stat Counter



Friday, July 22, 2011

Sheldon Pollock-' 'Vishvwatmaka Deshabhashe '{ kannada Translations of essays}

'ಕವಿರಾಜಮಾರ್ಗ'ದಲ್ಲಿ ಸಂಸ್ಕೃತ ಕನ್ನಡ ಮುಖಾಮುಖಿ
                                    -    ಮುರಳೀಧರ ಉಪಾಧ್ಯ ಹಿರಿಯಡಕ
                                   
          ಡಾ| ಷೆಲ್ಡನ್ ಪೊಲಾಕ್ ಅಮೆರಿಕ ಸಂಯುಕ್ತ ಸಂಸ್ಥಾನದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ 'ಸಂಸ್ಕೃತ ಮತ್ತು ಭಾರತ ಅಧ್ಯಯನ' ವಿಭಾಗದಲ್ಲಿ ಪ್ರಾಧ್ಯಾಪಕರು, ಪೊಲಾಕ್ ಅವರ ಎರಡು ಲೇಖನಗಳನ್ನು ಕೆ.ವಿ.ಅಕ್ಷರ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. 'ದ ಕಾಸ್ಮೊಪೊಲಿಟನ್ ವೆನರ್ಾಕ್ಯುಲರ್' (ವಿಶ್ವಾತ್ಮಕ ದೇಶ ಭಾಷೆ) 'ಜರ್ನಲ್ ಆಫ್ ಏಶಿಯನ್ ಸ್ಟಡೀಸ್'ನಲ್ಲಿ ಪ್ರಕಟವಾಗಿರುವ ಲೇಖನ. 'ಪ್ರಾದೇಶಿಕ ಜಗತ್ತೊಂದರ ನಿಮರ್ಿತಿ-ಕನ್ನಡದ ದೃಷ್ಟಾಂತ' ಎಂಬ ಎರಡನೆಯ ಲೇಖನ. ಯೂನಿವಸರ್ಿಟಿ ಆಫ್ ಕ್ಯಾಲಿಫೋನರ್ಿಯ ಪ್ರೆಸ್ನಿಂದ ಮುಂದೆ ಪ್ರಕಟವಾಗಲಿರುವ ಕಾಸ್ಮೊಪೊಲಿಟನ್ ಎಂಡ್ ವೆನರ್ಾಕ್ಯುಲರ್ ಬಿಫೋರ್ ಮಾಡನರ್ಿಟಿ-ಕಲ್ಚರ್ ಆಂಡ್ ಪವರ್ ಇನ್ ಸೌತ್ ಏಶಿಯಾ ಟು-1500' ಎಂಬ ಗ್ರಂಥದ ಒಂದು ಅಧ್ಯಾಯ.

          ಈ ಪುಸ್ತಕಕ್ಕೆ ಬರೆದಿರುವ 'ಮಾರ್ಗದೇಶಿ' ಎಂಬ ಮುನ್ನುಡಿಯಲ್ಲಿ ಷೆಲ್ಡನ್ ಪೊಲಾಕ್ ಅವರು 'ಕವಿರಾಜ ಮಾರ್ಗ'ದ ಮಹತ್ತ್ವವನ್ನು ಹೀಗೆ ಗುರುತಿಸುತ್ತಾರೆ, ನಾನು ತೀಮರ್ಾನಿಸಿರುವ ಪ್ರಕಾರ, ಹೀಗೆ ವಿಶ್ವಾತ್ಮಕ ಸಂದರ್ಭವೊಂದರಲ್ಲಿ ದೇಶಭಾಷಾ ನಿಮರ್ಾಣದ ಸಮಸ್ಯಾತ್ಮಕತೆಯನ್ನು ಕುರಿತು ಇಷ್ಟು ಸ್ಪಷ್ಟವಾಗಿ ವಿಶದೀಕರಿಸುವ ಕನ್ನಡದ ಉದಾಹರಣೆಯು ಜಾಗತಿಕ ಇತಿಹಾಸದಲ್ಲಿಯೇ ಪ್ರಥಮವಾದದ್ದು. ಪೊಲಾಕ್ ಅವರು ಸಂಸ್ಕೃತ ವಿಶ್ವಸ್ಯಸ್ಥೆಯ ಉಗಮ ಮತ್ತು ವಿಕಾಸವನ್ನು ವಿವರಿಸಿ ಆಮೇಲೆ ದಕ್ಷಿಣ ಏಶಿಯಾದಾದ್ಯಂತ ಆ ಬೆಳವಣಿಗೆಗಳು ದೇಶೀವ್ಯವಸ್ಥೆಗಳಿಂದ ಸೋಲುವ ಪ್ರಕ್ರಿಯೆಯನ್ನು ವಿಶ್ಲೇಷಿಸಿದ್ದಾರೆ.

