stat Counter



Friday, May 3, 2013

ನಿರಂಜನ ಅವರ ಕೊನೆ0ು ಗಿರಾಕಿ


                 ನಿರಂಜನ ಅವರ ಕೊನೆ0ು ಗಿರಾಕಿ

ನಿರಂಜನ ಎಂಬ ಕಾವ್ಯನಾಮದಲ್ಲಿ ಬರೆ0ುುತ್ತಿದ್ದ ಕುಳಕುಂದ ಶಿವರಾ0ುರು(1924-1991) ತಮ್ಮ ಚಿರಸ್ಮರಣೆ, ಮೃತ್ಯುಂಜ0ು,ವಿಮೋಚನೆ, ಬನಶಂಕರಿ, ರಂಗಮ್ಮನ ವಠಾರ ಮುಂತಾದ ಕಾದಂಬರಿಗಳಿಂದಲೂ ಸಣ್ಣಕತೆಗಳಿಂದಲೂ ಪ್ರಸಿದ್ಧರಾಗಿದ್ದಾರೆ. ಮ್ಯಾಕ್ಸಿಂ ಗಾಕರ್ಿ0ು ತಾಯಿ ಕಾದಂಬರಿ0ುನ್ನು ಇವರು ಕನ್ನಡಕ್ಕೆ ತಂದಿದ್ದಾರೆ. ವಿಶ್ವಕಥಾಕೋಶ ಎಂಬ ಇಪ್ಪತ್ತೈದು ಸಂಪುಟಗಳ ಸರಣಿ0ು ಪ್ರಧಾನ ಸಂಪಾದಕರಾಗಿ ನಿರಂಜನರು ದೇಶವಿದೇಶಗಳ ನೂರಾರು ಪ್ರಸಿದ್ಧ ಕತೆಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.  ಹಾಗೆ0ೆು ಇವರು ಸಂಪಾದಿಸಿರುವ ಕಿರಿ0ುರ ವಿಶ್ವಕೋಶ ಜ್ಞಾನಗಂಗೋತ್ರಿ0ು ಏಳು ಸಂಪುಟಗಳು ಕನ್ನಡಕ್ಕೆ ಮೌಲಿಕ ಕೊಡುಗೆಗಳಾಗಿವೆ. ಪ್ರಗತಿಶೀಲ ಚಳುವಳಿ0ುಲ್ಲಿ ಇವರದು ತುಂಬ ಮುಖ್ಯವಾದ ಹೆಸರು.
         ಕೊನೆ0ು ಗಿರಾಕಿ ನಿರಂಜನರ ಅತ್ಯಂತ ಪ್ರಸಿದ್ಧ ಕತೆಗಳಲ್ಲಿ ಒಂದು. ಕನ್ನಡದ ಎಲ್ಲ ಮುಖ್ಯ ಆಂಥಾಲಜಿಗಳಲ್ಲಿ ಈ ಕತೆ  ಸೇರಿದೆ. ಸಮಾಜದ ವಿಕೃತಿ ಮತ್ತು ವ್ಯಕ್ತಿ0ು ಅಸಹಾ0ುಕತೆಗಳು ಮುಟ್ಟಬಹುದಾದ ಆಳಗಳನ್ನು ಈ ಕತೆ ನಿರೂಪಿಸುತ್ತದೆ. ಈ ಕತೆ0ು ಮುಖ್ಯ ಪಾತ್ರದ ಹೆಸರು 'ಕಾಣಿ'. ಈ ಹೆಸರು ಎಷ್ಟು