stat Counter



Wednesday, February 11, 2015

ಗಾಂಧಿ ಮರುಚಿಂತನೆಯ ಹಾದಿಯಲ್ಲಿ






ಗಾಂಧಿ - ಸದಾ ಮರುಚಿಂತನೆಯ ಹಾದಿಯಲ್ಲಿ

- ಕೆ. ಸತ್ಯನಾರಾಯಣ
-
ಎಲ್ಲ ಚಿಂತಕರ ವಿಚಾರಗಳನ್ನೂ ಕುರಿತು ಮರುಚಿಂತನೆ ನಡೆಯುವುದು ಸಾಮಾನ್ಯ ಸಂಗತಿಯಾದರು ಗಾಂಧಿ ಕುರಿತ ಮರುಚಿಂತನೆಯಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಗಾಂಧಿಯೇ ಈ ಮರುಚಿಂತನೆಯ ಮೂಲಬಿಂದು ಎನ್ನುವುದು ಮೊದಲ ವೈಶಿಷ್ಟ್ಯ. ನಿರಂತರ ಕಲಿಯುವಿಕೆ ಮತ್ತು ಪ್ರಯೋಗಶೀಲತೆಗೆ ಬದ್ಧವಾಗಿದ್ದ ಗಾಂಧಿ ತಮ್ಮ ಮನಸ್ಸು, ದೇಹ ಮತ್ತು ವಿಚಾರಗಳನ್ನು ಯಾವಾಗಲೂ ಹೊಸ ಬೆಳಕಿಗೆ, ಹೊಸ ವಿಚಾರಗಳಿಗೆ ತೆರೆದಿಡುತ್ತಿದ್ದರು. ಸ್ವಾತಂತ್ರ್ಯ ಬಂದನಂತರ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ವಿಸರ್ಜನೆಗೊಳ್ಳಬೇಕು, ರಚನಾತ್ಮಕ ಕಾರ್ಯದಲ್ಲಿ ಮಾತ್ರ ತೊಡಗಬೇಕು ಎಂದು ಸೂಚಿಸಿದ್ದು ಈ ರೀತಿಯ ಮರುಚಿಂತನೆಯ ಫಲಶ್ರುತಿ. ಇದಕ್ಕಿಂತ ಇನ್ನೂ ಮುಖ್ಯವಾದ ವೈಶಿಷ್ಟ್ಯವೆಂದರೆ, ಗಾಂಧಿ ಕುರಿತ ಮರುಚಿಂತನೆಗೆ ಪ್ರಭುತ್ವದ, ಸಕರ್ಾರಗಳ, ಸಾಂಸ್ಕೃತಿಕ ಸಂಸ್ಥೆಗಳ, ಒತ್ತಾಸೆಯಿಲ್ಲದಿರುವುದು. ನಿದರ್ಿಷ್ಟ ದೇಶ - ಸಂಸ್ಕೃತಿಗಳ ಒತ್ತಾಸೆ ಕೂಡ ಗಾಂಧಿ ಮರುಚಿಂತನೆಯ ಹಿಂದಿಲ್ಲ. ಗಾಂಧಿ ಕುರಿತ ಮರುಚಿಂತನೆಯಲ್ಲಿ ಚಿಂತಕರು, ವಿಶ್ಲೇಷಕರು ಮಾತ್ರವಲ್ಲದೆ, ಜೀವನದಲ್ಲಿ ನೊಂದವರು, ತಪ್ಪುಮಾಡಿದವರು, ಅವಕಾಶವಿಹೀನರು ಕೂಡ ತೊಡಗಿಕೊಂಡಿರುವುದು ಮತ್ತು ಇವರಲ್ಲಿ ಬಹುಪಾಲು ಭಾರತೀಯ ಮೂಲದವರಲ್ಲ ಎಂಬುದು ಕೂಡ ಗಮನಿಸಬೇಕಾದ ಸಂಗತಿ. ಇಂತವರನ್ನೆಲ್ಲ ಜೊತೆಗೂಡಿಸಿ 2008ರಲ್ಲಿ ಕ್ಯಾಲಿಫೋನರ್ಿಯಾ ಸ್ಟೇಟ್ ಪಾಲಿಟೆಕ್ನಕ್ ವಿಶ್ವವಿದ್ಯಾಲಯದ ಅಹಿಂಸಾ ಕೇಂದ್ರ ನಡೆಸಿದ ವಿಚಾರ ಸಂಕಿರಣದ ಚಿಂತನಾ ಬರಹಗಳನ್ನು, ಖಿಊಇ ಐಗಿಓಉ ಉಂಓಆಊ - ಐಇಖಖಔಓಖ ಈಔಖ ಔಗಖ ಖಿಒಇಖ ಎಂಬ ಪುಸ್ತಕವಾಗಿ ತಾರಾ ಸೇಥಿಯಾ ಮತ್ತು ಅಂಜನಾ ನಾರಾಯಣ್ ಸಂಪಾದಿಸಿ ಪ್ರಕಟಿಸಿದ್ದಾರೆ. 