ಮಾನ್ಯರೇ,
ಮೂಲತಃ ಕುಮಟಾ-ಧಾರೇಶ್ವರ ಸಮೀಪದ ಗುಡಬಳ್ಳಿ ಗ್ರಾಮದ ದಿವಂಗತ ನಾರಾಯನ ಜೋಶಿ ಅವರ ನೆನಪಿಗಾಗಿ ‘ಅನೇಕ’ ಚಾರಿಟಬಲ್ ಟಸ್ಟ್‌ನ್ನು ನೋಂದಾಯಿಸಿದೆ. ಕಲೆ, ಸಾಹಿತ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೆಲಸಗಳನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡಿದ್ದರೂ ‘ತಾಳಮದ್ದಲೆ’ಯನ್ನೇ ಕೇಂದ್ರ್ರ ಚಟುವಟಿಕೆಯ ಭಿತ್ತಿಯನ್ನಾಗಿಸಿಕೊಂಡಿರುತ್ತದೆ.
ತಾಳಮದ್ದಲೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ/ ಈ ವಿಷಯದಲ್ಲಿ ಅಧ್ಯಯನ ನಡೆಸುವವರಿಗೆ ಈ ವರ್ಷದಿಂದ ಮಲ್ಪೆ ಶಂಕರನಾರಾಯಣ ಸಾಮಗರ ಹೆಸರಿನಲ್ಲಿ ಫೆಲೋಷಿಫ್ ನೀಡುತ್ತಿದ್ದು ಹತ್ತು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನೊಳಗೊಂಡಿರುತ್ತದೆ. ಆಸಕ್ತರು ತಮ್ಮ ವೈಯಕ್ತಿಕ ವಿಷಯಗಳೊಡನೆ ತಾಳಮದ್ದಲೆಯಲ್ಲಿ ನಡೆಸುತ್ತಿರುವ/ನಡೆಸುವ ಅಧ್ಯಯನ/ಸಂಶೋಧನೆಯ ಬಗೆಗೆ ವಿವರಗಳನ್ನೊಳಗೊಂಡ ಪತ್ರವನ್ನು ಪ್ರಕಾಶ ಜೋಶಿ, ಪ್ರಧಾನ ಕಾರ್ಯದರ್ಶಿ, ಅನೇಕ- ನಾರಾಯಣ ಜೋಷಿ ಚಾರಿಟಬಲ್ ಟ್ರಸ್ಟ್, ಸಂಖ್ಯೆ ೭೯೯, ೭ನೆಯ ಅಡ್ಡರಸ್ತೆ, ಗೃಹಲಕ್ಷ್ಮೀ ಬಡಾವಣೆ, ನಾಗಸಂದ್ರ ಅಂಚೆ, ನೆಲಗದರನಹಳ್ಳಿ, ಬೆಂಗಳೂರು ೫೬೦೦೦೭೩ ಇವರಿಗೆ ದಿನಾಂಕ 20-7-2013ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ.
ಪ್ರಕಾಶ ಎನ್. ಜೋಶಿ
ಪ್ರಧಾನ ಕಾರ್ಯದರ್ಶಿ
ಅನೇಕ- ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್ (ರಿ)
ಬೆಂಗಳೂರು.
No comments:
Post a Comment