stat Counter



Tuesday, May 14, 2013

ಝಳಕಿ-ಬಾಲು ಸಂಶೋಧನೆ: ವಚನಗಳು ಜಾತಿ ವಿರೋಧಿಯಲ್ಲ: ಈ ಸಂಶೋಧನೆಯ ರಾಜಕೀಯವೇನು?


ಝಳಕಿ-ಬಾಲು ಸಂಶೋಧನೆ: ವಚನಗಳು ಜಾತಿ ವಿರೋಧಿಯಲ್ಲ: ಈ ಸಂಶೋಧನೆಯ ರಾಜಕೀಯವೇನು?

ಜಿ.ರಾಜಶೇಖರ್

ಡಂಕಿನ್ ಝಳಕಿ ಮತ್ತು ಎಸ್.ಎನ್.ಬಾಲಗಂಗಾಧರ ಅವರ ವಚನ ಸಾಹಿತ್ಯವು
ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೇ? ಎಂಬ ಪ್ರಬಂಧದ(ಚಿಂತನ ಬಯಲು-
ಸಂಚಿಕೆ 3, ಅಕ್ಟೋಬರ್ 2012, ಪುಟ 25-44) ಬಗ್ಗೆ ಪ್ರಜಾವಾಣಿಯಲ್ಲಿ ಕಳೆದ ಹಲವು
ದಿನಗಳಿಂದ ನಡೆದಿರುವ ಚಚರ್ೆಯಲ್ಲಿ ವಚನಗಳ ಮುಖ್ಯ ಲಕ್ಷಣವನ್ನೇ ಯಾರೂ ಗಮನಿಸಿದ
ಹಾಗಿಲ್ಲ.ವಚನಕಾರರು ಬರೆದಿರುವುದು ಕಾವ್ಯವೇ ಹೊರತು, ಸಮಾಜ ಶಾಸ್ತ್ರದ ಪಠ್ಯವಲ್ಲ.
ಸ್ವತಃ ವಚನಕಾರರಿಗೇ ಅದರ ಅರಿವು ಇದ್ದಿತು ಎನ್ನುವುದಕ್ಕೆ ವಚನಗಳಲ್ಲಿ ಸಾಕಷ್ಟು
ಉದಾಹರಣೆಗಳು ದೊರೆಯುತ್ತವೆ. ಬಸವ, ಅಲ್ಲಮ ಮತ್ತು ಅಕ್ಕರಂತೂ ಕವಿತ್ವ
ಮಾತ್ರವಲ್ಲ ಭಾಷೆಯಲ್ಲಿ ಅರ್ಥ ಪ್ರಕಟವಾಗುವ ಬಗೆಯ ಕುರಿತು ಕೂಡ ಚಿಂತಿಸಿದವರು.
ವಚನಕಾರರನ್ನು ಕನ್ನಡಿಗರು ಕಳೆದ 800 ವರ್ಷಗಳಿಂದ ಓದುತ್ತ ಬಂದಿರುವುದು ಕೂಡ,
ಅವರು ಕವಿಗಳು ಎಂಬ ಗ್ರಹಿಕೆಯಲ್ಲೇ. ವಚನಕಾರರ ನಂತರ ಅವರ ಪರಂಪರೆಯನ್ನು
ಮುಂದುವರೆಸಿಕೊಂಡು ಬಂದಿರುವವರು ಸಹ ಕವಿಗಳೇ. ಬಸವಾದಿ ಪ್ರಮಥರಿಂದ
ಮೊದಲುಗೊಂಡು 19ನೆಯ ಶತಮಾನದ ತತ್ವಪದಕಾರರವರೆಗೆ, ಇದು ಸಂದು ಕಡಿಯದ
ಭಾಷಿಕ ಪರಂಪರೆ. ಆದರೆ ಝಳಕಿ ಮತ್ತು ಬಾಲು ಅವರ ಮಟ್ಟಿಗೆ ವಚನಕಾರರು ತಮ್ಮ
ವಚನಗಳನ್ನು ರಚಿಸಿ ನಿರ್ಗಮಿಸಿದ ನಂತರ ಕನ್ನಡ ನಾಡಿಗೆ ಕ್ರೈಸ್ತ ಮಿಷನರಿಗಳು ಬಂದು
ವಚನಗಳು ಜಾತಿವ್ಯವಸ್ಥೆಯನ್ನು ವಿರೋಧಿಸುವ ರಚನೆಗಳು ಎಂದು ಅಥರ್ೈಸುವವರೆಗೆ,