'ಹಿಂದ್ ಸ್ವರಾಜ್' ಕೃತಿ ಕುರಿತು ಹೊಸ ರೀತಿಯ ಚಿಂತನೆ ಮಂಡಿಸಿದ ಆಂಥೊನಿ ಪರೇಲ್, ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ದಂಪತಿಗಳಾದ ರುಢೊಲ್ಫ್ ದಂಪತಿಗಳು, ಟಿಬೆಟ್ ಧರ್ಮಗುರು ಸ್ಯಾಮ್ಚಂಗ್ ರಿನ್ಪೋಚೆ ಗಾಂಧಿಯ ಶೈಕ್ಷಣಿಕ ಚಿಂತನೆ ಕುರಿತು ನಿರಂತರ ಸಂಶೋಧನೆ ನಡೆಸುತ್ತಿರುವ ಅನಿಲ್ ಸಡಗೋಪಾಲ್ರಂತಹ ಚಿಂತಕರಿರುವುದರ ಜೊತೆಗೆ ಇಲ್ಲಿಯ ಲೇಖಕರಲ್ಲಿ ಕಾನೂನು ತಜ್ಞರು, ಶಾಲಾ ಕಾಲೇಜುಗಳಲ್ಲಿ ಪಾಠ ಹೇಳುವವರು, ಗಾಂಧಿ ಚಿಂತನೆಯ ಬೆಳಕಿನಡಿಯಲ್ಲಿ ಶಾಲಾ ಕಾಲೇಜುಗಳಲ್ಲಿ, ನೆರೆ ಹೊರೆಯ ಬದಲಾವಣೆಗಳಲ್ಲಿ, ಹಣ ಹೂಡಿಕೆಯ ಕ್ಷೇತ್ರಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವವರು ಕೂಡ ಸೇರಿದ್ದಾರೆ. ಜಾಗತೀಕರಣದ ಹಿನ್ನೆಲೆ, ಧಾಮರ್ಿಕ -ಸಾಮಾಜಿಕ - ಆಂತರಿಕ ಕ್ಷೊಭೆ ಮತ್ತು ಹಿಂಸೆ, ಆಧ್ಯಾತ್ಮಿಕ ಕ್ಲೈಬ್ಯ, ಸಂಪತ್ತು ಮತ್ತು ಆಥರ್ಿಕ ಬೆಳವಣಿಗೆ ಹೆಚ್ಚಿದಂತೆಲ್ಲ ಹೆಚ್ಚು ಹೆಚ್ಚು ಜನಸಂಖ್ಯೆಯ ಭಾಗ ನೆಮ್ಮದಿ - ಸಂತೋಷದಿಂದ ದೂರವಾಗುತ್ತಿರುವುದು ಇಂತಹ ಸದ್ಯದ ವಿದ್ಯಮಾನಗಳನ್ನು ಈ ಚಿಂತನಾ ಬರಹಗಳು ಹಿನ್ನೆಲೆಯಲ್ಲಿ ಇಟ್ಟುಕೊಂಡಿರುವುದರಿಂದ ಗಾಂಧಿ ಕುರಿತ ಇಲ್ಲಿನ ಮರುಚಿಂತನೆಗೆ ಒಂದು ಸದ್ಯತನ ಮತ್ತು ತುತರ್ು ಕೂಡ ಒದಗಿ ಬಂದಿದೆ.
ಎಲ್ಲ ಕಾಲದಲ್ಲು ಎಲ್ಲ ದೇಶಗಳಲ್ಲು ಮುಖ್ಯವಾದ ಸಮಸ್ಯೆಯೆಂದರೆ ಸಕರ್ಾರವನ್ನು, ಸಮಾಜವನ್ನು ಯಾವ ನೆಲೆಯಲ್ಲಿ ರೂಪಿಸಬೇಕೆಂಬುದು, ನಾಗರೀಕರನ್ನು ಯಾವ ನೆಲೆಯಲ್ಲಿ ಕಾಣಬೇಕೆಂಬುದು. ಇದಕ್ಕೆ ತಳುಕು ಹಾಕಿಕೊಂಡ ಸಮಸ್ಯೆಯೆಂದರೆ ಸ್ವತಃ ನಾಗರೀಕರೆ ತಮ್ಮನ್ನು ತಾವು ಹೇಗೆ ನೋಡಿಕೊಳ್ಳುತ್ತಾರೆಂಬುದು. 'ಹಿಂದ್ ಸ್ವರಾಜ್' ಪಠ್ಯದ ಹಿನ್ನೆಲೆಯಲ್ಲಿ ಆಂಥೊನಿ ಪರೇಲ್ ಈ ಮಸ್ಯೆಗಳನ್ನು ಪರಿಶೀಲಿಸಿ ನೀಡುವ ಒಳನೋಟಗಳು ವಿಶಿಷ್ಟವಾಗಿವೆ. ನಾವೆಲ್ಲರೂ ತಪ್ಪಾಗಿ ತಿಳಿದಿರುವಂತೆ ಗಾಂಧಿ ಅರಾಜಕತಾವಾದಿಯಾಗಿರಲಿಲ್ಲ ಅಥವಾ ಸಮಾಜದ ಸಂಘಟನೆಯಲ್ಲಿ ಸಕರ್ಾರದ ಪಾತ್ರವೇ ಇರುವುದಿಲ್ಲ ಎಂದು ಭಾವಿಸಿದವರಾಗಿರಲಿಲ್ಲ. 