ಪಂಜೆ ಮಂಗೇಶರಾವ್ ಅವರ ವೈದ್ಯರ ಒಗ್ಗರಣೆ
ಪಂಜೆ ಮಂಗೇಶರಾವ್(1874-1932)ಅವರನ್ನು ಆಧುನಿಕ ಕನ್ನಡದ ಮೊದಲ ಕತೆಗಾರರೆಂದು ಗುರುತಿಸಲಾಗಿದೆ. ಮಾಸ್ತಿ, ಕೆರೂರ ವಾಸುದೇವಾಚಾ0ರ್ು, ಎಸ್.ಜಿ.ಶಾಸ್ತ್ರಿ ಮೊದಲಾದವರಿಗಿಂತ ಮೊದಲು ಸಣ್ಣಕತೆಗಳನ್ನು ಬರೆದು ಪ್ರಕಟಿಸಿದ ಕೀತರ್ಿಗೆ ಇವರು ಭಾಜನರಾಗಿದ್ದಾರೆ. 1900ರಲ್ಲೇ ಕತೆಗಳನ್ನು ಬರೆ0ುಲಾರಂಭಿಸಿದ ಪಂಜೆ0ುವರು ಬೆನಗಲ್ ರಾಮರಾವ್ ಸಂಪಾದಕತ್ವದ ಸುವಾಸಿನಿ ಪತ್ರಿಕೆ0ುಲ್ಲಿ ಅವುಗಳನ್ನು ಪ್ರಕಟಿಸುತ್ತಿದ್ದರು. ಬಂಟ್ವಾಳದಲ್ಲಿ ಹುಟ್ಟಿ ಬೆಳೆದು ಮಂಗಳೂರಿನ ಸರಕಾರೀ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಆಮೇಲೆ ಶಾಲಾ ಇನ್ಸ್ಪೆಕ್ಟರ್ ಆಗಿ ಅವರು ಆಡಳಿತ ವ್ಯವಸ್ಥೆ0ು ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅಂಥ ಹಲವು ಅನುಭವಗಳನ್ನು ಅವರು ತಮ್ಮದೇ ಆದ ವಿನೋದಪೂರ್ಣ ಶೈಲಿ0ುಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ಅವರ ಹೆಚ್ಚಿನ ಬರಹಗಳಲ್ಲಿ ಆರಂಭಿಕ ಆಧುನಿಕ ಕನ್ನಡ ಹರಟೆ-ಪ್ರಬಂಧ-ಸಣ್ಣಕತೆಗಳ ಅನೇಕ ಲಕ್ಷಣಗಳು ಕಂಡುಬರುತ್ತವೆ. ಅನೇಕ ರಚನೆಗಳು ತುಂಬ ನಿಖರವಾದ ಪ್ರಕಾರ ವಿಂಗಡಣೆಗೆ ಸಿಲುಕುವಂತಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಆಧುನಿಕ ಭಾರತದ ಇತಿಹಾಸ ನಿಮರ್ಾಣವಾಗುತ್ತಿದ್ದ ಕಾಲದಲ್ಲಿ, ಕನ್ನಡ ಗದ್ಯ ತನ್ನ ದಿಕ್ಕುದೆಸೆಗಳನ್ನು ಕಂಡುಕೊಳ್ಳುತ್ತಿದ್ದ ಕಾಲದಲ್ಲಿ ಪಂಜೆ0ುವರು ಬರೆ0ುಲಾರಂಭಿಸಿದ್ದರು. ಸಹಜವಾಗಿ0ೆು ಹೊಸ ಕಾಲದ ಹೊಸ ವಾಸ್ತವತೆಗಳು ಇವರ ಅನುಭವ-ಅವಲೋಕನಗಳಿಗೆ ಒದಗಿ ಬಂದಷ್ಟು ಇವರ ಬರವಣಿಗೆ0ುಲ್ಲಿ ದಾಖಲಾಗಿವೆ. ಹಳೆ0ು ಸ್ಮೃತಿಗಳು ಪೂರಾ ನಶಿಸಿಹೋಗಿರದ ಹೊಸ ನಡಾವಳಿಗಳು ಪೂರಾ ಒಗ್ಗಿರದ ಒಂದು ಸಂಕ್ರಮಣ ಸ್ಥಿತಿ0ುಲ್ಲಿ ಇವರ ಹೆಚ್ಚಿನ ಕಥೆಗಳು ಹುಟ್ಟಿಕೊಂಡಿವೆ. 'ಕುಂಪಣಿ' ಸರಕಾರದ ಆಡಳಿತ ವೈಖರಿ, ಅದು ಸೃಷ್ಟಿಸಿದ್ದ ನೌಕರಶಾಹಿ0ು ಕಾರುಬಾರಿನ ರೀತಿ, ಅವುಗಳಿಗೆ ಜನಸಾಮಾನ್ಯರ ಪ್ರತಿಕ್ರಿ0ೆು0ು ಕೆಲವು ಮಾದರಿಗಳು ಇವೆಲ್ಲ ಅವರಿಗೆ ಕಥಾದ್ರವ್ಯವಾಗಿ ಲಭ್ಯವಾಗಿವೆ. ಕನ್ನಡ ಸಣ್ಣಕತೆ0ು ಮೊದಲ ಪ್ರ0ೋಗ-ಪ್ರ0ುತ್ನಗಳ ಸಾಹಿತ್ಯಿಕ ದಾಖಲೆಗಳಂತೆ ಆ ಕಾಲದ ಸಾಂಸ್ಕೃತಿಕ ದಾಖಲೆಗಳಾಗಿ0ುೂ ಪಂಜೆ0ುವರ ಬರಹಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವರಿಗೆ ಆಧುನಿಕಪೂರ್ವ ಕಥಾಮಾದರಿಗಳ ಪರಿಚ0ುವಿತ್ತು. ಹಾಗೆ0ೆು ಇಂಗ್ಲಿಷ್ ಸಾಹಿತ್ಯದ ಪರಿಚ0ುವೂ ಇತ್ತು. ಅವುಗಳನ್ನು ತಮ್ಮ ಸೃಜನಶೀಲ ಅಗತ್ಯಕ್ಕೆ ಬಳಸಿಕೊಳ್ಳುವ ಕುಶಲತೆ0ುೂ ಇತ್ತು.ಹಳೆ0ು ಸಬ್ ಎಸಿಸ್ತಾಂಟನ ಸುಳ್ಳು ಡೈರಿಯಿಂದ ಎಂಬ ಕಥನದಲ್ಲಿ ಒಂದು ಮಾತು ಬರುತ್ತದೆ: ಹಳ್ಳಿ0ುಲ್ಲಿ ಸರಕಾರಿ ಉದ್ಯೋಗಸ್ಥರ ಮೇಲೆ ಸರ್ವಸಾಧಾರಣವಾಗಿ ಅಳುಕು ಇದೆ, ಅಂಜಿಕೆ ಇದೆ, ಅಪಾ0ು ಭೀತಿ ಇದೆ; ಆದರೆ ಅಕ್ಕರೆ ಕಡಿಮೆ. ಅಕ್ಕರೆ ಇದ್ದಲ್ಲಿ ಅವರಿಗೆ ನಿಜವಾದ ಅಭಿಮಾನವಿದೆ. ಅದು ಇಲ್ಲದ್ದಲ್ಲಿ ಅವರ ಮನಸ್ಸಿನೊಳಗಣ ನಂಬುಗೆ ಹೀಗಿದೆ-ಮುಕ್ಕಾಲು ಮೂರುವೀಸ ಅದಿಕಾರಿಗಳು ಸರೀಸೃಪಗಳಂತೆ ಉದರಗಾಮಿಗಳು, ಈ ರೂಪಕದ ವಿಸ್ತರಣೆ ಹೀಗಿದೆ: ಸರಕಾರದವರಲ್ಲಿ ಸಿವಿಲಿನವರು ಹೆಬ್ಬಾವುಗಳು, ಪೋಲೀಸಿನವರು ನಾಗರಹಾವುಗಳು, ಅಬ್ಕಾರಿ ಜಂಗ್ಲಿ0ುವರು ಮಂಡಲಿಗಳು... ತುಸು ಲಘು ಎನ್ನಿಸಬಹುದಾದ ಮತ್ತೊಂದು ಅನುವಾದಿತ ಕಿರುಕಥನಲ್ಲಿ 'ಸಾಹೇಬ'ನೊಬ್ಬ ಸ್ಥಳೀ0ು ದೋಭಿ0ು ಮೇಲೆ ದೌಲತ್ತು ತೋರಿಸಹೋಗಿ ತಾನೇ ಕತ್ತೆ0ಾದ ವಿಪರೀತ ಪ್ರಸಂದ ಹಾಸ್ಯಭರಿತ ನಿರೂಪಣೆಯಿದೆ. ಅದರ ಜೊತೆಗೇ ಸಾಹೇಬನಿಗೆ ಆದ ಒಂದು ಅನುಭವಪಾಠವೂ ಗಮನಾರ್ಹವಾಗಿದೆ: ದೇಶಭಾಷೆ0ು ಅಭ್ಯಾಸಕ್ಕೆ ಸ್ವಲ್ಪ ಹೆಚ್ಚು ಗಮನವನ್ನು ಕೊಡುವುದಕ್ಕೆ ಸಾಹೇಬರು ತೊಡಗಿದರು; ಮತ್ತು ತಾನು ಚೆನ್ನಾಗಿ ದೇಶಭಾಷೆ0ುನ್ನು ತಿಳಿದ ಹೊರತು ಅದರಿಂದ ಒಂದೇ ಒಂದು ಅಕ್ಷರವನ್ನು ಉಚ್ಚರಿಸಲಾರೆನೆಂದು ನಿಶ್ಚೈಸಿದರು. ಪಂಜೆ0ುವರ ಬರಹಗಳು ಒಂದು ಕಾಲದ ಫಲ ಮತ್ತು ಪ್ರತಿಫಲನಗಳೇ ಆಗಿದ್ದರೂ ಅವು ಕೇವಲ ಕಾಲಬದ್ಧವಲ್ಲ ಎಂಬುದಕ್ಕೆ ಅವರ ಬರವಣಿಗೆಯಿಂದ ಇನ್ನೂ ಹಲವು ನಿದರ್ಶನಗಳನ್ನು ಕೊಡಬಹುದು. ಇಷ್ಟೇ ವಿನೋದಪೂರ್ಣವಾಗಿ ಆದರೆ ಸಂಕೀರ್ಣವಾಗಿ ಆಡಳಿತ ಮತ್ತು ನ್ಯಾ0ಾಂಗ ವ್ಯವಸ್ಥೆ0ು ವೈಪರೀತ್ಯಗಳನ್ನು ಚಿತ್ರಿಸುವ ಕಥೆ ಎಂದರೆ ನನ್ನ ಚಿಕ್ಕತಂದೆ0ುವರ ಉಯಿಲ್. ತಮ್ಮ ಮರೆ0ುಬಾರದ ಹಳೆ0ು ಕಥೆಗಳು ಮಾಲಿಕೆಗೆ ಈ ಕಥೆ0ುನ್ನು ಆ0ು್ದುಕೊಂಡಿರುವ ಗಿರಡ್ಡಿ ಗೋವಿಂದರಾಜ ಅವರು ಅದನ್ನು ಕುರಿತ ಒಂದು ಮೌಲಿಕ ಟಿಪ್ಪಣಿ0ುನ್ನೂ ಮಾಡಿದ್ದಾರೆ. ವೈದ್ಯರ ಒಗ್ಗರಣೆ ಕೂಡ ಮೇಲು ನೋಟಕ್ಕೆ ಒಂದು ಹಾಸ್ಯ ಪ್ರಸಂಗವೆನಿಸಿದರೂ ಒಂದು ವ್ಯವಸ್ಥೆ0ು ಸ್ವರೂಪವನ್ನು ಅನಾವರಣಗೊಳಿಸುವಲ್ಲಿ ಸಾಕಷ್ಟು 0ುಶಸ್ವಿ0ಾಗಿದೆ.
ವೈದ್ಯರ ಒಗ್ಗರಣೆ ಕಥೆ0ು ಆರಂಭದ ಸಾಲುಗಳಲ್ಲೇ ಆ ಕಾಲಮಾನದ ಸ್ವರೂಪ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ: ವಲ್ಲಭಾಚಾ0ರ್ುರು 1862ರಲ್ಲಿ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರೆ ಇರಲಿಲ್ಲ..ಸರಕಾರೀ ಹುದ್ದೆಗಳಿಗೋಸ್ಕರ ಮೇಲಾಟ ಇರಲಿಲ್ಲ. ಪೇಚಾಟ ಇರಲಿಲ್ಲ. ಇಂದಿನಂತೆ ಅನೇಕ ಪರೀಕ್ಷೆಗಳೂ ಇರಲಿಲ್ಲ. ವಲ್ಲಭಾಚಾ0ರ್ುರೂ ಒಂದು ಬಹಿರಂಗ ಪರೀಕ್ಷೆ0ುನ್ನು 'ತೇಲಿ'ದ್ದರಂತೆ. 'ಇವರ ಸ್ಥೂಲ ದೇಹ, ಗೋಷ್ಟದ ಕೇಶ, ದೀರ್ಘ ನಾಮ, ಕರ್ಣತುಳಸಿ, ಗಂಧಲೇಪನ, ಲಂಬೋದರ-ಇವೇ ಅಮಲ್ದಾರ್ ಹುದ್ದೆ0ು ಮುಖ್ಯ ಲಕ್ಷಣಗಳಾಗಿದ್ದವು' ಎಂದು ನಿರೂಪಕನು ದಾಖಲಿಸುತ್ತಾನೆ. ಅವರಿಗೆ ಇಂಗ್ಲಿಷ್ ಭಾಷಾಜ್ಞಾನ ಎಷ್ಟಿತ್ತೆಂಬುದೂ 0ಾರಿಗೂ ಖಚಿತವಾಗಿ ಗೊತ್ತಿರಲಿಲ್ಲವಂತೆ. 'ಇಂಗ್ಲೀಸು ಮಾತಾಡಲು ತಿಳಿದಿತ್ತು ಎಂದು ನಮ್ಮ ಮನೆ ಅಜ್ಜಿ0ೊಂದು ಈಗಲೂ ಹೇಳುತ್ತಿರುವಳು'. ನಿರೂಪಕ ಹೇಳುವ ಮುಂದಿನ ಮಾತುಗಳಲ್ಲಿ ಎರಡು ಭಿನ್ನ ಸಂಸ್ಕೃತಿಗಳು ಮತ್ತು ವ್ಯವಸ್ಥೆಗಳು ಪರಸ್ಪರ ಮುಖಾಮುಖಿ0ಾದಾಗಿನ ಆರಂಭದ ಅವಸ್ಥೆ ಮತ್ತು ಪರಿಣಾಮದ ಒಂದು ವೈನೋದಿಕ ಚಿತ್ರ ಸಿಗುವಂತಿದೆ: ಇವರ 'ಜಜ್ಮೆಂಟು'ಗಳು ಬಹಳ ನೂತನವಾಗಿದ್ದುವೆಂದು ಬಾಜಾರಿನಲ್ಲಿ ಈಗಲೂ ವರ್ತಮಾನವಿದೆ. ವಲ್ಲಭಾಚಾ0ರ್ುರು 'ಪೀನಲ್ ಕೋಡನ್ನು' ಅಷ್ಟು ಚೆನ್ನಾಗಿ ಮನ್ನಿಸುತ್ತಿರಲಿಲ್ಲ. ಆ ಕೋಡು ಬಿಳೇ ಜನರ ತಲೆ0ು ಮೇಲೆ ಚೆನ್ನಾಗಿ ತೋರುವುದಲ್ಲದೆ, ನಾವು ಧರಿಸುವುದಕ್ಕೆ ಎತ್ತುಗಳಲ್ಲವೆಂದು ಅವರ ಅಭಿಪ್ರಾ0ುವಾಗಿತ್ತು. 'ಜಜ್ಮೆಂಟು'ಗಳಲ್ಲಿ ಭಾರತರಾಮಾ0ುಣದಿಂದಲೇ ಬೇಕಾದಷ್ಟು ಅಧಾರಗಳನ್ನು ಕೊಟ್ಟು 'ಕೇಸುಗಳನ್ನು' ತೀರಿಸುತ್ತಿದ್ದರು. ಇವರು ಸ್ವಲ್ಪ ಸ್ತ್ರೀ ಪಕ್ಷಪಾತಿ ಎಂದೂ ಹೆಸರಾಗಿದ್ದರಂತೆ.
