ರಾಮ ನನಗೆ ಸಮಕಾಲೀನ ವ್ಯಕ್ತಿ.....ಪು.ತಿ.ನ.
ಒಬ್ಬ ಕವಿಯಾಗಿ ನಾನು ಒಂದು ‘ದೂರ’ದ ಪ್ರಜ್ಞೆಯನ್ನು , ‘ಸಂಪೂರ್ಣವಾಗಿ ಸೇರಿಹೋಗದ ಸೌಂದರ್ಯಾತ್ಮಕ ದೂರ’ವನ್ನು ಬೆಳೆಸಿಕೊಂಡಿದ್ದೇನೆ. ಸಾಂಪ್ರದಾಯಿಕ ದೃಷ್ಟಿಕೋನವು ರಾಮಾಯಣವನ್ನು ದೈವತ್ವಕ್ಕೇರಿಸಿದೆ. ಎಲ್ಲಕ್ಕಿಂತ ದುಃಖದ ಸಂಗತಿ ಅಂದರೆ ರಾಮಾಯಣವನ್ನು ನೈತಿಕ ತತ್ವಗಳನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತದೆ. ನೈತಿಕತೆಯ ಬಗೆಗಿನ ಅನೇಕ ಸಿದ್ಧಾಂತಗಳನ್ನು ರಾಮಾಯಣದ ಮೂಲಕ ಹೇಳಲಾಗುತ್ತದೆ. ಇದು ಒಂದು ಅದ್ಭುತ ಕಲಾಕೃತಿಯಾಗಿ ಅದಕ್ಕಿರುವ ಸೌಂದರ್ಯವನ್ನು ನಾಶಮಾಡಿತು. ಅದನ್ನು ಒಂದು ಧರ್ಮಗ್ರಂಥವೆಂಬಂತೆ ಓದುತ್ತಾ ಬರಲಾಯಿತು; ಅದು ಒಂದು ಸಿದ್ಧಾಂತವನ್ನು ಮುಂದಿಡುತ್ತದೇನೋ ಎಂಬಂತೆ.
ಸ್ವಯಂ ವಾಲ್ಮೀಕಿಯೂ ಕೂಡ ರಾಮಾಯಣವನ್ನು ಈ ಮೇಲೆ ಹೇಳಿದ ರೀತಿಯಲ್ಲಿ ಪರಿಕಲ್ಪಿಸಿರಲಿಲ್ಲ. ವಾಲ್ಮೀಕಿ ಒಬ್ಬ ಮಹಾನ್ ವ್ಯಕಿಯ ಲೌಕಿಕವನ್ನು ದಾಟಲಿಚ್ಛಿಸುವ ಹುಡುಕಾಟದಲ್ಲಿದ್ದ. ಅದಕ್ಕೇ ತನ್ನ ಕೃತಿಯಲ್ಲಿ ಲೌಕಿಕ ಜಂಜಡಗಳನ್ನು ದಾಟಲಿಚ್ಚಿಸುವ ವ್ಯಕ್ತಿಯೊಬ್ಬನ ಹೋರಾಟಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅರ್ಥದಲ್ಲಿ ರಾಮ ನನಗೆ ಒಬ್ಬ ಸಮಕಾಲೀನ ವ್ಯಕ್ತಿಯಾಗಿ ಕಾಣುತ್ತಾನೆ. ರಾಮನನ್ನು ಒಬ್ಬ ದೇವನೆಂಬಂತೆ ನೋಡಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಅವನೊಬ್ಬ ಸಮಕಾಲೀನ ವ್ಯಕ್ತಿ- ಪು.ತಿ.ನ.
೩೦.೦೩.೧೫
M.S. Rudreshvarasvamy [ face book }
No comments:
Post a Comment