } ಬಿಡುಗಡೆ -23 - 3-2019

No photo description available.

‘ಫಣಿಯಮ್ಮ’ ಖ್ಯಾತಿಯ ಎಲ್‌.ವಿ. ಶಾರದಾ ಇನ್ನಿಲ್ಲ

ಮುದಲ್ ವಿಜಯ್ - ಕಾತ್ಯಾಯಿನಿ ಕುಂಜಿಬೆಟ್ತು ಅವರ " ಅಕ್ಕ ಕೇಳವ್ವ "

ಅಕ್ಕ ಕೇಳವ್ವ' ಪುಸ್ತಕ ಕುರಿತು ನನ್ನೆರಡು ಅನಿಸಿಕೆಗಳು
********************************************************
ನಮ್ಮ ಅಳಿವಿನ ನಂತರ ನಮ್ಮದೇ ಛಾಯಾಚಿತ್ರ ಬಹಳಷ್ಟು ಕಾಲ ಉಳಿಯುವಂತೆ ಒಬ್ಬ ನೈಜ ಸಾಹಿತಿಯ ಬರವಣಿಗೆ ಬಹಳಷ್ಟು ಕಾಲ ಉಳಿಯುವಂತದ್ದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಾಲಿಗೆ ನಿಂತಾಗ ಬರವಣಿಗೆಗಳು ಮಾತಾಡುತ್ತವೆ ಎನ್ನುವ ಕವಿ ವಾಣಿಯಂತೆ ಉತ್ತಮ ಬರವಣಿಗೆಯಲ್ಲಿ ತೊಡಗಿಸಿಕೊಂಡ ಯಾವುದೇ ಸಾಹಿತಿಯ ಬದುಕು ಎಂದೆಂದೂ ಅಮರವೆನ್ನುವುದನ್ನು ತಳ್ಳಿಹಾಕುವಂತಿಲ್ಲ. ಒಬ್ಬ ಸಾಹಿತಿಯ ಉತ್ಕೃಷ್ಟ ಬರಹಗಳು ಒಂದು ರೀತಿಯಲ್ಲಿ ಜಂಗಮ ಸ್ವರೂಪಿ. ಅವು ಒಂದು ಕಡೆ ನಿಲ್ಲುವುದಿಲ್ಲ. ಅಂತಹ ಸಾಹಿತ್ಯದ ಭಾಷೆ ಅದೆಷ್ಟು ಸಮರ್ಥಶಾಲಿ ಎಂಬುದನ್ನು ಊಹಿಸಲೂ ಅಸಾಧ್ಯವೆ. ಬರವಣಿಗೆಯಲ್ಲಿ ತೊಡಗಿಸಿಕೊಂಡ ಸಾಹಿತಿಯ ಶಾಯ್ಮೊಳೆ ವಾಸ್ತವಿಕ ನೆಲೆಗಟ್ಟುಗಳ ಭಿನ್ನ ಸ್ವರೂಪಗಳನ್ನು ಚಿತ್ರಿಸಿ ಕೊಡಲು ತುಡಿಯುವುದಾದರೆ ಅದರ ಸೊಗಡು ಪರಿಧಿಗಳನ್ನು ಮೀರಿ ಎಲ್ಲೆಲ್ಲೂ ಅಭಿವ್ಯಕ್ತಿಗೊಳ್ಳುತ್ತಾ ಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸಿದ್ಧ ಬರಹಗಾರ್ತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ತಮ್ಮ ಬರವಣಿಗೆಯ ಬದುಕನ್ನು ತಮ್ಮದೇ ಆದ ವಿಶಿಷ್ಟ ಸಾಹಿತ್ಯದೊಂದಿಗೆ ಸಮರ್ಥಿಸಿಕೊಳ್ಳುತ್ತಾರೆ. ಉಡುಪಿಯ ಕಾಪು ಬಳಿಯ ಕರಂದಾಡಿ ಗ್ರಾಮದಲ್ಲಿ ಹುಟ್ಟಿದ ಕಾತ್ಯಾಯಿನಿಯವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ವಿಶಾರದ ಪದವಿಯನ್ನೂ ಪಡೆದವರು. ಅದಲ್ಲದೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಕಾತ್ಯಾಯಿನಿಯವರು ಕವಿತೆ, ಕತೆ, ಕಾದಂಬರಿ, ವಿಮರ್ಶೆ ಮತ್ತು ನಾಟಕಗಳನ್ನು ಬರೆದಿದ್ದಾರೆ. ಸುಮಾರು ಹನ್ನೆರಡು ಕೃತಿಗಳನ್ನು ಪ್ರಕಟಿಸಿರುವ ಇವರ ಮಕ್ಕಳ ಐದು ನಾಟಕಗಳು ಅನೇಕ ಪ್ರದರ್ಶನಗಳನ್ನು ಕಂಡಿವೆ. ಇವರು ತುಳುವಿಗೆ ಅನುವಾದಿಸಿರುವ ಗಿರೀಶ್ ಕಾರ್ನಾಡರ ನಾಗಮಂಡಲ, ಚಂದ್ರಶೇಖರ ಕಂಬಾರರ ಮಹಾಮಾಯಿ ನಾಟಕಗಳೂ ರಂಗದಲ್ಲಿ ಪ್ರದರ್ಶನಗೊಂಡು ಜನಮನ್ನಣೆಯನ್ನು ಗಳಿಸಿವೆ. ಹೀಗಾಗಿ ಕಾತ್ಯಾಯಿನಿ ಕುಂಜಿಬೆಟ್ಟು ಅವರದು ಬಹುಮುಖ ಪ್ರತಿಭೆ. ಇವರ ಪಿ ಎಚ್ ಡಿ ಮಹಾಪ್ರಬಂಧ ಮೊಗ್ಗಿನ ಮನಸ್ಸು ಕೃತಿಯು ಮಣಿಪಾಲ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದ್ದು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಕೃತಿಗಳೆಲ್ಲವೂ ಒಂದಲ್ಲ ಒಂದು ಪ್ರಶಸ್ತಿಯನ್ನು ಗಳಿಸಿಕೊಂಡು ಸಾಹಿತ್ಯಾಸಕ್ತರ ಗಮನವನ್ನು ಸೆಳೆದುಕೊಂಡಿರುವುದು ಅಭಿನಂದಿಸತಕ್ಕದ್ದು.
