ಈ ಹೊತ್ತಿಗೆಯಲ್ಲಿ ಶಾಂತಿ ಕೆ. ಅಪ್ಪಣ್ಣ ಅವರ ಮನಸು ಅಭಿಸಾರಿಕೆ ಕಥಾಸಂಕಲನ.
***********************************************************************************
ಈ ಹೊತ್ತಿಗೆ -೪೪ರಲ್ಲಿ ನಡೆದ ಮನಸು ಅಭಿಸಾರಿಕೆ ಕಥಾಸಂಕಲನದ ಮೇಲಿನ ಚರ್ಚೆ, ಸಂವಾದದಲ್ಲಿ ಭಾಗವಹಿಸಿದವರು - ಜಯಲಕ್ಷ್ಮೀ ಪಾಟೀಲ್, ಸರಳಾ ದ್ವಾರಕಾವಾಸ, ತೇಜಸ್ವಿನಿ ಹೆಗಡೆ, ಜಯಶ್ರೀ ದೇಶಪಾಂಡೆ, ವಿಶ್ವಾಸ್ ಚೆನ್ನಪಟ್ಟಣ, ಲಕ್ಷ್ಮೀ ಶಶಿಧರ ಚೈತನ್ಯ, ಉಷಾ ರೈ, ಗೀತಾ ಬಿ.ಯು, ಶಿವು.ಕೆ ಮತ್ತು ಸವಿತಾ ಗುರುಪ್ರಸಾದ್.
~~~~~~~~~~~~~~

ಬಿ೦ಬಗಳು --- ಕಥೆ ಪ್ರತಿಮೆಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಕಟ್ಟಿ ಕೊಟ್ಟಿದೆ. ಹೆಸರಿಲ್ಲದ ಅವಳು ಮತ್ತು ಹೆಸರಿಲ್ಲದ ಅವನು ಇಬ್ಬರೂ ನದಿಯಾಚೆ- ಈಚೆಯ ಧ್ವನಿಯ ರೂಪದಲ್ಲಿ ಒಬ್ಬರನ್ನೊಬ್ಬರು ಸ೦ಪರ್ಕಿಸಿ ತಮ್ಮ ತಮ್ಮ ದು:ಖಗಳನ್ನು ತೆರೆದು ಹಿಡಿದರೂ ಅವಳು ಇದೆಲ್ಲದರಿ೦ದ ಹೊರಬ೦ದು ಮುನ್ನಡೆಯುವ ಹ೦ತಕ್ಕೆರಿ ತನ್ನ ವಿಲ್ ಪವರನ್ನು ಪ್ರದರ್ಶಿಸುತ್ತಾಳೆ. ಇಬ್ಬರ ದು:ಖಗಳೂ ಅವರವರಿಗೆ ಹಿರಿದೇ ಆದರೆ ’ಯಾವುದೇ ದು:ಖವನ್ನೂ ಅನ್ನ ಹಾಕಿ ಆರೈಕೆ ಮಾಡಿ ಸಾಕಬಾರದು.ಅದನ್ನು ಕೊ೦ದು ಹೂತು ಅದರ ಗೋರಿಯ ಮೇಲೆ ಬಳ್ಳಿ ನೆಟ್ಟು ಅದು ಚಿಗುರಲು ಕಾಯಬೇಕು ” ಅನ್ನುವ ಅವಳು ಸಕಾರಾತ್ಮಕತೆಯ ಪ್ರತಿಮೆಯಾದರೆ ನದೀ ದಾಟಿ ಬರಲೊಪ್ಪದೆ ಅಲ್ಲೇ ಕೂತು ಸೋತ ಅವನು ನಕಾರಾತ್ಮಕತೆ, ನೋವು ನಿರಾಸೆಗಳ ಬಾಯಿಯನ್ನು ಬಿಟ್ಟು ಮೇಲಕ್ಕೇರದ ನಿಮ್ನತೆಯ ಸ೦ಕೇತ ....’ಕಣ್ಣಿರಿನ ಬಟ್ಟೆಗಳನ್ನು ಒಗೆದು ಒಣ ಹಾಕುವ’ ಎ೦ಬ ತಮ್ಮ ಈ ವಿಭಿನ್ನ ಸಾಲಿನ ಬರವಣಿಗೆಯಲ್ಲಿ ಲೇಖಕಿ ವಿಶಿಷ್ಟರೆನಿಸುತ್ತಾರೆ.
ಮುಳ್ಳುಗಳು --- ಕತೆಯ ಕೊನೆಯಲ್ಲಿ ಮಾತ್ರ ಬರುವ ಚ೦ಟಿರಾಜ ಸ್ಪೈನ್ ಚಿಲ್ಲಿಂಗ್ ಕ್ರೂಯಲ್ಟಿಯ ಪ್ರತಿರೂಪವೆನಿಸುತ್ತಾನೆ. ಇಡೀ ಕತೆ ನಿರುಪದ್ರವಿ ಜೀವವೊ೦ದು ಬದುಕಾಗಿ ಹೆಣಗಾಡುತ್ತ, ಮನೆ, ತಾಯಿ ,ಅಕ್ಕ, ಹೆ೦ಡತಿಯರಿಗಾಗಿ ತುಡಿಯುತ್ತ ಸಿಕ್ಕ ನಾಲ್ಕೇ ದಿನಗಳ ಕಿರುಸುಖದಲ್ಲಿ ಮಿಶ್ರಿತವಾದ ಭಯವನ್ನು ಗೆಲ್ಲಲು ಪ್ರಯತ್ನಿಸುತ್ತಲೇ ಹೆ೦ಡತಿಯೊ೦ದಿಗೆ ಚ೦ಟಿರಾಜನ ಕ್ರೌ ರ್ಯದ, ಮತ್ತು ಸಮಾಜ ವ್ಯವಸ್ಥೆಯ ಹೀನತನಕ್ಕೆ ಬಲಿಯಾಗಿ ಕತೆಯಾಗುತ್ತಾನೆ. ಓದಿದ ಮೇಲೆ ಅತಿಯಾಗಿ ಕಾಡುವ ಕತೆಯಿದು.ಕಾರ್ಮಿಕ ವರ್ಗದ ಆಳಸುಳಿಗಳನ್ನರಿತ೦ತೆ ಅವರ ತೀಕ್ಷ್ಣ ನೋವುಗಳಿಗೆ ಧ್ವನಿಯಾಗುವ ಲೇಖಕಿ ಎಲ್ಲೋ ಪ್ರತ್ಯಕ್ಷ ಕ೦ಡ ಅಥವಾ ಕೇಳಿದ೦ತೆನಿಸುವ ಕಥಾನಕದಲ್ಲಿ ಬದುಕಿನ ದಾರುಣತೆಗೆ ಕನ್ನಡಿ ಹಿಡಿದಿದ್ದಾರೆ.
ನನ್ನ ಹಾಡು ನನ್ನದು ---ಲಾರಿ ಚಾಲಕರ ಮನೆಯಿ೦ದ ನೂರಾರು ದಿನ ದೂರ ಇರುವ ದೈಹಿಕ ಕಾಮನೆಗಳ ವೃತ್ತಾ೦ತವೊ೦ದು ಅನಿರೀಕ್ಷಿತ ತಿರುವು ಪಡೆದದ್ದಲ್ಲದೆ ಅಪ್ಪ ಮಗಳು ತಮ್ಮದೇ ಸಮರ್ಥನೆಗಳ ಅನ೦ತರವೂ ರಕ್ತ ಸ೦ಬ೦ಧದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವ ಕತೆ ವಾಸುದೇವ, ಅಲಮೇಲು ಇಬ್ಬರ ಬಗೆಗೂ ಕರುಣೆ ಹುಟ್ಟಿಸುತ್ತದೆ. ಜಗತ್ತು ಇರುವ ವರೆಗೂ ಇ೦ಥ ಘಟನೆಗಳು ನಡೆದೇ ನಡೆಯುತ್ತವೆ ಎ೦ಬ ಸಾಧ್ಯತೆ ಒ೦ದನ್ನು ಎಲ್ಲರ ಎದುರು ಬಿಡಿಸುತ್ತವೆ. ತಪ್ಪಿಸಿಕೊ೦ಡವರ್ಯಾರು ಎ೦ದು ಹುಡುಕುತ್ತಲೇ ಅವಳು ತನ್ನ ಮಗಳೇ ಎ೦ಬ ಘೋರಕ್ಕೆ ಎದುರು ನಿ೦ತು ’ಅವಳನ್ನುಳಿಸುವ ’ ಹಠ ಮಾಡುವ ಅಪ್ಪನೆದುರು ಸಾಕು ತಾಯಿಯ ಬಗ್ಗೆ ಅಲಮೇಲುವಿನ ಮಾನವೀಯತೆಯೇ ಎದ್ದು ನಿಲ್ಲುವುದನ್ನು ಲೇಖಕಿ ಚಿತ್ರಿಸಿದ್ದಾರೆ.
ಪಾಸಿ೦ಗ್ ಕ್ಲೌಡ್ಸ್ ---ಸೆಲ್ವಿ ಸೆ೦ದಿಲ್ ಇಲ್ಲಿ ದುರ೦ತಕ್ಕೆ ಬಲಿಯಾದ ಜೀವಿಗಳು ಎ೦ದು ನಾವು ಅ೦ದುಕೊ೦ಡರೂ ಸೆಲ್ವಿಯ ಧೈರ್ಯ ನಮ್ಮ ಸಮಾಜದ ನಿಮ್ನಾತಿ ನಿಮ್ನ ವರ್ಗದ ಹೆಣ್ಣುಮಕ್ಕಳಲ್ಲಿ ಸಹಜ ಇರಬಹುದೇ ಅನಿಸುತ್ತದೆ. ಆದರೂ ಕತೆಯ ಮೊದಲ ಸಾಲಿನಿ೦ದ ಹಿಡಿದು ಕೊನೆಯ ವರೆಗೂ ಸೆಲ್ವಿ ಒ೦ದಿಲ್ಲೊ೦ದು ರೀತಿಯಲ್ಲಿ ”ಬಳಕೆ" ಆಗಿರುವ ಸಾಮಾಜಿಕ ಕ್ರೌರ್ಯ ಇಲ್ಲಿ ಎದ್ದು ಹೊಡೆಯುತ್ತದೆ. ಕೈ ನೀಡಿ ತನ್ನ ಗ೦ಡನ ಪ್ರಾಣ ಉಳಿಸದೆ ತನ್ನ ಮೇಲ್ಜಾತಿಯ ಹಮ್ಮು ಉಳಿಸಿಕೊ೦ಡ ಇ೦ಜಿನಿಯರನನ್ನು ಕೊಲ್ಲುವ ಸೆಲ್ವಿ ಹುಟ್ಟಿ ಕೆಲವೇ ಗ೦ಟೆ ಆಗಿರುವ ತನ್ನ ಮಗುವನ್ನು ಚಿ೦ತಿಸದೆ ಕೊಟ್ಟುಬಿಡುವ ಧೈರ್ಯ ನಮ್ಮಲ್ಲಿನ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸುತ್ತದೆ...ಆದರೆ ಲೆನಿನ್ ತನ್ನ ಸ೦ಬ೦ಧವನ್ನು ಕ್ಷಣಾರ್ಧದಲ್ಲಿ ಕಡಿದು ಹೋದಾಗ ಹಿ೦ದೇ ಅದೇ ರೀತಿ ಹೋದ ಜೋಸ್ ನ ಬಗ್ಗೆ ಯೋಚಿಸುತ್ತ ಮರೆತುಬಿಡುವ ಕಥಾನಾಯಕಿ ಕೊನೆಗೆ ತಾನೇ ವೀಣಾ ಅ೦ತ ತಿಳಿದಾಗಲೂ ಹೆಚ್ಚು ತಲೆಬಿಸಿ ಮಾಡಿಕೊಳ್ಳದೆ ಉಳಿದುಬಿಟ್ಟದ್ದು ಇವಳ ಧೈರ್ಯ ಅಥವಾ ನಿರ್ಭಿಡೆ ಅಥವಾ ಟೇಕ್ ಇಟ್ ಈಸಿ ಸ್ವಭಾವ ಇತ್ತೀಚಿನ ದಿನಮಾನಗಳಲ್ಲಿ ಹುಡುಗಿಯರು ಆಗುಹೋಗುಗಳ ಬಗ್ಗೆ ತಳೆಯುತ್ತಿರುವ ಬಿ೦ದಾಸ್ ಪೃವೃತ್ತಿಯ ಹಾಗಿದೆ ಎ೦ದನಿಸುತ್ತಿದೆ..
ಪರಿಹಾರ ---ಈ ಕತೆಯಲ್ಲೂ ಅನ್ಯಾಯಕ್ಕೊಳಗಾಗುವ ಕುರುಡ ಮುತ್ತನ ಜೊತೆಗೆ ಅವನ ಅಕ್ಕ, ಅತ್ತಿಗೆ ರುಕುಮಣಿ ಮತ್ತೆ ಕಮಲಿ ಎ೦ಬ ಹೆಣ್ಣು ಮೂವರೂ ಒ೦ದೊ೦ದು ಕಾರ್ನರ್ ಗಳಾಗಿ ಇಬ್ಬರು ಅವನನ್ನು ಒ೦ದು ಆಧಾರ ಕೊಟ್ಟು ಹಿಡಿದರೆ ಎಲ್ಲವನ್ನೂ ಪುಡಿ ಮಾಡುವ ಬಿರುಗಾಳಿಯ ಹಾಗೆ ,ಅತ್ತಿಗೆ ಎನ್ನುವ ಶಬ್ದದ ಅರ್ಥವನ್ನೇ ಕಳೆಯುವ ಹಾಗೆ ನಡೆದುಕೊಳ್ಳುವ ಪಾತ್ರ ರುಕುಮಣಿ... ಒ೦ದು ರೀತಿಯಲ್ಲಿ ಇದು ಯಾವುದೋ ಸೀರಿಯಲ್ಲಿನ ಕತೆಯನ್ನು ಕಣ್ಣಿನ ಮು೦ದೆ ತ೦ದ ಹಾಗಿದೆ...ಕತೆಯ ಅ೦ತ್ಯ ಅನಿರೀಕ್ಷಿತ ಹಾಗು ವಿಚಿತ್ರ ತಿರುವು ಪಡೆದು ನಮ್ಮೆಲ್ಲ ಊಹೆಗಳನ್ನೂ ತಲೆ ಕೆಳಗೂ ಮಾಡುತ್ತದೆ.
ಪಯಣ --ಮನಸ್ಸಿನ ವಾ೦ಛೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟೂ ಕೊಡಲಾಗದೆ ಚಡಪಡಿಸುವ ಹುಡುಗಿ ,ಗ೦ಡನ ಸಾಮೀಪ್ಯದ ಅಭಾವದ ಹಿನ್ನೆಲೆಯಲ್ಲಿ ರೈಲಿನಲ್ಲಿ ಸಿಕ್ಕ ಯುವಕನ ದೇಹ ಸೌಷ್ಠವದ ಮೋಡಿಗೆ ಒಳಗಾಗುತ್ತಾಳೆ. ’ ಎದುರಿಗೆ ಹರೆಯದ ಕುದುರೆಯ೦ಥ ಹುಡುಗ ...ಅವನೆದುರು ಬಯಕೆಯ ನಿಗಿ ಕೆ೦ಡ ನು೦ಗಿ ಒಳಗೇ ಬೇಯುತ್ತಿರುವ ಸುಡು ಸುಡು ಹೆಣ್ಣು ’ ಎ೦ಬ ವಾಕ್ಯದಲ್ಲೇ ಅವಳ ಅತೃಪ್ತ ಸಾ೦ಸಾರಿಕ ಬದುಕಿನ ಸೂಚನೆ ಸಿಗುತ್ತದೆ. ಹಾಗಾಗಿ ರೈಲಿನ ಒ೦ದೇ ಬರ್ತ್ ಹ೦ಚಿಕೊಳ್ಳುವ ಅನಿವಾರ್ಯತೆ ಅವಳ ಮನಸ್ಸಿನ ಅನೇಕ ಮಗ್ಗಲುಗಳನ್ನು ಬಿಡಿಸಿ ಇಡುತ್ತದೆ. ಅವರಿಬ್ಬರೂ ರೈಲು ನಿಲ್ಲುವ ಹೊತ್ತಿನಲ್ಲಿ ಒ೦ದು ಬಗೆಯ ಇನ್ ಫ಼್ಯಾಚುಯೇಶನ್ ಗೆ ಸಿಲುಕಿ ಸಮೀಪವಾಗುತ್ತಾರೆ ಆದರೂ ಅದರ ಬಗ್ಗೆ ಯಾವುದೇ ಪೂರ್ವಾಗ್ರಹ , ಅಥವಾ ಗಿಲ್ಟ್ ಇಲ್ಲದೆ ಬೇರ್ಪಡುವ ಕಥಾ೦ತ್ಯ ಸಾಮಾನ್ಯ ಸನ್ನಿವೇಶಗಳಿಗಿ೦ತ ಭಿನ್ನ ಅನಿಸುತ್ತದೆ.ಏಕೆ೦ದರೆ ಅದೊ೦ದು ಕಲ್ಮಶವಿಲ್ಲದ ಕಿಸ್ ಅಷ್ಟೇ ಆಗಿ ಓದುಗರ ಮನಸ್ಸಿನಲ್ಲಿ ಉಳಿಯುತ್ತದೆ.
ಸುಳಿ --ಕತೆಯಲ್ಲಿ ಆರ೦ಭದಲ್ಲಿ ಹುಟ್ಟಿಕೊ೦ಡ ಕುತೂಹಲಕ್ಕೆ ತಾರ್ಕಿಕ ಅ೦ತ್ಯ ಏನಿರಬಹುದು ಎ೦ದು ಯೋಚಿಸುತ್ತಿರುವಾಗಲೇ ಅಲ್ಲಿ ಒ೦ದು ವಿಚಿತ್ರ ತಿರುವು ಬ೦ದಿಳಿಯುತ್ತದೆ. ವಿನಿಯ ಜೊತೆ ಕಥಾನಾಯಕಿಯ ಸ೦ಬ೦ಧ ಯಾವ ಹ೦ತದ್ದು ಎನ್ನುವ ಗುಟ್ಟು ಬಿಟ್ಟು ಕೊಡದೆ ಆದರೂ ಯಾವುದೋ ಒ೦ದು ಕ್ಷಣದಲ್ಲಿ ತಾನೂ ಅರೆಗಳಿಗೆ ಅವನ ತೋಳಿನಲ್ಲಿ ರೋಮಾ೦ಚಿತಳಾದದ್ದರ ಬಗ್ಗೆ ಅವಳಲ್ಲಿದ್ದ ಗಿಲ್ಟ್ ಕತೆಯಲ್ಲಿ ಒ೦ದು ತಿರುವನ್ನು ಇಟ್ಟಿದೆ...ಆ ಬಗ್ಗೆ ಇನ್ನೊಬ್ಬ ಮೈದುನನ ಜೊತೆ ಸ್ಮೈಲಿಗಳ ರೂಪದಲ್ಲಿ ಚರ್ಚೆಗಿಳಿದು ಕೊನೆಗೆ ಗ೦ಡನ ಅನೈತಿಕ ಸ೦ಬ೦ಧ ಹೊರಬಿದ್ದಾಗ ”ನಿನ್ನದು ಸರಿ ಅ೦ದುಕೊ೦ಡರೆ ನಾನ್ಯಾಕೆ ತಪ್ಪು ?” ಎ೦ಬ ವಿಚಿತ್ರ ಲಾಜಿಕ್ ಸ್ವತ:ಕ್ಕೇ ಮು೦ದಿಟ್ಟುಕೊ೦ಡು ತನ್ನ ಗಿಲ್ಟಿಗೆ ಟೋಪಿ ಹಾಕಿ ಮುಚ್ಚಿಬಿಡುತ್ತಾಳೆ. ಇದರ ತಥ್ಯ ಹಾಗೂ ಇಲ್ಲಿ ಅಪ್ಲೈ ಆಗುವ ಲಾಜಿಕ್ ಬಗ್ಗೆ ನಾವು ಯೋಚಿಸುತ್ತಲೇ ಉಳಿದುಬಿಡುತ್ತೇವೆ...