'ರಾಷ್ಟ್ರ'ದ ಪರಿಕಲ್ಪನೆಯನ್ನು ನಾವು ಸಮಕಾಲೀನ ಜಗತ್ತಿನಲ್ಲಿ ಮಾನ್ಯ ಮಾಡಲೇಬೇಕು ಮತ್ತು ಪ್ರಭುತ್ವವು ಆಂತರಿಕ ಶಿಸ್ತು, ಸುವ್ಯವಸ್ಥೆ ಮತ್ತು ಹೊರ ದೇಶಗಳ ಆಕ್ರಮಣದಿಂದ ರಕ್ಷಣೆಗೆ ಗಮನ ಕೊಡಲೇಬೇಕಾದಷ್ಟು ಸುಭದ್ರವು, ಸುಸ್ಥಿರವೂ ಆಗಿರಬೇಕು ಎಂಬುದನ್ನು ಒಪ್ಪಿಕೊಂಡಿದ್ದ ಗಾಂಧಿ, ಈ ರೀತಿಯ ಸಕರ್ಾರಗಳು ಧರ್ಮದ, ನೀತಿಯ, ಅಹಿಂಸೆಯ ನೆಲೆಗಳನ್ನು ಮಾತ್ರ ಮೀರಬಾರದು ಎಂದು ಕೂಡ ಹೇಳುತ್ತಿದ್ದರು. ಗಾಂಧಿಯವರ ಪರಿಕಲ್ಪನೆಯ 'ಧರ್ಮ' ಯಾವುದೇ ಪವಿತ್ರ ಪಠ್ಯ ಅಥವಾ ಆದಿಗುರುಗಳ ಉಪದೇಶಗಳ ಮೇಲೆ ಆಧಾರಿತವಾಗಿರದೆ ದಿನನಿತ್ಯದ ಬದುಕಿನ ನೆಮ್ಮದಿಗೆ ಬೇಕಾಗುವಂತಹ ಪರಸ್ಪರ ಕೊಡು ಕೊಳ್ಳುವಿಕೆ, ಸಂಯಮಪೂರಿತ ಜೀವನ, ಮನುಷ್ಯನ ಅಂತರಂಗದ ಅಭೀಪ್ಸೆಗಳನ್ನು ಆಧಾರವಾಗಿಟ್ಟುಕೊಂಡಿತ್ತು. ಈ ದೃಷ್ಟಿಯಿಂದ ಅವರದು ಜಾತ್ಯಾತೀತವಾದ ಕಲ್ಪನೆಯೇ ಹೊರತು, ಈವತ್ತಿನ ಪ್ರಗತಿಶೀಲರು ತಪ್ಪಾಗಿ ತಿಳಿದಿರುವ ಹಾಗೆ ಜಾತ್ಯಾತೀತತೆಯೆಂದರೆ ಧರ್ಮದ ವಿರೋಧಿಯಾಗಿರಬೇಕೆಂದೇನಿಲ್ಲ. ಬದಲಿಗೆ ಗಾಂಧಿಯವರ ಜಾತ್ಯಾತೀತ ಪರಿಕಲ್ಪನೆಯೆಂದರೆ ಧರ್ಮಗಳ, ಸಂಸ್ಕೃತಿಗಳ ವೈವಿಧ್ಯ ಮತ್ತು ಬಹುಮುಖತೆಯನ್ನು ನಾವೆಲ್ಲ ಪ್ರೀತಿಯಿಂದ, ಗೌರವದಿಂದ ಕಾಣಬೇಕು ಎಂಬುದೇ ಆಗಿತ್ತು. ಧರ್ಮದ ಆಧಾರದ ಮೇಲೆ ಒಂದು ರಾಷ್ಟ್ರದ ಸಕರ್ಾರವನ್ನು, ಬದುಕನ್ನು ಕಟ್ಟಲಾಗುವುದಿಲ್ಲ ಎಂಬಷ್ಟರ ಮಟ್ಟಿಗೆ ಗಾಂಧಿ ಜಾತ್ಯಾತೀತರು. ಪ್ರಭುತ್ವವು ಧಾಮರ್ಿಕ ನೆಲೆಗಳು, ನೈತಿಕ ನೆಲೆಗಳಿಗಿಂತ ದೊಡ್ಡದಲ್ಲ ಎಂದು ಭಾವಿಸುವುದರಲ್ಲಿ. ಮತ್ತು ಜಾತ್ಯಾತೀತತೆ ಎಂದರೆ ಧರ್ಮ - ಸಂಸ್ಕೃತಿಯ ವಿಮುಖತೆಯಲ್ಲ, ಬದಲಿಗೆ ವೈವಿಧ್ಯಮಯವಾದ, ಬಹುಮುಖಿಯಾಗಿರುವ ಧರ್ಮಗಳನ್ನು, ಆಚರಣೆಗಳನ್ನು, ಸಂಸ್ಕೃತಿಗಳನ್ನು, ಪ್ರೀತಿಯಿಂದ ಗೌರವದಿಂದ ಕಾಣಬೇಕೆನ್ನುವ ದೃಷ್ಟಿಕೋನದಲ್ಲಿ. ಗಾಂಧಿ ಎಲ್ಲ ವೈಚಾರಿಕರು ಮತ್ತು ಆಧುನಿಕರಿಗಿಂತ ಹೆಚ್ಚು ಕ್ರಾಂತಿಕಾರರು. ಏಷ್ಯಾ, ಯೂರೋಪು, ಅಮೆರಿಕಾ ಖಂಡಗಳ ಯಾವ ದೇಶಗಳ, ಯಾವುದೇ ಧಾಮರ್ಿಕ ಹಿನ್ನೆಲೆಯ ರಾಷ್ಟ್ರಗಳ ಈಚಿನ ಬೆಳವಣಿಗೆಗಳನ್ನು ಗಮನಿಸಿದರು ಇಂತಹ ವೈಚಾರಿಕ ಸ್ಪಷ್ಟತೆ ನಮಗೆ ಕಾಣುವುದಿಲ್ಲ. ನಮ್ಮ ಉಪಖಂಡದಲ್ಲೇ ಈಗಲೂ ಧರ್ಮವನ್ನೇ ಆಧಾರವಾಗಿಟ್ಟುಕೊಂಡು