'ನಾನು ಮತ್ತು ಅವಳು'
- ಮುರಳೀಧರ ಉಪಾಧ್ಯ ಹಿರಿಯಡಕ
ಕನ್ನಡ ಉಪನ್ಯಾಸಕಿಯಾಗಿರುವ ಪ್ರಜ್ಞ ಮಾರ್ಪಳ್ಳಿಯವರ ಚೊಚ್ಚಲ ಕಥಾ ಸಂಕಲನ - 'ನಾನು ಮತ್ತು ಅವಳು'. ಪ್ರಜ್ಞ ಮಾರ್ಪಳ್ಳಿ ಚಿತ್ರಕಲೆ, ಯಕ್ಷಗಾನ, ಬರವಣಿಗೆ ಹೀಗೆ ವೈವಿಧ್ಯಪೂರ್ಣ ಆಸಕ್ತಿಗಳಿರುವ ಲೇಖಕಿ. ಈ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ.
'ಸೂಜಿ ಮತ್ತು ನೂಲು', 'ಮಳೆಗಾಲದಲ್ಲೊಂದು ದಿನ' ಕಥೆಗಳಲ್ಲಿ ಪುರುಷಪ್ರಧಾನ ಸಮಾಜದಲ್ಲಿರುವ ಕುಟುಂಬಾಂತರ್ಗತ ಕ್ರೌರ್ಯದ ಚಿತ್ರಣವಿದೆ.
'ನಾನು ಮತ್ತು ಅವಳು' ಕಥೆಯ ಶಮ್ಮಿಯ ತಂದೆ-ತಾಯಿಯದು ಅಂತಜರ್ಾತೀಯ ವಿವಾಹ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಶಮ್ಮಿ ತನ್ನ ವಿಧವೆ ತಾಯಿಯ ಕಹಿ ಅನುಭವಗಳನ್ನು ನೋಡುತ್ತ ಬೆಳೆದಿದ್ದಾಳೆ. ಅವಳ ಗೆಳತಿ ಸ್ನೇಹಳ ದೃಷ್ಟಿಯಲ್ಲಿ ಮದುವೆ ಎಂದರೆ 'ಸಂಪೂರ್ಣ ಶರಣಾಗತಿ'. ಈ ಪ್ರೀತಿ, ಪ್ರೇಮ, ಸಂಸಾರ - ಎಲ್ಲಾ ವಿಚಾರಗಳು ಬಂದಾಗ್ಲೂ ಗಂಡಾದವನು ಇವೆಲ್ಲವನ್ನೂ ಸ್ವಾರ್ಥದಿಂದ್ಲೇ ಮಾಡ್ತಾನೆ ಅನ್ನೋದು ನನ್ನ ಅಭಿಪ್ರಾಯ ಎನ್ನುತ್ತಾಳೆ ಸ್ನೇಹಾ. ಪುರುಷದ್ವೇಷಿಯಾಗಿ ಬೆಳೆದ ಅವಳು ವಿವಾಹ ವ್ಯವಸ್ಥೆಯನ್ನು ತಿರಸ್ಕರಿಸುವುದಿಲ್ಲ. ತನ್ನ ಕನಸಿನ ರಾಜಕುಮಾರ ಸಿಕ್ಕಿದರೆ ಅವಳು ಮದುವೆಗೆ ರೆಡಿ. ಕಂಡೀಷನ್ ಏನಪ್ಪಾ ಅಂದ್ರೆ ನಾನು ಅವ್ನ ಜೊತೆಗಿರೋದಿಲ್ಲ. ಅವ್ನು ನನ್ನ ಜೊತೆಗಿಬರ್ೇಕು ಅಷ್ಟೇ! ಎನ್ನುತ್ತಾಳೆ. ಶಮ್ಮಿ ಮತ್ತು ಸ್ನೇಹಾ ತದ್ರೂಪಿಗಳಂತೆ ಕಾಣುತ್ತಾರೆ. ಲಿಂಗಾಧಾರಿತ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯುವತಿಯರ ಆತಂಕಗಳು, ಕನಸುಗಳು ಈ ಕಥೆಯಲ್ಲಿವೆ.
