stat Counter



Monday, December 5, 2011

ಚೊಕ್ಕಾಡಿಯ ಹಕ್ಕಿಗಳು- { ಸುಬ್ರಾಯ ಚೊಕ್ಕಾಡಿ ಸಮಗ್ರ ಕವಿತೆಗಳು }


ಸುಬ್ರಾಯ ಚೊಕ್ಕಾಡಿ { ಜನನ-೧೯೪೦ ] ದ. ಕ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ ಎಂಬ ಹಳ್ಳಿಯಲ್ಲಿ ತನ್ನ ಕನಸಿನ ಬಂಗಾರದ ಹಕ್ಕಿಯ ಹುಡುಕಾಟದಲ್ಲಿರುವ ಕವಿ. ನನ್ನ ನಿಡುಗಾಲದ ಗೆಳೆಯ.ಚೊಕ್ಕಾಡಿಯವರ ಮೊದಲ ಕವನ ಸಂಕಲನ-’ತೆರೆ’ ೧೯೭೦ ರಲ್ಲಿ ಪ್ರಕಟವಾಯಿತು.ಮುನ್ನುಡಿ ಬರೆದ ಅಡಿಗರು , ಬದುಕನ್ನು ಆಳವಾಗಿ ಗಮನಿಸುವುದರಿಂದ ಬರಬಹುದಾದ ಜೀವಂತ ಪ್ರತಿಮೆಗಳು ಈ ಕವಿಯ ಕವನಗಳಲ್ಲಿರುವುದನ್ನು ಮೆಚ್ಚಿಕೊಂಡರು.
ತೆರೆ [ ೧೯೭೦ ], ಬೆಟ್ಟವೇರಿದ ಮೇಲೆ { ೧೯೭೫ } , ನಿಮ್ಮವೂ ಇರಬಹುದು { ೧೯೮೩ }, ಮೊನ್ನೆ ಸಿಕ್ಕವರು {೧೯೯೦ ] ,ಇದರಲ್ಲಿ ಅದು { ೧೯೯೬ ], ಇನ್ನೊಂದು ಬೆಳಗು { ೨೦೦೦ }, ಮಾಗಿಯ ಕೋಗಿಲೆ { ೨೦೦೪ },ಹಳದಿ ಬೆಳಕಿನ ಸಂಜೆ {೨೦೧೦ }, ಹಾಡಿನ ಲೋಕ { ೧೯೯೮ } ಬಂಗಾರದ ಹಕ್ಕಿ { ೨೦೦೩ } ಎಂಬ ಚೊಕ್ಕಾಡಿಯವರ ಹತ್ತು ಸಂಕಲನಗಳು ಪ್ರಕಟವಾಗಿವೆ.
          ಚೊಕ್ಕಾಡಿ ಅಡಿಗರ ’ಚಂಡೆ ಮದ್ದಳೆ ’ ಓದಿ ಕಾವ್ಯ ಕುತೂಹಲಿಯಾದ ಕವಿ.ಅಡಿಗರ ಕೊಡೆಯಡಿಯಲ್ಲಿ ಉಳಿಯದೆ, ಚೊಕ್ಕಾಡಿಯ ಹಕ್ಕಿಗಳನ್ನು ಮರೆಯದೆ ಹಾಡತೊಡಗಿದ ಕವಿ.ಕವನದ ವಸ್ತು ಸಂಕೀರ್ಣವಾಗಿದ್ದರೂ ಅದರ ಶರೀರ ಸಂವಹನಕ್ಕೆ ಸುಲಭವಾಗುವ ಹಾಗೆ ಸರಳವಾಗಿರಬೇಕು ಎಂದು ನಂಬಿರುವ ಕವಿ.
           ಚೊಕ್ಕಾಡಿಯವರು ಇತ್ತೀಚೆಗೆ ನೂರಾರು ಹಕ್ಕಿಗಳನ್ನು ಕುರಿತು, ಆಕಾಶಕ್ಕೆ ಲಗ್ಗೆಯಿಟ್ಟ ಪಾರಿಜಾತದ ಕುರಿತು, ಗಿಡ-ಮರಗಳ ಕುರಿತು ಕವನಗಳನ್ನು ಬರೆದಿದ್ದಾರೆ.ಮುಖವಾಡದ ಮನುಷ್ಯರಿಗಿಂತ ಹಕ್ಕಿಗಳ ಸಹವಾಸ ವಾಸಿ ಎಂದು ಈ ಕವಿಗೆ ಅನ್ನಿಸಿದೆ.ಚೊಕ್ಕಾಡಿಯವರ ಕನಸಿನ ಬಂಗಾರದ ಹಕ್ಕಿ ಗಾಯಗೊಂಡಿದೆ.-"ಗಾಯದ ಹಕ್ಕಿಯು. ಹಾರುತ್ತ್ಗಲೇ ಇದೆ, ದಿಗಂತದತ್ತಲೆ ನಜರು ".ಚೊಕ್ಕಾಡಿ ಹೊಸಗನ್ನಡ ಕಾವ್ಯ ಚಳುವಳಿಗಳ ಪ್ರವಾಹದ ವಿರುದ್ದ ಈಜುತ್ತ ತನ್ನ ಸ್ವಂತಿಕೆ ಉಳಿಸಿಕೊಂಡಿರುವ ಕವಿ.
                                                       ---  ಮುರಳೀಧರ ಉಪಾಧ್ಯ ಹಿರಿಯಡಕ
ಚೊಕ್ಕಾಡಿಯ ಹಕ್ಕಿಗಳು
ಮೊದಲ ಮುದ್ರಣ-೨೦೧೦
-ಅಂಬಾರಿ ಪ್ರಕಾಶನ,
ಕುವೆಂಪು ನಗರ,
ಮೈಸೂರು-೫೭೦೦೨೩
Chokkadiya Hakkigalu { kannada }
{ A collection of Poems }
Written by-Subraya Chokkadi
Post-Chokkadi-574212
Sullia Taluk,
Dakshina Kannada Dist,
Karnataka
08257-284295, mobile-9449824295
Published by-
Ambari Prakashana,
1238, Upstair, 3rd cross, Gange Road,
Kuvempu Nagar,
Mysore-570023
Phone- 9845890353
Pages-688,Size 1/8 demmy,
First Imp;ression-2010,
Rs-400
Copright-Author

No comments:

Post a Comment