ಕನ್ನಡವು ಕರ್ನಾಟಕದ ’ಮಾತೃಭಾಷೆ’ಯಲ್ಲ!!!
ಕರ್ನಾಟಕದಲ್ಲಿ ಶೇ. ೭೦ ರಷ್ಟಿರುವ ಕನ್ನಡಿಗರ ಮನೆಮಾತಾಗಿರುವ ಕನ್ನಡ ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ’ಮಾತೃಭಾಷೆ’ಯನ್ನಾಗಿ ಕರ್ನಾಟಕ ರಾಜ್ಯಪತ್ರದಲ್ಲಿ [ಗಜೆಟಿಯರ್] ಇದುವರೆಗೆ ದಾಖಲಿಸಿಲ್ಲ. ಹಾಗೆ ದಾಖಲಿಸಲು ಸಂವಿಧಾನದಲ್ಲಿ ಅವಕಾಶವೂ ಇಲ್ಲ. ಕನ್ನಡ ಭಾಷೆಯನ್ನು ಕರ್ನಾಟಕದ ’ಆಡಳಿತ ಭಾಷೆ’ಯೆಂದು ಅಧಿಕೃತವಾಗಿ ದಾಖಲಿಸಿದ್ದೇ ೧೯೬೩ ರಲ್ಲಿ. ಆದ್ದರಿಂದ, ಕನ್ನಡ ಭಾಷೆಯು ೧೯೬೩ರ ಬಳಿಕ ಕರ್ನಾಟಕದ ಅಧಿಕೃತ ’ಆಡಳಿತ ಭಾಷೆ’ಯೇ ಹೊರತು ’ಮಾತೃಭಾಷೆ’ಯಲ್ಲ! [ಯಾವ ರೀತಿಯಲ್ಲಿ ಹಿಂದಿ ಭಾಷೆಯು ನಮ್ಮ ರಾಷ್ಟ್ರದ, ರಾಷ್ಟ್ರಭಾಷೆಯಲ್ಲವೋ ಅಂತೆಯೇ ಕನ್ನಡವು ನಮ್ಮ ರಾಜ್ಯದ, ರಾಜ್ಯಭಾಷೆಯೂ ಅಲ್ಲ.] ವಸ್ತು ಸ್ಥಿತಿ ಹೀಗಿರುವುದರಿಂದಲೇ, ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯವನ್ನು ಕಡ್ಡಾಯ ಮಾಡಲು ಅಡ್ಡಿಯಾಗಿರುವ ಇದೇ ’ಮಾತೃಭಾಷೆ’ ಎಂಬೆರಡು ’ಪದ’ಗಳನ್ನು, ಕನ್ನಡೇತರ ಮಾಧ್ಯಮದ ಶಾಲೆಗಳನ್ನು ನಡೆಸುವವರು ತಮ್ಮ ರಕ್ಷಣೆಗೆ ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ!
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯವದ ಬಗ್ಗೆ ವಾದಿಸುವಾಗಲೆಲ್ಲ, ’ಮಕ್ಕಳು ಮಾತೃಭಾಷೆಯಲ್ಲಿ ಕಲಿತರೆ ಮಾತ್ರ ಉದ್ಧಾರವಾಗುತ್ತಾರೆಂದು’ ಶಿಕ್ಷಣ ತಜ್ಹರು ಹೇಳುತ್ತಾರೆ. ಭಾಷಾವಾರು ಪ್ರಾಂತ್ರ್ಯವಾಗುವುದಕ್ಕಿಂತ ಹಿಂದಿನಿಂದಲೂ ಕರ್ನಾಟಕದಲ್ಲಿ ಬದುಕುತ್ತಿರುವ ಶೇ. ೩೦ರಷ್ಟು ಇರುವ ಹಿಂದಿ, ಗುಜರಾಥಿ, ಮರಾಟಿ, ತಮಿಳು, ತೆಲುಗು, ಮಲಯಾಳಂ,ತುಳು, ಕೊಂಕಣಿ, ಬ್ಯಾರಿ, ಕೊಡವ ಇತ್ಯಾದಿ ಮಾತೃಭಾಷಿಕರು ಕೂಡಾ ಹೇಳುವುದು ಇದನ್ನೇ; ’ನಮಗೂ ಮಾತೃಭಾಷೆಯಲ್ಲೇ ಕಲಿಯಲು ಅವಕಾಶ ನೀಡಿ’ ಎಂದು! ಈಗೇನು ಮಾಡೋಣ?
ಆದ್ದರಿಂದ, ಕರ್ನಾಟಕ ಸರಕಾರವು, ಸುಪ್ರೀಮ್ ಕೋರ್ಟಿನಲ್ಲಿರುವ ತನ್ನೆಲ್ಲಾ ಕನ್ನಡ ಮಾಧ್ಯಮಪರ ದಾವಾ ಪತ್ರಗಳಲ್ಲಿ ಈಗಾಗಲೇ ಬಳಸಲಾಗಿರುವ ’ಮಾತೃ’ ಎಂಬ ಪದವನ್ನು, ’ಆಡಳಿತ’ ಎಂಬ ಪದಕ್ಕೆ ಬದಲಾಯಿಸಿಕೊಂಡರೆ ಗೆಲ್ಲಲು ಸ್ವಲ್ಪವಾದರೂ ಅನುಕೂಲವಾಗಬಹುದೇನೋ...? ಗೊತ್ತಿಲ್ಲ. ತಿಳಿದವರು ತಿಳಿಯಹೇಳಬೇಕು.
-ಬೊಳುವಾರು
-ಬೊಳುವಾರು
____________________
Bolwar Mahamad Kunhi
'MONU'
B-4-016 Kavery Block,
NGV, Koramangala-Bangalore- 560 047
080 25711462
91 87628 00786
91 87628 00786
Click here to Reply or Forward
|
No comments:
Post a Comment