ಸಮಾಜವನ್ನು, ಸಕರ್ಾರವನ್ನು ರೂಪಿಸಬಹುದೆಂಬ ಭ್ರಮಾಧೀನರು ಮತ್ತು ಜಾತ್ಯಾತೀತತೆಯೆಂದರೆ ಧಾಮರ್ಿಕ - ಸಾಂಸ್ಕೃತಿಕ ವಿಮುಖತೆಯೆಂದು ತಪ್ಪು ತಿಳಿದ ವೈಚಾರಿಕ ಮೂಢರು ಎರಡು ತುದಿಗಳಲ್ಲಿ ನಿಂತು ನಮ್ಮೆಲ್ಲರನ್ನು ಗೊಂದಲಕ್ಕೆ ಬೀಳಿಸುತ್ತಿರುವ ದಿನಗಳಲ್ಲಿ ಗಾಂಧಿಯ ಈ ನೋಟ ಎಂದಿಗಿಂತ ಹೆಚ್ಚು ಪ್ರಸ್ತುತ. ಪರೇಲ್ ಇನ್ನೊಂದು ಸಂಗತಿ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ಒಂದು ದೇಶ, ಒಂದು ಸಮಾಜದಲ್ಲಿ ಬದುಕುವ ಬಹುಸಂಖ್ಯಾತ ನಾಗರೀಕರು ಯಾವ ಪರಿಕಲ್ಪನೆಯ ಆಧಾರದ ಮೇಲೆ ದೇಶವನ್ನು ಕಟ್ಟಲು ಬಯಸುತ್ತಾರೆ ಎಂಬುದು ಕೂಡ ಮುಖ್ಯ. ಬಹಸಂಖ್ಯಾತರ ಒಲವೇ ಅಹಿಂಸೆ, ಸಂಯಮ, ಧಾಮರ್ಿಕ ಮತ್ತು ನೈತಿಕ ಪರಿಕಲ್ಪನೆಗಳ ಪರವಾಗಿಲ್ಲದಿದ್ದರೆ, ನೆಮ್ಮದಿಯ ಸಂತೋಷದ ಜೀವನ ಶೈಲಿಗೆ ವಿರುದ್ಧವಾದ ಭೋಗಜೀವನದ ಪರವಾಗಿದ್ದರೆ ಅಂತಹ ದೇಶಗಳನ್ನು, ಸಮಾಜಗಳನ್ನು ಗಾಂಧಿ ಕನಸಿದ್ದ ಅಹಿಂಸೆ, ಧಾಮರ್ಿಕ ನೆಲೆಗಳು, ಜಾತ್ಯಾತೀತತೆಯ ಪರಿಕಲ್ಪನೆಯ ಆಧಾರದ ಮೇಲೆ ಕಟ್ಟುವುದು ಸಾಧ್ಯವಿಲ್ಲ. 1992ರಲ್ಲಿ ವ್ಯಾಕ್ಲಾವ್ ಹ್ಯಾವೆಲ್ ಆಧುನಿಕತೆಯ ಕೊನೆ ಯನ್ನು ಘೋಷಿಸಿದಾಗ ಆತನ ಮನಸ್ಸಿನಲ್ಲಿದ್ದುದು ಇದೇ; ಆಧುನಿಕತೆ ಮತ್ತು ಪ್ರಗತಿಯನ್ನು ಕುರುಡಾಗಿ ನಂಬುವುದರಲ್ಲೇ ಮನುಷ್ಯನ ಅಧಃಪತನದ ಬೀಜಗಳಿರುವುದು ಮತ್ತು ನಾಗರೀಕತೆ - ನಾಗರೀಕತೆಗಳ ನಡುವಿನ ಸಂಘರ್ಷಗಳ ಪ್ರೇರೇಪಣೆಯಿರುವುದು. ರುಢೊಲ್ಫ್ ದಂಪತಿಗಳ ಪ್ರಕಾರ ಗಾಂಧಿಯ ದೊಡ್ಡ ಸಾಧನೆಯೆಂದರೆ ಧರ್ಮವನ್ನು ಪವಿತ್ರ ಪಠ್ಯಗಳು ಮತ್ತು ಆದಿಗುರುಗಳಿಂದ ಬೇರ್ಪಡಿಸಿದ್ದು ಮತ್ತು ಹೀಗೆ ಬೇರ್ಪಡಿಸಿಯೂ ಮನುಷ್ಯನ ಜೀವನಕ್ಕೆ ಒಂದು ಘನವಾದ ಆಧ್ಯಾತ್ಮಿಕ ಉದ್ದೇಶವಿದೆ ಎಂದು ತೋರಿಸಿಕೊಟ್ಟಿದ್ದು. ಈ ನೋಟವೆ ಟಿಬೆಟಿಯನ್ ಗುರು ರಿಂಪೋಚೆಯವರನ್ನು ಗಾಂಧಿ ಕಡೆಗೆ ಆಕಷರ್ಿಸಿರುವುದು. ಚೀನಾದಿಂದ ವಿಮುಕ್ತಿ ಪಡೆಯಲು ಮತ್ತು ನಂತರ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಗಾಂಧಿಮಾರ್ಗವೇ ಅವರಿಗೆ ಸೂಕ್ತವಾದ ಖಚಿತವಾದ ಮಾರ್ಗವಾಗಿ ಕಂಡಿದೆ.