ಈ ಅಮಲ್ದಾರರಿಗೆ ತಿಂಗಳಿಗೊಂದು ಬರಿ 'ಸಕರ್ಿಟ್' ತಿರುಗುವ ಸಂಪ್ರದಾ0ುವಿತ್ತಂತೆ. ಅದಕ್ಕೆ ಮುಖ್ಯ ಕಾರಣವೆಂದರೆ ಅಂದು ಸರಕಾರದ ಉದ್ಯೋಗಸ್ಥರಿಗೆ ಸಂಬಳ ಕಡಿಮೆ, 'ಸಕರ್ಿಟ್' ಹೆಚ್ಚು. ಹೀಗೆ ಜಮಾಬಂದಿಗೆ ಹೋದಾಗಲೇ ಅವರಿಗೆ ನಾಲ್ಕು ಕಾಸು ಸಿಗಬೇಕು. 'ಜಬಾನ್ ಬಂದ್' ಎಂಬ ಶಬ್ದವು 'ಜಮಾಬಂದ್' ಎಂದು ಅಪಭ್ರಂಶಗೊಂಡಿದೆ ಎಂದು ತಿಳಿಸುವ ನಿರೂಪಕನು ಆ ಮೂಲಕ ಅದರ ಹಿಂದಿನ ಕಲ್ಪನೆ0ುೂ ವಿಕೃತಗೊಂಡ ಬಗೆ0ುನ್ನು ಹೀಗೆ ವಿವರಿಸುತ್ತಾನೆ: ಜಮಾಬಂದ್ ಎಂಬುದು ಹಿಂದುಸ್ಥಾನಿ ಭಾಷೆ0ು ಪದವು. ಸರಕಾರಕ್ಕೆ ವರ್ಷಂಪ್ರತಿ ಬರುವ ಭೂಮಿ0ು ತೀವರ್ೆ0ು ಜಮೆ0ುನ್ನು 'ಬಂದ್' ಮಾಡುವುದು ಎಂಬ ಅರ್ಥವನ್ನು ಕೆಲವರು ಕಲ್ಪಿಸಿರುವರು. ಇದು ಶುದ್ಧ ತಪ್ಪು. 'ಜಬಾನ್ ಬಂದ್' ಎಂದರೆ ನಾಲಗೆ0ುನ್ನು ಕಟ್ಟುವುದು; ಇದುವೆ ಅಪಭ್ರಂಶವಾಗಿ 'ಜಮಾ ಬಂದ್' ಆಯಿತು. ಜನಗಳ 'ಹಾಲ್ ಹವಾಲೆ0ುನ್ನು' ಹೇಳುವ ನಾಲಗೆ0ುನ್ನು ಕಟ್ಟುವುದು ಎಂಬ ಅರ್ಥ. ಈ ಅರ್ಥಕ್ಕೆ ಮುಂಚಿನವರು ಕುಳುವಾರುಗಳ ಸ್ಥಿತಿಗತಿಗಳನ್ನು ಮೊರೆ, ಗೋಳುಗಳನ್ನೂ ಕೇಳಿ, ದವಸ ತುಟ್ಟಿ0ುದ ಕಾಲದಲ್ಲಿ ತೀವರ್ೆ0ುಲ್ಲಿ ಬೇಕಾದಷ್ಟನ್ನು ಮುಜುರೆ ಕೊಟ್ಟು, ಅವರ ಬಾ0ುನ್ನೂ ಕೂಗನ್ನೂ ತಡೆಸುತ್ತಿದ್ದರು.
ಅಮಲ್ದಾರರು ಸಕರ್ಿಟಿಗೆ ಬಂದಾಗ ಅವರಿಗೋಸ್ಕರ ಅಡಿಗೆ0ುವರನ್ನು ಒದಗಿಸುವುದು ಪಟೇಲನ ಜವಾಬ್ದಾರಿ0ಾಗಿತ್ತಂತೆ. 'ವಲ್ಲಭಾಚಾ0ರ್ುರು ಸ್ತ್ರೀಪಾಕ ನಿ0ುಮಿಷ್ಟರು; ಅವರಿಗೆ ಹೆಂಗಸರ ಅಡಿಗೆ ಮೆಚ್ಚುತ್ತಿತ್ತಲ್ಲದೆ ಗಂಡಸರ ಅಡಿಗೆ0ುು ರುಚಿಸುತ್ತಿರಲಿಲ್ಲ'. ಹಾಗಾಗಿ ಅದೇ ರೀತಿ0ು ಏಪರ್ಾಟನ್ನು ಪಟೇಲನು ಮಾಡುತ್ತಿದ್ದನೆಂದೂ, ಆದರೆ ಈಚೀಚೆಗೆ ಹೆಂಗಸರು ಈ ಕೆಲಸವನ್ನು ಒಪ್ಪಿಕೊಳ್ಳುತ್ತಿರಲಿಲ್ಲವೆಂದೂ, ಹಾಗೆ ಅಡಿಗೆಗೆ ಹೋದ ಹೆಂಗಸರನ್ನು ಅವರ ಗಂಡಂದಿರು ಒಪ್ಪಿಕೊಳ್ಳುತ್ತಿರಲಿಲ್ಲವೆಂದೂ, ಒಂದೆರಡು ಪ್ರಕರಣಗಳಲ್ಲಿ ಅಂಥ ಹೆಂಗಸರು ಬಹಿಷ್ಕಾರಕ್ಕೆ ಒಳಗಾಗಿದ್ದರೆಂದೂ ನಿರೂಪಕನು ತಿಳಿಸುತ್ತಾನೆ. ಹಾಗಾಗಿ ಪ್ರಸ್ತುತ ಅಮಲ್ದಾರರು ಸಕರ್ಿಟಿಗೆ ಬಂದಾಗ ಪಟೇಲನು ಎಷ್ಟು ಪ್ರ0ುತ್ನ ಪಟ್ಟರೂ 0ಾರೂ ಅಡಿಗೆ ಕೆಲಸಕ್ಕೆ ಸಿಗಲಿಲ್ಲ. ಆ ಗ್ರಾಮದಲ್ಲಿ ಬ್ರಾಹ್ಮಣರ ಸಂಖ್ಯೆ0ುೂ ಕಡಿಮೆ. ಪುರುಷ ಅಡಿಗೆ0ುವರೂ ಸಿಗಲಿಲ್ಲ. ಅಲ್ಲದೆ ಬ್ರಾಹ್ಮಣರೆಲ್ಲಾ ಶ್ರೀಕಾಂತ ಜಾತ್ರೆಗೆ ಹೊರಟು ಹೋಗಿದ್ದುದರಿಂದ ಅಮಲ್ದಾರರಿಗೆ ಅಡಿಗೆ ಏಪರ್ಾಟು ಸಕಾಲದಲ್ಲಿ ಮಾಡಲಾಗಲಿಲ್ಲ. 'ಪಟೇಲನು ಜಾತಿ0ುಲ್ಲಿ ಜೈನ. ತಾನೇ ಅಡಿಗೆ ಮಾಡುವುದಕ್ಕೆ ಉಪಾ0ುವಿಲ್ಲ'. ಅಮಲ್ದಾರರಿಗೆ ಸಿಟ್ಟು ಏರುತ್ತಾ ಹೋಗುತ್ತದೆ. '0ಾರನ್ನಾದ್ರೂ ಬಿಟ್ಟಿಗೆ ಹಿಡಿದ್ರೆ ಸರಿ' ಎಂದು ಅಮಲ್ದಾರರು ಆಜ್ಞೆ ಮಾಡುತ್ತಾರೆ! ಹಣ ಕೊಟ್ಟರೂ 0ಾರೂ ಸಿಗದಿದ್ದಾಗ ಬಿಟ್ಟಿಗೆ 0ಾರು ಸಿಗುತ್ತಾರೆ ಎಂದು ಪಟೇಲ ಅಲವತ್ತುಕೊಳ್ಳುತ್ತಾನೆ. 'ಎಲಾ! 0ಾರಿಗಾದ್ರೂ ಬಿಟ್ಟಿಗೆ ಹಿಡಿದು ತಂದ್ರೆ ಸರಿ! ಇಲ್ಲಾದ್ರೆ ನಿನ್ನ ಕೆಲ್ಸಕ್ಕೆ ರಾಜಿನಾಮೆ ಕೊಡು, ನಡಿ!' ಎಂದು ಅಮಲ್ದಾರರು ಬೆದರಿಕೆ ಹಾಕುತ್ತಾರೆ. ಕಡೆಗೆ ಶ್ರೀಕಾಂತ ಜಾತ್ರೆಗೆ ಹೋಗುತ್ತಿದ್ದ ದಾರಿಗನೊಬ್ಬನನ್ನು ಬಲವಂತವಾಗಿ ತಡೆದು ಅಡಿಗೆಭಟ್ಟನಾಗು ಎಂದು ಪಟೇಲನು ಜೋರುಮಾಡುತ್ತಾನೆ. ತಾನು ಓರ್ವ ವೈದ್ಯನೆಂದೂ, ಅಡಿಗೆ0ುವನಲ್ಲವೆಂದೂ, ತನಗೆ ಅಗತ್ಯವಾಗಿ ಶ್ರೀಕಾಂತ ಜಾತ್ರೆಗೆ ಹೋಗಲೇ ಬೇಕಾಗಿದೆ0ೆುಂದೂ ಆ ದಾರಿಗ ಅಂಗಲಾಚಿದರೆ, ಪಟೇಲನು, ನಿವರ್ಾಹವಿಲ್ಲ! ಬಾ0ು್ಮುಚ್ಚು ಕಳ್ಳ! ವೈದ್ಯ ನೀನು ಎಂಥಾ ವೈದ್ಯ! ಸುಮ್ಮನೆ ನನ್ನ ಹಿಂದೆ ಬಂದ್ರೆ ಸರಿ. ಇಲ್ಲಾದ್ರೆ ಕೈಗೆ ಕೋಳಾ ಹಾಕಿಸುವೆ ಎಂದು ಜುಲುಮೆ ಮಾಡಿ ಅವನನ್ನು ಒತ್ತಾ0ುದಿಂದ ಅಡಿಗೆ ಕೆಲಸಕ್ಕೆ ಹಚ್ಚುತ್ತಾನೆ. ಸರಕಾರದ ಹುದ್ದೆದಾರನ ದಂಡದ ಬೆದರಿಕೆಗೆ ಅಂಜಿ ಕೃಷ್ಣ ಎಂಬ ಈ ವೈದ್ಯನು ಅಡಿಗೆ ಮನೆಗೆ ಮರುಮಾತಿಲ್ಲದೆ ನಡೆ0ುುತ್ತಾನೆ. 'ಕೃಷ್ಣವೈದ್ಯರನ್ನು ಬಲಾತ್ಕಾರದಿಂದ ಅಡಿಗೆ ಮಾಡುವುದಕ್ಕೆ ಹಿಡಿದುದು ನಮ್ಮ ತಪ್ಪಾಗಬಹುದೇ?' ಎಂದು ಹೆಡ್ ಮುನಿಶಿ ವೈಕುಂಠ ವ್ಯಾಸಾಚಾ0ರ್ುರು ಅಮಲ್ದಾರರೊಡನೆ ಜಿಜ್ಞಾಸೆ ಮಾಡಲಾಗಿ ಅಮಲ್ದಾರರು ಹೀಗೆ ಅಪ್ಪಣೆ ಕೊಡಿಸುತ್ತಾರೆ: ವಿರಾಟರಾ0ುನು ಭೀಮಸೇನನನ್ನು ಅಡಿಗೆಗೆ ನಿಲ್ಲಿಸಿರಲಿಲ್ಲವೇ? ನಳಚಕ್ರವತರ್ಿ ಸ್ವ0ುಂಪಾಕ ಮಾಡಲಿಲ್ಲವೇ? ಎಂದು ಅಮಲ್ದಾರರು ತಮ್ಮ 'ಪೀನಲ್ ಕೋಡಿ'ನಿಂದ ಆಧಾರಗಳನ್ನು ಕೊಟ್ಟು ತಮ್ಮ ಕಾ0ರ್ುವನ್ನು ಭದ್ರಪಡಿಸಿದರು.