ವಚನಗಳನ್ನು ಯಾರೂ ಓದಲಿಲ್ಲ; ಓದಿದರೂ ಹಾಗೆ ಅಥರ್ೈಸಲಿಲ್ಲ. ಅಂದರೆ ಹತ್ತಿರ
ಹತ್ತಿರ 600 ವರ್ಷಗಳವರೆಗೆ ವಚನಗಳಿಗೆ ಅಜ್ಞಾತವಾಸ. ಝಳಕಿ-ಬಾಲು ಅವರನ್ನು
ನಂಬುವುದಾದರೆ, ಹರಿಹರ, ರಾಘವಾಂಕರಿಂದ ಹಿಡಿದು ತತ್ವಪದಕಾರರವರೆಗೆ, ಯಾವ
ಕವಿಗೂ ವಚನಗಳ ಪರಿವೆ ಇರಲಿಲ್ಲ; ಶೂನ್ಯ ಸಂಪಾದನೆ ಮತ್ತು ಮಂಟೇಸ್ವಾಮಿ ಕಾವ್ಯಕ್ಕೆ
ಸಹ ವಚನ ಸಾಹಿತ್ಯದ ಜೊತೆ ಕೊಳು ಕೊಡುಗೆಯ ಸಂಬಂಧ ಇರಲಿಲ್ಲ. ಕ್ರೈಸ್ತ
ಮಿಷನರಿಗಳು ಬಂದವರೆ, ವಚನಗಳನ್ನು ಕೈಗೆತ್ತಿಕೊಂಡು ಅವಕ್ಕೆ ಜಾತಿವ್ಯವಸ್ಥೆ ವಿರೋಧಿ
ಎಂಬ ಅರ್ಥ ಹಚ್ಚಿದರು. ಝಳಕಿ-ಬಾಲು ಅವರ ಈ ವಾದ ಕನ್ನಡದ 700 ವರ್ಷಗಳ
ಸಾಂಸ್ಕೃತಿಕ ಚರಿತ್ರೆಯನ್ನೇ ಅಲ್ಲಗೆಳೆಯುತ್ತದೆ. ವಚನಗಳು ಜಾತಿವ್ಯವಸ್ಥೆಯನ್ನು
ವಿರೋಧಿಸುವುದು ಹಾಗಿರಲಿ, ಆ ಕುರಿತು ಏನನ್ನೂ ಹೇಳುವುದಿಲ್ಲ ಎಂಬ ತಮ್ಮ ವಾದಕ್ಕೆ
ಸಮರ್ಥನೆಯಾಗಿ ಝಳಕಿ-ಬಾಲು, ಒಂದು ವಿಚಿತ್ರ ತರ್ಕವನ್ನು ನಮ್ಮ ಮುಂದೆ ಇಡುತ್ತಾರೆ.
1993ರಲ್ಲಿ ಕನರ್ಾಟಕ ಸರಕಾರ ಪ್ರಕಟಿಸಿದ ಸಮಗ್ರ ವಚನಸಾಹಿತ್ಯದ 15 ಸಂಪುಟಗಳ
ಸಂಪಾದಕ ಡಾ|| ಎಂ.ಎಂ.ಕಲಬುಗರ್ಿ, ತನ್ನ ಪ್ರಸ್ತಾವನೆಯಲ್ಲಿ, ವಚನಗಳು ಭಾರತದ ವರ್ಣ,
ವರ್ಗ ಹಾಗು ಲಿಂಗಗಳ ಬೇಧ ಸಂಸ್ಕೃತಿಯ ವಿರುದ್ಧ ನಡೆದ ಪ್ರಥಮ ಆಂದೋಲನ ಎಂದು
ಹೇಳುತ್ತಾರೆ. ಈ ಅಭಿಪ್ರಾಯವನ್ನೇ, ಝಳಕಿ ಮತ್ತು ಬಾಲು ಪ್ರಸ್ತಾಪಿಸುವ ಎಲ್ಲ
ವಿದ್ವಾಂಸರೂ- ಡಿ.ಆರ್.ನಾಗರಾಜ್, ಚಿದಾನಂದ ಮೂತರ್ಿ, ಹಿರೇಮಲ್ಲೂರು ಈಶ್ವರನ್,
ಒ.ಎಲ್.ನಾಗಭೂಷಣಸ್ವಾಮಿ, ಎಚ್.ತಿಪ್ಪೇರುದ್ರಸ್ವಾಮಿ ಮತ್ತು ಎ.ಕೆ.ರಾಮಾನುಜನ್ -
ಗಿಳಿಪಾಠದ ಹಾಗೆ ಒಪ್ಪಿಸಿರುವರು ಎಂಬುದು ಕೂಡ ಝಳಕಿ-ಬಾಲು ಅವರ ಫಿಯರ್ಾದು.
