ನಿನ್ನೆ ,೧೮-೩-೨೦೧೨ ಒಂದು ಹೊಸ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರ ಹುದ್ದೆಗೆ ಸಂದರ್ಶನ ಮಾಡಲು ಹೋಗಿದ್ದೆ.೨೫ ಅಭ್ಯರ್ಥಿಗಳಿದ್ದರು.ಹೆಚ್ಚಿನವರು ಅಂಚೆ ಪಾಠದ ಎಮ್.ಎ.ಕಲಿತವರು.ಮೂಲ ಪುಸ್ತಕಗಳನ್ನು ಓದದೆ ಬರೇ ನೋಟ್ಸ್ ಓದಿ ಅಂಕ ಪಡೆದವರೇ ಜಾಸ್ತಿ. ಬಿ.ಎಡ್ ಕಲಿತಿದ್ದರೂ ಕನ್ನಡ ಕಂಪ್ಯೂಟರ್ ಕಲಿತವರು ಇಬ್ಬರು ಮಾತ್ರ.
ಹಳಗನ್ನಡ ಕಾವ್ಯದ ನಾಲ್ಕು ಸಾಲು ಬಾಯಿಪಾಠ ಕಲಿತವರು ಇರಲಿಲ್ಲ.
ಪಂಪನ-’ ಚಲದೊಳ್ ದುರ್ಯೋಧನಂ, ನನ್ನಿಯೊಳಿನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೇಶನ್... ’ ಪದ್ಯವನ್ನು ಓದಲು ಕೊಟ್ಟಾಗ ಇಬ್ಬರು ಮದ್ರೇಶನನ್ನು ’ ಮುದ್ರೇಶ ’ ಎಂದು ಓದಿದರು. ಇನತನಯ, ಮದ್ರೇಶ, ಸಿಂಧುತನಯ, ಕುಂಭಸಂಭವ ಈ ಪದಗಳ ಅರ್ಥ ಅವರಿಗೆ ಗೊತ್ತಿರಲಿಲ್ಲ.ವಿಶ್ವವಿದ್ಯಾಲಯದಲ್ಲಿ ತರಗತಿಗೆ ಹೋಗಿ ಕಲಿತವರಿಗೂ ಈ ಪದ್ಯ ಓದಿ ವಿವರಿಸಲು ಸಾಧ್ಯವಾಗಲಿಲ್ಲ.ಹಳಗನ್ನಡ ಅಧ್ಯಯನ ಅಧೋಮುಖವಾಗುತ್ತಿದೆಯೇ ?
-ಮುರಳೀಧರ ಉಪಾಧ್ಯ ಹಿರಿಯಡಕ
Degradation in Classical Kannada studies-Muraleedhara Upadhya Hiriadka

No comments:
Post a Comment