ಅಶ್ವತ್ಥ ಅವರ ವ್ಯಭಿಚಾರ
'ಅಶ್ವತ್ಥ' ಎಂಬ ಕಾವ್ಯನಾಮದಲ್ಲಿ ಬರೆ0ುುತ್ತಿದ್ದ ಕೂದವಳ್ಳಿ ಅಶ್ವತ್ಥನಾರಾ0ುಣರಾವ್(1912-1994) ನಂಜುಂಡಾ0ುಣ ಎಂಬ ಬೃಹತ್ ಕಾದಂಬರಿ0ುನ್ನು ಬರೆದಿದ್ದಾರೆ. ನಾಟಕ, ಪ್ರಬಂಧ, ಖಂಡಕಾವ್ಯ ಮುಂತಾದ ಪ್ರಕಾರಗಳಲ್ಲೂ ಅವರು ಕೃಷಿ ಮಾಡಿದ್ದಾರೆ. ಅವರ ಸಾಧನೆ0ುು ಸಣ್ಣಕತೆ0ು ಪ್ರಕಾರದಲ್ಲಿ ಎದ್ದುಕಾಣುವಂತಿದೆ. ಅವರು ಹದಿಮೂರು ಕಥಾಸಂಕಲನಗಳನ್ನು ಪ್ರಕಟಿಸಿ0ುೂ ಸಾಹಿತ್ಯ ವಲ0ುದಲ್ಲಿ ಅಷ್ಟಾಗಿ ಚಚರ್ೆಗೆ ಒಳಗಾದಂತೆ ಕಾಣುವುದಿಲ್ಲ. ನವೋದ0ು ಕಾಲದ ಈ ಹಿರಿ0ು ಕತೆಗಾರರು ತಮ್ಮ ಸಮಕಾಲೀನರಂತೆ ಪ್ರಸಿದ್ಧಿಗೆ ಬಾರದಿರುವುದು ಆಶ್ಚ0ರ್ುಕರ. ಚಿಕ್ಕಮಗಳೂರು ಜಿಲ್ಲೆ0ುಲ್ಲಿ ಹುಟ್ಟಿ ಬೆಳೆದ ಅಶ್ವತ್ಥರು ಎಂಜಿನಿ0ುರಿಂಗ್ ಪದವೀಧರರಾಗಿದ್ದರು. ತಮ್ಮ ವೃತ್ತಿ ಜೀವನವನ್ನು ಹೆಚ್ಚಾಗಿ ಕನರ್ಾಟಕದಿಂದ ಹೊರಗೇ ಕಳೆದರು. ಸ್ವಭಾವತಃ ಮಿತಭಾಷಿ0ುೂ, ಸಂಕೋಚ ಸ್ವಭಾವದವರೂ ಆಗಿದ್ದ ಅಶ್ವತ್ಥರು ತಮ್ಮಷ್ಟಕ್ಕೆ ಸಾಹಿತ್ಯಕೃಷಿ0ುನ್ನು ಮಾಡಿಕೊಂಡು ಇದ್ದವರು. ವಿಶೇಷವಾದ ತಂತ್ರಪ್ರ0ೋಗಗಳಿಗೆ ಹೋಗದೆ ತಾವು ಗಮನಿಸಿದ ಘಟನೆ, ಜೀವನಸಂದರ್ಭ ಮತ್ತು ವೈವಿಧ್ಯಮ0ು ವ್ಯಕ್ತಿಮಾದರಿಗಳನ್ನು ಕತೆಗಳನ್ನಾಗಿ ರೂಪಾಂತರಿಸಿದರು. ಒಂದು ಬಗೆ0ು ವ್ಯಂಗ್ಯ, ಸಾತ್ವಿಕ ಸಿಟ್ಟು, ತೀವ್ರವಾದ ನೈತಿಕಪ್ರಜ್ಞೆ ಮತ್ತು ನೈತಿಕನಿಷ್ಠುರತೆಗಳು ಅಶ್ವತ್ಥರ ಒಟ್ಟಾರೆ ಬರವಣಿಗೆ0ು ಕೆಲವು ಮುಖ್ಯ ಲಕ್ಷಣಗಳೆಂದು ಹೇಳಬಹುದು. ವ್ಯಭಿಚಾರ ಅವರ ಪ್ರಾತಿನಿಧಿಕ ಕತೆಗಳಲ್ಲಿ ಒಂದು. ಎಸ್.