ಪ್ರದೀಪ್ ಕೆಂಜಿಗೆ ಅವರ ಹೆಬ್ಬಾವಿನೊಡನೆ ಹೋರಾಟ
'ಸತ್ಯ'ವೆಂಬುದೊಂದು ಇದೆ0ೋ ಇಲ್ಲವೋ, ಅದರ ಹುಡುಕಾಟದ ಪ್ರ0ುತ್ನಗಳು ಮಾತ್ರ ಸತ್ಯ. ಈ ಪ್ರಕ್ರಿ0ೆು0ುಲ್ಲಿ ಮನುಷ್ಯನ ಅನುಭವಗಳು ಸಮೃದ್ಧವಾಗುತ್ತ ಹೋಗುವುದೂ, ಅವನ ಲೋಕಜ್ಞಾನ ವಿಸ್ತಾರಗೊಳ್ಳುತ್ತ ಹೋಗುವುದೂ ಸತ್ಯ. ಈ ಶೋಧದಲ್ಲಿ ನಾವು ಕಂಡುಕೊಳ್ಳುವ ಮುಖ್ಯ ಸತ್ಯವೆಂದರೆ 'ಸತ್ಯ'ಕ್ಕೆ ಅನೇಕ ಮುಖಗಳಿರುತ್ತವೆ; ಸತ್ಯವನ್ನು ಅರಸುವ ಮಾರ್ಗ ಮತ್ತು ವಿಧಾನಗಳು ಬೇರೆ0ಾದಂತೆ ಸತ್ಯದ ಸ್ವರೂಪವೂ ಭಿನ್ನವಾಗಿರಬಹುದು ಎಂಬುದು. ಧರ್ಮ, ತತ್ವಶಾಸ್ತ್ರ, ವಿಜ್ಞಾನ..ಹೀಗೆ ಹಲವು ದಿಕ್ಕುಗಳಿಂದ ಪ್ರಾರಂಭವಾಗಬಹುದಾದ ನಮ್ಮ ಪ0ುಣವು 'ಸತ್ಯ'ವನ್ನು ತೋರಿ0ೆು ಬಿಡುತ್ತದೆ ಎಂಬುದು ಸಂದೇಹಾಸ್ಪದವಾದರೂ ಈ ಶೋಧದಲ್ಲಿ ನಮ್ಮ ಮಿತಿಗಳ ಅರಿವು ನಮ್ಮಲ್ಲಿ ಮೂಡುವಂತೆ ನಾವು ಬೆನ್ನಟ್ಟಿರುವ 'ಸತ್ಯ'ದ ಅಗಾಧತೆ, ಸಂಕೀರ್ಣತೆ ಮತ್ತು ವೈಶಾಲ್ಯಗಳ ಪರಿಚ0ುವೂ ಆಗತೊಡಗುವುದು ಮಾತ್ರ ನಿಜ. ಪ್ರದೀಪ್ ಕೆಂಜಿಗೆ ಅವರ ಹೆಬ್ಬಾವಿನೊಡನೆ ಹೋರಾಟ(2012, ಪುಸ್ತಕ ಪ್ರಕಾಶನ, ಮೈಸೂರು) ಎಂಬ ಕಿರು ಕಾದಂಬರಿ0ುನ್ನು ಓದಿ ಮುಗಿಸಿದ ಮೇಲೆ ನನ್ನಲ್ಲಿ ಮೇಲೆ ಪ್ರಸ್ತಾಪಿಸಿದಂಥ ಲಹರಿ0ೊಂದು ತೇಲಿ ಬಂದಿತು. ಜಾಜರ್್ ಎಂಬ ಕೃಷಿಕನೊಬ್ಬನು ಕತ್ಲೆಕಾನಿನಲ್ಲಿ ಹೆಬ್ಬಾವೊಂದರ ಜೊತೆ ನಡೆಸಿದ ಹೋರಾಟದ ಸುತ್ತ ಈ ಕಥಾನಕವು ಕಟ್ಟಿಕೊಂಡಿದ್ದರೂ ಆ ಪ್ರಸಂಗವೇನೂ ಪ್ರದೀಪರ ಕೃತಿ0ು ಹೆಚ್ಚು ಪುಟಗಳನ್ನು ಕಬಳಿಸಿಲ್ಲ. ಹಾಗೆ ನೋಡಿದರೆ ಈ ಪ್ರಕರಣವು ನಿಮಿತ್ತ ಮಾತ್ರವಾಗಿ ತಾನು ಬದುಕುತ್ತಿರುವ ಒಟ್ಟಾರೆ ಸಂದರ್ಭವನ್ನು ಕುರಿತು ಧ್ಯಾನಿಸುವುದೇ ಈ ಕತೆ0ು ಉತ್ತಮಪುರುಷ ನಿರೂಪಕನ ಮುಖ್ಯ ಉದ್ದೇಶವಿರಬಹುದು ಎನಿಸುತ್ತದೆ.ಅಂದರೆ ಈ ಕಥಾನಕವು ಜಾರ್ಜನ ಅನುಭವದ ನೇರ ಸರಳರೇಖಾತ್ಮಕ ವೃತ್ತಾಂತವಲ್ಲ. ಕತೆ0ು ಒಂದು ಘಟ್ಟದಲ್ಲಿ ಅವನು ತನ್ನ ಅನುಭವಕಥನವನ್ನು ನಿರೂಪಿಸುವುದಾದರೂ ಅದು ಓದುಗರಿಗೆ ತಲುಪುವುದು ಒಟ್ಟಾರೆ ಕತೆ0ು ಉತ್ತಮಪುರುಷ ನಿರೂಪಕನ ಪ್ರಜ್ಞೆ0ು ಮೂಲಕ; ಅವನು ಕೇಳಿಸಿಕೊಂಡಂತೆ ಮತ್ತು ಅವನ ಒಟ್ಟಾರೆ ನಿರೂಪಣೆ0ು ಒಂದು ಭಾಗವಾಗಿ. ಆದುದರಿಂದಲೇ ಇಡೀ ಕೃತಿ0ುನ್ನು ಓದಿ ಮುಗಿಸಿದ ಮೇಲೆ ನಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು ಕೇವಲ ಹೆಬ್ಬಾವಿನೊಂದಿಗಿನ ಹೋರಾಟವನ್ನು ಕುರಿತ ಜಾರ್ಜನ ಕಥನವಲ್ಲ. ಬದಲಾಗಿ ಉತ್ತಮಪುರುಷ ನಿರೂಪಕನ ಕತ್ಲೆಕಾನಿನ 0ಾತ್ರೆ0ು ಒಟ್ಟಾರೆ ಅನುಭವಗಳು. ಈ ಅನುಭವಗಳ ಮೂಲಕ ಕಾಲಾತೀತವಾದ ಜೀವಜಗತ್ತು ಮತ್ತು ಅದರ ತೀರ ಸಣ್ಣದೊಂದು ಭಾಗವಾದ ಸದ್ಯದ ಸಮಕಾಲೀನ ಮನುಷ್ಯರ ಜಗತ್ತು ನಿರೂಪಕನಲ್ಲಿ ಹುಟ್ಟಿಸುವ ವಿಸ್ಮ0ು, ದ್ವಂದ್ವಗಳು ಈ ಕಥಾನಕದ ಮೂಲದ್ರವ್ಯ ಎಂದು ಹೇಳಬಹುದಾಗಿದೆ. ಒಂದು ಘಟ್ಟದಲ್ಲಿ ಸ್ವತಃ ನಿರೂಪಕನು ತನ್ನಷ್ಟಕ್ಕೆ ಉದ್ಗರಿಸಿಕೊಳ್ಳುವ ಈ ಮಾತುಗಳು ಈ ಕಥಾನಕದ ಆಶ0ು ಮತ್ತು ಸ್ವರೂಪಗಳ ಬಗ್ಗೆ ತುಸು ಬೆಳಕು ಚೆಲ್ಲುವಂತಿವೆ: 0ಾವುದೋ ಒಂದು, 0ಾರ ಗಮನಕ್ಕೂ ಬಾರದ ಹೆಬ್ಬಾವಿನ ಘಟನೆ0ುನ್ನು ವರದಿ ಮಾಡಲು ಬಂದು ಪ್ರಕೃತಿ0ು ರಹಸ್ಯಗಳ ಚಕ್ರವ್ಯೂಹ ಹೊಕ್ಕಂತೆ ಆಗಿದೆ!. ಹಾಗಾಗಿ ಈ ಕಿರುಕಾದಂಬರಿ0ುಲ್ಲಿ ಕೇವಲ ಒಂದು ಕತೆ0ುನ್ನು ನಿರೀಕ್ಷಿಸುವಂತಿಲ್ಲ. ಮೇಲುನೋಟಕ್ಕೆ ಬಿಡಿ ಬಿಡಿ ಎಂದು ಕಾಣಬಹುದಾದ ಅನೇಕ ಕತೆಗಳು, ಪ್ರಸಂಗಗಳು, ಅವಲೋಕನಗಳು, ವಾಗ್ವಾದಗಳು ಕಾದಂಬರಿ0ು ಬಂಧದಲ್ಲಿ ಸಡಿಲವಾಗಿ ಸಂ0ೋಜನೆಗೊಂಡು ಒಂದು ದರ್ಶನದತ್ತ ಚಲಿಸುವ ವಿನ್ಯಾಸ ಇಲ್ಲಿ ಕಂಡುಬರುತ್ತದೆ. ಈ ದೃಷ್ಟಿಯಿಂದ ಪ್ರದೀಪರ ಕೃತಿ0ುನ್ನು ಪೂರ್ಣಚಂದ್ರ ತೇಜಸ್ವಿ ಅವರ ಉತ್ತರಾರ್ಧದ ಬರವಣಿಗೆ0ು ಅರ್ಥಪೂರ್ಣ ಮುಂದುವರಿಕೆ ಎಂದು ಗುರುತಿಸಲು ಸಾಧ್ಯ. (ಮುಖ್ಯವಾಗಿ ಪ್ರದೀಪರ ಕಿರುಕಾದಂಬರಿಗೂ ತೇಜಸ್ವಿ ಅವರ ಕವರ್ಾಲೋ ಕಾದಂಬರಿಗೂ ಇರುವ ಸಾಮ್ಯ ಗಮನ ಸೆಳೆವಂತಿದೆ.) ಆದರೆ ಇದರೊಂದಿಗೇ ಇನ್ನೂ ಒಂದು ಮಾತನ್ನು ಸೇರಿಸಬಹುದು: ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹಗಳ ದಟ್ಟವಾದ ಪ್ರಭಾವ ಇದ್ದೂ ಅವುಗಳನ್ನು ಕೇವಲ ಅನುಕರಿಸದೆ ತನ್ನದೇ ಆದ ಹಾದಿ0ೊಂದನ್ನು ಹುಡುಕಿಕೊಳ್ಳಬೇಕೆಂಬ ಇರಾದೆ0ುೂ ಇಲ್ಲಿ ಸೂಚಿತವಾಗುವುದರಿಂದ ಪ್ರದೀಪರ ಬರವಣಿಗೆಗೆ ತನ್ನದೇ ಆದ ಒಂದು ತುತರ್ು ಪ್ರಾಪ್ತವಾಗಿದೆ.
