ಕಿರುನಗೆಯ ಅಧರದೊಳು ಧರಿಸಿರುವ ಚೆನ್ನಿಗನೆ ಕಣ್ಣ ಬೆಳಕಿನ ಹೊಳಪು ಯಾರ ಕೊಡುಗೆ? ಕನಸುಗಳ ಲೋಕದೊಳು ಜಗವಳೆವ ಬಯಕೆಯೇ? ನಿನ್ನ ಮೋಹಕ ನಿಲುವು ದೇವತೆಗೂ ಮುಗಿಲು! ನಲ್ನುಡಿಯನೊಂದು ಉಸುರಲಿದೆ ಕಿವಿಯೊಳು ಬಳಿಸಾರಿ ಬರಲು, ಭಯ; ನಿನ್ನ ಕೈಗಳದು!! ನಿನ್ನ ಮಾತಿನ ಸ್ವರಕೆ ತಾಳ ತಪ್ಪಿದೆ ಹೃದಯ, ಕಾಲಗೆಜ್ಜೆಗೂ ಪುಳಕ ಬಳೆಗಳಿಗೂ ಲಜ್ಜೆ!! ಮಲ್ಲಿಗೆಯ ಮುಗುಳಿಗೂ ನಿನ್ನ ಉಸಿರಿನ ನೆನಪು; ಮುಂಗುರುಳ ಮುಗಿಲೊಳಗೆ ಹನಿಯಾದ ಒಲವು!! ಒಂಟಿಯಾಗಿಹೆ ನಾನು ಮನದ ಮಹಲಿನ ಒಳಗೆ; ಮೌನ ಮಾತಿಗೆ ಕಾದು ಬಿಸಿಯಾದ ಉಸಿರು! ದೇವತೆಯು ನೀನಹುದು ಆರಾಧಿಸುವೆನೆಂದೆಂದು. ಬದುಕ ಪಥದೊಳಗೆ ನೀನು ನೆರಳಾಗಿರು... ನನ್ನ ಒಲವಾಗಿರು. *ಕವಿತಾ ಅಡೂರು*
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Friday, August 5, 2016
ಕವಿತಾ ಅಡೂರು - ಕಿರುನಗೆಯ ಚೆನ್ನಿಗನೆ
Subscribe to:
Post Comments (Atom)
No comments:
Post a Comment