ಕಾತ್ಯಾಯಿನಿ ಅವರ ‘ಅಕ್ಕ ಕೇಳವ್ವ’ ಕೃತಿಯು ಉದಯವಾಣಿ ದಿನಪತ್ರಿಕೆಯಲ್ಲಿ ಅವರು ಪ್ರತಿವಾರವೂ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. ಇದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದ್ದು 23 ಲೇಖನಗಳನ್ನೊಳಗೊಂಡಿದೆ. ಇಲ್ಲಿರುವ ಬರಹಗಳೆಲ್ಲವೂ ಸ್ತ್ರೀಪರ ಚಿಂತನೆಗಳಾಗಿವೆ. ಈಗ ಸ್ತ್ರೀವಾದಿ ಅಧ್ಯಯನ ಪ್ರಪಂಚದಾದ್ಯಂತ ಪ್ರಚಲಿತವಾಗಿದೆ. ಇಲ್ಲಿರುವ ಲೇಖನಗಳು ಸ್ತ್ರೀವಾದಿ ಅಧ್ಯಯನದ ನೆಲೆಗಳನ್ನೊಳಗೊಂಡಿರುವುದರಿಂದ ಈ ಕೃತಿಯ ಮಹತ್ವ ಹೆಚ್ಚಿದೆ. ಹೆಣ್ಣಿನ ಶೋಷಣೆಯ ವಿವಿಧ ಮುಖಗಳನ್ನು ಅನಾವರಣಗೊಳಿಸುವುದರ ಜೊತೆಗೆ ಸ್ತ್ರೀ ಮತ್ತು ಸಮಾಜದ ಏಳಿಗೆಗೆ ಬೇಕಾದ ವಿಚಾರಗಳನ್ನು ಇಲ್ಲಿನ ಲೇಖನಗಳು ಆಪ್ತವಾಗಿ ಕಟ್ಟಿಕೊಡುತ್ತವೆ. ಒಂದು ಕುಟುಂಬ, ಒಂದು ಗ್ರಾಮ, ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಹೆಣ್ಣಿನ ಪಾತ್ರ ಮಹತ್ವವಾದದ್ದು ಎಂಬ ವಿಚಾರವನ್ನು ಉದಾಹರಣೆಗಳ ಸಮೇತ ವಿಶ್ಲೇಷಣೆ ಮಾಡಿರುವ ಇಲ್ಲಿನ ಬರಹಗಳು ಓದುಗರನ್ನು ಚಿಂತಿಸುವಂತೆ ಪ್ರೇರೇಪಿಸುತ್ತವೆ. ಸಾಹಿತ್ಯ ವಿಮರ್ಶೆಯ ಕೆಲಸ ಇದೇ ತಾನೇ?. ಜಾಗತೀಕರಣ, ಉದಾರೀಕರಣ, ಆರ್ಥಿಕ ಪ್ರಧಾನವಾದ ಇಂದಿನ ಸಂದರ್ಭಕ್ಕೆ ಈ ಕೃತಿಯಲ್ಲಿರುವ ವಿಚಾರಗಳು ಅತ್ಯಗತ್ಯವಾಗಿರುವಂತವುಗಳು. ಹೆಣ್ಣುಹಕ್ಕಿಯ ಹಾಡು, ಕಾಯ ಮೀರಿದ ಕಾವ್ಯ, ಹೊತ್ತು ಹೆತ್ತಳಾ ತಾಯಿ, ಅಜ್ಜಿಯ ಜೋಗುಳ, ಹೆಣ್ಣು ಭೂತಗಳು, ಜನಪದ ಹೆಣ್ಣ ಪಾಡು-ಹಾಡು, ಹೂವಿನ ಮಾತು, ನೀರಂತೆ ನೀರೆ ಮುಂತಾದ ಲೇಖನಗಳು ನಮ್ಮ ಸಮಾಜದಲ್ಲಿನ ಅಸಮಾನತೆ, ಅನ್ಯಾಯ, ದಬ್ಬಾಳಿಕೆ, ಹೆಣ್ಣು ಪಡುತ್ತಿರುವ ದಿನನಿತ್ಯದ ಬವಣೆಗಳನ್ನು ಕಣ್ಮುಂದೆ ತಂದು ನಿಲ್ಲಿಸುತ್ತವೆ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಬರವಣಿಗೆ ಸರಳ ಸುಂದರ. ತಾವು ಹೇಳಬೇಕೆಂದಿರುವ ವಿಚಾರವನ್ನು ದೈನಂದಿನ ಬದುಕಿನ ಉದಾಹರಣೆಗಳೊಂದಿಗೆ ವಿಶ್ಲೇಷಿಸಿರುವ ಕ್ರಮ ಓದುಗರನ್ನು ಸೆರೆಹಿಡಿಯುತ್ತದೆ ಮತ್ತು ಚಿಂತನೆಗೆ ಹಚ್ಚಿ ಹೆಣ್ಣನ್ನು ಪುರುಷಪ್ರಧಾನ ಸಮಾಜ ನಡೆಸಿಕೊಳ್ಳುತ್ತಿರುವ ಬಗ್ಗೆ ಪುರುಷನು ಆತ್ಮವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಇದರ ಜೊತೆಗೆ ಇಲ್ಲಿನ ಲೇಖನಗಳು ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮುಂದಿನ ಅಧ್ಯಯನದ ದೃಷ್ಟಿಯಿಂದ ಉಪಯುಕ್ತವಾಗುವುದರಿಂದ ‘ ಅಕ್ಕ ಕೇಳವ್ವ’ ಕೃತಿಯು ತುಂಬಾ ಮೌಲಿಕವಾದದ್ದು. ಇದನ್ನು ಪ್ರಕಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಸ್ತ್ರೀವಾದಿ ಅಧ್ಯಯನಕ್ಕೆ ಹಾಗೂ ಕನ್ನಡ ಸಂಸ್ಕೃತಿಗೆ ಉತ್ತಮ ಕೊಡುಗೆ ನೀಡಿದೆ. ಪ್ರತಿಯೊಬ್ಬರೂ ಓದಲೇ ಬೇಕಾದ ಉತ್ತಮ ಮಾಹಿತಿಗಳುಳ್ಳ ಕೃತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅಕ್ಕ ಕೇಳವ್ವ’.
ಮುದಲ್ ವಿಜಯ್
ಬೆಂಗಳೂರು

Wednesday, March 20, 2019

ಲೋಹಿಯಾ ದಿನಾಚರಣೆ - 23-3-2019

Image may contain: 1 person, smiling

ವಿಶ್ವ ಕವಿತಾ ದಿನ - ಎಮ್. ಆರ್. ಕಮಲ ಅವರೊಂದಿಗೆ ಸಂವಾದ

No photo description available.

ಎಮ್. ಟಿ. ವಾಸುದೇವನ್ ನಾಯರ್ Celebrated Malayalam author MT Vasudevan Nair to be given 2019 Puthoor Award

ಡಿ. ರೂಪಾ Indian Police Service officer D Roopa In Shubhodaya Karnataka | DD Chandana

"ಪುಟ್ಟ ಹೆಜ್ಜೆ"-ಗುಬ್ಬಚ್ಚಿಗಳ ಜಾಡು ಹಿಡಿದು..!ಉಜಿರೆ ಎಸ್‌ಡಿಎಂ ಕಾಲೇಜಿನ ಗುಬ್ಬಚ್ಚ...

ರಾಜಾರಾಮ ತೋಳ್ಪಾಡಿ / ನಿತ್ಯಾನಂದ ಶೆಟ್ಟಿ ರಾಜಕಾರಣದ ನಡುವೆ ಸಂಸ್ಕೃತಿ ಚಿಂತನೆ

ಪಾರ್ವತಿ ಐತಾಳ್ -- ಸಾಯಿಸುತೆ ಅವರ ಕಾದಂಬರಿಗಳು

Image may contain: 2 people, including Parvathi Aithal, people smiling, people sitting