ಸರಕಾರ ಈ ಸಮಗ್ರ ಸಂಪುಟ ಪ್ರಕಟಿಸುವವರೆಗೆ ಎಲ್ಲ ವಚನಗಳೂ (ಒಟ್ಟು 21788)
ಒಂದೆಡೆ ಸಿಗುತ್ತಲೇ ಇರಲಿಲ್ಲ. ಹಾಗಿದ್ದೂ ಎಂ.ಕಲಬುಗರ್ಿಯವರನ್ನೂ ಒಳಗೊಂಡು 19
ಮತ್ತು 20ನೆಯ ಶತಮಾನದ ಕನ್ನಡ ವಿದ್ವಾಂಸರು ವಚನ ಸಾಹಿತ್ಯ ಜಾತಿ ವಿರೋಧಿ ಎಂದು
ಹೇಗೆ ತೀಮರ್ಾನಿಸಿದರು? ಇದು ಝಳಕಿ-ಬಾಲು ಅವರ ಪಾಟೀ ಸವಾಲು. ನೂರಾರು
ವರ್ಷಗಳಿಂದ, ಕನ್ನಡಿಗರು ಸಮೃದ್ಧವಾದ ತಮ್ಮ ಭಾಷಿಕ ಪರಂಪರೆಯಲ್ಲಿ ತಮಗೆ
ಬೇಕಾದದ್ದನ್ನು ಆಯ್ದುಕೊಂಡು, ಬೇಡವಾದದ್ದನ್ನು ಬದಿಗೆ ಸರಿಸುತ್ತಬಂದಿದ್ದಾರೆ. ವಚನಗಳ
ಬಗ್ಗೆಯೂ ಅವರ ದೋರಣೆ ಅದೇ - ಹಂಸಕ್ಷೀರ ನ್ಯಾಯದ್ದು. ಸಮಾಜಶಾಸ್ತ್ರಜ್ಞನಿಗಾದರೆ,
ತನ್ನ ಆಕರಗಳಲ್ಲಿ ಆಯ್ಕೆಯೇ ಇಲ್ಲ; ಎಲ್ಲವನ್ನೂ ಆತ 'ಸಾಕ್ಷಾಧಾರ' ಎಂಬ ನೆಲೆಯಲ್ಲಿ
ಕೂಲಂಕುಷವಾಗಿ ಅಭ್ಯಾಸ ಮಾಡಲೇಬೇಕು. ಆದರೆ ಕಾವ್ಯದ ಓದುಗನಿಗಾಗಲೀ,
ವಿಮರ್ಶಕನಿಗಾಗಲೀ ಆ ಜರೂರು ಇಲ್ಲ. ಅದಕ್ಕೆ ಸರಿಯಾಗಿ ಝಳಕಿ-ಬಾಲು, ತಮ್ಮ
ಪ್ರಬಂಧದಲ್ಲಿ ಉಲ್ಲೇಖಿಸುವ ಎಲ್ಲ ಕನ್ನಡ ವಿದ್ವಾಂಸರೂ ಮೂಲತಃ ಕನ್ನಡ ಸಾಹಿತ್ಯ
ಸಂಸ್ಕೃತಿಗಳ ಅಭ್ಯಾಸಿಗಳು; ಹಿರೇಮಲ್ಲೂರು ಈಶ್ವರನ್ ಒಬ್ಬರು ಮಾತ್ರ ಸಮಾಜ
ಶಾಸ್ತ್ರಜ್ಞರು. ಅದರೆ ಝಳಕಿ-ಬಾಲು ದುರದೃಷ್ಟಕ್ಕೆ ಅವರು ಕೂಡ ವಚನಗಳು
ಜಾತಿವ್ಯವಸ್ಥೆಯನ್ನು ವಿರೋಧಿಸುತ್ತವೆ ಎಂದೇ ಪ್ರತಿಪಾದಿಸುತ್ತಾರೆ.
ಝಳಕಿ-ಬಾಲು ವಾದವನ್ನು ಸಮಥರ್ಿಸುತ್ತ ರಾಜರಾಮ ಹೆಗಡೆ, ವಚನಕಾರರು
ಹೇಳಿರುವುದು ಎಲ್ಲವೂ ಅವರಿಗಿಂತ ಮೊದಲು ಸಂಸ್ಕೃತ ಆಗಮಗಳಲ್ಲಿ
ಬಂದಿರುವಂತಹದ್ದೆ. ಅದರಲ್ಲಿ ಹೊಸತು ಏನಿಲ್ಲ ಎಂದು ಹೇಳುತ್ತಾರೆ. ಝಳಕಿ ಪ್ರಕಾರ
ಆದಿಶಂಕರರ ಕೃತಿಯಲ್ಲೇ ಜಾತಿಬೇಧ ಮತ್ತು ವೇದಗಳನ್ನು ಅಲ್ಲಗೆಳೆಯುವ ಮಾತುಗಳಿವೆ.
ಶಂಕರ ತನ್ನ ತತ್ವ ಚಿಂತನೆ ನಡೆಸಿದ್ದು ಸಂಸ್ಕೃತದಲ್ಲಿ; ವಚನಕಾರರು, ವಚನ ರಚಿಸಿದ್ದು
ತಮ್ಮ ತಾಯ್ನುಡಿಯಲ್ಲಿ. ಸಂಸ್ಕೃತ ಮತ್ತು ದೇಶಭಾಷೆಗಳ ನಡುವೆ ಇರುವ ತರತಮ
ವ್ಯತ್ಯಾಸವೇ ಬ್ರಾಹ್ಮಣ ಶೂದ್ರ ಬೇಧದಲ್ಲಿ ಪ್ರತಿಬಿಂಬಿತವಾಗಿದೆ ಎಂಬ ಸತ್ಯ ಝಳಕಿ ಮತ್ತು
ರಾಜಾರಾಮ ಹೆಗಡೆಯವರಿಗೆ ಗೊತ್ತಿಲ್ಲವೆ? ಅಥವಾ ಅವರು ಅದನ್ನೂ
ನಿರಾಕರಿಸುತ್ತಾರೆಯೆ? ಶಂಕರ ಮತ್ತು ವಚನಕಾರರ ನಡುವೆ ಇನ್ನೂ ಒಂದು ವ್ಯತ್ಯಾಸವಿದೆ.