ವಲ್ಲಭಾಚಾ0ರ್ುರ ಜಮಾಬಂದಿ ಮುಂದುವರೆ0ುುತ್ತದೆ. ವೈದ್ಯನು ಅಡಿಗೆ ಒಲೆ0ು ಬಳಿ0ೆು ಬಲವಂತದ ಠಿಕಾಣಿ ಹಾಕಬೇಕಾಗುತ್ತದೆ. ಎರಡು ದಿನಗಳ ನಂತರ 'ಅಮಲ್ದಾರರು! ಅಮಲ್ದಾರರು!'ಎಂದು ಗಾಬರಿಯಿಂದ ಕೂಗುತ್ತಾ 0ಾರೋ ಅಡಿಗೆಮನೆಗೆ ಬಂದು ವೈದ್ಯನನ್ನು ಎಬ್ಬಿಸಿದರೆ, ಇವನು ಸಮಾಧಾನಚಿತ್ತದಿಂದ, 'ಏನು ಸತ್ತರೇ?' ಎಂದು ಮರುಪ್ರಶ್ನೆ ಮಾಡುತ್ತಾನೆ. 'ಪ್ರಾಣಾಂತಿಕ. ನೀನು ಬಾರದೆ ಆಗದು' ಎಂದು ಒತ್ತಾಯಿಸಿದರೆ, 'ನಾನು ಕಾ0ುಂ ಅಡಿಗೆಭಟ್ಟ. ನಾನು ಹೆಣ ಹೊರಲಾರೆ'ಎಂದು ಹೇಳುತ್ತಾನೆ. 'ಅಮಲ್ದಾರರ ಆಜ್ಞೆ' ಎಂದು ಬೆದರಿಸಿದಾಗ ಒಲ್ಲದ ಮನಸ್ಸಿನಿಂದ ಹೋಗುತ್ತಾನೆ. ನೋಡಿದರೆ ಅಮಲ್ದಾರರು ಉದರಶೂಲೆಯಿಂದ ನೆಲದ ಮೇಲೆ ನೋವಿನಿಂದ ಹೊರಳಾಡುತ್ತಿರುತ್ತಾರೆ. ಪಕ್ಕದ ಕೋಣೆ0ುಲ್ಲಿ ಹೆಡ್ ಮುನಿಶಿ0ು ಪಾಡೂ ಇದೇ. 'ಏನಾದರೂ ಮದ್ದು ಕೊಡು' ಎಂದು ಅಮಲ್ದಾರರು ಬೇಡುತ್ತಾರೆ, ಬ0ು್ಯುತ್ತಾರೆ. ಒಟ್ಟಿನ ಪರಿಣಾಮವೆಂದರೆ: ಎರಡು ದಿನಗಳ ವರೆಗೆ ಅಮಲ್ದಾರರೂ ವ್ಯಾಸಾಚಾ0ರ್ುರೂ ಕಾಹಿಲೆಯಿಂದ ಬಹಳ ಬೇಸತ್ತರು. ವೈದ್ಯರ ಕಹಿಮದ್ದಿನಿಂದಲೂ ಗಂಜಿನೀರಿನಿಂದಲೂ ಇಬ್ಬರ ನಾಲಿಗೆ0ುೂ ರುಚಿ ಕೆಟ್ಟು ಹೋಯಿತು. ನಡುನಡುವೆ ವೈದ್ಯರು ಇಬ್ಬರ ಹಾಸಿಗೆ0ು ಬಳಿಗೆ ಬಂದು, 'ಜನಗಳನ್ನು ಬಿಟ್ಟಿಗೆ ಹಿಡಿದರೆ ಉಂಟಾಗುವ ಫಲವನ್ನು ಕುರಿತು' ಸಣ್ಣಕತೆಗಳನ್ನು ಹೇಳಿ ಉಲ್ಲಾಸಗೊಳಿಸುತ್ತಿದ್ದರು. ನಾಲ್ಕು ದಿನಗಳ ನಂತರ ಅಮಲ್ದಾರರಿಗೆ ಗುಣವಾಗುತ್ತದೆ. 'ಹುದ್ದೇದಾರರಿಗೆ ಈ ಅವಸ್ಥೆ ಆಗಲಿಕ್ಕೆ ಕಾರಣವೇನು?'ಎಂದು ಪಟೇಲನು ಕೇಳಿದರೆ ಕೃಷ್ಣವೈದ್ಯನು, 'ಔಷಧಕಾರನನ್ನು ಅಡಿಗೆಗೆ ಹಿಡಿದಿದ್ದರಿಂದ' ಎಂದು ಹೇಳುತ್ತಾ ಹೀಗೆ ಗುಟ್ಟು ಬಿಟ್ಟುಕೊಡುತ್ತಾನೆ: ನನಗೆ ಅಡಿಗೆ0ು ಅನುಭವ ಅಷ್ಟಿಲ್ಲ. ಹಿಂಗಿನ ಒಗ್ಗರಣೆ0ುನ್ನು ಹಾಕಲಿಕ್ಕೆ ಮರೆತು, ಮಣಿಮಂತ ಚೂರ್ಣವನ್ನು ಬೆರೆಸಿಬಿಟ್ಟೆ. ಒಂದೂವರೆ ಶತಮಾನ ಕಳೆದರೂ ನಮ್ಮ ಆಡಳಿತಶಾಹಿ0ು ಮೂಲಮನೋಧರ್ಮದಲ್ಲಿ ಹೆಚ್ಚಿನ ಪರಿವರ್ತನೆ0ಾಗಿದೆ0ೆುಂದು ಈಗಲೂ ಅನ್ನಿಸುವುದಿಲ್ಲ. ಅಧಿಕಾರಸ್ಥರ ಆಟಾಟೋಪಗಳ ಮತ್ತು ಅವಕ್ಕೆ ಪ್ರತಿ0ಾಗಿ ಜನಸಾಮಾನ್ಯರ ಪ್ರಿಮಿಟಿವ್ ಎನ್ನಬಹುದಾದ ಬಂಡಾ0ುಗಳ ಒಂದು ರೂಪಕವೆಂಬಂತೆ ಪಂಜೆ0ುವರ ಈ ಕತೆಗೆ ಇಂದಿಗೂ ಒಂದು ಮಟ್ಟದ ಪ್ರಸ್ತುತತೆ ಇದೆ0ೆುಂದು ಧಾರಾಳವಾಗಿ ಹೇಳಬಹುದು.
