ಗುಲ್ವಾಡಿ ವೆಂಕಟರಾವ್ ಅವರ ಇಂದಿರಾಬಾಯಿ
ಕನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಹೆಸರಾಗಿರುವ ವೆಂಕಟರಮಣಶಾಸ್ತ್ರೀ ಸೂರಿ ಅವರ ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು 1887ರಲ್ಲಿ ಪ್ರಕಟವಾಯಿತು. ಅದಾದ ಹನ್ನೆರಡು ವರುಷಗಳ ನಂತರ 1899ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾವ್ ಅವರ ಇಂದಿರಾಬಾಯಿ ಕನ್ನಡದ ಮೊದಲ 'ಸಾಮಾಜಿಕ' ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎರಡೂ ಕೃತಿಗಳ ನಡುವಣ ಸಾಮ್ಯವೂ ಕುತೂಹಲಕರವಾಗಿದೆ. 'ವಿವಾಹ' ಎಂಬ ಸಾಮಾಜಿಕ ಸಂಸ್ಥೆ0ುನ್ನು ವಿಮಶರ್ೆಗೆ ಒಳಪಡಿಸುವ ಮೂಲಕ ಈ ಎರಡೂ ಕೃತಿಗಳು ಆಗಿನ ಕಾಲದ ಹಿಂದೂ ಸಮಾಜ-ಸಂಸ್ಕೃತಿ-ಜೀವನಕ್ರಮಗಳನ್ನು ಉಗ್ರವಾದ ವಿಮಶರ್ೆಗೆ ಗುರಿಪಡಿಸುತ್ತವೆ. ವಸಾಹತುಶಾಹಿ ತಂದ ಹೊಸ ಸಂಸ್ಥೆಗಳು, ಮೌಲ್ಯಗಳು ಮತ್ತು ಆಶೋತ್ತರಗಳು ಹಾಗೂ ನಮ್ಮ ಸಮಾಜದ ಒಳಗೇ ಹುಟ್ಟುತ್ತಿದ್ದ ಅತೃಪ್ತಿ-ಅಸಹನೆ-ಬಿಡುಗಡೆ0ು ವಾಂಛೆ ಇವೆರಡರ ಸಂಗಮದಿಂದ ಹುಟ್ಟಿದ ಸುಧಾರಣಾ ಮನೋಭಾವ ಈ ಎರಡೂ ಕೃತಿಗಳ ಸಂವೇದನೆ ಮತ್ತು ಸ್ವರೂಪಗಳನ್ನು ಗಾಢವಾಗಿ ಪ್ರಭಾವಿಸಿದೆ. 'ಕನ್ಯಾವಿಕ್ರ0ು'ದ ಪದ್ಧತಿಗೆ ಬಲಿ0ಾಗಿ ಕಿರಿ0ು ವ0ುಸ್ಸಿನಲ್ಲೇ ವಿಧವೆ0ಾದ ಒಬ್ಬಳು ಆ ನಂತರ ಮತ್ತೊಬ್ಬನಿಗೆ ಬಸುರಾಗಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಿಕೊಂಡು ಶಿಕ್ಷೆಗೆ ಒಳಗಾಗುವ ದುರಂತವನ್ನು ವೆಂಕಟರಮಣಶಾಸ್ತ್ರಿ0ುವರ ನಾಟಕ ಕಟ್ಟಿಕೊಡುತ್ತದೆ. ಈ ನಾಟಕದ ಸಾವಿತ್ರಿ0ುು ಹವ್ಯಕ ಬ್ರಾಹ್ಮಣ ಸಮುದಾ0ುಕ್ಕೆ ಸೇರಿದವಳು. ಅವಳ ಸಮಸ್ಯೆಗೆ ಆ ಸಮುದಾ0ುದ ಧಾಮರ್ಿಕ ಕೇಂದ್ರಗಳಾದ ಮಠಮಾನ್ಯಗಳಲ್ಲಿ ಪರಿಹಾರವಿಲ್ಲ;ಆಧುನಿಕ ಶಿಕ್ಷಣದಲ್ಲಿ ಇದಕ್ಕೊಂದು ಪರಿಹಾರವಿರಬಹುದು ಎಂಬ ಧ್ವನಿ ನಾಟಕದಿಂದ ಹೊರಡುತ್ತದೆ. ಈ ಸಮುದಾ0ುದ ಸ್ವರೂಪವನ್ನು ಹೊರಗಿನಿಂದ ನೋಡಿ ವಿಮಶರ್ಿಸುವ ನ್ಯಾ0ಾಧೀಶನ ಮಾತುಗಳಲ್ಲಿ ನಾಟಕಕಾರರ ಸುಧಾರಣಾಪರವಾದ ವಿಚಾರಗಳ ಪ್ರತಿಧ್ವನಿ0ೆು ಕೇಳಿಸುತ್ತದೆ. ಪಾತ್ರಗಳ ಸಂಭಾಷಣೆಗಳಲ್ಲಿ ಆ ಸಮುದಾ0ುಕ್ಕೆ ಹತ್ತಿರವಾದ ಭಾಷೆ0ು ಪ್ರ0ೋಗ, ಆ ಪರಿಸರದಲ್ಲಿದ್ದ ಇತರ ಭಾಷೆಗಳ 0ುಥೋಚಿತ ಬಳಕೆ, ಅವರ ದೈನಂದಿನ ಸಾಮಾಜಿಕ, ಆಥರ್ಿಕ ಸಮಸ್ಯೆಗಳನ್ನು ಕುರಿತ ಜಿಜ್ಞಾಸೆ ಇವುಗಳ ಮೂಲಕ ವಾಸ್ತವವಾದವು ನಮ್ಮ ಸಾಹಿತ್ಯದೊಳಗೆ ಪ್ರವೇಶ ಮಾಡಲಾರಂಭಿಸಿದ್ದ ಮತ್ತು ಅದಕ್ಕಾಗಿ ಹೊಸಪ್ರಕಾರವೊಂದನ್ನು ಶೋಧಿಸಿಕೊಂಡು ಹೋಗುವ ಪ್ರ0ೋಗಶೀಲತೆ ಇಲ್ಲಿ ಎದ್ದುಕಾಣುವಂತಿದೆ. ಇವರಲ್ಲಿ ಇಂಥ 0ೋಗ್ಯ ವಿಚಾರಶಕ್ತಿ ಬರುವುದಕ್ಕೆ ವಿದ್ಯಾಪ್ರಸಾರವು ಏನೇನೂ ಇರುವುದಿಲ್ಲ. ವಿದ್ಯವೆಂದರೆ ಎಲ್ಲಾದರೂ ಭಟ್ಟ, ಭಿಕ್ಷುಕರು ಬಾಯಿಂದ ಹೇಳಿ ದುಡ್ಡು ಕೇಳುವ ಮಂತ್ರತಂತ್ರಗಳೆಂದು ತಿಳಿ0ುುತ್ತಾರೆ ಮತ್ತು 0ೋಗ್ಯ ದಾನಧರ್ಮಗಳೆಂದರೆ ಫಕ್ತ ದಕ್ಷಿಣೇ, ದೇಶಾವರ, ಪೂಜೆ ಪುನಸ್ಕಾರ ಇವುಗಳೇ ಸರಿ0ೆುಂದು ತಿಳಿ0ುುತ್ತಾರೆ.. ಎಂದು ಆಂಗ್ಲ ನ್ಯಾ0ಾಧೀಶ ತನ್ನ ತೀಪರ್ಿನಲ್ಲಿ ಪ್ರಸ್ತಾಪಿಸುತ್ತಾನೆ.ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ದಂತೆ ಇಂದಿರಾಬಾಯಿ ಕೂಡ ಒಂದು ಸಣ್ಣ ಸಮುದಾ0ುದ ಕಥೆ0ೆು ಆಗಿದೆ. ಭಾಷಾ ಬಳಕೆ, ಹೊಸಪ್ರಕಾರದ ಹುಡುಕಾಟ ಮತ್ತು ಆಧುನಿಕತೆ0ುತ್ತ ನೋಟ-ಈ ನೆಲೆಗಳಲ್ಲಿ0ುೂ ಈ ಕಾದಂಬರಿ0ುು ಸ್ಥೂಲವಾಗಿ ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನದ ಮುಂದುವರಿಕೆ0ುಂತೆ0ೆು ಕಂಡರೆ ಆಶ್ಚ0ರ್ುವಿಲ್ಲ. ಇಲ್ಲಿ0ುೂ 'ಕಮಲಪುರ'ದ ಸಾರಸ್ವತ ಸಮಾಜದ ಕೆಲವು ರೀತಿ ನೀತಿಗಳನ್ನು ವಿಡಂಬಿಸಿ ವಿಮಶರ್ಿಸುವ, ಅದರೊಳಗೇ ಸಂಭವಿಸುತ್ತಿರುವ ಪಲ್ಲಟಗಳನ್ನು ದಾಖಲಿಸುವ ಆಶ0ುವನ್ನು ಇಟ್ಟುಕೊಂಡಿರುವ ಗುಲ್ವಾಡಿ ವೆಂಕಟರಾ0ುರ ಕಾದಂಬರಿ0ುು ಆ ಮೂಲಕ ಆ ಕಾಲದ ಭಾರತ ಉಪಖಂಡದಲ್ಲಿ ಬದಲಾಗುತ್ತಿದ್ದ ಇತಿಹಾಸದ ನಡೆಗೇ ಒಡ್ಡಿದ ರೂಪಕದಂತಿದೆ. ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳದೆ ಅಲ್ಲಿ ಸಾವಿತ್ರಿ ದುರಂತವನ್ನಪ್ಪಿದ್ದರೆ, ಸುಧಾರಣೆ0ು ಗಾಳಿ ಬೀಸಿ ಇಲ್ಲಿ ಇಂದಿರಾಬಾಯಿ0ು ಬಾಳು ಸುಖಾಂತವಾಗುತ್ತದೆ. ವಿವಾಹವು ಅಲ್ಲಿ ಪ್ರಹಸನವಾಗಿದ್ದರೆ ಅದು ಇಲ್ಲಿ ಆ ಘಟ್ಟವನ್ನು ದಾಟಿ ವಿಧವಾ ಮರುವಿವಾಹದ- ಆ ಕಾಲಕ್ಕೆ, ಆ ಸಮಾಜಕ್ಕೆ ಕ್ರಾಂತಿಕಾರಕ ಎನ್ನಬಹುದಾದ- ಹಂತವನ್ನು ತಲುಪುತ್ತದೆ. ಹಾಗೆಂದು ಸಂಪೂರ್ಣ ಆಧುನೀಕರಣ ಅಥವಾ ಪಾಶ್ಚಾತ್ಯೀಕರಣದ ಪ್ರತ್ಯಕ್ಷ ಅಥವಾ ಪರೋಕ್ಷ ಅಜೆಂಡಾ ಈ ಎರಡೂ ಕೃತಿಗಳಲ್ಲಿ ಕಾಣುವುದಿಲ್ಲ. ಪರಂಪರೆ0ುಲ್ಲಿ ಉಳಿಸಿಕೊಳ್ಳಬೇಕಾದದ್ದನ್ನು ಉಳಿಸಿಕೊಂಡು, ತ್ಯಜಿಸಬೇಕಾದದ್ದನ್ನು ತ್ಯಜಿಸಿ, ಹಾಗೆ0ೆು ಆಧುನಿಕತೆಯಿಂದ ನಮಗೆ ಬೇಕಾದದ್ದನ್ನು ಪಡೆದುಕೊಂಡು ಒಟ್ಟಿನಲ್ಲಿ ಇನ್ನಷ್ಟು ಹಸನಾದ, ಆರೋಗ್ಯಪೂರ್ಣ ಬದುಕನ್ನು ರೂಪಿಸಿಕೊಳ್ಳಬೇಕಾದ ಅಗತ್ಯವನ್ನು ಈ ಎರಡೂ ಕೃತಿಗಳು ಸ್ಥೂಲವಾಗಿ ಆಶಿಸುತ್ತವೆ ಎಂದು ಹೇಳಬಹುದು. ಈ ಆಶ0ುವೇ ಆಧುನಿಕ ಕನ್ನಡ ಸಾಹಿತ್ಯದ ಮೂಲ ಸಂವೇದನೆ0ುನ್ನು ಪ್ರಭಾವಿಸಿದೆ ಎಂಬುದನ್ನು ಗಮನಿಸಿದರೆ ಅವುಗಳ ಐತಿಹಾಸಿಕ ಮಹತ್ವ ಹೊಳೆ0ುುತ್ತದೆ.
