ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Wednesday, July 31, 2019
Tuesday, July 30, 2019
Monday, July 29, 2019
Sunday, July 28, 2019
Saturday, July 27, 2019
ಡಾ / ಶಶಿಕಾಂತ ಕೌಡೂರು -ದಾಸ ಸಾಹಿತ್ಯ , ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ
ದಾಸ ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ - ಡಾ/ ಶಶಿಕಾಂತ ಕೌಡೂರು -Dasa Sahitya , music and Cultural politics - article written by Da/ Shashikanth Koudoor { Department of English NIITK Suratkal , published in NYAYAPATHA , Kannada Weekly dated July 24th 2019
Friday, July 26, 2019
ರಹಮತ್ ತರೀಕೆರೆ -- ಜಿ. ರಾಜಶೇಖರ ಅವರ ಜೊತೆ
ಜಿ. ರಾಜಶೇಖರ ಅವರ ಜೊತೆ -ರಹಮತ್ ತರೀಕೆರೆ , G. Rajashekhara kannada writer - Inyerview by Rahamat Tarikere published in Nyayapatha Kannada weekly dated 24th July 2019
Thursday, July 25, 2019
ಡಾ / ರವಿ ಕುಮಾರ್ ನೀಹ - ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯನ್ನು ರೂಪಿಸಿದ ಕೆ. ಬಿ. ಸಿದ್ದಯ್ಯನವರ ಖಂಡಕಾವ್ಯಗಳು
ಕುಲಪುರಾಣಗಳ ಮೂಲಕ ದಲಿತ ಮೀಮಾಂಸೆಯನ್ನು ರೂಪಿಸಿದ ಕೆ. ಬಿ. ಸಿದ್ದಯ್ಯ ಅವರ ಖಂಡ ಕಾವ್ಯಗಳು - Kannada poet K. B. Siddayuya's poetry - Article written by Dr. Ravikumar Neeha , published in ANIKETANA- October- December 2017 { sanchike -113 , pubished by Karnataka Sahitya Academi , Bengaluru
Wednesday, July 24, 2019
Tuesday, July 23, 2019
Monday, July 22, 2019
Sunday, July 21, 2019
Saturday, July 20, 2019
Thursday, July 18, 2019
ಸೀಮಾತೀತ ಸಾಹಿತ್ಯ ಪರ್ಬ 1- 8-2019
ಸೀಮಾತೀತ ಸಾಹಿತ್ಯ ಪರ್ಬ | Prajavani: ನಾಡಿನ ಸಾಹಿತಿಗಳು, ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು ವಿಭಿನ್ನ ಸಾಹಿತ್ಯ ಸಮ್ಮೇಳನ ನಡೆಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂದಾಗಿದೆ.
ಸುಪ್ರಸನ್ನ ನಕ್ಕತ್ತಾಯ ನೀರುಣಿಸು......... ನೆಲತಣಿಸು.........
ಪ್ರಕೃತಿಯ ಒತ್ತಾಸೆಯ ಮಾತುಗಳನು. ಕಿವಿಗೊಟ್ಟು ಕೇಳಿರಿ ಒಡಲಾಳದ ನುಡಿಮುತ್ತುಗಳನ್ನು. ಅವಳುಳಿವೇ ನಮ್ಮ ನೀತಿ-ಉನ್ನತಿಯೇ ನಮ್ಮ ರೀತಿ. ಬಾಯಾರಿದ ಅವಳ ಗಭ೯ಕ್ಕೆ ನೀರುಣಿಸಿದಲ್ಲಿ ಪೋಷಿಸುವಳು ಅದಿತಿ.
ಮಳೆನೀರ ಕೊಯ್ಲಿನಲಿ ನೀರುಣಿಸಿ ನೆಲತಣಿಸಿ. ಮಡವಳ ತಂಪು ಹಸಿರು ಹಾಸನ್ನು ಹೊದಿಸಿ. ಆ ಗವಳಾಗುವಳು ಸತ್ಯ ಶ್ಯಾಮಲ-ನಾವು ನಿತ್ಯ ನಿಮ೯ಲ. ಅವಳಾಗಲು ಸಬಲೆ ನಾವೆಂತು ದುಬ೯ಲ?