ಶಂಕರ, ಭಾರತದ ಬಹುಜನರ ಸಾಂಸ್ಕೃತಿಕ ಪರಂಪರೆಯ ಭಾಗವಲ್ಲ; ಆದರೆ
ವಚನಕಾರರು ಇಂದಿಗೂ ಕನ್ನಡದ ಬಹುಜನರ ನೆನಪಿನಲ್ಲಿ ಜಾಗೃತರಾಗಿರುವಂತಹವರು.
ಅವರು ನಮ್ಮ ಜೀವಂತ ಸಾಂಸ್ಕೃತಿಕ ಪರಂಪರೆ- ಲಿವಿಂಗ್ ಟ್ರೆಡಿಷನ್. ಝಳಕಿ- ಬಾಲು
ಮತ್ತು ಅವರ ಸಹವತರ್ಿಗಳಿಗೆ ಈ ಪರಂಪರೆಯನ್ನು ಅದರ ನೈಜ ನೆಲೆಗಳಲ್ಲಿ
ಅರ್ಥಮಾಡಿಕೊಳ್ಳುವ ವ್ಯವಧಾನವೂ ಇಲ್ಲ; ಅದರ ಬಗ್ಗೆ ಗೌರವವೂ ಇಲ್ಲ. ವಚನಗಳು
ಅವರಿಗೆ ಕೇವಲ ಸಮಾಜಶಾಸ್ತ್ರದ ಒಂದಿಷ್ಟು ಮಾಹಿತಿಗಳ ಅಕರ. ಅವರ ಸಮಾಜ
ಶಾಸ್ತ್ರೀಯ ತೀಮರ್ಾನಗಳು ಸಹ ಎಷ್ಟು ಅಪಾಯಕಾರಿ ಎಂಬುದನ್ನು ಈಗಾಗಲೇ ದೇವನೂರ
ಮಹದೇವ ನಮ್ಮ ಮನಗಾಣಿಸಿದ್ದಾರೆ.(ಪ್ರಜಾವಾಣಿ, ಪುಟ 8, 29-4-2013)
ವಚನಕಾರರು ಇಂದಿಗೂ ಕನ್ನಡ ಸಂಸ್ಕೃತಿಯ ಭಾಗವಾಗಿರುವುದರಿಂದಲೇ ಕನ್ನಡದ
ನಾಲ್ವರು ಪ್ರಮುಖ ಲೇಖಕರು- ಲಂಕೇಶ್, ಗಿರೀಶ್ ಕಾನರ್ಾಡ್, ಎಚ್.ಎಸ್.ಶಿವಪ್ರಕಾಶ್
ಮತ್ತು ಚಂದ್ರಶೇಖರ ಕಂಬಾರ, ವಚನಕಾರರ ಸಾಮಾಜಿಕ ಆಂದೋಲನದ ಬಗ್ಗೆ
ನಾಟಕಗಳನ್ನು ರಚಿಸಿದ್ದಾರೆ (ಅನುಕ್ರಮವಾಗಿ ಸಂಕ್ರಾಂತಿ, ತಲೆದಂಡ, ಮಹಾಚೈತ್ರ ಮತ್ತು
ಶಿವರಾತ್ರಿ). ಈ ನಾಲ್ಕು ನಾಟಕಗಳೂ ಕನ್ನಡದಲ್ಲಿ ಬಹು ಚಚರ್ಿತ ಕೃತಿಗಳು ಮತ್ತು ರಂಗದ
ಮೇಲೂ ಯಶಸ್ವಿಯಾಗಿರುವಂತಹವು. ಈ ಪಟ್ಟಿಯಲ್ಲಿ ಬಿ.ಪುಟ್ಟಸ್ವಾಮಯ್ಯನವರ ಅತ್ಯಂತ
ಜನಪ್ರಿಯ ನಾಟಕ ಕ್ರಾಂತಿಕಲ್ಯಾಣವನ್ನೂ ಸೇರಿಸಿಕೊಳ್ಳಬೇಕು. ಈ ಎಲ್ಲ ನಾಟಕಗಳು
ಕ್ರೈಸ್ತ ಮಿಷನರಿಗಳು ವಚನಗಳನ್ನು ಅಥರ್ೈಸಿರುವ ಬಗೆಯಿಂದ ಪ್ರೇರಿತವಾಗಿವೆಯೇ?
ಝಳಕಿ-ಬಾಲು ಅವರ ಅಭಿಪ್ರಾಯ ಅದೇ ಆಗಿದ್ದರೆ, ಅವರು ಹಾಗೆಂದು ಸ್ಪಷ್ಟಪಡಿಸಬೇಕು.
ಆದುನಿಕ ಕನ್ನಡದ ಅತ್ಯಂತ ಸತ್ವಪೂರ್ಣ ಲೇಖಕರನ್ನು ಇವರು ಹೇಗೆ ಪರಿಭಾವಿಸುತ್ತಾರೆ
ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಝಳಕಿ-ಬಾಲು ಅವರಿಗೆ ವಚನಗಳು ಮಾತ್ರವಲ್ಲ
ಸಮಕಾಲೀನ ಗದ್ಯದ ಶ್ರೇಷ್ಠ ಕೃತಿಗಳನ್ನು ಓದಲು ಸಹ ಅಭಿರುಚಿಯಾಗಲಿ, ಸಿದ್ಧತೆಯಾಗಲಿ
ಇಲ್ಲ ಎನ್ನುವುದು ನನ್ನ ಗುಮಾನಿ.