ಇಂದಿರಾಬಾಯಿ ಕಾದಂಬರಿ0ುು ಪಾಶ್ಚಾತ್ಯ ಪ್ರಭಾವಕ್ಕೆ ಎಷ್ಟು ಋಣಿ0ಾಗಿದೆ0ೋ ಅಷ್ಟೇ ತನ್ನ ಪರಂಪರೆ0ು ಅದ್ಭುತರಮ್ಯ ಕಥಾನಕಗಳಿಗೂ ಋಣಿ0ಾಗಿದೆ. ಹಾಗೆ ನೋಡಿದರೆ ಅದು ತನ್ನ ಪರಂಪರೆ0ು ಹಿಂದಿನ ಅನೇಕ ಕಥನ ಮಾದರಿಗಳ ಮುಂದುವರಿಕೆ0ೆು ಆಗಿದೆ: ವಿಂಧ್ಯಾಚಲದ ದಕ್ಷಿಣ ಪ್ರಾಂತ್ಯದಲ್ಲಿ ರೋಹಿಣೀ ನದೀ ತೀರದಲ್ಲಿ ಕಮಲಪುರವೆಂಬೊಂದು ವಿಸ್ತಾರವಾದ ನಗರವಿರುವುದು. ಈ ನಗರವು ಪ್ರಾಚೀನ ಕಾಲದಿಂದಲೇ ಚರಿತ್ರೆಗಳಲ್ಲಿ ಪ್ರಸಿದ್ಧಿ0ುನ್ನು ಹೊಂದಿರುವುದಲ್ಲದೆ ಘನತರವಾದ ಅನೇಕ ಭವನಗಳು, ದೇವಾಲ0ುಗಳು, ಅಗ್ರಹಾರಗಳು, ಕೋಟೆಕೊತ್ತಲುಗಳು, ನ್ಯಾ0ುಸ್ಥಾನಗಳು, ತರತರದ ಫಲವೃಕ್ಷಗಳ ತೋಟಗಳು, ವಿಶಾಲವಾದ ರಾಜಮಾರ್ಗಗಳು, ಸೇತುವೆಗಳು ಇವೇ ಮೊದಲಾದುವುಗಳಿಂದ ಶೋಭಾ0ುಮಾನವಾಗಿರುವುದು. ಬ್ರಹ್ಮ, ಕ್ಷತ್ರಿ0ು, ವೈಶ್ಯ, ಶೂದ್ರರೆಂಬೀ ನಾಲ್ಕು ವರ್ಣದ ಜನರು ಸಹ ಈ ನಗರದಲ್ಲಿ ವಾಸಿಸಿದ್ದು ಬೇರೆಬೇರೆ ಮತಾನು0ಾಯಿಗಳು ತಂತಮ್ಮ ವೃತ್ತಿಗಳನ್ನಾಚರಿಸುತ್ತಾ ನಗರದ ಬೇರೆ ಬೇರೆ ದಿಕ್ಕುಗಳಲ್ಲಿ ವಾಸವಾಗಿರುವರು. ಈ ನಗರದಲ್ಲಿ ಅಗ್ರಹಾರದ ಕೇರಿ ಎಂಬಲ್ಲಿ ಹಂಪೆ ಭೀಮರಾ0ುನೆಂಬ ಒಬ್ಬ ಗೃಹಸ್ಥನಿರುವನು ಎಂದು ಕಾದಂಬರಿ ಪ್ರಾರಂಭವಾಗುತ್ತದೆ. ಕಾದಂಬರಿ0ು ಮೊದಲ ಕಾಲುಭಾಗವು ಈ ಭೀಮರಾ0ು ಮತ್ತು ಅವನ ಹೆಂಡತಿ ಅಂಬಾಬಾಯಿ0ು ಆಚಾರ-ಅನಾಚಾರ-ದುರಾಚಾರಗಳ ನಿರೂಪಣೆ0ೆು ಆಗಿದೆ. ಅವರ ಬದುಕಿನ ಮೂಲಕ ಲೇಖಕರು ಸಾಂಪ್ರದಾ0ುಕ ಎಂದು ಹೇಳಬಹುದಾದ ಒಂದು ಜೀವನ ಮಾದರಿ0ುನ್ನು ಉಚಿತವಾದ ವಿವರಗಳಲ್ಲಿ ಕಟ್ಟಿಕೊಡಲು ಪ್ರ0ುತ್ನಿಸಿದ್ದಾರೆ. ಈ ದಂಪತಿಗಳು ಒಂದು ನಿಟ್ಟಿನಲ್ಲಿ ತಮ್ಮ ಕುಲಾಚಾರಗಳನ್ನು ವೈಭವ0ುುತವಾಗಿ ನಡೆಸುತ್ತಾ, ತಮ್ಮ ಸಮಾಜದ ಇತರರಲ್ಲಿ0ುೂ, ತಮ್ಮ ಮಠದ ಶ್ರೀಗಳವರಲ್ಲಿ0ುೂ ಗೌರವಕ್ಕೆ ಪಾತ್ರರಾಗಿರುತ್ತಾರೆ. ಇನ್ನೊಂದು ನಿಟ್ಟಿನಲ್ಲಿ ಈ ದಂಪತಿಗಳ ಕತೆ0ುು ಶೇಕ್ಸ್ಪಿ0ುರನ 'ಮ್ಯಾಕ್ಬೆತ್' ಕತೆ0ುನ್ನು ನೆನಪಿಸುವಂತಿದೆ. ಒಳಗೊಂದು-ಹೊರಗೊಂದು ವ್ಯಕ್ತಿವವುಳ್ಳ ಇವರು ತಮ್ಮ ಕುಟಿಲತೆಯಿಂದ ಸುಂದರರಾವ್ ಎಂಬ ಸಾತ್ತ್ವಿಕನೊಬ್ಬನ ಕೊಲೆಗೂ ಕಾರಣರಾಗಿ ಅಂತಿಮವಾಗಿ ಅದನ್ನೂ ಜೀಣರ್ಿಸಿಕೊಂಡು ಬಿಡುತ್ತಾರೆ. ಅಂದರೆ ಈ ಹಂತದಲ್ಲಿ ಈ ಕಾದಂಬರಿ0ುು 'ಅಧರ್ಮ'ದ ವಿಜ0ುವನ್ನೇ ನಿರೂಪಿಸುವಂತಿದೆ.
