*ಬೆಂಗಳೂರಿನ ಎನ್ ಎಸ್ ಡಿ ಅಭಿನಯ ತರಬೇತಿಗೆ ಅರ್ಜಿ ಆಹ್ವಾನ*✍ *ಬೆಂಗಳೂರು ಕೇಂದ್ರದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಒಂದು ವರ್ಷದ ಅಭಿನಯ ತರಬೇತಿ ನೀಡುತ್ತಿದ್ದು ಅಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.* *ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಜೊತೆಗೆ ವೇತನ ನೀಡಲಾಗುವುದು. ಆಸಕ್ತರು ಜೂನ್ 25 , 2017 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.* *ಜುಲೈ 25 ರಿಂದ ತರಬೇತಿ ಆರಂಭವಾಗಲಿದ್ದು ಭಾರತದ ಯಾವುದೇ ಪ್ರದೇಶಕ್ಕೆ ಸಂಬಂಧಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದಕ್ಷಿಣ ಭಾರತದ (ಕರ್ನಾಟಕ, ಸೀಮಾಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕೇಂದ್ರಾಢಳಿತ ಪ್ರದೇಶವಾದ ಲಕ್ಷದ್ವೀಪ, ಪುದುಚೆರಿ) ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.* *ಒಟ್ಟು ಸೀಟುಗಳು : 20* *ಕಲಿಕಾ ಮಾಧ್ಯಮ* *ದಕ್ಷಿಣ ಭಾರತದ ಭಾಷೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತರಬೇತಿ ನೀಡಲಾಗುವುದು.* *ಅಭ್ಯರ್ಥಿಗಳು ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಯಾವುದಾದರು ಒಂದು ದಕ್ಷಿಣ ಭಾರತದ ಭಾಷೆಯಲ್ಲಿ ಬರೆಯತಕ್ಕದ್ದು.* *ಅರ್ಹತೆ* *ಅರ್ಹತೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ಪದವಿ ಹೊಂದಿರಬೇಕುಕನಿಷ್ಠ ನಾಲ್ಕು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕುಜಾನಪದ, ಸಮುದಾಯ ಅಥವಾ ಇನ್ನಿತರೆ ಯಾವುದೇ ಕಲಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಆದ್ಯತೆ ನೀಡಲಾಗುವುದು* *ವಯೋಮಿತಿ* *ಕನಿಷ್ಠ 18 ವರ್ಷ ಮತ್ತು ದಿನಾಂಕ 1-06-2017 ಕ್ಕೆ 30 ವರ್ಷ ಮೀರಿರಬಾರದು.* *ಅರ್ಜಿ ಪ್ರಕ್ರಿಯೆ* *ಅರ್ಜಿಗಳನ್ನು ಆನ್ಲೈನ್ ಆಥವಾ ಆಫ್ಲೈನ್ ಮೂಲಕ ಪಡೆಯಬಹುದಾಗಿದೆ.* *ಆನ್-ಲೈನ್ ಮುಲಕ ಅರ್ಜಿ ಸಲ್ಲಿಸುವವರು ವೆಬ್ಸೈಟ್ ವಿಳಾಸwww.nsd.gov.in ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕ ಸಲ್ಲಿಸಬಹುದು. ಅಥವಾ ಆನ್-ಲೈನ್ ಅಡ್ಮಿಷನ್ ಮೂಲಕವೇ ಸಲ್ಲಿಸಬಹುದಾಗಿದೆ.ಆನ್-ಲೈನ್ ಮೂಲಕ ಡೌನ್ಲೋಡ್ ಸಾಧ್ಯವಾಗದೇ ಇದ್ದಲ್ಲಿ ಬೆಂಗಳೂರಿನ ಎನ್ ಎಸ್ ಡಿ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಇಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:00 ರವರೆಗೂ ಪಡೆಯಬಹುದಾಗಿದೆ.ಅಭ್ಯರ್ಥಿಗಳು ಎನ್ ಎಸ್ ಡಿ ಬೆಂಗಳೂರು ಇವರ ಹೆಸರಿಗೆ ರೂ.150/- ರ ಡಿಡಿಯನ್ನು ಪಡೆದು ಧೃಡೀಕರಿಸಿದ ದಾಖಲೆಯ ಪ್ರತಿಗಳೊಂದಿಗೆ ದಿನಾಂಕ 25-06-2017 ರೊಳಗೆ ಎನ್ ಎಸ್ ಡಿ ವಿಳಾಸಕ್ಕೆ ಕಳುಹಿಸತಕ್ಕದ್ದು.* *ಅರ್ಜಿ ಸಲ್ಲಿಸುವ ವಿಳಾಸ* *ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಈ ವಿಳಾಸಕ್ಕೆ ಕಳುಹಿಸತಕ್ಕದ್ದು. * *ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್*ರ *ಕಲಾಗ್ರಾಮ, ಮಲ್ಲತ್ತಹಳ್ಳಿ (ಬೆಂಗಳೂರು ವಿಶ್ವವಿದ್ಯಾಲಯ ಹಿಂಬದಿ)* *ಬೆಂಗಳೂರು-56* *ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-06-2017* *ಆಯ್ಕೆ ಪ್ರಕ್ರಿಯೆ* *ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಳ ಕಾರ್ಯಾಗಾರದ ಮೂಲಕ ಎರಡು ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.* *ಜುಲೈ2 ಮತ್ತು 3ನೇ ತಾರೀಖಿನಂದು ಆಯ್ಕೆಗೆ ಆಡಿಷನ್ ನಡೆಸಲಾಗುವುದು.ಕಾರ್ಯಾಗಾರದ ವೇಳೆ ಅಭ್ಯರ್ಥಿಗಳು ಮೂಲ ದಾಖಲಾತಿಗಳನ್ನು ಹಾಜರುಪಡಿಸತಕ್ಕದ್ದು.ಎನ್ ಎಸ್ ಡಿ ಯ ತಜ್ಞರ ಸಮಿತಿ ಅಭ್ಯರ್ಥಿಯ ಸಾಮರ್ಥ್ಯ ಪರೀಕ್ಷೆ ನಡೆಸಿ ಆಯ್ಕೆಮಾಡುತ್ತದೆ.* *ವಿದ್ಯಾರ್ಥಿ ವೇತನ* *ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.4500/- ವೇತನ ನೀಡಲಾಗುವುದು.* *ದೈಹಿಕ ಸಾಮರ್ಥ್*ಯ *ಆಯ್ಕೆಯಾದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.*
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Wednesday, April 12, 2017
ಬೆಂಗಳೂರಿನ ಎನ್. ಎಸ್. ಡಿ. ಅಭಿನಯ ತರಬೇತಿಗೆ ಅರ್ಜಿ ಆಹ್ವಾನ -2017
Subscribe to:
Post Comments (Atom)
No comments:
Post a Comment