ಮೊನ್ನೆ ೯.೩.೨೦೧೯ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಂದು ಸಾಯಿಸುತೆಯವರಿಗೆ ಗೌರವ ಪ್ರಶಸ್ತಿಯಿತ್ತು. ಮಹಿಳೆಯರು ಬರವಣಿಗೆ ಆರಂಭಿಸಿದ ಕಾಲದಲ್ಲಿ ಬರೆದವರು ಸಾಯಿಸುತೆಯವರು.ಅತ್ಯಂತ ಸರಳವೂ ಸ್ಪಷ್ಟವೂ ನೇರವೂ ಆದ ಅವರ ಶೈಲಿ.ನಾನು ನನ್ನ ಸಾಹಿತ್ಯದ ಓದನ್ನು ಆರಂಭಿಸಿದ್ದೇ ಸಾಯಿಸುತೆಯವರ ಕಾದಂಬರಿಗಳ ಮೂಲಕ. ಪ್ರೀತಿ, ಪ್ರೇಮ, ಮದುವೆ,ದಾಂಪತ್ಯ, ಕೌಟುಂಬಿಕ ಬದುಕು ಪರಿಸರ, ಶಾಲೆ, ಕಾಲೇಜು-ಇಷ್ಟನ್ನೇ ಅವರು ತಮ್ಮ ಕಾದಂಬರಿಗಳಲ್ಲಿ ಸ್ಥೂಲ ವಿವರಗಳೊಂದಿಗೆ ಕೊಡುತ್ತಾರೆ. ಶೈಲಿಯಲ್ಲಿ ಯಾವ ಸಂಕೀರ್ಣತೆಯಿಲ್ಲ. ಸುಖವಾಗಿ ಓದಿಸಿಕೊಂಡು ಹೋಗುವ ಕಾದಂಬರಿಗಳು. ದೈನಂದಿನ ಬದುಕಿನ ಜಂಜಾಟಗಳಲ್ಲಿ ನಲುಗುವ ಹೆಂಗಳೆಯರ ಮನಸ್ಸನ್ನು ಕ್ಷಣಿಕವಾಗಿಯಾದರೂ ಮುದಗೊಳಿಸುವ ಕಥೆಗಳು.
ವೈಚಾರಿಕ ನೆಲೆಗಟ್ಟಿನಲ್ಲಿ ಅವರು ಬರೆದಿಲ್ಲ, ಅವರು ಜನಪ್ರಿಯ ಕಾದಂಬರಿಕಾರ್ತಿ ಎಂದೆಲ್ಲ ಸಾಹಿತ್ಯ ಲೋಕ ಏನೇ ಹೇಳಲಿ ಅವರು ಇದುವರೆಗೆ ೧೪೦ ಕಾದಂಬರಿಗಳನ್ನು ಬರೆದಿದ್ದಾರೆಂದರೆ ನನಗೆ ಹೃದಯ ತುಂಬಿ ಮಾತೇ ಬರುತ್ತಿಲ್ಲ. ಅವರಿಗೆ ಹೃದಯ ತುಂಬಿದ ನಮನಗಳು.ಅವರ ಜತೆಗೆ ಫೋಟೋ ತೆಗೆಸಿಕೊಳ್ಳಬೇಕು ಅಂದಾಗ ಯಾವ ಬಿಗುಮಾನವೂ ಇಲ್ಲದೆ ಸಂತೋಷದಿಂದ ನಗುನಗುತ್ತ ಒಪ್ಪಿಕೊಂಡರು.

Tuesday, March 19, 2019

ದಾ / ವಿವೇಕ ರೈ - Kannada’s oral epics must be brought to mainstream classical literature, says former VC | Mysuru News

Kannada’s oral epics must be brought to mainstream classical literature, says former VC | Mysuru News - Times of India: MYSURU: Former vice-chancellor of Mangalore University Prof BA Viveka Rai on Monday made a strong case for the inclusion of Kannada oral epics within .

ನಟರಾಜ ಹುಳಿಯಾರ್ -- ಕಾಮನ ಹುಣ್ಣಿಮೆ { ಕಾದಂಬರಿ }

ಕಾಮನ ಹುಣ್ಣಿಮೆ ಗೆ ಚಿತ್ರದ ಫಲಿತಾಂಶ

ಮಾಂಸಾಹಾರ ಮತ್ತು ಮನುಷ್ಯ -- Philip Woolen - The world need to hear this - Philip wollen

ಕಾತ್ಯಾಯಿನಿ ಕುಂಜಿಬೆಟ್ಟು - ಕಾಯಕಾವ್ಯ

Image may contain: Kathyayini Kunjibettu, smiling, text

ಜಯಂತ ಕಾಯ್ಕಿಣಿ -- ನೋ ಪ್ರೆಸೆಂಟ್ಸ್ ಪ್ಲೀಸ್

No photo description available.

ಸಂಗೀತಾ ಕಟ್ಟಿ- ಸಂದರ್ಶನ - Singer Sangeeta Katti (Kulkarni) in Shubhodaya Karnataka

Thursday, March 14, 2019

ಅಂಜಲಿ ರಾಮಣ್ಣ - : ಮನದೆದುರು ಬಂದವರು ಪರಿಚಿತರೋ ಅಪರಿಚಿತರೋ? -

ಗಿರೀಶ್ ಕಾಸರವಳ್ಳಿ ಸಂದರ್ಶನ{ ಭಾಗ -2 } ಮನು ಚಕ್ರವರ್ತಿ Bellitereya Swarnagari | Part-2 | Director Girish Kasaravalli | DD Chandana

– ಫಿಶಿಂಗ್ ಅನುಭವಗಳು!!" ಪೂರ್ಣಚಂದ್ರ ದರ್ಶನ" -ವೆಬ್ ಸರಣಿ...

ಮಾತೆ ಮಹಾದೇವಿ ಇನ್ನಿಲ್ಲ

Wednesday, March 13, 2019

ಜಿ . ಎನ್.ರಂಗನಾಥ ರಾವ್ ಅನಂತ ಮೂರ್ತಿ-ಭೈರಪ್ಪ

ಪು. ತಿ. ನರಸಿಂಹಾಚಾರ್ - Makers of Modern Kannada Literature 03

ಲಕ್ಷ್ಮಣ ತೆಲಗಾವಿಗೆ ಸದಾಶಿವರಾಯ ಪ್ರಶಸ್ತಿ

ಮಮತಾ ಪಕ್ಷದ ಶೇ 41ರಷ್ಟು ಟಿಕೆಟ್‌ ಮಹಿಳೆಯರಿಗೆ

ವಿಚಾರಗಳ ಸರಹದ್ದು ಮೀರುವ ಪೊನ್ನಾಚಿ ಕಥೆಗಳು:ಶ್ರೀರಾಮ್ ಮುನ್ನುಡಿ

ಗಿರೀಶ ಕಾಸರವಳ್ಳಿ ಸಂದರ್ಶನ - { ಮನು ಚಕ್ರವರ್ತಿ } Bellitereya Swarnagari | Part-1 | Director Girish Kasaravalli | DD Chandana