ಧ್ವನಿಪೂರ್ಣವಾಗಿದೆ ಎಂದರೆ   ಲೇಖಕರು ಓದುಗರಿಗೆ ಇವಳನ್ನು ಕಾಣಿ, ನೋಡಿ, ಗಮನಿಸಿ ಎಂದು  ಒತ್ತಾಯಿಸುತ್ತಿರುವಂತಿದೆ. ಈ ವಿವರ ರಾಚನಿಕವಾಗಿ0ುೂ ಮುಖ್ಯ. 0ಾಕೆಂದರೆ ನಾವು ಕಾಣಿ0ು ಬವಣೆ0ುನ್ನು ಸ್ವತಃ ಅವಳ ಬಾ0ುಲ್ಲಿ ಕೇಳಲಾರೆವು. ಅವಳು ಮೂಕಿ. ಅವಳ ಸಾಮಾಜಿಕ ಸ್ಥಿತಿ0ೊಂದಿಗೆ ಈ ಜೈವಿಕ ಅವಸ್ಥೆ0ುೂ ಸೇರಿಕೊಂಡು ಅವಳ ದುರಂತ ಇಮ್ಮಡಿ0ಾಗಿದೆ. ಅಂದರೆ ಬಡತನದ ಸಂಕಟಗಳನ್ನೂ ಮೀರಿದ ಮತ್ತೊಂದು ದುರವಸ್ಥೆಗೆ ಕಾಣಿ ಬಲಿ0ಾಗಿದ್ದಾಳೆ. ಈ ದುರವಸ್ಥೆ ಸಾಮಾಜಿಕ ಆ0ಾಮಗಳ ಆಚೆಗೂ ಇರುವಂಥದ್ದು. 'ವಿಧಿ0ು ದುರ್ಲಕ್ಷ್ಯ'ಕ್ಕೆ ಒಳಗಾಗಿರುವ ಕಾಣಿ 'ಜನರ ನಿರ್ಲಕ್ಷ್ಯ'ಕ್ಕೂ ಒಳಗಾಗಿ ಅನುಭವಿಸುವ 0ಾತನೆ0ುನ್ನು ಕೊನೆ0ು ಗಿರಾಕಿ ಮನೋಜ್ಞವಾಗಿ ಕಾಣಿಸಿದೆ. ಸಾಮಾಜಿಕ ದುರಂತವಾಗಿ0ುೂ ಅಸ್ತಿತ್ವವಾದೀ ದುರಂತವಾಗಿ0ುೂ ಏಕಕಾಲದಲ್ಲಿ ನಮ್ಮನ್ನು ತಟ್ಟುವ ಈ ಕತೆ ಕನ್ನಡ ಪ್ರಗತಿಶೀಲ ಕತೆಗಳಲ್ಲೇ ಅತ್ಯಂತ ಹೃದ0ುಸ್ಪಶರ್ಿ0ಾದದ್ದು. ಅವಳ ಅಸಹಾ0ುಕತೆ0ುನ್ನು ತಮ್ಮ ಸುಖಕ್ಕೆ ಬಳಸಿಕೊಳ್ಳುವ ಮನುಷ್ಯರೂ ಇದೇ  ಸಮಾಜಕ್ಕೆ ಸೇರಿದವರಾದುದರಿಂದ ಸಾಮಾಜಿಕ ವ್ಯವಸ್ಥೆಗಳು ಸೃಷ್ಟಿಸಿರುವ ಇಕ್ಕಟ್ಟುಗಳೊಂದಿಗೆ ವೈ0ುಕ್ತಿಕ ಅಮಾನವೀ0ು ನಡಾವಳಿಗಳೂ ಸೇರಿ ಕಾಣಿ0ು ದುರಂತ ಒಂದು 'ಅಪರಿಹಾ0ರ್ು' ಘಟ್ಟವನ್ನು ತಲುಪಿ ಸೂಕ್ಷ್ಮ ಮನಸ್ಸಿನ ಓದುಗರನ್ನು ನಡುಗಿಸಿ ಬಿಡುತ್ತದೆ.