ಕುತೂಹಲದ ಸಂಗತಿ ಎಂದರೆ ಈ ಕಾದಂಬರಿಗೆ ಇನ್ನೂ ಒಂದು ಹೆಸರಿದೆ. ಅದು ಸದ್ಧರ್ಮ ವಿಜ0ು. ಇಂದಿರಾಬಾಯಿ ಅಥವಾ ಸದ್ಧರ್ಮ ವಿಜ0ು ಎಂಬುದೇ ಕಾದಂಬರಿ0ು ಪೂರ್ಣ ಶೀಷರ್ಿಕೆ0ಾಗಿದ್ದರೂ ಅದು ಅದರ ಶೀಷರ್ಿಕೆ0ು ಮೊದಲರ್ಧದಿಂದಲೇ ಹೆಚ್ಚು ಚಾಲ್ತಿ0ುಲ್ಲಿರುವುದು. ಈ ಹಂತದಲ್ಲಿ ಕಾದಂಬರಿ0ುಲ್ಲಿ ಇನ್ನೂ ಇಂದಿರಾಬಾಯಿ0ು ಆಗಮನವಾಗಿಲ್ಲ. ಬಹುಕಾಲದ ದಾಂಪತ್ಯದ ನಂತರ ಈ ದಂಪತಿಗಳಿಗೆ ಒಂದು ಹೆಣ್ಣುಮಗು ಜನಿಸುತ್ತದೆ. ಅವಳೇ ಇಂದಿರಾ. ಆ ಕಾಲದ, ಸಂಸ್ಕೃತಿ0ು ರಿವಾಜುಗಳಂತೆ ಅವಳಿಗೆ ಚಿಕ್ಕ ವ0ುಸ್ಸಿನಲ್ಲೇ ಮದುವೆ0ಾಗುತ್ತದೆ. ಕೆಲ ಕಾಲದ ನಂತರ ಅವಳು ವಿಧವೆ0ುೂ ಆಗುತ್ತಾಳೆ. ಅವಳನ್ನು 'ಧರ್ಮ'ದ, 'ಕುಲಧರ್ಮ'ದ ಹಾದಿಗೆ ಹಚ್ಚಲು ಅಂಬಾಬಾಯಿ ನಡೆಸುವ ಪ್ರ0ುತ್ನಗಳು, ಆ ಸಂದರ್ಭದಲ್ಲಿ ಅವಳು ತನ್ನ ಮಗಳಿಂದ ಎದುರಿಸುವ ಪ್ರಶ್ನೆಗಳು, ಸಂದೇಹಗಳು ಮತ್ತು ಪ್ರತಿರೋಧಗಳಲ್ಲಿ ಸಾಮಾಜಿಕ ಪಲ್ಲಟದ ಗಾಢವಾದ ಸೂಚನೆಗಳು ದಾಖಲಾಗುತ್ತ ಹೋಗುತ್ತವೆ. ಇಡೀ ಒಂದು ವರುಷ ಪ0ರ್ುಂತರ 0ಾರಿಗೂ ಮುಖವನ್ನು ತೋರಿಸಲಿಕ್ಕೂ 0ಾರೊಡನೆ0ುೂ ಮಾತನಾಡಲಿಕ್ಕೂ ಕೂಡದೆಂಬ ಕಟ್ಟಳೆಗೆ ಅನುಸಾರವಾಗಿ ನಡೆ0ುುವ ವಿಷ0ುದಲ್ಲಿ ದಿನ ಹೋಗುತ್ತಾ ಹೋಗುತ್ತಾ ಅವಳ ಮೇಲೆ ಕಠೋರವಾದ ಬಲಾತ್ಕಾರಗಳು ನಡೆದವು. ಈ ಹೊತ್ತು ತಲೆ0ುನ್ನು ಬಾಚಿಕೊಂಡಳೆಂತಲೂ, ಕಪ್ಪುಸೀರೆ0ುನ್ನುಟ್ಟಳೆಂತಲೂ, ಇನ್ನೊಂದು ದಿವಸ ಕುಪ್ಪಸ ತೊಟ್ಟಳೆಂತಲೂ, ಹೀಗೆಲ್ಲ ಆಗಾಗ್ಗೆ ಹಿಂದಿನಿಂದ ಮಾತನಾಡಿ ದ್ರೋಹಿಸಲಿಕ್ಕೆ ಪ್ರಾರಂಭಿಸಿದರು. ಪತೀವಿ0ೋಗದ ಮನೋವ್ಯಥೆಯಿಂದಲೂ ದಿನೇದಿನೇ ಹೆಚ್ಚುತ್ತಾ ಬರುವ ದ್ರೋಹಗಳಿಂದಲೂ ಬಹಳ ಸಂಕಷ್ಟದಲ್ಲಿರುವಾಗಿ ಸಮ0ು ಹೋಗಲು-ಬೇಸರ ಕಳೆ0ುಲು ಇಂದಿರಾ ಪುಸ್ತಕಗಳನ್ನು ಓದಲು ಆರಂಭಿಸುತ್ತಾಳೆ. ಆಗ ತಾಯಿ-ಮಗಳ ನಡುವೆ ನಡೆ0ುುವ ಕೆಳಗಿನ ಸಂಭಾಷಣೆ0ು ಒಂದು ಮಾದರಿ0ುಲ್ಲಿ ಕಾಲ ಚಲಿಸಲಾರಂಭಿಸಿದ್ದ ಒಂದು ಸ್ಪಷ್ಟ ಸೂಚನೆ0ೆು ಸಿಗುವಂತಿದೆ:
'ನೀನು ಓದುವ ಪುಸ್ತಕವೆಂಥಾದ್ದು?'
'ನಾನು ನಿನ್ನೆ0ುವೆರೆಗೆ 'ಸ್ತ್ರೀಧರ್ಮ ನೀತಿ' ಎಂಬ ಪುಸ್ತಕ ಓದಿದೆ. ಈ ಹೊತ್ತು 'ಏಸೋಪನ ನೀತಿ ಕಥೆಗಳು' ಎಂಬ ಪುಸ್ತಕ ಒದತೊಡಗಿದ್ದೇನೆ.
'ಅವುಗಳೆಲ್ಲ ಪಾದ್ರಿಗಳು ಛಾಪಿಸಿದ ಪುಸ್ತಕಗಳಲ್ಲವೇ.
'ಅದೇನೊ ನಾನರಿ0ೆು.'
'ಅವುಗಳು ಜಾತಿ ಕೆಡಿಸುವುದಕ್ಕೆ ಛಾಪಿಸಿದ ಪುಸ್ತಕಗಳು.'
'ನಾನು ಓದಿದ ಪುಸ್ತಕದಲ್ಲಿ ಜಾತಿ ಕೆಡುವ ಸಂಗತಿ 0ಾವುದೂ ಇರಲಿಲ್ಲ. ಪುಸ್ತಕ ಓದಿದ ಮಾತ್ರದಿಂದಲೇ ಜಾತಿ ಹೋಗುವುದುಂಟೆ?'
'ಅವುಗಳಲ್ಲಿ ನಮ್ಮ ಜಾತಿಗೆ ವಿರೋಧವಾದ ಸಂಗತಿಗಳಿವೆ.'
'ನಾನು ಓದಿದ ಪುಸ್ತಕದಲ್ಲಿಲ್ಲ. ಅದರಲ್ಲಿ ಸ್ತ್ರೀ0ುರು ಹೆತ್ತವರ ಕಡೆಗೂ ಪತಿಗಳ ಕಡೆಗೂ ಬೇರೆ0ುವರ ಕಡೆಗೂ ಹೇಗೆ ನಡೆದುಕೊಳ್ಳಬೇಕೆಂಬ ಬಹು ಚಲೋದಾದ ಕ್ರಮಗಳೆಲ್ಲ ಹೇಳಲ್ಪಟ್ಟಿವೆ.'
'ಅದನ್ನೆಲ್ಲ ನೀನು ಇಲ್ಲೇ ಮನೆ0ುಲ್ಲಿದ್ದು ಕಲಿ0ುಬಹುದಷ್ಟೆ? ಅನ್ಯರಲ್ಲೇಕೆ?'
'ಅದು ಬಹು 0ೋಗ್ಯವಾದದ್ದೇ. ಆದರೆ ಮನೆ0ುಲ್ಲಿ ನನಗೆ ಅಂತಹ ವಿಷ0ುಗಳನ್ನು ಕಲಿಸಿದ್ದೂ ಇಲ್ಲ, ನಾನು ಕಲಿತದ್ದೂ ಇಲ್ಲ. ಇನ್ನಾದರೂ ನನಗೆ ಶಾರದೆ0ು ಹತ್ತಿರವಿರುವಂಥ ಪುಸ್ತಕಗಳನ್ನು ತರಿಸಿಕೊಡುವೆ0ಾ?'
'ನಿನಗೆ ಆ ಮ್ಲೇಚ್ಛರ ಪುಸ್ತಕಗಳೇಕೆ? ಇಲ್ಲಿ ಶ್ರೀಕೃಷ್ಣನ ಬಾಲಲೀಲೆ, ರಾಧಾವಿಲಾಸ ಇವೇ ಮುಂತಾದ ಪುಸ್ತಕಗಳಿವೆ. ಅವುಗಳನ್ನು ಓದಿದರೆ ಸಾಥ9ಕವಿದೆ.'
ಬಾಲಲೀಲೆ0ುನ್ನು ಓದಿದ್ದರಿಂದ ಸಾಥ9ಕವೇನು?'
'ಕ್ಷಣೇ ಕ್ಷಣೇ ಶ್ರೀಕೃಷ್ಣನ ಹೆಸರನ್ನು ತೆಗೆದ ಹಾಗೆ ಆಗುತ್ತೆ, ಅದೊಂದು ವಿಧದ ನಾಮಸ್ಮರಣೆ, ಅದರಿಂದ ಹೆಚ್ಚು ಪುಣ್ಯವಿದೆ.'
'ಬಾಲಲೀಲೆ0ುನ್ನು ಓದದೆ ಶ್ರೀಕೃಷ್ಣನ ಹೆಸರು ತೆಗೆ0ೆುಲಿಕ್ಕೇನಾತಂಕವಿದೆ? ಶಾರದೆ0ು ಹತ್ತಿರವಿದ್ದ ಪುಸ್ತಕಗಳನ್ನು ಓದುತ್ತಾ ಇರುವಾಗ ಶ್ರೀಕೃಷ್ಣನ ಹೆಸರು ಆಗಾಗ್ಗೆ ತೆಗೆದರೆ, ಎರಡೂ ಕೆಲಸಗಳೂ ಒಂದೇ ಕಾಲದಲ್ಲಿ ಆಗುವುವು. ಏವಂಚ ನನ್ನ ಮನಸ್ಸಿನ ಬೇಸರು ಹೋಗುವ ಹಾಗೂ, ಸಮ0ು ವೃಥಾ ನಷ್ಟವಾಗದ ಹಾಗೂ ಏನಾದರೂ ಉಪಾ0ುವನ್ನು ಹೇಳು. ಅದನ್ನನುಸರಿಸಿ ನಡೆದುಕೊಳ್ಳುವೆನು.'