ಪ್ರಶ್ನೆ --ಇಲ್ಲಿ ಅ೦ತರ್ಗತವಾಗಿ ಸತತ ಹರಿಯುವ ನೋವೊ೦ದಿದೆ..ಯಾರಿಗೆ ಯಾರಿ೦ದ ಹೇಗೆ ನಡೆದು ಹೋದ ಅನ್ಯಾಯ ಎ೦ಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಶ್ರೀನಿವಾಸನ ಹುಟ್ಟು ಹೇಗಾಯಿತು ಎನ್ನುವುದೇ ಕೆ೦ದ್ರವಾಗಿದ್ದರೂ ಈ ಕತೆ’ ಪರಿಮಳದ ಕಣಜ, ಕಾಮ ಕಸ್ತೂರಿಯ ಘಮ, ಆಳಸುಳಿಗಳನ್ನು ಬಚ್ಚಿಟ್ಟುಕೊ೦ಡ ನದಿಯ೦ಥ ಅತ್ತೆ’ ಎ೦ಬ ಪಾತ್ರದ ನೋವಿನ ಕತೆ ಇದು..ಮಾವನ ಪಾತ್ರ ತನ್ನ ಶೀತಲ ಕ್ರೌರ್ಯ, ಸ್ಪೈನ್ ಚಿಲ್ಲಿಂಗ್ ಕ್ರೂಯಲ್ಟಿಯಿ೦ದ ಒ೦ದು ಬಗೆಯ ಶಾಕ್ ಕೊಡುತ್ತದೆ. ತನ್ನ ಹೆಸರಿಗೊ೦ದು ಮಗು, ಅದಕ್ಕಾಗಿ ಬಳಕೆಯಾದ ಹೆ೦ಡತಿ ಯಾವುದರಲ್ಲೂ ಪಾಪಪ್ರಜ್ಞೆ ಕಾಡದ ಮಾವನನ್ನು ಅತ್ತೆ ಕೊ೦ದ ಬಗ್ಗೆ ನಮ್ಮಲ್ಲಿ ಸಹಾನುಭೂತಿ ಹುಟ್ಟುತ್ತದೆಯೇ ಹೊರತು ಕೋಪ ಅಲ್ಲ.ಚೆಲುವೆಯಾದ ಹೆಣ್ಣು ನೋವು ತಿನ್ನದೇ ಬದುಕುವುದೇ ಸಾಧ್ಯವಿಲ್ಲ ಎ೦ಬ ಸಾಲನ್ನು ಇಲ್ಲಿ ಸೂಕ್ಷ್ಮವಾಗಿ ಲೇಖಕಿ ಹೇಳಬಯಸಿದ್ದಾರೇನೋ ಎ೦ಬ ಅನುಮಾನ ಮೂಡಿಸುತ್ತದೆ.
ವೇಷ --ಕತೆ ಸ್ವಾರ್ಥದ ಪರಮಾವಧಿತ್ವದ ಕಥಾನಕ... ಸಾಯುವ ಹೊತ್ತಿನಲ್ಲಿ ಸತ್ಯದರ್ಶನದ ಕತೆ. ಇಲ್ಲಿ ಹೆಣ್ಣುಮಕ್ಕಳು ಲಿಬರೇಟ್ ಆಗುವುದರ ನಕಾರಾತ್ಮಕ ಸ್ವರೂಪ ಕ೦ಡುಬ೦ದಿದೆ.ನಾಟಕೀಯತೆಯ ಪರಿಮಾಣವನ್ನು ಮೀರಿಯೂ ಸ್ವಾರ್ಥದ ಅನಾವರಣ ಇಲ್ಲಿದೆ. ಆದರೂ ಸಾವು ಸ೦ಭವಿಸಿತೋ ಇಲ್ಲ ಇನ್ನೂ ಆಗಬೇಕಿದೆಯೋ ಕತೆ ಹೇಳುತ್ತಿರುವವನು ಮೃತನೇ ಅಲ್ಲವೇ ಎನ್ನುವ ಕಿರು ಸ೦ದೇಹಗಳ ಹುಟ್ಟಿಸಿಬಿಡುತ್ತದೆ.
ದಾರಿಗಳು --- ಕತೆಯ ಹೆಣೆಯುವಿಕೆ ನೂರಾರು ಕವಲುಗಳನ್ನು ದಾಟಿ ಹೋಗುತ್ತದೆ. ಇಲ್ಲಿ ಕೊನೆಯ ವರೆಗೂ ಗಟ್ಟಿಯಾಗಿ ನಿಲ್ಲುವ ಪಾತ್ರಗಳು ಚ೦ದ್ರಾ ಮತ್ತು ವಾರಿಜಾ. ಬಡತನದ ಅಸಹಾಯಕತೆ ಇದ್ದ ಚ೦ದ್ರಾ, ತನ್ನ ಅನಾಥ, ಅವಲ೦ಬಿತ ಪರಿಸ್ಥಿತಿಯ ಅರಿವಿನಲ್ಲಿ ಬದುಕನ್ನು ಬ೦ದಾಗ, ಬ೦ದ೦ತೆ ಬರಮಾಡಿಕೊಳ್ಳುವ ವಾರಿಜಾ ಇವರಿಬ್ಬರ ಮು೦ದೆ ರವಿ ಕೇವಲ ಸ್ವಾರ್ಥಿಯಾಗಿ, ದುರ್ಬಲ ಮನಸ್ಕನಾಗಿ, ತನ್ನ ಕಾಮನೆಗಳನ್ನು ಮೆಟ್ಟಲಾಗದೆ ಹೋಗುತ್ತಾ ಆ ಇಬ್ಬರೂ ಹೆಣ್ಣುಗಳ ಮಾನಸಿಕ ಸ್ಥೈರ್ಯದ ಮಟ್ಟವನ್ನು ಕೊನೆಗೂ ಮುಟ್ಟಲಾಗದೆ ಉಳಿಯುತ್ತಾನೆ. ಸಮಯ ಬ೦ದ೦ತೆ ಜಾರಿ ಸರಿದುಕೊಳ್ಳುವ ರವಿ ಚ೦ದ್ರಾಳನ್ನು ಬರೀಯ ಹೆಣ್ಣಿನ ದೇಹ ಅಷ್ಟೇ ಆಗಿ ನೋಡಿದ್ದು ಅವನು ಈ ಕತೆಗೆ ಒ೦ದು ಬಗೆಯ ಅಲಿಖಿತ ವಿಲನ್ ಅನಿಸಿಬಿಡುತ್ತಾನಾದರೂ ಕೊನೆಗೆ ವಾರಿಜಾಳನ್ನು ಕೈ ಹಿಡಿಯುವುದು ಅವಳ ಅಸಹಾಯಕತೆಯೋ ಅಥವಾ ಅವನು ಇನ್ನು ಬೇರೆ ಹೆಣ್ಣು ಸಿಗದೇ ಉಳಿಯಬಹುದಾದ ವೈಚಿತ್ರ್ಯವೋ ಎ೦ಬ ಗೊ೦ದಲಕ್ಕೆ ಲೇಖಕಿ ನಮ್ಮನ್ನು ದೂಡುತ್ತಾರೆ.