ವಚನಗಳು ಜಾತಿವಿರೋಧಿ ಎಂಬುದು 19-20ನೆಯ ಶತಮಾನಗಳಲ್ಲಿ ಕ್ರೈಸ್ತ
ಮಿಷನರಿಗಳ ಪ್ರೇರಣೆಯಿಂದ ನಾವು ಅವಕ್ಕೆ ಹಚ್ಚಿದ ಅರ್ಥವಲ್ಲ; ಅಥವಾ ಅದು,
ಶೇಕ್ಸ್ಪಿಯರನಲ್ಲೋ, ಕಾಳಿದಾಸನಲ್ಲೊ, 21ನೆಯ ಶತಮಾನಕ್ಕೆ ಸಲ್ಲುವಂತಹ ತಾತ್ವಿಕ
ಹೊಳಹುಗಳನ್ನು ಕಂಡುಕೊಳ್ಳುವ ಬಗೆಯದ್ದೂ ಅಲ್ಲ. ಕಾಲ ದೇಶ -ಎರಡು
ದೃಷ್ಟಿಗಳಿಂದಲೂ, ವಚನಕಾರರು ಕನ್ನಡಿಗರಿಗೆ ಯಾವತ್ತೂ ದೂರವಾದವರೇ ಅಲ್ಲ. ಅದೂ
ಅಲ್ಲದೆ, ಜಾತ್ಯತೀತತೆ ಮತ್ತು ಜಾತಿ ವಿರೋಧ ಆಧುನಿಕ ವಿಚಾರಗಳಾಗಿದ್ದು 19ನೆಯ
ಶತಮಾನಕ್ಕಿಂತ ಮೊದಲು ಅವು ಇರಲೇ ಇಲ್ಲ ಎಂದು ಭಾವಿಸುವುದು ವಿಚಾರಗಳ ವಿಕಾಸದ
ಚರಿತ್ರೆಯನ್ನು ಅಲ್ಲಗೆಳೆಯುತ್ತದೆ. ಯಾವ ಆಧುನಿಕ ವಿಚಾರವೂ ಧಿಡೀರ್ ಎಂದು
ಒಮ್ಮಿಂದೊಮ್ಮೆಗೆ ಹುಟ್ಟಿಕೊಳ್ಳುವುದಿಲ್ಲ. ಆದರೆ ಝಳಕಿ ಮತ್ತು ಬಾಲು ಅವರಿಗೆ ಚರಿತ್ರೆ
ಪ್ರಾರಂಭವಾಗುವುದೇ ಕ್ರೈಸ್ತ ಮಿಷನರಿಗಳ ಆಗಮನದೊಂದಿಗೆ. ಕ್ರೈಸ್ತ ಮಿಷನರಿಗಳು
ಮತ್ತು ಬ್ರಿಟಿಷ್ ವಸಾಹತುಶಾಹಿ, ಒಂದು ಇನ್ನೊಂದರ ಮುಂದುವರಿಕೆ ಎಂಬಂತೆ ಝಳಕಿ-
ಬಾಲು ಕನ್ನಡ ನಾಡಿಗೆ ಅವುಗಳ ಪ್ರವೇಶವಾದದ್ದನ್ನು ನಿರೂಪಿಸುತ್ತಾರೆ. ಆದರೆ
ಕನರ್ಾಟಕದಲ್ಲೇ ಆಗಲಿ, ಭಾರತದಲ್ಲೇ ಆಗಲಿ ಮಿಷನರಿಗಳು ಮತ್ತು ಬ್ರಿಟಿಷ್
ವಸಹಾತುಶಾಹಿ ಎಲ್ಲಿಯೂ ಒಟ್ಟಾಗಿ ಕೆಲಸ ಮಾಡಿದ್ದೇ ಇಲ್ಲ. ಬ್ರಿಟಿಷ್ ಸರಕಾರಕ್ಕೆ
ಭಾರತದಲ್ಲಿ ಈ ಬ್ರಿಟಿಷೇತರ ಐರೋಪ್ಯ ಮಿಷನರಿಗಳಿಂದ ಆಗಬೇಕಾದದ್ದು ಏನೂ
ಇರಲಿಲ್ಲ. ವಸಾಹತುಶಾಹೀ ಸರಕಾರ ಈ ಮಿಷನರಿಗಳನ್ನು ಹತ್ತಿರ ಕೂಡ ಸೇರಿಸಿಕೊಳ್ಳಲಿಲ್ಲ.
ಹಾಗಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕದ ವಸಾಹತುಗಳಲ್ಲಿ, ವ್ಯಾಪಕವಾಗಿ ಬಲತ್ಕಾರದ
ಮತಾಂತರಗಳು ನಡೆದಂತೆ ಭಾರತದಲ್ಲಿ ನಡೆಯಲಿಲ್ಲ. ಆದರೆ ಝಳಕಿ-ಬಾಲು ಅವರ
ಸಂಶೋಧನೆಯ ತೀಮರ್ಾನಗಳನ್ನು ಒಪ್ಪಿಕೊಂಡರೆ ವಚನಗಳನ್ನು ಜಾತಿವ್ಯವಸ್ಥೆಯ
ವಿರೋಧಿ ಎಂಬಂತೆ ಓದುತ್ತ ಬಂದಿರುವ ನಾವೆಲ್ಲರೂ ಮತಾಂತರಗೊಂಡವರೇ ಆಗಿ
ಬಿಡುತ್ತೇವೆ.
ಝಳಕಿ-ಬಾಲು ತಮ್ಮ ಈ ಬರಹವನ್ನು ನಿರ್ವಸಾಹತೀಕರಣದ ಒಂದು ಭಾಗವೆಂದೇ
ಸಾರಿಕೊಂಡಿದ್ದಾರೆ. ಉದಾಹರಣೆಗೆ ಅದರ ಅಡಿಟಿಪ್ಪಣಿ 7ರಲ್ಲಿ ಬಾಲಗಂಗಾಧರ ಮತ್ತು
ಎಡ್ವಡರ್್ ಸಯೀದ್ ನಮ್ಮ ಗತ ಮತ್ತು ಪ್ರಸ್ತುತವನ್ನು ಅರ್ಥ ಮಾಡಿಕೊಳ್ಳಲು ಹೊಸ
ಚೌಕಟ್ಟು ಹಾಕಿಕೊಟ್ಟವರು ಎಂದು ಹೇಳಲಾಗಿದೆ. ಲೋಕ ಖ್ಯಾತ ಚಿಂತಕ-
ಹೋರಾಟಗಾರ ಎಡ್ವಡರ್್ ಸಯೀದ್(1936-2003) ಮತ್ತು ತಾವು ಸರಿಸಮಾನರು
ಎಂಬಂತೆ ಸ್ವತಃ ಬಾಲು ಅವರೇ ತಮ್ಮ ಪ್ರಬಂಧದಲ್ಲಿ ಹೇಳಿಕೊಳ್ಳುವುದರ ಔಚಿತ್ಯ ಏನೇ
ಇರಲಿ, ಸಯೀದ್ ಮತ್ತು ಬಾಲು ನಡುವೆ ಸಮಾನವಾಗಿರುವಂತಹದ್ದು ಏನೂ ಇಲ್ಲ.
ಜಗತ್ತಿನಾದ್ಯಂತ ರಾಜಕೀಯ ಚಿಂತನೆ ಮತ್ತು ಸಾಹಿತ್ಯ ವಿಮಶರ್ೆಗಳಿಗೆ ಹೊಸ ಹಾದಿ
ಹಾಕಿಕೊಟ್ಟ ಸಯೀದ್ನ ಕೃತಿ 'ಓರಿಯೆಂಟಲಿಸಂ' (1978). ವಸಾಹತುಶಾಹಿ ರಾಷ್ಟ್ರಗಳ
ಬುದ್ಧಿಜೀವಿಗಳು ವಸಾಹತುಗಳ 'ನೇಟಿವ್' ಜನರ ಬದುಕನ್ನು ಹೇಗೆ ಪ್ರತಿನಿಧೀಕರಿಸುತ್ತಾರೆ
ಮತ್ತು ಹೇಗೆ ಆ ಬಗೆಯ ಚಿತ್ರಣ ಮತ್ತು ನಿರೂಪಣೆಗಳಿಂದ ಈ ನೇಟಿವ್ ಜನರ ಸ್ವ
ವನ್ನು ಸಹ ತಾವೇ ಸಂರಚಿಸುತ್ತಾರೆ ಎಂಬುದನ್ನು ಈ ಕೃತಿ ವಿಶ್ಲೇಷಿಸುತ್ತದೆ. ಎಡ್ವಡರ್್
ಸಯೀದ್ ಪೆಲೆಸ್ತೀನ್ನಲ್ಲಿ ಹುಟ್ಟಿ, ಈಜಿಪ್ಟ್ನಲ್ಲಿ ಬೆಳೆದು ಅಮೇರಿಕದ ಪ್ರತಿಷ್ಠಿತ
ವಿಶ್ವವಿದ್ಯಾಲಯ ಒಂದರಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದವರು. ಹಾಗಾಗಿ ಅವರು
ಐರೋಪ್ಯ ವಸಾಹತುಶಾಹಿಯನ್ನು ಅನುಭವಿಸಿ ಬಲ್ಲವರು ಮತ್ತು ಅಮೇರಿಕದ
ಸಾಮ್ರಾಜ್ಯಶಾಹಿಯ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಮಸಲತ್ತುಗಳನ್ನು
ಹತ್ತಿರದಿಂದ ಕಂಡು ಬಲ್ಲವರು. ಅವರು ಯಾವತ್ತೂ ಪ್ರಾಧ್ಯಾಪಕನ ಕುಚರ್ಿಗೆ ಅಂಟಿಕೊಂಡ
ನಿಲರ್ಿಪ್ತ ಬುದ್ಧಿಜೀವಿಯಾಗಿರಲಿಲ್ಲ. ತನ್ನ ಗೆಳೆಯ ನೋಮ್ ಚೋಮ್ಸ್ಕಿಯಂತೆ ಸಯೀದ್
ಕೂಡ ಒಬ್ಬ ಚಿಂತಕ-ಹೋರಾಟಗಾರ. ತನ್ನ ತಾಯಿನೆಲ ಪೆಲೆಸ್ತೀನ್, ಇಸ್ರೇಲ್ ಆಕ್ರಮಣಕ್ಕೆ
ಒಳಗಾಗಿರುವುದು ಮತ್ತು ಅದನ್ನು ಅಮೇರಿಕ, ಬ್ರಿಟನ್, ಫ್ರಾನ್ಸ್ ಮುಂತಾದ
ಸಾಮ್ರಾಜ್ಯಶಾಹಿಗಳು ಬೆಂಬಲಿಸುತ್ತಿರುವುದನ್ನು ಸಯೀದ್ ತೀವ್ರವಾಗಿ ಪ್ರತಿಭಟಿಸಿದವರು.