ದಿವಾಕರ್ ಅವರು ಸಂಪಾದಿಸಿರುವ ಶತಮಾನದ ಸಣ್ಣಕತೆಗಳು(1997, ಪ್ರಿಸಮ್ ಬುಕ್ಸ್ , ಬೆಂಗಳೂರು) ಸಂಪುಟದಲ್ಲಿ ಈ ಕತೆ ಸೇರಿದೆ. 'ವ್ಯಭಿಚಾರ' ಎಂಬ ಪದದ ಹಲವು ಅರ್ಥಸಾಧ್ಯತೆಗಳನ್ನು ಸೂಚಿಸುವ ಈ ಕತೆ0ು ಶೀಷರ್ಿಕೆ0ುು ತುಂಬ ಧ್ವನಿಪೂರ್ಣವಾಗಿದೆ. ಮಹಾ0ುುದ್ಧದ ಕಾಲದ ಒಂದು ಪ್ರಸಂಗವನ್ನು ಸ್ವಾರಸ್ಯಕರವಾಗಿ ನಿರೂಪಿಸುವ ಈ ಕತೆ0ುು ಕಾಲಬದ್ಧವಾಗಿದ್ದೂ ನಮ್ಮ ಕಾಲಕ್ಕೆ ತೀರ ಪ್ರಸ್ತುತವಾಗಿದೆ.ಈ ಕತೆ0ುು ಮುಖ್ಯವಾಗಿ ಮೂರು ಪಾತ್ರಗಳ ಸುತ್ತ ಹೆಣೆ0ುಲ್ಪಟ್ಟಿದೆ. ಪ್ರಧಾನ ಪಾತ್ರವೆಂದರೆ ಪಿಲಾನಿ ಎಂಬ ವ್ಯಾಪಾರಿ. 'ಹೆಸರಿಗೆ ಮಾತ್ರ ಕಿರಾಣಿ ಅಂಗಡಿ. ಆದರೆ ಅವನಲ್ಲಿ ಸಿಕ್ಕದ ಸಾಮಾನು ಅಪೂರ್ವ ಎನ್ನಿ. 0ುುದ್ಧ ಮೊದಲಾದ ಮೇಲಂತೂ ಅವನ ವ್ಯಾಪಾರ ಬಹಳ ಭರಾಟೆಯಿಂದ ಸಾಗಿತು. ಬೆಲೆ0ು ಹತೋಟಿ ಜಾರಿಗೆ ಬಂದಮೇಲಂತೂ ಅವನ ಲಾಭವೂ ಹತೋಟಿ0ುನ್ನೇ ಮೀರಿತು. ಮಿತಿ0ಾದ ಬೆಲೆಗೆ ಪದಾರ್ಥವನ್ನು ಮಾರಿದರೆ ಅವನ ಕುಲಕ್ಕೇ ಅತಿ0ಾದ ಹಾನಿ ಎಂದು ಅವನ ನೀತಿ'. ಹೀಗೆ ಅವನ ಬಳಿ ಅಪಾರವಾದ ಹಣ ಸಂಗ್ರಹವಾಗಿತ್ತು. ಅವನು ಈ ಕಳ್ಳಹಣವನ್ನು ಬ್ಯಾಂಕಿನಲ್ಲಿ ಇಡದೆ ವರಮಾನ ತೆರಿಗೆಯಿಂದಲೂ ತಪ್ಪಿಸಿಕೊಳ್ಳುತ್ತಿದ್ದ. ದಿನವೂ ಏರಿಳಿ0ುುವ ಬೆಲೆಗಳ ಬಗ್ಗೆ ಅವನಿಗೆ ತನ್ನದೇ ಆದ ಲೆಕ್ಕಾಚಾರವಿದ್ದುದರಿಂದ ಚಿನ್ನ ಬೆಳ್ಳಿಗಳನ್ನೂ ಅಷ್ಟಾಗಿ ಕೊಂಡಿರಲಿಲ್ಲ. ಸರಕಾರದ ಹಣದ ಬಗ್ಗೆ ಅವನಿಗೆ ಏನೋ ಒಂದು ಬಗೆ0ು ನಂಬಿಕೆ. ಸಾವಿರ ರೂಪಾಯಿ ಮೌಲ್ಯದ ಇಪ್ಪತ್ತೈದು ನೋಟುಗಳು ಅವನ ಬಳಿ ಇದ್ದವು. ಹೀಗಿರುತ್ತ ಅನಿರೀಕ್ಷಿತವಾಗಿ ಅವನು ದೊಡ್ಡದೊಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಸರಕಾರವು ಐನೂರು ರೂ ಮೇಲಿನ ಮೌಲ್ಯದ ನೋಟುಗಳನ್ನು ರದ್ದು ಮಾಡಿ 'ಡಿಮಾನಿಟೈಸೇಷನ್'ಶಾಸನವನ್ನು ಘೋಷಿಸುತ್ತದೆ. ತನ್ನ ಬಳಿ ಇರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಪ್ರ0ುತ್ನಪಟ್ಟರೆ ತನ್ನ ಆದಾ0ುದ ಮೂಲವನ್ನು ಬಹಿರಂಗಪಡಿಸಿ ಕಳ್ಳವ್ಯಾಪಾರ ಮತ್ತು ತೆರಿಗೆವಂಚನೆಗಳ ಅಪರಾಧಕ್ಕಾಗಿ ಬಂದೀಖಾನೆ0ುನ್ನು ಸೇರಬೇಕಾಗುತ್ತದೆ. ಇಲ್ಲವೇ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕಷ್ಟದಿಂದ ಪಾರಾಗುವುದು ಹೇಗೆ ಎಂದು ತಿಳಿ0ುದೆ 'ಬೆಂಕಿ0ುಲ್ಲಿ ಬಿದ್ದ ಹುಳುವಿನಂತೆ ಒದ್ದಾಡಿದ'. ಆಹಾರದಲ್ಲಿ ರುಚಿ ಹೋಯಿತು; ನಿದ್ರೆ0ುೂ ದೂರವಾಯಿತು. ತನ್ನ ರೋಗಕ್ಕೆ ವೈದ್ಯರಿಂದ ಮದ್ದು ಸಿಗುವುದಿಲ್ಲ; ಲಾ0ುರನಿಂದ ಮಾತ್ರ ಏನಾದರೂ ಪರಿಹಾರ ಸೂಚಿತವಾಗಬಹುದು ಎಂಬ ಆಶೆಯಿಂದ ಅವನನ್ನು ನೋಡಲು ಹೋಗುತ್ತಾನೆ. 'ಈ ಬಗ್ಗೆ ಪಿಲಾನಿ0ು ಪೇಚಾಟವೆಂದರೆ ಲಾ0ುರು ಬಹಳ ದುಡ್ಡನ್ನು ಎಳೆದು ಬಿಡುವರು ಎಂಬುದು'. ಕೊನೆಗೆ ತನ್ನೂರಿನವರೇ ಆದ ಇಚ್ಚಾಪೂರ0ುರವನ್ನು ಭೇಟಿ0ಾಗಲು ತೆರಳುತ್ತಾನೆ. ಪಿಲಾನಿ0ುು ವಕೀಲರಿಂದ 'ಉಪಕಾರ'ವನ್ನು ಬ0ುಸಿದರೆ, ಅವರು 'ಇದರಲ್ಲೆಲ್ಲ ಉಪಕಾರ ಏನು? ನಮ್ಮ ಸಲಹೆ0ುನ್ನೇನು ಬಿಟ್ಟೀ ತೆಗೆದುಕೊಳ್ಳುತ್ತೀರ?' ಎಂದು ತಮ್ಮ ಮನದ ಇಂಗಿತವನ್ನು ಸೂಚಿಸುತ್ತಾರೆ. ವ್ಯಾಪಾರಿ ಮತ್ತು ವಕೀಲರ ನಡುವೆ ಒಂದು ಸ್ವಾರಸ್ಯಪೂರ್ಣ ಮಾತುಕತೆ ನಡೆದು ಒಬ್ಬರನ್ನೊಬ್ಬರು ಮಾನಸಿಕವಾಗಿ ಸೋಲಿಸುವ ಒಂದು ಸ್ಪಧರ್ೆ0ೆು ನಡೆ0ುುತ್ತದೆ:
'ಇದು ನಾನು ಬಹು ಕಷ್ಟಪಟ್ಟು ಸಂಪಾದಿಸಿದ ಆಸ್ತಿ'.
