stat Counter



Thursday, May 9, 2013

ಪಿ.ಲಂಕೇಶ್ ಅವರ ಬಿರುಕು


ಪಿ.ಲಂಕೇಶ್ ಅವರ ಬಿರುಕು

'ಬಿರಿ'ಎಂಬ ಪದಕ್ಕೆ 'ಒಡೆ', 'ಅರಳು', 'ವಿಕಾಸವಾಗು', ಸೀಳು' ಮುಂತಾದ ಅರ್ಥಗಳಿವೆ. ಇಂಗ್ಲಿಷಿನ 'ಬಸ್ಟರ್್' ಎಂಬ ಶಬ್ದಕ್ಕೆ ಇದನ್ನು ಹೋಲಿಸಬಹುದು. 'ಬಸ್ಟರ್್' ಎಂದರೆ 'ಬ್ಲಾಸಂ' ಎಂಬ ಅರ್ಥವಿರುವಂತೆ, 'ಸ್ಪ್ಲಿಟ್', 'ಬ್ರೇಕ್', 'ಸೆಪರೇಟ್', 'ಎಕ್ಸ್ಪ್ಯಾಂಡ್', 'ಓಪನ್', 'ಕ್ರ್ಯಾಕ್' ಮುಂತಾದ ಅರ್ಥಗಳೂ ಇವೆ. 'ಬಿರಿ' ಕ್ರಿ0ಾಪದವಾದರೆ, 'ಬಿರಿಕು' ಅಥವಾ 'ಬಿರುಕು' ನಾಮಪದ. ಅರಳುವ, ವಿಕಾಸವಾಗುವ ಕ್ರಿ0ೆು0ುಲ್ಲಿ ಒಂದು ಬಗೆ0ು ಹಿಂಸೆ0ುೂ ಇದೆ0ುಷ್ಟೆ. ಅಂದರೆ ಒಂದು ಪ್ರಕ್ರಿ0ೆು0ು ಒಂದು ಮುಖವನ್ನು-ಗುಣವನ್ನು ಅರಳು, ವಿಕಾಸವಾಗು ಎಂಬ ಪದಗಳು ಸೂಚಿಸಿದರೆ ಒಡೆ, ಸೀಳು, ಪ್ರತ್ಯೇಕವಾಗು ಎಂಬ ಪದಗಳು ಅದೇ ಪ್ರಕ್ರಿ0ೆು0ು ಮತ್ತೊಂದು ಗುಣವನ್ನು-ಮುಖವನ್ನು ನಿದರ್ೆಶಿಸುತ್ತಿರುತ್ತವೆ. ಮುಗ್ಧಸ್ಥಿತಿಯಿಂದ ಪ್ರಬುದ್ಧಸ್ಥಿತಿಗೆ ಹೊರಳಿಕೊಳ್ಳುವ ಪ್ರಕ್ರಿ0ೆು0ುಲ್ಲಿ ಬಿರುಕುಗೊಳ್ಳುವ ಸಾಧ್ಯತೆ0ುು ಅನಿವಾ0ರ್ು. ಬೆಳೆ0ುುವ ಕ್ರಿ0ೆು0ು ರೋಮಾಂಚನದಲ್ಲಿ ಒಂದು ಬಗೆ0ು ಹಿಂಸೆ0ುೂ ಇರುತ್ತದೆ. ಈ ಹಿನ್ನೆಲೆ0ುಲ್ಲಿ ಲಂಕೇಶರ ಮೊದಲ ಕಾದಂಬರಿ0ು ಶೀಷರ್ಿಕೆ0ುು ಬಿರುಕು ಎಂದಿರುವುದು ತುಂಬ ಧ್ವನಿಪೂರ್ಣವಾಗಿದೆ. ಈ ಪದದ ಎಲ್ಲ ಅರ್ಥಸಾಧ್ಯತೆಗಳನ್ನು ಸೂಚಿಸುವ ಈ ಕಾದಂಬರಿ ಮೊದಲು ಪ್ರಕಟವಾದದ್ದು ಸಾಗರದ ಅಕ್ಷರ ಪ್ರಕಾಶನದ ಮೂಲಕ- ನಲವತ್ತಾರು ವರುಷಗಳ ಹಿಂದೆ-1967ರಲ್ಲಿ. ಅದಾಗಲೇ'ನವ್ಯ' ಎಂದು ಗುರುತಿಸಲ್ಪಡುವ ಕನ್ನಡದ ಅನೇಕ  ಕೃತಿಗಳಲ್ಲಿ  ಈ ವಸ್ತು ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡಿತ್ತು. ಶಾಂತಿನಾಥ ದೇಸಾಯಿ ಅವರ ಮೊದಲ ಕಾದಂಬರಿ 'ಮುಕ್ತಿ'(1961), ಅನಂತಮೂತರ್ಿ0ುವರ 'ಪ್ರಶ್ನೆ' (1963), 'ಸಂಸ್ಕಾರ'(1965), ತೇಜಸ್ವಿ ಅವರ 'ಸ್ವರೂಪ'(1967), ಕುಸುಮಾಕರ ದೇವರಗೆಣ್ಣೂರ ಅವರ 'ನಾಲ್ಕನೆ0ು ಆ0ಾಮ'(1966)  ಮುಂತಾದ  ಕೃತಿಗಳು ಪ್ರಕಟವಾಗಿದ್ದವು. ಇದೇ ಕಾಲಾವಧಿ0ುಲ್ಲಿ (1966) ಶೌರಿ ಅವರ 'ಹಳದಿಮೀನು' (ಅನು:ಎ.ಕೆ.ರಾಮಾನುಜನ್) ಎಂಬ ಕಾದಂಬರಿ ಕನ್ನಡಕ್ಕೆ ಬಂದದ್ದು ಕಾಕತಾಳೀ0ುವೇನಲ್ಲ. ಮುಂದೆ 'ಬಿರುಕು' ಪ್ರಕಟಣೆ0ಾದ ಕೆಲವೇ ವರುಷಗಳಲ್ಲಿ ಗಿರಿ ಅವರ 'ಗತಿಸ್ಥಿತಿ' ಮುದ್ರಿತವಾದದ್ದು, ಇನ್ನೂ ತಡವಾಗಿ ಪ್ರಕಟವಾದ ಆದರೆ ಅಪ್ಪಟ ನವ್ಯಕಾದಂಬರಿ ಎನ್ನಿಸುವ ಸಿ. ಎನ್.ರಾಮಚಂದ್ರನ್ ಅವರ 'ಶೋಧ' ಹೊರಬಂದದ್ದು,  1970ರಲ್ಲಿ ಡಿ.ಎ.ಶಂಕರ್ ಅವರು ಕಾಮುವಿನ ಸುಪ್ರಸಿದ್ಧ ಕಾದಂಬರಿ 'ಔಟ್ಸೈಡರ್'ನ್ನು 'ಅನ್ಯ' ಎಂಬ ಹೆಸರಿನಲ್ಲಿ ಅನುವಾದಿಸಿದ್ದು ಈ ಎಲ್ಲ ಬೆಳವಣಿಗೆಗಳಿಗೆ ಪೂರಕವಾಗಿ0ೆು ಕಾಣುತ್ತದೆ. ವ್ಯಕ್ತಿಗೂ ಅವನ ಪರಂಪರೆ-ಸಂಸ್ಕೃತಿ-ಸಮಾಜಗಳಿಗೂ ಇರುವ ಬಿರುಕು;ಜೀವನಕ್ರಮಗಳ, ಮನೋಧರ್ಮಗಳ ನಡುವಣ ಬಿರುಕು; ವ್ಯಕ್ತಿ0ು ಅರಿವಿಗೂ ಇರವಿಗೂ ಇರುವ ಬಿರುಕು; ಪ್ರಜ್ಞೆ-ಪರಿಸರಗಳ ನಡುವಣ ಬಿರುಕು; ಪೀಳಿಗೆಗಳ ನಡುವಣ ಬಿರುಕು-ಹೀಗೆ ಬೇರೆಬೇರೆ ನಿಟ್ಟಿನಲ್ಲಿ  ಭಗ್ನಗೊಂಡ, ಭಂಗಗೊಂಡ, ಛಿದ್ರಗೊಂಡ ಮನುಷ್ಯಾವಸ್ಥೆ0ು ನಿರೂಪಣೆ0ುನ್ನು ಈ ಕೃತಿಸರಣಿ0ುಲ್ಲಿ ಕಾಣುತ್ತೇವೆ. ಈ ಎಲ್ಲ ಕೃತಿಗಳೂ ತಮ್ಮ ತಮ್ಮ ಸಮಾಜಗಳ, ಚರಿತ್ರೆಗಳ ಉಪಫಲಗಳೇ ಆಗಿದ್ದರೂ ಇವುಗಳಿಗೆ ಒಂದು ಮಟ್ಟದ ಸಾರ್ವತ್ರಿಕತೆ0ುೂ ಸಾಧ್ಯವಾಗಿರುವುದರಿಂದ ಅವು ನಮ್ಮ ಕಾಲಕ್ಕೂ ಪ್ರಸ್ತುತವೆನಿಸುತ್ತವೆ. ಹಲವು ದಶಕಗಳ ಕಾಲಾಂತರದಲ್ಲೂ ಅವುಗಳ ತಾಜಾತನ ಮಾಸಿದೆ ಎನಿಸುವುದಿಲ್ಲ. ಅಂದರೆ ಲಂಕೇಶರ 'ಬಿರುಕು'ತನ್ನಷ್ಟಕ್ಕೆ ಆಕರ್ಷಕವಾಗಿರುವಂತೆ ತಾನು ಹಾದು ಬಂದಿರುವ ಸಾಹಿತ್ಯ ಚಳುವಳಿ0ು ಒಟ್ಟು ಸಂದರ್ಭದಲ್ಲೂ ತನ್ನದೇ ಸ್ಥಾನವನ್ನು ಗಳಿಸಿಕೊಂಡಿದೆ. ಈ ಕಾದಂಬರಿ0ುನ್ನು ಓದಿದ ಗೆಳೆ0ುರು 'ಅದು ವಾಸ್ತವವೇ;ಸತ್ಯ-ಅಸತ್ಯಗಳಿಗೆ, ಸುಳ್ಳು, ನಿಜಗಳಿಗೆ ಕೊಟ್ಟ ಒಂದು ವ್ಯಂಗ್ಯ ರೂಪವೇ'ಎಂದೆಲ್ಲ ಕೇಳಿದರಂತೆ. 'ಇವೆಲ್ಲವೂ ಇರಬಹುದೆಂದು ನಾನು ಉತ್ತರಿಸಿದೆ'ಎಂದು ಅರಿಕೆ0ುಲ್ಲಿ ತಿಳಿಸುವ ಲಂಕೇಶರು ಇದು 'ಒಂದು ಪರಿಸರದಿಂದ ಇನ್ನೊಂದಕ್ಕೆ ತಲೆತಪ್ಪಿಸಿಕೊಂಡಾತ ತನ್ನಿಂದ ತಾನು ತಪ್ಪಿಸಿಕೊಳ್ಳಲು 0ುತ್ನಿಸಿ ಕೊನೆಗೆ ತನ್ನನ್ನು ತಾನು ಒಪ್ಪಿಕೊಳ್ಳುವ ಕತೆ' ಇರಬಹುದೆಂದು ಸೂಚಿಸುತ್ತಾರೆ. ಈ ಕಾದಂಬರಿ0ುು 'ಒಂದು ಜನಾಂಗದ ಕಣ್ಣು ತೆರೆಸಿದ ಗೋಪಾಲಕೃಷ್ಣ ಅಡಿಗರಿಗೆ ಪ್ರೀತಿಪೂರ್ವಕ'ವಾಗಿ ಅಪರ್ಿತವಾಗಿದೆ.
       ಈ ಕಾದಂಬರಿ0ು ಕೇಂದ್ರ ಪಾತ್ರ ಬಸವರಾಜ. ಅವನೊಬ್ಬ ಹಳ್ಳಿ0ು ಹುಡುಗ. ಇಂಗ್ಲಿಷ್ ಸಾಹಿತ್ಯದಲ್ಲಿ ಪಿ.ಎಚ್.ಡಿ. ಮಾಡಲು ಬೆಂಗಳೂರಿಗೆ ಬಂದಿದ್ದಾನೆ. ಹೊಸ ಪರಿಸರದಲ್ಲಿ ಅವನು ಒಂದು ರೀತಿ0ು ಸಾಂಸ್ಕೃತಿಕ ಆಘಾತಕ್ಕೆ ಒಳಗಾಗಿದ್ದಾನೆ. ಈ ಆಘಾತವನ್ನು ಅವನು ನಿಭಾಯಿಸುವ ಕ್ರಮ, ಅದರ ಪೇಚಾಟಗಳು, ಅದಕ್ಕಾಗಿ ಅವನು ಹೊಂಚಿಕೊಳ್ಳುವ ಉಪಾ0ುಗಳು, ಅದರಿಂದ ಅವನು ಹೇಳಬೇಕಾದ ಸುಳ್ಳುಗಳು, ಅವುಗಳಿಂದಾಗಿ ಹಾಸ್ಯಾಸ್ಪದನಾಗುವ ಸನ್ನಿವೇಶಗಳು ಕಾದಂಬರಿ0ು ಬಂಧವನ್ನು ಕಟ್ಟಿವೆ. ಅಷ್ಟೇ ಅಲ್ಲ, ತನ್ನ ಮುಗ್ಧತೆ, ಅಸಹಾ0ುಕತೆ ಮತ್ತು ಇಕ್ಕಟ್ಟಿನ ಸ್ಥಿತಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳಬ0ುಸುವವರಿಂದ ಅವನು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ. ಈ ಹೊಸ ಪರಿಸರದಲ್ಲಿ ತನ್ನ ಅಸ್ತಿತ್ವವನ್ನು ಶೋಧಿಸಿಕೊಳ್ಳಬೇಕಾಗಿದೆ. ಕಾದಂಬರಿ0ುು ಬಸವರಾಜನ ಉತ್ತಮಪುರುಷ ನಿರೂಪಣೆ0ುಲ್ಲಿದೆ. ಆದರೆ ಅದು ತೇಜಸ್ವಿ0ುವರ 'ಸ್ವರೂಪ'ದ ತಪ್ಪೊಪ್ಪಿಗೆ0ು ಧಾಟಿ0ುಲ್ಲಿಲ್ಲ . ಏಕಮುಖ ಸ್ವಗತದ ಬದಲು ಒಂದು ಬಗೆ0ು ನಾಟಕೀ0ುತೆ ಈ ಕಾದಂಬರಿ0ುಲ್ಲಿ ಕಂಡುಬರುತ್ತದೆ. ಒಂದು ದೃಷ್ಟಿಯಿಂದ ಅದು ಅನಂತಮೂತರ್ಿ0ುವರ 'ಪ್ರೀತಿ ಮೃತ್ಯು ಭ0ು'ಕ್ಕೆ ಹತ್ತಿರವಾಗಿದೆ. 'ಪ್ರೀತಿ ಮೃತ್ಯು ಭ0ು' 2012ರಲ್ಲಿ ಪ್ರಕಟವಾಗಿದ್ದರೂ ಅದು ರಚಿತವಾದದ್ದು 1959ರಲ್ಲಿ ಎಂಬುದು ಗಮನಾರ್ಹ. ಲಂಕೇಶ್ ಅದನ್ನು ಓದಿರಲಿಕ್ಕೆ ಸಾಧ್ಯವಿಲ್ಲ. ಆದರೆ ತನ್ನ ಮನೋಧರ್ಮದಲ್ಲಿ ಅದು  ಅನಂತಮೂತರ್ಿ0ುವರ ಈ ಕೃತಿಗೆ ಹತ್ತಿರವಾಗಿರುವುದು ಕುತೂಹಲಕಾರಿ0ಾಗಿದೆ. ಬಸವರಾಜನ ಉತ್ತಮಪುರುಷ ನಿರೂಪಣೆ0ುು ಅವನನ್ನು ಏಕಮುಖವಾಗಿ ಸಮಥರ್ಿಸಿಕೊಳ್ಳುವ ಧಾಟಿ0ುಲ್ಲಿ ಇಲ್ಲ ಎಂಬುದೂ ಗಮನಾರ್ಹವಾಗಿದೆ. ಅದು ತನ್ನ ಸುತ್ತಲ ಪರಿಸರದಲ್ಲಿ ಬಸವರಾಜ ಕಾಣುವ ಸುಳ್ಳು, ಹಿಂಸೆ, ಕೃತಕತೆ, ಡಾಂಭಿಕತೆಗಳನ್ನು ಬ0ುಲು ಮಾಡುವಂತೆ ಸ್ವತಃ ಬಸವರಾಜನ ಅಸ್ವಸ್ಥತೆ ಮತ್ತು ದೌರ್ಬಲ್ಯಗಳನ್ನೂ ಬ0ುಲು ಮಾಡುತ್ತದೆ. ಹೀಗಾಗಿ ನಿರೂಪಣೆ0ುಲ್ಲಿ ಆತ್ಮರತಿ-ಆತ್ಮಲೋಲುಪತೆ0ು ಅಂಶ ತೀರಾ ಕಡಿಮೆ. ಕೆಲವೊಮ್ಮೆ ಬಸವರಾಜನ ತೋರಿಕೆ0ು ಭಾವುಕತೆ0ುು ತನ್ನೆದುರಿನವರನ್ನು ಮಣಿಸುವ ಉಪಾ0ುವೂ ಆಗಿರುತ್ತದೆ ಎಂಬುದನ್ನು ಗಮನಿಸಿದರೆ ಲಂಕೇಶರಿಗೆ ತಮ್ಮ ಮಾಧ್ಯಮದ ಮೇಲಿದ್ದ ಸೃಜನಶೀಲ ನಿ0ುಂತ್ರಣದ ಪರಿ ನಮ್ಮ ಅರಿವಿಗೆ ಬರುತ್ತದೆ. ಒಂದು ಘಟ್ಟದಲ್ಲಿ ಬಸವರಾಜನು ಪ್ರೊಫೆಸರ್ ರಂಗ0್ಯುನವರ ಮುಂದೆ ತನ್ನ ಅಂತರಂಗವನ್ನು ಬಿಚ್ಚಿಡುವ ಧಾಟಿ0ುಲ್ಲಿ ಆಡುವ ಈ ಮಾತುಗಳನ್ನು  ಕೇಳಬೇಕು: ನನ್ನ ಜೀವನದಲ್ಲಿ ಅದೊಂದೇ ದುಃಖ ಸಾರ್. ಅವಳಿಗೆ ಬೇಕಾದಾಗ ನಾನು ಹತ್ತಿರ ಇರೋಕಾಗಲ್ಲ. ಇಲ್ಲಿಗೇ ಬಂದು ಬಿಡವ್ವ ಅಂದೆ. ಅವಳಿಂದ ಇಲ್ಲಿ ಇರೋಕಾಗಲ್ಲ. ಬೇಸರ ಅಂತ ಚಡಪಡಿಸಿ ಅಳ್ತಿತರ್ಾಳೆ. ನಾನೇನು ಮಾಡ್ಳಿ ಹೇಳಿ. ನನ್ನವ್ವನಿಗೆ ಊರು ಬೇಕು. ಅಲ್ಲಿ0ು ಧೂಳು, ಅನ್ಯೋನ್ಯತೆ, ದನಕರು, ಹೊಲಗದ್ದೆ ಆಕೆಗೆ ಬೇಕು. ನನಗೆ ಅಷ್ಟರಲ್ಲಿ ತೃಪ್ತಿ ಆಗೋಲ್ಲ. ಈಲಿ0ುಟ್ ಹೇಳೋ ಹಾಗೆ 'ಎಕ್ಸ್ಪ್ಲೋರ್' ಮಾಡೋಕೆ ನನಗಿಷ್ಟ. ಆದರೆ 0ಾವುದು ಹೆಚ್ಚು ಅಂತ ಹ್ಯಾಗೆ ಹೇಳೋದು.ಒಂದೊಂದು ಸಲ ನಾನು ಓದಿದ್ದೇ ತಪ್ಪು ಅನ್ಸುತ್ತೆ. ನನಗೆ ನನ್ನ ಭಾಷೇನೆ ಮರೆತು ಹೋಗ್ತಿದೆ. ನನ್ನವ್ವ ನನಗಾಗಿ ಎಷ್ಟು ಕಷ್ಟಪಟ್ಳು! ಅದೆಷ್ಟು ಸಲ 0ಾ0ರ್ಾರನ್ನು ಬೇಡಿ ಹಣ ಕಳಿಸಿದ್ಲೋ. ಇನ್ನೂ ನೆನಪಿದೆ:ನಾನು ಚಿಕ್ಕವನಿದ್ದಾಗ ವಿಪರೀತ ಜ್ವರ ಬಂದಿತ್ತು. ಊರಿಂದ ಹತ್ತು ಮೈಲಿ ಫಾಸಲೆ0ುಲ್ಲಿ 0ಾರೂ ಡಾಕ್ಟರೇ ಇರಲಿಲ್ಲ. ಮಳೆ0ುಲ್ಲಿ ಹರಕಲು ಕೊಡೆ ಹಿಡಕೊಂಡು ಶಿವಮೊಗ್ಗೆಗೆ ಹೋಗಿ ಎರಡು ಡೋಸ್ ಔಷದಿ ತತರ್ಿದ್ಲು ನನ್ನವ್ವ. ನನಗೆ ಖಾಯಿಲೇನೇ ಇಲ್ಲ ಅಂತ ತೋರಿಸೋಕೆ ನಾನು ಓಡಾಡ್ತಿದ್ರೆ ನನ್ನನ್ನು ಹಿಡಿದು ತೊಡೇ ಮೇಲೆ ಹಾಕಿಕೊಂಡು ತಟ್ಟುತ್ತಾ ಮಲಗಿಸಿ ಮತ್ತೆ ಔಷಧಿಗೆ ಓಡ್ತಿದ್ಲು. ಇದನ್ನೆಲ್ಲ ನೆನೆದ್ರೆ... ಈ ಮಾತುಗಳನ್ನು ಆ ಪ್ರಸಂಗದ ಒಟ್ಟೂ ಸಂದರ್ಭದಲ್ಲಿಟ್ಟು ನೋಡಿದರೆ ಲಂಕೇಶರ ಬರವಣಿಗೆ0ು ವಿಧಾನ ಸ್ಪಷ್ಟವಾಗುತ್ತದೆ. ರಂಗ0್ಯುನ ಮುಂದೆ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡು ಆ ಪೇಚಿನಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಳ್ಳು ಹೇಳಿ ರಂಗ0್ಯುನನ್ನು  ಒಲಿಸಿಕೊಳ್ಳುವ ಪ್ರ0ುತ್ನದಲ್ಲಿದ್ದಾಗ ಬಸವರಾಜ ಮೇಲಿನ ಮಾತುಗಳು ಹೇಳುವುದು. ಬಸವರಾಜನ ಈ ಮಾತುಗಳಲ್ಲಿ0ುೂ ಸತ್ಯದ ಪ್ರಮಾಣವೆಷ್ಟು, ಸುಳ್ಳಿನ ಭಾಗವೆಷ್ಟು ಎಂದು ಓದುಗ ವಿಸ್ಮಿತನಾಗುತ್ತಿರುವಂತೆ0ೆು ಆ ಮಾತುಗಳು ರಂಗ0್ಯುನ ಮೇಲೆ ಮಾಡುವ ಪರಿಣಾಮಗಳೂ ಕುತೂಹಲ ಹುಟ್ಟಿಸುತ್ತವೆ. ಬಸವರಾಜನ ಮಾತುಗಳಿಂದ ರಂಗ0್ಯುನ 'ದುಃಖ'ವೂ ಜಾಗೃತಗೊಳ್ಳುತ್ತದೆ. 'ದುಃಖದ ವಾತಾವರಣ'ವೊಂದು ಸೃಷ್ಟಿ0ಾಗಿ ಗುರು-ಶಿಷ್ಯರಿಬ್ಬರೂ ದುಃಖವನ್ನು ಸುಖಿಸುತ್ತಾರೆ. ಬಸವರಾಜನ ಅವಸ್ಥೆ0ುನ್ನಾಗಲೀ, ಮಾತುಗಳನ್ನಾಗಲೀ ಅಲ್ಲಗೆಳೆ0ುದೆ0ೆು ಒಂದು ಹಾಸ್ಯಾಸ್ಪದ, ಅಸಂಗತ ಸನ್ನಿವೇಶ ಸೃಷ್ಟಿ0ಾಗಿ ಬಿಡುತ್ತದೆ.
      ರಂಗ0್ಯುನನ್ನು 'ನನ್ನ ತಂದೆ0ು ಥರ' ಎಂದು ಹೊಗಳುತ್ತ, ಅವನ ಇಂಗ್ಲಿಷ್, ಅವನ ಲೇಖನಗಳ ಬಗ್ಗೆ ಮೆಚ್ಚುಗೆ ಸೂಸುತ್ತ ಅವನನ್ನು 'ಗುಡ್ ಹ್ಯೂಮರ್'ನಲ್ಲಿಇಡುವ ಬಸವರಾಜನ ಪ್ರ0ುತ್ನಗಳು; ರಂಗ0್ಯುನ ಹೆಂಡತಿ0ುನ್ನು 'ನನ್ನ ತಾಯಿ0ು ಥರ' ಎಂದು ಕರೆ0ುುತ್ತ ಆಕೆ0ು ಆಕ್ರಮಣಗಳಿಂದ ಬಚಾವಾಗಲು ಅವನು ಹೂಡುವ ಉಪಾ0ುಗಳು; ಅವಳ ಗೆಳತಿ ಸುವರ್ಣಳ ಕಾ0ರ್ುತಂತ್ರಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಾಡುವ ಸಾಹಸಗಳು ; ರಂಗ0್ಯುನ ಮಗಳು ಶಾಂತಾಳ ಮೆಚ್ಚುಗೆ ಸಂಪಾದಿಸಲು ತನ್ನ ಗ್ರಾಮ್ಯಭಾಷೆ0ುನ್ನು ಅವಳ ಮನರಂಜನೆಗೆಂಬಂತೆ ಆಡಿತೋರಿಸುವುದು; ಇಷ್ಟವಿಲ್ಲದಿದ್ದರೂ ಆ ಮನೆ0ು