******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
ಪಂಜೆ ಮಂಗೇಶರಾವ್ ಅವರ ವೈದ್ಯರ ಒಗ್ಗರಣೆ
ಪಂಜೆ ಮಂಗೇಶರಾವ್(1874-1932)ಅವರನ್ನು ಆಧುನಿಕ ಕನ್ನಡದ ಮೊದಲ ಕತೆಗಾರರೆಂದು ಗುರುತಿಸಲಾಗಿದೆ. ಮಾಸ್ತಿ, ಕೆರೂರ ವಾಸುದೇವಾಚಾ0ರ್ು, ಎಸ್.ಜಿ.ಶಾಸ್ತ್ರಿ ಮೊದಲಾದವರಿಗಿಂತ ಮೊದಲು ಸಣ್ಣಕತೆಗಳನ್ನು ಬರೆದು ಪ್ರಕಟಿಸಿದ ಕೀತರ್ಿಗೆ ಇವರು ಭಾಜನರಾಗಿದ್ದಾರೆ. 1900ರಲ್ಲೇ ಕತೆಗಳನ್ನು ಬರೆ0ುಲಾರಂಭಿಸಿದ ಪಂಜೆ0ುವರು ಬೆನಗಲ್ ರಾಮರಾವ್ ಸಂಪಾದಕತ್ವದ ಸುವಾಸಿನಿ ಪತ್ರಿಕೆ0ುಲ್ಲಿ ಅವುಗಳನ್ನು ಪ್ರಕಟಿಸುತ್ತಿದ್ದರು. ಬಂಟ್ವಾಳದಲ್ಲಿ ಹುಟ್ಟಿ ಬೆಳೆದು ಮಂಗಳೂರಿನ ಸರಕಾರೀ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಆಮೇಲೆ ಶಾಲಾ ಇನ್ಸ್ಪೆಕ್ಟರ್ ಆಗಿ ಅವರು ಆಡಳಿತ ವ್ಯವಸ್ಥೆ0ು ಒಳಹೊರಗುಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅಂಥ ಹಲವು ಅನುಭವಗಳನ್ನು ಅವರು ತಮ್ಮದೇ ಆದ ವಿನೋದಪೂರ್ಣ ಶೈಲಿ0ುಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ಅವರ ಹೆಚ್ಚಿನ ಬರಹಗಳಲ್ಲಿ ಆರಂಭಿಕ ಆಧುನಿಕ ಕನ್ನಡ ಹರಟೆ-ಪ್ರಬಂಧ-ಸಣ್ಣಕತೆಗಳ ಅನೇಕ ಲಕ್ಷಣಗಳು ಕಂಡುಬರುತ್ತವೆ. ಅನೇಕ ರಚನೆಗಳು ತುಂಬ ನಿಖರವಾದ ಪ್ರಕಾರ ವಿಂಗಡಣೆಗೆ ಸಿಲುಕುವಂತಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಆಧುನಿಕ ಭಾರತದ ಇತಿಹಾಸ ನಿಮರ್ಾಣವಾಗುತ್ತಿದ್ದ ಕಾಲದಲ್ಲಿ, ಕನ್ನಡ ಗದ್ಯ ತನ್ನ ದಿಕ್ಕುದೆಸೆಗಳನ್ನು ಕಂಡುಕೊಳ್ಳುತ್ತಿದ್ದ ಕಾಲದಲ್ಲಿ ಪಂಜೆ0ುವರು ಬರೆ0ುಲಾರಂಭಿಸಿದ್ದರು. ಸಹಜವಾಗಿ0ೆು ಹೊಸ ಕಾಲದ ಹೊಸ ವಾಸ್ತವತೆಗಳು ಇವರ ಅನುಭವ-ಅವಲೋಕನಗಳಿಗೆ ಒದಗಿ ಬಂದಷ್ಟು ಇವರ ಬರವಣಿಗೆ0ುಲ್ಲಿ ದಾಖಲಾಗಿವೆ. ಹಳೆ0ು ಸ್ಮೃತಿಗಳು ಪೂರಾ ನಶಿಸಿಹೋಗಿರದ ಹೊಸ ನಡಾವಳಿಗಳು ಪೂರಾ ಒಗ್ಗಿರದ ಒಂದು ಸಂಕ್ರಮಣ ಸ್ಥಿತಿ0ುಲ್ಲಿ ಇವರ ಹೆಚ್ಚಿನ ಕಥೆಗಳು ಹುಟ್ಟಿಕೊಂಡಿವೆ. 'ಕುಂಪಣಿ' ಸರಕಾರದ ಆಡಳಿತ ವೈಖರಿ, ಅದು ಸೃಷ್ಟಿಸಿದ್ದ ನೌಕರಶಾಹಿ0ು ಕಾರುಬಾರಿನ ರೀತಿ, ಅವುಗಳಿಗೆ ಜನಸಾಮಾನ್ಯರ ಪ್ರತಿಕ್ರಿ0ೆು0ು ಕೆಲವು ಮಾದರಿಗಳು ಇವೆಲ್ಲ ಅವರಿಗೆ ಕಥಾದ್ರವ್ಯವಾಗಿ ಲಭ್ಯವಾಗಿವೆ. ಕನ್ನಡ ಸಣ್ಣಕತೆ0ು ಮೊದಲ ಪ್ರ0ೋಗ-ಪ್ರ0ುತ್ನಗಳ ಸಾಹಿತ್ಯಿಕ ದಾಖಲೆಗಳಂತೆ ಆ ಕಾಲದ ಸಾಂಸ್ಕೃತಿಕ ದಾಖಲೆಗಳಾಗಿ0ುೂ ಪಂಜೆ0ುವರ ಬರಹಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅವರಿಗೆ ಆಧುನಿಕಪೂರ್ವ ಕಥಾಮಾದರಿಗಳ ಪರಿಚ0ುವಿತ್ತು. ಹಾಗೆ0ೆು ಇಂಗ್ಲಿಷ್ ಸಾಹಿತ್ಯದ ಪರಿಚ0ುವೂ ಇತ್ತು. ಅವುಗಳನ್ನು ತಮ್ಮ ಸೃಜನಶೀಲ ಅಗತ್ಯಕ್ಕೆ ಬಳಸಿಕೊಳ್ಳುವ ಕುಶಲತೆ0ುೂ ಇತ್ತು.
ಹಳೆ0ು ಸಬ್ ಎಸಿಸ್ತಾಂಟನ ಸುಳ್ಳು ಡೈರಿಯಿಂದ ಎಂಬ ಕಥನದಲ್ಲಿ ಒಂದು ಮಾತು ಬರುತ್ತದೆ: ಹಳ್ಳಿ0ುಲ್ಲಿ ಸರಕಾರಿ ಉದ್ಯೋಗಸ್ಥರ ಮೇಲೆ ಸರ್ವಸಾಧಾರಣವಾಗಿ ಅಳುಕು ಇದೆ, ಅಂಜಿಕೆ ಇದೆ, ಅಪಾ0ು ಭೀತಿ ಇದೆ; ಆದರೆ ಅಕ್ಕರೆ ಕಡಿಮೆ. ಅಕ್ಕರೆ ಇದ್ದಲ್ಲಿ ಅವರಿಗೆ ನಿಜವಾದ ಅಭಿಮಾನವಿದೆ. ಅದು ಇಲ್ಲದ್ದಲ್ಲಿ ಅವರ ಮನಸ್ಸಿನೊಳಗಣ ನಂಬುಗೆ ಹೀಗಿದೆ-ಮುಕ್ಕಾಲು ಮೂರುವೀಸ ಅದಿಕಾರಿಗಳು ಸರೀಸೃಪಗಳಂತೆ ಉದರಗಾಮಿಗಳು, ಈ ರೂಪಕದ ವಿಸ್ತರಣೆ ಹೀಗಿದೆ: ಸರಕಾರದವರಲ್ಲಿ ಸಿವಿಲಿನವರು ಹೆಬ್ಬಾವುಗಳು, ಪೋಲೀಸಿನವರು ನಾಗರಹಾವುಗಳು, ಅಬ್ಕಾರಿ ಜಂಗ್ಲಿ0ುವರು ಮಂಡಲಿಗಳು... ತುಸು ಲಘು ಎನ್ನಿಸಬಹುದಾದ ಮತ್ತೊಂದು ಅನುವಾದಿತ ಕಿರುಕಥನಲ್ಲಿ 'ಸಾಹೇಬ'ನೊಬ್ಬ ಸ್ಥಳೀ0ು ದೋಭಿ0ು ಮೇಲೆ ದೌಲತ್ತು ತೋರಿಸಹೋಗಿ ತಾನೇ ಕತ್ತೆ0ಾದ ವಿಪರೀತ ಪ್ರಸಂದ ಹಾಸ್ಯಭರಿತ ನಿರೂಪಣೆಯಿದೆ. ಅದರ ಜೊತೆಗೇ ಸಾಹೇಬನಿಗೆ ಆದ ಒಂದು ಅನುಭವಪಾಠವೂ ಗಮನಾರ್ಹವಾಗಿದೆ: ದೇಶಭಾಷೆ0ು ಅಭ್ಯಾಸಕ್ಕೆ ಸ್ವಲ್ಪ ಹೆಚ್ಚು ಗಮನವನ್ನು ಕೊಡುವುದಕ್ಕೆ ಸಾಹೇಬರು ತೊಡಗಿದರು; ಮತ್ತು ತಾನು ಚೆನ್ನಾಗಿ ದೇಶಭಾಷೆ0ುನ್ನು ತಿಳಿದ ಹೊರತು ಅದರಿಂದ ಒಂದೇ ಒಂದು ಅಕ್ಷರವನ್ನು ಉಚ್ಚರಿಸಲಾರೆನೆಂದು ನಿಶ್ಚೈಸಿದರು. ಪಂಜೆ0ುವರ ಬರಹಗಳು ಒಂದು ಕಾಲದ ಫಲ ಮತ್ತು ಪ್ರತಿಫಲನಗಳೇ ಆಗಿದ್ದರೂ ಅವು ಕೇವಲ ಕಾಲಬದ್ಧವಲ್ಲ ಎಂಬುದಕ್ಕೆ ಅವರ ಬರವಣಿಗೆಯಿಂದ ಇನ್ನೂ ಹಲವು ನಿದರ್ಶನಗಳನ್ನು ಕೊಡಬಹುದು. ಇಷ್ಟೇ ವಿನೋದಪೂರ್ಣವಾಗಿ ಆದರೆ ಸಂಕೀರ್ಣವಾಗಿ ಆಡಳಿತ ಮತ್ತು ನ್ಯಾ0ಾಂಗ ವ್ಯವಸ್ಥೆ0ು ವೈಪರೀತ್ಯಗಳನ್ನು ಚಿತ್ರಿಸುವ ಕಥೆ ಎಂದರೆ ನನ್ನ ಚಿಕ್ಕತಂದೆ0ುವರ ಉಯಿಲ್. ತಮ್ಮ ಮರೆ0ುಬಾರದ ಹಳೆ0ು ಕಥೆಗಳು ಮಾಲಿಕೆಗೆ ಈ ಕಥೆ0ುನ್ನು ಆ0ು್ದುಕೊಂಡಿರುವ ಗಿರಡ್ಡಿ ಗೋವಿಂದರಾಜ ಅವರು ಅದನ್ನು ಕುರಿತ ಒಂದು ಮೌಲಿಕ ಟಿಪ್ಪಣಿ0ುನ್ನೂ ಮಾಡಿದ್ದಾರೆ. ವೈದ್ಯರ ಒಗ್ಗರಣೆ ಕೂಡ ಮೇಲು ನೋಟಕ್ಕೆ ಒಂದು ಹಾಸ್ಯ ಪ್ರಸಂಗವೆನಿಸಿದರೂ ಒಂದು ವ್ಯವಸ್ಥೆ0ು ಸ್ವರೂಪವನ್ನು ಅನಾವರಣಗೊಳಿಸುವಲ್ಲಿ ಸಾಕಷ್ಟು 0ುಶಸ್ವಿ0ಾಗಿದೆ.
ವೈದ್ಯರ ಒಗ್ಗರಣೆ ಕಥೆ0ು ಆರಂಭದ ಸಾಲುಗಳಲ್ಲೇ ಆ ಕಾಲಮಾನದ ಸ್ವರೂಪ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ: ವಲ್ಲಭಾಚಾ0ರ್ುರು 1862ರಲ್ಲಿ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರೆ ಇರಲಿಲ್ಲ..ಸರಕಾರೀ ಹುದ್ದೆಗಳಿಗೋಸ್ಕರ ಮೇಲಾಟ ಇರಲಿಲ್ಲ. ಪೇಚಾಟ ಇರಲಿಲ್ಲ. ಇಂದಿನಂತೆ ಅನೇಕ ಪರೀಕ್ಷೆಗಳೂ ಇರಲಿಲ್ಲ. ವಲ್ಲಭಾಚಾ0ರ್ುರೂ ಒಂದು ಬಹಿರಂಗ ಪರೀಕ್ಷೆ0ುನ್ನು 'ತೇಲಿ'ದ್ದರಂತೆ. 'ಇವರ ಸ್ಥೂಲ ದೇಹ, ಗೋಷ್ಟದ ಕೇಶ, ದೀರ್ಘ ನಾಮ, ಕರ್ಣತುಳಸಿ, ಗಂಧಲೇಪನ, ಲಂಬೋದರ-ಇವೇ ಅಮಲ್ದಾರ್ ಹುದ್ದೆ0ು ಮುಖ್ಯ ಲಕ್ಷಣಗಳಾಗಿದ್ದವು' ಎಂದು ನಿರೂಪಕನು ದಾಖಲಿಸುತ್ತಾನೆ. ಅವರಿಗೆ ಇಂಗ್ಲಿಷ್ ಭಾಷಾಜ್ಞಾನ ಎಷ್ಟಿತ್ತೆಂಬುದೂ 0ಾರಿಗೂ ಖಚಿತವಾಗಿ ಗೊತ್ತಿರಲಿಲ್ಲವಂತೆ. 'ಇಂಗ್ಲೀಸು ಮಾತಾಡಲು ತಿಳಿದಿತ್ತು ಎಂದು ನಮ್ಮ ಮನೆ ಅಜ್ಜಿ0ೊಂದು ಈಗಲೂ ಹೇಳುತ್ತಿರುವಳು'. ನಿರೂಪಕ ಹೇಳುವ ಮುಂದಿನ ಮಾತುಗಳಲ್ಲಿ ಎರಡು ಭಿನ್ನ ಸಂಸ್ಕೃತಿಗಳು ಮತ್ತು ವ್ಯವಸ್ಥೆಗಳು ಪರಸ್ಪರ ಮುಖಾಮುಖಿ0ಾದಾಗಿನ ಆರಂಭದ ಅವಸ್ಥೆ ಮತ್ತು ಪರಿಣಾಮದ ಒಂದು ವೈನೋದಿಕ ಚಿತ್ರ ಸಿಗುವಂತಿದೆ: ಇವರ 'ಜಜ್ಮೆಂಟು'ಗಳು ಬಹಳ ನೂತನವಾಗಿದ್ದುವೆಂದು ಬಾಜಾರಿನಲ್ಲಿ ಈಗಲೂ ವರ್ತಮಾನವಿದೆ. ವಲ್ಲಭಾಚಾ0ರ್ುರು 'ಪೀನಲ್ ಕೋಡನ್ನು' ಅಷ್ಟು ಚೆನ್ನಾಗಿ ಮನ್ನಿಸುತ್ತಿರಲಿಲ್ಲ. ಆ ಕೋಡು ಬಿಳೇ ಜನರ ತಲೆ0ು ಮೇಲೆ ಚೆನ್ನಾಗಿ ತೋರುವುದಲ್ಲದೆ, ನಾವು ಧರಿಸುವುದಕ್ಕೆ ಎತ್ತುಗಳಲ್ಲವೆಂದು ಅವರ ಅಭಿಪ್ರಾ0ುವಾಗಿತ್ತು. 'ಜಜ್ಮೆಂಟು'ಗಳಲ್ಲಿ ಭಾರತರಾಮಾ0ುಣದಿಂದಲೇ ಬೇಕಾದಷ್ಟು ಅಧಾರಗಳನ್ನು ಕೊಟ್ಟು 'ಕೇಸುಗಳನ್ನು' ತೀರಿಸುತ್ತಿದ್ದರು. ಇವರು ಸ್ವಲ್ಪ ಸ್ತ್ರೀ ಪಕ್ಷಪಾತಿ ಎಂದೂ ಹೆಸರಾಗಿದ್ದರಂತೆ.