        ಕಾಣಿ0ು ತಂದೆ-ತಾಯಿ0ುರಿಗೆ ಒಂದಷ್ಟು ಹೊಲ, ಗುಡಿಸಲು ಇದ್ದವು. ಆದರೆ ಜಮೀಂದಾರ ಗೇಣಿ ಹೆಚ್ಚಿಸಿ ಅವೆಲ್ಲವೂ ಹೋದವು. ಮಡಿಕೆ ಕುಡಿಕೆಗಳೊಂದಿಗೆ ಇಡೀ ಸಂಸಾರ ಗುಳೆ ಹೊರಟಿತು. ಮೂಕಿ ಮಗಳನ್ನು ಕಟ್ಟಿಕೊಂಡು ಊರೂರು ಸುತ್ತಿದರೂ ಎಲ್ಲಿ0ುೂ ಕೆಲಸ ಸಿಗಲಿಲ್ಲ. ಹಾಗಾಗಿ ಅನಿವಾ0ರ್ುವಾಗಿ ಭಿಕ್ಷುಕರಾಗಬೇಕಾಯಿತು. ಮೊಂಡು ಕೈ0ು 0ುುವ ಭಿಕ್ಷುಕನೊಬ್ಬ ಕಾಣಿ0ುನ್ನು ಬಳಸಿ ಅವಳಿಗೆ ಒಂದು ಆಧಾರವಾಗಿದ್ದ. ಅವರಿಬ್ಬರೂ ಮಹಾನಗರಕ್ಕೆ ಓಡಿ ಬಂದು ಹತ್ತು ದಿನ ಜೊತೆ0ಾಗಿರುತ್ತಾರೆ. ಹನ್ನೊಂದನೆ0ು ದಿನದ ಬೆಳಿಗ್ಗೆಯಿಂದ ಅವಳ ಪ್ರೇಮಿ ನಾಪತ್ತೆ. '0ಾವ ಗಾಡಿ ಹತ್ತಿ 0ಾವ ಊರಿಗೆ ಟಿಕೆಟಿಲ್ಲದ ಪ್ರವಾಸವನ್ನು ಕೈಗೊಂಡಿದ್ದನೋ ಆ ಮಹಾರಾ0ು!'. ಈಗ ಕಾಣಿ ನಿರಾಧಾರಳು ಮಾತ್ರವಲ್ಲ ನಿರ್ಗತಿಕಳೂ ಆಗಿದ್ದಾಳೆ. ಆಕೆ ರೂಪವತಿ0ುಲ್ಲ. ತೆಳ್ಳನೆ0ು ಜೀವ. ಆದರೆ ವ0ುಸ್ಸಿಗೆ ಮೀರಿ ಮೈ ತುಂಬಿತ್ತು. ಬರಿ0ು ದೇಹಮಾಂಸಕ್ಕಾಗಿ ಹಂಬಲಿಸುವವರಿಗೆ ಆಕೆ ಮನದಣಿ0ುುವ ಊಟವಾಗಿದ್ದಳು. 0ಾವನೋ ಒಬ್ಬ ಅವಳನ್ನು ಹಿಂಬಾಲಿಸುತ್ತಾನೆ. ತಿಂಡಿ0ು ಪೊಟ್ಟಣವನ್ನು ಅವಳಿಗೆ ನೀಡುತ್ತಾನೆ. ಅವಳ ಗಬಗಬ ತಿನ್ನುತ್ತಾಳೆ.  ಮೂಕಿ0ಾದ ಕಾಣಿ0ೊಂದಿಗೆ ಏಕಮುಖ ಸಂಭಾಷಣೆ0ುನ್ನು ನಡೆಸುತ್ತಾನೆ. 'ಅ ಆ', 'ಕಕಾಕ' ಎಂದು ಅವಳೇನೋ ಉತ್ತರಿಸುತ್ತಾಳೆ. ತನ್ನ ಸ್ಥಿ0ುನ್ನು ಅವನಿಗೆ ವಣರ್ಿಸುತ್ತಾಳೆ. ಅಳುತ್ತಾಳೆ. ಅವನು 'ಚು ಚು ಚ್' ಎಂದು ಸಂತಾಪ ತೋರಿಸಿ, 'ಬಾ' ಎಂದು ಕೈಸನ್ನೆ ಮಾಡಿದರೆ, 'ಆಕೆ ತಲೆ ಬಾಗಿಸಿಕೊಂಡು ಆತನನ್ನೆ ಹಿಂಬಾಲಿಸಿದಳು-ನಾಯಿ ವಿನಮ್ರವಾಗಿ ಹಿಂದಿನಿಂದ ಹೋಗುವಂತೆ ಸಾಗಿದಳು..'.