'0ಾರು ಇಲ್ಲ ಅಂದರು? ಸರಿ'.
'ಅನ್ಯಾ0ುದ್ದಲ್ಲ'.
'ನನಗೆ ಗೊತ್ತಿಲ್ಲವೇ? ನೀವು ಹೇಳಬೇಕೆ?'
'ಏನೋ ಕೂಡಿಡುವ ರೀತಿ0ುಲ್ಲಿ ಮೋಸ ಹೊಂದಿದೆ ಅಷ್ಟೆ.'
'ಹುಂ. ಪಾಪ, ಹಾಗೂ ಆಗುತ್ತದೆ'.
ಕೊನೆಗೆ ತಮ್ಮ ಫೀ ಶೇಕಡ ಹತ್ತು ಎಂದು ಹಠ ಹಿಡಿದು ಘೋಷಿಸುವಲ್ಲಿ ವಕೀಲರು 0ುಶಸ್ವಿ0ಾದರೆ ಕೈಗೆ ಹಣ ಬಂದೊಡನೆ ಕೊಟ್ಟುಬಿಡುತ್ತೇನೆ ಎಂದು ಅಂಗಲಾಚಿ ಒಪ್ಪಿಸುವಲ್ಲಿ ವ್ಯಾಪಾರಿ0ುು ಸಫಲನಾಗುತ್ತಾನೆ. ಇಷ್ಟು ದುಬಾರಿ ಫೀ ಕೊಡುವ ಬದಲು ತಾನು ತೆರಿಗೆ0ುನ್ನೇ ಕಟ್ಟಬಹುದಾಗಿತ್ತೇನೋ ಎಂದು ಪಿಲಾನಿಗೆ ಅನ್ನಿಸುತ್ತದೆ.
ವಕೀಲರ ನೆರವನ್ನು ಅಪೇಕ್ಷಿಸುವ ಪಿಲಾನಿ0ುು ಮುಂದೆ ಕೊಡಬಹುದಾದ ಫೀ0ುನ್ನು ಹೊರತು ಪಡಿಸಿ ಸಾಕಷ್ಟು ಹಣವನ್ನು ಖಚರ್ು ಮಾಡಬೇಕಾಗುತ್ತದೆ. ವೇಶ್ಯೆ0ುರು ವಾಸಿಸುವ ಫರಾಸು ರೋಡಿಗೆ ಹೋಗಬೇಕೆಂದು ವಕೀಲರು ಹೇಳುತ್ತಾರೆ. ಸೆಕೆಂಡ್ ಕ್ಲಾಸ್ ರೇಲ್ವೆ ವೆಚ್ಚ, ದುಬಾರಿ ಟ್ಯಾಕ್ಸಿ ಬಾಡಿಗೆ ಮುಂತಾದವುಗಳಿಂದ ಜಿಪುಣ ವ್ಯಾಪಾರಿ ಕಂಗೆಟ್ಟುಹೋಗುತ್ತಾನೆ. ಹಳೆ0ು ಗಿರಾಕಿ0ಾದ ವಕೀಲರು ತಮ್ಮ ಪರಿಚಿತ ವೇಶ್ಯೆ0ು ಮನೆಗೆ ಪಿಲಾನಿ0ುನ್ನು ಕರೆದೊ0ು್ಯುತ್ತಾರೆ. ಚುರುಕಾದ ಹುಡುಗಿ0ೊಬ್ಬಳನ್ನು ತಮ್ಮ ಜತೆಗೆ ಮೂರು ಗಂಟೆಗಳ ಮಟ್ಟಿಗೆ ಕಳಿಸಿಕೊಡಲು ವೇಶ್ಯಾವಾಟಿಕೆ0ು 