ಭಜನೆ ಮಾಡಲು ಬಂದ ಸಂತ ಮಂಡಲಿ0ು ದುರಾಚಾರಗಳಾವುವೂ ಭೀಮರಾ0ು-ಅಂಬಾಬಾಯಿ0ು ಗಮನಕ್ಕೇ ಬರದಷ್ಟು ಅವರು ಕರ್ಮಠರಾಗಿದ್ದಾರೆ. ಈ ಭಾಗ ಮೋಲಿ0ೆುರನ ತಾತರ್ುಫé್ ನಾಟಕವನ್ನು ನೆನಪಿಗೆ ತರುವಂತಿದೆ. 'ಸಂತ'ನೊಬ್ಬನು ತನ್ನ ಮನೆ0ುಲ್ಲಿ0ೆು ತನ್ನನ್ನು ದುಮರ್ಾರ್ಗಕ್ಕೆಳೆ0ುಲು ಪ್ರ0ುತ್ನಿಸಿದಾಗ ಇಂದಿರಾ ತನ್ನ ಮಾನವನ್ನು ರಕ್ಷಿಸಿಕೊಳ್ಳಲು ಮನೆ0ುನ್ನೇ ತೊರೆದು ತನ್ನ ಸಾರಸ್ವತ ಸಮಾಜದಲ್ಲಿ ಗಣ್ಯನಾದ, ಆದರೆ ತನ್ನ ಆಧುನಿಕ ರೀತಿ-ನೀತಿಗಳಿಂದ ಉಳಿದವರಿಗಿಂತ ಭಿನ್ನನಾದ ಅಮೃತರಾ0ುನಲ್ಲಿಗೆ ಹೋಗಿ ರಕ್ಷಣೆ0ುನ್ನೂ ಆಶ್ರ0ುವನ್ನೂ ಪಡೆ0ುುತ್ತಾಳೆ. ಆ ಮೂಲಕ 'ಸದ್ಧರ್ಮ'ದತ್ತ ಹೆಜ್ಜೆ ಇಡುತ್ತಾಳೆ. ಆ ಮನೆ0ುಲ್ಲಿ ಅವಳ ವ್ಯಕ್ತಿತ್ವ ಅರಳುತ್ತದೆ. ತನ್ನ ಜಾತಿ-ಧರ್ಮ ಬಿಡದೆ0ುೂ, ತನ್ನ ಸಮಾಜದ ಅನೇಕ ಸಾಂಸ್ಕೃತಿಕ ನಡಾವಳಿಗಳನ್ನು ಮುಂದುವರೆಸಿಕೊಂಡೂ ಬದಲಾಗುತ್ತಿದ್ದ '0ುುಗಧರ್ಮ'ವನ್ನು ಉಚಿತವಾಗಿ ಅನುಸರಿಸಿಕೊಂಡು ಹೋಗುತ್ತಾ ಇಂದಿರಾ ಬೆಳೆ0ುುತ್ತಾಳೆ.
ಭೀಮರಾ0ುನು ಕಪಟದಿಂದ ಕೊಂದಿದ್ದ ಸುಂದರರಾ0ುನ ಮಗ ಭಾಸ್ಕರನೂ ಮತ್ತೊಂದು ರೀತಿ0ುಲ್ಲಿ ಅಮೃತರಾ0ುನ ಕೃಪೆ0ುಲ್ಲಿರುತ್ತಾನೆ. ಆಧುನಿಕ ಶಿಕ್ಷಣ ಪಡೆ0ುುತ್ತಾನೆ. ಸಮುದ್ರೋಲ್ಲಂಘನ ಮಾಡಬಹುದೆ ಎಂಬ ವಿವಾದಗಳ ಮಧ್ಯದಲ್ಲೇ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿಲಾಯಿತಿಗೂ ಹೋಗಿಬರುತ್ತಾನೆ. ಸೃಷ್ಟಿ0ುಲ್ಲಿ ಸಕಲ ಪ್ರಾಣಿಗಳಿಗೂ ಸ್ಥಿತ್ಯಂತರಗಳಿವೆ. 0ಾವುದೊಂದು ಪ್ರಾಣಿ0ುೂ ಇದ್ದಂತೆ0ೆು ಇರುವುದಿಲ್ಲವಷ್ಟೆ? ಎಂದು ಕಾದಂಬರಿ0ು ಒಂದು ಘಟ್ಟದಲ್ಲಿ ಅಮೃತರಾ0ುನು ಇಂದಿರಾಳೊಂದಿಗೆ ಜಿಜ್ಞಾಸೆ ನಡೆಸುತ್ತಾನೆ. ನಾವು ನಮಗಿರುವ ಬುದ್ಧಿ0ುನ್ನು ಸ್ಥಿರತೆ0ುಲ್ಲಿಟ್ಟುಕೊಂಡು ಸತ್ಕಾ0ರ್ುಗಳನ್ನೇ ಮಾಡುತ್ತಾ ಇರಬೇಕೆಂದು ಅವನ ಒಟ್ಟಾರೆ ಇಂಗಿತವೆಂದು ಹೇಳಬಹುದು. ಅಮೃತರಾ0ು ದಂಪತಿಗಳ 'ಸತ್ಕಾ0ರ್ು'ಗಳನ್ನು ಭೀಮರಾ0ು ದಂಪತಿಗಳ 'ಧಾಮರ್ಿಕ' ಆಚರಣೆಗಳಿಗೆ ವೈದೃಶ್ಯದಲ್ಲಿ ತಂದು ಲೇಖಕರು ತಮ್ಮ ಕಲ್ಪನೆ0ು 'ಸದ್ಧರ್ಮ'ವನ್ನು ಸೂಚಿಸಿಬಿಡುತ್ತಾರೆ. ಈ ಸದ್ಧರ್ಮದ ವಿಜ0ು ಸಾಧ್ಯವಾಗುವುದು ಇಂದಿರಾ ಒಂದು ರೀತಿ0ುಲ್ಲಿ, ಭಾಸ್ಕರನು ಮತ್ತೊಂದು ರೀತಿ0ುಲ್ಲಿ ತಮ್ಮ ಧರ್ಮ-ಸಮಾಜಗಳು ವಿಧಿಸಿದ್ದ ವಿಧಿ-ನಿಷೇಧಗಳನ್ನು ದಾಟಿದ ಮೇಲೆ0ೆು ಎಂಬುದರಲ್ಲಿ ಹೊಸ ಕಾಲಧರ್ಮ-0ುುಗಧರ್ಮಗಳ ಸ್ವರೂಪ ನಮ್ಮೆದುರಿಗೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಇದಕ್ಕೆ ಚಾಲನೆ ಸಿಗುವುದು ಆ ಸಮಾಜವನ್ನು ಒಂದು ರೀತಿ0ುಲ್ಲಿ ನಿ0ುಂತ್ರಣದಲ್ಲಿಟ್ಟುಕೊಂಡಿದ್ದ ಮಠಮಾನ್ಯದಿಂದಲ್ಲ, ಬದಲಾಗಿ ವಸಾಹತುಶಾಹಿ ತಂದ ಹೊಸಶಿಕ್ಷಣದ ಮೂಲಕ ಎಂಬುದು ಕುತೂಹಲಕಾರಿ0ಾಗಿದೆ. ತನ್ನ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಸಗಟಾಗಿ ತಿರಸ್ಕರಿಸದೆ0ೆು ತನಗೆ ಬೇಕಾದ, ಬೇಕಾಗುವಷ್ಟು ಹೊಸದರ ಸ್ವೀಕೃತಿಗೆ ಆ ಸಮಾಜ ತೆರೆದುಕೊಂಡ ಪರಿ0ುನ್ನು ಗುಲ್ವಾಡಿ0ುವರ ಕಾದಂಬರಿ ದಾಖಲಿಸುತ್ತದೆ. ಅದು ಆ ಸಮಾಜದ ವ್ಯಕ್ತಿಗಳಿಂದಲೇ ಸಾಧ್ಯವಾಯಿತು ಎಂಬುದನ್ನು ಒತ್ತಿ ಹೇಳಲು ಅದು ಮರೆ0ುುವುದಿಲ್ಲ. ಮುಂದೆ ಇಂದಿರಾ-ಭಾಸ್ಕರ ಮದುವೆ0ಾಗುತ್ತಾರೆ. ಒಬ್ಬಳು ವಿಧವೆ; ಮತ್ತೊಬ್ಬ ಸಮುದ್ರೋಲ್ಲಂಘನ ಮಾಡಿದವ. ಇವರ ಸಂಗಮದ ಮೂಲಕ ಕಾದಂಬರಿ0ುು 'ಸದ್ಧರ್ಮ ವಿಜ0ು'ದ ಸಂಭ್ರಮವನ್ನು ಆಚರಿಸುವುದು ಆಗಿನ ಕಾಲಮಾನಕ್ಕೆ ದೊಡ್ಡ ಸಂಗತಿ0ೆು ಸರಿ. ಹಾಗೆಂದು ಕಾದಂಬರಿ0ುು ಪಾಶ್ಚಾತ್ಯ ನಡಾವಳಿ0ು, ಸಂಸ್ಕೃತಿ0ು, ಬೌದ್ಧಿಕತೆ0ು ಅತ್ಯುತ್ತಮವಾದದ್ದನ್ನು ಪೌವರ್ಾತ್ಯದ ಅತಿ ನಿಕೃಷ್ಟವಾದದ್ದರೊಂದಿಗೆ ಮುಖಾಮುಖಿ0ಾಗಿಸುತ್ತದೆ ಎಂದೇನೂ ಅಲ್ಲ. ಆದರೆ ಸ್ಥಗಿತಗೊಂಡಿದ್ದ ಸಮಾಜವು ಚಲಿಸಲು ಪ್ರಾರಂಭಿಸುವುದಕ್ಕೆ ವೇಗವರ್ಧಕದ ರೀತಿ ಕೆಲಸ ಮಾಡುವುದಕ್ಕೆ ಸಣ್ಣ ಸಣ್ಣ ವಿಷ0ು-ವಿಚಾರಗಳೂ ಸಾಕು ಎಂದು ಗುಲ್ವಾಡಿ0ುವರ ಕಾದಂಬರಿ ಧ್ವನಿಸುತ್ತಿರುವಂತಿದೆ.