ಅವಳು ತಂಪಾಗಲು ಮೈಯೆಲ್ಲ ಹಸಿರ ಉಸಿರು. ಹಸಿರಲ್ಲಿದೆ ನಮ್ಮೆಲ್ಲರ ಉಳಿವು. ಉಸಿರು. ಹಸಿರ ಸಸಿಗಳು ಬಲಿತು ಹೆಮ್ಮರದ ಒಡಲಾಗಿ. ಜೀವ ಸಂಕುಲಕೆ ಆಸರೆಯಾಗಿ ಕಾಯುವುದು ತಂಪು ನೆರಳಾಗಿ.
ಸಹಜ ಕೃಷಿಯ ನೂರಾರು ತರುಲತೆಗಳು. ಭಿನ್ನ ಭಿನ್ನಬಣ್ಣಗಳು. ವಿವಿಧ ಸುಗಂಧದ ಹೂಗಳು. ಮತ್ತೆ ಬರುವುದು ತರೇವಾರಿ ಕಾಯಿ ಹಣ್ಣುಗಳು ಸಾಲು ರಸಸ್ವಾದದಿ ಸವಿಯಲಿ ಸಂಪನ್ನ ಮನ- ಹಣ್ಣುಗಳ ಹಬ್ಬದ ಸಮ್ಮಿಲನ.!
ಅವಳನ್ನು ಸಹಜವಾಗಿರಿಸು ಹೂದಿಸದಿರು ಗಟ್ಟಿ ಹೊದಿಕೆ. ಅವಳನವಳಂತೆ ಇರಿಸು ಅದೇ ಅವಳ ನಿರಂತರ ಬಯಕೆ. ಹೊದಿಸಾಕೆಗೆ ಹಸಿರು ಹಾಸಿಗೆ ಅದೆ ಆಕೆಗೆ ಸೀರೆ ಕುಪ್ಪಸ. ಮಾಡದಿರು ಅವಳನೆಂದೂಬೆತ್ತಲೆ ಅವಳಿಗದು ತೀರಾ ನಾಚಿಕೆ!
ಅವಳ ಅರಿಕೆ ಆಲಿಸಿ ಮನ್ನಿಸಿ ಮಳೆ ನೀರ ಹರಿಸಿ. ಅವಳ ಒಡಲು ತುಂಬಿಸಿ ತಂಪಾಗಿ ಹಸಿರ ಉಳಿಸಿ. ಆಗಾಗುವುದು ಜಲಮೂಲ ಅಕ್ಷಯಪಾತ್ರೆ. ಸದಾ ಕರುಣಿಸಲಿ ಗಂಗೋದಕವ ಈ ಸನ್ಮಿತ್ರೆ!
ಸುಪ್ರಸನ್ನ ನಕ್ಕತ್ತಾಯ ಕೋಟೇಶ್ವರ
Wednesday, July 17, 2019
Tuesday, July 16, 2019
Monday, July 15, 2019
Saturday, July 13, 2019
Friday, July 12, 2019
Thursday, July 11, 2019
Wednesday, July 10, 2019
Tuesday, July 9, 2019
Monday, July 8, 2019
Sunday, July 7, 2019
Saturday, July 6, 2019
Friday, July 5, 2019
Thursday, July 4, 2019
Tuesday, July 2, 2019
Monday, July 1, 2019
ಸವಿತಾ ನಾಗಭೂಷಣ ---ಬಾಂಧವ್ಯ ( ಅತಿ ಸಣ್ಣ ಕತೆ) -------
ಬಾಂಧವ್ಯ ( ಅತಿ ಸಣ್ಣ ಕತೆ)
-------
-------