ಈ ಅಮಲ್ದಾರರಿಗೆ ತಿಂಗಳಿಗೊಂದು ಬರಿ 'ಸಕರ್ಿಟ್' ತಿರುಗುವ ಸಂಪ್ರದಾ0ುವಿತ್ತಂತೆ. ಅದಕ್ಕೆ ಮುಖ್ಯ ಕಾರಣವೆಂದರೆ ಅಂದು ಸರಕಾರದ ಉದ್ಯೋಗಸ್ಥರಿಗೆ ಸಂಬಳ ಕಡಿಮೆ, 'ಸಕರ್ಿಟ್' ಹೆಚ್ಚು. ಹೀಗೆ ಜಮಾಬಂದಿಗೆ ಹೋದಾಗಲೇ ಅವರಿಗೆ ನಾಲ್ಕು ಕಾಸು ಸಿಗಬೇಕು. 'ಜಬಾನ್ ಬಂದ್' ಎಂಬ ಶಬ್ದವು 'ಜಮಾಬಂದ್' ಎಂದು ಅಪಭ್ರಂಶಗೊಂಡಿದೆ ಎಂದು ತಿಳಿಸುವ ನಿರೂಪಕನು ಆ ಮೂಲಕ ಅದರ ಹಿಂದಿನ ಕಲ್ಪನೆ0ುೂ ವಿಕೃತಗೊಂಡ ಬಗೆ0ುನ್ನು ಹೀಗೆ ವಿವರಿಸುತ್ತಾನೆ: ಜಮಾಬಂದ್ ಎಂಬುದು ಹಿಂದುಸ್ಥಾನಿ ಭಾಷೆ0ು ಪದವು. ಸರಕಾರಕ್ಕೆ ವರ್ಷಂಪ್ರತಿ ಬರುವ ಭೂಮಿ0ು ತೀವರ್ೆ0ು ಜಮೆ0ುನ್ನು 'ಬಂದ್' ಮಾಡುವುದು ಎಂಬ ಅರ್ಥವನ್ನು ಕೆಲವರು ಕಲ್ಪಿಸಿರುವರು. ಇದು ಶುದ್ಧ ತಪ್ಪು. 'ಜಬಾನ್ ಬಂದ್' ಎಂದರೆ ನಾಲಗೆ0ುನ್ನು ಕಟ್ಟುವುದು; ಇದುವೆ ಅಪಭ್ರಂಶವಾಗಿ 'ಜಮಾ ಬಂದ್' ಆಯಿತು. ಜನಗಳ 'ಹಾಲ್ ಹವಾಲೆ0ುನ್ನು' ಹೇಳುವ ನಾಲಗೆ0ುನ್ನು ಕಟ್ಟುವುದು ಎಂಬ ಅರ್ಥ. ಈ ಅರ್ಥಕ್ಕೆ ಮುಂಚಿನವರು ಕುಳುವಾರುಗಳ ಸ್ಥಿತಿಗತಿಗಳನ್ನು ಮೊರೆ, ಗೋಳುಗಳನ್ನೂ ಕೇಳಿ, ದವಸ ತುಟ್ಟಿ0ುದ ಕಾಲದಲ್ಲಿ ತೀವರ್ೆ0ುಲ್ಲಿ ಬೇಕಾದಷ್ಟನ್ನು ಮುಜುರೆ ಕೊಟ್ಟು, ಅವರ ಬಾ0ುನ್ನೂ ಕೂಗನ್ನೂ ತಡೆಸುತ್ತಿದ್ದರು.
ಅಮಲ್ದಾರರು ಸಕರ್ಿಟಿಗೆ ಬಂದಾಗ ಅವರಿಗೋಸ್ಕರ ಅಡಿಗೆ0ುವರನ್ನು ಒದಗಿಸುವುದು ಪಟೇಲನ ಜವಾಬ್ದಾರಿ0ಾಗಿತ್ತಂತೆ. 'ವಲ್ಲಭಾಚಾ0ರ್ುರು ಸ್ತ್ರೀಪಾಕ ನಿ0ುಮಿಷ್ಟರು; ಅವರಿಗೆ ಹೆಂಗಸರ ಅಡಿಗೆ ಮೆಚ್ಚುತ್ತಿತ್ತಲ್ಲದೆ ಗಂಡಸರ ಅಡಿಗೆ0ುು ರುಚಿಸುತ್ತಿರಲಿಲ್ಲ'. ಹಾಗಾಗಿ ಅದೇ ರೀತಿ0ು ಏಪರ್ಾಟನ್ನು ಪಟೇಲನು ಮಾಡುತ್ತಿದ್ದನೆಂದೂ, ಆದರೆ ಈಚೀಚೆಗೆ ಹೆಂಗಸರು ಈ ಕೆಲಸವನ್ನು ಒಪ್ಪಿಕೊಳ್ಳುತ್ತಿರಲಿಲ್ಲವೆಂದೂ, ಹಾಗೆ ಅಡಿಗೆಗೆ ಹೋದ ಹೆಂಗಸರನ್ನು ಅವರ ಗಂಡಂದಿರು ಒಪ್ಪಿಕೊಳ್ಳುತ್ತಿರಲಿಲ್ಲವೆಂದೂ, ಒಂದೆರಡು ಪ್ರಕರಣಗಳಲ್ಲಿ ಅಂಥ ಹೆಂಗಸರು ಬಹಿಷ್ಕಾರಕ್ಕೆ ಒಳಗಾಗಿದ್ದರೆಂದೂ ನಿರೂಪಕನು ತಿಳಿಸುತ್ತಾನೆ. ಹಾಗಾಗಿ ಪ್ರಸ್ತುತ ಅಮಲ್ದಾರರು ಸಕರ್ಿಟಿಗೆ ಬಂದಾಗ ಪಟೇಲನು ಎಷ್ಟು ಪ್ರ0ುತ್ನ ಪಟ್ಟರೂ 0ಾರೂ ಅಡಿಗೆ ಕೆಲಸಕ್ಕೆ ಸಿಗಲಿಲ್ಲ. ಆ ಗ್ರಾಮದಲ್ಲಿ ಬ್ರಾಹ್ಮಣರ ಸಂಖ್ಯೆ0ುೂ ಕಡಿಮೆ. ಪುರುಷ ಅಡಿಗೆ0ುವರೂ ಸಿಗಲಿಲ್ಲ. ಅಲ್ಲದೆ ಬ್ರಾಹ್ಮಣರೆಲ್ಲಾ ಶ್ರೀಕಾಂತ ಜಾತ್ರೆಗೆ ಹೊರಟು ಹೋಗಿದ್ದುದರಿಂದ ಅಮಲ್ದಾರರಿಗೆ ಅಡಿಗೆ ಏಪರ್ಾಟು ಸಕಾಲದಲ್ಲಿ ಮಾಡಲಾಗಲಿಲ್ಲ. 'ಪಟೇಲನು ಜಾತಿ0ುಲ್ಲಿ ಜೈನ. ತಾನೇ ಅಡಿಗೆ ಮಾಡುವುದಕ್ಕೆ ಉಪಾ0ುವಿಲ್ಲ'. ಅಮಲ್ದಾರರಿಗೆ ಸಿಟ್ಟು ಏರುತ್ತಾ ಹೋಗುತ್ತದೆ. '0ಾರನ್ನಾದ್ರೂ ಬಿಟ್ಟಿಗೆ ಹಿಡಿದ್ರೆ ಸರಿ' ಎಂದು ಅಮಲ್ದಾರರು ಆಜ್ಞೆ ಮಾಡುತ್ತಾರೆ! ಹಣ ಕೊಟ್ಟರೂ 0ಾರೂ ಸಿಗದಿದ್ದಾಗ ಬಿಟ್ಟಿಗೆ 0ಾರು ಸಿಗುತ್ತಾರೆ ಎಂದು ಪಟೇಲ ಅಲವತ್ತುಕೊಳ್ಳುತ್ತಾನೆ. 'ಎಲಾ! 0ಾರಿಗಾದ್ರೂ ಬಿಟ್ಟಿಗೆ ಹಿಡಿದು ತಂದ್ರೆ ಸರಿ! ಇಲ್ಲಾದ್ರೆ ನಿನ್ನ ಕೆಲ್ಸಕ್ಕೆ ರಾಜಿನಾಮೆ ಕೊಡು, ನಡಿ!' ಎಂದು ಅಮಲ್ದಾರರು ಬೆದರಿಕೆ ಹಾಕುತ್ತಾರೆ. ಕಡೆಗೆ ಶ್ರೀಕಾಂತ ಜಾತ್ರೆಗೆ ಹೋಗುತ್ತಿದ್ದ ದಾರಿಗನೊಬ್ಬನನ್ನು ಬಲವಂತವಾಗಿ ತಡೆದು ಅಡಿಗೆಭಟ್ಟನಾಗು ಎಂದು ಪಟೇಲನು ಜೋರುಮಾಡುತ್ತಾನೆ. ತಾನು ಓರ್ವ ವೈದ್ಯನೆಂದೂ, ಅಡಿಗೆ0ುವನಲ್ಲವೆಂದೂ, ತನಗೆ ಅಗತ್ಯವಾಗಿ ಶ್ರೀಕಾಂತ ಜಾತ್ರೆಗೆ ಹೋಗಲೇ ಬೇಕಾಗಿದೆ0ೆುಂದೂ ಆ ದಾರಿಗ ಅಂಗಲಾಚಿದರೆ, ಪಟೇಲನು, ನಿವರ್ಾಹವಿಲ್ಲ! ಬಾ0ು್ಮುಚ್ಚು ಕಳ್ಳ! ವೈದ್ಯ ನೀನು ಎಂಥಾ ವೈದ್ಯ! ಸುಮ್ಮನೆ ನನ್ನ ಹಿಂದೆ ಬಂದ್ರೆ ಸರಿ. ಇಲ್ಲಾದ್ರೆ ಕೈಗೆ ಕೋಳಾ ಹಾಕಿಸುವೆ ಎಂದು ಜುಲುಮೆ ಮಾಡಿ ಅವನನ್ನು ಒತ್ತಾ0ುದಿಂದ ಅಡಿಗೆ ಕೆಲಸಕ್ಕೆ ಹಚ್ಚುತ್ತಾನೆ. ಸರಕಾರದ ಹುದ್ದೆದಾರನ ದಂಡದ ಬೆದರಿಕೆಗೆ ಅಂಜಿ ಕೃಷ್ಣ ಎಂಬ ಈ ವೈದ್ಯನು ಅಡಿಗೆ ಮನೆಗೆ ಮರುಮಾತಿಲ್ಲದೆ ನಡೆ0ುುತ್ತಾನೆ. 'ಕೃಷ್ಣವೈದ್ಯರನ್ನು ಬಲಾತ್ಕಾರದಿಂದ ಅಡಿಗೆ ಮಾಡುವುದಕ್ಕೆ ಹಿಡಿದುದು ನಮ್ಮ ತಪ್ಪಾಗಬಹುದೇ?' ಎಂದು ಹೆಡ್ ಮುನಿಶಿ ವೈಕುಂಠ ವ್ಯಾಸಾಚಾ0ರ್ುರು ಅಮಲ್ದಾರರೊಡನೆ ಜಿಜ್ಞಾಸೆ ಮಾಡಲಾಗಿ ಅಮಲ್ದಾರರು ಹೀಗೆ ಅಪ್ಪಣೆ ಕೊಡಿಸುತ್ತಾರೆ: ವಿರಾಟರಾ0ುನು ಭೀಮಸೇನನನ್ನು ಅಡಿಗೆಗೆ ನಿಲ್ಲಿಸಿರಲಿಲ್ಲವೇ? ನಳಚಕ್ರವತರ್ಿ ಸ್ವ0ುಂಪಾಕ ಮಾಡಲಿಲ್ಲವೇ? ಎಂದು ಅಮಲ್ದಾರರು ತಮ್ಮ 'ಪೀನಲ್ ಕೋಡಿ'ನಿಂದ ಆಧಾರಗಳನ್ನು ಕೊಟ್ಟು ತಮ್ಮ ಕಾ0ರ್ುವನ್ನು ಭದ್ರಪಡಿಸಿದರು.