*******
ಟಿ.ಪಿ.ಅಶೋಕ, ಅಗ್ರಹಾರ, ಸಾಗರ-577 401. ಸೆಲ್: 94482 54228
ಗುಲ್ವಾಡಿ ವೆಂಕಟರಾವ್ ಅವರ ಇಂದಿರಾಬಾಯಿ
ಕನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಹೆಸರಾಗಿರುವ ವೆಂಕಟರಮಣಶಾಸ್ತ್ರೀ ಸೂರಿ ಅವರ ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನವು 1887ರಲ್ಲಿ ಪ್ರಕಟವಾಯಿತು. ಅದಾದ ಹನ್ನೆರಡು ವರುಷಗಳ ನಂತರ 1899ರಲ್ಲಿ ಪ್ರಕಟವಾದ ಗುಲ್ವಾಡಿ ವೆಂಕಟರಾವ್ ಅವರ ಇಂದಿರಾಬಾಯಿ ಕನ್ನಡದ ಮೊದಲ 'ಸಾಮಾಜಿಕ' ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎರಡೂ ಕೃತಿಗಳ ನಡುವಣ ಸಾಮ್ಯವೂ ಕುತೂಹಲಕರವಾಗಿದೆ. 'ವಿವಾಹ' ಎಂಬ ಸಾಮಾಜಿಕ ಸಂಸ್ಥೆ0ುನ್ನು ವಿಮಶರ್ೆಗೆ ಒಳಪಡಿಸುವ ಮೂಲಕ ಈ ಎರಡೂ ಕೃತಿಗಳು ಆಗಿನ ಕಾಲದ ಹಿಂದೂ ಸಮಾಜ-ಸಂಸ್ಕೃತಿ-ಜೀವನಕ್ರಮಗಳನ್ನು ಉಗ್ರವಾದ ವಿಮಶರ್ೆಗೆ ಗುರಿಪಡಿಸುತ್ತವೆ. ವಸಾಹತುಶಾಹಿ ತಂದ ಹೊಸ ಸಂಸ್ಥೆಗಳು, ಮೌಲ್ಯಗಳು ಮತ್ತು ಆಶೋತ್ತರಗಳು ಹಾಗೂ ನಮ್ಮ ಸಮಾಜದ ಒಳಗೇ ಹುಟ್ಟುತ್ತಿದ್ದ ಅತೃಪ್ತಿ-ಅಸಹನೆ-ಬಿಡುಗಡೆ0ು ವಾಂಛೆ ಇವೆರಡರ ಸಂಗಮದಿಂದ ಹುಟ್ಟಿದ ಸುಧಾರಣಾ ಮನೋಭಾವ ಈ ಎರಡೂ ಕೃತಿಗಳ ಸಂವೇದನೆ ಮತ್ತು ಸ್ವರೂಪಗಳನ್ನು ಗಾಢವಾಗಿ ಪ್ರಭಾವಿಸಿದೆ. 'ಕನ್ಯಾವಿಕ್ರ0ು'ದ ಪದ್ಧತಿಗೆ ಬಲಿ0ಾಗಿ ಕಿರಿ0ು ವ0ುಸ್ಸಿನಲ್ಲೇ ವಿಧವೆ0ಾದ ಒಬ್ಬಳು ಆ ನಂತರ ಮತ್ತೊಬ್ಬನಿಗೆ ಬಸುರಾಗಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಿಕೊಂಡು ಶಿಕ್ಷೆಗೆ ಒಳಗಾಗುವ ದುರಂತವನ್ನು ವೆಂಕಟರಮಣಶಾಸ್ತ್ರಿ0ುವರ ನಾಟಕ ಕಟ್ಟಿಕೊಡುತ್ತದೆ. ಈ ನಾಟಕದ ಸಾವಿತ್ರಿ0ುು ಹವ್ಯಕ ಬ್ರಾಹ್ಮಣ ಸಮುದಾ0ುಕ್ಕೆ ಸೇರಿದವಳು. ಅವಳ ಸಮಸ್ಯೆಗೆ ಆ ಸಮುದಾ0ುದ ಧಾಮರ್ಿಕ ಕೇಂದ್ರಗಳಾದ ಮಠಮಾನ್ಯಗಳಲ್ಲಿ ಪರಿಹಾರವಿಲ್ಲ;ಆಧುನಿಕ ಶಿಕ್ಷಣದಲ್ಲಿ ಇದಕ್ಕೊಂದು ಪರಿಹಾರವಿರಬಹುದು ಎಂಬ ಧ್ವನಿ ನಾಟಕದಿಂದ ಹೊರಡುತ್ತದೆ. ಈ ಸಮುದಾ0ುದ ಸ್ವರೂಪವನ್ನು ಹೊರಗಿನಿಂದ ನೋಡಿ ವಿಮಶರ್ಿಸುವ ನ್ಯಾ0ಾಧೀಶನ ಮಾತುಗಳಲ್ಲಿ ನಾಟಕಕಾರರ ಸುಧಾರಣಾಪರವಾದ ವಿಚಾರಗಳ ಪ್ರತಿಧ್ವನಿ0ೆು ಕೇಳಿಸುತ್ತದೆ. ಪಾತ್ರಗಳ ಸಂಭಾಷಣೆಗಳಲ್ಲಿ ಆ ಸಮುದಾ0ುಕ್ಕೆ ಹತ್ತಿರವಾದ ಭಾಷೆ0ು ಪ್ರ0ೋಗ, ಆ ಪರಿಸರದಲ್ಲಿದ್ದ ಇತರ ಭಾಷೆಗಳ 0ುಥೋಚಿತ ಬಳಕೆ, ಅವರ ದೈನಂದಿನ ಸಾಮಾಜಿಕ, ಆಥರ್ಿಕ ಸಮಸ್ಯೆಗಳನ್ನು ಕುರಿತ ಜಿಜ್ಞಾಸೆ ಇವುಗಳ ಮೂಲಕ ವಾಸ್ತವವಾದವು ನಮ್ಮ ಸಾಹಿತ್ಯದೊಳಗೆ ಪ್ರವೇಶ ಮಾಡಲಾರಂಭಿಸಿದ್ದ ಮತ್ತು ಅದಕ್ಕಾಗಿ ಹೊಸಪ್ರಕಾರವೊಂದನ್ನು ಶೋಧಿಸಿಕೊಂಡು ಹೋಗುವ ಪ್ರ0ೋಗಶೀಲತೆ ಇಲ್ಲಿ ಎದ್ದುಕಾಣುವಂತಿದೆ. ಇವರಲ್ಲಿ ಇಂಥ 0ೋಗ್ಯ ವಿಚಾರಶಕ್ತಿ ಬರುವುದಕ್ಕೆ ವಿದ್ಯಾಪ್ರಸಾರವು ಏನೇನೂ ಇರುವುದಿಲ್ಲ. ವಿದ್ಯವೆಂದರೆ ಎಲ್ಲಾದರೂ ಭಟ್ಟ, ಭಿಕ್ಷುಕರು ಬಾಯಿಂದ ಹೇಳಿ ದುಡ್ಡು ಕೇಳುವ ಮಂತ್ರತಂತ್ರಗಳೆಂದು ತಿಳಿ0ುುತ್ತಾರೆ ಮತ್ತು 0ೋಗ್ಯ ದಾನಧರ್ಮಗಳೆಂದರೆ ಫಕ್ತ ದಕ್ಷಿಣೇ, ದೇಶಾವರ, ಪೂಜೆ ಪುನಸ್ಕಾರ ಇವುಗಳೇ ಸರಿ0ೆುಂದು ತಿಳಿ0ುುತ್ತಾರೆ.. ಎಂದು ಆಂಗ್ಲ ನ್ಯಾ0ಾಧೀಶ ತನ್ನ ತೀಪರ್ಿನಲ್ಲಿ ಪ್ರಸ್ತಾಪಿಸುತ್ತಾನೆ.
ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ದಂತೆ ಇಂದಿರಾಬಾಯಿ ಕೂಡ ಒಂದು ಸಣ್ಣ ಸಮುದಾ0ುದ ಕಥೆ0ೆು ಆಗಿದೆ. ಭಾಷಾ ಬಳಕೆ, ಹೊಸಪ್ರಕಾರದ ಹುಡುಕಾಟ ಮತ್ತು ಆಧುನಿಕತೆ0ುತ್ತ ನೋಟ-ಈ ನೆಲೆಗಳಲ್ಲಿ0ುೂ ಈ ಕಾದಂಬರಿ0ುು ಸ್ಥೂಲವಾಗಿ ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನದ ಮುಂದುವರಿಕೆ0ುಂತೆ0ೆು ಕಂಡರೆ ಆಶ್ಚ0ರ್ುವಿಲ್ಲ. ಇಲ್ಲಿ0ುೂ 'ಕಮಲಪುರ'ದ ಸಾರಸ್ವತ ಸಮಾಜದ ಕೆಲವು ರೀತಿ ನೀತಿಗಳನ್ನು ವಿಡಂಬಿಸಿ ವಿಮಶರ್ಿಸುವ, ಅದರೊಳಗೇ ಸಂಭವಿಸುತ್ತಿರುವ ಪಲ್ಲಟಗಳನ್ನು ದಾಖಲಿಸುವ ಆಶ0ುವನ್ನು ಇಟ್ಟುಕೊಂಡಿರುವ ಗುಲ್ವಾಡಿ ವೆಂಕಟರಾ0ುರ ಕಾದಂಬರಿ0ುು ಆ ಮೂಲಕ ಆ ಕಾಲದ ಭಾರತ ಉಪಖಂಡದಲ್ಲಿ ಬದಲಾಗುತ್ತಿದ್ದ ಇತಿಹಾಸದ ನಡೆಗೇ ಒಡ್ಡಿದ ರೂಪಕದಂತಿದೆ. ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳದೆ ಅಲ್ಲಿ ಸಾವಿತ್ರಿ ದುರಂತವನ್ನಪ್ಪಿದ್ದರೆ, ಸುಧಾರಣೆ0ು ಗಾಳಿ ಬೀಸಿ ಇಲ್ಲಿ ಇಂದಿರಾಬಾಯಿ0ು ಬಾಳು ಸುಖಾಂತವಾಗುತ್ತದೆ. ವಿವಾಹವು ಅಲ್ಲಿ ಪ್ರಹಸನವಾಗಿದ್ದರೆ ಅದು ಇಲ್ಲಿ ಆ ಘಟ್ಟವನ್ನು ದಾಟಿ ವಿಧವಾ ಮರುವಿವಾಹದ- ಆ ಕಾಲಕ್ಕೆ, ಆ ಸಮಾಜಕ್ಕೆ ಕ್ರಾಂತಿಕಾರಕ ಎನ್ನಬಹುದಾದ- ಹಂತವನ್ನು ತಲುಪುತ್ತದೆ. ಹಾಗೆಂದು ಸಂಪೂರ್ಣ ಆಧುನೀಕರಣ ಅಥವಾ ಪಾಶ್ಚಾತ್ಯೀಕರಣದ ಪ್ರತ್ಯಕ್ಷ ಅಥವಾ ಪರೋಕ್ಷ ಅಜೆಂಡಾ ಈ ಎರಡೂ ಕೃತಿಗಳಲ್ಲಿ ಕಾಣುವುದಿಲ್ಲ. ಪರಂಪರೆ0ುಲ್ಲಿ ಉಳಿಸಿಕೊಳ್ಳಬೇಕಾದದ್ದನ್ನು ಉಳಿಸಿಕೊಂಡು, ತ್ಯಜಿಸಬೇಕಾದದ್ದನ್ನು ತ್ಯಜಿಸಿ, ಹಾಗೆ0ೆು ಆಧುನಿಕತೆಯಿಂದ ನಮಗೆ ಬೇಕಾದದ್ದನ್ನು ಪಡೆದುಕೊಂಡು ಒಟ್ಟಿನಲ್ಲಿ ಇನ್ನಷ್ಟು ಹಸನಾದ, ಆರೋಗ್ಯಪೂರ್ಣ ಬದುಕನ್ನು ರೂಪಿಸಿಕೊಳ್ಳಬೇಕಾದ ಅಗತ್ಯವನ್ನು ಈ ಎರಡೂ ಕೃತಿಗಳು ಸ್ಥೂಲವಾಗಿ ಆಶಿಸುತ್ತವೆ ಎಂದು ಹೇಳಬಹುದು. ಈ ಆಶ0ುವೇ ಆಧುನಿಕ ಕನ್ನಡ ಸಾಹಿತ್ಯದ ಮೂಲ ಸಂವೇದನೆ0ುನ್ನು ಪ್ರಭಾವಿಸಿದೆ ಎಂಬುದನ್ನು ಗಮನಿಸಿದರೆ ಅವುಗಳ ಐತಿಹಾಸಿಕ ಮಹತ್ವ ಹೊಳೆ0ುುತ್ತದೆ.
ಇಂದಿರಾಬಾಯಿ ಕಾದಂಬರಿ0ುು ಪಾಶ್ಚಾತ್ಯ ಪ್ರಭಾವಕ್ಕೆ ಎಷ್ಟು ಋಣಿ0ಾಗಿದೆ0ೋ ಅಷ್ಟೇ ತನ್ನ ಪರಂಪರೆ0ು ಅದ್ಭುತರಮ್ಯ ಕಥಾನಕಗಳಿಗೂ ಋಣಿ0ಾಗಿದೆ. ಹಾಗೆ ನೋಡಿದರೆ ಅದು ತನ್ನ ಪರಂಪರೆ0ು ಹಿಂದಿನ ಅನೇಕ ಕಥನ ಮಾದರಿಗಳ ಮುಂದುವರಿಕೆ0ೆು ಆಗಿದೆ: ವಿಂಧ್ಯಾಚಲದ ದಕ್ಷಿಣ ಪ್ರಾಂತ್ಯದಲ್ಲಿ ರೋಹಿಣೀ ನದೀ ತೀರದಲ್ಲಿ ಕಮಲಪುರವೆಂಬೊಂದು ವಿಸ್ತಾರವಾದ ನಗರವಿರುವುದು. ಈ ನಗರವು ಪ್ರಾಚೀನ ಕಾಲದಿಂದಲೇ ಚರಿತ್ರೆಗಳಲ್ಲಿ ಪ್ರಸಿದ್ಧಿ0ುನ್ನು ಹೊಂದಿರುವುದಲ್ಲದೆ ಘನತರವಾದ ಅನೇಕ ಭವನಗಳು, ದೇವಾಲ0ುಗಳು, ಅಗ್ರಹಾರಗಳು, ಕೋಟೆಕೊತ್ತಲುಗಳು, ನ್ಯಾ0ುಸ್ಥಾನಗಳು, ತರತರದ ಫಲವೃಕ್ಷಗಳ ತೋಟಗಳು, ವಿಶಾಲವಾದ ರಾಜಮಾರ್ಗಗಳು, ಸೇತುವೆಗಳು ಇವೇ ಮೊದಲಾದುವುಗಳಿಂದ ಶೋಭಾ0ುಮಾನವಾಗಿರುವುದು. ಬ್ರಹ್ಮ, ಕ್ಷತ್ರಿ0ು, ವೈಶ್ಯ, ಶೂದ್ರರೆಂಬೀ ನಾಲ್ಕು ವರ್ಣದ ಜನರು ಸಹ ಈ ನಗರದಲ್ಲಿ ವಾಸಿಸಿದ್ದು ಬೇರೆಬೇರೆ ಮತಾನು0ಾಯಿಗಳು ತಂತಮ್ಮ ವೃತ್ತಿಗಳನ್ನಾಚರಿಸುತ್ತಾ ನಗರದ ಬೇರೆ ಬೇರೆ ದಿಕ್ಕುಗಳಲ್ಲಿ ವಾಸವಾಗಿರುವರು. ಈ ನಗರದಲ್ಲಿ ಅಗ್ರಹಾರದ ಕೇರಿ ಎಂಬಲ್ಲಿ ಹಂಪೆ ಭೀಮರಾ0ುನೆಂಬ ಒಬ್ಬ ಗೃಹಸ್ಥನಿರುವನು ಎಂದು ಕಾದಂಬರಿ ಪ್ರಾರಂಭವಾಗುತ್ತದೆ. ಕಾದಂಬರಿ0ು ಮೊದಲ ಕಾಲುಭಾಗವು ಈ ಭೀಮರಾ0ು ಮತ್ತು ಅವನ ಹೆಂಡತಿ ಅಂಬಾಬಾಯಿ0ು ಆಚಾರ-ಅನಾಚಾರ-ದುರಾಚಾರಗಳ ನಿರೂಪಣೆ0ೆು ಆಗಿದೆ. ಅವರ ಬದುಕಿನ ಮೂಲಕ ಲೇಖಕರು ಸಾಂಪ್ರದಾ0ುಕ ಎಂದು ಹೇಳಬಹುದಾದ ಒಂದು ಜೀವನ ಮಾದರಿ0ುನ್ನು ಉಚಿತವಾದ ವಿವರಗಳಲ್ಲಿ ಕಟ್ಟಿಕೊಡಲು ಪ್ರ0ುತ್ನಿಸಿದ್ದಾರೆ. ಈ ದಂಪತಿಗಳು ಒಂದು ನಿಟ್ಟಿನಲ್ಲಿ ತಮ್ಮ ಕುಲಾಚಾರಗಳನ್ನು ವೈಭವ0ುುತವಾಗಿ ನಡೆಸುತ್ತಾ, ತಮ್ಮ ಸಮಾಜದ ಇತರರಲ್ಲಿ0ುೂ, ತಮ್ಮ ಮಠದ ಶ್ರೀಗಳವರಲ್ಲಿ0ುೂ ಗೌರವಕ್ಕೆ ಪಾತ್ರರಾಗಿರುತ್ತಾರೆ. ಇನ್ನೊಂದು ನಿಟ್ಟಿನಲ್ಲಿ ಈ ದಂಪತಿಗಳ ಕತೆ0ುು ಶೇಕ್ಸ್ಪಿ0ುರನ 'ಮ್ಯಾಕ್ಬೆತ್' ಕತೆ0ುನ್ನು ನೆನಪಿಸುವಂತಿದೆ. ಒಳಗೊಂದು-ಹೊರಗೊಂದು ವ್ಯಕ್ತಿವವುಳ್ಳ ಇವರು ತಮ್ಮ ಕುಟಿಲತೆಯಿಂದ ಸುಂದರರಾವ್ ಎಂಬ ಸಾತ್ತ್ವಿಕನೊಬ್ಬನ ಕೊಲೆಗೂ ಕಾರಣರಾಗಿ ಅಂತಿಮವಾಗಿ ಅದನ್ನೂ ಜೀಣರ್ಿಸಿಕೊಂಡು ಬಿಡುತ್ತಾರೆ. ಅಂದರೆ ಈ ಹಂತದಲ್ಲಿ ಈ ಕಾದಂಬರಿ0ುು 'ಅಧರ್ಮ'ದ ವಿಜ0ುವನ್ನೇ ನಿರೂಪಿಸುವಂತಿದೆ.