        ಹೀಗೆ ಕಾಣಿ ವೇಶ್ಯೆ0ಾಗುತ್ತಾಳೆ. ರೈತಾಪಿ ಕುಟುಂಬವೊಂದು ಭಿಕ್ಷುಕರಾದ, ವೇಶ್ಯಾವೃತ್ತಿಗೂ ಇಳಿದ ಪ್ರಕರಣವೇ ನಾಗರಿಕ ಸಮಾಜವೊಂದು ತಲೆತಗ್ಗಿಸಬೇಕಾದ ದುರ್ಭರ ವಿಷ0ು. ಆದರೆ ಇದು ಕಾಣಿ0ು ದುರಂತದ ಪ್ರಾರಂಭವಷ್ಟೇ ಎಂದು ಹೇಳಿದರೆ ಅವಳ ಬದುಕು ಮುಂದೆ ಮುಟ್ಟುವ ಮಟ್ಟದ ಕಲ್ಪನೆ ಬಂದೀತು. ನಾಲ್ಕು ದಿನ ಅವಳೊಡನೆ ಕಳೆದ ಆ ಅಪರಿಚಿತನು ಒಂದು ಬೆಳಿಗ್ಗೆ ತಾನು ಹೊಸಬರನ್ನು ಕರೆದು ತರುವುದಾಗಿ0ುೂ, ಅವಳು ಸುಮ್ಮನಿರಬೇಕೆಂದೂ, ಮೂಕಿ0ೆುಂದು ತೋರಿಸಿಕೊಳ್ಳಬಾರದೆಂದೂ ಅರ್ಧ ಮಾತಿನಿಂದ ಅರ್ಧ ಕೈಸನ್ನೆಯಿಂದ ತಿಳಿಸುತ್ತಾನೆ. 'ಆಕೆ ಕುಂ0್ ಕುಂ0್ ಎನ್ನುತ್ತಿದ್ದಳು. ತನ್ನನ್ನು ಮೂಕಿ ಎಂದು ಸಂಬೋಧಿಸಿದ ಆತ ಹಾವ ಭಾವ ಮಾಡಿದಾಗ ಆಕೆಗೆ ತುಂಬ ಸಿಟ್ಟು ಬರುತ್ತಿತ್ತು. ಆದರೆ ಕುಂ0್ ಕುಂ0್ ಶಬ್ದದಲ್ಲೇ ಆ ಸಿಟ್ಟು ಮುಕ್ತಾ0ುವಾಗುತ್ತಿತ್ತು. ಕಾಣಿ0ು ದೇಹವನ್ನು ಬಳಸಿಕೊಂಡು ಅವನೀಗ ಓರ್ವ ಉದ್ಯೋಗಿ. ಬಂದ ಹಣದ ಲೆಕ್ಕ ಕಾಣಿಗೆ ಗೊತ್ತಾಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟ ಸಿಗುತ್ತಿತ್ತು. ಒಂದಷ್ಟು ಬಟ್ಟೆಗಳೂ ಸಿಕ್ಕಿದ್ದವು. ಅವಳಿಗೆ ಗೊತ್ತಾಗುತ್ತಿದ್ದುದು ಪಶುಸದೃಶ ಗಿರಾಕಿಗಳ ವಿಕಾರ-ವಿಕೃತಿಗಳು ಮತ್ತು ಅವರು ನೀಡುತ್ತಿದ್ದ ಹಿಂಸೆ. ಅವಳ ತಲೆಹಿಡುಕನಿಗೆ ಕಾಣುತ್ತಿದ್ದುದು ಗಿರಾಕಿಗಳ ಜೇಬು ಮಾತ್ರ. ಒಂದು ದಿನವಂತೂ ಅವಳ ಮೇಲೆ ದೈಹಿಕ ಹಲ್ಲೆ0ುೂ ನಡೆ0ುುತ್ತದೆ. 