ರಿವಾಜುಗಳನ್ನು ಸಹಿಸಿಕೊಳ್ಳುವುದು; ಅದರಲ್ಲಿ ಪಾಲ್ಗೊಳ್ಳುವುದು-ಇಲ್ಲೆಲ್ಲಾ ಬಸವರಾಜನ ಹಾಸ್ಯಾಸ್ಪದ ಸ್ಥಿತಿ ಮಾತ್ರವಲ್ಲ, ಎರಡು ಜೀವನಕ್ರಮಗಳ, ಮನಸ್ಥಿತಿಗಳ ನಡುವಣ ಗಾಢವ್ಯತ್ಯಾಸಗಳು ಎದ್ದುಕಾಣುವಂತಿವೆ. ಹೊಸ ಪರಿಸರಕ್ಕೆ ತನ್ನನ್ನು ಬಲಾತ್ಕಾರವಾಗಿ ಒಗ್ಗಿಸಿಕೊಳ್ಳಲು   ಬಸವರಾಜ ಪಡುವ   ಪ್ರ0ುತ್ನಗಳಿಗೆ ಈಗ ವೈ0ುಕ್ತಿಕತೆ0ುನ್ನು ಮೀರಿದ   ಸಾಂಸ್ಕೃತಿಕ ಆ0ಾಮಗಳು ಕೂಡಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ಈ ಬರವಣಿಗೆ0ು ಹೆಚ್ಚಳವಾಗಿದೆ. ಬಸವರಾಜ ಮತ್ತು ಅವನ ರೂಮಿನ ಮಾಲೀಕ ಗಂಗಪ್ಪರ ನಡುವಣ ಮುಖಾಮುಖಿ0ುೂ ಕ್ರಮೇಣ ಎರಡು ಆದ್ಯತೆಗಳ, ಆಶೋತ್ತರಗಳ ನಡುವಣ ಸಂಘರ್ಷವಾಗಿ ಬೆಳೆ0ುುವುದರಲ್ಲಿ ಈ ಕಾದಂಬರಿ0ುು ತನ್ನ ತೋರಿಕೆ0ು ಲಘುತನವನ್ನು ಮೀರಿದ ಜೀವನ ಜಿಜ್ಞಾಸೆ0ುತ್ತ ಹೊರಳಿಕೊಳ್ಳುವಂತಿದೆ. ಗಂಗಪ್ಪನಿಗೆ ಹಣ ಮುಖ್ಯ; ಅದು ತರುವ ಸುಖಗಳು ಮುಖ್ಯ. ಅದಕ್ಕಾಗಿ ಅವನಿಗೆ 'ಕಾಂಟ್ಯಾಕ್ಟ್ಸ್' ಮುಖ್ಯ. ತನ್ನ ಜಾತಿ0ುವನು, ತನ್ನ ಅಳಿ0ುನಾಗಬಲ್ಲವನು ಎಂದು ಬಡವನಾದ ಬಸವರಾಜನನ್ನು ಒಲಿಸಿಕೊಳ್ಳಲು ಒದ್ದಾಡುವ ಗಂಗಪ್ಪನು  0ುಶಸ್ಸಿಗಾಗಿ ಜಾತಿ0ುನ್ನೂ ದಾಟಬಲ್ಲವನೆಂಬ ಸಾಧ್ಯತೆಯಿಂದ ಬಸವರಾಜ ವಿಸ್ಮಿತನಾಗುತ್ತಾನೆ. ತಾನು ಎಲ್ಲವನ್ನೂ ವಿರೋಧಿಸಿಕೊಂಡು, ಎಲ್ಲರ ಜೊತೆ ಜಗಳವಾಡಿಕೊಂಡು, ಎಲ್ಲರಿಂದ ಆಕ್ರಮಿತನಾಗಿ ಪಾಡು ಪಡುತ್ತಿದ್ದರೆ ತನ್ನ ಗೆಳೆ0ುನಾದ ಆನಂದಮೂತರ್ಿ0ುು ಈ ಸಂಗತಿಗಳನ್ನೇ ತನ್ನ ಅನುಕೂಲಕ್ಕೆ ಮಾರ್ಪಡಿಸಿಕೊಳ್ಳುವ ಜಾಣ್ಮೆಯಿಂದ ಬಸವರಾಜನಿಗೆ ಅವನ ಬಗ್ಗೆ ತಿರಸ್ಕಾರ ಹುಟ್ಟುವಂತೆ ಅಸೂ0ೆು0ುೂ ಹುಟ್ಟುತ್ತದೆ ಎಂಬುದನ್ನು ಗಮನಿಸಬೇಕು.