ಮನಸು ಅಭಿಸಾರಿಕೆ --- ಇವಳ ಹೃದಯ ಮನಸ್ಸುಗಳ ತು೦ಬೆಲ್ಲ ಪ್ರೀತಿಯ ಹಸಿವು, ಯಾವುದರಲ್ಲೂ ಕಡಿಮೆಯಿಲ್ಲದ ತನಗೆ ಬುದ್ಧಿ, ಮನಸ್ಸು, ಸಾ೦ಗತ್ಯಗಳಲ್ಲಿ ಸಮಜೋಡಿಯಾಗುವ ಗ೦ಡೊಬ್ಬನಿಗಾಗಿ ಕಾಯುತ್ತ ತಹತಹಿಸುವ ಪ್ರೌಢೆ... ಚಿದು ಕನಸು ಮನಸಿನ ಜತೆಗಾರನಾಗಿ ಬರುವ ಕನಸು ಕಾಣುತ್ತ ಭಾಸ್ಕರ, ಚಿದು , ಸದಾಶರ್ಮರ ನಡುವಿನ ಆಯ್ಕೆಯಲ್ಲಿ ವಿಚಿತ್ರ ತಾಕಲಾಟಗಳನ್ನು ಎದುರಿಸುತ್ತಾಳೆ... ಸುಖಾ೦ತ್ಯದ ಸೂಚನೆ ಕೊಟ್ಟೂ ಪ್ರಶ್ನಚಿನ್ಹೆಯನ್ನೂ ಜೊತೆಯಲ್ಲೇ ಇಟ್ಟುಕೊ೦ಡು ಮುಗಿಯುವ ಕತೆ ಇದು. ಆದರೂ ಪ್ರತಿ ಸಾಲಿನಲ್ಲೂ ತನ್ನ ವ್ಯಕ್ತಿತ್ವದ ಛಾಪನ್ನು ಮೂಡಿಸುವ ಅಭಿಸಾರಿಕೆ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತಾಳೆ. ಇಡೀ ಕಥಾಸ೦ಕಲನ ಸ್ಪರ್ಶಿಸಿ, ಚರ್ಚಿಸಿದ ಹಲವಾರು ಜೀವನದ ಮಗ್ಗಲುಗಳು, ವ್ಯಕ್ತಿಗಳು, ಸ೦ದರ್ಭಗಳು ಎಷ್ಟೋ ಕಡೆ ಇಲ್ಲೇ ಎಲ್ಲೋ ನಡೆದಿರಬಹುದೇ ಅನಿಸುವಷ್ಟು ಸಹಜವಾಗಿವೆ. ಯಾವುದೇ ಕತೆಯ ಪಾತ್ರವು ಹೀಗೆ ಏಕೆ ಮಾಡಿತು? ಆ ಘಟನೆ ಯಾಕೆ ಹಾಗೆ ನಡೆಯಿತು ಎನ್ನುವುದರ ಬಗ್ಗೆ ನಿರ್ಧರಿಸುವವರು ಓದುಗರಲ್ಲ. ಮುಖ್ಯವಾಗಿ ಲೇಖಕಿ ಶಾ೦ತಿ ತಮ್ಮ ಸಮರ್ಥ , ಸಶಕ್ತ ಮತ್ತು ದಿಟ್ಟ ಬಗೆಯ ಬರವಣಿಗೆಯಿ೦ದಾಗಿಯೇ ಇಷ್ಟವಾಗುತ್ತಾರೆ. ಇಲ್ಲಿ ಇವರು ಸೆಕ್ಸ್ ಮತ್ತು ಕ್ರೌ ರ್ಯ ಎರಡನ್ನೂ ನಿರ್ಭೀತಿಯಿ೦ದ ಕಥಾಪಾತ್ರಗಳ ಜೀವನದಲ್ಲಿ ಹೆಣೆದುಬಿಟ್ಟಿದ್ದಾರೆ ಅನಿಸುತ್ತದೆ. ಒ೦ದೆರಡು ಕಥೆಗಳು ಎ೦ಡಮೂರಿಯವರ ಕತೆಗಳ ಧಾಟಿಯನ್ನು ನನಪಿಗೆ ತ೦ದ ಹಾಗೆ ನನಗೆ ಅನಿಸಿತು. ಆದರೆ ’ ನೆನಪಿನಲಿ, ಸಮಯದಲಿ, ಬದುಕಿನಲಿ, ಅದನು, ಇದನು...ಕೈಗಳಲಿ ...ಹೀಗೆ ಒತ್ತಕ್ಷರವಿಲ್ಲ ಪದಗಳ ಬಳಕೆಯಾಗಿದೆ. ಕಾವ್ಯಪ್ರಕಾರದಲ್ಲಿ ಬಳಕೆಯಾಗುವ ಈ ವಿಧಾನ ಗದ್ಯದಲ್ಲೂ ಅಡ್ದಿಯಿಲ್ಲವೇ ಎ೦ಬ ಸ೦ದೇಹ ನನಗಿದೆ.
~ ಜಯಶ್ರೀ ದೇಶಪಾಂಡೆ

ಶಾಂತಿ. ಕೆ. ಅಪ್ಪಣ್ಣನವರ ಕಥೆಗಳನ್ನು ಓದುತ್ತಾ ನನಗೆ ಸ್ಪಷ್ಟವಾಗಿ ಅನಿಸಿದ್ದು ಈ ವರೆಗಿನ ಹೆಚ್ಚಿನ ಲೇಖಕಿಯರು ತಮ್ಮ ಮೇಲೆ ಹಾಕಿಕೊಂಡಿದ್ದ ಎಲ್ಲಾ ಸ್ವಯಂನಿರ್ಭಂದಿತ ಮಿತಿಗಳನ್ನು ಕಳಚಿಕೊಂಡು ಮುಂದೆ ಸಾಗಿದ್ದಾರೆಂದು. ಅವರ ಅಭಿವ್ಯಕ್ತಿಯಲ್ಲಿ ಯಾವ ಸಂಕೋಚವೂ ಇಲ್ಲ. ಬಹಳ ನಿರ್ಭಿಡೆಯಿಂದ, ದಿಟ್ಟತನದಿಂದ ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವ ಧೈರ್ಯ ತೋರಿದ್ದಾರೆ. ಇದನ್ನು ಧೈರ್ಯ ಎನ್ನಲೇ ಅತಿ ಆಧುನಿಕತೆಯ ಅಭಿವ್ಯಕ್ತಿ ಎನ್ನಲೇ ಎನ್ನುವ ಪ್ರಶ್ನೆಯೂ ನನ್ನನ್ನು ಕಾಡಿದೆ. ಕಳೆದ ಶತಮಾನದ ಪ್ರಾರಂಭದಲ್ಲಿ ಬರೆಯುತ್ತಿದ್ದ ಲೇಖಕಿಯರು ಹೆಚ್ಚಾಗಿ ಬ್ರಾಹ್ಮಣವರ್ಗದ ಹಾಗೂ ಮೇಲ್ವರ್ಗದವರೇ ಆಗಿದ್ದರು. ಅವರು ಒಂದು ರೀತಿಯ ಶಿಷ್ಟ ಭಾಷೆ ಉಪಯೋಗಿಸುತ್ತಿದ್ದರು. ಅವರು ಬೆಳೆದ ಪರಿಸರದಿಂದ ಅಭಿವ್ಯಕ್ತಿಯಲ್ಲಿ ಹಿಡಿತವಿತ್ತು. ಎಲ್ಲವನ್ನೂ ಹೇಳುತ್ತಿರಲಿಲ್ಲ. ಹಲವಾರು ವರ್ಷ ಹೀಗೇ ನಡೆದು ಬಂದಿತ್ತು. ಕ್ರಮೇಣ ಎಲ್ಲರಿಗೂ ವಿದ್ಯೆ ಕಲಿಯುವ ಅವಕಾಶ ಸಿಕ್ಕಿದಾಗ ಬೇರೆ ವರ್ಗದವರೂ ಬರೆಯಲು ಸುರುಮಾಡಿದ್ದರೂ ಆಗಲೂ ಸ್ವಯಂನಿರ್ಭಂದಿತ ಮಿತಿಗಳನ್ನು ಹಾಕಿಕೊಂಡೇ ಬರೆಯುತ್ತಿದ್ದುದ್ದು. ಎಲ್ಲೋ ಬೆರಳೆಣಿಕೆಯಷ್ಟು ಲೇಖಕಿಯರು ಅದನ್ನು ಮೀರಿರಬಹುದು. ಆದರೆ ಇತ್ತೀಚೆಗಿನ ಲೇಖಕಿಯರು ಆ ಮಿತಿಗಳನ್ನು ಮೀರುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲು ಪಟ್ಟಣದಲ್ಲಿದ್ದವರಿಗಷ್ಟೇ ಎಟಕುತ್ತಿದ್ದ ವಿದ್ಯೆ ಹಳ್ಳಿಯ ಹೆಣ್ಣುಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡಿದಾಗ ಅವರಿಂದ ವೈವಿದ್ಯಮಯ ಬರವಣಿಗೆ ಹರಿದು ಬಂದಿರುವುದನ್ನು ನಾವು ಇತ್ತೀಚೆಗಿನ ಸಾಹಿತ್ಯದಲ್ಲಿ ಕಾಣುತ್ತೇವೆ. ಅವರಿಗೆ ಗ್ರಾಮ್ಯ ಬದುಕೂ ದಕ್ಕಿತ್ತು. ವಿದ್ಯೆಕಲಿತು ಪಟ್ಟಣವಾಸಿಗಳಾದಾಗ ಪಟ್ಟಣದ ಬದುಕೂ ದಕ್ಕಿರುವುದು ಇದಕ್ಕೆ ಕಾರಣವಾಗಿರಬಹುದು. ಅಲ್ಲದೆ ಜಾಗತೀಕರಣದ ಎಲ್ಲ ಸವಾಲುಗಳಿಗೂ ಮುಖಾಮುಖಿಯಾಗುತ್ತಲೇ ಆಗ ಬೆಳೆದು ಬಂದ ಕೊಳ್ಳುಬಾಕ ಸಂಸ್ಕೃತಿ ಕಕ್ಕುತ್ತಿರುವ ಎಲ್ಲಾ ವಿಪರೀತ ವೈಷಮ್ಯಗಳಿಗೂ ಅವರು ಸಾಕ್ಷಿಯಾಗುತ್ತಲೇ ಬಂದಿರುವುದರಿಂದ ಏನು ಹೇಳಲೂ ಹಿಂಜರಿಯದಿರುವಂತಹ ಒಂದು ರೀತಿಯ ಮೊಂಡುತನವನ್ನೂ ಅವರು ಮೈಗೂಡಿಸಿಕೊಂಡಿರುವುದನ್ನು ಕಾಣಬಹುದು.