ಹೈಕೋರ್ಟ್ ಮೆಟ್ಟಿಲೇರಿದ ಕಸಾಪ ತಿದ್ದುಪಡಿ ವಿವಾದ

Sunday, March 10, 2019

ಸುಧಾ ಅಡುಕಳ -.ಅವರಿಂದ ಮಹಿಳಾ ದಿನಾಚರಣೆ ಕುರಿತು

ಗೋಪಾಲಕೃಷ್ಣ ಪೈ - ಮಾತುಕತೆ| Gopalakrishna pai

‘ಸಾಹಿತ್ಯ ಅಕಾಡೆಮಿ ಪ್ರಾಧಿಕಾರವಾಗಲಿ’–ಅರವಿಂದ ಮಾಲಗತ್ತಿ

ಕರ್ನಾಟಕದಲ್ಲಿ ಯಾವಾಗ ಎಲ್ಲೆಲ್ಲಿ ಮತದಾನ: ಇಲ್ಲಿದೆ ಮಾಹಿತಿ

Saturday, March 9, 2019

ವೈದೇಹಿ - ಲೇಖಕಿ ವಾಣಿ ಎಂಬ ಚಿಕ್ಕಮ್ಮ

ಎಚ್. ಎಸ್ . ವೆಂಕಟೇಶಮೂರ್ತಿ - ಚೊಕ್ಕಾಡಿಯೆಂಬ ಸವರ್ಣದೀರ್ಘ‌ ಸಂಧಿ

ಶಿವರಾಮ ಕಾರಂತರ ’ ಅಳಿದ ಮೇಲೆ " ಇಂಗ್ಲಿಷ್ ನಲ್ಲಿ-Beyond Life

Image may contain: one or more people and text
shivarama karanth- Beyond Life

ಶಿವ ವಿಶ್ವನಾಥನ್ - Shiv Vishvanathan -- A peace movement is needed -

A peace movement is needed - OPINION - The Hindu: India and Pakistan must re-imagine the border as a fold of peace instead of as a threshold of hostilities

ದ್ರೌಪದಿಯ ಸೀರೆ / ಮುಟ್ಟನ್ನು ಮುತ್ತಿಕೊಂಡಿರುವ ಮೂಢನಂಬಿಕೆ – ಆರ್. ಪೂರ್ಣಿಮಾ

ದ್ರೌಪದಿಯ ಸೀರೆ / ಮುಟ್ಟನ್ನು ಮುತ್ತಿಕೊಂಡಿರುವ ಮೂಢನಂಬಿಕೆ – ಆರ್. ಪೂರ್ಣಿಮಾ – Hitaishini Magazine: ಜೈವಿಕ ಪುನರುತ್ಪಾದನೆಗೆ ಅತ್ಯಗತ್ಯವಾದ ಹೆಣ್ಣಿನ ಸಹಜ ಋತುಸ್ರಾವದ ಬಗ್ಗೆ ಇರುವ ಕರಾಳ ಮೂಢನಂಬಿಕೆಗಳು ಅನೇಕ ನಾಗರಿಕತೆಗಳಿಗೆ ಸಮಾನವಾಗಿವೆ. ಹೆಣ್ಣಿನ ಆರೋಗ್ಯದ ಬಗ್ಗೆ ಎಲ್ಲೂ ಕಾಣದಿರುವ ಧಾರ್ಮಿಕ- ಸಾಮಾಜಿಕ ಕಾಳಜಿ, ಅವಳ ಮುಟ್ಟಿನ ಬಗ್ಗೆ ಮಾತ…

ಫೇಸ್ಬುಕ್ ನಲ್ಲಿ ಬಿಜೆಪಿಯನ್ನು ಟೀಕಿಸಿದ ದಲಿತ ಪ್ರೊಫೆಸರ್ ಗೆ ಸಾಹಿತ್ಯ ಪ್ರಶಸ್ತಿ ರದ್ದು!

Thursday, March 7, 2019

ಆಯಿಷಾ ಯು . ಕೆ - ಕವಯತ್ರಿಯ ಪೊರೆದವರು

ಕವಯತ್ರಿಯ ಪೊರೆದವರು | Udayavani - ಉದಯವಾಣಿ: ಬರವಣಿಗೆ ಎನ್ನುವುದು ಇವತ್ತು ನನ್ನ ಹವ್ಯಾಸ ಹಾಗೂ ನನಗೆ ಅಭಿಪ್ರಾಯ ವ್ಯಕ್ತಪಡಿಸಲಿರುವ ಒಂದು ವೇದಿಕೆಯಾಗಿದೆ. ಸಣ್ಣದರಲ್ಲಿ ನನಗೆ ಕುರ್‌ಆನಿನ ಶಿಕ್ಷಣ ನೀಡುತ್ತಿದ್ದ ಶಿಕ್ಷಕರು "ಓದಿರಿ' ಎಂದು ಪ್ರಥಮವಾಗಿ ಪ್ರವಾದಿ ಮುಹಮ್ಮದ್‌ (ಸ) ರವರಿಗೆ ಅಲ್ಲಾಹನ ವಾಣಿ ಅವತೀರ್ಣವಾದ ಘಟನೆ, ಅದರಿಂದ ಅವರ ಜೀವನದಲ್ಲಿ ಉಂಟಾದ ಬದಲಾವಣೆಯನ್ನು ವಿವರಿಸುವಾಗ... ಈ ಒಂದು ಪದಕ್ಕೆ ಅಷ್ಟೊಂದು ಶಕ್ತಿಯಿದೆಯೇ ಎಂದು ಅಚ್ಚರಿಗೊಂಡಿದ್ದೆ. ಓದುವ ಹವ್ಯಾಸವನ್ನು ಅಂದಿನಿಂದಲೇ