ಶಶಾಂಕ ದಿನಾಲು ಮನೆಯಿಂದ ಕಛೇರಿಗೆ ಹೊರಡುವುದು ಬೆಳಿಗ್ಗೆ ಎಂಟೂವರೆಗೆ. ಮಡಿವಾಳ ಮೇಲು ಸೇತುವೆ ಬಳಿ ಬಂದಾಗ ಸರಿಸುಮಾರು ಸಿಗ್ನಲ್ ಬೀಳುತ್ತದೆ. ಅದೇ ಆ ಮುದುಕಿ ಕಾರಿನ ಬಳಿ ಬಂದು ಟಕ್ ಟಕ್ ಟಕ್ ಎಂದು ಮೂರು ಸಲ ಕಿಟಕಿ ಗಾಜು ಕುಟ್ಟುತ್ತಾಳೆ. ಶಶಾಂಕ ಐದು ರೂಪಾಯಿಯ ನಾಣ್ಯ ನೀಡುತ್ತಾನೆ. ಅವಳು. ನಮಸ್ಕಾರ ಮಾಡಿ ಜಾಗ ಖಾಲಿ ಮಾಡುತ್ತಾಳೆ. ಆ ಮುದುಕಿಗೆ ಏನಿಲ್ಲ ಅಂದರೂ ಎಂಭತ್ತರ ಮೇಲಾಗಿದೆ ಎಂದು ಅವನಿಗೆ ಅನಿಸಿದೆ. ತಟ್ಟಾಡುತ್ತಾ ಓಡಾಡುವ ಅವಳ
ಬಗ್ಗೆ ಅರಿಯುವ ಕುತೂಹಲ ಕೂಡ ಇದೆ. ಕಾರು ನಿಲ್ಲಿಸಿ ಕೇಳಬೇಕು ಅಂದುಕೊಳ್ಳುತ್ತಲೇ ನಾಲ್ಕೈದು ವರುಷಗಳೇ ಕಳೆದಿವೆ. ಒಮ್ಮೊಮ್ಮೆ ಮನೆಯಿಂದ ಹೊರಡುವುದು ತಡವಾಗಿ ಆಕೆ ಸಿಗದಿದ್ದಾಗ ಹಿಂದಿನ ದಿನದ ಬಾಕಿ ಸೇರಿಸಿ ಕೊಡುವುದೂ ಇದೆ
ಬಗ್ಗೆ ಅರಿಯುವ ಕುತೂಹಲ ಕೂಡ ಇದೆ. ಕಾರು ನಿಲ್ಲಿಸಿ ಕೇಳಬೇಕು ಅಂದುಕೊಳ್ಳುತ್ತಲೇ ನಾಲ್ಕೈದು ವರುಷಗಳೇ ಕಳೆದಿವೆ. ಒಮ್ಮೊಮ್ಮೆ ಮನೆಯಿಂದ ಹೊರಡುವುದು ತಡವಾಗಿ ಆಕೆ ಸಿಗದಿದ್ದಾಗ ಹಿಂದಿನ ದಿನದ ಬಾಕಿ ಸೇರಿಸಿ ಕೊಡುವುದೂ ಇದೆ
ಸರಿಯಾಗಿ ಎಂಟೂವರೆಗೆ ಮನೆಯಿಂದ ಹೊರಡುವುದು.... ಆ ಸಮಯದಲ್ಲಿ ಮನೆಮಂದಿ ಏನಾದರೂ ಕೆಲಸ ಹೇಳಿದರೆ ಆ ಮುದುಕಿ ಕಾಯುತ್ತ ಇರುತ್ತಾಳೆ, ಈಗ ಆಗಲ್ಲ ಎಂದು ಹೇಳಿ ಸಿಡಿಮಿಡಿಗೊಳ್ಳುವುದು, ಇವೆಲ್ಲಾ ಶಶಾಂಕನ ಮನೆಯವರಿಗೆ ವಿಚಿತ್ರವೆನಿಸಿ ಆಗಾಗ ಅವರು ಮುದುಕಿಯ ವಿಷಯ ತೆಗೆದು ತಮಾಷೆ ಮಾಡಿ ಆಡಿಕೊಳ್ಳುವ ತನಕ ಬಂದಿದೆ.
ಕಳೆದ ತಿಂಗಳಿನಿಂದ ಬಡ್ತಿ ಸಿಕ್ಕಿ ಶಶಾಂಕನಿಗೆ ಪಗಾರ ಹೆಚ್ಚಾದ ಮೇಲೆ ಅವನು ಆಕೆಗೆ ಹತ್ತು ರೂಪಾಯಿಯ ನೋಟು ನೀಡಲು ಶುರು ಮಾಡಿದ್ದಾನೆ. ಒಹೋ ಮದುಕಿಗೂ ಪ್ರೋಮೋಷನ್ ಎಂದು ಮಗಳು ರೇಗಿಸಿ ನಕ್ಕಿದ್ದಾಗಿದೆ.