ಶಾಂತಿ ಕೆ. ಅಪ್ಪಣ್ಣನವರ ಕತೆಗಳು ಇದಕ್ಕೊಂದು ಸರಿಯಾದ ಉದಾಹರಣೆ ಎಂದು ನನಗನಿಸುತ್ತದೆ. ಕೊಡಗಿನ ಹಳ್ಳಿಯ ಬಡತನದ ಕಷ್ಟಕರ ಬದುಕು, ನರ್ಸಿಂಗ್ ತರಬೇತಿ ಪಡೆದ ನಂತರ ಮದ್ರಾಸಿನಂತಹ ಪಟ್ಟಣದಲ್ಲಿ ನರ್ಸಾಗಿ ಕೆಲಸ ಮಾಡುತ್ತಾ ಪಡೆದ ಅನುಭವ ಅವರ ಜೀವನಾನುಭವವನ್ನು ಸಮೃದ್ಧವಾಗಿಸಿದೆ ಎಂದು ಅವರ ಕಥೆಗಳಲ್ಲಿ ಕಾಣುತ್ತೇವೆ. ಹಳ್ಳಿಯ ಜನರ ಮುಗ್ಧತೆ, ಪೇಟೆಯ ಜನರ ಬುದ್ಧಿವಂತಿಕೆ, ಆ ಬುದ್ಧಿವಂತಿಕೆ ಸೃಷ್ಟಿಸಿರುವ ಕ್ರೌರ್ಯ, ನಂಬಿಕೊಂಡು ಬಂದಿರುವ ನೈತಿಕ ಮೌಲ್ಯಗಳ ಅಲ್ಲಗಳೆಯುವಿಕೆಯನ್ನು ಅವರ ಕಥೆಗಳಲ್ಲಿ ಕಾಣಬಹುದು. ಕಥಾಗಾರಿಕೆಯ ಸೂಕ್ಷಮತೆಯೂ ಅವರಲ್ಲಿದೆ. ಶ್ರಮಿಕ ವರ್ಗದ, ದಲಿತವರ್ಗದ ದನಿಗಳು ಪತ್ರಿಧ್ವನಿಸಿರುವಷ್ಟೇ ಪರಿಣಾಮಕಾರಿಯಾಗಿ ಅತ್ಯಾಧುನಿಕ ಹೆಣ್ಣಿನ ಮನೋವ್ಯಾಪಾರಗಳೂ ಇಲ್ಲಿ ಧ್ವನಿಸಿವೆ. ಅವರು ಉಪಯೋಗಿಸಿರುವ ಶಿಷ್ಟವಲ್ಲದ ಭಾಷೆಯೂ ಅದಕ್ಕೆ ಪೂರಕವಾಗಿರುವುದರಿಂದ ಕಥೆಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಇದಕ್ಕೆ ಸರಿಯಾದ ಉದಾಹರಣೆ ಪರಶುವಿನ ದೇವರು ವಿನಲ್ಲಿ ಅವರು ಕಟ್ಟಿ ಕೊಟ್ಟ ಬದಲಾಗುತ್ತಿರುವ ಹಳ್ಳಿಯ ಜೀವನದ ಚಿತ್ರಣ, ಅಲ್ಲಿ ಪರಶುವಿನ ಮೂಲಕ ಧ್ವನಿಸಿರುವ ದಲಿತರದನಿ ಇಲ್ಲಿ ಸ್ಪಷ್ಟವಾಗಿದೆ. ಅಷ್ಟೇ ಪರಿಣಾಮಕಾರಿಯಾಗಿ ಶೋಷಿತ ಹೆಣ್ಣುಗಳ ಚಿತ್ರಣವೂ ಇಲ್ಲಿದೆ. ಒರಟು ನಡತೆ, ಒರಟು ಭಾಷೆ. ಶಾಂತಿಯವರು ಬಹಳ ಸಮರ್ಪಕವಾಗಿ ಈ ಭಾಷೆಯನ್ನು ಉಪಯೋಗಿಸಿದ್ದಾರೆ. ಹಾಗಾಗಿ ಅವರ ಕಥೆಗಳಿಗೊಂದು ಅಥೆಂಟಿಸಿಟಿ ಬಂದಿದೆ.
ಮುಳ್ಳುಗಳು ಕಥೆಯಲ್ಲಿ ಕಾರ್ಮಿಕ ವರ್ಗದ ಜನರ ನೋವನ್ನು ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಅಲ್ಲಿಯ ಅಧಿಕಾರಶಾಹಿವರ್ಗ, ಕಾರ್ಮಿಕವರ್ಗದ ಮೇಲೆ ನಡೆಸುವ ದೌರ್ಜನ್ಯ, ಶೋಷಣೆ, ಕ್ರೌರ್ಯ ಅದಕ್ಕೆ ಮುಗ್ಧ ಜನರು ಬಲಿಯಾಗುವ ರೀತಿ ಎಲ್ಲವನ್ನೂ ಮನಕ್ಕೆ ಗಾಯವಾಗುವಷ್ಟು ಸಮರ್ಪಕವಾಗಿ ಕಟ್ಟಿ ಕೊಟ್ಟಿದ್ದಾರೆ. ಆದರೆ ಈ ಕಥೆ ಸಿನಿಮೀಯವೆನೆಸುತ್ತದೆ. ನನ್ನ ಹಾಡು ನನ್ನದು ಸೂಳೆಯರ ಜೀವನವನ್ನು ಚಿತ್ರಿಸುವುದರ ಜೊತೆಗೆ ಅಪ್ಪ ತನ್ನ ದೇಹದ ಒತ್ತಡ ತೀರಿಸಲು ಒಬ್ಬ ಸೂಳೆಯನ್ನು ಹುಡುಕಿಕೊಂಡು ಹೋದಾಗ ಅಲ್ಲಿ ತನ್ನ ಕಳೆದು ಹೋದ ಮಗಳನ್ನೆ ನೋಡುವ ದುರಂತ ಇಲ್ಲಿ ಚಿತ್ರಿತವಾಗಿದೆ. ಆದರೆ ಈ ರೀತಿಯ ಕತೆಯನ್ನು ಎಲ್ಲೋ ಓದಿದ್ದೇವೆ/ನೋಡಿದ್ದೇವೆ ಎಂದು ಅನಿಸಿದ್ದರಿಂದ ಹೊಸತನ ಕಾಣೋದಿಲ್ಲ. ಆದರೆ ಸೂಳೆಯರ ಜೀವನವನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಚಿತ್ರಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಒಬ್ಬ ಲೇಖಕಿಗೆ ಇದು ಸಾಧ್ಯವಾಗಿರೋದು ಶಾಂತಿಯವರ ಗೆಲವು ಅನಿಸುತ್ತೆ.
ನೆರಳು ಕೂಡಾ ಹಳ್ಳಿ ಬದುಕನ್ನು ಅಲ್ಲಿಯ ವ್ಯಂಗ್ಯದ ಜೊತೆಗೆ ಕಟ್ಟಿಕೊಟ್ಟಿದೆ. ಕೆಲವೊಮ್ಮೆ ಕಥಾವಸ್ತುವಿನಲ್ಲಿ ಹೊಸತನವಿಲ್ಲದಿದ್ದರೂ ಅವರ ನಿರೂಪಣೆಯಲ್ಲಿ ಹೊಸತನ ಇರುವುದರಿಂದ ಕಥೆಗಳು ಸಕ್ಸೆಸ್ಫುಲ್ ಆಗಿವೆ. ಪಾಸಿಂಗ್ ಕ್ಲೌಡ್ಸ್ - ಅತಿ ಆಧುನಿಕತೆಯ ಕಡೆಗೆ ಮಾಡಿಕೊಂಡ ಅನುಸಂದಾನದ ಸ್ಪಷ್ಟ ಚಿತ್ರಣ ಕೊಡುತ್ತದೆ. ಶಾಂತಿಯವರು ಆಧುನಿಕತೆಗಳು ಕಕ್ಕಿರುವ ವಿಷವನ್ನು ಅನುಭವಿಸುತ್ತಿರುವ ಜೀವನದ ಹಲವಾರು ಮಗ್ಗುಲುಗಳನ್ನು ನಿರ್ಭಿಡೆಯಿಂದ ಬಿಚ್ಚಿಟ್ಟಿದ್ದಾರೆ ಎಂದು ಅನಿಸುತ್ತದೆ. ಎಲ್ಲವನ್ನೂ ಡಾಕ್ಯುಮೆಂಟರಿ ಮಾಡಿ ಜಗತ್ತಿನೊಡನೆ ಹಂಚಿಕೊಳ್ಳುವ ವ್ಯಾಪಾರೀಕರಣ ಸಂಸ್ಕೃತಿ; ಲಿವಿಂಗ್ ಇನ್ ಸಂಬಂಧಗಳು, ಯಾವುದೇ ಮುಚ್ಚುಮರೆಯಿಲ್ಲದೆ ನಡೆಯುವ ಹೆಣ್ಣುಗಂಡಿನ ಪ್ರೇಮ ಕೇಳಿಗಳು, ಅದನ್ನು ಕಳಚಿಕೊಳ್ಳುವ ರೀತಿ;, ಸೆಲ್ವಿಯ ಗಂಡ ಸೆಂತಿಲ್ ಮಲದ ಗುಂಡಿಕ್ಲೀನ್ ಮಾಡುವಾಗ ಬಿದ್ದು ಸತ್ತರೀತಿ, ಕೈಹಿಡಿದೆಳೆಯಿರಿ ಎನ್ನುವ ಅವನ ಕೂಗಿಗೆ ಕಿವಿಕೊಡದ ಇಂಜಿನಿಯರ್ ಮೇಲೆ ಸೆಲ್ವಿ ಸೇಡುತೀರಿಸಿಕೊಂಡ ರೀತಿ, ಕ್ರೌರ್ಯವನ್ನೇ ಮೇಲುಗೈಯಾಗಿಸಿದರೂ ಲಿವಿಂಗ್ ಇನ್ ಸಂಬಂಧ ಕಳಚಿಕೊಳ್ಳುವುದು ಸಾವಿಗಿಂತ ಸುಲಭದಲ್ಲಿ ನಡೆದರೂ ಅಲ್ಲಿ ಸೇಡು ಇಲ್ಲದಿದ್ದರೂ ಅದು ಸೆಲ್ವಿಯ ಜೀವನದಲ್ಲಿ ನಡೆದ ಕ್ರೌರ್ಯಕ್ಕಿಂತ ಬೇರಿಲ್ಲ ಎಂದು ಅನಿಸಿಬಿಡುತ್ತೆ. ದೇರ್ ಆರ್ ಬೆಟರ್ ವೇಸ್ ಟು ಚೇಂಜ್ ಆದರೆ ಕ್ರೌರ್ಯವನ್ನೇ ಈಗಿನ ಪೀಳಿಗೆ ಅಹ್ವಾನಿಸಿಕೊಳ್ಳುವುದು, ಶೂನ್ಯವನ್ನು ತುಂಬಿಕೊಳ್ಳುವುದು ಅತಿ ಆಧುನೀಕತೆಯ ಸಂಕೇತವೂ ಇರಬಹುದು.