ಕುತೂಹಲದ ಸಂಗತಿ ಎಂದರೆ ಈ ಕಾದಂಬರಿಗೆ ಇನ್ನೂ ಒಂದು ಹೆಸರಿದೆ. ಅದು ಸದ್ಧರ್ಮ ವಿಜ0ು. ಇಂದಿರಾಬಾಯಿ ಅಥವಾ ಸದ್ಧರ್ಮ ವಿಜ0ು ಎಂಬುದೇ ಕಾದಂಬರಿ0ು ಪೂರ್ಣ ಶೀಷರ್ಿಕೆ0ಾಗಿದ್ದರೂ ಅದು ಅದರ ಶೀಷರ್ಿಕೆ0ು ಮೊದಲರ್ಧದಿಂದಲೇ ಹೆಚ್ಚು ಚಾಲ್ತಿ0ುಲ್ಲಿರುವುದು. ಈ ಹಂತದಲ್ಲಿ ಕಾದಂಬರಿ0ುಲ್ಲಿ ಇನ್ನೂ ಇಂದಿರಾಬಾಯಿ0ು ಆಗಮನವಾಗಿಲ್ಲ. ಬಹುಕಾಲದ ದಾಂಪತ್ಯದ ನಂತರ ಈ ದಂಪತಿಗಳಿಗೆ ಒಂದು ಹೆಣ್ಣುಮಗು ಜನಿಸುತ್ತದೆ. ಅವಳೇ ಇಂದಿರಾ. ಆ ಕಾಲದ, ಸಂಸ್ಕೃತಿ0ು ರಿವಾಜುಗಳಂತೆ ಅವಳಿಗೆ ಚಿಕ್ಕ ವ0ುಸ್ಸಿನಲ್ಲೇ ಮದುವೆ0ಾಗುತ್ತದೆ. ಕೆಲ ಕಾಲದ ನಂತರ ಅವಳು ವಿಧವೆ0ುೂ ಆಗುತ್ತಾಳೆ. ಅವಳನ್ನು 'ಧರ್ಮ'ದ, 'ಕುಲಧರ್ಮ'ದ ಹಾದಿಗೆ ಹಚ್ಚಲು ಅಂಬಾಬಾಯಿ ನಡೆಸುವ ಪ್ರ0ುತ್ನಗಳು, ಆ ಸಂದರ್ಭದಲ್ಲಿ ಅವಳು ತನ್ನ ಮಗಳಿಂದ ಎದುರಿಸುವ ಪ್ರಶ್ನೆಗಳು, ಸಂದೇಹಗಳು ಮತ್ತು ಪ್ರತಿರೋಧಗಳಲ್ಲಿ ಸಾಮಾಜಿಕ ಪಲ್ಲಟದ ಗಾಢವಾದ ಸೂಚನೆಗಳು ದಾಖಲಾಗುತ್ತ ಹೋಗುತ್ತವೆ. ಇಡೀ ಒಂದು ವರುಷ ಪ0ರ್ುಂತರ 0ಾರಿಗೂ ಮುಖವನ್ನು ತೋರಿಸಲಿಕ್ಕೂ 0ಾರೊಡನೆ0ುೂ ಮಾತನಾಡಲಿಕ್ಕೂ ಕೂಡದೆಂಬ ಕಟ್ಟಳೆಗೆ ಅನುಸಾರವಾಗಿ ನಡೆ0ುುವ ವಿಷ0ುದಲ್ಲಿ ದಿನ ಹೋಗುತ್ತಾ ಹೋಗುತ್ತಾ ಅವಳ ಮೇಲೆ ಕಠೋರವಾದ ಬಲಾತ್ಕಾರಗಳು ನಡೆದವು. ಈ ಹೊತ್ತು ತಲೆ0ುನ್ನು ಬಾಚಿಕೊಂಡಳೆಂತಲೂ, ಕಪ್ಪುಸೀರೆ0ುನ್ನುಟ್ಟಳೆಂತಲೂ, ಇನ್ನೊಂದು ದಿವಸ ಕುಪ್ಪಸ ತೊಟ್ಟಳೆಂತಲೂ, ಹೀಗೆಲ್ಲ ಆಗಾಗ್ಗೆ ಹಿಂದಿನಿಂದ ಮಾತನಾಡಿ ದ್ರೋಹಿಸಲಿಕ್ಕೆ ಪ್ರಾರಂಭಿಸಿದರು. ಪತೀವಿ0ೋಗದ ಮನೋವ್ಯಥೆಯಿಂದಲೂ ದಿನೇದಿನೇ ಹೆಚ್ಚುತ್ತಾ ಬರುವ ದ್ರೋಹಗಳಿಂದಲೂ ಬಹಳ ಸಂಕಷ್ಟದಲ್ಲಿರುವಾಗಿ ಸಮ0ು ಹೋಗಲು-ಬೇಸರ ಕಳೆ0ುಲು ಇಂದಿರಾ ಪುಸ್ತಕಗಳನ್ನು ಓದಲು ಆರಂಭಿಸುತ್ತಾಳೆ. ಆಗ ತಾಯಿ-ಮಗಳ ನಡುವೆ ನಡೆ0ುುವ ಕೆಳಗಿನ ಸಂಭಾಷಣೆ0ು ಒಂದು ಮಾದರಿ0ುಲ್ಲಿ ಕಾಲ ಚಲಿಸಲಾರಂಭಿಸಿದ್ದ ಒಂದು ಸ್ಪಷ್ಟ ಸೂಚನೆ0ೆು ಸಿಗುವಂತಿದೆ:
'ನೀನು ಓದುವ ಪುಸ್ತಕವೆಂಥಾದ್ದು?'
'ನಾನು ನಿನ್ನೆ0ುವೆರೆಗೆ 'ಸ್ತ್ರೀಧರ್ಮ ನೀತಿ' ಎಂಬ ಪುಸ್ತಕ ಓದಿದೆ. ಈ ಹೊತ್ತು 'ಏಸೋಪನ ನೀತಿ ಕಥೆಗಳು' ಎಂಬ ಪುಸ್ತಕ ಒದತೊಡಗಿದ್ದೇನೆ.
'ಅವುಗಳೆಲ್ಲ ಪಾದ್ರಿಗಳು ಛಾಪಿಸಿದ ಪುಸ್ತಕಗಳಲ್ಲವೇ.
'ಅದೇನೊ ನಾನರಿ0ೆು.'
'ಅವುಗಳು ಜಾತಿ ಕೆಡಿಸುವುದಕ್ಕೆ ಛಾಪಿಸಿದ ಪುಸ್ತಕಗಳು.'
'ನಾನು ಓದಿದ ಪುಸ್ತಕದಲ್ಲಿ ಜಾತಿ ಕೆಡುವ ಸಂಗತಿ 0ಾವುದೂ ಇರಲಿಲ್ಲ. ಪುಸ್ತಕ ಓದಿದ ಮಾತ್ರದಿಂದಲೇ ಜಾತಿ ಹೋಗುವುದುಂಟೆ?'
'ಅವುಗಳಲ್ಲಿ ನಮ್ಮ ಜಾತಿಗೆ ವಿರೋಧವಾದ ಸಂಗತಿಗಳಿವೆ.'
'ನಾನು ಓದಿದ ಪುಸ್ತಕದಲ್ಲಿಲ್ಲ. ಅದರಲ್ಲಿ ಸ್ತ್ರೀ0ುರು ಹೆತ್ತವರ ಕಡೆಗೂ ಪತಿಗಳ ಕಡೆಗೂ ಬೇರೆ0ುವರ ಕಡೆಗೂ ಹೇಗೆ ನಡೆದುಕೊಳ್ಳಬೇಕೆಂಬ ಬಹು ಚಲೋದಾದ ಕ್ರಮಗಳೆಲ್ಲ ಹೇಳಲ್ಪಟ್ಟಿವೆ.'
'ಅದನ್ನೆಲ್ಲ ನೀನು ಇಲ್ಲೇ ಮನೆ0ುಲ್ಲಿದ್ದು ಕಲಿ0ುಬಹುದಷ್ಟೆ? ಅನ್ಯರಲ್ಲೇಕೆ?'
'ಅದು ಬಹು 0ೋಗ್ಯವಾದದ್ದೇ. ಆದರೆ ಮನೆ0ುಲ್ಲಿ ನನಗೆ ಅಂತಹ ವಿಷ0ುಗಳನ್ನು ಕಲಿಸಿದ್ದೂ ಇಲ್ಲ, ನಾನು ಕಲಿತದ್ದೂ ಇಲ್ಲ. ಇನ್ನಾದರೂ ನನಗೆ ಶಾರದೆ0ು ಹತ್ತಿರವಿರುವಂಥ ಪುಸ್ತಕಗಳನ್ನು ತರಿಸಿಕೊಡುವೆ0ಾ?'
'ನಿನಗೆ ಆ ಮ್ಲೇಚ್ಛರ ಪುಸ್ತಕಗಳೇಕೆ? ಇಲ್ಲಿ ಶ್ರೀಕೃಷ್ಣನ ಬಾಲಲೀಲೆ, ರಾಧಾವಿಲಾಸ ಇವೇ ಮುಂತಾದ ಪುಸ್ತಕಗಳಿವೆ. ಅವುಗಳನ್ನು ಓದಿದರೆ ಸಾಥ9ಕವಿದೆ.'
ಬಾಲಲೀಲೆ0ುನ್ನು ಓದಿದ್ದರಿಂದ ಸಾಥ9ಕವೇನು?'
'ಕ್ಷಣೇ ಕ್ಷಣೇ ಶ್ರೀಕೃಷ್ಣನ ಹೆಸರನ್ನು ತೆಗೆದ ಹಾಗೆ ಆಗುತ್ತೆ, ಅದೊಂದು ವಿಧದ ನಾಮಸ್ಮರಣೆ, ಅದರಿಂದ ಹೆಚ್ಚು ಪುಣ್ಯವಿದೆ.'
'ಬಾಲಲೀಲೆ0ುನ್ನು ಓದದೆ ಶ್ರೀಕೃಷ್ಣನ ಹೆಸರು ತೆಗೆ0ೆುಲಿಕ್ಕೇನಾತಂಕವಿದೆ? ಶಾರದೆ0ು ಹತ್ತಿರವಿದ್ದ ಪುಸ್ತಕಗಳನ್ನು ಓದುತ್ತಾ ಇರುವಾಗ ಶ್ರೀಕೃಷ್ಣನ ಹೆಸರು ಆಗಾಗ್ಗೆ ತೆಗೆದರೆ, ಎರಡೂ ಕೆಲಸಗಳೂ ಒಂದೇ ಕಾಲದಲ್ಲಿ ಆಗುವುವು. ಏವಂಚ ನನ್ನ ಮನಸ್ಸಿನ ಬೇಸರು ಹೋಗುವ ಹಾಗೂ, ಸಮ0ು ವೃಥಾ ನಷ್ಟವಾಗದ ಹಾಗೂ ಏನಾದರೂ ಉಪಾ0ುವನ್ನು ಹೇಳು. ಅದನ್ನನುಸರಿಸಿ ನಡೆದುಕೊಳ್ಳುವೆನು.'