ನಲವತ್ತರ ಆಸುಪಾಸಿನಲ್ಲಿರುವ ಶಶಾಂಕನಿಗೆ ಯಾಕೋ ಮೊನ್ನೆ ಎದೆ ಹಿಂಡಿದಂತಾಗಿ ಡಾಕ್ಟರ್ ಹತ್ತಿರ ತಪಾಸಣೆ ಮಾಡಿಸಿದಾಗ ಒಂದಿಷ್ಟು ಪರೀಕ್ಷೆ ಗಳನ್ನು ಮಾಡಿ ಆರು ವಾರ ವಿಶ್ರಾಂತಿ ತೆಗೆದುಕೊಳ್ಳಲೇ ಬೇಕು ಎಂದು ಸೂಚಿಸಿರುತ್ತಾರೆ. ಮಾರನೆಯ ದಿನದಿಂದ ಶಶಾಂಕ ಕಛೇರಿಗೆ ರಜೆ ಹಾಕಿದ್ದರೂ ಸರಿಯಾಗಿ ಎಂಟೂವರೆಗೆ ಹೊರಟು ಸಿಗ್ನಲ್ ಬಳಿ ಮುದುಕಿ ಸಿಕ್ಕಿ ಟಕ್ ಟಕ್ ಟಕ್ ಎಂದು ಬಾಗಿಲು ಬಡಿದಾಗ ಆಕೆಯ ಕೈಯಲ್ಲಿ ಐದುನೂರು ರೂಪಾಯಿಯ ನೋಟ ಇರಿಸಿ '
' ನನಗೆ ಆರಾಮಿಲ್ಲ, ನಾನು
ನಾಲ್ಕೈದು ವಾರ ಬರಲ್ಲ...ಎನಲು' ನಡುಗುವ ಕೈಯಿಂದ ಮುದುಕಿ ಅದನ್ನು ಇಸಿದುಕೊಂಡು ಕಣ್ಣಿಗೆ ಒತ್ತಿಕೊಳ್ಳುವಳು.
' ನನಗೆ ಆರಾಮಿಲ್ಲ, ನಾನು
ನಾಲ್ಕೈದು ವಾರ ಬರಲ್ಲ...ಎನಲು' ನಡುಗುವ ಕೈಯಿಂದ ಮುದುಕಿ ಅದನ್ನು ಇಸಿದುಕೊಂಡು ಕಣ್ಣಿಗೆ ಒತ್ತಿಕೊಳ್ಳುವಳು.
ಶಶಾಂಕನಿಗೆ ಏನೋ ಕಳವಳ...... ಆಕೆಯನ್ನು ಮತ್ತೆ ನೋಡುವೆನೋ ಇಲ್ಲವೋ ಎಂದು ಅನಿಸಿ ಕಾರಿನ ಗಾಜು ಏರಿಸಿ ಕಾರನ್ನು ತಿರುಗಿಸಿಕೊಂಡು ಮರಳಿದರೂ ಅದೇ ಗುಂಗಿನಲ್ಲಿ ಇರುವನು. ಇದನ್ನು ಗಮನಿಸಿದ ಶಶಾಂಕನ ಹೆಂಡತಿ ಯಾಕೆ ಮುದುಕಿಗೇನಾಯಿತು ? ಎಂದು ಕೇಳಲು, ಆಕೆ ಗಟ್ಟಿಮುಟ್ಟಾಗಿರುವಳು ಅದಲ್ಲ ವಿಷಯ, ಯಾಕೋ ಸುಸ್ತು ಎಂದು ಕ್ಷೀಣವಾದ ದನಿಯಲ್ಲಿ ಉಸುರುತ್ತಾ ಮಾತ್ರೆ ನುಂಗಿ ನೀರು ಕುಡಿಯುವನು.
Subscribe to:
Posts (Atom)