ಪಯಣ ಈ ಅತಿ ಆಧುನಿಕ ಮನಸಿನ ಇನ್ನೊಂದು ಚಿತ್ರಣ. ಒಂದುರಾತ್ರಿಯ ರೈಲು ಪ್ರಯಾಣದಲ್ಲಿ ಒಂದು ಸೀಟನ್ನು ಹಂಚಿಕೊಳ್ಳ ಬೇಕಾದಾಗ ಹುಡುಗಿಯ ಮನದಲ್ಲೆದ್ದ ತವಕ ತಲ್ಲಣ. ಮನೋವ್ಯಾಪಾರ ಅದರಲ್ಲಿ ಏನೂ ತಪ್ಪಿಲ್ಲವೆಂದು ಚಿತ್ರಿಸಿರುವ ರೀತಿ ಅತಿ ಆಧುನೀಕರಣದ ಸಂಕೇತ. ಲೈಫ಼ಲ್ಲಿ ಅಲ್ಟಿಮೇಟಾಗಿ ಬೇಕಾಗಿರೋದು ಸಂತೋಷ. ಏನಿದೆಯೋ ಏನಿಲ್ವೋ ಖುಶಿಯಾಗಿದೀವಾ ಅದು ಸಾಕು, ಒಂದು ವೇಳೆ ಖುಷಿಯಿಲ್ಲಾಂದರೆ ಅದೇನೇ ಇರಲಿ ಅದರಿಂದ ಹೊರಬೇಕು ಎನ್ನುವ ಅಟಿಟ್ಯೂಡ್, ಅವಳಿಗೆ ಸಹ ಪ್ರಯಾಣಿಕನ ಮೇಲೆ ತಡೆಯಲಾಗದ ಆಕರ್ಷಣೆ ಉಂಟಾದಾಗ ಅದನ್ನು ತೀರಿಸಿಕೊಂಡು ಏನೂ ಆಗಿಲ್ಲವೆನ್ನುವಂತೆ ನಿರಾಳವಾಗಿ ಗಂಡನನ್ನು ಎದುರಿಸುವುದು ಈ ಅತಿ ಆಧುನಿಕ ಸ್ತ್ರೀಯರಿಗಷ್ಟೇ ಸಾಧ್ಯವೆಂದೆನಿಸಿಬಿಡುತ್ತದೆ. ಪ್ರಶೆ ಮಕ್ಕಳಾಗದಾಗ ಗಂಡನ ಪ್ಲಾನ್ ನಿಂದಲೇ ಇನ್ನೊಬ್ಬನಿಗೆ ಬಸಿರಾಗಿ ಸತ್ಯ ತಿಳೀದಾಗ ಆ ಹೆಂಗಸೇ ಇಬ್ಬರನ್ನೂ ಕೊಂದು ಮಗು ಹೆತ್ತು ತಾನೂ ಸತ್ತುದು ಕರ್ಣನ ಮೇಲೆ ಕುಂತಿಯ ನೆರಳಾದರೂ ಇರಬಾರದಿತ್ತು ಎನ್ನುವ ಮಾತುಗಳೂ, ಮಹಾಭಾರತದ ಛಾಯೆಯನ್ನು ತಂದರೂ ಇಲ್ಲಿಯದ್ದು ಬಹಳ ಮುಂದುವರೆದ ಆಲೋಚನೆಗಳು. ಆದರೆ ಆ ಮಗನಿಗೆ ಸತ್ಯ ತಿಳಿದಾಗ ಆಗುವುದು ಕರ್ಣನಿಗಾದ ನೋವೇ.
ಸುಳಿ -ಇದೂ ಮೈದುನನೆ ಅತ್ತಿಗೆಯಿಂದ ಒಂದು ಕಿಸ್ ಬಯಸೋದು, ಒಂದು ಕಿಸ್ ನಿಂದ ಏನೂ ಆಗೋದಿಲ್ಲ ನನ್ನ ಸಮಸ್ಯೆಗಳಿಂದ ಹೊರ ಬರಲು ನನಗೆ ಸ್ವಲ್ಪ ಬಿಸಿ ಬೇಕು, ಎನ್ನುತ್ತ ಅನಿರೀಕ್ಷಿತವಾಗಿ ಓಡಿಸಿಕೊಂಡು ಬಂದು ಕಿಸ್ ಮಾಡುವುದನ್ನು ಆಗಷ್ಟೆ ಅಲ್ಲಿಗೆ ಆಗಮಿಸಿದ ಇನ್ನೊಬ್ಬ ಮೈದುನ ನೋಡುವುದು, ಮನೆಗೆ ಬಂದ ಗಂಡನ ಮೌನ, ಹೆಂಡತಿಗೆ ಸುದ್ದಿ ತಿಳಿದು ಹೀಗಾಡುತ್ತಾನೆ ಎನ್ನುವ ಗುಮಾನಿ, ಆದರೆ ಊರಿಗೆ ಹೋದ ಗಂಡ ಹಳೆ ಪ್ರೇಮಿಯೊಡನೆ ಸೇರಿ ಬಂದು ಮೌನವಾಗಿರೋದು ಎಂದು ಹೇಳಿದಾಗ ಹೆಂಡತಿ ಏನೂ ಆಗದವಳಂತೆ ಪಾರ್ಟಿ ಮಾಡುವುದು ಎಲ್ಲವೂ ಅತಿ ಆಧುನಿಕತೆಯ ಆಲೋಚನೆಗಳು.
ದಾರಿ , ಮನಸು ಅಭಿಸಾರಿಕೆ ಎರಡರಲ್ಲೂ ಹೆಣ್ಣು ಗಂಡಿನ ಸಂಬಂಧದ ಕಥೆಯಿದೆ. ಹೆಣ್ಣು ತನಗಿಷ್ಟವಾದ ಗಂಡನ್ನು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುವುದನ್ನು ಎರಡು ಮೂರುಕಥೆಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಲೇಖಕಿ.
ಬಾಹುಗಳು ವ್ಯವಸ್ಥೆಯ ವಿರುದ್ಧ ಹೋರಾಡ ಬೇಕೆನ್ನುವ ಆಶಯದ ಕಥೆಯಾದರೆ ಈ ಸಂಕಲನದ ಅತ್ಯಂತ ಚಿಕ್ಕ ಕಥೆ ಬಿಂಬಗಳು ಜೀವನದ ನಿರಾಸೆ ಸಂಕಟಗಳನ್ನು ಮೀರಿ ಬದುಕ ಬೇಕೆನ್ನುವ ಆಶಯ ಹೊತ್ತ ಕಥೆ. ಯಾವುದೂ ಪರ್ಮನೆಂಟ್ ಅಲ್ಲ ಅದನ್ನು ಮೀರಿ ಜೀವನವನ್ನು ಸ್ವೀಕರಿಸ ಬೇಕೆನ್ನುವುದನ್ನು ಸಜೆಸ್ಟಿವ್ ಆಗಿ ನಿರೂಪಿಸಿದ್ದಾರೆ. ನನಗಿವೆರಡೂ ಬಹಳ ಇಷ್ಟವಾದ ಕಥೆ.
ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಗೆ ಕರ್ಣ ಯಾಕೆ ನನಗಿಂತ ಶ್ರೇಷ್ಟ ಎನ್ನುವ ಪ್ರಶ್ನೆಗೆ ಉತ್ತರ ಕೊಡುತ್ತಾ ಹೇಳುತ್ತಾನೆ ವಾಸ್ತವದಲ್ಲಿ ನಾವು ನೋಡುವುದು ಮಾತ್ರ ಸತ್ಯವಲ್ಲ. ಅದರಾಚೆಗೂ ನಮಗೆ ತಿಳಿಯದ ಒಂದು ಸತ್ಯವಿದೆ ಎನ್ನುವ ಮಾತನ್ನು ಶಾಂತಿ ಅಪ್ಪಣ್ಣನವರು ಇಲ್ಲಿ ಹೊಸ ಅಯಾಮಗಳೊಂದಿಗೆ ಕೆಲವು ಕಥೆಗಳಲ್ಲಿ ಎಕ್ಸ್ಟೆಂಡ್ ಮಾಡಿದ್ದಾರೆ ಎಂತಲೂ ಅನಿಸಿತು.
~ ಉಷಾ. ಪಿ ರೈ

ಶಾಂತಿ ಕೆ ಅಪ್ಪಣ್ಣ ಅವರ ಕತೆಗಳು ತಮ್ಮ ನಿರೂಪಣಾ ಶೈಲಿಯಿಂದ ನನ್ನ ಮನಸ್ಸಿಗೆ ಹಿಡಿಸಿತು. ಕೆಲವೊಂದು ಕಥೆಗಳನ್ನು ಹೊರತು ಪಡಿಸಿ ಮಿಕ್ಕ ಕಥೆಗಳು ಸತ್ವಯುತವಾಗಿದ್ದವು. ಕಥಾ ವಸ್ತುಗಳು ಹೊಸದಲ್ಲದಿದ್ದರು ನಿರೂಪಣೆ, ಭಾಷೆ ಮತ್ತು ಪ್ರಾಮಾಣಿಕತೆಯಿಂದ ಓದುಗನಿಗೆ ತಲಪುವಲ್ಲಿ ಯಶಸ್ವೀ ಎಂದೇ ಹೇಳಬೇಕು. ಪಯಣ ಮತ್ತು ಪರಶುವಿನ ಅವತಾರ ನನಗೆ ಬಹಳ ಇಷ್ಟವಾದ ಕತೆಗಳು . ಪಯಣದಲ್ಲಿ ನೇರ ದಿಟ್ಟ ಅನಿಸಿಕೆಗಳು ದಾಖಲಾಗಿ ನಿರ್ಭೆಡೆಯಿಂದ ಕೂಡಿದೆ. i ಟiಞeಜ ಣhe hoಟಿesಣಥಿ.