ಹೆಬ್ಬಾವುಗಳು ಮನುಷ್ಯರ ಮೇಲೆ ಆಕ್ರಮಣ ನಡೆಸುವುದು ಅಪರೂಪದ ಸಂಗತಿಗಳಂತೆ. ಆಫ್ರಿಕಾದ ಕಾಡುಗಳಲ್ಲಿ ಇಂಥ ಕೆಲವು ನಿದರ್ಶನಗಳು ವರದಿ0ಾಗಿರುವುದು ನಿರೂಪಕನ ಗಮನಕ್ಕೂ ಬಂದಿದೆ. ಆದರೆ ಭಾರತ ದೇಶದಲ್ಲಿ ಇಂಥ 0ಾವ ಘಟನೆ0ುೂ ವರದಿ0ಾಗಿಲ್ಲವಂತೆ. ಈ ಹಿನ್ನೆಲೆ0ುಲ್ಲಿ ಕತ್ಲೆಕಾನಿನಲ್ಲಿ ಇಂಥದೊಂದು ಘಟನೆ ನಡೆದಿರುವುದಾಗಿ0ುೂ ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ವರದಿ ಮಾಡಲು 'ಸಾರ್' ಪ್ರದೀಪರಿಗೆ(ಅಂದರೆ ಈ ಕಿರುಕಾದಂಬರಿ0ು ನಿರೂಪಕನಿಗೆ) ಫೋನ್ ಮಾಡಿ ಒತ್ತಾಯಿಸುತ್ತಾರೆ. ಈ ಸೂಚನೆ0ುನ್ನು ಅನುಸರಿಸಿ ನಿರೂಪಕನು ಕತ್ಲೆಕಾನಿಗೆ ಹೋಗಿ ಆಕ್ರಮಣಕ್ಕೆ ಒಳಗಾದ ಜಾಜರ್್ನನ್ನೂ ಅವನ ಹೆಂಡತಿ0ುನ್ನೂ ಭೆಟ್ಟಿ0ಾಗಿ ಕೆಲವು ಮಾಹಿತಿಗಳನ್ನು ಅವರಿಂದ ಪಡೆ0ುುತ್ತಾನೆ. ಹೆಬ್ಬಾವಿನೊಡನೆ ತಾನು ಹೋರಾಟ ನಡೆಸಿ ಅದೃಷ್ಟವಶಾತ್ ತಾನು ಬದುಕುಳಿದ ಅನುಭವವನ್ನು ಜಾಜರ್್ ನಿರೂಪಕನಿಗೆ ಎಲ್ಲ ವಿವರಗಳಲ್ಲಿ ನಿವೇದಿಸುತ್ತಾನೆ.
ಹೆಬ್ಬಾವು ಹೀಗೆ ಜಾರ್ಜನ ಮೇಲೆ ಆಕ್ರಮಣ ನಡೆಸಲು ಕಾರಣವಾದರೂ ಏನು ಎಂದು ಚಿಂತಿಸುವ ನಿರೂಪಕನಿಗೆ ಹಲವರು ಹಲವು ಬಗೆ0ು ಕಾರಣಗಳನ್ನು ನೀಡುತ್ತಾರೆ. ಕೆಲವರಂತೂ ಅಂಥದೊಂದು ಘಟನೆ ನಡೆದೇ ಇಲ್ಲವೆಂದೂ ಇದೆಲ್ಲಾ ಜಾಜರ್್ ಕಟ್ಟಿರುವ ಕತೆ0ೆುಂದೂ ಹೀ0ಾಳಿಸುತ್ತಾರೆ. ಚಿಣ್ಣಪ್ಪನವರಂತೂ ಹೆಬ್ಬಾವಿನ ವಿಚಾರ ಪ್ರಸ್ತಾಪವಾದರೆ ವಿಷ0ಾಂತರ ಮಾಡುವುದು ನಿರೂಪಕನ ಗಮನಕ್ಕೆ ಬರುತ್ತದೆ. ತನ್ನ ಗೆಳೆ0ು ನವೀನನೂ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ದಾರಿ ತಪ್ಪಿಸಬಹುದೆಂದು ನಿರೂಪಕನು ತಾನೊಬ್ಬನೇ ಜಾರ್ಜನೊಟ್ಟಿಗೆ ಘಟನೆ ನಡೆದ ಸ್ಥಳಕ್ಕೆ ಭೇಟಿಕೊಟ್ಟು ಅವನನ್ನು ನೇರವಾಗಿ ಕೇಳಿಸಿಕೊಳ್ಳುತ್ತಾನೆ. ಹೆಬ್ಬಾವು ತನ್ನನ್ನು ಆಕ್ರಮಿಸಿದ್ದು ಒಂದು ಆಕಸ್ಮಿಕ ಘಟನೆ0ೋ ಅದಕ್ಕೆ ಬೇರೇನಾದರೂ ಕಾರಣಗಳಿರಬಹುದೋ ಎಂಬ ಬಗ್ಗೆ ಜಾರ್ಜನೂ ಖಚಿತವಾಗಿ ಏನೂ ಹೇಳುವುದಿಲ್ಲ. 'ಮತ್ತೇ, ನಿನ್ನೆ 0ಾರೋ ಮಾತಾಡುತ್ತಿದ್ರು..ಒಂದು ತಿಂಗಳ ಹಿಂದೆನೋ ಏನೋ.. ಒಂದು ಹೆಬ್ಬಾವಿನ ಮರಿ ಇಲ್ಲೇ ಇತ್ತಂತೆ? ನಿಮ್ಮ ಜನಾ ಅದ್ನ ಹೊಡೆದು ಸುಟ್ಟುಹಾಕಿದರಂತೆ..ಅದೇ ಸಿಟ್ಟಿಗೆ ಈ ತಾಯಿ ಹೆಬ್ಬಾವು ನಿನ್ನ ಕಾ0್ತಾ ಇತ್ತಂತೆ..ಸೇಡು ತೀರಿಸಿಕೊಳ್ಳದಿಕ್ಕೆ..!? ಎಂದು ನಿರೂಪಕನು ಕೆದಕಿದರೆ, ಜಾಜರ್್ ಹೇಳುತ್ತಾನೆ: ಆ ಸಂಗತಿ ಈಚೆಗೆ ನನ್ನ ಕಿವಿಗೂ ಬಿತ್ತು..ಸತ್ಯನೋ ಸುಳ್ಳೋ ಗೊತ್ತಿಲ್ಲ..ಆಗಿದ್ರೂ ಆಗಿರಬಹುದು. ಏಕೆಂದರೆ ಇಲ್ಲಿ ಲಂಬಾಣಿಗಳು, ಹದಿನಾರು ದಿವ್ಸದವರು, ಕಲ್ಲು ಒಡ್ಡರು ಎಲ್ಲಾ ಕೆಲಸಕ್ಕೆ ಬತರ್ಾರೆ. 0ಾರು ಎಂಥದು ಮಾಡಿದ್ರೂ ಗೊತ್ತಾಗೊಲ್ಲ. ನಮಗೆ ಹೇಳೋದು ಇಲ್ಲ; ಬೆಂಕಿ ಹಾಕಿ ಸುಟ್ಟರೋ? ಸುಟ್ಟುಕೊಂಡು ತಿಂದರೋ? 0ಾರಿಗೆ ಗೊತ್ತು? ಆದರೆ 0ಾ0ರ್ಾರೋ ಮಾಡಿದ ಪಾಪ ಎಲ್ಲಾ ಬಂದು ನನ್ನ ಕೊರಳಿಗೆ ಸುತ್ತಿಕೊಳೋದು ಅಂದ್ರೆ?! ನ್ಯಾ0ುನಾ?. ತಮ್ಮ ಕೃಷಿ ಕೆಲಸಕ್ಕೆ ಅಡ್ಡಿ ಎಂದೋ, ಹೆಬ್ಬಾವು ಅಲ್ಲಿ ಇದ್ದರೆ ತಮ್ಮ ನಿರ್ಭ0ು ಸಂಚಾರಕ್ಕೆ ತೊಂದರೆ ಎಂದೋ ಅಲ್ಲಿ0ು ಜಮೀನ್ದಾರರೇ ಅದನ್ನು ಕೊಲ್ಲಿಸಿರಬಹುದಾದ ಅನುಮಾನಗಳೂ ಈ ಕಥಾನಕದಲ್ಲಿ ಸುಳಿದು ಹೋಗುತ್ತವೆ. ಮತ್ತೆ ಕೆಲವರು ಹೆಬ್ಬಾವಿನ ಚರ್ಮ ಮತ್ತು ಕೊಬ್ಬನ್ನು ಕಳ್ಳಸಾಗಾಣಿಕೆ ಮಾಡಲು ಅದನ್ನು ಕೊಂದು ಈ ಕತೆ ಹಬ್ಬಿಸಿರಬಹುದಾದ ಸಾಧ್ಯತೆಗಳನ್ನು ಸೂಚಿಸುತ್ತಾರೆ. ಅವುಗಳಿಗೆ ತುಂಬಾ ಬೇಡಿಕೆ ಇದೆ0ೆುಂದೂ, ಅವುಗಳಿಗೆ ಭಾರಿ ಬೆಲೆ ಎಂದೂ, ಈಚೆಗೆ ಅವನ್ನು ಚೀನಾಗೆ ರಫ್ತು ಮಾಡುತ್ತಿದ್ದಾರೆಂದೂ ಹೇಳುತ್ತಾರೆ. ನಿರೂಪಕನ ಬಾಲ್ಯ ಸ್ನೇಹಿತ ಗೋಪಾಲ ಇದಕ್ಕಿಂತ ತುಂಬಾ ಬೇರೆ0ಾದ ವಿವರಣೆ ಕೊಡುತ್ತಾನೆ: ಹನ್ನೆರಡು ವರ್ಷಕ್ಕೊಂದು ಸಾರಿ ಹೆಬ್ಬಾವು ಬೆದೆಗೆ ಬರುತ್ತಾವಂತೆ, ಜೋಡಿ ಆಗೋಕ್ಕೆ ತನ್ನ ಜಾತಿದೇ ಇನ್ನೊಂದು ಸಿಕ್ಕದೇ ಇದ್ರೆಇನ್ನೇನು ಮಾಡುತ್ತೆ? ಇದು ಹೆಣ್ಣು ಹೆಬ್ಬಾವಿರಬೈದು, ಜಾಜರ್್ ಗುಂಡುಗುಂಡಾಗಿ ಕಂಡ್ನಲ್ಲಾ? ಅಂಬ್ರಿಸಿಕೊಂಡದೆ. ಅಂದರೆ ಹೆಬ್ಬಾವಿನ ಆಕ್ರಮಣಕೆ ್ಕ ಒಳಗಾಗಿ ಅದರೊಂದಿಗೆ ಹೋರಾಡಿ ಹೇಗೋ ತಪ್ಪಿಸಿಕೊಂಡು, ಅದರಿಂದಾದ ಆಘಾತಕ್ಕೆ ಮನೋವೈದ್ಯರಿಂದ ಚಿಕಿತ್ಸೆ ಪಡೆದು, ಚಚರ್ಿನಲ್ಲಿವಿಶೇಷ ಪೂಜೆ ಮಾಡಿಸಿ, ಈಗಲೂ ವಿಚಿತ್ರವಾದೊಂದು ಮನಸ್ಥಿತಿ0ುಲ್ಲಿರುವ ಜಾರ್ಜನ ನಿರೂಪಣೆ ನಿರೂಪಕನನ್ನು ಗಾಢವಾಗಿ ತಟ್ಟಿದರೂ ಜಾರ್ಜನ ನಿರೂಪಣೆ0ುನ್ನೇ ಪ್ರಶ್ನಿಸುವ-ಅನುಮಾನಿಸುವ ಸೂಚನೆಗಳಿಂದ ನಿರೂಪಕನು ತಬ್ಬಿಬ್ಬಾಗುತ್ತಾನೆ. ಅಷ್ಟೇ ಅಲ್ಲ, ವಿಜ್ಞಾನಿಗಳು ಪ್ರತಿಪಾದಿಸುವ ವಿಚಾರಗಳ ಮತ್ತು ಸ್ಥಳೀ0ು ಜನರ ಅನುಭವಜನ್ಯ ನಂಬಿಕೆಗಳ ಮಧ್ಯೆ ಸಿಲುಕಿಕೊಡು, ಸತ್ಯದ ಹಲವು ಸಾಧ್ಯತೆಗಳಿಗೆ ತೆರೆದುಕೊಂಡು ತೀವ್ರವಾದ ದ್ವಂದ್ವವನ್ನು