"ಅಡುಗೆ ಮನೆ ಜಗತ್ತು," ವಿಚಾರ ಸಂಕಿರಣ ಮಣಿಪಾಲ ದಲ್ಲಿ ನಿನ್ನೆ ಮತ್ತು ಇವತ್ತು { 26- 2-2017 } .ನಿನ್ನೆ ಖ್ಯಾತ ಲೇಖಕಿ ನವನೀತಾದೇವ್ ಸೇನ್ ಅವರಿಂದ ಉದ್ಘಾಟನೆಗೊಂಡು , ಘಟಮ್ ವಾದಕಿ ಸುಕನ್ಯಾ ರಾಮಗೋಪಾಲ್ ತಂಡದವರು , ಅಡಿಗೆ ಮನೆಯ ಸಾಧನಗಳನ್ನೇ ಬಳಸಿ ವಾದ್ಯಮೇಳ ನಡೆಸಿದರು. ದೀಪಾ ಗಣೇಶ್ ಅವರು "ಉದರದ ಹಾದಿಯಿಂದ ಬಂದ ಹೃದಯದ ಹಾಡು," ಎಂದು ತಮ್ಮ ಮಾತಿನಲ್ಲಿ, ಬಡೆ ಗುಲಾಮ್ ಆಲಿಖಾನ್ ಅವರ ಆತ್ಮಕಥೆ ಯ ಸನ್ನಿವೇಶ ವನ್ನು ಹೇಳಿ ಆಹಾರಕ್ಕೂ , ಸಂಗೀತಕ್ಕೊ ಇರುವ ಸಂಬಂಧವನ್ನು ನಿರೂಪಿಸಿದರು...ಕವಿಗೋಷ್ಟ್ತಿ ,ಸೋಬಾನೆಹಾಡುಗಳ ನಂತರ ನಡೆದ ನಾಗೇಶ್ ಹೆಗಡೆ ಯವರ ಮಾತು ಅಡಿಗೆ ಮನೆಯ ಇನ್ನೊಂದು ಮುಖವನ್ನು ಪರಿಚಯಿಸಿತು.. ಉರುವಲು, ಅದರ ಸಂಗ್ರಹದ ಕಷ್ಟ, ಹೊಗೆಯ ದುಷ್ಪರಿಣಾಮ , ಪಟ್ಟಣದಲ್ಲಿ ಬಯಲಲ್ಲಿ ಅಡಿಗೆ ಮಾಡುವವರು ಒಲೆಗೆ ಪ್ಲಾಸ್ಟಿಕ್ ನ್ನು ಉರುವಲಿನಂತೆ ಬಳಸುವ ಕಹಿ , ಅಘಾತಕಾರಿ ಸತ್ಯ. ಅಪೌಷ್ಟಿಕತೆಯಿಂದ ನರಳುವ ಅಸಂಖ್ಯಾತ ಜನ, ಇತ್ಯಾದಿಗಳ ಕುರಿತು ಚಿತ್ರಸಹಿತ ನೀಡಿದ ಉಪನ್ಯಾಸ ಚಿಂತನೆಗೆ ಹಚ್ಚಿತು..
No comments:
Post a Comment