stat Counter



Friday, October 2, 2015

ಡಾ| ಬನ್ನಂಜೆ ಗೋವಿಂದಾಚಾರ್ಯ

ಎಸ್. ದೇವೇಂದ್ರ ಪೆಜತ್ತಾಯ

ಡಾ| ಬನ್ನಂಜೆ ಗೋವಿಂದಾಚಾರ್ಯ
ಅರವತ್ತು ವರ್ಷಗಳ ಒಡನಾಟ ಬನ್ನಂಜೆ ಗೋವಿಂದಾಚಾರ್ಯರೊಂದಿಗೆ . . .
    ನಾನು ತಮಿಳುನಾಡಿನ ಅಂಬಾಸಮುದ್ರದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿ 1951ರಲ್ಲಿ ಎಮ್.ಜಿ.ಎಮ್. ಕಾಲೇಜು ಸೇರಲು ಉಡುಪಿಗೆ ಬಂದೆ. ನನ್ನ ಒಡಹುಟ್ಟಿದ ತಮ್ಮ ಲಕ್ಷ್ಮೀಶ ಶ್ರೀ ಪಲಿಮಾರು ಮಠದ ರಘುವಲ್ಲಭ ತೀರ್ಥರೆಂಬ ನಾಮಧ್ಯೇಯದಲ್ಲಿ ಸ್ವಾಮಿಗಳಾಗಿದ್ದರು. ಆಗ ಉಡುಪಿ ಪಲಿಮಾರು ಮಠದ ಒಂದು ಕೋಣೆಯಲ್ಲಿದ್ದು ನಾನು ವಿದ್ಯಾಭ್ಯಾಸ ಮುಂದುವರಿಸಿದೆ. ಅಂದಿನಿಂದಲೇ ಬನ್ನಂಜೆಯವರ ಪರಿಚಯವಾಯಿತು. ಪ್ರತಿ ದಿನವೂ ಪಲಿಮಾರುಮಠದಲ್ಲಿ ಹೆಚ್ಚಿನ ಸಮಯ ಗ್ರಂಥಗಳನ್ನು ಬರೆಯುವುದರಲ್ಲೇ ತಲ್ಲೀನರಾಗುತ್ತಿದ್ದರು. ಬಿಡುವಾದಾಗಲೆಲ್ಲಾ ಅಷ್ಟಮಠಾಧೀಶರ ಹಾಗೂ ಮಠಗಳ ವಿದ್ವಾಂಸರು ಪಂಡಿತರ ಜತೆ ಚಚರ್ಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಪಲಿಮಾರು ಮಠದ ಶ್ರೀಗಳಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
ಕೂರಾಡಿ ಸೀತಾರಾಮ ಅಡಿಗರು, ಬನ್ನಂಜೆ ಗೋವಿಂದಾಚಾರ್ಯರು ಕುಮುದಾ ತನಯ (ಪಲಿಮಾರು ಸ್ವಾಮೀಜಿ) ಇವರು ಪ್ರತಿದಿನವೂ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. ಹೆಚ್ಚಾಗಿ ಕನ್ನಡ ಹಾಗೂ ಸಂಸ್ಕೃತ ಪುಸ್ತಕಗಳ ಬಗ್ಗೆ ವಿಮಶರ್ೆ ಮಾಡುತ್ತಿದ್ದರು. ಈ ಮೂವರು ಒಟ್ಟಾಗಿ ಮುಕ್ಕಣ್ಣ ದರ್ಶನ ಎಂಬ ಕವನ ಸಂಕಲನವನ್ನು 1961ರಲ್ಲಿ ಪ್ರಕಟಿಸಿದರು. ಈ ವಿಷಯವನ್ನು ಶ್ರೀಮುರಳೀಧರ ಉಪಾಧ್ಯಾ ಹಿರಿಯಡಕ ಇವರು ತಮ್ಮ ಒಂದು ಲೇಖನದಲ್ಲಿ ಪ್ರಸ್ತಾಪ ಮಾಡಿದ್ದರು.
ಸ್ವಲ್ಪ ಸಮಯದ ನಂತರ ಬನ್ನಂಜೆಯವರು ಮಣಿಪಾಲದ ಉದಯವಾಣಿ ದೈನಿಕ ಪತ್ರಿಕೆಯಲ್ಲಿ ದುಡಿಯಲು ಆರಂಭಿಸಿದರು. ಆಗ ಅವರು ಅವ್ಯಾಹತವಾಗಿ ಲೇಖನಗಳನ್ನು ಬರೆಯುತ್ತಿದ್ದರು.