ಈ ಸಂಕಲನದ ಕಥೆಗಳಲ್ಲಿ ಕುಂದಾಪುರ ಕನ್ನಡ, ಉತ್ತರಕನರ್ಾಟಕದ ಕನ್ನಡ, ಬೆಂಗಳೂರು ಕನ್ನಡ - ಹೀಗೆ ಹಲವು ಬಗೆಯ ಕನ್ನಡಗಳು ಕಾಣಿಸುತ್ತವೆ. ಉಡುಪಿ ಜಿಲ್ಲೆ ಕನ್ನಡ, ತುಳು, ಕೊಂಕಣಿ, ಬ್ಯಾರಿ - ಹೀಗೆ ಹಲವು ಭಾಷೆಗಳ ಸಹಬಾಳ್ವೆ. ಕೊಡು - ಕೊಳು ಇರುವ ಜಿಲ್ಲೆ. ಇಂತಹ ಪ್ರಾದೇಶಿಕ ರಂಗು ಇರುವ ಪ್ರದೇಶದ ಲೇಖಕರು ತಮ್ಮ ಕನ್ನಡ ಭಾಷೆಯ ಬಳಕೆಯಲ್ಲಿ ಎಚ್ಚರಿಕೆಯ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಉಡುಪಿಯ ಕಥೆಗಾರ ಪಿ. ಬಿ. ಪ್ರಸನ್ನರ 'ಗಣಪ ಮತ್ತು ಗಾಂಪ' ಸಂಕಲನದ ಕಥೆಗಳಲ್ಲಿ 'ಉಡುಪಿ ಕನ್ನಡ'ದ ಸಾರ್ಥಕ ಪ್ರಯೋಗವನ್ನು ಕಾಣಬಹುದು. ಗುಲ್ವಾಡಿ ವೆಂಕಟರಾಯರ 'ಇಂದಿರಾ ಬಾಯಿ' ಕಾದಂಬರಿಯ ಭಾಷಾ ಪ್ರಯೋಗ ಇನ್ನೊಂದು ಅನುಸರಣಯೋಗ್ಯ ಮಾದರಿಯಾಗಿದೆ.
ಪ್ರಜ್ಞ ಮಾರ್ಪಳ್ಳಿ ತನ್ನ ಕಥೆಗಳ ಕುಸುರಿ ಕೆಲಸ ಮತ್ತು ಭಾಷಾ ಪ್ರಯೋಗದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಮುನ್ನಡೆಯಬೇಕಾಗಿದೆ.
ಕನ್ನಡ ಕಥಾಲೋಕದಲ್ಲಿ ಸ್ವಾಭಿಮಾನದಿಂದ ಹೆಜ್ಜೆ ಹಾಕುತ್ತಿರುವ ಉದಯೋನ್ಮುಖ ಕತೆಗಾತರ್ಿ ಪ್ರಜ್ಞ ಮಾರ್ಪಳ್ಳಿ ಅವರಿಗೆ ಶುಭಾಶಯಗಳು.

'ನಾನು ಮತ್ತು ಅವಳು' (ಕಥಾಸಂಕಲನ) - ಪ್ರಜ್ಞ ಮಾರ್ಪಳ್ಳಿ
ಪ್ರಕಾಶಕರು - ಶ್ರೀನಿವಾಸ ಪುಸ್ತಕ ಪ್ರಕಾಶನ,
ನಂ. 164/A, ಮೊದಲನೇ ಮಹಡಿ, ಎಂ. ಆರ್. ಎನ್. ಬಿಲ್ಡಿಂಗ್,
ಕನಕಪುರ ಮುಖ್ಯ ರಸ್ತೆ, ಬಸವನಗುಡಿ,
ಬೆಂಗಳೂರು - 560004.
ಮೊದಲ ಮುದ್ರಣ - 2011
ಬೆಲೆ ರೂ. 65/-
(ಜಗಜ್ಯೋತಿ ಕಲಾವೃಂದ, ಮುಂಬೈ - ಇವರಿಂದ 'ಜಗಜ್ಯೋತಿ' ಪ್ರಶಸ್ತಿ ಪಡೆದ ಕೃತಿ.)
No comments:
Post a Comment