ಪರಶುವಿನ ಮೇಲೆ ದೇವರು ಬರುವುದು ಶೋಷಣೆಗೆ ಒಳಗಾದವರನ್ನು ಧ್ವನಿಸುತ್ತದೆ. ಬರೆದ ಶೈಲಿಯೂ ಸಹ ಇಷ್ಟವಾಯಿತು. ದಾರಿ, ಮುಳ್ಳುಗಳು, ಪಾಸಿಂಗ್ ಕ್ಲೌಡ್ಸ್ ಓಕೆ ಅನ್ನಿಸಿತು. ಬಿಂಬಗಳು ಗಮನ ಸೆಳೆಯಿತು

~ ಸರಳಾ ದ್ವಾರಕಾವಾಸ್
*****
*****
ಮೊದಲಿಗೆ ಈ ಹೊತ್ತಿಗೆ ಕಾರ್ಯಕ್ರಮಕ್ಕೆ ನಾನು ಇದೇ ಮೊದಲ ಭಾರಿ ಬಂದಿದ್ದೇನೆ. ನಿಮ್ಮೆಲ್ಲರ ಪುಸ್ತಕ ಓದಿನ ಬಗೆಗಿನ ಕಾಳಜಿ ಮತ್ತು ಉತ್ಸಾಹ ಕಂಡು ನನಗೆ ಖುಷಿಯಾಗಿದೆ. ನಾನು ಈ ಪುಸ್ತಕವನ್ನು ಓದಿದ ನಂತರ ನನಗನ್ನಿಸಿದ್ದು. ಇದು ತುಂಬಾ ನೇರವಾಗಿ ಮತ್ತು ದಿಟ್ಟತನದ ಮಾತು ಭಾಷೆಯಿಂದ ಕೂಡಿದೆಯೆಂದು. ವಸ್ತು ವಿಚಾರವನ್ನು ಕಥೆಯ ಮೂಲಕ ಹೇಳುವಾಗ ಅನೇಕ ಕಥೆಗಳಲ್ಲಿ ಸಿನಿಮಾ ದೃಶ್ಯಗಳಂತೆ ನನ್ನ ಮನಸ್ಸಿನಲ್ಲಿ ಚಲಿಸಿದ್ದು. ಅದಕ್ಕೆ ಮುಖ್ಯವಾಗಿ ಮುಳ್ಳುಗಳು ಕಥೆ. ಈ ಪುಸ್ತಕದಲ್ಲಿ ನನ್ನನ್ನು ಹೆಚ್ಚು ಕಾಡಿದ್ದು “ನನ್ನ ಹಾಡು ನನ್ನದು”. ನಿದಾನವಾಗಿ ಓದಿಸಿಕೊಳ್ಳುತ್ತಾ ಹೋಗುವ ಅದು ಅನಿರೀಕ್ಷಿತ ತಿರುವುಗಳನ್ನು ಅದರಲ್ಲಿ ಭಾವ ತೀರ್ವತೆಯನ್ನು ಪಡೆದುಕೊಳ್ಳುತ್ತಾ ನನ್ನನ್ನು ಹಿಡಿದಿಟ್ಟುಕೊಂಡಿತು. ನೆರಳು ಕಥೆಯಲ್ಲಿನ ತಂತ್ರಗಾರಿಕೆ ಇಷ್ಟವಾಯಿತು. ಆದರೆ ಅದೇ ರೀತಿಯ ಹೋಲಿಯುಳ್ಳ ಕಥೆಯನ್ನು ಕೇಪಿನ ಡಬ್ಭಿ ಮತ್ತು ಘಾಚರ್ ಘೋಚರ್ ಪುಸ್ತಕದಲ್ಲಿಯೂ ಓದಿದಂತೆ ನೆನಪಾಯಿತು. ಇಡೀ ಪುಸ್ತಕದಲ್ಲಿ ಇಷ್ಟವಾಗಿದ್ದು ಕಥಾವಸ್ತುಗಳು ಹೊಸತಲ್ಲದಿದ್ದರೂ ಸುಲಭವಾಗಿ ಓದಿಸಿಕೊಂಡು ಹೋಗುವ ನಿರೂಪಣ ಶೈಲಿ. ಲೇಖಕಿಗೆ ಅದು ಸಿದ್ಧಿಸಿರುವುದಕ್ಕೆ ಅಭಿನಂದನೆಗಳು. ಕಥೆಗಳಲ್ಲಿ ಮಹಿಳೆಯ ಒಳಮನಸ್ಸಿನ ಭಾವನೆಗಳ ತುಡಿತ, ಅತಂಕ, ವಿಷಾಧಗಳ ನಡು ನಡುವೆಯೂ ಈಗಿನ ಆಧುನಿಕ ಮಹಿಳೆಯ ಮನಸ್ಸೊಳಗಿನ ಆಲೋಚನೆಗಳನ್ನು ವ್ಯಕ್ತಪಡಿಸುತ್ತಿರುವ ರೀತಿಯಿಂದ ಮಹಿಳೆಯರು ನಿರ್ಭಿಡೆಯಿಂದ ತಮ್ಮ ಮನಸ್ಸಿನ ಆಸೆ ಆಕಾಂಕ್ಷೆ ಕನಸು ಕಲ್ಪನೆಗಳನ್ನು ಸ್ವಲ್ಪ ನೇರವಾಗಿ ಮತ್ತು ದಿಟ್ಟತನದಿಂದ ಈ ಕಥೆಗಳ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸಿದ್ದಾರೆ ಎನಿಸಿತು. ಈ ಕೃತಿಗಾಗಿ ಬಹುಮಾನ ಪಡೆದ ಲೇಖಕಿ ಶಾಂತಿ ಕೇ ಅಪ್ಪಣ್ಣ ಅವರಿಗೆ ಅಭಿನಂದನೆಗಳು. ಅವರಿಂದ ಇನ್ನಷ್ಟು ಉತ್ತಮವಾದ ಕಥೆಗಳನ್ನು ಕನ್ನಡದಲ್ಲಿ ನಿರೀಕ್ಷಿಸಬಹುದು.
~ ಶಿವು ಕೆ.
*****
*****
ಮನಸು ಅಭಿಸಾರಿಕೆ ಬಹಳ ಇಷ್ಟವಾಗುವ ಶೀರ್ಷಿಕೆ. ಪದ ಬಳಕೆಯ ಸೊಗಸುಗಾರಿಕೆ ಬಹಳ ಇಷ್ಟವಾಯಿತು. ಕತೆಯ ಯಾವ ಪಾತ್ರದಲ್ಲೂಯೂ ಅತಿಯಾದ ಆದರ್ಶ ವಾಗಲಿ,ವೈಭವೀಕರಣವಿಲ್ಲದೆ ಪ್ರಾಮಾಣಿಕತೆ ಹಾಗೂ ಗಟ್ಟಿ ತನದಿಂದ ಕೂಡಿದೆ. ಹೆಣ್ಣು ಮತ್ತು ಗಂಡಿನ ಸಂಬಂಧಗಳನ್ನು ದೌರ್ಬಲ್ಯದ ಸಮೇತ ತೆರೆದಿಡುತ್ತದೆ. ಎಲ್ಲಾ ಕತೆಗಳೂ ಸೋಗಲಾಡಿತನವಿಲ್ಲದೆ ಮೂಡಿ ಬಂದಿದೆ." ಬಿಂಬ "ಕತೆಯನ್ನು ಓದಿದ ನಂತರವೂ ಬೆಳವಣಿಗೆಗೆ ಅವಕಾಶವಿದೆ. ಕತೆ ಮುಗಿದ ನಂತರವೂ ಬೆಳೆಸುವಂತಿದೆ.ಹಾಗೆಯೇ ಎಲ್ಲಾ ಕತೆಗಳ ಅಂತ್ಯವೂ ಅದ್ಭುತವಾಗಿದ್ದು ಕುತೂಹಲದಿಂದ ಇರಿಸಿಕೊಂಡು ಹೋಗುತ್ತದೆ.
~ಸವಿತಾ ಗುರುಪ್ರಸಾದ್
*****
*****
ಕಥಾವಸ್ತುವಿನಲ್ಲಿ ಹೊಸತನವಿಲ್ಲದಿದ್ದರೂ ನಿರೂಪಣೆಯಲ್ಲಿ ಲೇಖಕಿ ಗೆದ್ದಿದ್ದಾರೆ . ಮನಸ್ಸಿನ ತಾಕಲಾಟವನ್ನು ಪದಗಳಲ್ಲಿ ಹಿಡಿದಿಡುವಲ್ಲಿ ಸಫಲರಾಗಿದಾರೆ. ಕೆಲವು ಕಥೆಗಳ ಅಂತ್ಯ ?ದುಗರ ಅಂದಾಜು ಮೀರಬೇಕು ಎಂದು ಅನಿ??ಕ್ಷಿತವಾಗಿ, ಆತುರದಿಂದ ಮುಗಿಸಿದರೇನೋ ಎಂದು ಅನ್ನಿಸುತ್ತದೆಯಾದರೂ ಲೇಖಕಿ ತಾವು ಹೇಳಬೇಕು ಎಂದು ಅಂದುಕೊಂಡಿದ್ದನ್ನು ಎಲ್ಲಿಯೂ ಹಿಡಿದಿಡಯದೆ, ಮುಚ್ಚಿಡದೆ ಹೇಳುತ್ತಾರೆ. ಕಾಡುತ್ತದೆ ಅವರ ಬರಹ. ಅವರಿಂದ ಮತ್ತಷ್ಟು ಕಥೆಗಳ ನಿರೀಕ್ಷೆಯಲ್ಲಿ.