ಆಚಾರ್ಯ ಮಧ್ವರ ತತ್ವ-ಸಿದ್ಧಾಂತಗಳು ತಲಸ್ಪಶರ್ಿಯಾಗಿ ಅಧ್ಯಯನ ಚಿಕ್ಕಂದಿನಿಂದಲೇ ಮಾಡುತ್ತಿದ್ದರು. ಅಸಾಧಾರಣ ಸ್ಮರಣ ಶಕ್ತಿ, ವಿಮಶರ್ಾತ್ಮಕ ವಿಶ್ಲéೇಷಣೆ ಸಂಸ್ಕೃತದಲ್ಲೇ ನಿರರ್ಗಳವಾಗಿ ವ್ಯಾಖ್ಯಾನಗಳನ್ನು ವಿದ್ವಾಂಸರ ಸಭೆಗಳಲ್ಲಿ ಮಂಡಿಸುತ್ತಿದ್ದರು. ಆಗಿನ ಕಾಲದ ಎಲ್ಲಾ ಮಠದ ಶ್ರೀಪಾದರುಗಳು ಬನ್ನಂಜೆಯವರ ಶಾಸ್ತ್ರ ಪಾಂಡಿತ್ಯವನ್ನು ಶ್ಲಾಘಿಸುತ್ತಿದ್ದರು.
ಒಂದು ಆಶ್ಚರ್ಯವೆಂದರೆ ಕನ್ನಡ ಸಾಹಿತ್ಯದಲ್ಲೂ ಅಷ್ಟೇ ಆಳವಾದ ಲೇಖನಗಳನ್ನು ಬರೆಯುತ್ತಿದ್ದರು. ಸಂಸ್ಕೃತ ಪಂಡಿತರುಗಳಿಗೆಲ್ಲಾ ಇವರ ಈ ಕ್ರಮದಿಂದ ಇರಿಸುಮುರಿಸು. ಕಾರಣ ಕನ್ನಡ ಭಾಷೆಯಲ್ಲಿ ಸಾಮಾಜಿಕವಾದ ವಿಚಾರಗಳು ಸಮಾಜದಲ್ಲಿ ಸಂಸಾರಗಳಲ್ಲಿ ಕಂಡುಬರುವ ಲೋಪದೋಷಗಳು ಮೂಢನಂಬಿಕೆ ಕಂದಾಚಾರಗಳನ್ನು ಅರ್ಥವಿಲ್ಲದ ಮಡಿಮೈಲಿಗೆ ಎಂಬ ಭ್ರಮಾತ್ಮಕ ನಡುವಳಿಕೆಗಳು ಇವನ್ನೆಲ್ಲ ಪರಿಣಾಮಕಾರಿಯಾಗಿ ಲೇಖನಗಳ ಮೂಲಕ ಬಹಿರಂಗಪಡಿಸುತ್ತಿದ್ದುದರಿಂದ ಕೆಲವರು ಅಂದರೆ ಅತೀ ಮಡಿವಂತರು ಅಸೂಯೆ ಪಡುತ್ತಿದ್ದರು. ಆದರೂ ಬನ್ನಂಜೆಯವರ ಸಂಸ್ಕೃತ ವಿದ್ವತ್ ತತ್ವಜ್ಞಾನದ ಹಿನ್ನೆಲೆಯಲ್ಲಿ ಯಾರೂ ನೇರವಾಗಿ ಟೀಕಿಸುತ್ತಿರಲಿಲ್ಲ.
          ಆ ಸಮಯದಲ್ಲಿ ಅಂದರೆ 1955 ರ ಇಸವಿಯಲ್ಲಿ ಸುದರ್ಶನಎಂಬ ಪತ್ರಿಕೆಯಲ್ಲಿ  ಬನ್ನಂಜೆ ರಾಮಾಚಾರ್ಯ (ಗೋವಿಂದಾಚಾರ್ಯರ ಅಣ್ಣ) ಸಂಪಾದಕರಾಗಿದ್ದರು. ಆಗ ಬನ್ನಂಜೆಯವರು ಒಂದು ರೂಪಕ ಕಥೆ ನಿನ್ನ ಹೆಸರೇನು ಎಂಬ ಶೀಷರ್ಿಕೆಯಲ್ಲಿ ಮಾಮರ್ಿಕ ಲೇಖನವನ್ನು ಬರೆದಿದ್ದರು. ಅದನ್ನು ಮೊನ್ನೆ ತಾನೇ ನನ್ನ ಸ್ನೇಹಿತರಾದ ರಾಮಕೃಷ್ಣ ವೈಲಾಯರು ಪ್ರಕೃತ ಅಮೆರಿಕದಲ್ಲಿರುವವರು ಈ ಲೇಖನವನ್ನು ನನಗೆ ಇ-ಮೈಲ್ ಮಾಡಿ ಕಳುಹಿಸಿರುತ್ತಾರೆ. ನಾನು ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲೇ ಈ ಲೇಖನವು ನನಗೆ ಸಿಕ್ಕಿದ್ದು ಅನಿರೀಕ್ಷಿತ ಹಾಗೂ ದೊರಕಿತಲ್ಲ ಎಂಬ ಅಚ್ಚರಿ.
ಬನ್ನಂಜೆಯವರ ಸಂಸ್ಕೃತ ಪಾಂಡಿತ್ಯ ತತ್ವ ಶಾಸ್ತ್ರಗಳಜ್ಞಾನ ನಿಖರತೆ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಅವರು ವಿದ್ಯಾವಾಚಸ್ಪತಿ ಎಂಬ ಬಿರುದಾಂಕಿತರಾದರು.
ಸಂಸ್ಕೃತ ವಾಂಞ್ಮ್ಮಯದಲ್ಲಡಗಿದ ತತ್ವ ಸಿದ್ಧಾಂತಗಳನ್ನು ಆಚಾರ್ಯ ಮಧ್ವರು ಸಮ್ಮತಿಸುವ ಸುಜ್ಞಾನದ ಬೆಳಕಿನಲ್ಲಿ ಅವರ ಪ್ರವಚನದ ಓಘ ಜ್ಙಾನಕಾಂಕ್ಷಿಗಳನ್ನು ಸೆರೆಹಿಡಿದು ಬಿಡುತ್ತದೆ. ಈ ನಿಟ್ಟಿನಲ್ಲಿ ನನ್ನ ವೈಯಕ್ತಿಕ ಅನಿಸಿಕೆಯನ್ನು ವ್ಯಕ್ತಪಡಿಸುವುದಾದರೆ ಪೂರ್ಣಪ್ರಜ್ಞರ ಸಾಕ್ಷಾತ್ ಶಿಷ್ಯರಾದ ಲಿಕುಚ ಕುಲಾನ್ವಯರಾದ (ಪೆಜತ್ತಾಯ ಕುಲ) ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯ ಶ್ರೀಹರಿವಾಯುಸ್ತುತಿ ದೃಷ್ಟಾರರು, ಅವರ ತಂಗಿ ಲಘುವಾಯುಸ್ತುತಿ ರಚಿಸಿದ ಕಲ್ಯಾಣಿದೇವಿ, ಶಂಕರ ಪಂಡಿತಾಚಾರ್ಯರು ಸಂಬಂಧದೀಪಿಕಾ ಬರೆದವರು, ಶ್ರೀಮಧ್ವವಿಜಯ ಬರೆದ ಶ್ರೀನಾರಾಯಣ ಪಂಡಿತಾಚಾರ್ಯರು, ನಾರಾಯಣ ಪಂಡಿತಾಚಾರ್ಯರ ಪುತ್ರ ವಾಮನ ಪಂಡಿತಾಚಾರ್ಯ, ಇವರಿಗೆ ಇನ್ನೊಂದು ಹೆಸರು ತ್ರೈವಿಕ್ರಮಾರ್ಯದಾಸ ಇವರು ಆನಂದಮಾಲಾ ಹಾಗೂ ಉಪನಿಷತ್ತುಗಳಿಗೆ ಟೀಕಾ ವಿವರಗಳನ್ನು ಬರೆದವರು. ಇವರೆಲ್ಲರೂ ಋಷಿ ಸದೃಶರು. ಇದೇ ಪಂಕ್ತಿಯಲ್ಲಿ ಅಪಾರ ಜ್ಞಾನನಿಧಿಯದ ಡಾ| ಬನ್ನಂಜೆಯವರು ಈ ಶತಮಾನದಲ್ಲಿ ಉದಯಿಸಿ ಬಂದ ಅದ್ಬುತ ಜ್ಞಾನಸಾಗರ. ಈಗ ಬನ್ನಂಜೆಯವರನ್ನು ಡಾ|| ಬನ್ನಂಜೆ ಗೋವಿಂದ ಪಂಡಿತಾಚಾರ್ಯರೆಂದೇ ಸಂಭೋದಿಸಬೇಕೆಂದು ನಾನು ಬಯಸುತ್ತಿದ್ದೇನೆ.
ಅವರನ್ನು ಲಿಕುಚಕುಲ ಸಂಭೂತರೆಂದೇ ನಾನು ತಿಳೀಯುತ್ತೇನೆ. ನಾನು ಕೂಡ ಲಿಕುಚಕುಲದಲ್ಲಿ ಜನಿಸಿದ್ದು ನನ್ನ ಪುಣ್ಯ ಸುಕೃತವೆಂದು ಭಾವಿಸಿದ್ದೇನೆ. ನನ್ನ ಸೋದರನಂತೆಯೇ ಅವರನ್ನು ಗೌರವಿಸಿ ಅವರ ಅಪ್ರತಿಮ ಪಾಂಡಿತ್ಯಕ್ಕೆ ನಾನು ವಯಸ್ಸಿನಲ್ಲಿ ನಾಲ್ಕು ವರ್ಷ ಹಿರಿಯನಾದರೂ ಅವರಿಗೆ ತಲೆಬಾಗಿ ವಂದಿಸುತ್ತೇನೆ. ಅವರಲ್ಲಿ ಆಚಾರ್ಯ ಮಧ್ವರ ಹಾಗೂ ಲಿಕುಚಕುಲ ತ್ರಿವಿಕ್ರಮ ಪಂಡಿತರ ಮತ್ತು ನಾರಾಯಣ ಪಂಡಿತರ ದಿವ್ಯಾನುಗ್ರಹ ಪರಿಪೂರ್ಣವಾಗಿ ಮುಪ್ಪುರಿಗೊಂಡಿದೆ. ಹಾಗಾಗಿ ಪ್ರತಿಭಾನ್ವಿತ ಜ್ಞಾನನಿಧಿಯಾಗಿದ್ದಾರೆ ಎಂಬುದು ಅತಿಶಯೋಕ್ತಿಯಲ್ಲ. ಡಾ| ಬನ್ನಂಜೆ ಗೋವಿಂದ ಪಂಡಿತಾಚಾರ್ಯರು ನಾನು ತುಳು ಭಾಷೆಯಲ್ಲಿ ಕುಮಾರವ್ಯಾಸ ಭಾರತೊ ಗದ್ಯಮಹಾಕಾವ್ಯವನ್ನು ಬರೆದು ಅವರಲ್ಲಿ ಮುನ್ನುಡಿಯ ಎರಡು ಮಾತು ಬರೆಯಬೇಕೆಂದು ಕೇಳಿದಾಗ ಅವರು ಬರೆದು ಕೊಟ್ಟದನ್ನು ಈ ಲೇಖನದಲ್ಲಿ ಅಳವಡಿಸಿದ್ದೇನೆ. ಏಕೆಂದರೆ ಲಿಕುಚ ಕುಲದ ವಿಸ್ತಾರ ಆರ್ಥವು ಅದರಲ್ಲಿ ಅಡಕವಾಗಿದೆ.
ಶ್ರೀ ಎಸ್. ದೇವೇಂದ್ರ ಪೆಜತ್ತಾಯರ ಮತ್ತು ನನ್ನ ಸಂಬಂಧ ಅರ್ಧಶತಮಾನಕ್ಕಿಂತಲೂ ಹಳೆಯದು. ಅವರು ಮಠದ ಅಧಿಕಾರಿಯಾಗಿ ಬ್ಯಾಂಕಿನ ಅಧಿಕಾರಿಯಾಗಿ ತುಂಬ ಚಟುವಟಿಕೆಯ ಜೀವನ ನಡೆಸಿದವರು. ಸಾಮಾಜಿಕವಾಗಿ ಯಶಸ್ವಿ ಬಾಳನ್ನು ಬಾಳಿದವರು.
ಇದೆಲ್ಲ ಅವರ ಜೀವನದ ಪೂವರ್ಾರ್ಧದ ಕತೆ. ಅಚ್ಚರಿಯೆಂಬಂತೆ ಜೀವನದ ಉತ್ತರಾರ್ಧದಲ್ಲಿ ಅವರು ಕಾವ್ಯಜೀವಿಯಾದರು. ಅದರಲ್ಲೂ ವಿಶೇಷವಾಗಿ ತುಳು ಸಾಹಿತಿಯಾದರು.
ಅವರ ಮನೆತನದ ಹೆಸರೇ ಅಪ್ಪಟ ತುಳುವಿನಲ್ಲಿದೆ. ಪೆಜತ್ತಾಯ ತುಳಿವಿನಲ್ಲಿ 'ಪೆಜ' ಎಂದರೆ ಹೆಬ್ಬಲಸಿನ ಮರ. ಪೆಜತ್ತಾಯ ಎಂದರೆ ಹೆಬ್ಬಲಸಿನ ತೋಟದವನು. ಅವರ ವಂಶದ ಮೂಲ ಪುರುಷರ ತೋಟದಲ್ಲಿ ಹೆಬ್ಬಲಸಿನ ಮರವಿತ್ತು. ಅದಕ್ಕೆಂದೇ ಆ ವಂಶದವರು ಪೆಜತ್ತಾಯರು. ಸಂಸ್ಕೃತದ 'ಲಿಕುಚಾನ್ವಯರು'.
ಈ ಹೆಸರಿಗೆ ಒಂದು ಐತಿಹಾಸಿಕ ಮಹತ್ವವೂ ಇದೆ. ಇದರ ಹಿಂದೆ ಒಂದು ಮಹಾನ್ ಇತಿಹಾಸವಿದೆ.
ಶ್ರೀ ತ್ರಿವಿಕ್ರಮ ಪಂಡಿತರು 13ನೆಯ ಶತಮಾನದಲ್ಲಿ ತುಳು ನಾಡಿನ ಕಾಸರಗೋಡಿನಲ್ಲಿದ್ದ ಹಿರಿಯ ವಿದ್ವಾಂಸರು. ರಾಜಾ ಜಯಸಿಂಹನ ಆಸ್ಥಾನ ಕವಿಯಾಗಿದ್ದವರು. ತುಳುನಾಡಿನ ಮೊದಲ ಮಹಾಕವಿ. ಆಚಾರ್ಯ ಮಧ್ವರ ಬಳಿ ಏಳೆಂಟು ದಿನಗಳಕಾಲ ವಾದ ಮಾಡಿ, ಅವರ ಪ್ರೀತಿಯ ಶಿಷ್ಯರಾದ ಮಹಾಪುರುಷ, ಆಚಾರ್ಯ ಮಧ್ವರ ಬ್ರಹ್ಮಸೂತ್ರ ಭಾಷ್ಯಕ್ಕೆ ಸಾಟಿಯಿಲ್ಲದ ಸಂಸ್ಕೃತ ಟೀಕೆ ಬರೆದವರು.
ಅವರ ಮಗ ನಾರಾಯಣ ಪಂಡಿತರು ಶ್ರೀಮಧ್ವವಿಜಯ ಬರೆದ ಮಹಾಕವಿ. ಮೊಮ್ಮಗ ವಾಮನ ಪಂಡಿತರು. ಉಪನಿಷತ್ತುಗಳಿಗೆ ಅನನ್ಯವಾದ ಟೀಕೆ ರಚಿಸಿದ ಮಹಾಮೇಧಾವಿ. ಇಡಿಯ ಸಂಸಾರವೆ ಪಂಡಿತ ಸಂಸಾರ.
ಹೀಗೆ ತುಳುನಾಡಿನ ಹೆಮ್ಮೆಯ ಮಕ್ಕಳು ಪೆಜತ್ತಾಯ ಮನೆತನದವರು. ಅಂಥ ಮನೆತನದಲ್ಲಿ ಹುಟ್ಟಿ ಬಂದ ಭಾಗ್ಯಶಾಲಿ ಶ್ರೀ ದೇವೇಂದ್ರ ಪೆಜತ್ತಾಯರು. ಆ ಪರಂಪರೆಯ ನೆತ್ತರಿನ ಗುಣ ಇವರಲ್ಲೂ ಹರಿದಿದೆ.
ಅವರು ತುಳುವಿನಲ್ಲಿ ಅನೇಕ ಗ್ರಂಥಗಳನ್ನು ಅನುವಾದಿಸಿದರು. ವಾದಿರಾಜರ 'ಶೋಭಾನೆ' ಹಾಡನ್ನು ತುಳಿವಿಗೆ ತಂದರು. ನನ್ನ ಕನಕೋಪನಿಷತ್ತನ್ನು ಕೂಡ. ಹೀಗೆ ಇನ್ನೂ ಅನೇಕ ಕೃತಿಗಳು.
ಅವರ 80ರ ಹರೆಯದಲ್ಲೂ 'ತುಳುವಪ್ಪೆನೊ ಸೇವೆ' ನಿರಂತರ ನಡೆದಿದೆ. ಅವರು ನೂರುಕಾಲ ಬದುಕಿ ತುಳುವಿನ ಕಂಪನ್ನು ನಿರಂತರ ಎಲ್ಲೆಡೆ ಹಬ್ಬಿಸಲಿ ಎಂದು ಹಾರೈಸುತ್ತೇನೆ.
ಡಾ| ಗೋವಿಂದಾಚಾರ್ಯರು ಇದೇ ಪಂಡಿತಕುಲದ ಜ್ಞಾನನಿಧಿ ಕುವರ ಎಂಬುದು ನನ್ನೆಣಿಕೆ. ಶ್ರೀಮಧ್ವರ ತತ್ವ ಸಿದ್ಧಾಂತ ಸಾಗರದಲ್ಲಿ ಉದಯಿಸಿದ ಹಾಗೂ ಪ್ರಜ್ವಲಿಸುವ ಜ್ಞಾನ ಮಣಿ. ಅವರೇ ಒಂದು ಕಡೆ ಬರೆದರು ಹೀಗೆ ಸ್ವರ್ಗಂಗೆಯ ತೊರೆಹರಿಯಿತು ಭೂಮಂಡಲದೆಡೆಗೆ, ಎದೆ ಬಿರಿಯಿತು, ಸೊದೆ ಹರಿಯಿತು, ಮಧ್ವರ ಕರೆಗೆ ಎಂಬುದು ಕೂಡಾ ಈ ಶತಮಾನದಲ್ಲಿ ಗೋವಿಂದ ಪಂಡಿತಾಚಾರ್ಯರ ಕರೆಗೆ ಎಂದು ತಿಳಿದುಕೊಳ್ಳುವುದು ಸರಿಯೆಂದೂ ನನ್ನ ಅನಿಸಿಕೆ.
ಸಮದೃಷ್ಟಿ ನೀ ನಮ್ಮ ಕೈಗಂಟಿಗೊರೆಸಿರುವ ಬೆಲ್ಲ . . . .
ಯಾರೂ ಮಾಡದ ಯಾರೂ ಕೇಳದ ಸಂಗೀತ ರಸವೊಂದಿದೆ.
ಅದರ ತಾಳಕ್ಕೆ ಸರಿಯಾಗಿ ನನ್ನ ನಡೆ ಸಾಗಿದೆ. ಇದು ಗೋವಿಂದನ ದಾರಿ ಕೂಡಾ ನೀನು ಕೇಳುವುದು ನಾನು ಹೇಳುವುದು ಎರಡೂ ಚೆನ್ನಲ್ಲ
ಕೆಲವಷ್ಟು ತಿಳಿದರೆ ಪಸಂದ ಇನ್ನು ಕೆಲವಷ್ಟು ತಿಳಿಯದಿದ್ದರೆಯೇ ಚೆಂದ

ಈ ಮಾತಿನ ಒಳ ಅರ್ಥ ಹಲವರು ತಿಳಿದವರು ತಿಳಿಯಲಿಲ್ಲವೆನ್ನುವುದು ಸರಿಯೇ. ತಿಳಿಯದವರು ತಿಳಿದಿದ್ದಾರೆ ಎನ್ನುವುದು ಸರಿಯಲ್ಲ. ಇವರು ತಿಳಿಯದಿದ್ದರೆಯೇ ಬಲು ಚೆಂದ.
ದೀಪಾವಳಿ ಬಂತು ಎಂಬ ಕವನದಲ್ಲಿ ಹೀಗೆ ಬರೆದಿದ್ದಾರೆ.
ಗಂಡಸಿನ ಕಿಸೆ ಸೋರೆ ಹೆಂಡತಿಗೆ ಹೊಸ ಸೀರೆ. ಒಬ್ಬೊಬ್ಬರಿಗೆ ಒಂದು ಪಾಳಿ
ತೂತು ಬಿದ್ದಿರುವಾಗ ಹೊಸ ಮನೆಯ ಕಾವಲಿ ಬಂತು ದೀಪಾವಳಿ

 ಹೀಗೆ ಸಮಾಜದಲ್ಲಿರುವ ಜಂಜಾಟದ ಬದುಕನ್ನು ಹೇಳಿದ್ದಾರೆ. ನಮ್ಮ ಜನಜೀವನದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳ ವಿಚಾರಗಳಲ್ಲಿ
ನಮ್ಮ ಹೂದೋಟದಲ್ಲಿ ಆಡುಗಳ ಸರಕಾರ
ಸುತ್ತಲೂ ಮೈಮರೆತ ಕತ್ತೆಗಳು ಹಾಡುವುದು
ಕುರಿಮಂದೆಗಳ ಬಹುಮತದ ಸಹಕಾರ
ಅಳಬೇಡ ಓ ಕಂದ, ಏಕಳುವೆ ಎಲೆ ರಂಗ
ಹೀಗೆಂದು ಹೇಳಿದ್ದಾರೆ.

ಬನ್ನಂಜೆಯವರು ಅನಂತಶಯನನನ್ನೂ ಬಿಟ್ಟಿಲ್ಲ ಕೇಳುತ್ತಾರೆ
ನೀನು ಕಣ್ತೆರೆಯದಿಹೆ ; ಎಂಥ ಅನ್ಯಾಯ
ಜಗವೇ ಧರ್ಮದ ಕುರಿತು ಕಣ್ಮುಚ್ಚಿ ನಡೆಯುತಿದೆ
ನೀನದರ ಮೇಲ್ಪಂಕ್ತಿ
ಎಂದು ಹೇಳುತ್ತಾ ಓದುಗರನ್ನು ಕಣ್ತೆರೆಯಲು ಕೆಣಕುತ್ತಾರೆ.

ನಗಾರಿ ಬಾರಿಸಿಯೂ ಕೇಳಿಸುತ್ತಾರೆ, ಹೇಳುತ್ತಾರೆ.
ಗೋಮುಖ ವ್ಯಾಘ್ರಗಳ ಗುಂಪಿನಲ್ಲಿ ಬದುಕಲಿಕ್ಕೆ
ಹುಲಿಯ ಮೋರೆಯ ತೊಟ್ಟ ಗೋವುಗಳು ಬೇಕು
ಸುಳ್ಳು ಸತ್ಯದ ತಂದೆ, ಮಂಗ ಮನುಜನ ತಂದೆ
ಪಾಪ ಪುಣ್ಯದ ಚಿಂತೆ ಮಾನವರಿಗೆ ಬೇಕು
ಎಂದೂ ಪ್ರಶ್ನಿಸುತ್ತಾರೆ ಮತ್ತು ಅವರು ನಮ್ಮನ್ನು ಚಿಂತನೆಗೆ ಒಳಪಡಿಸುತ್ತಾರೆ.
ಸತ್ಯ ಸಂಗತಿಗಳನ್ನು ಹೇಳುತ್ತಾರೆ ಅರಿವಿನ ಹಸಿವು ಇರುವವಗೆ
ಪಕಳೆಯರಳುವುದುದುರಿ ಮಣ್ಣಾಗಲು
ಮುಂದೆ ಕೊನರುವ ಗಿಡದ ಕಣ್ಣಾಗಲು
ಅಸ್ತವಿಲ್ಲದಿರೆ ಉದಯವಿದ್ದೀತೆ
ಬದುಕು ಸಾವಿನ ಸಿದ್ಧತೆ
ಐಜಿಜ  ಚಿ ಠಿಡಿಜಠಿಚಿಡಿಚಿಣಠಟಿ ಜಿಠಡಿ ಜಜಚಿಣ
ಐಜಿಜ  ಚಿ ಠಿಡಿಠರಡಿಜ ಣಠತಿಚಿಡಿಜ ಜಜಚಿಣ

ಒಂದು ಕಡೆಯಲ್ಲಿ ಹೀಗೆ ಕೇಳುತ್ತಾರೆ. ನಾನೇಕೆ ಬರೆಯಬೇಕು ? ನೀವು ಬರೆಯಬೇಕು
- ನಾನಂದೆ -\ನಾವು ಬರೆದರೆ ಯಾರೂ ಓದುವುದಿಲ್ಲ. ಅದಕ್ಕಾಗಿ ನೀವು ಬರೆಯಲೇ ಬೇಕು.

ಒಂದು ಕ್ಷಣ ಬನ್ನಂಜೆ ಬೇಂದ್ರೆಯಾಗುತ್ತಾರೆ.
ತವಕ
ಬರುವನಕ
ಬರುವತವಕ
ಬಂದವಗೆ
ಉಸಿರ ಧಗೆ ಹೊರಡುವನಕ
ಹತ್ತಿರದಲ್ಲಿ ಓಡಲಾಗದ
ದೂರದ ಕನ್ನಡಕ
ಮನ-ಮನಕ
ಯಾ-ಮೂಕ
ಘನ-ಘನಕ
ಯಾ-ಗಣಕ
ಜನ-ಜನಕ
ಯಾ-ಜನಕ

ಬನ್ನಂಜೆಯವರ ಹಲವು ಕವನಗಳು ಮೂವತ್ತು ವರ್ಷಗಳ ಹಿಂದೆ ಕೂರಾಡಿ ಸೀತಾರಾಮ ಅಡಿಗರ ಕೈಚೀಲದಲ್ಲಿದ್ದದನ್ನು ಓದಿದ್ದೆ.
ಆಷಾಢಭೂತಿಗಳು
ಸಂದಿಗೊಂದಿಯಲಿ ಗುಟ್ಟಾಗಿ ಚಳಿಬಿಡುವ ಮಂದಿ
ಚಳಿಯಲ್ಲೇ ಬೆವರಿ
ಕಣ್ಮುಚ್ಚಿ ಹಾಲಿನ ತಟ್ಟೆ ಸವರಿ
ಸ್ವರ್ಗದ ಬಾಗಿಲು ಕಂಡಿತೋ ಎಂದು
ಅಟ್ಟದ ಗಳ ಎಣಿಸುವವರು
ಕೈಹಿಡಿದ ಹೆಂಡತಿಯ ಮುಟ್ಟಲಿಕೆ
ಪಂಚಾಂಗ ನೋಡುವವರು
ಕೈಹಿಡಿಯದವಳ ಪಂಚಾಂಗ ನೋಡಲಿಕೆ
ಜೊಲ್ಲು ಬಿಡುವವರು
ಹೆಂಡತಿಯ ತಾಳಿಯನು ಅಡಗಿಸಿಟ್ಟವರು
ಎಲ್ಲವನ್ನೂ ಬಿಟ್ಟವರು
ಬಿಡಲಿಕ್ಕಾಗಿಯೇ ಎಲ್ಲವನ್ನೂ ಹಿಡಿದವರು
ಇಲ್ಲಿಗೆ ಒಲ್ಲದವರು ಮತ್ತು ಅಲ್ಲಿಗೆ ಸಲ್ಲದವರು

ಇನ್ನೂ ಹಲವಾರು ಕವನಗಳು ಹೀಗಿವೆ
ನಾಲ್ಕು ಸಾಲುಗಳ ಕವನಗಳ ಸರಮಾಲೆ
ಶಕುಂತಳ, ಋಷ್ಯಶೃಂಗ, ಸಪ್ತಪದಿ, ಕೀಚಕ, ಗಣಪತಿಗೊಂದು ಕರೆ, ಸೃಷ್ಟಿ ಮುಂತಾದ ಕವನಗಳು.

ಇನ್ನೊಂದು ಬನ್ನಂಜೆಯವರ ತಮಾಷೆಯ ಚುಟುಕು
ಕೇಳಿದ್ದೇನೆ ವೇದಾಂತಿಗಳು
ಏನೋ ಸುಳ್ಳು ಹೇಳುವುದನ್ನು
ಕನಸಿನಂತೆಯೇ ಅಂತೆ
ಈ ಬಾಳು ಕೂಡ
ಈ ಮಾತು ನಿಜವೇನು ? ಹಾಗಾದರೆ ಗೆದ್ದೆನಾನು.

ನಿನ್ನೆ ಏನಾಯಿತು ಗೊತ್ತಾ ? ನೀನು ನನ್ನವಳೆಂದು ಕನಸು ಬಿತ್ತು.

ಇನ್ನೊಂದು ಕಡೆಯಲ್ಲಿ ಅವರ ಅನ್ನಿಸಿಕೆ
ಯಾರು ಹೇಳಿದರು ಕಾಲ ಕೆಟ್ಟಿದೆ ಎಂದು
ಈಗಲೂ ಕೂಡ ನಮ್ಮೂರಲ್ಲಿ ಮನೆ ಮನೆಯಲ್ಲಿ
ಹಗಲು ಇರುಳು
ಆಸ್ತಿ
ಕತೆ
ಮತ್ತೆ ಯಾರು ಹೇಳಿದ್ದು
ಕಾಲ ಕೆಟ್ಟಿದೆ ಎಂದು
ಏನಿದ್ದರೂ ಇಷ್ಟೆ ಬದಲಾವಣೆ
ದೇವರ ಮನೆಯ ಬದಲು ಲಾಯರ ಮನೆ
ಅಶ್ವಥ್ಥ ಕಟ್ಟೆಯ ಬದಲು ಕೋಟರ್ು ಕಟ್ಟೆ

ಬನ್ನಂಜೆಯವರು ಸಮಾಜ ಹಾಗೂ ಕುಟುಂಬಗಳಲ್ಲಿನ ಅಂಕುಡೊಂಕುಗಳನ್ನು ನೋಡುತ್ತಾ ಹೇಳಿದರೂ ಕೂಡಾ ಅದು ಒಂದು ನ್ಯಾಯದ ಕಟ್ಟೆಯ ನುಡಿಗಳು.

ಬನ್ನಂಜೆಯವರ ಚಿಕ್ಕ ಪ್ರಕಟಣೆಗಳು ಕೆಲವು ಮುದ್ರಿತವಾದವುಗಳನ್ನು ಅಲ್ಲಲ್ಲಿ ಹೆಕ್ಕಿ ಮಿತ್ರರ ಸಹಾಯದಿಂದಲೂ ಒಟ್ಟು ಮಾಡಿ ಅಲ್ಪಸ್ವಲ್ಪವನ್ನು ಮಾತ್ರ ನನ್ನ ಪರಿಮಿತ ಪರಿಧಿಯ ಅನ್ನಿಸಿಕೆಯಂತೆ ಈ ಲೇಖನ ಬರೆದೆ. ತಪ್ಪುಗಳಿದ್ದರೆ ಕ್ಷಮೆ ಇರಲಿ. ಏನಿದ್ದರೂ ನನ್ನ ಪ್ರೀತಿಯ ಗೋವಿಂದಪಂಡಿತರು ನಾನು ಬರೆದದ್ದನ್ನು ಹಾಗೆಯೇ ಸ್ವೀಕರಿಸುತ್ತಾರೆ. ಯಾಕೆಂದರೆ ನಾನು ತಪ್ಪು ಮಾಡುವುದನ್ನು ಒಪ್ಪಿಕೊಳ್ಳುವ ದೊಡ್ಡ ಮನಸ್ಸಿನವರು. ಏನೂ ತೊಂದ್ರೆ ಇಲ್ಲ ಎಂತ ಸುಮ್ಮನೆ ನಸುನಗುವಿನಿಂದಿರುತ್ತಾರೆ ಅಷ್ಟೆ. ನನಗೂ ಕುಶಿ ಅವರಿಗೂ ಕುಶಿ !

