stat Counter



Saturday, February 8, 2014

ಡಾ / ಆರ್. ಗಣೇಶ್ --ಹಳಗನ್ನಡವನ್ನು ಹೇಗೆ ನೋಡಬೇಕು ?

ಹಾಸು ಬೀಸು -ಶತಾವಧಾನಿ ಆರ್.        ಗಣೇಶ್

ವಸಂತ ಪ್ರಕಾಶನ , ಬೆಂಗಳೂರು

ಮೊದಲ ಮುದ್ರಣ -2009

Emai-vasantha__prakashana@rediffmail.com

 " ಹಳಗನ್ನಡದಲ್ಲಿ ತದ್ಭವ ನಿರ್ಮಾಣವು  ತುಮ್ಬ ಸ್ವೋಪಜ್ಞತೆಯಿಂದ , ಸೌದರ್ಯಪ್ರಜ್ಞೆಯಿಂದ ಬಂದಿದೆ. ಮುಖ್ಯವಾಗಿ ತತ್ಸಮದ ಉಚ್ಚಾರಣಾ ಕ್ಲೇಶಗಳೂ , ಶ್ರುತಿಕಟುತ್ವಗಳೂ  ನಿವಾರಿತವಾದ ಪರಿ ವಿಶೇಷಾಧ್ಯಯನಕ್ಕೆ ಯೋಗ್ಯ.
ಆದುದರಿಂದಲೇ  ತಿಸುಳಿ { ತ್ರಿಶೂಲಿ } , ಮಿಡ [ ಮೃಡ } ,ಅಚ್ಚರಸಿ { ಅಪ್ಸರಸಿ ] , ಮಂಜರ { ಮಾರ್ಜಾರ } , ಒಲ್ಲಣಿಗೆ { ಆರ್ದ್ರ ವಸ್ತ್ರ ] , ಬಿಯದ [ ವ್ಯಾಧ },  ಬಗ್ಗ [ ವ್ಯಾಘ್ರ }  ಮುಮ್ತಾದ ಸಾವಿರಾರು ಶಬ್ದಗಳು , ಸ್ವಂತಿಕೆ , ಸಂಕ್ಷಿಪ್ತತೆ, ಮತ್ತು ಶ್ರುತಿ ಸೌಖ್ಯಗಳಿಂದ  ಕೂಡಿವೆಯಲ್ಲದೆ , ಯಾವುದೋ ತತ್ಸಮದ  ವ್ಯಾಕರಣವಿರುದ್ದ ರೂಪವೆಂಬ ಉದ್ವೇಜನವಾಗುವುದಿಲ್ಲ. ಈ ಕಾರಣದಿಂದ ಹಳಗನ್ನಡಕ್ಕೆ ಹೊಸಗನ್ನಡದಲ್ಲಿ ಕಾಣದಂಥ  ನಮ್ಯತೆಯುಂಟು, ಮಾಧುರ್ಯವೂ ಉಂಟು."
      - ಶತಾವಧಾನಿ ಆರ್. ಗಣೇಶ್
   

No comments:

Post a Comment