ಪ್ರೀತಿಯ ಉಪಾಧ್ಯರಿಗೆ,
ನಮಸ್ಕಾರ. ಈ ಸಂದರ್ಭದಲ್ಲಿ ನಿಮಗೆ ಮೊದಲು ವಂದನೆಗಳು ಮತ್ತು ಅನಂತರ ಅಭಿನಂದನೆಗಳು. ನನಗೆ ತೋರಿದ ಕೆಲವು ಮಾತುಗಳನ್ನು ಇಲ್ಲಿ ಬರೆದಿದ್ದೇನೆ. ನಿಮಗೆ ಅಗತ್ಯ ಮತ್ತು ಸೂಕ್ತ ಎನಿಸಿದರೆ ಹೇಗೆ ಬೇಕಾದರೂ ಬಳಸಿಕೊಳ್ಳಿ. ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ,
ನಿಮ್ಮ
ಎಚ್.ಎಸ್.ಅರ್.
'ಅಂತರ್ಜಾಲವೆಂಬ ಕಾಡಿನಲ್ಲಿ ಅಡ್ಡಾಡುವಾಗ ಕಾಲಿಗೆ ತೊಡರಿಕೊಂಡ ಅಮೃತಬಳ್ಳಿ ಮುರಳೀಧರ ಉಪಾಧ್ಯ ಹಿರಿಯಡ್ಕ ಅವರ ಈ ತಂಗುದಾಣ.
'ಇದನ್ನು ಓದಿದರೆ ಸಾಕು, ಪತ್ರಕೆಗಳೆಂಬ ಪಿಡುಗುಗಳ ತಂಟೆಗೆ ಹೋಗಬೇಕಾಗಿಲ್ಲ' ಎನ್ನಿಸಿಬಿಟ್ಟಿದೆ ನನಗೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಇದು ಯಾವುದೇ ಒಬ್ಬ ವ್ಯಕ್ತಿಯ ಅಥವಾ ಗುಂಪಿನ ಅಥವಾ ವೈಚಾರಿಕತೆಯ ತುತ್ತೂರಿಯಲ್ಲ. ತನಗೆ ಅಥವಾ ಸಮುದಾಯಗಳಿಗೆ ಮುಖ್ಯ, ಪ್ರಸ್ತುತ ಎಂದು ತೋರಿದ್ದನ್ನು, ನಿರ್ವಂಚನೆಯಿಂದ ಆರಿಸಿ ತೆಗೆದು ಹಂಚುವ ಈ ಕೆಲಸ ನಿಜಕ್ಕೂ ದೊಡ್ಡದು
ಕನ್ನಡದಲ್ಲಿ ಬಂದುದನ್ನು, ಕನ್ನಡಕ್ಕೆ ಸಂಬಂಧಪಟ್ಟಿದ್ದನ್ನು ಮಾತ್ರ ಪ್ರಕಟಿಸುತ್ತೇನೆ ಎಂಬ ಹಟವೂ ಅವರಿಗಿಲ್ಲ. ತಮಿಳಿನಿಂದ ಬಂಗಾಳಿಯವರೆಗೆ ಯಾವುದೂ ಅವರಿಗೆ ಬಾಹಿರವಲ್ಲ. ಅಂತೆಯೇ ಇದು ಸಾಹಿತ್ಯಸೀಮಿತವೂ ಅಲ್ಲ. ಇಲ್ಲಿ ಬರುವ ಆಡಿಯೋಗಳು ಮತ್ತು ವೀಡಿಯೋಗಳು ಬಹಳ ಅಪರೂಪದವು. ಅವು ಎಲ್ಲ ಕಲೆಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತವೆ. ಯಾವುದೇ ವಿಷಯಕ್ಕೆ ಉಪಾಧ್ಯರು ತಮ್ಮ ಟೀಕೆ-ಟಿಪ್ಪಣಿಗಳನ್ನು ಸೇರಿಸವುದಿಲ್ಲ. ಆಯ್ಕೆ ಮಾತ್ರವೇ ಅವರು ಮಾಡುವ ವಿಮರ್ಶೆ. - ರಾಜಕಾರಣಿಗಳ ಕಳ್ಳ-ಕಪಟಗಳಿಗೂ ಅಷ್ಟೆ. ನಿವೃತ್ತರಾದ ನಂತರದ ಬದುಕನ್ನು ಇಷ್ಟೊಂದು ಉಪಯುಕ್ತವಾಗಿ, ಸ್ವಾರ್ಥವಿಲ್ಲದೆ ಮಾಡುತ್ತಿರುವ ಉಪಾಧ್ಯರಿಗೆ ಮತ್ತು ಅವರ ಸಂಗಡ ಇರುವ ಮಾನಸಿ ಮತ್ತು ಸುಧೀರ ಅವರಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು.'
ಎಚ್.ಎಸ್. ರಾಘವೇಂದ್ರ ರಾವ್
H. S.Raghavendra Rao - http://mupadhyahiri.blogspot.in { ಸಖೀಗೀತ ]
H. S.Raghavendra Rao - http://mupadhyahiri.blogspot.in { ಸಖೀಗೀತ ]
No comments:
Post a Comment