          ಸಂಸ್ಕೃತ  ವಿಶ್ವದ ಇತಿಹಾಸೀಕರಣ, ಸಂಸ್ಕೃತ ಸಾಹಿತ್ಯಕ ಶೈಲಿಯ ಸ್ಥಳಾವರಣ, ದೇಶಭಾಷಾ ನಿಮರ್ಾಣ, ಜಾಗತಿಕತೆಯನ್ನು ಸ್ಥಳೀಯಗೊಳಿಸುವಿಕೆ, ದೇಶಭಾಷೆಯ ರಾಜಕೀಯ ಆವರಣ, ದೇಶಭಾಷಾ ಲೇಖನದಲ್ಲಿ ಪೊಲಾಕ್ ಚಚರ್ಿಸಿರುವ ಮುಖ್ಯಾಂಶಗಳು. 'ಕವಿರಾಜಮಾರ್ಗ'ದಲ್ಲಿ ವಿಶ್ವಾತ್ಮಕ ಕಾವ್ಯ ಮೀಮಾಂಸೆಯನ್ನು ಸ್ಥಳೀಯವಾಗಿರುವ ಮತ್ತು ಕನ್ನಡ ಸಾಹಿತ್ಯದ ಅನನ್ಯತೆಯನ್ನು ಸ್ಥಾಪಿಸುವ ಸಫಲ ಪ್ರಯೋಗವನ್ನು ಕಾಣುತ್ತೇವೆ ಎಂಬುದು ಪೊಲಾಕ್ ಅವರ ಮುಖ್ಯ ವಾದ.

          ದೇಶಭಾಷಾ ನಿಮರ್ಾಣ ಮತ್ತು ರಾಜಕೀಯ ಶಾಸನ, 'ಕವಿರಾಜ ಮಾರ್ಗ ಮತ್ತು ಕಾವ್ಯದ ದೇಶಿಗಳು, ಸಾರ್ವತ್ರಿಕ ರಾಜಕಾರಣದ ಸ್ಥಳೀಯಕರಣ (ಪಂಪಭಾರತ) ಹೊಸ ಭಾಷಾ ವಿಜ್ಞಾನ-ತತ್ತ್ವಾಧಾರಿತ ಪ್ರಯೋಗದಿಂದ ಪ್ರಯೋಗಾಧಾರಿತ ತತ್ತ್ವದ ಕಡೆಗೆ - ಇವು ಪೊಲಾಕ್ ಅವರು ತನ್ನ ಎರಡನೆಯ ಲೇಖನದಲ್ಲಿ ಚಚರ್ಿಸುವ ಮುಖ್ಯಾಂಶಗಳು. ಪೊಲಾಕ್ ಅವರ ಪ್ರಕಾರ 'ಕವಿರಾಜಮಾರ್ಗ'ವು ತನ್ನ ದೇಶೀಯತೆಯ ವಲಯದಲ್ಲಿ ತನ್ನ ಮುಂದಿಟ್ಟುಕೊಂಡಿರುವ ಉದ್ದೇಶಗಳಿವು - ಕನ್ನಡ ಸಾಹಿತ್ಯವನ್ನು ತಾತ್ವಿಕವಾಗಿ ಸ್ಥಾಪಿಸಿ ಅದನ್ನು ವ್ಯಾಖ್ಯಾನಿಸಲು ಮತ್ತು ಅದಕ್ಕೆ ವಿಧಿ ನಿರ್ಣಯಗಳನ್ನು ಸೂಚಿಸಲು ಸಾಧ್ಯವಾಗುವಂತೆ ಮಾಡುವುದು, ಭಾಷೆಯ ಬಳಕೆಯನ್ನು ಶಿಸ್ತಿಗೊಳಪಡಿಸುವುದು ಮತ್ತು ಭಾಷೆಯನ್ನು ಸಾಹಿತ್ಯಿಕ ಭಾಷೆಯಾಗಿ ಮಾರ್ಪಡಿಸಲಿಕ್ಕೆ ಅಗತ್ಯವಾಗಿದ್ದ ದೃಢತೆ ಮತ್ತು ಗಾಂಭೀರ್ಯಗಳನ್ನು ಕನ್ನಡಕ್ಕೆ ತಂದು ಕೊಡುವುದು. ವಿಶ್ವಾಥ್ಮಕ ಸಂಸ್ಕೃತದ ಎದುರಿಗೆ ಕನ್ನಡದ ಭಿನ್ನತೆಯನ್ನು ಪಟ್ಟಿ ಮಾಡುವುದು.