ಪೆಲೆಸ್ತೀನ್ ಕುರಿತ ಅವರ ಸ್ವಗತದಂತಹ ಬರವಣಿಗೆಯಂತೂ ಅದರ ತೀವ್ರತೆ ಮತ್ತು
ಮಾನವೀಯ ತುಡಿತಗಳಿಂದ ಹೃದಯಸ್ಪಷರ್ಿಯಾಗಿದೆ. ಇಸ್ರೇಲ್ನ ಆಕ್ರಮಣ ಮತ್ತು
ದುಂಡಾವತರ್ಿಗಳ ವಿರುದ್ಧ ಪೆಲೆಸ್ತೀನ್ ಜನತೆಯ ಹೋರಾಟದಲ್ಲಿ ನೇರವಾಗಿ
ಭಾಗಿಯಾಗಿದ್ದ ಸಯೀದ್, ಆ ಹೋರಾಟದ ಮಂಚೂಣಿಯಲ್ಲಿದ್ದ ಯಾಸೇರ್ ಆರಾಫತ್
ನಾಯಕತ್ವದ ಪೆಲೆಸ್ತೀನ್ ರಾಷ್ಟ್ರೀಯ ಸಮಿತಿಯ ಸದಸ್ಯರೂ ಆಗಿದ್ದರು. ಮತ್ತು ಆ
ಕಾರಣಕ್ಕೇನೆ, ಥೇಟು ನಮ್ಮ ಆರ್.ಎಸ್.ಎಸ್ ಥರಹದ ಅಮೇರಿಕದ ಬಲಪಂಥೀಯ
ಯಹೂದಿ ಸಂಘಟನೆಗಳು ಸಯೀದ್ ಮೇಲೆ ಅನೇಕ ಬಾರಿ ಹಲ್ಲೆ ನಡೆಸಿದ್ದವು.
ಸಯೀದ್ರಿಗೆ ಅವರ ಸಿದ್ಧಾಂತ ಮತ್ತು ಸಾಹಿತ್ಯ ವಿಮಶರ್ೆ ಸಾಮ್ರಾಜ್ಯಶಾಹಿಯ ವಿರುದ್ಧ
ಅವರ ರಾಜಕೀಯ ಹೋರಾಟದ ಮುಂದುವರಿಕೆಯೇ ಆಗಿತ್ತು. ಸಯೀದ್ ಜೊತೆ
ಗುರುತಿಸಿಕೊಳ್ಳಲು ಬಾಲು ಅವರಿಗೆ ಏನು ಅರ್ಹತೆ ಇದೆ? ನನಗೆ ಗೊತ್ತಿರುವ ಮಟ್ಟಿಗೆ
ಬಾಲು, ಯಾವ ವಿಮೋಚನಾವಾದೀ ಅಥವಾ ಎಡಪಂಥೀಯ ಚಳುವಳಿಯಲ್ಲಿಯೂ ಎಂದೂ
ತೊಡಗಿಕೊಂಡವರಲ್ಲ. ಕುವೆಂಪು ವಿಶ್ವವಿದ್ಯಾಲಯದ ಅವರ ಅನುಯಾಯಿಗಳಿಗಂತೂ ಈ
ಚಳುವಳಿಗಳ ಬಗ್ಗೆ ಅತೀವ ತಿರಸ್ಕಾರವಿದೆ. ಅವರಲ್ಲಿ ಒಬ್ಬರಾದ ಜೆ.ಸದಾನಂದ, ಇತ್ತೀಚೆಗೆ,
ಮಾಕ್ಸರ್್ವಾದ ನಿಜರ್ೀವಗೊಂಡಿದೆ ಎಂಬ ಮರಣೋತ್ತರ ವರದಿ ಸಲ್ಲಿಸಿದ್ದಾರೆ.