ಬನ್ನಂಜೆ ಕನ್ನಡದ ಬರವಣಿಗೆಯಲ್ಲಿ ನಿಸ್ಸೀಮ. ಸಂಸ್ಕೃತದಲ್ಲಿ ಸೀಮಾತೀತ.

1979ರಲ್ಲಿ ನಾವಿಬ್ಬರೂ ಅಮೆರಿಕದಲ್ಲಿ ಪ್ರಿನ್ಸ್ಟನ್ನಲ್ಲಿ ನಡೆದ ಸರ್ವಧರ್ಮ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದೆವು. (ಘಠಡಿಜ ಅಠಟಿಜಿಜಡಿಜಟಿಛಿಜ ಠಟಿ ಡಿಜಟರಠಟಿ ಚಿಟಿಜ ಠಿಜಚಿಛಿಜ)  ಆ ಸಮ್ಮೇಳನದಲ್ಲಿ ಒಂದು ಗ್ರೂಪ್ ಡಿಸ್ಕಷನ್ನಲ್ಲಿ ಸಂಸ್ಕೃತದಲ್ಲಿ ನಿರರ್ಗಳವಾಗಿ ಇಪ್ಪತ್ತು ನಿಮಿಷ ಮಾತನಾಡಿದರು. ಆ ಕೂಟದಲ್ಲಿ ಬರೆ ಐವತ್ತು ಜನರಿದ್ದರು. ಎಲ್ಲರೂ ಸಮಾಧಾನದಿಂದ ಕೇಳಿದರು ಅರ್ಥವಾಗದಿದ್ದರೂ.

ಒಂದು ಅನಿರೀಕ್ಷಿತ ಘಟನೆ ಎಂದರೆ ಸಮ್ಮೇಳನ ಕಾರ್ಯಕ್ರಮದ ಮಧ್ಯದಲ್ಲಿ ಕೆಲವರನ್ನು  ನಾಲ್ಕೈದು ಬಸ್ಸುಗಳಲ್ಲಿ ವಾಷಿಂಗ್ಟನ್ ಡಿ.ಸಿ. ಕರೆದುಕೊಂಡು ಹೋಗಿ ವೈಟ್ಹೌಸ್ನಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಮಾನ್ಯ ಜಿಮ್ಮಿಕಾರ್ಟರ್ ಹಾಗೂ ರೋಸಲಿನ್ಕಾರ್ಟರ್ನ್ನು ಭೇಟಿ ಮಾಡಿಸಿ ಚಹಾ ಕೂಟದಲ್ಲಿ ಪಾಲ್ಗೊಂಡದ್ದು ನೆನಪಿದೆ.

ಬನ್ನಂಜೆಯವರು ಹಲವಾರು ಲೇಖನ ಕವನ ತುಣುಕು ಚುಟುಕುಗಳನ್ನು ಆಗಾಗ ಬರೆಯುತ್ತಲೇ ಇರುತ್ತಾರೆ. ಹೇಳುತ್ತಲೇ ಇರುತ್ತಾರೆ. ಬರೆಯದೆ, ಹೇಳದೆಯೇ ಮೌನ ನುಡಿಯಲ್ಲೂ ಹೇಳುತ್ತಿರುತ್ತಾರೆ. ಅದು ಅವರ ಸಹಜ ಸ್ವಭಾವ. ತಿಳಿದುಕೊಳ್ಳುವವನು ಸಾಮಥ್ರ್ಯವಂತನಾದರೆ ಅಥರ್ೈಯಿಸಿಕೊಳ್ಳುತ್ತಾನೆ.

ಮಂಗಳೂರಿನ ಟೌನ್ಹಾಲಿನಲ್ಲಿ ದಿನಗಟ್ಟಲೆ ಎಪ್ಪತ್ತರ ದಶಕದಲ್ಲಿ ನಾನು ಸಿಂಡಿಕೇಟ್ ಬ್ಯಾಂಕಿನ ಹಂಪನಕಟ್ಟೆ ಬ್ರಾಂಚಿನಲ್ಲಿ ಮ್ಯಾನೇಜರ್ ಆಗಿದ್ದಾಗ ನನ್ನ ಆತ್ಮೀಯ ಗೆಳೆಯರಾಗಿದ್ದ ವುಡ್ಲ್ಯಾಂಡ್ಸ್ ಹೋಟೇಲಿನ ಮಾಲೀಕರಾಗಿದ್ದ ದಿ| ಎಮರ್ಾಳು ವಾಸುದೇವರಾಯರ ಮುಂದಾಳತ್ವದಲ್ಲಿ ಬನ್ನಂಜೆಯವರ ಪ್ರವಚನ ಸರಣಿ ಮಂಗಳೂರು ಪುರಭವನದಲ್ಲಿ ಆರಂಭಿಸಿದೆವು. ಶ್ರೋತೃಗಳ ಸಂದಣಿ ಹೆಚ್ಚುತ್ತಲೇ ಇರುವ ಸಂದರ್ಭ ಪ್ರವೇಶಕ್ಕೆ ಒಂದು ರೂಪಾಯಿ ಕಾಣಿಕೆಯ ಕ್ರಮವನ್ನು ಏರ್ಪಡಿಸಬೇಕಾಗಿ ಬಂದಿತ್ತು. ಮಂಗಳೂರು ನಗರದ ಪುರಜನರ ಉತ್ಸಾಹ ಆಸಕ್ತಿ ಬಹಳವಾಗಿತ್ತು. ಸಂಜೆ ಆರರಿಂದ ಏಳೂವರೆಯವರೆಗೆ ಸಹಸ್ರ ಸಂಖ್ಯೆಯಲ್ಲಿ ಕೇಳುಗರು ಸೇರುತ್ತಿದ್ದರು. ಮಹಾಭಾರತ ರಾಮಾಯಣ ಭಗವದ್ಗೀತೆ ಸಹಸ್ರನಾಮ ಮುಂತಾದ ವಿಷಯಗಳ ಪ್ರವಚನಗಳು ಬಹಳ ಜನಪ್ರಿಯವಾಗಿದ್ದವು.

ಈ ಮಾದರಿಯಲ್ಲಿ ಉಡುಪಿಯಲ್ಲಿಯೂ ತುಶಿಮಾ ಮಹಾ-ಮಂಡಳಿಯವರು ಈಗಲೂ ಬನ್ನಂಜೆಯವರ ಅನುಕೂಲದಂತೆ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಬಹುದು. ತನ್ಮೂಲಕ ಸಮಗ್ರ ಸಮಾಜದ ಕೇಳುಗರಿಗೆ ಒಳ್ಳೆಯ ಅವಕಾಶ ಒದಗಿಸಿದಂತಾಗುವುದು.

ಬನ್ನಂಜೆಯವರ ಬೃಹತ್ ಕೃತಿಗಳು ಕಾವ್ಯಗಳು ಸಂಸ್ಕೃತ ಕನ್ನಡ ಭಾಷೆಗಳಲ್ಲಿ ಬರೆದವುಗಳು ಶ್ರೀಪಲಿಮಾರು ಮಠದಲ್ಲಿಯೂ ಇರಬಹುದು. ಆದರೂ ಕೆಲವುಗಳು ಈಗ ಸಿಗುವುದಿಲ್ಲ. ಮರುಮುದ್ರಣ ಕಾರ್ಯಗಳನ್ನು ಮಾಡಿಸುವುದು ಬಹಳ ಅಗತ್ಯವೆಂದು ನನ್ನನ್ನಿಸಿಕೆ. ಅಲ್ಲದೆ ಇತ್ತೀಚೆಗೆ ಅವರು ಬರೆಯುತ್ತಿರುವ ಗ್ರಂಥಗಳನ್ನು ಮುದ್ರಿಸಲು ಆಸಕ್ತರೆಲ್ಲರೂ ಕೈಜೋಡಿಸುವುದು ಸೂಕ್ತ. ಈ ರೀತಿಯಲ್ಲಿ ಉಡುಪಿಯ ತು. ಶಿ. ಮಾ. ಸಂಸ್ಥೆಯವರು ಮುತುವಜರ್ಿ ವಹಿಸಿ ಕಾಯರ್ೋನ್ಮುಖರಾಗಬೇಕೆಂದು ಬಿನ್ನವಿಸುತ್ತೇನೆ.

