ಪ್ರಕೃತಿಯ ಒತ್ತಾಸೆಯ ಮಾತುಗಳನು. ಕಿವಿಗೊಟ್ಟು ಕೇಳಿರಿ ಒಡಲಾಳದ ನುಡಿಮುತ್ತುಗಳನ್ನು. ಅವಳುಳಿವೇ ನಮ್ಮ ನೀತಿ-ಉನ್ನತಿಯೇ ನಮ್ಮ ರೀತಿ. ಬಾಯಾರಿದ ಅವಳ ಗಭ೯ಕ್ಕೆ ನೀರುಣಿಸಿದಲ್ಲಿ ಪೋಷಿಸುವಳು ಅದಿತಿ.
ಮಳೆನೀರ ಕೊಯ್ಲಿನಲಿ ನೀರುಣಿಸಿ ನೆಲತಣಿಸಿ. ಮಡವಳ ತಂಪು ಹಸಿರು ಹಾಸನ್ನು ಹೊದಿಸಿ. ಆ ಗವಳಾಗುವಳು ಸತ್ಯ ಶ್ಯಾಮಲ-ನಾವು ನಿತ್ಯ ನಿಮ೯ಲ. ಅವಳಾಗಲು ಸಬಲೆ ನಾವೆಂತು ದುಬ೯ಲ?
ಅವಳು ತಂಪಾಗಲು ಮೈಯೆಲ್ಲ ಹಸಿರ ಉಸಿರು. ಹಸಿರಲ್ಲಿದೆ ನಮ್ಮೆಲ್ಲರ ಉಳಿವು. ಉಸಿರು. ಹಸಿರ ಸಸಿಗಳು ಬಲಿತು ಹೆಮ್ಮರದ ಒಡಲಾಗಿ. ಜೀವ ಸಂಕುಲಕೆ ಆಸರೆಯಾಗಿ ಕಾಯುವುದು ತಂಪು ನೆರಳಾಗಿ.
ಸಹಜ ಕೃಷಿಯ ನೂರಾರು ತರುಲತೆಗಳು. ಭಿನ್ನ ಭಿನ್ನಬಣ್ಣಗಳು. ವಿವಿಧ ಸುಗಂಧದ ಹೂಗಳು. ಮತ್ತೆ ಬರುವುದು ತರೇವಾರಿ ಕಾಯಿ ಹಣ್ಣುಗಳು ಸಾಲು ರಸಸ್ವಾದದಿ ಸವಿಯಲಿ ಸಂಪನ್ನ ಮನ- ಹಣ್ಣುಗಳ ಹಬ್ಬದ ಸಮ್ಮಿಲನ.!
ಅವಳನ್ನು ಸಹಜವಾಗಿರಿಸು ಹೂದಿಸದಿರು ಗಟ್ಟಿ ಹೊದಿಕೆ. ಅವಳನವಳಂತೆ ಇರಿಸು ಅದೇ ಅವಳ ನಿರಂತರ ಬಯಕೆ. ಹೊದಿಸಾಕೆಗೆ ಹಸಿರು ಹಾಸಿಗೆ ಅದೆ ಆಕೆಗೆ ಸೀರೆ ಕುಪ್ಪಸ. ಮಾಡದಿರು ಅವಳನೆಂದೂಬೆತ್ತಲೆ ಅವಳಿಗದು ತೀರಾ ನಾಚಿಕೆ!
ಅವಳ ಅರಿಕೆ ಆಲಿಸಿ ಮನ್ನಿಸಿ ಮಳೆ ನೀರ ಹರಿಸಿ. ಅವಳ ಒಡಲು ತುಂಬಿಸಿ ತಂಪಾಗಿ ಹಸಿರ ಉಳಿಸಿ. ಆಗಾಗುವುದು ಜಲಮೂಲ ಅಕ್ಷಯಪಾತ್ರೆ. ಸದಾ ಕರುಣಿಸಲಿ ಗಂಗೋದಕವ ಈ ಸನ್ಮಿತ್ರೆ!
No comments:
Post a Comment