ರಿಂಪೋಚೆಯವರಿಗೆ ಸರಿಯಾಗಿ ಕಂಡಂತೆ ಸ್ವಾತಂತ್ರ್ಯಕ್ಕಾಗಿ, ಚೀನೀಯರಿಂದ ಬಿಡುಗಡೆ ಪಡೆಯಲು ನಡೆಸುವ ರಾಜಕೀಯ ಹೋರಾಟ, ಆಧ್ಯಾತ್ಮಿಕ ಹೋರಾಟವು ಆಗಬೇಕಾಗುತ್ತದೆ. ಈ ಸಾಧ್ಯತೆ ದಕ್ಕುವುದು ಗಾಂಧಿಯ ಸತ್ಯ ಮತ್ತು ಅಹಿಂಸೆಯ ಪರಿಕಲ್ಪನೆಗಳನ್ನೇ ಅಳವಡಿಸಿಕೊಂಡಾಗ. ಏಕೆಂದರೆ ಈ ಪರಿಕಲ್ಪನೆಗಳ ಪ್ರಕಾರ ನೀವು ಯಾರ ವಿರುದ್ಧ ಹೋರಾಡುತ್ತೀರೋ ಅವರನ್ನು ಕೂಡ ದ್ವೇಷಿಸುವ ಹಾಗೂ ಇಲ್ಲ ಮತ್ತು ಅವರು ಕೂಡ ಪರಿವರ್ತನೆಗೆ ಒಳಗಾಗಬಲ್ಲರು ಎಂಬುದನ್ನು ನಂಬಬೇಕು. ಹಾಗೂ ನಿಮ್ಮ ಪ್ರೀತಿ ಮತ್ತು ಹೋರಾಟಕ್ಕೆ ಅಂತಹ ಬದ್ಧತೆ ಇರಬೇಕು. 1893-1906ರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಅನುಭವಿಸಿದ/ಕಂಡ ಜನಾಂಗೀಯ ಹಿಂಸೆ ಮತ್ತು ಹತ್ಯೆ, 1914ರ ಮೊದಲ ಮಹಾಯುದ್ಧದ ಸಮಯದಲ್ಲಿ ಕಂಡುಬಂದ ನಿರರ್ಥಕ ಹಿಂಸೆ ಕೂಡ ಗಾಂಧಿಗೆ ಅಹಿಂಸಾತ್ಮಕ ಹೋರಾಟದಲ್ಲಿ ನಂಬಿಕೆಯನ್ನು ಹೆಚ್ಚಿಸಿರಬೇಕು. ಹಿಂಸೆಯಲ್ಲಿ ನಮ್ಮ ನಂಬಿಕೆ ಹೋಗಲು/ಕಡಿಮೆಯಾಗಲು ಬೇಕಾದ ನೈತಿಕ ದೃಢತೆ ನಮ್ಮಲ್ಲಿಲ್ಲದಿದ್ದರೆ. ಆಧುನಿಕತೆ ತನ್ನ ಬಳುವಳಿಯಾಗಿಯೇ ತಂದಿರುವ ಮತ್ತು ಬಲಿಷ್ಠ ರಾಷ್ಟ್ರಗಳ ನಿಮರ್ಾಣಕ್ಕೆ ಮಾತ್ರ ಪೂರಕವಾಗುವ ತಂತ್ರಜ್ಞಾನ, ರಾಷ್ಟ್ರೀಯತೆಯ ಪರಿಕಲ್ಪನೆ, ಶಕ್ತಿ ಆಧಾರಿತ ರಾಜಕೀಯ - ಇವೆಲ್ಲವೂ ನಮಗೆ ಅನಿವಾರ್ಯವಾಗಿಯೇ ಕಾಣುತ್ತವೆ. ಈ ಹಿನ್ನೆಲೆಯಲ್ಲೇ ಗಾಂಧಿ ಆಧುನಿಕ ಸಕರ್ಾರಗಳು/ವ್ಯವಸ್ಥೆಗಳು ನಾಗರೀಕತೆಯ ಹೆಸರಿನಲ್ಲಿ ರೂಢಿಸುತ್ತಾ ಬಂದಿರುವ ಕಾನೂನು, ನ್ಯಾಯಗಳ ಪರಿಕಲ್ಪನೆಯನ್ನು ಕೂಡ ಪ್ರಶ್ನಿಸಿದ್ದು. ಈ ಪರಿಕಲ್ಪನೆಗಳಲ್ಲಿ ತಪ್ಪಿಲ್ಲ. ಆದರೆ ಇವನ್ನು ಮಾತ್ರವೇ ನೆಚ್ಚಿಕೊಂಡರೆ ಯಾವುದೇ ಸಮಸ್ಯೆಯು ಶೀಘ್ರವಾಗಿಯೂ, ಸಾರ್ವಜನಿಕ ಹಿತದೃಷ್ಟಿಯಿಂದಲೂ ಇತ್ಯರ್ಥವಾಗುವುದೇ ಇಲ್ಲ. ಜನಾಂಗೀಯ ಪರಿಕಲ್ಪನೆಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ನಿರಂತರ ಕಾನೂನು ಹೋರಾಟದ ಸೀಮಿತ ಯಶಸ್ಸು ಮತ್ತು ವಿಫಲತೆಯಿಂದಾಗಿ ಸಮಾಜವನ್ನು, ಮನುಷ್ಯನನ್ನು ಕಾನೂನಿನ ಮೂಲಕ ಮಾತ್ರವೇ ಪರಿವತರ್ಿಸಬಲ್ಲದು ಎಂಬ ನಂಬಿಕೆ ಗಾಂಧಿಗೆ ಹೊರಟುಹೋಗಿತ್ತು.