0ುಜಮಾನಿಗೆ ಹೇಳುತ್ತಾರೆ. ವಕೀಲರು ಹಳೆ0ು ಗಿರಾಕಿ0ಾದುದರಿಂದ ಹೆಂಗಸು ಒಪ್ಪದೆ ಇರುವುದಕ್ಕೆ ಕಾರಣವಿರಲಿಲ್ಲ. ಆದರೆ ಅವಳು ಈ ಸಂದರ್ಭವು ಏನೋ ವಿಶೇಷವಾದುದೆಂದು ಊಹಿಸಿ ತಕ್ಕಮಟ್ಟಿಗೆ ಸುಲಿಗೆ ಮಾಡುವ ಮನಸ್ಸಿನಿಂದ 'ಸರಿ0ಾದ ಚಾಲೂಕು ಹುಡುಗಿ ಬೇಕಾದರೆ ಚಾಜರ್ು ಹೆಚ್ಚಾಗುತ್ತದೆ' ಎಂದು ನಕ್ಕಳು'. 0ುಜಮಾನಿ0ುು ಮುನ್ನೂರು ರೂಪಾಯಿ ಚಾರ್ಜನ್ನು ನಿಗದಿಗೊಳಿಸಿದಾಗ 'ಪಿಲಾನಿ0ು ಮೇಲೆ ಕಪ್ಪೆ ಬಿದ್ದಂತಾಯಿತು', ವಕೀಲರು ಮಾತ್ರ, 'ಆಗಬಹುದು, ಅದಕ್ಕೇನು, ಈ ನಮ್ಮ ಸ್ನೇಹಿತರು ಕೊಡುತ್ತಾರೆ, ಬಹು ಶ್ರೀಮಂತರು' ಎಂದು ಪಿಲಾನಿ0ು ಸಂಕಟವನ್ನು ದ್ವಿಗುಣಗೊಳಿಸುತ್ತಾರೆ.
ಈ ಚಾಲಾಕು ಹುಡುಗಿ0ುನ್ನು ರಿಸವರ್್ ಬ್ಯಾಂಕಿಗೆ ಕರೆದೊ0್ಯುಲಾಗುತ್ತದೆ. ಪಿಲಾನಿ0ು ಹತ್ತಿರವಿದ್ದ ನೋಟುಗಳನ್ನು ಆ ಹುಡುಗಿ0ು ಕೈ0ುಲ್ಲಿಟ್ಟು ಅವಳು ಬದಲಿ ನೋಟುಗಳನ್ನು ಪಡೆ0ುುವಂತೆ ಮಾಡುವುದು ವಕೀಲರ ಉಪಾ0ುವಾಗಿರುತ್ತದೆ. 'ಆ ದಿನ ರಿಸವರ್್ ಬ್ಯಾಂಕಿನ ಭವ್ಯ ಮಂದಿರದಲ್ಲಿ ಮತ್ತು ಸುತ್ತುಮುತ್ತೂ ಗಲಾಟೆ0ುು ಹೇಳತೀರದು..ಎಷ್ಟೋ ಜನರು ಬೆಳಗಿನ ಜಾವ, ಮಧ್ಯರಾತ್ರಿಯಿಂದಲೂ ಮುಂದಿನ ಜಾಗಕ್ಕಾಗಿ ಕಾದು ನಿಂತಿದ್ದರು. ಇವರ ಪೈಕಿ ಎಷ್ಟೋ ಭ0್ಯಾಗಳು ದುಡ್ಡಿಲ್ಲದಿದ್ದರೂ ಹಿಂದಿನ ಸಂಜೆಯಿಂದ ಅಲ್ಲೆ ಮಲಗಿದ್ದು ಮುಂದಿನ ಜಾಗವನ್ನು ಗಳಿಸಿದ್ದರು. ಇವರ ಏಜೆಂಟು ಒಬ್ಬನು ಅಲ್ಲಲ್ಲಿ ಸುಳಿದಾಡಿ ಮುಂದಿನ ಸ್ಥಳ ಸಂಪಾದಿಸಲು ಅತುರರಾಗಿರುವವರಿಂದ ಹತ್ತು ಹತ್ತು ರೂಪಾಯಿ ವಸೂಲು ಮಾಡಿ, ಆ ಭ0್ಯಾಗಳ ಸ್ಥಳಗಳನ್ನು ಕೊಡಿಸುತ್ತಿದ್ದನು. ಈ ಹಣಶಾಸನದ ಪರಿಣಾಮವಾಗಿ ಹುಟ್ಟಿದ ಅನೇಕ ಕಳ್ಳ ವ್ಯಾಪಾರಗಳಲ್ಲಿ ಇದೂ ಒಂದು'. ಹೆಂಗಸರ ಸಾಲು ಸಣ್ಣದಗಿದ್ದು ಹುಡುಗಿ ಕ್ಯೂನಲ್ಲಿ ನಿಲ್ಲುತ್ತಾಳೆ. ಅಧಿಕಾರಿ ಮತ್ತು ಅವಳ ಸಂಭಾಷಣೆ0ುನ್ನು ಲೇಖಕರು ಸ್ವಾರಸ್ಯಪೂರ್ವಕವಾಗಿ ದಾಖಲಿಸಿದ್ದಾರೆ. ಆ ಕೆಲವು ಸಾಲುಗಳನ್ನು ಓದಿದರೆ ಇಡೀ ವ್ಯವಸ್ಥೆ0ುು ಎಷ್ಟು ಹಾಸ್ಯಾಸ್ಪದವಾಗಿದೆ ಮತ್ತು ಅಸಂಗತವಾಗಿದೆ ಎಂಬುದು ನಮ್ಮ ಅರಿವಿಗೆ ಬರುತ್ತ ಹೋಗುತ್ತದೆ:
'ಸರಾಸರಿ ದಿನಕ್ಕೆ ಎಷ್ಟು ಸಂಪಾದನೆ ಆಗುತ್ತದೆ?'
'ಅದನ್ನು ಹೇಗೆ ಹೇಳುವುದು? ಅವೆಲ್ಲ ದಾತೃಗಳು ಇದ್ದ ಹಾಗೆ, ಬಂದ ಹಾಗೆ..ಹತ್ತರಿಂದ ಸಾವಿರಕ್ಕೂ ಮೀರಿ ಹಣ ಕೊಡುವವರಿರುತ್ತಾರೆ..'.
'ಓ, ಸರಿ..ಸರಿ'. ಅಧಿಕಾರಿ0ುು ಕೊಂಚ ಹೊತ್ತು ಸುಮ್ಮನಾದನು. ಅನಂತರ ಮತ್ತೆ 0ೋಚಿಸಿ ಕೇಳಿದನು.
'ಹಾಗಾದರೆ ನಿಮ್ಮ ಹತ್ತಿರ ಈಗ ನೀವು ತಂದಿರುವುದಕ್ಕೂ ಮೀರಿ ಹಣ ಕೂಡಿರಬೇಕಲ್ಲವೆ?'
'ನಮ್ಮ ಬಳಿಗೆ ಹಣ ಬರುವ ಹಾಗೇ ಕಚರ್ೂ ಆಗುತ್ತದೆ'.