ಅನುಭವಿಸುತ್ತಾನೆ. ಸತ್ಯವೇ ಇಷ್ಟು ಗೋಜಲು ಗೋಜಲಾಗಿರುವಾಗ ಅದನ್ನು ಭಾಷೆ0ುಲ್ಲಿ ಗ್ರಹಿಸುವ ಮತ್ತು ಅದಕ್ಕೊಂದು ಆಕಾರ ಕೊಟ್ಟು ಅಭಿವ್ಯಕ್ತಿಸುವ ಕಷ್ಟವನ್ನು ನಿರೂಪಕನು ಓದುಗರ ಮುಂದೆ ಆತಂಕದಿಂದ ನಿವೇದಿಸಿಕೊಳ್ಳುತ್ತಾನೆ. ಒಂದು ಘಟ್ಟದಲ್ಲಿ 'ಇದ್ದದ್ದು ಇದ್ದ ಹಾಗೆ ವರದಿ ಮಾಡಲೋ ಅಥವಾ ಒಂದು ಸಣ್ಣಕಥೆ ರೂಪದಲ್ಲಿ..?'ಎಂದು 'ಸಾರ್'ರನ್ನು ಕೇಳಿದರೆ, ಅವರು 'ಥೂ..ಮೊದಲು ಸತ್ಯವನ್ನು ನೋಡೋದು, ಅರಗಿಸಿಕೊಳ್ಳೋದನ್ನ ಕಲೀರಿ..ಆಮೇಲೆ ಬರೆ0ೋದು..ಅದೇ ಇಲ್ಲಾ ಅಂದೆ ್ರ ಏನು ಪ್ರ0ೋಜನ..'ಎಂದು ಗೊಣಗುತ್ತಾ ಫೋನ್ ಇಟ್ಟುಬಿಡುತ್ತಾರೆ. ಹಾಗಾಗಿ ಪ್ರದೀಪರ ಕಿರುಕಾದಂಬರಿ0ುು ಒಂದು ಹಂತದಲ್ಲಿ ಕೊನೆಗೊಳ್ಳಬೇಕಾದದ್ದು ಅನಿವಾ0ರ್ುವಾಗಿದ್ದರೂ ಕೃತಿ0ು ಕೊನೆ0ು ಸಾಲುಗಳು ಲೇಖಕರ ಜಿಜ್ಞಾಸೆಗಳನ್ನು ಮುಕ್ತವಾಗಿ ಇಡುವುದರ ಜೊತೆಗೆ ಅವರ ಕಾದಂಬರಿ0ು ಬಂಧವನ್ನೂ ಮುಕ್ತವಾಗಿ0ೆು ಇಡುತ್ತವೆ: ಇದೆಲ್ಲಾ ಆಗಿ ತಿಂಗಳುಗಳೇ ಕಳೆದಿವೆ. ಮತ್ತೆ ಮತ್ತೆ ನಾಲ್ಕೈದು ಸಾರಿ, ಕತ್ಲೇಕಾನಿಗೆ ಹೋಗಿ ಬಂದಿದ್ದೇನೆ. ಫೋಟೋಗಳನ್ನು ತೆಗೆದುಕೊಂಡಿದ್ದೇನೆ; ನನ್ನ ದಿನಚರಿ0ುಲ್ಲಿ ಟಿಪ್ಪಣಿ ಸಮೇತ ದಾಖಲಿಸಿಕೊಂಡಿದ್ದೇನೆ. ಆದರೆ ಪಟ್ಟಾಗಿ ಕುಳಿತು ಒಂದು ಕತೆ0ುನ್ನೊ ಅಥವಾ ಪೂರ್ಣ ಪ್ರಮಾಣದ ವರದಿ0ುನ್ನೊ ಸಿದ್ಧಪಡಿಸಲು ಸಾಧ್ಯವಾಗಿಲ್ಲ. 0ಾವುದು ಮುಖ್ಯ, 0ಾವುದು ಅಮುಖ್ಯ ಎಂಬುದರ ಕುರಿತು ಗೊಂದಲಗಳಿವೆ. ವಿವರಗಳೆಲ್ಲಾ ನಿಖರವಾಗಿದ್ದರೂ ಸಮಗ್ರ ಅರ್ಥವನ್ನು ಗ್ರಹಿಸುವಲ್ಲಿ ಎಡವಿರಬಹುದಾದ ಸಂಶ0ುಗಳಿವೆ.