'ವೆವೆವೆವೆ' ಎಂದು ಪ್ರತಿಭಟಿಸಿದರೆ ಮತ್ತಷ್ಟು ಏಟು ಬೀಳುತ್ತದೆ. 'ಆದರೆ ಆ ಅಲ್ಪಮಾನವನಿಗೆ ಅದರ ಅರ್ಥವಾಗಲಿಲ್ಲ'. ಒಂದು ದಿನ ಆಕೆಗೆ ತುಂಬ ಎದೆನೋವಾಗುತ್ತದೆ: ಹೊರಳಾಡಿದಳು, ವಿಲಿವಿಲಿ ಒದ್ದಾಡಿದಳು. ತನ್ನ ಹಳ್ಳಿ0ು, ತಾನು ಹುಟ್ಟಿದ ಗುಡಿಸಿಲಿನ ತನ್ನ ಭಾಷೆ0ಾಡುವ ಜನರ, ಮೊಂಡು ಕೈ0ು ತನ್ನ ಮೊದಲ  ಜತೆಗಾರನ ನೆನಪಾಯಿತು. ಓಹೋ ಓ ಓ ಎಂದೆಲ್ಲ ಸ್ವರವೆತ್ತಿದಳು. ಎರಡು ದಿನವೂ ರಾತ್ರೆ0ುೂ ಹೀಗೆ ಆಯಿತು. ಗಿರಾಕಿಗಳು ಬರುವುದಾಗಲೇ ಇಲ್ಲ. ಮೂರನೆ0ು ಬೆಳಗು ಅಲ್ಲಿದ್ದ ತಿಂಡಿ0ುನ್ನೆಲ್ಲ, ಬಟ್ಟೆಬರೆ0ುನ್ನೆಲ್ಲ ಕಟ್ಟಿಕೊಂಡು ಆಕೆ ಓಡಿಹೋದಳು. ನಗರದ ಇನ್ನೊಂದು ಅಂಚನ್ನು ತಲುಪಿ ಅದನ್ನೂ ದಾಟಿದಳು.
        ಈಗ ಅವಳಿಗೆ ತಲೆಹಿಡುಕನ ಅವಶ್ಯಕತೆಯಿಲ್ಲ. ಗಿರಾಕಿಗಳು ತನ್ನಿಂದ ಏನು ಬ0ುಸುತ್ತಾರೆ ಎಂಬುದು ಅವಳಿಗೆ ಈಗ ಚೆನ್ನಾಗಿ ಗೊತ್ತಾಗಿದೆ. ಅಷ್ಟೇ ಅಲ್ಲ. 'ಕಾಗದದ ಚೂರನ್ನು ಕೊಟ್ಟರೆ ತಿಂಡಿ0ುೂ  ಬರುವುದು, ಊಟವೂ ಬರುವುದು, ಚಿಲ್ಲರೆ ಕಾಸೂ ವಾಪಸು ಬರುವುದು, ಎಂದು ಕಾಣಿ ಕಲಿತಳು. ಎಷ್ಟು ವಾಪಸು ಬರುತ್ತಿತ್ತೊ ಏನು ಕತೆ0ೋ-ಅಷ್ಟೆಲ್ಲ ಜ್ಞಾನವಿರಲಿಲ್ಲ ಆಕೆಗೆ. ಅಂದಿನಿಂದ ಹಗಲು ಅಲೆದಾಟ. ಸಂಜೆ ಸರ್ಕಲಿನಲ್ಲಿ  ಒಂದೋ ಎರಡೋ  ಪರಿಚ0ು; ಸಮೀಪದ ಹುಲ್ಲುಗಾವಲಿನ ಹಾಸಿಗೆ0ುಲ್ಲಿ ಆಕೆ0ೆು ಒಂದು ಸಾರಿ0ೋ ಎರಡು ಸಾರಿ0ೋ ಸಾ0ುುವುದು-ಸತ್ತು ಜೀವಿಸುವುದು. ಜೀವಿಸಿ ಮತ್ತೆ ಮಾರನೆ0ು ದಿನ ರಾತ್ರಿ ಸಾ0ುುವುದು'. ತನ್ನ ಬಳಿ ಬರುತ್ತಿದ್ದವರು 0ಾರು? ಅವರೆಂಥ ಜನ? ತನ್ನ ಬಳಿ ಅವರು 0ಾಕೆ ಬರುತ್ತಾರೆ? ಎಂಬುದು ಅವಳಿಗೆ ಅರ್ಥವಾಗುತ್ತಿರಲಿಲ್ಲ. 0ಾರೊಡನೆ0ುೂ ಸಂಭಾಷಣೆ ಸಾಧ್ಯವಿರದಿದ್ದುದರಿಂದ ಅವರ ದೇಹಸ್ಪರ್ಶ ಮಾತ್ರ ಅವಳಿಗೆ ಗೊತ್ತಾಗುವುದು. ಅವರಿಗೂ ಆಕೆ0ು ದೇಹ ಮಾತ್ರ ಸಿಗುವುದು. ಒಂದಷ್ಟು ಹೊತ್ತು ಅದು ಅವಳದಲ್ಲ. ಅದು ಗಿರಾಕಿಗೆ ಬಿಕರಿ0ಾಗಿರುವ ಒಂದು ವಸ್ತು. ಅದರ ಪ್ರತಿಫಲಕ್ಕೆ ಮಾತ್ರ ಅವಳು ಬಾಧ್ಯಸ್ಥಳು. 'ಇದು ಮಾನವೀ0ುವೆ? ಪಾಶವಿಕವೆ? ಎಂಬುದೂ ಆಕೆಗೆ ತಿಳಿ0ುದು. ಪ್ರೇಮ-ಕಾಮಗಳ ವಿಚಾರವನ್ನು ಬಲ್ಲವಳಲ್ಲ ಆಕೆ. ಎಳೆ ಮೀಸೆ0ುವರಿರಲಿ-ಮುದುಕರಿರಲಿ, ಆಕೆಗೆರಡೂ ಸಮವೇ. ದೇಹ ಬಳಲಿದಾಗ ಅವಳು ನರಳುವಳು. ನೋವಾದಾಗ ಗಂಟಲಿನಿಂದ ಅರ್ಥವಾಗದ ವಿಕೃತ ಸ್ವರ ಹೊರಡಿಸುವಳು. ತಾನು ಮೂಕಿ. ಮೂಕಿಯಿಂದ ತೃಪ್ತಿ ಬ0ುಸುವವರ ಮನಸ್ಸಿನಲ್ಲಿ ಏನೇನು ಅನುಭವಗಳಾಗುತ್ತವೆಂಬುದೂ ಗೊತ್ತಿಲ್ಲ ಕಾಣಿಗೆ. ನಡೆ0ುುವುದೆಲ್ಲ 0ಾಂತ್ರಿಕ ವ್ಯವಹಾರ. ಆಕೆ0ೊಂದು ಉಸಿರಾಡುವ 0ುಂತ್ರ..'.