ಬೇಂದ್ರೆಯವರನ್ನು ಬೆಳ್ಳಿ ಮೀಸೆಯ ಮಗು ಎಂದು ಕರೆದವರೇ ಬನ್ನಂಜೆ. ಅವರ ನಾಕುತಂತಿಯನ್ನು ಮೀಟಿ ತರಂಗಗಳನ್ನು ನುಡಿಸಿದ್ದಲ್ಲದೆ ಐದನೆಯ ತಂತಿಯನ್ನೂ ನುಡಿಸಿದವರು ಆಗ ಬೇಂದ್ರೆಯವರೇ ಅಚ್ಚರಿ ಪಟ್ಟಿದ್ದಾರೆ ಎಂಬುದು ನನಗೆ ತಿಳಿದಿದೆ. ಕಾವ್ಯ ಸಾಹಿತ್ಯಲೋಕದ ಜೋಕಾಲಿಯಲ್ಲಿ ಇಬ್ಬರೂ ಮಗುವಾದರು.
ಕಾವ್ಯದ ಲೆಕ್ಕಾಚಾರ ತಪ್ಪಿ
ಕಾವ್ಯ ಸಂಖ್ಯೆಗೊಳಗೋ
ಸಂಖ್ಯೆ ಕಾವ್ಯದೊಳಗೋ
ಸಂಖ್ಯೆ ಕಾವ್ಯಗಳೆರಡೂ
ಬೇಂದ್ರೆಯೊಳಗೋ

ಹಾಗೆಯೇ ಇರುವವರು ಬೇಂದ್ರೆ ಎಂದು ಲೆಕ್ಕಾಚಾರ ಮಾಡಿ ಹೊರಗೂ ಒಳಗೂ ಕಂಡವರು ಬನ್ನಂಜೆ. ಅದಕ್ಕಾಗಿಯೇ ಬೇಂದ್ರೆಯನ್ನು ಮೆಚ್ಚಿದರು ಗೋವಿಂದರು. ಇಬ್ಬರೂ ಒಳಗೊಳಗೆ ಕಂಡವರು. ಇಬ್ಬರೊಳಗೂ ನುಡಿವ ಸಿಡಿವ ಬೆಳಗುವ ಬೆಂದ ಬೇಂದ್ರೆಯ ಎತ್ತರ ಗೋವಿಂದರ ಬಿತ್ತರ ಬಾ ಹತ್ತರ ಎಂದು ಇಬ್ಬರೂ ಹನುಮ-ರಾಮನಾಲಿಂಗನಂತಾದರು.

ಇನ್ನೊಂದು ಖುಶಿ ಪಡುವ ಘಟನೆ. ನಾವಿಬ್ಬರೂ ಅಮೆರಿಕದಲ್ಲಿದ್ದಾಗ ನಯಾಗರ ಜಲಪಾತವನ್ನು ನೋಡಿ ಆನಂದಿಸಿದ್ದು. ಅಲ್ಲಿ ಸ್ವಲ್ಪ ಚಳಿ ಜಾಸ್ತಿ ಇದ್ದ ಕಾರಣ ಬನ್ನಂಜೆ ಕೋಟು ಪ್ಯಾಂಟು ಬೂಟುಗಳಲ್ಲಿ ನನ್ನೊಟ್ಟಿಗೆ ತಿರುಗಿದ್ದು. ಈ ಅಪೂರ್ವ ಭಾವ ಚಿತ್ರ ನನ್ನಲ್ಲಿ ಇದೆ. ಈ ಲೇಖನ ಕೊನೆಯಲ್ಲಾದರೂ ತೋರಿ ಬರುವ ಸಾಧ್ಯತೆ ಇರಬಹುದು.

ಮುಖ್ಯವಾಗಿ ಹೇಳಲೇ ಬೇಕಾದ ವಿಷಯ ಇನ್ನೊಂದಿದೆ. ನ್ಯೂಯಾಕರ್್ನಲ್ಲಿ ವಲ್ಡರ್್ ಟ್ರೇಡ್ ಸೆಂಟರ್ ಜೋಡು ಗಗನ ಚುಂಬಿಗಳು ನೂರಹತ್ತು ಅಂತಸ್ತಿನ ಕಟ್ಟಡಗಳ ತುದಿಗೆ ಲಿಫ್ಟ್ನಲ್ಲಿ ಏರಿ ನ್ಯಾಯಾಕರ್್ ನಗರದ ವಿಹಂಗಮ ನೋಡಿದ ನೋಟ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ ಈಗ ಈ ಬ್ರಹತ್ ಕಟ್ಟಡಗಳೇ ಅದೃಶ್ಯವಾಗಿದೆ. ಆತಂಕವಾದಿಗಳ ವಿಮಾನ ಬಾಂಬ್ ದಾಳಿಯಿಂದ ನೆಲ ಸಮವಾಯಿತಲ್ಲ. ಇನ್ನು ಮುಂದಕ್ಕೂ ಯಾರಿಂದಲೂ ನೋಡಲಿಕ್ಕಾಗದ ಗಗನ ಚುಂಬಿಕೆ ಕಟ್ಟಡಗಳು ನಮ್ಮ ಮನಸ್ಸಿನಲ್ಲಿ ದೃಢವಾಗಿ ನಿಂತಿವೆ. ನಾವು ನೋಡಿದ್ದೆವೆಲ್ಲಾ ಎಂಬ ಸವಿ ನೆನಪೂ ಇದೆ. ಆದರೆ ಈಗ ಕಹಿ ನೆನಪಿನಲ್ಲಿ ಮಿಲನಿಸಿ ಮನದಲ್ಲಿ ನೋಡುತ್ತಾ ಇರುತ್ತೇವೆ. ಈ ಸಿಹಿ ಕಹಿ ನೆನಪು ಒಟ್ಟಾಗಿ ನೆನಪಿಸುವ ಸ್ಥಿತಿ ನಮ್ಮ ನೆನಪಿನಿಂದ ಮಾಸಿ ಹೋಗಲು ಸಾಧ್ಯವಿಲ್ಲ.

ನದಿ ಮಧ್ಯದಲ್ಲಿ ತಿತ್ತಿರಿ ಲೋಕಾರ್ಪಣೆ
ಪ್ರಾಯಃ 1983ರಲ್ಲಿ ನಾನು, ಬನ್ನಂಜೆ, ಕೂರಾಡಿ, ಡಾ| ಸೀತಾರಾಮ ಭಟ್ ಹೊನ್ನಾವರ ಹೊಳೆಯಲ್ಲಿ ಬೋಟಿನಲ್ಲಿ ಒಂದು ದ್ವೀಪಕ್ಕೆ ಗೋವಿಂದಾಚಾರ್ಯರ ಸ್ನೇಹಿತರ ಮನೆಗೆ ಹೋಗಿದ್ದೆವು. ಅಲ್ಲಿ ಅವಲಕ್ಕಿ ಉಪ್ಪುಕರಿ ಕಾಫಿ ಸನ್ಮಾನಗಳನ್ನು ಸ್ವೀಕರಿಸಿ ಹೊನ್ನಾವರ ನದಿಯಲ್ಲಿ ಮೋಟರ್ ಬೋಟಿನಲ್ಲಿ ಹಿಂತಿರುಗುವಾಗ ನಾನು ರಚಿಸಿದ ತಿತ್ತಿರಿ ಕವನ ಸಂಕಲನವನ್ನು ನದಿ ಮಧ್ಯದಲ್ಲೇ ಲೋಕಾರ್ಪಣೆ ಗೋವಿಂದಾಚಾರ್ಯರು ನೆರವೇರಿಸಿದರು. ನಂತರ ನದಿಗೆ ಅರ್ಪಣೆ ಕಡಲಿಗೂ ಅರ್ಪಣೆಯಾಗಲೆಂದು ತಿಳಿಹಾಸ್ಯದ ಸಂತಸದ ಕ್ಷಣಗಳು.

1977-78ರಲ್ಲಿ ನಾನು ಮಣಿಪಾಲ ಸಿಂಡಿಕೇಟ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದಾಗ ಬನ್ನಂಜೆಯವರು ಭೇಟಿಯಾಗುವ ಸಂದರ್ಭಗಳು ಹೆಚ್ಚು. ಆ ಸಮಯದಲ್ಲಿ ನಾನು ಬರೆದ ಕವಿತೆಯನ್ನು ಉದಯವಾಣಿ ಪ್ರಕಟಿಸಿತು. ನನಗೂ ಭಾರೀ ಕುಶಿ. ನಮ್ಮ ಬ್ಯಾಂಕಿನ ಅಧ್ಯಕ್ಷರು ಮಾನ್ಯ ಕೆ. ಕೆ. ಪೈಗಳವರು ನನ್ನಲ್ಲಿ ಕೇಳಿದರು ನೀವೂ ಕೂಡ ಕವಿತೆ ಬರೆಯುತ್ತೀರಾ ? ಉದಯವಾಣಿಯಲ್ಲಿ ಓದಿದೆ ಎಂದರು. ಆಗ ನನಗೆ ಆಕಾಶಕ್ಕೆ ಒಂದೇ ಗೇಣು. ಕೂರಾಡಿ, ಬನ್ನಂಜೆ, ಡಾ|| ಸೀತಾರಾಮರ ಜತೆಯಲ್ಲಿ ಪಲಿಮಾರು ಗ್ರಾಮದ ಮಠದ ಗಾರ್ಡನಿನಲ್ಲಿ ನಾವೆಲ್ಲರೂ ಸೇರಿಕೊಂಡು ಸಂತೋಷ ಪಟ್ಟೆವು.