ಹೊಸ ಕಾಲದ ಆಥರ್ಿಕ ವ್ಯವಹಾರಗಳಲ್ಲಿ ನೀತಿಯ ಸ್ಥಾನದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಜೇಮ್ಸ್ ಟೂಲ್ರ ಪ್ರಕಾರ ಗಾಂಧಿ ಸ್ವತಃ ತಮ್ಮಲ್ಲೇ ನಾಯಕತ್ವದ ಗುಣಗಳನ್ನು ರೂಪಿಸಿಕೊಂಡ ರೀತಿಯಿಂದಲೇ ನಮ್ಮ ಕಾಲದ ರಾಜಕೀಯ ಮತ್ತು ಆಥರ್ಿಕ ನಾಯಕವರ್ಗ ಅನೇಕ ಪಾಠಗಳನ್ನು ಕಲಿಯಬಹುದಾಗಿದೆ. ನಿರಂತರವಾಗಿ ಜನರಿಂದ ಕಲಿಯುವ ಮತ್ತು ಜನರಿಗೆ ಕಲಿಸುವ ಗುಣಗಳಿಂದಾಗಿ ಒಬ್ಬ ನಾಯಕನಾಗಬಹುದು ಎಂದು ನಂಬಿದ್ದ ಗಾಂಧಿಯಿಂದ ನಾವು ಕಲಿಯಬೇಕಾದ್ದು; ಜನರೊಡನೆ ಅವರು ಬೆರೆಯುತ್ತಿದ್ದ ರೀತಿ, ಜನರ ದೈಹಿಕ, ಮಾನಸಿಕ, ಭಾಷಿಕ ನುಡಿಕಟ್ಟುಗಳೊಡನೆ ತಾದಾತ್ಮ್ಯ ಸಾಧಿಸುತ್ತಿದ್ದ ರೀತಿ, ಜನರು ತಮ್ಮ ಧೀಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೀಡುತ್ತಿದ್ದ ಕುಮ್ಮಕ್ಕುಗಳ ಸ್ವರೂಪ, ತನ್ನ ತಪ್ಪುಗಳನ್ನೂ, ಮಿತಿಗಳನ್ನೂ, ಸಾರ್ವಜನಿಕರೆದುರಿಗೆ ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತಿದ್ದ ರೀತಿ - ಇಂತಹ ಗುಣಗಳನ್ನು. ಹೀಗಾದಾಗ ಮಾತ್ರ ಗಾಂಧಿಗೆ ಸಾಧ್ಯವಾದಂತೆ ಸೇವೆಗಾಗಿ ಮಾತ್ರವೇ ನಾಯಕತ್ವ ಎಂಬ ಪರಿಕಲ್ಪನೆಯನ್ನು ಒಪ್ಪುವ ಸಹಸ್ರಾರು ಶಿಷ್ಯರನ್ನು ಜನಸಾಮಾನ್ಯ ವರ್ಗದಿಂದಲೇ ಸೃಷ್ಟಿಸಲು ಸಾಧ್ಯವಾಗುತ್ತದೆ.
ಗಾಂಧಿಯ ಶಿಕ್ಷಣ ಕಲ್ಪನೆ ಮತ್ತು ಶೈಕ್ಷಣಿಕ ಉದ್ದೇಶಗಳ ಬಗ್ಗೆ ತಮ್ಮ ಪ್ರಯೋಗಗಳ ಹಿನ್ನೆಲೆಯಲ್ಲಿ ಅನಿಲ್ ಸಡಗೋಪಾಲ್ ಬಹು ಆದ್ರ್ರವಾದ ವಿಚಾರಗಳನ್ನು ಮಂಡಿಸುತ್ತಾರೆ. ಶಿಕ್ಷಣವು ಈಗಿರುವಂತೆ ಮಕ್ಕಳ ಅಂತರಂಗದ ಶಕ್ತಿಯನ್ನೇ ಬೆಳೆಸುತ್ತಿಲ್ಲ ಎಂಬುದು ಅವರ ಕೊರಗು. ಶಿಕ್ಷಣದಲ್ಲಿ ದೈಹಿಕ ಶ್ರಮಕ್ಕೆ ಏನೂಪಾತ್ರವಿಲ್ಲ. ಕೇವಲ ಕುಶಲತೆಯನ್ನು ಮಾತ್ರವೇ ಹೇಳಿಕೊಟ್ಟರೆ ಈಗಾಗಿರುವಂತೆ ವಸಾಹತುಶಾಹಿ, ಜಾಗತೀಕರಣದ ಫಲವಾಗಿ ಮೂಡುತ್ತಿರುವ ಆಥರ್ಿಕ ವ್ಯವಸ್ಥೆಗೆ ಬೇಕಾದ ಕಾಮರ್ಿಕ ಸಮೂಹವನ್ನು ಸೃಷ್ಟಿಸಬಹುದೇ ಹೊರತು ಹೊಸ ನಾಗರೀಕತೆ ಕಟ್ಟಲು ಬೇಕಾದಂತಹ ನಾಗರೀಕರನ್ನಲ್ಲ ಎಂದು ತೀವ್ರವಾಗಿ ವಾದಿಸುವ ಸಡಗೋಪಾಲ್ರ ಪ್ರಕಾರ ಈ ದಿಕ್ಕಿನಲ್ಲಿ ಸಮಾಜ, ಶಿಕ್ಷಕರು, ಪೋಷಕರು, ವಿದ್ಯಾಥರ್ಿಗಳು ಎಲ್ಲರೂ ಒಟ್ಟಿಗೇ ಶೀಘ್ರವಾಗಿಯೇ ಕಾಯರ್ೋನ್ಮುಖವಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸಡಗೋಪಾಲ್ರ ಆಸೆ ಮರೀಚಿಕೆಯಾದಂತೆ ಕಾಣುವುದು ನಮ್ಮ ಕಾಲದ ಮಿತಿ ಮತ್ತು ದುರಂತ. ಇಡೀ ಪುಸ್ತಕದಲ್ಲಿ ಮನಮುಟ್ಟುವ ಭಾಗವೆಂದರೆ ಅಮೆರಿಕಾದ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಏಳುಜನ ಶಿಕ್ಷಕರು ಬರೆದುಕೊಂಡಿರುವ ಆತ್ಮ ಕಥಾನಕದ ರೀತಿಯ ಬರಹಗಳು. ಈವತ್ತು ಹಿಂಸೆ ಪ್ರತಿ ಮನುಷ್ಯನ ಒಳಗಡೆಯೂ ಇದೆ ಎಂದು ಗುರುತಿಸುವ ತುತರ್ಿನಲ್ಲೇ ನಾವು ಹಿಂಸೆಯೂ ಪ್ರತಿ ಕುಟುಂಬದಲ್ಲೂ ಇದೆ, ಪ್ರತಿ ಶಾಲೆಯಲ್ಲೂ ಇದೆ ಎಂಬುದನ್ನು ಕೂಡ ಗುರುತಿಸಬೇಕು. ಹಿಂಸೆಗೆ ಪ್ರಚೋದನೆ ನೀಡುತ್ತಿರುವ ವಾತಾವರಣದಲ್ಲಿ ಬೆಳೆಯುತ್ತಿರುವ ಅಮೆರಿಕಾದ ಮಕ್ಕಳು ಅಹಿಂಸೆಯೂ ಸೇರಿದಂತೆ ಸಕಾರಾತ್ಮಕ ಜೀವನ ಮೌಲ್ಯಗಳಿಗೆ ಸ್ಪಂದಿಸುವ ರೀತಿ, ಅಂತಹ ಸ್ಪಂದನ ಹುಟ್ಟುಹಾಕಲು ಶಿಕ್ಷಕರು ತೋರುವ ಉತ್ಸಾಹ ಮತ್ತು ಪ್ರಯೋಗಶೀಲತೆ, ಪಾಠ ಹೇಳಿಕೊಡುವ ರೀತಿಯಲ್ಲಿ, ಮಕ್ಕಳೊಡನೆ ಬೆರೆಯುವ ರೀತಿಯಲ್ಲಿ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಇಂತಹ ಮೌಲ್ಯ ಶಿಕ್ಷಣವನ್ನು ನೀಡುವಾಗ ತಾವೇ ಉದಾಹರಣೆಯಾಗಬೇಕಾಗಿ ಬಂದಾಗ ತಮ್ಮ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿ - ಇವೆಲ್ಲ ಈ ಬರಹಗಳಲ್ಲಿ ದಾಖಲಾಗಿವೆ. ಇದೇ ಧಾಟಿಯ ಇನ್ನೊಂದು ಮನ ಕರಗಿಸುವ ಪ್ರಬಂಧ - ಬನರ್ಾಡರ್್ ಲ್ಯಾಪ್ಯೆಟ್ಟ ಎಂಬಾತನದು. ಐದು ವರ್ಷಕ್ಕೇ ಧೂಮಪಾನ ಕಲಿತದ್ದು, ವರ್ಣಭೇದ ನೀತಿಯಿಂದ ಹಿಂಸೆ, ಅವಮಾನ ಎದುರಿಸಿದ್ದು ಮತ್ತು ನಂತರ ನೆರೆಹೊರೆಯಲ್ಲೇ ಗೂಂಡಾಗಳ ಪಡೆ ಸೇರಿದ್ದು - ಇಷ್ಟು ಈತನ ಹಿನ್ನೆಲೆ. ಈತ ಪ್ರೀತಿ ಮತ್ತು ಅಹಿಂಸೆಯ ಕಲ್ಪನೆಗೆ ಸ್ಪಂದಿಸಲು ತುಂಬಾ ಕಷ್ಟಪಡಬೇಕಾಯಿತು. ತನ್ನನ್ನು ಇದುವರೆಗೆ ದ್ವೇಷಿಸಿದವರನ್ನು ಕೂಡ ಪ್ರೀತಿಸಬೇಕು ಎಂಬುದನ್ನು ಆಂತರಿಕವಾಗಿ ಒಪ್ಪಿಕೊಳ್ಳಲು ತೀವ್ರ ಮಾನಸಿಕ ತುಮುಲವನ್ನು ಎದುರಿಸಬೇಕಾಯಿತು. ಗಾಂಧಿ ಮತ್ತು ಮಾಟರ್ಿನ್ ಲೂಥರ್ ಕಿಂಗ್ರ ಗಾಢ ಪ್ರಭಾವಕ್ಕೊಳಗಾದ ಈತ ಈಗ ವಿಶ್ವಾದ್ಯಂತ ಪ್ರವಾಸ ಮಾಡುತ್ತಾ ಸಂಘರ್ಷಗಳನ್ನು, ಬಿಕ್ಕಟ್ಟುಗಳನ್ನು ಅಹಿಂಸಾತ್ಮಕವಾಗಿ ಹೇಗೆ ಪರಿಹರಿಸಿಕೊಳ್ಳಬಹುದು ಎಂದು ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾನೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಾವೆಲ್ಲ ಸಂಪೂರ್ಣವಾಗಿ ಮರೆತುಬಿಟ್ಟ, ಲೋಕವಿದ್ಯಾ ಪರಿಕಲ್ಪನೆ ಕಡೆಗೆ ಅಮಿತ್ ಬಾಸೂಲೆ ನಮ್ಮ ಗಮನ ಸೆಳೆಯುತ್ತಾರೆ. ಶಿಕ್ಷಣವೆಂದರೆ ಮೇಲುವರ್ಗಗಳು, ಈಗಾಗಲೇ ಕಲಿತ ವರ್ಗಗಳು, ತಾವು ಕಲಿತದ್ದನ್ನೇ ಎಲ್ಲರಿಗೂ ಪ್ರಸ್ತುತವೆಂದು ಭಾವಿಸಿ ಹೇರುತ್ತಾ ಹೋದದ್ದೇ ಇದುವರೆಗೆ ನಡೆದಿರುವುದು. ಸ್ಥಳೀಯರ, ಕೆಳವರ್ಗದವರ ಬದುಕು ಮತ್ತು ಜೀವನ ಶೈಲಿ ಹಾಗೂ ಸ್ಮೃತಿಯಲ್ಲಿ ಅಂತರ್ಗತವಾಗಿರುವ ಶ್ರಮದ ಶೈಲಿ, ಕುಶಲತೆ, ಕಲಾಪ್ರಜ್ಞೆ ಹಾಗೂ ಜ್ಞಾನದ ಆಕರಗಳಿಂದ ಕಲಿಯಲು ನಾವು ಸಿದ್ಧರಿರಲಿಲ್ಲ ಮತ್ತು ಇವುಗಳನ್ನು ಹೊಸ ಕಾಲಕ್ಕೆ ಬೇಕಾದಂತೆ ಪರಿಷ್ಕರಿಸಿ, ನವೀಕರಿಸಿ ಈ ವರ್ಗದವರ ಆತ್ಮ ವಿಶ್ವಾಸವನ್ನು ಕೂಡ ನಾವು ಹೆಚ್ಚಿಸಲಿಲ್ಲ. ಒಂದು ಚಳುವಳಿ ಮಾತ್ರವೇ ಈ ದಿಕ್ಕಿನಲ್ಲಿ ನಮ್ಮನ್ನು ಕಾಯರ್ೋನ್ಮುಖರನ್ನಾಗಿ ಮಾಡಬಲ್ಲದು ಎಂಬುದು ಅಮಿತ್ರ ವಿಚಾರ - ಕಳಕಳಿ.
ಇಂತಹ ಎಲ್ಲ ಚಿಂತನೆ ಮತ್ತು ಪ್ರಯೋಗಗಳು ಮೂಡಿಬಂದ ಸಂದರ್ಭ, ಸನ್ನಿವೇಶಗಳನ್ನು, ಕೆಲವು ಸಂದರ್ಭದಲ್ಲಿ ಇಂತಹುದೇ ಸನ್ನಿವೇಶಗಳನ್ನು ಗಾಂಧಿ ಎದುರಿಸಿದ ರೀತಿಯನ್ನು ಕೂಡ ಸಾಂದಭರ್ಿಕವಾಗಿ ಬರಹಗಳಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯತೆ, ಸಮಾಜವಾದ, ಕಮ್ಯುನಿಸಂ ಕುರಿತ ಮರುಚಿಂತನೆಗಳು ಸಕರ್ಾರದ ಮಟ್ಟದಲ್ಲಿ, ರಾಜಕೀಯ ಪಕ್ಷಗಳ ಕಕ್ಷೆಯೊಳಗೆ ಮಾತ್ರವೇ ನಡೆದಿವೆ, ನಡೆಯುತ್ತಿದೆ. ಜಗತ್ತು ಈಗ ಒಂದೇ ದಿಕ್ಕಿನಲ್ಲಿ ಮಾತ್ರ ಚಲಿಸುತ್ತದೆ, ಅದು ಜಾಗತೀಕರಣದ ನವ ಆಥರ್ಿಕತೆಯ ದಿಕ್ಕು ಮಾತ್ರ ಎಂದು ಭಾವಿಸಿರುವ ಕಳೆದ ಮೂರು ದಶಕಗಳಲ್ಲಿ ಮೂಲಭೂತ ಮತ್ತು ಜೀವಂತ ಸ್ವರೂಪದ ಚಿಂತನಾಶೀಲತೆಯೆ ನಿಂತುಹೋಗಿದೆ ಎಂದು ನಾವೆಲ್ಲರೂ ಕೈಚೆಲ್ಲಿ ಕುಳಿತಿರುವಾಗ, ಶಾಲೆಗಳಲ್ಲಿ, ಸಣ್ಣ ಪುಟ್ಟ ಆತ್ಮೀಯ ಗುಂಪುಗಳಲ್ಲಿ, ಮತ್ತು ತಮ್ಮ ಸಾಧನೆಯ ಮೂಲಕವೇ ಮಾದರಿಯಾದ ಕೆಲವು ಧೀಮಂತ ವ್ಯಕ್ತಿತ್ವಗಳ ಮೂಲಕ, ಗಾಂಧಿಯನ್ನು ಕುರಿತ ಮರುಚಿಂತನೆ ಸೂಕ್ಷ್ಮವಾಗಿ, ಆದರೆ ಅಬ್ಬರವಿಲ್ಲದೆ ನಡೆಯುತ್ತಿರುವುದು ನಮ್ಮಲ್ಲು ಕೂಡ ಆತ್ಮಪರೀಕ್ಷೆಯನ್ನು, ಭರವಸೆಯ ಭಾವನೆಯನ್ನು ಒಟ್ಟಿಗೇ ಮೂಡಿಸುತ್ತದೆ.
***
ಕೆ. ಸತ್ಯನಾರಾಯಣ, # 9, 'ಪ್ರಕೃತಿ', 13ನೇ ಮೇನ್, 6ನೇ ಕ್ರಾಸ್, ಪದ್ಮನಾಭನಗರ, ಬೆಂಗಳೂರು-560070,
ಮೊ: 8762300809.



No comments:

Post a Comment