-ಮಾನಸಿ ಸುಧೀರ್ ಸಂದರ್ಶನ

ಮಂಜುಳಾ ಸುಬ್ರಹ್ಮಣ್ಯ --- ಹೆಣ್ಣಿಗೆ ಅವಕಾಶದ ಹಾದಿ ಕ್ಲಿಷ್ಟಕರ

ಮಹಿಳಾ ದಿನದ ಶುಭಾಶಯಗಳು Happy International Women Day ...

ಬೆಟಗೇರಿ ಕೄಷ್ಣ ಶರ್ಮ ಟ್ರಸ್ಟ್ -- ಕಾವ್ಯ ವಿಮರ್ಶಾ ಶಿಬಿರ

Image may contain: Janardana Upadhya

ಲಂಕೇಶ್ ಹೊಸ ತಲೆಮಾರಿಗೆ -

Image may contain: 1 person, smiling, text

ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ

ಎಸ್ . ಜನಾರ್ದನ -- ಬೈಂದೂರು ತಾಲೂಕು ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷ ಭಾಷಣ -

Live - -ನೇರ ಪ್ರಸಾರ - Natyanjali 2019 - Nagapattinam | Bharatanatyam Performances | 7th March ...

Wednesday, March 6, 2019

ಮಂಗಳೂರು ವಿ ವಿ ಕನ್ನಡ ವಿಭಾಗ - ಗಿಳಿವಿಂಡು ಮೂರನೆಯ ಸಮಾವೇಶ - { ಭಾಗ -2 }

ಮಂಗಳೂರು ವಿ ವಿ ಕನ್ನಡ ವಿಭಾಗ - ಗಿಳಿವಿಂಡು ಮೂರನೆಯ ಸಮಾವೇಶ - 2019 {Part -1 }

ಮಲೆನಾಡಿನಲ್ಲಿ ಮತ್ತೆ ಮಂಗನ ಖಾಯಿಲೆ ಭೀತಿ..!

ಅಯೋಧ್ಯೆ --ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್‌, ಸಂಧಾನಕಾರರ ಹೆಸರು ಸೂಚಿಸಲು ಅವಕಾಶ

ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್‌, ಸಂಧಾನಕಾರರ ಹೆಸರು ಸೂಚಿಸಲು ಅವಕಾಶ | Prajavani: ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಅಯೋಧ್ಯೆ ಭೂವಿವಾದ ಪ್ರಕರಣದ ವಿಚಾರಣೆ ಆರಂಭವಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಿದೆ.

ರಫೇಲ್‌ ದಾಖಲೆ ಕಳವು: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಯಕ್ಷರತ್ನ, ಅಭಿನವ ಶನೀಶ್ವರ ಜಲವಳ್ಳಿ ವೆಂಕಟೇಶ್ ರಾವ್ (A living legend Jalavalli...

ಅನಕ್ಷರ ಪರಂಪರೆಯ ಅಪ್ರತಿಮ ಕಲಾವಿದ ಜಲವಳ್ಳಿ ವೆಂಕಟೇಶ ರಾವ್‌

Live - ನೇರ ಪ್ರಸಾರ Natyanjali 2019 - Nagapattinam | Bharatanatyam Performances | 6th March ...

ಪ್ರಭಾಕರ್ ನೀರ್‌ಮಾರ್ಗ ಅವರ ಕೃತಿಗಳ ಅನಾವರಣ

Tuesday, March 5, 2019

ಸಿ. ಪಿ. ನಾಗರಾಜು ಬಸವಣ್ಣನ ವಚನಗಳ ಓದು

ಬಸವಣ್ಣನ ವಚನಗಳ ಓದು | ಹೊನಲು: ಬಸವಣ್ಣನವರ ವಚನ ಮತ್ತು ವಿವರಣೆ, ತಿಳಿಸುವಿಕೆ. Sharana Basavanna's Vachanas explained in detail.

ಪಿ. ವಿ .ನಾರಾಯಣ - ಇದು ನಿಚ್ಚಂ ಪೊಸತು: ವಡ್ಡಾರಾಧನೆ ಅರ್ಥಾತ್ ಕರ್ಣಾಟ ಆರಾಧನಾ ಟೀಕಾ

ಇದು ನಿಚ್ಚಂ ಪೊಸತು: ವಡ್ಡಾರಾಧನೆ ಅರ್ಥಾತ್ ಕರ್ಣಾಟ ಆರಾಧನಾ ಟೀಕಾ: ನಾವೀಗ ‘ ವಡ್ಡಾರಾಧನೆ ’ ಎಂದು ಕರೆಯುವ ಕೃತಿಯ ಹೆಸರು , ಕರ್ತೃ ಹಾಗೂ ಕಾಲಗಳ ಬಗ್ಗೆ ವಿದ್ವಾಂಸರಲ್ಲಿ ಭೀನ್ನಾಭಿಪ್ರಾಯಗಳಿವೆ. ಡಿ. ಎಲ್. ಎನ್. ಅವರೇನೋ ಇದನ್ನು ಆ...