ಗ್ಲಾನಿರ್ಭವತಿ ಭಾರತ
ಬನ್ನಂಜೆಯವರ ಪ್ರವಚನಕ್ಕೆ ಆಗಾಗ ಬರುತ್ತಿರುವ ಕಾಲೇಜು ಹುಡುಗಿ ಕನ್ನಡ ಸಾಹಿತ್ಯ ಅಭಿರುಚಿ ಉಳ್ಳವಳು. ಬನ್ನಂಜೆ ಅಭಿಮಾನಿ. ಬಾರಕೂರು ಸಮೀಪದ ಹಳ್ಳಿಯವಳು. ನನಗೂ ಸಿಕ್ಕಿದಳು. ಬನ್ನಂಜೆ ಜತೆ ಅವಳ ಮನೆಗೆ ಬರಲು ಆಹ್ವಾನಿಸಿದಳು - ಹಳ್ಳಿ ಬಯಲಲ್ಲಿ ಕಬ್ಬು ನೀರನ್ನು ಕುದಿಸಿ ಬೆಲ್ಲ ತಯಾರಿಯ ಅಲೆಮನೆ ನೋಡಬಹುದೆಂದು ಹೇಳಿದಳು. ಆಗ ನಮ್ಮದೇ ಗ್ಯಾಂಗ್. ದಂಡತೀರ್ಥ ಡಾ|| ಸೀತಾರಾಮ ಭಟ್, ಜತೆಯಲ್ಲಿ ಬನ್ನಂಜೆಯವರಲ್ಲಿ ಪಾಠ ಕೇಳುತ್ತಿದ್ದ ಅಮೆರಿಕದ ವಿದೇಶಿ ಪ್ರಜೆ. ಇವರು ಬನ್ನಂಜೆಯವರ ಶಿಷ್ಯ. ನಾವು ಆ ಹಳ್ಳಿಯಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ಎರಡು ತಂಡವಾಗಿ ಅಲೆದಾಡಿದೆವು. ಬನ್ನಂಜೆ ಮತ್ತು ಅವರ ವಿದೇಶಿ ಶಿಷ್ಯ ಒಂದು ಕಡೆ ಹೋದರೆ ನಾವು ಇನ್ನೊಂದು ಕಡೆಯಲ್ಲಿ. ಆಗ ಡಾ|| ಸೀತಾರಾಮ ಭಟ್ಟರು ನನ್ನಲ್ಲಿ ಒಂದು ಪ್ರಶ್ನೆ ಮಾಡಿದರು. ನೋಡಿ ಪೆಜತ್ತಾಯರೆ ಸಂಸ್ಕೃತದಲ್ಲಿ ಅಮೆರಿಕದ ಬಿಳಿಯರಿಗೆ ಪಾಠ ಹೇಳುವುದು ಸರಿಯಾ. ಇದು ಧರ್ಮಕ್ಕೆ ಮೋಸ ಮಾಡಿದ ಹಾಗೆ ಆಗುವುದಿಲ್ಲವೆ ಎಂದು ಕೇಳಿದಾಗ ನಾನು ಅದಕ್ಕೆ ಹೀಗೆ ಹೇಳಿದೆ. ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಎಂಬ ಶ್ಲೋಕ ಅರ್ಥ ಹೇಳುತ್ತಿರುವಾಗಲೇ ನಗಲು ಆರಂಭಿಸಿದೆವು. ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಯಿತು. ಅಂತೂ ಪರವಾಗಿಲ್ಲ. ಗೋವಿಂದರೇ ಇದ್ದಾಗ ನೋಡಿಕೊಳ್ಳುತ್ತಾರೆ. ನಾವು ಆದಷ್ಟೂ ಧರ್ಮವನ್ನು ಉಳಿಸಲು ಪ್ರಯತ್ನ ಪಡೋಣ. ಪರಿತ್ರಾಣಾಯ ಸಾಧೂನಾಂ . . . . ಅಂದರೆ ನಾವು ಸಾಧುಗಳು ಎಂಬ ಸಮಾಧಾನ. ನಮ್ಮನ್ನು ಗೋವಿಂದ ಕಾಪಾಡಲು ಬರುತ್ತಾರೆ ಎಂದು ಹೇಳುತ್ತಾ ಮತ್ತೂ ನಗುತ್ತಲೇ ಇದ್ದೆವು. ಗೋವಿಂದರ ಜತೆಯಲ್ಲಿ ಬಿಳಿಶಿಷ್ಯರು ಇಲ್ಲದಾಗ -ಅಂತೂ ಧರ್ಮವನ್ನು ಎಚ್ಚರಿಕೆಯಿಂದ ಉಳಿಸಲು ಯತ್ನಿಸುತ್ತಿದ್ದೇವಲ್ಲ ಎಂಬ ಆತ್ಮ ತೃಪ್ತಿ ನನಗೂ ಡಾ|| ಭಟ್ಟರಿಗೂ.

ಸರ್ವಮೂಲ ಗ್ರಂಥ
ಉಡುಪಿ ಪಲಿಮಾರು ಮಠದ ಕೋಣೆಯಲ್ಲಿ ಅತೀ ಜೋಪಾನವಾಗಿ ಅಂದರೆ ಧರ್ಮಶಾಸ್ತ್ರ ಪರಿಣತರು ದಿ| ಉಳಿಯಾರು ಪಂಡಿತರ ತಗ್ಗು ಮಂಚದಡಿಯಲ್ಲಿ ಓಲೆ ಗ್ರ್ರಂಥ ಹಸ್ತ ಲಿಪಿಯಲ್ಲಿದ್ದ ಉದ್ಗ್ರಂಥ ಸರ್ವಮೂಲ ಗ್ರಂಥವನ್ನು ಆಚಾರ್ಯ ಮಧ್ವರ ಪ್ರಥಮಶಿಷ್ಯರಾದ ಪರಮ ಪೂಜ್ಯ ಹೃಷಿಕೇಶ ತೀರ್ಥರು ಬರೆದ ಗ್ರಂಥವನ್ನು ಸಂಪೂರ್ಣವಾಗಿ ಹತ್ತು ಹನ್ನೆರಡು ವéರ್ಷಗಳ ಕಾಲ ತಪಸ್ಸಿನಂತೆ ಸಾವಿರಾರು ಪುಟಗಳಷ್ಟು ಸ್ವತಃ ಕೈಯಲ್ಲೇ ಬರೆದು ವ್ಯಾಖ್ಯಾನ ಸಹಿತವಾದ ಅವತರಣಿಕೆಯನ್ನು ರಚಿಸಿರುವುದು ಗೋವಿಂದಾಚಾರ್ಯರ ಮಹತ್ತಾದ ಸಾಧನೆ. ಈ ಸಾಧನೆಯನ್ನು ಗುರುತಿಸಲು ಪ್ರಪಂಚದಲ್ಲಿರುವ ಯಾವ ಬಿರುದು ಬಾವಲಿಗಳು ಸಾಕಾಗದು. ಗಿನ್ನಿಸ್ ಬುಕ್ ನೋಬಲ್ ಪ್ರಶಸ್ತಿಗಳೆಲ್ಲವೂ ಅತೀ ಪ್ರಾಪಂಚಿಕೆ ವಿಷಯಗಳ ನೆಲೆಗೆ ಸಂಬಂಧಪಟ್ಟವು. ಆಚಾರ್ಯರ ಜ್ಞಾನಸಾಧನೆಯನ್ನು ತೂಕ ಮಾಡಲು ಈ ಸಂಸ್ಥೆಗಳ ಮಾನದಂಡಗಳಿಲ್ಲ. ಆಧ್ಯಾತ್ಮಿಕ ಮಾನದಂಡಗಳಿಲ್ಲ. ಈ ಪ್ರಶಸ್ತಿ ಕೊಡುವವರಿಗೆ ಮತ್ತು ಕತರ್ೃಗಳಿಗೆ ಈ ಬೃಹತ್ ಗ್ರಂಥವನ್ನು ಯಾವ ರೀತಿಯ ಮಾನದಲ್ಲಿ ಅಳೆಯುವುದು ಎಂದು ತಿಳಿಯುವುದೇ ಕಷ್ಟ. ಆಕಾಶವನ್ನೇ ಹೋಲಿಸಬೇಕು ಜ್ಞಾನ ಮಾರ್ಗದ ಬೆಳಕಲ್ಲಿ - ಜ್ಞಾನದ ಬೆಳಕನ್ನು ವಿಜ್ಞಾನದ ಪರಿದಿಯಲ್ಲಿ ತುಂಬಿಸಲು ಸಾಧ್ಯವೇ ? ಗೋವಿಂದಾಚಾರ್ಯರ ಆಧ್ಯಾತ್ಮ ಚಿಂತನ ಸಾಧನೆಗಳ ಎಲ್ಲಾ ಮಗ್ಗುಲುಗಳನ್ನು ಕಾಣಲು ಯತ್ನಿಸಿದರೆ ನಾವು ಸೋತು ಹೋಗುತ್ತೇವೆ. ಅದಕ್ಕಾಗಿ ಅವರು ಬರೆದ ಚಿಕ್ಕ ಚಿಕ್ಕ ತುಂಡು ತುಂಡು ಕನ್ನಡದ ಬರಹಗಳನ್ನೇ ನಾನು ಹೆಕ್ಕಿಕೊಂಡು ಈ ಲೇಖನವನ್ನು ಬರೆದೆ.

