stat Counter



Thursday, May 16, 2013

ಗೋಪೀನಾಥ ರಾವ್ - ಪಾಂ ಪಾಂ ರೈಲು (ಕಥಾ ಸಂಕಲನ



ಗೋಪೀನಾಥ ರಾವ್ - ಪಾಂ ಪಾಂ ರೈಲು (ಕಥಾ ಸಂಕಲನ)

ಮುನ್ನುಡಿ

- ಮುರಳೀಧರ ಉಪಾಧ್ಯ ಹಿರಿಯಡಕ

- 1 - 
ಶ್ರೀ ಗೋಪೀನಾಥ ರಾವ್ ಅವರ ತಂದೆ ಮಟ್ಟಿ ಸುಬ್ಬರಾವ್ ತಾಳಮದ್ದಲೆ ಕಲಾವಿದರಾಗಿ ಪ್ರಸಿದ್ಧರಾಗಿದ್ದರು.  ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಪದವೀಧರರಾದ ಗೋಪೀನಾಥ ರಾವ್ ಸಿ.ಎ. ಮುಗಿಸಿದ ಮೇಲೆ ದುಬೈನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.  ಅನಿವಾಸಿ ಕನ್ನಡಿಗ ಗೋಪೀನಾಥರಾಯರು ನನ್ನ ಅಂತಜರ್ಾಲದ ಗೆಳೆಯರಲ್ಲೊಬ್ಬರು.  ನಾನು-ಅವರು ಇದುವೆರೆ ಭೇಟಿಯಾಗಿಲ್ಲವಾದರೂ ದೂರವಾಣಿ ನಮ್ಮನ್ನು ಹತ್ತಿರ ತಂದಿದೆ.  ಗೋಪೀನಾಥರಾಯರಿಗೆ ಕತೆ ಬರೆಯಲು ಕಂಪ್ಯೂಟರ್ ಒಂದು ಪ್ರೇರಣೆ ಎಂಬುದು ನನಗೆ ಸಂತೋಷದ ಸಂಗತಿ.  ಉಜಿರೆಯಲ್ಲಿರುವ ಹಿರಿಯ ಲೇಖಕ ಕೆ.ಟಿ. ಗಟ್ಟಿಯವರ ಮನೆಗೆ ಹೋದಾಗ ಅವರು ಕಂಪ್ಯೂಟರ್ನಲ್ಲಿ ತನ್ನ ಕತೆ, ಕಾದಂಬರಿಗಳನ್ನು ಬರೆಯುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು, ಖುಷಿಯಾಯಿತು.

- 2 -
ಸಣ್ಣಕತೆ ಪ್ರಕಾರವನ್ನು ಕುರಿತು ಕತೆಗಾರ ಗೋಪೀನಾಥರಾಯರ ನಿಲುವು ಹೀಗಿದೆ - ಸಣ್ಣ ಕತೆ ಬರವಣಿಗೆಯಲ್ಲಿ ಕೆಲವು ಸರಳ ಸೂತ್ರಗಳಿಗೆ ಮೊದಲಿನಿಂದಲೂ ಅಂಟಿಕೊಂಡವ ನಾನು.  ಸಣ್ಣ ಕತೆಗಳಲ್ಲಿ ಕತೆ ಮುಖ್ಯ.  ಪಾತ್ರಗಳು ಅಥವಾ ಕತೆಗಾರ ವಸ್ತುವನ್ನು ಕತೆಯನ್ನಾಗಿಸಿ ಪ್ರಸ್ತುತಪಡಿಸುವ ಸಹಾಯಕರು ಮಾತ್ರ.  ಬರೆದ ಕತೆಯೂ, ಬಾಯಲ್ಲಿ ಕತೆ ಹೇಳುತ್ತಾ ಹೋಗುವ ಹಾಗೆ ಸರಾಗವಾಗಿ ಹಾಗೂ ಸುಲಲಿತವಾಗಿ ಓದಿಸಿಕೊಂಡು ಹೋಗಬೇಕು.  ಇವು ಮೂರು ನನ್ನ ದಿಕ್ಸೂಚಿ ಸೂತ್ರಗಳು.  ಗೋಪೀನಾಥರಾಯರು ಸಣ್ಣಕತೆ ಪ್ರಕಾರವನ್ನು ಕುರಿತು ಗಂಭೀರವಾಗಿ ಚಿಂತಿಸಿದ್ದಾರೆ.

ಕತೆ ಸಣ್ಣಕತೆಯಾದಾಗ ಅದು 'ಕಲಾತ್ಮಕ'ವಾಗಿದೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.  ಅದನ್ನು ಯೋಚಿಸಿಕೊಂಡು ಒಂದು ಮೂತರ್ಿಯನ್ನಾಗಿ ಮಾಡಿ ಅದನ್ನು ಹೊರತರಬೇಕಾಗುತ್ತದೆ ಎಂಬ ಮಾಸ್ತಿಯವರ ಮಾತು ಇಂದಿಗೂ ಪ್ರಸ್ತುತ.

- 3 -
ಗೋಪೀನಾಥರಾಯರ 'ಸಾರ್ವಭೌಮ' ಕಥಾಸಂಕಲನ 2009ರಲ್ಲಿ ಪ್ರಕಟವಾಗಿದೆ.  ಇದೀಗ ಪ್ರಕಟವಾಗುತ್ತಿರುವ ಅವರ ಎರಡನೆಯ ಕಥಾಸಂಕಲನ 'ಪಾಂ ಪಾಂ ರೈಲು'ನಲ್ಲಿ ಒಂಬತ್ತು ಕತೆಗಳಿವೆ.

ಈ ಸಂಲನದಲ್ಲಿ ನನಗೆ ಇಷ್ಟವಾದ ಹೆಚ್ಚಿನ ಕತೆಗಳಲ್ಲಿ ಹಳ್ಳಿಗರು ಕ್ರಿಯಾಕೇಂದ್ರಗಳಾಗಿವೆ.....'ಗಂಗೇಚ ಯಮುನೇಚ' ಒಂದು ಹಾಸ್ಯಪ್ರಧಾನ ಕತೆ.  ತಮ್ಮ ಇಷ್ಟದ ಗಂಗಾರಾಮ್ ಮೇಷ್ಟ್ರಿಗೆ ಮದುವೆ ಮಾಡಿಸಲು ಹುಡುಗಿ ಹುಡುಗತೊಡಗುವ ಅವರ ವಿದ್ಯಾಥರ್ಿಗಳು ಕುಟಿಲೋಪಾಯಗಳನ್ನು ಯೋಜಿಸುತ್ತಾರೆ.  ಮುಗುಳ್ನಕ್ಕು ನೀವು ಗಂಗ, ನಾನು ಯಮುನಾ ಅಂದಳಂತೆ.  ಆ ಮೇಲಿನದೆಲ್ಲಾ ಬರೀ ಸಿನಿಮಾ ಕತೆ ಎಂಬ ಅನೀರೀಕ್ಷಿತ ಮುಕ್ತಾಯ ಚೆನ್ನಾಗಿದೆ.

'ಆನೆಗೊಂದು ಸಕರ್ಾರಿ ಲಂಗೋಟಿ' ಕತೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ದೇವರ ಹೆಸರಿನಲ್ಲಿ ಅಮಾನವೀಯವಾಗಿ ವತರ್ಿಸುತ್ತದೆ.  ದೇವಸ್ಥಾನದ ಆಡಳಿತಮಂಡಳಿಯವರು ಮಾನವೀಯತೆ ಮರೆತರೂ, ಆನೆ ಮಾನವೀಯತೆ ಮರೆಯುವುದಿಲ್ಲ.  ಆನೆ ಕೆರೆಗಿಳಿಯುವುದನ್ನು ಪ್ರತಿಭಟಿಸಲು ತಮ್ಮ ಸೊಸೆ ಮಹಾಲಕ್ಷ್ಮೀಯನ್ನು ಕೆರೆಗಿಳಿಸುವ ಹಯವದನ ಭಟ್ಟರ ನಿಧರ್ಾರದಲ್ಲಿ ಕುಟುಂಬಾಂತರ್ಗತ ಕ್ರೌರ್ಯದ ಇನ್ನೊಂದು ಮುಖವಿದೆ.