ಸುಬ್ರಹ್ಮಣ್ಯ ಪ್ರಸಾದ್ - -ಸೀತಾನದಿ ಗಣಪಯ್ಯ ಶೆಟ್ಟರ ಬದುಕು ಬರಹ

ವಿಜಯಲಕ್ಷ್ಮೀ ಶಿಬರೂರ್ - - ಟಿ. ವಿ . ಧಾರಾವಾಹಿಗಳು

ಸೋಮು ಕುದರಿಹಾಳ - ವಾಟ್ಸಪ್‌ ಗ್ರೂಪ್‌ ಎಂಬ ದ್ರೋಣ ಗುರು -

ವಾಟ್ಸಾಪ್: ವಾಟ್ಸಪ್‌ ಗ್ರೂಪ್‌ ಎಂಬ ದ್ರೋಣ ಗುರು - ವಾಟ್ಸಪ್‌ ಗ್ರೂಪ್‌ ಎಂಬ ದ್ರೋಣ ಗುರು | vijaykarnataka Kannada Newspaper: Literary: ವಾಟ್ಸಪ್‌ ಗ್ರೂಪ್‌ ಎಂಬ ದ್ರೋಣ ಗುರು ---- ಸಾಹಿತ್ಯ ಸಂಬಂಧಿಯಾಗಿ ಹುಟ್ಟಿಕೊಂಡಿರುವ ಹಲವಾರು ವಾಟ್ಸಪ್‌ ಗ್ರೂಪ್‌ಗಳಲ್ಲಿ ಸಾಹಿತ್ಯಾಭ್ಯಾಸದ ಚಟುವಟಿಕೆ ಅದೆಷ್ಟು ...

ನಾ . ಮೊಗಸಾಲೆ - ಸಂದರ್ಶನ

ಎಮ್. ಎಸ್ .ಆಶಾದೇವಿ Writer,Critic Dr M S Ashadevi in Shubhodaya Karnataka | DD Chandana

Monday, March 4, 2019

ಭಾರತಿ ಹೆಗಡೆ - ಅಕ್ಕೋರು ಕಲಿಸಿದ ಸ್ತ್ರೀವಾದದ ಪಾಠ ಮತ್ತು ಕಾದಾರಿದ ನೀರು.

ಅಕ್ಕೋರು ಕಲಿಸಿದ ಸ್ತ್ರೀವಾದದ ಪಾಠ ಮತ್ತು ಕಾದಾರಿದ ನೀರು. | ಕೆಂಡಸಂಪಿಗೆ: ಈಗ ಎನಿಸುತ್ತದೆ, ನಾ ಎರಡು ದಿನ ರಜೆ ಹೋಗಿದ್ದಾಗ ಬಹುಶಃ ಅವರು ಕಾಸಿದ ನೀರು ಕುಡಿದಿದ್ದರು ಎನಿಸುತ್ತದೆ. ಅದುವರೆಗೆ ತಣ್ಣೀರನ್ನು ಕುಡಿದು ನಂತರ ಏಕದಂ ಕಾಸಿದ ನೀರು ಕುಡಿದಿದ್ದಕ್ಕೆ ಅವರಿಗೆ ನೆಗಡಿಯಾಗಿದೆ ಅನಿಸುತ್ತದೆ. ಅಸ್ತಮಾ ಪೇಷಂಟ್ ಒಬ್ಬರಿಗೆ ಹೀಗೆ ತಣ್ಣೀರು ಕುಡಿಸಬಾರದು ಎಂದು ಆಗ ನನಗೆ ಹೊಳೆಯಲೂ ಇಲ್ಲ. ಅದರ ಪರಿಣಾಮ ಏನಾಗಬಹುದು ಎಂಬ ಯಾವ ಎಚ್ಚರವೂ ಆಗ ಇರಲಿಲ್ಲ.

ಎ. ಎಸ್. ಪನ್ನೀರ್ ಸೆಲ್ವನ್ -A. S. Pannerselvan = The difference between journalism and propaganda --

The difference between journalism and propaganda - OPINION - The Hindu: Journalists should report events rather than become cheerleaders for hate politics and intolerance