     ಮಳೆಗಾಲ ಬಂದಾಗ ಸಂಪಾದನೆಗೆ ತೊಂದರೆ0ಾಗುತ್ತದೆ. ಮತ್ತಷ್ಟು ಬಡಕಲಾಗುತ್ತಳೆ. ಕೆನ್ನೆಗಳು ಗುಳಿಬೀಳುತ್ತವೆ. ಕಣ್ಣು ಕೆಳಕ್ಕಿಳಿ0ುುತ್ತದೆ. ಜ್ವರ ಬರತೊಡಗುತ್ತದೆ. ಮತ್ತಷ್ಟು ಸಿಂಗಾರ ಮಾಡಿಕೊಳ್ಳುತ್ತಾಳೆ. 'ಆಕೆ ದೂರದಲ್ಲಿ ಬಳುಕುತ್ತ ನಡೆ0ುುತ್ತಿದ್ದರೆ, ಉಣ್ಣೆ ಕೋಟನ್ನು ಧರಿಸಿದ್ದರೆ, ತಲೆಗೆ ಹೂ ಮುಡಿದಿದ್ದರೆ ಸುಮಾರಾಗಿ ಕಾಣಿಸುತ್ತಿದ್ದಳು. ಆದರೆ ಹತ್ತಿರದಲ್ಲಿ ಮುಖವಿಟ್ಟು ನೋಡಿದರೆ, ಎರಡು ಕಣ್ಣುಗಳಲ್ಲಿ ಎರಡು ದೆವ್ವಗಳು  ನತರ್ಿಸುತ್ತಿದ್ದಂತೆ ತೋರುತ್ತಿತ್ತು'.ರಾತ್ರೆ ಹೊತ್ತು ಕೆಲವು ಪುಂಡರು ಬಂದು ಬಲಾತ್ಕರಿಸುತ್ತಿದ್ದರು. ಆದರೆ ಕಾಸು ಬಿಚ್ಚುತ್ತಿರಲಿಲ್ಲ. ಆಕೆ ಜಗಳವಾಡುತ್ತಿದ್ದಳು. ಆದರೂ ಪೀಡಿಸಿ ಅಟ್ಟಹಾಸಗೈ0ುುತ್ತಿದ್ದರು. 'ಕಾಣಿ ಪ್ರತಿಭಟನೆ ವಿಫಲವಾದಾಗ ತೇಕುತ್ತ ತೇಕುತ್ತ ಆದದ್ದಾಗಲೆಂದು ತಲೆಬಾಗುತ್ತಿದ್ದಳು. ಕ್ರಮೇಣ ಅವಳು ಚರ್ಮರೋಗಕ್ಕೂ ಬಲಿ0ಾಗುತ್ತಾಳೆ. ಮೈಯಿಂದ ಕೆಟ್ಟವಾಸನೆ ಬರತೊಡಗುತ್ತದೆ. ತಾಣವನ್ನು ಬದಲಿಸುತ್ತಾಳೆ. ಭಿಕ್ಷುಕನೊಬ್ಬ ವಾಸಿಸುತ್ತಿದ್ದ ಮುರುಕು ಮನೆ0ೊಂದರಲ್ಲಿ ತಂಗುತ್ತಾಳೆ. ಭಿಕ್ಷುಕ ಮೂರು ದಿನ ಅವಳಿಗಷ್ಟು ಗಂಜಿ ನೀಡುತ್ತಾನೆ. ಆದರೆ ರೋಗಪೀಡಿತವಾಗಿದ್ದ ತನ್ನ ದೇಹಕ್ಕೆ ಅವಳ ದೇಹದಿಂದ ಸುಖವನ್ನು ಕೊಡಿಸುತ್ತಾನೆ. ನಾಲ್ಕನೆ0ು ಸಂಜೆ ತನ್ನ ಮಾಮೂಲೀ ಜಾಗಕ್ಕೆ ದೇಹವನ್ನು ಎಳೆದುಕೊಂಡು ಬರುತ್ತಾಳೆ. ಮಧ್ಯರಾತ್ರಿ0ು ವೇಳೆಗೆ ಪೋಲಿ ಧಾಂಡಿಗನೊಬ್ಬ ಅವಳ ಬಳಿ ಬರುತ್ತಾನೆ. ಅಲ್ಲೇ ಪೊದರಿನಾಚೆ ಅವಳನ್ನು ಕೆಡವುತ್ತಾನೆ. ಕಾಣಿ 'ಗೊರಕ್' ಎನ್ನುತ್ತಾಳೆ. ಸಿಡಿಮಿಡಿಗೊಂಡು ಎದ್ದುನಿಂತು ಮೈ ಕೊಡವಿಕೊಳ್ಳುತ್ತಾನೆ. ಬೇಗಬೇಗ ಹೆಜ್ಜೆ ಹಾಕುತ್ತಾನೆ.  ಕಾಸಿಲ್ಲದೆ, ಕೂಳಿಲ್ಲದೆ ಕಂಗಾಲಾಗಿದ್ದ ಕಾಣಿ 'ಹೆತ್ತ ಎಳೆಗೂಸನ್ನು ಕಸಿದೊ0ು್ಯುವ ಪಾಪಿ0ುನ್ನು ಬೆನ್ನಟ್ಟುವಂತೆ' ಅವನ ಹಿಂದೆ ಓಡುತ್ತಾಳೆ. 'ಈತ ದುಡ್ಡುಕೊಡದೆ ಓಡುತ್ತಿದ್ದಾನೆ. ಆಕೆ ತನ್ನ ಭಾಷೆ0ುಲ್ಲಿ ನ್ಯಾ0ು ಮೀರಿ ವತರ್ಿಸಬೇಡವೆಂದು ಕೇಳುತ್ತಿದ್ದಾಳೆ'. ಆ ಧಾಂಡಿಗ ಥಟ್ಟಕ್ಕನೆ ತಿರುಗಿ ಆಕೆ0ು ಗಂಟಲು ಹಿಸುಕುತ್ತಾನೆ; ಬೂಟುಗಾಲಿನಿಂದ ಒದೆ0ುುತ್ತಾನೆ. ಕಾಣಿ ಹೆಣವಾಗಿ ಬೀಳುತ್ತಾಳೆ.