'ನೋಡಿ ನಮ್ಮ ಬಾವುಟ' ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಕುರಿತು, ತಲೆಮಾರುಗಳ ನಡುವಿನ ಕಂದಕದ ಕುರಿತು ಚಿಂತಿಸಲುವ ಕತೆ.  ಸ್ವಾತಂತ್ರ್ಯ ಹೋರಾಟಗಾರ ರಾಮೇಗೌಡರು ತನಗೆ ಸರಕಾರದಿಂದ ಸಿಕ್ಕಿದ್ದ ಜಾಗವನ್ನು ಶಾಲೆ ಕಟ್ಟಲು ದಾನವಾಗಿ ನೀಡಿದ್ದಾರೆ.  ಅವರ ಮಗ ರವಿಶಂಕರ ಗೌಡರ ಕುಟುಂಬದವರು, ಬಡ ಮಕ್ಕಳಿಗಾಗಿ ಕಟ್ಟಿಸಿದ್ದ ಆ ಕನ್ನಡ ಶಾಲೆಯನ್ನು ಮುಚ್ಚಿಸಿ, ಆ ಜಮೀನನ್ನು ವಾಪಾಸು ಪಡೆಯಲು ಯೋಜನೆ ರೂಪಿಸುತ್ತಾರೆ.  ಹಣದ ಹೆದರಿಕೆ ಇಲ್ಲ ನನಗೆ.  ಹಣ ದೇವರಾದ ಜನರ ಹೆದರಿಕೆ ಎನ್ನುವ ಡಿ. ಎಚ್. ಲಾರೆನ್ಸ್ನ ಸಾಲನ್ನು ನೆನಪಿಸುವ ಕತೆ ಇದು.  ಒಂದು ಪಿಕ್ನಿಕ್ ಗೆ ಹೊರಟವರ ಸಂಭಾಷಣೆಯ ತಂತ್ರದಲ್ಲಿ ಬೆಳೆಯುವ ಈ ಕತೆ ಕಲಾತ್ಮಕವಾಗಿದೆ.

ಅಣ್ಣ ತಮ್ಮಂದಿರ ಆಸ್ತಿ ಜಗಳದ ಅತಿರೇಕ 'ಮಾರಿ ತಿನ್ನುವ ಹಕ್ಕು' ಕತೆಯ ವಸ್ತು.  ಶಿವರಾಮ ಬಲ್ಲೂರನ ಅಣ್ಣ, ತನ್ನ ತಮ್ಮನಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಸುಳ್ಳು ಸಾಕ್ಷಿ ಸೃಷ್ಟಿಸಿ ಅವನ ಆಸ್ತಿಯನ್ನು ಲಪಟಾಯಿಸುತ್ತಾನೆ.

'ಕಲ್ಲು ಪ್ರತಿಮೆಗಳು' ಕತೆಯಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಕುರಿತ ಮಾಂಗೂ ತೀಕ್ಷ್ಣವಾಗಿದೆ.  ಭ್ರಷ್ಟಾಚಾರದ ಕಬಂಧ ಬಾಹುಗಳು ರಾಜಕಾರಣಿಗಳ ಪ್ರತಿಮೆಗಳನ್ನೂ ಅಪ್ಪಿಕೊಳ್ಳುತ್ತವೆ.  ಭಗ್ನಗೊಂಡ ರಾಜಕಾರಣಿಗಳ ಪ್ರತಿಮೆಗಳನ್ನು ಮರುಸ್ಥಾಪನೆ ಮಾಡಲು ಲಕ್ಷಗಟ್ಟಲೆ ರೂಪಾಯಿಗಳ ಯೋಜನೆ ಸಿದ್ಧವಾಗುತ್ತದೆ.

ಗೋಪೀನಾಥರಾಯರ ಕತೆಗಳಲ್ಲಿ ಮೊದಲು ಗಮನ ಸೆಳೆಯುವುದು ತಿಳಿಹಾಸ್ಯದ ಸ್ಪರ್ಶ.  ಆದರೆ ಇಲ್ಲಿನ ಹಾಸ್ಯದ ಹಿಂದೆ ಗಾಢವಾದ ವಿಚಾರವಿದೆ.  ಇದು ಛಿದ್ರಗೊಳ್ಳುತ್ತಿರುವ ದಾಂಪತ್ಯ, ಕುಟುಂಬಗಳನ್ನು ಕುರಿತ, ಪತನಮುಖಿಯಾಗಿರುವ ಸಾಮಾಜಿಕ ಮೌಲ್ಯಗಳನ್ನು ಕುರಿತ ವಿಷಾದ.

ಕೆಲವು ಕಲಾತ್ಮಕ, ಚಿಂತನಶೀಲ, ಅಸಾಧಾರಣ ಕತೆಗಳನ್ನು ಕನ್ನಡಕ್ಕೆ ನೀಡಿರುವ ಶ್ರೀ ಗೋಪೀನಾಥ ರಾವ್ ಅವರಿಗೆ ಅಭಿನಂದನೆಗಳು.

ಪಾಂ ಪಾಂ ರೈಲು ಮತ್ತು ಇತರ ಕತೆಗಳು
- ಗೋಪೀನಾಥ ರಾವ್
ಎನ್. ಆರ್. ಎ. ಎಂ. ಎಚ್. ಪ್ರಕಾಶನ
ಕೋಟೇಶ್ವರ -576 222
ಮೊದಲ ಮುದ್ರಣ - 2011

 


No comments:

Post a Comment