ಅಂದರೆ ಪ್ರದೀಪರ ಕೃತಿ0ುು ಸರಳವಾಗಿ ಏನನ್ನೂ ಸ್ಥಾಪಿಸುವ ಇಲ್ಲವೇ ನಿರಾಕರಿಸುವ ಆಶ0ುವನ್ನು ಇಟ್ಟುಕೊಂಡಿಲ್ಲ. ಹಾಗೆಂದು ಅದು 'ಎಲ್ಲವೂ ಸರಿ; ಎಲ್ಲವೂ ನಡೆ0ುುತ್ತದೆ' ಎಂಬ ಲೋಕಾಭಿರಾಮದ ನಿಲುವನ್ನೂ ತಾಳುವುದಿಲ್ಲ. ಹೆಬ್ಬಾವುಗಳು, ಜಾಜರ್್ ಹೆಬ್ಬಾವಿನೊಂದಿಗೆ ಹೋರಾಡಿದ್ದು ಇವುಗಳು ಮಾತ್ರವಲ್ಲದೆ ಸಾವ0ುವ ಕೃಷಿ0ು ಲಾಭನಷ್ಟಗಳು, ಕಡಿಮೆ ಜಾಗದಲ್ಲಿ ಅತ್ಯಧಿಕ ಇಳುವರಿ0ುನ್ನು ಪಡೆ0ುುವ ಪ್ರ0ೋಗಗಳು, ಪರಿಸರ ನಾಶ ಮತ್ತು ರಕ್ಷಣೆ0ುನ್ನು ಕುರಿತ ವೈವಿಧ್ಯಮ0ು ವಾದ-ವಿವಾದಗಳು, ಹಲವು ಬಗೆ0ು ವೈಜ್ಞಾನಿಕ ಪ್ರ0ೋಗಗಳು ಗಂಡು-ಹೆಣ್ಣಿನ ಸಂಬಂಧಗಳ ಇಕ್ಕಟ್ಟುಗಳು, ಜೀವನ ಸಾಫಲ್ಯದ ಪ್ರಶ್ನೆಗಳು..ಹೀಗೆ ಮೇಲುನೋಟಕ್ಕೆ ಒಂದಕ್ಕೊಂದು ಸಂಬಂಧ ಪಡದ ಆದರೆ ನಿರೂಪಕನ ಒಟ್ಟಾರೆ 0ಾತ್ರೆ0ು ಅವಿಭಾಜ್ಯ ಅಂಗಗಳಾಗಿ ಮೂಡಿಬರುವ ಸಂಗತಿಗಳು ಪ್ರದೀಪರ ಕಾದಂಬರಿ0ು ಬಂಧವನ್ನು ಕಟ್ಟಿವೆ. ಒಂದು ಸಂಗತಿ0ುನ್ನು ತೀವ್ರವಾಗಿ ಮಂಡಿಸುತ್ತಲೇ ಏಕಕಾಲದಲ್ಲಿ ಸೂಚಿತವಾಗುವ ಅದರ ಹಲವು ಮುಖಗಳ ಮತ್ತು ಆ0ಾಮಗಳ ಬಗ್ಗೆ ನಿರೂಪಕನು ವಿಸ್ಮಿತನಾಗಿದ್ದಾನೆ. ತನ್ನ ನಂಬಿಕೆಗಳಿಗೆ ಹೊರತಾದ ಆದರೆ ಅತ್ಯಗತ್ಯವಾಗಿ ಗಮನಿಸಲೇ ಬೇಕಾದ ಅವುಗಳಿಗೆ ತದ್ವಿರುದ್ಧವಾದ ನೆಲೆಗಳನ್ನೂ ಅವನು ಗಣನೆಗೆ ತೆದುಕೊಂಡಿದ್ದಾನೆ. ಈ ಬಹುಮುಖತೆ0ುನ್ನು-ಬಹುಧ್ವನಿ0ುನ್ನು ಭಾಷೆ0ುಲ್ಲಿ ಗ್ರಹಿಸಿ ಅಭಿವ್ಯಕ್ತಿಸುವ ಕಷ್ಟವನ್ನೂ ಉದ್ದಕ್ಕೂ ಧ್ಯಾನಿಸಿದ್ದಾನೆ. ಹೀಗಾಗಿ ಹೆಬ್ಬಾವಿನೊಡನೆ ಹೋರಾಟ ಈಚೆಗೆ ಪ್ರಕಟವಾಗಿರುವ ಕುತೂಹಲಕಾರಿ 'ಫಿಕ್ಷನ್' ಮಾತ್ರವಲ್ಲ, ನಾವು ಎಚ್ಚರದಿಂದ ಗಮನಿಸಬೇಕಾದ 'ಮೆಟಾ ಫಿಕ್ಷನ್' ಕೂಡಾ ಹೌದು.
*********
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
No comments:
Post a Comment