          ಒಂಬತ್ತು-ಹತ್ತನೆಯ ಶತಮಾನದ ದೇಶಭಾಷಾ ಕವಿಗಳು ಯಾಕೆ ತಮ್ಮೆದುರಿಗೆ ತೆರೆದುಕೊಂಡಿದ್ದ ಸಂಸ್ಕೃತವೆಂಬ ಪ್ರಾಂತ್ಯಾಂತರ ವ್ಯಾಪ್ತಿಯ ಅರೆಜಾಗತಿಕ ಸ್ವರೂಪದ ಭಾಷಾ ಸಾಧ್ಯತೆಯನ್ನು ನಿರಾಕರಿಸಿದರು? ಯಾಕೆ ಅವರು ಸ್ಥಳೀಯ ನೆಲೆಯಲ್ಲಿಯೇ ಸಂವಹನಕ್ಕೆ ತೊಡಗಿದರು? ಸಮಕಾಲೀನ ಭಾರತದ ಪ್ರಬಲ ಶಕ್ತಿ ಕೇಂದ್ರಗಳಿಂದ ಬಂದ ಆ ದೇಶಿ, ಧೀಮಂತರು ಯಾಕೆ ತಮ್ಮ ಭಾಷೆಯು ಹೊಸದೊಂದು ಜ್ಞಾನಜಗತ್ತಾಗಬೇಕೆಂದೂ ಹೊಸದೊಂದು ಪ್ರಮಾಣ ನಿರ್ಣಯದ ಮಾಧ್ಯಮವಾಗಬೇಕೆಂದೂ ನಿರ್ಧರಿಸಿದರು? ಐತಿಹಾಸಿಕ ದೃಷ್ಟಿಯಿಂದ ಅವರೆಲ್ಲ ಸೃಷ್ಟಿಸುತ್ತಿದ್ದ ಹೊಸ ಸಾಂಸ್ಕೃತಿಕ ಆಕೃತಿಗಳ ರಾಜಕೀಯ ಮತ್ತು ಸಾಮಾಜಿಕ ತಥ್ಯವೆಂಥದು? ಈ ಮಹತ್ತ್ವದ ಪ್ರಶ್ನೆಗಳನ್ನು ಡಾ| ಷೆಲ್ಡನ್ ಪೊಲಾಕ್ ಕೇಳುತ್ತಾರೆ.

          ಪೃಥ್ವೀದತ್ತ ಚಂದ್ರಶೋಭಿ ಅವರ ವಿಮರ್ಶತ್ಮಕ ಮುನ್ನುಡಿ ಈ ಪುಸ್ತಕದಲ್ಲಿದೆ. ಮುಳಿಯ ತಿಮ್ಮಪ್ಪಯ್ಯನವರ 'ಕವಿರಾಜಮಾರ್ಗ ವಿವೇಕ', ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' (2000) - ಇಂಥ ಅಸಾಧಾರಣ ಕೃತಿಗಳು ಕನ್ನಡದಲ್ಲಿ ಈಗಾಗಲೇ ಪ್ರಕಟವಾಗಿವೆ. 'ಕವಿರಾಜಮಾರ್ಗ'ವನ್ನು ಸಂಸ್ಕೃತ ಭಾಷೆಯ ರಾಜಕೀಯಕ್ಕೆ ಕನರ್ಾಟಕ ನೀಡಿದ ಆತ್ಮವಿಶ್ವಾಸದ ಉತ್ತರ ಎಂಬ ನೆಲೆಯಿಂದ ನೋಡುವ ಪೊಲಾಕ್ ಅವರ ಈ ಕೃತಿ ಹೊಸ ಚಚರ್ೆಗಳಿಗೆ ಪ್ರೇರಣೆನೀಡಬಲ್ಲುದು. 'ಗತಕಾಲದ ಬಗೆಗಿನ ಕಾಳಜಿಯೆಂಬುದು, ಆ ಗತಕಾಲವು ನಮ್ಮ ವರ್ತಮಾನದ ಮೇಲೆ ನಡೆಸುವ ಪರಿಣಾಮಗಳ ಅಭ್ಯಾಸ' ಎನ್ನುವ ಡಾ| ಷೆಲ್ಡನ್ ಪೊಲಾಕ್ ಅವರ ಈ ಲೇಖನಗಳನ್ನು ಕನ್ನಡಕ್ಕೆ ತಂದಿರುವ ಕೆ.ವಿ.ಅಕ್ಷರ ಅಭಿನಂದನಾರ್ಹರು.

ಉದಯವಾಣಿ - 28.06.2003


ವಿಶ್ವಾತ್ಮಕ ದೇಶಭಾಷೆ
ಇಂಗ್ಲಿಷ್ ಮೂಲ - ಡಾ| ಷೆಲ್ಡನ್ ಪೊಲಾಕ್
ಕನ್ನಡಕ್ಕೆ: ಅಕ್ಷರ ಕೆ.ವಿ.
ಪ್ರ.: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ - 577417.
ಮೊದಲ ಮುದ್ರಣ: 2003.
ಬೆಲೆ ರೂ. 100.

Vishwatmaka Deshabhashe
kannada Translations of essasys
             by
Akshara. K.V
 With an afterword by
Prithvidatta Chandrashobhi
published by
Akshara Prakashana
 Heggodu-577417
 Sagar, karnataka
first edition - 23003
price-rs- 100

No comments:

Post a Comment