ಬನ್ನಂಜೆಯವರ ಕುರಿತು ನಾನು ಒಂದು ಲೇಖನ ಬರೆಯಬೇಕೆಂದು ಒತ್ತಾಯಿಸಿದವರು ತು. ಶಿ. ಮಾ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು. ನಾನು ಬನ್ನಂಜೆಯವರ ಬಗ್ಗೆ ಅರ್ವತ್ತು ವರ್ಷಕ್ಕೂ ಮೇಲ್ಪಟ್ಟು ಒಡನಾಟದಲ್ಲಿದ್ದುದರಿಂದ ಬರೆಯಲುದ್ಯುಕ್ತನಾದೆ. ಆದರೆ ಬರೆಯಲು ಕೂತಾಗ ಏನು ಬರೆಯಲಿ ! ಎಂದು ಗೋಚರಿಸಲಿಲ್ಲ. ಬಂದವು ಯೋಚನೆಗಳ ರಾಶಿ ರಾಶಿ. ಅವರಿಗೆ ಪದ್ಮಶ್ರೀ, ಡಾ|| ಪ್ರತಿಭಾ ಪುರಸ್ಕಾರಗಳು ರಾಷ್ಟ್ರೀಯ ಮನ್ನಣೆ, ರಾಜ್ಯ ಸರಕಾರ ಮನ್ನಣೆಗಳೆಲ್ಲ ಲಭಿಸಿದರೂ ; ನನಗೆ ಮಾತ್ರ ಅವೆಲ್ಲ ದೊಡ್ಡ ವಿಷಯವೇ ಅಲ್ಲ. ಅವರಿಗೆ ಶುರುವಿಗೆ ಒಲಿದು ಬಂದ ಬಿರುದು ವಿದ್ಯಾವಾಚಸ್ಪತಿ ಮತ್ತು ವಿದ್ಯಾರತ್ನಾಕರ ಅತೀ ಮಹತ್ವದ್ದು

-ಆನಂತರದಲ್ಲಿ ವಿಶೇಷ ಪುರಸ್ಕಾರಗಳು ಸಿಗುವ ಪೂರ್ವದ ಹಿಂದಿನ ದಿನಗಳ ಗೋವಿಂದಾಚಾರ್ಯರೇ ನನಗೆ ಮುಖ್ಯವಾಗುತ್ತಾರೆ. ಆ ನಿಟ್ಟಿನಲ್ಲೇ ಅವರು ಸರಳ ಸ್ನೇಹಿತ ಮಿತಭಾಷಿ, ಮೃದುಭಾಷಿ, ಮಂದಹಾಸಿ, ಪೂರ್ವಭಾಷಿ ಗೋವಿಂದಾಚಾರ್ಯರೇ ನನ್ನ ಮನಸ್ಸಿಗೆ ಗೋಚರಿಸಿದಾಗ ಕೈಯಲ್ಲಿ ಹಿಡಿದ ಲೇಖನಿಗೆ ಚಲನೆ ಸಿಕ್ಕಿತು. ಕೊನೆಗೂ ನನ್ನ ಮನಸ್ಸಿಗೆ ಹೊಳೆದದ್ದು ಇಷ್ಟೆ. ಹಿಮಾಲಯವನ್ನು ಸಾಗರವನ್ನು ವಣರ್ಿಸಬಹುದು. ಆದರೆ ಗೋವಿಂದರನ್ನು ವಿವರಿಸಲು ತಿಳಿದುಕೊಳ್ಳಲು ವಣರ್ಿಸಲು ಅಸಾಧ್ಯವೇ. ಕಾರಣ ಅವರನ್ನು ತತ್ವಜ್ಞಾನಿ ಎನ್ನಲೆ. ಕಾವ್ಯ ರಚನಾಕಾರ ಎನ್ನಲೆ. ಬರೆಹಗಾರ ಎನ್ನಲೇ, ಕವಿ ಎನ್ನಲೇ, ಪ್ರಬಂಧಕಾರ ಎನ್ನಲೆ, ಪ್ರವಚನಕಾರ ಎನ್ನಲೆ, ಟೀಕಾಕಾರನೆಂದು ಎನ್ನಲೇ, ವಿಮರ್ಶಕ ಎನ್ನಲೇ, ಅನುವಾದಕಾರ ಎನ್ನಲೇ, ವಿದ್ವಾಂಸರೆನ್ನಲೇ, ಸಂವಹನಕಾರ ಎನ್ನಲೇ, ಪ್ರತ್ಯುತ್ಪನ್ನಮತಿತ್ವ ಪಡೆದ ಪ್ರಾಚಾರ್ಯರೆಂದು ಎನ್ನಲೇ, ಆಶುಕವಿ ಎನ್ನಲೇ, ಸಂಶೋಧಕ ಎಂದೆನ್ನಲೇ, ಪ್ರವಚನ ಪಂಡಿತಾಚಾರ್ಯ ಎಂದೆನ್ನಲೇ, ಗುರು ಎನ್ನಲೇ, ಉಪಾಧ್ಯಾಯ ಎಂದೆನ್ನಲೇ, ತತ್ವದಶರ್ಿ ಎಂದೆನ್ನಲೇ, ಏನೇನೋ ಅವರನ್ನು ತಿಳಿಯಬೇಕೆನ್ನುವಾಗ ನನಗೆ ಕೊನೆಗೆ ಹೊಳೆದದ್ದು ಒಂದು ಮಾತ್ರ. ಸಹಜ ಸರಳ ಸ್ವಭಾವದ ನಿಗವರ್ಿ ಯಾವುದೇ ಹಮ್ಮು-ಬಿಮ್ಮುಗಳಿಲ್ಲದ ಸದಾ ಸಮಾಧಾನ ಚಿತ್ತದ ಎಂದೂ ಬತ್ತದ ತಾಳ್ಮೆಯಿಂದೊಡಗೂಡಿದ ಮಂದಹಾಸದ ನನ್ನ ಗೆಳೆಯ ಗೋವಿಂದಾಚಾರ್ಯರು.
ಅವರೀಗ ಪದ್ಮಶ್ರೀ ಪಡೆದವರು. ಡಾ|| ಬಿರುದನ್ನು ಪಡೆದವರು. ಹಲವಾರು ಸ್ವಾಮಿಗಳಿಂದ ಸಮ್ಮಾನ ಪತ್ರಗಳನ್ನು ಪಡೆದವರು. ಅಚ್ಚುಹಾಕಿಸಿದ ಭಾರೀ ಚಿತ್ರಗಳು ಸಹಿತ ದೊಡ್ಡ ದೊಡ್ಡ ಫ್ರೇಮಿನ ಸಮ್ಮಾನ ಭಿತ್ತಿಗಳೇ ಇದನ್ನೆಲ್ಲಾ ನೆನೆಸಿಕೊಂಡರೆ ನನಗೆ ಗೋವಿಂದರು ದೂರವಾಗುತ್ತಾರೆ. ಗೋವಿಂದರು ಅವರಿಗೆ ಈ ಸಮ್ಮಾನಗಳು ಏನೂ ಹಾನಿ ಮಾಡಲಾರವು ಎಂದು ಸಮಾಧಾನಿಸಿಕೊಂಡು ನೆಮ್ಮದಿಯಲ್ಲಿರುತ್ತೇನೆ. ಅವರು ಎಂದೂ ಉಬ್ಬಲಾರರು ತಗ್ಗಲಾರರು ಇದು ನನಗೆ ಗೊತ್ತು. ಆದ್ದರಿಂದ ಈಗಲೂ ಒಂದೇ ಸಮತೋಲನದ ಭಾವ ಸ್ನೇಹತ್ವವಿದೆ ಇದು ಅನವರತ ಎಂದು ಹೇಳುತ್ತಾ ಗೌರವಿಸುತ್ತೇನೆ. ನಾನು ಈ ಲೇಖನದ ಆರಂಭದಲ್ಲೇ ಹೇಳಿರುವಂತೆ ಪುನರಿಚ್ಚಿಸುತ್ತೇನೆ ಅದೇ ಹೆಸರು. ಲಿಕುಚಕುಲತಿಲಕ ತ್ರಿವಿಕ್ರಮ ಪಂಡಿತಾಚಾರ್ಯ ಹೆಸರುಸಹಿತ ಡಾ|| ಬನ್ನಂಜೆ ಗೋವಿಂದ ಪಂಡಿತಾಚಾರ್ಯರು ಎಂದು ಸಂಬೋಧನೆ ಮಾಡಬೇಕೆನ್ನುವ ಆಸೆ ನನ್ನದು ಎಂದು ಹೇಳುತ್ತಾ ನಮೋ ಎನ್ನುತ್ತೇನೆ.

* * * * *

No comments:

Post a Comment