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 2019

ಎಚ್ . ಎಸ್. ವೆಂಕಟೇಶಮೂರ್ತಿ - ಭಾವೋದ್ರೇಕವಿಲ್ಲದ ವಿಮರ್ಶಾ ಧೀಮಂತಿಕೆ; ಗಿರಡ್ಡಿ ಗೋವಿಂದರಾಜ

ಭಾವೋದ್ರೇಕವಿಲ್ಲದ ವಿಮರ್ಶಾ ಧೀಮಂತಿಕೆ; ಗಿರಡ್ಡಿ ಗೋವಿಂದರಾಜ | Udayavani - ಉದಯವಾಣಿ: ಗಿರಡ್ಡಿ ಗೋವಿಂದರಾಜ ನನ್ನ ಅಂತರಂಗದ ಒಡನಾಡಿ ಆದದ್ದು ಯಾವಾಗ ಎಂದು ಯೋಚಿಸುತ್ತಿದ್ದೇನೆ. ಒಟ್ಟಿಗೇ ಅನೇಕ ನೆನಪುಗಳು ಮನಸ್ಸಿಗೆ ಮುತ್ತಿಗೆ ಹಾಕುತ್ತವೆ. ಮೊದಲು ರಿಂಗಣ ಹಾಕಿದ ನೆನಪು ಯಾವುದು ಹೊಳೆಯುತ್ತಲೇ ಇಲ್ಲ. ಕೆಲವರ ವಿಷಯದಲ್ಲಿ ಹೀಗಾಗುತ್ತದೆ. ಬೀಸುವ ತಂಗಾಳಿಯಂತೆ ಅವರು ಯಾವಾಗಲೋ ನಮ್ಮ ಮನಸ್ಸು ಹೊಕ್ಕುಬಿಟ್ಟಿರುತ್ತಾರೆ. ಆಯಾತ-ನಿರ್ಯಾತಗಳಲ್ಲಿ ಮನಸ್ಸಿನ ಒಳಕ್ಕೆ ಹೊರಕ್ಕೆ ಬಂದುಹೋಗುತ್ತ ಸಹಜವಾಗಿ ನಮ್ಮೊಂದಿಗೆ ಇದ್ದುಬಿಡುತ್ತಾರೆ. ಹಾಗೆ ಗಾಳಿಯಂತೆ ಗೊತ್ತೇ





Sunday, March 3, 2019

ವಿಜಯಲಕ್ಷ್ಮ್ಮೀ ಶಿಬರೂರ್- - ಟಿ. ವಿ . ಧಾರಾವಾಹಿಗಳು

ಯಮುನಾ ಗಾಂವ್ಕರ್ - -ಮನೆ ಮಂದಿಯ ’ ಸೇವೆ ’ ಮತ್ತು ಮಹಿಳೆಯ ’ ಶ್ರಮ’ ದ ಮೌಲ್ಯ

ತೆಯ್ಯಮ್ - As Kerala’s sacred groves disappear, the Theyyam art form loses a vital link

As Kerala’s sacred groves disappear, the Theyyam art form loses a vital link - The Hindu: The unique pantheistic art form of the Theyyam faces increasing threats of gentrification and Brahminisation, thus paving the way for the destruction of the sacred groves where it was born

Garlands and decorations for Theyyam always come from nature — flowers, leaves and fruits.

ಮುರಳೀಧರ ಉಪಾಧ್ಯ ಹಿರಿಯಡಕ - - ಸುಮನಸಾ ನಾಟಕೋತ್ಸವದಲ್ಲಿ

Live- ನೇರ ಪ್ರಸಾರ - Natyanjali 2019 - Nagapattinam | Bharatanatyam Performances | 3rd March ...

ಡಾ / ಎಮ್. ಎಸ್ .ಆಶಾದೇವಿ -----ಮಹಾ ಇಳೆ ಮಹಿಳೆ

Saturday, March 2, 2019

ಕವಿಪತ್ನಿ ದಿನಾಚರಣೆ 

ಕವಿಪತ್ನಿ ದಿನಾಚರಣೆ  | Udayavani - ಉದಯವಾಣಿ: ಕೆ. ಎಸ್‌. ನರಸಿಂಹಸ್ವಾಮಿಯವರ ಪತ್ನಿ ವೆಂಕಮ್ಮನವರ ನೆನಪಿನಲ್ಲಿ ನಿನ್ನೆ ಬೆಂಗಳೂರಿನಲ್ಲಿ ಕವಿಪತ್ನಿ ದಿನಾಚರಣೆ. ಕವಿ ಎಸ್‌. ಜಿ. ಸಿದ್ದರಾಮಯ್ಯನವರ ಪತ್ನಿ ಪ್ರೇಮಲೀಲಾ ಅವರಿಗೆ "ನಿನ್ನೊಲುಮೆಯಿಂದಲೇ...' ಗೌರವ ಪ್ರದಾನ. ದಾಂಪತ್ಯ ನಿಷ್ಠೆ ಎನ್ನುವ ಪದ ಈ ದಿನಗಳಲ್ಲಿ ಅಂಥ ಮಹಣ್ತೀದ್ದೆಂದು ಅನ್ನಿಸುವುದಿಲ್ಲ. ಜೀವನಪೂರ್ತಿ ಒಟ್ಟಿಗೆ ಕಳೆಯಬೇಕು ಅಂತ ಬಯಸಿ-ಪ್ರೀತಿಸಿ ಮದುವೆಯಾಗುವ ಸಂಬಂಧಗಳೂ ಹಾಳಾಗುತ್ತವೆ. ಕೆಲವು ಅಂಟಿಕೊಂಡಿರುತ್ತವೆ. ಕೆಲವು ಬೆಳೆಯುತ್ತವೆ.

ಕಾಫಿ ನಾಡಲ್ಲಿ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಸ್ತ್ರೀವಾದ ಎಂಬುದು ಯುದ್ಧ ಅಲ್ಲ: ಡಾ.ಎಂ.ಎಸ್.ಆಶಾದೇವಿ

ನಮ್ಮ ಯೋಧರ ಒಂದು ಸತ್ಯ ಕತೆ - Soldiers from Assam village fight a bitter battle to prove citizenship

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ:ಮೂಕಜ್ಜಿಯ ಕನಸುಗಳು,ಕೆಜಿಎಫ್‌ಗೆ ಪ್ರಶಸ್ತಿ