'ಆದರೆ ಇದು?'
'ಇಷ್ಟು ಎಷ್ಟೋ ಬಾರಿ ಕೂಡಿ ಕಚರ್ಾಗಿದೆ. ಈಗ ಮಾತ್ರ ಇದನ್ನು ಬದಲಾಯಿಸಬೇಕಾಗಿದೆ'.
ಹೋ, ಹಾಗೋ'.
ಮತ್ತಷ್ಟು ಕಾಲ ಮೌನ. ಆಮೇಲೆ ಮತ್ತೊಂದು ಪ್ರಶ್ನೆ.
'ನೀವು ಈ ಆದಾ0ುಕ್ಕೆಲ್ಲ ಲೆಕ್ಕ..'.
'ನಾವೇನು ಹಣಕ್ಕೆ ರಸೀದಿ ಕೊಡುತ್ತೇವೋ? ಕೊಡಬೇಕೋ? ನಮಗೆಲ್ಲಿ ಲೆಕ್ಕಪಕ್ಕದ..'.
'ಹೂಂ.ಹೂಂ.ಸರಿ'.
ಅಸಹಾ0ುಕತೆ0ೋ, ದಾಕ್ಷಿಣ್ಯವೋ. 'ಶಿವಲ್ರಿ'0ೋ ಆ ಅಧಿಕಾರಿ0ುು ಹುಡುಗಿ ತನ್ನಲ್ಲಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಅನುಮತಿ ಕೊಡುತ್ತಾನೆ. ಹುಡುಗಿ0ುು ಸಂಭ್ರಮದಿಂದ ಸಾವಿರದ ನೋಟುಗಳನ್ನು ನೂರರ ನೋಟುಗಳಿಗೆ ಬದಲಾಯಿಸಿಕೊಳ್ಳುತ್ತಾಳೆ. ವಕೀಲರು ಪಿಲಾನಿ0ು ಕಡೆಗೆ ನೋಡಿ 'ಹೇಗಿದೆ ನನ್ನ ಬುದ್ಧಿ' ಎಂದು ಬೀಗುತ್ತಾರೆ. ಪಿಲಾನಿ0ುು ಆತುರವನ್ನು ತಡೆಹಿಡಿ0ುಲಾಗಿದೆ ಹುಡುಗಿ0ು ಕೈಯಿಂದ ತನ್ನ ಹಣವನ್ನು ತೆಗೆದುಕೊಳ್ಳಲು ಅವಳಲ್ಲಿಗೆ ಹಾರಿ ಕೈಚಾಚಿದರೆ, ಅವಳು ಗಂಭೀರಭಾವದಿಂದ ಕತ್ತನ್ನೆತ್ತಿ, 'ನೀವು 0ಾರು? ನನ್ನಿಂದ ಏನಾಗಬೇಕು?' ಎಂದು ಕೇಳಿಬಿಡುತ್ತಾಳೆ. ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಪಿಲಾನಿ ತಬ್ಬಿಬ್ಬಾಗುತ್ತಾನೆ. ಈ ಜಟಾಪಟಿಯಿಂದ ಜನ ಸೇರುತ್ತಾರೆ. ಪೋಲೀಸಿನವರ ಆಗಮನವೂ ಆಗುತ್ತದೆ. ಅವನು ಅವರ ಕೈವಶನಾಗುತ್ತಾನೆ. ಮ0ರ್ಾದೆಗೆ ಅಂಜಿ ಈ ನಾಟಕದಿಂದ ಹೊರಗೆ ಉಳಿದಿದ್ದ ವಕೀಲರು ಈಗ ಅಪಾ0ುವನ್ನು ಮನಗಂಡು ಮಧ್ಯಪ್ರವೇಶ ಮಾಡಲೇ ಬೇಕಾಗುತ್ತದೆ. ಅವರು ಪಿಲಾನಿ0ುನ್ನು ಪೋಲೀಸರಿಂದ ಬಿಡಿಸಲು ಪ್ರ0ುತ್ನಿಸುತ್ತಿದ್ದಾಗ ಹುಡುಗಿ0ುು ಟ್ಯಾಕ್ಸಿ ಹಿಡಿದು ರೈಲ್ವೇ ಸ್ಟೇಷನ್ನಿಗೆ ಹೋಗಿ ಮದರಾಸಿನ ಗಾಡಿ0ುನ್ನು ಹಿಡಿ0ುುತ್ತಾಳೆ. ತನ್ನ ದುಡ್ಡು ಕಳೆದುಕೊಂಡ ಪಿಲಾನಿ0ುು ಪೋಲೀಸರಿಗೆ ದಪ್ಪಲಂಚವನ್ನೂ ನೀಡಿ ಸುಸ್ತಾಗುತ್ತಾನೆ. ಹುಡುಗಿ0ುು ಕೈತಪ್ಪಿ ವೇಶ್ಯಾವಾಟಿಕೆ0ು 0ುಜಮಾನಿ ವಕೀಲರ ಮೇಲೆ ಸಿಟ್ಟಾಗುತ್ತಾಳೆ. ಪಿಲಾನಿ0ುೂ ಅವರನ್ನು ಬ0ು್ಯುತ್ತಾನೆ. ವಕೀಲರಿಗೂ ಸಿಟ್ಟು ಬಂದು 'ವ್ಯಾಪಾರದ ವ್ಯಭಿಚಾರದಲ್ಲಿ ಸಂಪಾದಿಸಿದುದು ವ್ಯಭಿಚಾರಿಣಿಗೆ ಸೇರಿತು ಅಷ್ಟೆ' ಎಂದು ತಿರಸ್ಕಾರದಿಂದ ಹೇಳುತ್ತಾರೆ. ಪಿಲಾನಿ0ುೂ ತಿರುಗಿ ಬೀಳುತ್ತಾನೆ. 'ನಿಮ್ಮದೇನು ಹೆಚ್ಚು? ಅದೂ ಬುದ್ಧಿ0ು ವ್ಯಭಿಚಾರವೆ. ಅದಕ್ಕೇ ನಿಮಗೂ ಸೊನ್ನೆ ಬಿತ್ತು' ಎಂದು ಹೇಳಿ ಸೇಡು ತೀರಿಸಿಕೊಳ್ಳುತ್ತಾನೆ. ವೇಶ್ಯಾವಾಟಿಕೆ0ು 0ುಜಮಾನಿ0ುೂ ಈ ಪ್ರಸಂಗದಲ್ಲಿ ಬೇಸ್ತು ಬೀಳುತ್ತಾಳೆ. 'ಸಾಕು ನಿಮ್ಮ ಸಹವಾಸ, ಸದ್ಯ ಈಗಲೇ ಹೊರಟುಹೋಗಿ'ಎಂದು ವಕೀಲ, ವ್ಯಾಪಾರಿ ಇಬ್ಬರಿಗೂ ಗದರಿಸುತ್ತಾಳೆ. ಹೀಗೆ ಒಂದು ವ್ಯವಸ್ಥೆ0ುು ಎಲ್ಲ ಸ್ತರಗಳಲ್ಲಿ ಭ್ರಷ್ಟಗೊಂಡಿರುವ ಬಗೆ0ುನ್ನು ಅಶ್ವತ್ಥರ ಕತೆ0ುು ತುಸು ಲಘು ಎನ್ನಬಹುದಾದ ಧಾಟಿ0ುಲ್ಲಿ ನಿರೂಪಿಸುತ್ತದೆ; 'ವ್ಯಭಿಚಾರ'ದ ಹಲವು ಮುಖ-ಮಾದರಿಗಳನ್ನು ಏಕಕಾಲದಲ್ಲಿ ಅನಾವರಣಗೊಳಿಸಿ ನಾವು ಬದುಕುತ್ತಿರುವ ಸಮಾಜವನ್ನು ವಿಡಂಬಿಸುತ್ತದೆ.
*******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
No comments:
Post a Comment