ಹಾಗಿದ್ದೂ, ತಮ್ಮ ಸಂಶೋಧನೆ ಮತ್ತು ಬರಹಗಳು, ಬೌದ್ಧಿಕತೆಯ ನಿರ್ವಸಾಹತೀಕರಣದ
ತಮ್ಮ ಪ್ರಯತ್ನದ ಒಂದು ಭಾಗವೆಂದು ಇವರು ಹೇಳಿಕೊಳ್ಳುತ್ತಾರೆ. ಆದರೆ ಅವರ ಈ
ಪ್ರಯತ್ನ, ಭಾರತವೂ ಸೇರಿ ಜಗತ್ತಿನ ವಿವಿಧ ನಡೆದ ಯಾವ ವಿಮೋಚನಾ
ಹೋರಾಟದಿಂದಲೂ ಏನನ್ನೂ ಪಡೆದಿರುವ ಹಾಗೆ ಕಾಣುವುದಿಲ್ಲ. ಇವರ ಸಂಸ್ಥೆಗೆ
ಸಂಘಪರಿವಾರದ ಬೆಂಬಲವಿದೆ ಎಂಬ ವದಂತಿಗಳಿವೆ. ನಿರ್ವಸಾಹತೀಕರಣ ಸಂಘಪರಿವಾರದ
ಧ್ಯೇಯವಂತೂ ಅಲ್ಲ. ಈ ಹಿನ್ನೆಲೆಯಲ್ಲಿ ಝಳಕಿ-ಬಾಲು ಮತ್ತು ಅವರ ಸಹವತರ್ಿಗಳ
ಸಂಶೋಧನೆಯ ಉದ್ದೇಶದ ಬಗ್ಗೆ ಯಾರಿಗಾದರೂ ಸಂದೇಹ ತಲೆದೋರುವುದು ಸಹಜ.
ಈ ಸಂದರ್ಭದಲ್ಲಿ ನಾನು ಹೇಳಲೇಬೇಕಾದ ಮಾತೊಂದಿದೆ. ಪತ್ರಿಕೆಯ ಕಳೆದ
ವಾರದ ಸಂಚಿಕೆಯಲ್ಲಿ ಝಳಕಿ-ಬಾಲು ಅವರ ಕುರಿತು ಪ್ರಕಟವಾಗಿರುವ, ಸ್ವದೇಶಿ ಮತ್ತು
ವಿದೇಶಿ ಸುಲಿಗೆಕೋರರ ಕೂಡಿಕೆಗೆ ಸಂಶೋಧನೆಯೆಂಬ ಕಿರೀಟ ಎಂಬ ಲೇಖನದ
ಕೊನೆಯ ಸಾಲುಗಳು ಹೀಗಿವೆ. ತಮ್ಮ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತಿರುವಾಗಲೂ,
'ಮಹಾಚೈತ್ರ' ಕ್ಕಾಗಿ 'ಅನುದೇವಾ ಹೊರಗಣವನು' ಹಾಗು 'ಮಾರ್ಗ'ಕ್ಕಾಗಿ ಬೀದಿಗಿಳಿದ
ಲಿಂಗಾಯತರು ಮೂತರ್ಿ ಸ್ಥಳಾಂತರಿಸಲು ಕೂಡ ಬಿಡದ ದಲಿತರು ಈಗ ಏನು
ಮಾಡುತ್ತಿದ್ದಾರೆ?. ಈ ಮಾತಿನ ಅರ್ಥವೇನು? ಇಲ್ಲಿ ಹೆಸರಿಸಲಾಗಿರುವ ಪುಸ್ತಕಗಳ
ವಿರುದ್ಧ ದಲಿತರು ಬೀದಿಗೆ ಇಳಿದದ್ದು ಸರಿ ಎಂದು ಲೇಖಕರು ಹೇಳುತ್ತಿದ್ದಾರೆಯೇ?
ಲೇಖಕರು ಯಾವ ಅರ್ಥದಲ್ಲಿಯೇ ಹಾಗೆ ಹೇಳಿರಲಿ, ಪುಸ್ತಕದ ವಿರುದ್ಧ, ಯಾವುದೇ
ಪುಸ್ತಕದ ವಿರುದ್ಧ ಜನ ಬೀದಿಗೆ ಇಳಿದು ಪ್ರತಿಭಟಿಸಕೂಡದು. ಬೆಂಗಳೂರಿನಲ್ಲಿ ಮೆಟ್ರೋ
ಕಾಮಗಾರಿಗೆಂದು ಅಂಬೇಡ್ಕರ್ ಮೂತರ್ಿಯನ್ನು ಸ್ಥಳಾಂತರಿಸುವುದರ ವಿರುದ್ಧ ನಡೆದ
ಪ್ರತಿಭಟನೆ, ಒಂದು ಮನೆಹಾಳು ಕೆಲಸ. ಈಗ ಲೇಖಕರು ಝಳಕಿ-ಬಾಲು ಅವರ
'ಸಂಶೋಧನೆ' ವಿರುದ್ಧ ಇಡಿ ಇಡೀ ಸಮುದಾಯಗಳು ಬೀದಿಗಿಳಿದು ಪ್ರತಿಭಟಿಸಬೇಕು
ಎಂದು ಕರೆಕೊಡುತ್ತಿದ್ದಾರೆ. ಇವರ ಮಾತಿನಲ್ಲಿ ಹೊಗೆಯಾಡುತ್ತಿರುವ ಅಸಹನೆ ನನ್ನನ್ನು
ಅಸ್ವಸ್ಥನನ್ನಾಗಿ ಮಾಡಿದೆ.
G. RAJASHEKAHAR -DUNDIN JALAKI's Vachana Research

No comments:

Post a Comment