    ಸಾಮಾನ್ಯ ವಾಸ್ತವವಾದೀ ಕತೆ0ೊಂದು ಇಲ್ಲಿಗೇ ಮುಕ್ತಾ0ುಗೊಳ್ಳುತ್ತಿತ್ತೇನೋ. ಆದರೆ ನಿರಂಜನರ ಕಥನ ಪ್ರತಿಭೆ ಕತೆ0ುನ್ನು ಇಲ್ಲಿಗೆ ಅಂತ್ಯಗೊಳಿಸುವುದಿಲ್ಲ. ಕತೆ ಮುಗಿ0ುುವುದು ಹೀಗೆ:
ಬೆಳಗಾಯಿತು.
..ಸೂ0ರ್ು ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು ಹಾದು ಹೋಗಲೇ ಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣು ಹೊರಳಿಸಿ, ಮತ್ತೆ ತಲೆ ಕೆಳಗೆ ಮಡಿ, ಸರಸರನೆ ನಡೆದುಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು. ನಿಲ್ಲುವವರು 0ಾರೂ ಇರಲಿಲ್ಲ..ಪೌರಸಭೆ0ು ವ್ಯಾನು ಬಂದು ಕಳೇಬರವನ್ನು ಒ0ು್ಯುವುದೆಂದು 0ಾರೋ ಹೇಳುತ್ತಿದ್ದರು.
ಕಾಣಿ0ು ದೇಹದ ಮೇಲೆ ಎತ್ತರದಲ್ಲಿ ಗಿಡುಗವೊಂದು ಸುತ್ತು ಸುತ್ತು ಬರುತ್ತಿತ್ತು.
ಅದನ್ನೇ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು.
ಸುತ್ತು ಬರುತ್ತಲೇ ಇತ್ತು ಗಿಡುಗ, ಕೆಳಗೆ ನೋಡುತ್ತ.
__ಕೊನೆ0ು ಗಿರಾಕಿ.
ಹೀಗೆ ಕತೆ ವಾಸ್ತವಿಕ ಪಾತಳಿಯಿಂದ  ಮತ್ತೊಂದು ಸ್ತರಕ್ಕೆ ಜಿಗಿದುಬಿಡುತ್ತದೆ. ಈ ಜಿಗಿತವು ಓದುಗರಲ್ಲಿ0ುೂ ಜಿಜ್ಞಾಸೆ0ೊಂದನ್ನು ಹುಟ್ಟುಹಾಕುತ್ತದೆ:  ಗಿಡುಗ ಕಾಣಿ0ುನ್ನು ಬಲಾತ್ಕರಿಸುತ್ತದೆ0ೊ? ಅವಳಿಗೆ ಬಿಡುಗಡೆ ನೀಡುತ್ತದೆ0ೊ?
                                 ****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228


No comments:

Post a Comment