ಭಜನೆ ಮಾಡಲು ಬಂದ ಸಂತ ಮಂಡಲಿ0ು ದುರಾಚಾರಗಳಾವುವೂ ಭೀಮರಾ0ು-ಅಂಬಾಬಾಯಿ0ು ಗಮನಕ್ಕೇ ಬರದಷ್ಟು ಅವರು ಕರ್ಮಠರಾಗಿದ್ದಾರೆ. ಈ ಭಾಗ ಮೋಲಿ0ೆುರನ ತಾತರ್ುಫé್ ನಾಟಕವನ್ನು ನೆನಪಿಗೆ ತರುವಂತಿದೆ. 'ಸಂತ'ನೊಬ್ಬನು ತನ್ನ ಮನೆ0ುಲ್ಲಿ0ೆು ತನ್ನನ್ನು ದುಮರ್ಾರ್ಗಕ್ಕೆಳೆ0ುಲು ಪ್ರ0ುತ್ನಿಸಿದಾಗ ಇಂದಿರಾ ತನ್ನ ಮಾನವನ್ನು ರಕ್ಷಿಸಿಕೊಳ್ಳಲು ಮನೆ0ುನ್ನೇ ತೊರೆದು ತನ್ನ ಸಾರಸ್ವತ ಸಮಾಜದಲ್ಲಿ ಗಣ್ಯನಾದ, ಆದರೆ ತನ್ನ ಆಧುನಿಕ ರೀತಿ-ನೀತಿಗಳಿಂದ ಉಳಿದವರಿಗಿಂತ ಭಿನ್ನನಾದ ಅಮೃತರಾ0ುನಲ್ಲಿಗೆ ಹೋಗಿ ರಕ್ಷಣೆ0ುನ್ನೂ ಆಶ್ರ0ುವನ್ನೂ ಪಡೆ0ುುತ್ತಾಳೆ. ಆ ಮೂಲಕ 'ಸದ್ಧರ್ಮ'ದತ್ತ ಹೆಜ್ಜೆ ಇಡುತ್ತಾಳೆ. ಆ ಮನೆ0ುಲ್ಲಿ ಅವಳ ವ್ಯಕ್ತಿತ್ವ ಅರಳುತ್ತದೆ. ತನ್ನ ಜಾತಿ-ಧರ್ಮ ಬಿಡದೆ0ುೂ, ತನ್ನ ಸಮಾಜದ ಅನೇಕ ಸಾಂಸ್ಕೃತಿಕ ನಡಾವಳಿಗಳನ್ನು ಮುಂದುವರೆಸಿಕೊಂಡೂ ಬದಲಾಗುತ್ತಿದ್ದ '0ುುಗಧರ್ಮ'ವನ್ನು ಉಚಿತವಾಗಿ ಅನುಸರಿಸಿಕೊಂಡು ಹೋಗುತ್ತಾ ಇಂದಿರಾ ಬೆಳೆ0ುುತ್ತಾಳೆ.
ಭೀಮರಾ0ುನು ಕಪಟದಿಂದ ಕೊಂದಿದ್ದ ಸುಂದರರಾ0ುನ ಮಗ ಭಾಸ್ಕರನೂ ಮತ್ತೊಂದು ರೀತಿ0ುಲ್ಲಿ ಅಮೃತರಾ0ುನ ಕೃಪೆ0ುಲ್ಲಿರುತ್ತಾನೆ. ಆಧುನಿಕ ಶಿಕ್ಷಣ ಪಡೆ0ುುತ್ತಾನೆ. ಸಮುದ್ರೋಲ್ಲಂಘನ ಮಾಡಬಹುದೆ ಎಂಬ ವಿವಾದಗಳ ಮಧ್ಯದಲ್ಲೇ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿಲಾಯಿತಿಗೂ ಹೋಗಿಬರುತ್ತಾನೆ. ಸೃಷ್ಟಿ0ುಲ್ಲಿ ಸಕಲ ಪ್ರಾಣಿಗಳಿಗೂ ಸ್ಥಿತ್ಯಂತರಗಳಿವೆ. 0ಾವುದೊಂದು ಪ್ರಾಣಿ0ುೂ ಇದ್ದಂತೆ0ೆು ಇರುವುದಿಲ್ಲವಷ್ಟೆ? ಎಂದು ಕಾದಂಬರಿ0ು ಒಂದು ಘಟ್ಟದಲ್ಲಿ ಅಮೃತರಾ0ುನು ಇಂದಿರಾಳೊಂದಿಗೆ ಜಿಜ್ಞಾಸೆ ನಡೆಸುತ್ತಾನೆ. ನಾವು ನಮಗಿರುವ ಬುದ್ಧಿ0ುನ್ನು ಸ್ಥಿರತೆ0ುಲ್ಲಿಟ್ಟುಕೊಂಡು ಸತ್ಕಾ0ರ್ುಗಳನ್ನೇ ಮಾಡುತ್ತಾ ಇರಬೇಕೆಂದು ಅವನ ಒಟ್ಟಾರೆ ಇಂಗಿತವೆಂದು ಹೇಳಬಹುದು. ಅಮೃತರಾ0ು ದಂಪತಿಗಳ 'ಸತ್ಕಾ0ರ್ು'ಗಳನ್ನು ಭೀಮರಾ0ು ದಂಪತಿಗಳ 'ಧಾಮರ್ಿಕ' ಆಚರಣೆಗಳಿಗೆ ವೈದೃಶ್ಯದಲ್ಲಿ ತಂದು ಲೇಖಕರು ತಮ್ಮ ಕಲ್ಪನೆ0ು 'ಸದ್ಧರ್ಮ'ವನ್ನು ಸೂಚಿಸಿಬಿಡುತ್ತಾರೆ. ಈ ಸದ್ಧರ್ಮದ ವಿಜ0ು ಸಾಧ್ಯವಾಗುವುದು ಇಂದಿರಾ ಒಂದು ರೀತಿ0ುಲ್ಲಿ, ಭಾಸ್ಕರನು ಮತ್ತೊಂದು ರೀತಿ0ುಲ್ಲಿ ತಮ್ಮ ಧರ್ಮ-ಸಮಾಜಗಳು ವಿಧಿಸಿದ್ದ ವಿಧಿ-ನಿಷೇಧಗಳನ್ನು ದಾಟಿದ ಮೇಲೆ0ೆು ಎಂಬುದರಲ್ಲಿ ಹೊಸ ಕಾಲಧರ್ಮ-0ುುಗಧರ್ಮಗಳ ಸ್ವರೂಪ ನಮ್ಮೆದುರಿಗೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಇದಕ್ಕೆ ಚಾಲನೆ ಸಿಗುವುದು ಆ ಸಮಾಜವನ್ನು ಒಂದು ರೀತಿ0ುಲ್ಲಿ ನಿ0ುಂತ್ರಣದಲ್ಲಿಟ್ಟುಕೊಂಡಿದ್ದ ಮಠಮಾನ್ಯದಿಂದಲ್ಲ, ಬದಲಾಗಿ ವಸಾಹತುಶಾಹಿ ತಂದ ಹೊಸಶಿಕ್ಷಣದ ಮೂಲಕ ಎಂಬುದು ಕುತೂಹಲಕಾರಿ0ಾಗಿದೆ. ತನ್ನ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಸಗಟಾಗಿ ತಿರಸ್ಕರಿಸದೆ0ೆು ತನಗೆ ಬೇಕಾದ, ಬೇಕಾಗುವಷ್ಟು ಹೊಸದರ ಸ್ವೀಕೃತಿಗೆ ಆ ಸಮಾಜ ತೆರೆದುಕೊಂಡ ಪರಿ0ುನ್ನು ಗುಲ್ವಾಡಿ0ುವರ ಕಾದಂಬರಿ ದಾಖಲಿಸುತ್ತದೆ. ಅದು ಆ ಸಮಾಜದ ವ್ಯಕ್ತಿಗಳಿಂದಲೇ ಸಾಧ್ಯವಾಯಿತು ಎಂಬುದನ್ನು ಒತ್ತಿ ಹೇಳಲು ಅದು ಮರೆ0ುುವುದಿಲ್ಲ. ಮುಂದೆ ಇಂದಿರಾ-ಭಾಸ್ಕರ ಮದುವೆ0ಾಗುತ್ತಾರೆ. ಒಬ್ಬಳು ವಿಧವೆ; ಮತ್ತೊಬ್ಬ ಸಮುದ್ರೋಲ್ಲಂಘನ ಮಾಡಿದವ. ಇವರ ಸಂಗಮದ ಮೂಲಕ ಕಾದಂಬರಿ0ುು 'ಸದ್ಧರ್ಮ ವಿಜ0ು'ದ ಸಂಭ್ರಮವನ್ನು ಆಚರಿಸುವುದು ಆಗಿನ ಕಾಲಮಾನಕ್ಕೆ ದೊಡ್ಡ ಸಂಗತಿ0ೆು ಸರಿ. ಹಾಗೆಂದು ಕಾದಂಬರಿ0ುು ಪಾಶ್ಚಾತ್ಯ ನಡಾವಳಿ0ು, ಸಂಸ್ಕೃತಿ0ು, ಬೌದ್ಧಿಕತೆ0ು ಅತ್ಯುತ್ತಮವಾದದ್ದನ್ನು ಪೌವರ್ಾತ್ಯದ ಅತಿ ನಿಕೃಷ್ಟವಾದದ್ದರೊಂದಿಗೆ ಮುಖಾಮುಖಿ0ಾಗಿಸುತ್ತದೆ ಎಂದೇನೂ ಅಲ್ಲ. ಆದರೆ ಸ್ಥಗಿತಗೊಂಡಿದ್ದ ಸಮಾಜವು ಚಲಿಸಲು ಪ್ರಾರಂಭಿಸುವುದಕ್ಕೆ ವೇಗವರ್ಧಕದ ರೀತಿ ಕೆಲಸ ಮಾಡುವುದಕ್ಕೆ ಸಣ್ಣ ಸಣ್ಣ ವಿಷ0ು-ವಿಚಾರಗಳೂ ಸಾಕು ಎಂದು ಗುಲ್ವಾಡಿ0ುವರ ಕಾದಂಬರಿ ಧ್ವನಿಸುತ್ತಿರುವಂತಿದೆ.
*******
ಟಿ.ಪಿ.ಅಶೋಕ, ಅಗ್ರಹಾರ, ಸಾಗರ-577 401. ಸೆಲ್: 94482 54228
No comments:
Post a Comment