ಬಿರುಕು ಮೇಲುನೋಟಕ್ಕೆ ಹಳ್ಳಿಯಿಂದ ಬೆಂಗಳೂರಿಗೆ ಬಂದು ಹೊಸಪರಿಸರಕ್ಕೆ ಹೊಂದಿಕೊಳ್ಳಲು ಒದ್ದಾಡುತ್ತಿರುವ 0ುುವಕನೊಬ್ಬನ ಕಥೆ. ಆದರೆ ಇವನ ಮೂಲಕ ಬೆಂಗಳೂರಿನ ಮೇಲ್ವರ್ಗದ ಜೀವನ ಕ್ರಮದ ಕೆಲವು ಮಾದರಿಗಳು; ರಾಜಕಾರಣ ಮತ್ತು ಆಡಳಿತಶಾಹಿ0ು  ನೋಟಗಳು; 0ುಶಸ್ಸಿನ ಹಲವು ಬಗೆಗಳು ಅನಾವರಣಗೊಳ್ಳುತ್ತ ಒಂದು ಸಂಕೀರ್ಣ ಜೀವನ ಸಂದರ್ಭದ ಪ್ರತಿಮಾ ಸರಣಿ ಈ ಕಾದಂಬರಿ0ುಲ್ಲಿ ಸೃಷ್ಟಿ0ಾಗುತ್ತಹೋಗುತ್ತದೆ. ಬಿರುಕು ವಾಸ್ತವಮಾರ್ಗಕ್ಕೆ ಸೇರಿದ ಕಾದಂಬರಿ0ುಲ್ಲ ಎಂದು ವಿವರಿಸುವ ಅಗತ್ಯವಿಲ್ಲ. ಹಾಗಾಗಿ ಕೆಲವು ನಾಟಕೀ0ು ಘಟನೆಗಳ ಮೂಲಕ-ಅದೂ ಬಸವರಾಜ ಸ್ವತಃ ಪಾಲ್ಗೊಳ್ಳುವ ಪ್ರಸಂಗಗಳ ಮೂಲಕ ಮತ್ತು ಅವನು ಪರಿಭಾವಿಸುವಂತೆ-'ಅರ್ಬನ್' ಎಂದು ಹೇಳಬಹುದಾದ  ಜೀವನಕ್ರಮವೊಂದನ್ನು ಲಂಕೇಶರ ಕಾದಂಬರಿ ಕೆಲವು ಸೂಚನೆಗಳು, ಸಂಕೇತಗಳು ಮತ್ತು ಪ್ರತಿಮೆಗಳ ಮೂಲಕ ಕಟ್ಟಿಕೊಡುತ್ತದೆ. ಗ್ರಾಮೀಣ 'ಭಾರತ'ವು ಈ 'ಇಂಡಿ0ಾ'ವನ್ನು  ಪ್ರವೇಶಿಸುವಲ್ಲಿನ ತೊಡಕುಗಳನ್ನು, ಇಕ್ಕಟ್ಟುಗಳನ್ನು ನಿರೂಪಿಸುವ ಕಾದಂಬರಿ ಇದು ಎಂದು ಹೊಳೆದರೆ ಈ ರಚನೆ0ು ಮಹತ್ವಾಕಾಂಕ್ಷೆ ನಮ್ಮ ಅರಿವಿಗೆ ಬರುತ್ತದೆ. ಇದು ವಾಸ್ತವವೋ ಭ್ರಮೆ0ೋ ಎಂದು ಅನ್ನಿಸುವ ಪ್ರಸಂಗವೊಂದರಲ್ಲಿ ಬಸವರಾಜನು ಹೊಟೆಲ್ಲಿನಲ್ಲಿ ನಾ0ುಕ ಮತ್ತು ಅವನ ಗೆಳೆ0ುರಿಂದ ಅನುಭವಿಸುವ ಅಕಾರಣ ಹಿಂಸೆ ಮತ್ತು ಮುಜುಗರಗಳು ಇನ್ನೂ ನಮಗೆ ಅರ್ಥವಾಗದ, ಮುಖಹೀನ ಆದರೆ ಅನುಭವಕ್ಕೆ ಮಾತ್ರ ಬರುವ, ನಗರ ಜೀವನಕ್ರಮದಲ್ಲೇ ಅಂತರ್ಗತವಾಗಿದೆ ಎನ್ನಿಸುವಂಥ ಕ್ರೌ0ರ್ುದ ದರ್ಶನ ಮಾಡಿಸುತ್ತದೆ. ಈ ಕಾದಂಬರಿ0ು ಅಂತ್ಯವೂ ಒಂದು ಸಾಂಪ್ರದಾ0ುಕ ಅಂತ್ಯವೆಂಬಂತೆ ತೋರುವುದಿಲ್ಲ. ಬಸವರಾಜನು ಬೆಂಗಳೂರಿಗೆ ಬಲಿ0ಾಗುತ್ತಾನೋ, ತನ್ನ ಅಗತ್ಯಕ್ಕೆ ತಕ್ಕಂತೆ ಬೆಂಗಳೂರನ್ನೇ ಬಗ್ಗಿಸಿಕೊಳ್ಳುತ್ತಾನೋ ಅಥವಾ ದ್ವಂದ್ವ-ದುಗುಡಗಳ ಶಾಶ್ವತ ಸ್ಥಿತಿ0ುಲ್ಲೇ ಇರುತ್ತಾನೋ ಎಂಬ ಮುಕ್ತ ನಿರೀಕ್ಷೆ0ುಲ್ಲಿ ಕಾದಂಬರಿ ಮುಗಿ0ುುತ್ತದೆ.
                            *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
 


No comments:

Post a Comment