ಗೋಪಾಲಕೃಷ್ಣ ಕೆದ್ಲಾಯ
ಉಡುಪಿ : ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ, ನಿವೃತ್ತ ಪ್ರಾಂಶುಪಾಲ ಎಚ್. ಗೋಪಾಲಕೃಷ್ಣ ಕೆದ್ಲಾಯ (90) ವೃದ್ಧಾಪ್ಯದಿಂದ ಆ.17ರಂದು ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೂಲತಃ ಹೆರ್ಗ ಗ್ರಾಮದವರಾದ ಕೆದ್ಲಾಯರು ಉಡುಪಿ ಕ್ರಿಶ್ಚಿಯನ್ ಪ್ರೌಢ ಶಾಲೆಯಲ್ಲಿ ಸೇವೆ ಆರಂಭಿಸಿ ಕಿದಿಯೂರು ಶಾಲೆ, ಉಡುಪಿ ಬೋರ್ಡ್ ಹೈಸ್ಕೂಲ್, ಕುಂದಾಪುರ, ಫಲಿಮಾರು, ಹೆಬ್ರಿ, ಉಪ್ಪಿನಂಗಡಿ, ಹಿರಿಯಡಕ, ತೆಂಕನಿಡಿಯೂರು ಸರಕಾರಿ ಪ್ರೌಢ ಶಾಲೆಗಳಲ್ಲಿ ಹಾಗೂ ಶಿಕಾರಿಪುರ, ಶ್ರೀನಿವಾಸಪುರ, ಬೆಂಚಿನ ಪದವು ಜೂನಿಯರ್ ಕಾಲೇಜು ಗಳಲ್ಲಿ ಸೇವೆ ಸಲ್ಲಿಸಿದ್ದರು. ಹೆಬ್ರಿಯಲ್ಲಿ ಪ್ರೌಢಶಾಲೆ ಆರಂಭಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟವರು. ಸುಮಾರು 36 ವರ್ಷಗಳ ಕಾಲ ಅಧ್ಯಾಪಕರಾಗಿ, ಮುಖ್ಯೋಪಾ ಧ್ಯಾಯರಾಗಿ ಹಾಗೂ ಪ್ರಾಂಶು ಪಾಲರಾಗಿ ಸೇವೆ ಸಲ್ಲಿಸಿ 1980ರಲ್ಲಿ ನಿವೃತ್ತರಾದರು. ಬಳಿಕ ಅಂಬಲಪಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
-ಹಿರಿಯಡಕ ಸರಕಾರಿ ಹೈಸ್ಕೂಲಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಮುಖ್ಯೋಪಾಧ್ಯಾಯರಾಗಿದ್ದ ಶ್ರಿ ಗೋಪಾಲಕೃಷ್ಣ ಕೆದ್ಲಾಯರು ಶಿಸ್ತಿನ ಸಿಪಾಯಿಯಾಗಿದ್ದ ಆದರ್ಶ ಅಧ್ಯಾಪಕರಾಗಿದ್ದರು .ಅವರಿಗೆ ನನ್ನ ಅಂತಿಮ ನಮನ.
- ಮುರಳೀಧರ ಉಪಾಧ್ಯ ಹಿರಿಯಡ್ಕ
H.GOPALAKRISHNA KEDLAYA [90 } expierd on 19-8-2013 at Ambalapady Udupi .

No comments:
Post a Comment