~ ಗೀತಾ ಬಿ.ಯು.
*****
*****
ಎಲ್ಲರ ಅಭಿಪ್ರಾಯದಂತೇ.. ಸಂಕಲನದಲ್ಲಿರುವ ಕಥಾ ವಸ್ತುಗಳಲ್ಲಿ ವಿಶೇಷತೆ ಇಲ್ಲದಿದ್ದರೂ ಅದನ್ನು ನಿರೂಪಿಸದ ಶೈಲಿ ತುಂಬಾ ಇಷ್ಟವಾಯ್ತು. ತಂತ್ರಗಾರಿಕೆಯಿದೆ ಶೈಲಿಯಲ್ಲಿ ಮತ್ತು ಒಂದು ದಿಟ್ಟತನವಿದೆ. ಸಂಕಲನದ ಶೀರ್ಷಿಕೆ "ಮನಸು ಅಭಿಸಾರಿಕೆ" ಅತ್ಯಂತ ಸೂಕ್ತವಾಗಿದೆ ಎಂದೆನಿಸಿತು. ಬಿಂಬಗಳು, ನೆರಳು, ಪಯಣ ನೆನಪಿನಲ್ಲಿ ಉಳಿವಂಥ ಕಥೆಗಳು. ಬಿಂಬಗಳು ಕಥೆಯಲ್ಲಿನ ಸಂದೇಶ.. "ದುಃಖದಲ್ಲೇ ಮುಳುಗಿದ್ದರೆ ಬದುಕು ನಿಂತಲ್ಲೇ ನಿಂತು ಹೋಗುತ್ತದೆ.. ಕಡೆಗೊಂದು ದಿನ ಮುನ್ನೆಡೆಯಲು ಕಣ್ತೆರೆದಾಗ, ಎಲ್ಲವೂ ಖಾಲಿಯಾಗಿರುತ್ತದೆ." ಎಂಬುದನ್ನು ಹಲವು ವಿಶಿಷ್ಟ ಪ್ರತಿಮೆಗಳ ಮೂಲಕ ಕಟ್ಟಿ ಕೊಟ್ಟಿದ್ದು ಇಷ್ಟವಾಯಿತು. ಪಯಣ ಕಥೆಯನ್ನೋದುತ್ತಿದ್ದಂತೇ ಜನಪ್ರಿಯ ಹಿಂದಿ ಚಲನಚಿತ್ರವಾದ "ಮಿಸ್ಟರ್ ಆಂಡ್ ಮಿಸೆಸ್ ಐಯರ್" ನೆನಪಾಯಿತು. ಅದರಲ್ಲೂ ಇದೇ ರೀತಿಯ ಕಥಾನಕ ಬರುತ್ತದೆ. ಪಯಣ ಕಥೆಯಲ್ಲಿ ನಾಯಕಿಯ ಒಳತೋಟಿ, ಬೇಗುದಿ, ಸಂದಿಗ್ಧತೆಯ ಚಿತ್ರಣ ಬಲು ಚೆನ್ನಾಗಿ ಮೂಡಿದೆ. ತನ್ನೊಳಗೆ ಉಂಟಾದ ಆ ಬಯಕೆಗೆ ಅಲ್ಲಿ ಯಾವುದೇ ಗಿಲ್ಟ್ ಕಾಡಬೇಕಾಗಿಲ್ಲ.. ಅವಳ ತಪ್ಪೂ ಅಲ್ಲಿಲ್ಲ ಅನ್ನೋದನ್ನು ಓದುಗರಿಕೆ ಅರಿವಾಗಿಸುವಂತೆ ಅದರ ನಿರೂಪಣೆ ಮೂಡಿಬಂದಿದೆ. ಸಂಕಲನದುದ್ದಕ್ಕೂ ಆಯಾ ಪಾತ್ರಕ್ಕೆ ತಕ್ಕ ಭಾಷೆಯನ್ನು ಬಳಸಿದ್ದು, ಅದು ಕಥೆಯ ಸೊಗಡನ್ನು ಹೆಚ್ಚಿಸಿದೆ. ಆದರೆ ಪಾಸಿಂಗ್ ಕ್ಲೌಡ್ಸ್ ಕಥೆಯಲ್ಲಿ ಬರುವ ಪುಟ್‌ಪಾತಿನ ಸೆಲ್ವಿಯ ಬಾಯಲ್ಲಿ, ಆ ಗ್ರಾಮ್ಯ ಭಾಷೆಯ ನಡುವೆ "ಯೂಸ್ ಆಗ್ತೀವಿ ನಾವು.." ಅನ್ನೋ ಮಾತಲ್ಲಿ "ಯೂಸ್" ಅನ್ನೋ ಇಂಗ್ಲೀಶ್ ಪದಬಳಕೆ ನೋಡಿ ಆಶ್ಚರ್ಯವಾಯಿತು.. ಸ್ವಲ್ಪ ಅಸಮಂಜಸ ಎಂದೆನಿಸಿತು. ಅಂತೆಯೇ ‘ಅಸಲು’, ‘ಅಸಲಿಗೆ’ ಅನ್ನೋ ಪದಬಳಕೆ ಹಲೆವೆಡೆ ತುಸು ಹೆಚ್ಚಾಗಿಯೇ ಬಳಸಿರುವಂತೇ ಭಾಸವಾಯ್ತು. ಪಾಸಿಂಗ್ ಕ್ಲೌಂಡ್ಸ್ ಕಥೆಯ ಅಂತ್ಯ ತುಸು ಹಠಾತ್ ಆಗಿ ಅವಸರದಿಂದ ಆದಂತೇ.. ಗೊಂದಲಪೂರ್ಣವಾಗಿದೆ ಎಂದೆನಿಸಿತು. ಆದರೆ ಮುಳ್ಳುಗಳು ಕಥೆಯ ಅಂತ್ಯ ಓದಲೂ ಆಗದಷ್ಟು ನೋವನ್ನು ಉಂಟುಮಾಡುವಂತಿದೆ. ಮನಸಿಗೆ ತುಂಬಾ ಹಿಂಸೆಯನ್ನುಂಟುಮಾಡುವಂತಿದೆ. ಒಟ್ಟಿನಲ್ಲಿ ತನ್ನ ವಿಶಿಷ್ಟ ಕಥಾನಕ ಶೈಲಿಯಿಂದಾಗಿ ಓದುಗಳಾದ ನನ್ನನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡ ಕಥಾಸಂಕಲನವಿದು.
~ ತೇಜಸ್ವಿನಿ ಹೆಗಡೆ
*****
*****
ಮನಸು ಅಭಿಸಾರಿಕೆ’ ಕಥಾ ಸಂಕಲನ ನನಗೆ ಇಷ್ಟವಾಯ್ತು. ಕತೆ ಹೀಗೆ ಮುಂದುವರೆಯಬಹುದು ಎನ್ನುವ ನಮ್ಮ ಊಹೆಗಳನ್ನು ಸುಳ್ಳು ಮಾಡುತ್ತಾ ಕತೆಗಳು ಸಾಗುವುದು ತುಂಬಾ ಮುದ ನೀಡುವಂಥದ್ದು. ಇದರಿಂದಾಗಿಯೇ ಕತೆಗಳು ಹೊಸೆತೆನಿಸಿ ಓದುಗರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಸಫಲವಾಗುತ್ತವೆ. ಇದು ನಿರೂಪಣಾ ತಂತ್ರವಾದರೂ ಇಷ್ಟವಾಗುವ ಮತ್ತು ಅಳವಡಿಸಿಕೊಳ್ಳಬಹುದಾದ ತಂತ್ರ ಎಂದು ನನಗೆ ಅನಿಸುತ್ತೆ. ಈ ಒಂದು ತಾಜಾತನಕ್ಕಾಗಿ ಶಾಂತಿ ಕೆ ಅಪ್ಪಣ್ಣ ಅವರಿಗೆ ಕೃತಜ್ಞತೆಗಳು ಮತ್ತು ಅಭಿನಂದನೆಗಳು.
ಭಾಷೆ ಏಕ ಕಾಲಕ್ಕೆ ಕಾವ್ಯಾತ್ಮಕವಾಗಿಯೂ ಮತ್ತು ವಾಚ್ಯವಾಗಿಯೂ ಸಹಜ ಸುಲಲಿತವಾಗಿರುವುದರಿಂದ ಈ ಕಥಾ ಸಂಕಲನ ಅವರಿವರೆನ್ನದೆ ಎಲ್ಲರಿಗೂ ಇಷ್ಟವಾಗುತ್ತದೆ ಎನಿಸುತ್ತದೆ ನನಗೆ. ಕತೆ ಕತೆಯೂ ಭಿನ್ನವೆನಿಸಲು ಕಾರಣ ವಿಷಯಗಳ ಆಯ್ಕೆ ಮಾತ್ರವಲ್ಲ ಹೇಳುವ ರೀತಿಯೂ ಸಹ ಅದಕ್ಕೆ ಕಾರಣವಾಗಿದೆ.
ಮನಸಿಗೆ ಗಂಡು ಹೆಣ್ಣು ಅನ್ನೋದೇನಿಲ್ಲ. ಹೆಣ್ಣಿ