ವಲ್ಲಭಾಚಾ0ರ್ುರ ಜಮಾಬಂದಿ ಮುಂದುವರೆ0ುುತ್ತದೆ. ವೈದ್ಯನು ಅಡಿಗೆ ಒಲೆ0ು ಬಳಿ0ೆು ಬಲವಂತದ ಠಿಕಾಣಿ ಹಾಕಬೇಕಾಗುತ್ತದೆ. ಎರಡು ದಿನಗಳ ನಂತರ 'ಅಮಲ್ದಾರರು! ಅಮಲ್ದಾರರು!'ಎಂದು ಗಾಬರಿಯಿಂದ ಕೂಗುತ್ತಾ 0ಾರೋ ಅಡಿಗೆಮನೆಗೆ ಬಂದು ವೈದ್ಯನನ್ನು ಎಬ್ಬಿಸಿದರೆ, ಇವನು ಸಮಾಧಾನಚಿತ್ತದಿಂದ, 'ಏನು ಸತ್ತರೇ?' ಎಂದು ಮರುಪ್ರಶ್ನೆ ಮಾಡುತ್ತಾನೆ. 'ಪ್ರಾಣಾಂತಿಕ. ನೀನು ಬಾರದೆ ಆಗದು' ಎಂದು ಒತ್ತಾಯಿಸಿದರೆ, 'ನಾನು ಕಾ0ುಂ ಅಡಿಗೆಭಟ್ಟ. ನಾನು ಹೆಣ ಹೊರಲಾರೆ'ಎಂದು ಹೇಳುತ್ತಾನೆ. 'ಅಮಲ್ದಾರರ ಆಜ್ಞೆ' ಎಂದು ಬೆದರಿಸಿದಾಗ ಒಲ್ಲದ ಮನಸ್ಸಿನಿಂದ ಹೋಗುತ್ತಾನೆ. ನೋಡಿದರೆ ಅಮಲ್ದಾರರು ಉದರಶೂಲೆಯಿಂದ ನೆಲದ ಮೇಲೆ ನೋವಿನಿಂದ ಹೊರಳಾಡುತ್ತಿರುತ್ತಾರೆ. ಪಕ್ಕದ ಕೋಣೆ0ುಲ್ಲಿ ಹೆಡ್ ಮುನಿಶಿ0ು ಪಾಡೂ ಇದೇ. 'ಏನಾದರೂ ಮದ್ದು ಕೊಡು' ಎಂದು ಅಮಲ್ದಾರರು ಬೇಡುತ್ತಾರೆ, ಬ0ು್ಯುತ್ತಾರೆ. ಒಟ್ಟಿನ ಪರಿಣಾಮವೆಂದರೆ: ಎರಡು ದಿನಗಳ ವರೆಗೆ ಅಮಲ್ದಾರರೂ ವ್ಯಾಸಾಚಾ0ರ್ುರೂ ಕಾಹಿಲೆಯಿಂದ ಬಹಳ ಬೇಸತ್ತರು. ವೈದ್ಯರ ಕಹಿಮದ್ದಿನಿಂದಲೂ ಗಂಜಿನೀರಿನಿಂದಲೂ ಇಬ್ಬರ ನಾಲಿಗೆ0ುೂ ರುಚಿ ಕೆಟ್ಟು ಹೋಯಿತು. ನಡುನಡುವೆ ವೈದ್ಯರು ಇಬ್ಬರ ಹಾಸಿಗೆ0ು ಬಳಿಗೆ ಬಂದು, 'ಜನಗಳನ್ನು ಬಿಟ್ಟಿಗೆ ಹಿಡಿದರೆ ಉಂಟಾಗುವ ಫಲವನ್ನು ಕುರಿತು' ಸಣ್ಣಕತೆಗಳನ್ನು ಹೇಳಿ ಉಲ್ಲಾಸಗೊಳಿಸುತ್ತಿದ್ದರು. ನಾಲ್ಕು ದಿನಗಳ ನಂತರ ಅಮಲ್ದಾರರಿಗೆ ಗುಣವಾಗುತ್ತದೆ. 'ಹುದ್ದೇದಾರರಿಗೆ ಈ ಅವಸ್ಥೆ ಆಗಲಿಕ್ಕೆ ಕಾರಣವೇನು?'ಎಂದು ಪಟೇಲನು ಕೇಳಿದರೆ ಕೃಷ್ಣವೈದ್ಯನು, 'ಔಷಧಕಾರನನ್ನು ಅಡಿಗೆಗೆ ಹಿಡಿದಿದ್ದರಿಂದ' ಎಂದು ಹೇಳುತ್ತಾ ಹೀಗೆ ಗುಟ್ಟು ಬಿಟ್ಟುಕೊಡುತ್ತಾನೆ: ನನಗೆ ಅಡಿಗೆ0ು ಅನುಭವ ಅಷ್ಟಿಲ್ಲ. ಹಿಂಗಿನ ಒಗ್ಗರಣೆ0ುನ್ನು ಹಾಕಲಿಕ್ಕೆ ಮರೆತು, ಮಣಿಮಂತ ಚೂರ್ಣವನ್ನು ಬೆರೆಸಿಬಿಟ್ಟೆ. ಒಂದೂವರೆ ಶತಮಾನ ಕಳೆದರೂ ನಮ್ಮ ಆಡಳಿತಶಾಹಿ0ು ಮೂಲಮನೋಧರ್ಮದಲ್ಲಿ ಹೆಚ್ಚಿನ ಪರಿವರ್ತನೆ0ಾಗಿದೆ0ೆುಂದು ಈಗಲೂ ಅನ್ನಿಸುವುದಿಲ್ಲ. ಅಧಿಕಾರಸ್ಥರ ಆಟಾಟೋಪಗಳ ಮತ್ತು ಅವಕ್ಕೆ ಪ್ರತಿ0ಾಗಿ ಜನಸಾಮಾನ್ಯರ ಪ್ರಿಮಿಟಿವ್ ಎನ್ನಬಹುದಾದ ಬಂಡಾ0ುಗಳ ಒಂದು ರೂಪಕವೆಂಬಂತೆ ಪಂಜೆ0ುವರ ಈ ಕತೆಗೆ ಇಂದಿಗೂ ಒಂದು ಮಟ್ಟದ ಪ್ರಸ್ತುತತೆ ಇದೆ0ೆುಂದು ಧಾರಾಳವಾಗಿ ಹೇಳಬಹುದು.
******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228
No comments:
Post a Comment